` aishwarya upendra, - chitraloka.com | Kannada Movie News, Reviews | Image

aishwarya upendra,

  • ಉಪೇಂದ್ರ ಮಗಳು `ದೇವಕಿ'ಯಾಗಿ ಬಂದಳು

    aishwarya upendra is now devaki

    ಉಪೇಂದ್ರ ಅವರ ಮಗಳು ಐಶ್ವರ್ಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೌರಾ ಬ್ರಿಡ್ಜ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ನೆನಪಿದೆಯಷ್ಟೆ. ಈಗ ಹೌರಾ ಬ್ರಿಡ್ಜ್ ಚಿತ್ರದ ಹೆಸರು ಬದಲಾಗಿದೆ. ಆ ಚಿತ್ರದ ಹೆಸರೀಗ ದೇವಕಿ. ದೇವಕಿಯಾಗಿ ಕಾಣಿಸಿಕೊಂಡಿರೋದು ಉಪೇಂದ್ರ-ಪ್ರಿಯಾಂಕಾ ದಂಪತಿಯ ಮಗಳು ಐಶ್ವರ್ಯಾ.

    ಚಿತ್ರದ ಟೈಟಲ್ ಲಾಂಚ್ ಮಾಡಿದ್ದು ಬಟರ್‍ಫ್ಲೈ ಪಾರೂಲ್ ಯಾದವ್. ಅವರಿಗೆ ಪ್ರಿಯಾಂಕಾ ಇನ್ನೂ ಆ ಬ್ಯೂಟಿಯನ್ನು ಹೇಗೆ ಮೇಂಟೇನ್ ಮಾಡ್ತಿದ್ದಾರೆ ಅನ್ನೋದೇ ಅಚ್ಚರಿ. ಅದಕ್ಕೊಂದು ಮೆಚ್ಚುಗೆ ನೀಡಿದ ಪಾರೂಲ್, ಉಪ್ಪಿ-ಪ್ರಿಯಾಂಕಾ ಮಗಳಿಗೆ ಶುಭ ಹಾರೈಸಿದರು.

    ಚಿತ್ರದ ಕಥೆಗೆ ದೇವಕಿ ಅನ್ನೋ ಟೈಟಲ್ ಸೂಕ್ತವಾಗಿ ಹೊಂದುತ್ತೆ ಎಂಬ ಕಾರಣಕ್ಕೆ ದೇವಕಿ ಅನ್ನೋ ಟೈಟಲ್ ಇಟ್ಟೆವು ಎಂದವರು ನಿರ್ದೇಶಕ ಲೋಹಿತ್. ಮೂವರು ಸಾಫ್ಟ್‍ವೇರ್ ಇಂಜಿನಿಯರುಗಳು ನಿರ್ಮಿಸಿರುವ ದೇವಕಿ, ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ.

I Love You Movie Gallery

Rightbanner02_butterfly_inside

Paddehuli Movie Gallery