ಹುಚ್ಚ ವೆಂಕಟ್ ಹುಚ್ಚನಾಗಿಬಿಟ್ಟನಾ..? ಚಿತ್ರನಟ ಭುವನ್ ಪೊನ್ನಣ್ಣ ಬಹಿರಂಗಪಡಿಸಿರುವ ಅ ವಿಡಿಯೋ ಮರುಕ ಹುಟ್ಟಿಸಿದೆ. ಚೆನ್ನೈನ ಒಡಪಳನಿ ಅನ್ನೋ ಏರಿಯಾದಲ್ಲಿ ರಾಂಧವ ಚಿತ್ರದ ನಿರ್ದೇಶಕ ಸುನಿಲ್ ಆಚಾರ್ಯ ಹೋಗುತ್ತಿದ್ದಾಗ ಹುಚ್ಚ ವೆಂಕಟ್ ಕಣ್ಣಿಗೆ ಬಿದ್ದಿದ್ದಾರೆ.
ಕಾಲಲ್ಲಿ ಚಪ್ಪಲಿಯಿಲ್ಲ. ಕೊಳಕು ಬಟ್ಟೆ ಹಾಕಿಕೊಂಡಿದ್ದ ಹುಚ್ಚ ವೆಂಕಟ್, ಚೆನ್ನೈನ ಹೋಟೆಲ್‍ವೊಂದರಲ್ಲಿ ರೂಮ್ ಕೇಳಿದ್ದಾರೆ. ಆದರೆ, ವೆಂಕಟ್ ಅವತಾರ ನೋಡಿದ ಹೋಟೆಲ್‍ನವರು ರೂಂ ಕೊಟ್ಟಿಲ್ಲ. ಇದನ್ನು ಗಮನಿಸಿದ ಸುನಿಲ್ ಆಚಾರ್ಯ ಹುಚ್ಚ ವೆಂಕಟ್ ಅವರಿಗೆ ಸಹಾಯ ನೀಡಲು ಮುಂದಾಗಿದ್ದಾರೆ. ಆದರೆ, ಹುಚ್ಚ ವೆಂಕಟ್ ಸಹಕರಿಸಿಲ್ಲ.
ಹುಚ್ಚ ವೆಂಕಟ್ ಅವರ ಈ ಅವತಾರ.. ಅವರ ನನ್ ಮಗಂದ್.. ಸ್ಟೈಲಿಗಿಂತಲೂ ಭಯಂಕರವಾಗಿದೆ. ಮರುಕ ಹುಟ್ಟಿಸುತ್ತಿದೆ.