` matte udbhava, - chitraloka.com | Kannada Movie News, Reviews | Image

matte udbhava,

 • ರಾಜಕೀಯಕ್ಕೆ ಮಿಲನ ನಾಗರಾಜ್ 

  milana nagraj to play role pf politician in matte udbhava

  ಮಿಲನ ನಾಗರಾಜ್ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಮ್ ದುನಿಯಾ ನಮ್ ಸ್ಟೈಲ್ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಮಿಲನ ನಾಗರಾಜ್, ಈಗ ತಾನೆ ಲವ್ ಮಾಕ್ವೆಲ್ ಚಿತ್ರಕ್ಕೆ ನಿರ್ಮಾಪಕಿಯೂ ಆಗಿದ್ದರು. ಈಗ ರಾಜಕಾರಣಿಯೂ ಆಗಿದ್ದಾರೆ.

  ಮಿಲನ ನಾಗರಾಜ್ ಅವರ ರಾಜಕೀಯ ಗುರು ಕೂಡ್ಲು ರಾಮಕೃಷ್ಣ. ಅಫ್‍ಕೋರ್ಸ್.. ಮತ್ತೆ ಉದ್ಭವ ಚಿತ್ರದಲ್ಲಿ. ರಾಜಕಾರಣಿ ಕಮ್ ಪರಿಸರ ಪ್ರೇಮಿಯಾಗಿ ಕಾಣಿಸಿಕೊಂಡಿರುವ ಮಿಲನ ನಾಗರಾಜ್, ಈ ವರ್ಷ ಬೆಳ್ಳಿ ತೆರೆಯ ಮೇಲೆ ರಾರಾಜಿಸಲಿದ್ದಾರೆ.

  ಮತ್ತೆ ಉದ್ಭವ ರಿಲೀಸ್ ಆಗೋಕೆ ವೇದಿಕೆ ಸಿದ್ಧವಾಗಿದ್ದು, ರಂಗಾಯಣ ರಘು, ಇಲ್ಲಿ ಅನಂತ್‍ನಾಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮೋದ್ ಈ ಚಿತ್ರದ ನಾಯಕ.

 • 1990ರಲ್ಲಿ ಉದ್ಭವ.. 2020ರಲ್ಲಿ ಮತ್ತೆ ಉದ್ಭವ

  matte udbhava to release soon

  ಅನಂತ್‌ನಾಗ್‌ ಅಭಿನಯದ ಉದ್ಭವ ಚಿತ್ರ ನೆನಪಿದೆಯಾ..? ಕೂಡ್ಲು ರಾಮಕೃಷ್ಣ ನಿರ್ದೇಶನದ ಉದ್ಭವ, 1990ರಲ್ಲಿ ಕನ್ನಡ ಚಿತ್ರರಂಗದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದ ಸಿನಿಮಾ. ವೈಕುಂಠರಾಜು ಅವರ ಕಥೆಯನ್ನು ಅದ್ಭುತವಾಗಿ ತೆರೆಯ ಮೇಲೆ ತಂದಿದ್ದರು ಕೂಡ್ಲು. ಈಗ ಮತ್ತೊಮ್ಮೆ ‘ಮತ್ತೆ ಉದ್ಭವ’ ಚಿತ್ರದ ಮೂಲಕ ಬರುತ್ತಿದ್ದಾರೆ.

  ಒನ್ಸ್ ಎಗೇಯ್ನ್ ಇದೂ ಕೂಡ ಹಾಸ್ಯಮಯವಾಗಿಯೇ ಸಾಗುವ ಕಥೆ. ಅನಂತ್‌ನಾಗ್‌ ಡೇಟ್ಸ್‌ ಸಮಸ್ಯೆ ಆಗಿದ್ದರಿಂದ ರಂಗಾಯಣ ರಘು ಅವರನ್ನಿಟ್ಟುಕೊಂಡು ಚಿತ್ರ ಮಾಡಿದ್ದಾರೆ ಕೂಡ್ಲು. ಆದರೆ, ಇಲ್ಲಿ ರಂಗಭೂಮಿ ಪ್ರತಿಭೆ ಪ್ರಮೋದ್ ನಾಯಕ. ಉದ್ಭವಕ್ಕಿಂತಲೂ ಅದ್ಭುತ ಅನುಭವ ಕೊಡಲಿದೆ ಎನ್ನುವುದು ಕೂಡ್ಲು ಭರವಸೆ.

  ಡ್ಯಾನ್ಸ್‌, ಫೈಟ್ಸ್‌, ಕಾಮಿಡಿ ಎಲ್ಲವೂ ಇರುವ ಮಾಸ್ ಸಿನಿಮಾ ಎನ್ನುವ ಕೂಡ್ಲು, ಒಂದು ಸಸ್ಪೆನ್ಸ್ ಇಟ್ಟಿದ್ದಾರೆ. ಉದ್ಭವದಲ್ಲಿ ದೇವರು ದೊಡ್ಡ ಪಾತ್ರ, ಇಲ್ಲಿ ದೇವರಿಗಿಂತಲೂ ದೊಡ್ಡ ಸೆನ್ಸೇಷನ್ ಇದೆಯಂತೆ. ಏನದು..? ಅದೇ ಸಸ್ಪೆನ್ಸ್.

  ಇಲ್ಲಿ ಪ್ರಮೋದ್‌ ಹಿರಿಯ ಮಗನಾಗಿ ಕಾಣಿಸಿಕೊಂಡರೆ, ಮಂಡ್ಯ ರವಿ ಎರಡನೇ ಮಗ. ಮಿಲನ ನಾಗರಾಜ್‌ ಅವರು ಪರಿಸರಪ್ರೇಮಿ ಮತ್ತು ರಾಜಕಾರಣಿ. ಮೋಹನ್‌ ಶೃಂಗಾರ ಸ್ವಾಮಿ. ಮೋಹನ್‌ ಅವರ ಭಕ್ತೆ ಶುಭರಕ್ಷಾ. ಉಳಿದಂತೆ ಸುಧಾಬೆಳವಾಡಿ, ಅವಿನಾಶ್‌, ಗಿರೀಶ್‌ಭಟ್‌, ಚೇತನ್‌, ನರೇಶ್‌, ಶಂಕರ್‌ ಅಶ್ವಥ್‌ ಮೊದಲಾದ ದೊಡ್ಡ ತಾರಾಬಳಗವೇ ಇದೆ.

  ನಿತ್ಯಾನಂದಭಟ್‌, ಸತ್ಯ, ಮಹೇಶ್‌ ಮುದ್ಗಲ್‌ ಮತ್ತು ರಾಜೇಶ್‌ ಜಂಟಿ ನಿರ್ಮಾಣದ ಚಿತ್ರ ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಮತ್ತೆ ಉದ್ಭವವಾಗಲಿದೆ.

 • Kodlu back with 'Matte Udbhava'

  kodlu ramakrishna back with matte udbhava

  Kodlu Ramakrisha whose last film was 'March 22' which was released last year is all set to make a comeback with a new film called 'Matte Udbhava'. The film is a sequel to his super hit film 'Udbhava' which was released almost 30 years ago.

  'Udbhava' is a satire on the political and religious system and is based on the play by well known journalist B V Vaikuntaraju. The film starring Ananth Nag, Dinesh, Balakrishna, K S Ashwath and others was a super hit when released.

  Now Kodlu is planning to make a sequel to 'Udbhava'. This time, Achyuth Kumar will be seen in the role of Ananth Nag and Prajwal Devaraj is also seen in a prominent role in the film. The film is being produced by Nityananda Bhatt who was one of the producers of 'Coffee Thota'.

 • Matte Udbhava Review: Chitraloka Rating 3.5/ 5*

  matte udbhava movie review

  The 1990s superhit film 'Udbhava' by the veteran filmmaker Kodlu Ramakrishna returns with a fresh look to it. The continued saga is a treat to the fans of Udbhava, as it keeps the original essence intact while delivering an entirely new package to the present generation audience.

  With Rangayana Raghu in the lead along with the talented Pramod and Milana Nagaraj, Matte Udbhava kick starts with the idol of Lord Ganesha emerging yet again for a rib tickling comedy. The director's take on Matte Udbhava is a hilarious one but also carries an important message to the audience and to the society at large.

  Rangayna Raghu as priest and his son played by Pramod make use of the idol to swindle people, which ensures for an edge of the seat entertainment. The humorous twists and turns is a perfect recipe for this retake on the classic movie. Milana plays her part beautifully.

  Further, the movie is also inspired by real life incidents in a lighter vein such as black money in a mutt, a struggling actress making her efforts to get into politics, building mafia and more.

  Along with top-notch performance, it is the Kodlu Ramakrishna's narrative style which makes Matte Udbhava another must watch movie for the season. Expect entertainment plus some important message in a humorous way from this one. Go book your tickets at a theater near you for some real fun on the big screen

 • Matte Udbhava Trailer Released by Challenging Star Darshan

  matte udbhava traile released by challenging star darshan

  Renowned filmmaker Kodlu Ramakrishna who returns or rather re-surfaces with his latest version to his classic hit Udbhava, titled 'Matte Udbhava', is releasing on February 7. 

  Challenging Star Darshan has released the trailer of the movie, which is being widely appreciated by the audience on various social media platforms. Picking it up from where Udbhava left, the latest - Matte Udbhava features Rangayana Raghu in the lead, which in the first version was portrayed by Anant Nag. 

  Milana Nagaraj, and Pramod of Premier Padmini are paired in this one. Pramod says that his character is different from that of Premier Padmini, as he is a lot smarter and not the innocent one from his debut venture. V Manohar has composed the music.

  Made under White Panthers, the film is produced by Nithyananda Bhat, Satya, Mahesh Mudghal and Rajesh.

 • ಅಂದಿನ ಅನಂತ್ ನಾಗ್.. ಇಂದಿನ ಪ್ರಮೋದ್

  then it was ananth nag, now its pramod

  ಎಲ್ಲಿಯ ಅನಂತ್ ನಾಗ್.. ಎಲ್ಲಿಯ ಪ್ರಮೋದ್.. ಅನ್ನೋ ಜಡ್ಜ್‍ಮೆಂಟ್ ಕೊಡಬೇಡಿ. ಅವರು ಏರಿದ ಎತ್ತರಕ್ಕೆ ಹೋಗಲು ಪ್ರತಿಯೊಬ್ಬ ಕಲಾವಿದನಿಗೂ ಅನುಭವ ಬೇಕೇ ಬೇಕು. ಆದರೆ, ಆ ವಿಷಯದಲ್ಲಿ ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಅದೃಷ್ಟವಂತ. ಉದ್ಭವ ಚಿತ್ರದಲ್ಲಿ ಅನಂತ್ ನಾಗ್ ಮಾಡಿದ್ದ ನಯವಂಚಕ ಸಮಾಜಸೇವಕನ ಪಾತ್ರವನ್ನು ಮತ್ತೆ ಉದ್ಭವ ಚಿತ್ರದಲಿ ಮಾಡಿರುವುದು ಪ್ರಮೋದ್.

  ಉದ್ಭವ ಚಿತ್ರದಲ್ಲಿ ಅನಂತ್ ಸರ್ ಮಾಡಿದಂತಹುದೇ ಪಾತ್ರ. ಭೇಟಿಯಾಗುವ ಪ್ರತಿಯೊಬ್ಬರನ್ನೂ ತನಗಾಗಿ ಬಳಸಿಕೊಳ್ಳುವ ಅವಕಾಶವಾದಿ. ಹೀರೋಯಿನ್ ಇಂಪ್ರೆಸ್ ಮಾಡಲು ಫೈಟ್ ಕೂಡಾ ಮಾಡುತ್ತೇನೆ. ಆದರೆ ಕೆಟ್ಟವನಲ್ಲ ಎಂದು ಹೇಳಿ ನಗುತ್ತಾರೆ ಪ್ರಮೋದ್.

  ಉದ್ಭವ ಚಿತ್ರವನ್ನು ನಿರ್ದೇಶಿಸಿದ್ದ ಕೂಡ್ಲು ರಾಮಕೃಷ್ಣ ಅವರೇ ಮತ್ತೆ ಉದ್ಭವ ನಿರ್ದೇಶಿಸಿದ್ದಾರೆ. ಒಂದು ರೀತಿಯಲ್ಲಿ ಇದು ಆ ಉದ್ಭವದ ಸೀಕ್ವೆಲ್. ಅನಂತ್ ನಾಗ್ ಇಲ್ಲ ಅಷ್ಟೆ. ಆ ಪಾತ್ರದಲ್ಲಿ ನಟಿಸಿರೋದು ರಂಗಾಯಣ ರಘು. ಪ್ರಮೋದ್ ಎದುರು ಮಿಲನ ನಾಗರಾಜ್ ನಾಯಕಿಯಾಗಿದ್ದಾರೆ.

 • ಆ ಉದ್ಭವಕ್ಕೆ 11.. ಮತ್ತೆ ಉದ್ಭವಕ್ಕೆ 6..  ಏನಿದು ಗುಟ್ಟು..?

  matte udbhava specialities

  1990ರಲ್ಲಿ ತೆರೆಗೆ ಬಂದಿದ್ದ ಉದ್ಭವ, ಕನ್ನಡದ ಕ್ಲಾಸಿಕ್ ಚಿತ್ರಗಳಲ್ಲೊಂದು. ಅನಂತ್ನಾಗ್ ನಾಯಕನಾಗಿ ನಟಿಸಿದ್ದ ಉದ್ಭವಕ್ಕೆ ಕೋಡ್ಲು ರಾಮಕೃಷ್ಣ ನಿರ್ದೇಶಕರಾಗಿದ್ದರು. ಅದೇ ಚಿತ್ರದ ಸೀಕ್ವೆಲ್ ಮತ್ತೆ ಉದ್ಭವ. ಒನ್ಸ್ ಎಗೇಯ್ನ್ ಕೋಡ್ಲು ಅವರೇ ನಿರ್ದೇಶಕ.  ಆದರೆ, ಸಿನಿಮಾ ಮಾತ್ರ ಈಗಿನ ಕಾಲಘಟ್ಟದ್ದು.

  ಇನ್ನೂ ಒಂದು ವಿಶೇಷವಿದೆ. 1990ರ ಉದ್ಭವ ಚಿತ್ರಕ್ಕೆ 11 ನಿರ್ಮಾಪಕರಿದ್ದರಂತೆ. ಈಗ ಮತ್ತೆ ಉದ್ಭವ ಚಿತ್ರಕ್ಕೆ 6 ಮಂದಿ ನಿರ್ಮಾಪಕರು. ನಿತ್ಯಾನಂದ ಭಟ್, ಸತ್ಯ, ಮಹೇಶ್, ರಾಜೇಶ್ ಮತ್ತಿತರರು ಬಂಡವಾಳ ಹೂಡಿದ್ದು, ಗುರುಪ್ರಸಾದ್ ಮುದ್ರಾಡಿ ಕಾರ್ಯಕಾರಿ ನಿರ್ವಪಕರಾಗಿದ್ದಾರೆ.

  ಇದು ಪ್ರಯೋಗಾತ್ಮಕ ಚಿತ್ರವಲ್ಲ, ಕಂಪ್ಲೀಟ್ ಕಮರ್ಷಿಯಲ್ ಸಿನಿಮಾ ಎನ್ನುವ ಕೋಡ್ಲು, ಆ ಉದ್ಭವಕ್ಕಿಂತ 4 ಪಟ್ಟು ಚೆನ್ನಾಗಿ ಮತ್ತೆ ಉದ್ಭವ ಮೂಡಿ ಬಂದಿದೆ ಅನ್ನೋ ಕಾನ್ಫಿಡೆನ್ಸಿನಲ್ಲಿದ್ದಾರೆ.

  ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದ್ದಾರೆ. ನಾಯಕನಾಗಿ ಪ್ರಮೋದ್ ನಟಿಸಿದ್ದು, ಅನಂತ್ ನಾಗ್ ನಟಿಸಿದ್ದ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ರಂಗಾಯಣ ರಘು. ನಾಯಕಿಯಾಗಿ ನಟಿಸಿರುವ ಮಿಲನ ನಾಗರಾಜ್ಗೆ ಅಭಿನಯಕ್ಕೆ ಅದ್ಭುತ ಅವಕಾಶ ಸಿಕ್ಕಿರುವ ಖುಷಿಯಿದೆ. ಈ ಎಲ್ಲ ಖುಷಿಯೂ ತೆರೆಯ ಮೇಲೆ ಬರುವ ಸಮಯವೂ ಸನ್ನಿಹಿತವಾಗಿದೆ.

 • ಆ ಉದ್ಭವದ ಕಥೆ ಇದು.. ಮತ್ತೆ ಉದ್ಭವದ ಕಥೆ ಏನು..?

  what is the story of matte udbhava

  ಆತನ ಹೆಸರು ರಾಘವೇಂದ್ರ ರಾಯ. ಕೆಲಸ ಕಳೆದುಕೊಂಡಿರುವ  ಸರ್ಕಾರಿ ಅಧಿಕಾರಿ. ಮಾತು ಬೆಣ್ಣೆ. ಎಂತಹವರನ್ನೂ ಮೋಡಿ ಮಾಡುವ ಶಕ್ತಿ ಆತನ ಮಾತುಗಳಲ್ಲಿದೆ. ಜೀವನಕ್ಕಾಗಿ ಅವನೊಂದು ಸುಳ್ಳಿನ ಕಥೆ ಸೃಷ್ಟಿಸುತ್ತಾನೆ. ಏರಿಯಾದ ರಸ್ತೆಯನ್ನು ದೊಡ್ಡದಾಗಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿಸುತ್ತಾನೆ. ಆಗ ಅದೇ ಏರಿಯಾದ ಅಂಗಡಿಗಳವರು ರಸ್ತೆ ಅಗಲೀಕರಣ ಮಾಡಿಸಬೇಡಿ, ವ್ಯಾಪಾರ ಹೋಗುತ್ತೆ. ನಿಮಗೆ ಸರ್ಕಾರದ ಕಚೇರಿಗಳು ಗೊತ್ತು. ಸಹಾಯ ಮಾಡಿ ಎಂದು ಬಂದು ಹಣ ಕೊಡ್ತಾರೆ. ಅದೇ ವೇಳೆ ಬಿಲ್ಡಿಂಗಿನವರು ಬಂದು ರಸ್ತೆ ಅಗಲೀಕರಣ ಮಾಡಿಸಿ, ಖರ್ಚು ನಂದು ಅಂತಾರೆ. ಎರಡೂ ಕಡೆ ದುಡ್ಡು ತೆಗೆದುಕೊಂಡು ಆಟ ಶುರು ಮಾಡುವ ರಾಘಣ್ಣ, ಒಮ್ಮೆ ರಸ್ತೆ ಅಗಲೀಕರಣ ತಪ್ಪಿಸಲು ಗಣೇಶನ ಮೂರ್ತಿಯನ್ನು ಉದ್ಭವ ಮಾಡುತ್ತಾನೆ. ಇನ್ನೊಮ್ಮೆ ಶಿವಲಿಂಗವನ್ನೇ ಸೃಷ್ಟಿಸುತ್ತಾನೆ. ಈ ಎರಡೂ ಬೆಳವಣಿಗೆಗಳು ಮುಗಿಯುವಷ್ಟರಲ್ಲಿ ರಾಜಕಾರಣದಲ್ಲಿ ಅವನಿಗೆ ದೊಡ್ಡ ಹೆಸರು ಬಂದಿರುತ್ತೆ. ಇದು ಕಥೆ. ರಾಘಣ್ಣ ಹೋಗಿ ರಾಘವೇಂದ್ರ ರಾಯನಾಗಿರುತ್ತಾನೆ.

  ಬಿ.ವೈಕುಂಠರಾಜು ಅವರ ಪುಟ್ಟ ಕಥೆಯನ್ನು ಅಷ್ಟೇ ಚೆಂದವಾಗಿ ತೆರೆಗೆ ತಂದು ಕೊಟ್ಟಿದ್ದರು ಕೂಡ್ಲು ರಾಮಕೃಷ್ಣ. ಅನಂತ್ ನಾಗ್ ಅದ್ಭುತ ಅಭಿನಯದ ಪರಿಣಾಮ, ಚಿತ್ರ 25 ವಾರ ಓಡಿತ್ತು. ಈಗ ಅದೇ ಚಿತ್ರದ ಸೀಕ್ವೆಲ್ ಮತ್ತೆ ಉದ್ಭವ. ಅದೇ ನಿರ್ದೇಶಕರು.

  ಅನಂತ್ ನಾಗ್ ಅವರ ರಾಘವೇಂದ್ರ ರಾಯನ ಪಾತ್ರದಲ್ಲಿ ಈಗ ರಂಗಾಯಣ ರಘು ಇದ್ದರೆ, ಅವರ ಮಗನಾಗಿ ಪ್ರಮೋದ್, ಗೆಳತಿಯಾಗಿ ಮಿಲನ ನಾಗರಾಜ್ ಇದ್ದಾರೆ. ರಾಜಕಾರಣ, ನಯವಂಚಕತನ, ಮೋಸದ ಸ್ವಾಮಿಗಳಿದ್ದಾರೆ. ಚಿತ್ರ ಇದೇ ವಾರ ರಿಲೀಸ್.

 • ಗ್ಲಾಮರ್ ಗೊಂಬೆ ಮಿಲನ ನಾಗರಾಜ್ ರಾಜಕಾರಣಿಯಾದಾಗ..

  milana nagraj as politician in matte udbhava

  ಮಿಲನ ನಾಗರಾಜ್, ಗ್ಲಾಮರ್ ಗೊಂಬೆ. ತಾವೊಬ್ಬ ಉತ್ತಮ ನಟಿ ಎಂದು ಸಾಬೀತು ಮಾಡಿರುವ ಮಿಲನ ಈಗ ರಾಜಕಾರಣಿಯಾಗಿದ್ದಾರೆ. ವೃತ್ತಿಯ ಆರಂಭದ ದಿನಗಳಲ್ಲೇ ಪಾಲಿಟಿಕ್ಸ್‍ಗೆ ಬಂದ್ರಾ ಎನ್ನಬೇಡಿ, ಅವರು ಮಾಡಿರುವುದೇ ರಾಜಕಾರಣಿಯ ಪಾತ್ರ. ಮತ್ತೆ ಉದ್ಭವ ಚಿತ್ರದಲ್ಲಿ.

  ರಾಜಕೀಯದಲ್ಲಿ ನನಗೆ ಆಸಕ್ತಿಯೇ ಇಲ್ಲ. ರಾಜಕೀಯ ಸುದ್ದಿಗಳನ್ನೂ ಓದಲ್ಲ ಎನ್ನುವ ಮಿಲನಾಗೆ, ಪಾತ್ರದಲ್ಲಿ ನಟಿಸಿದ ಮೇಲೆ ಗೊತ್ತಾಗಿರೋದು ಏನಂದ್ರೆ, ರಾಜಕೀಯ ಸುಲಭ ಅಲ್ಲ. ಅವರಿಗೆ ಸಿಕ್ಕಾಪಟ್ಟೆ ಪ್ರೆಶರ್ ಇರುತ್ತೆ ಅನ್ನೋ ಸತ್ಯ.

  ಇನ್ನು ಮಿಲನಾಗೆ ಜನರ ರಾಜಕೀಯವೂ ಅರ್ಥವಾಗಲ್ಲ. ಜನರೂ ಹೇಗಾಗಿದ್ದಾರೆ ಅಂದ್ರೆ, ತಾವು ಇಷ್ಟಪಡುವ ವ್ಯಕ್ತಿ, ಪಕ್ಷ ಏನೇ  ಮಾಡಿದರೂ ವಹಿಸಿಕೊಂಡು ಬರ್ತಾರೆ. ಎದುರಾಳಿಯವರು ಏನೇ ಮಾಡಿದ್ರೂ ವಿರೋಧಿಸ್ತಾರೆ. ಸರಿ, ತಪ್ಪು ಅನ್ನೋದನ್ನ ನೋಡಲ್ಲ. ನಾವು ನಂಬುವ ರಾಜಕಾರಣಿ, ಪಕ್ಷ ಯಾವಾಗಲೂ 100% ಸರಿ ಮಾಡುತ್ತೆ ಅಂತಾ ನಂಬೋದು ತಪ್ಪು ಎನ್ನುತ್ತಾರೆ ಮಿಲನಾ. ಸ್ಸೋ.. ಹೀಗಿರುವ ಮಿಲನ, ರಾಜಕೀಯಕ್ಕೆ ಸೂಟ್ ಆಗಲ್ಲ ಅನ್ನೋದು ಕನ್‍ಫರ್ಮ್ ಆಯ್ತು.

  ಅಂದಹಾಗೆ ಮಿಲನ ರಾಜಕಾರಣಿಯಾಗಿರೋ ಮತ್ತೆ ಉದ್ಭವ ಇದೇ ವಾರ ರಿಲೀಸ್ ಆಗುತ್ತಿದೆ. ಕೂಡ್ಲು ರಾಮಕೃಷ್ಣ ನಿರ್ದೇಶನದ ಚಿತ್ರದಲ್ಲಿ ಪ್ರಮೋದ್, ರಂಗಾಯಣ ರಘು ನಟಿಸಿದ್ದಾರೆ.

 • ಪದ್ಮಿನಿಯ ಪ್ರಮೋದ್ ಮತ್ತೆ ಉದ್ಭವ

  pramod pays different shades in matte udbhava

  ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರದ ಮುಗ್ಧ ಪ್ರೇಮಿ, ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ಜಗ್ಗೇಶ್ ಎದುರು ನಟಿಸಿ ಗೆದ್ದ ಹುಡುಗ ಪ್ರಮೋದ್. ಈಗ ಮತ್ತೆ ಉದ್ಭವದಲ್ಲಿ ಹೀರೋ ಆಗಿದ್ದಾರೆ.

  ಆಗ ಉದ್ಭವ ಚಿತ್ರದಲ್ಲಿ ಅನಂತ್ ನಾಗ್ ಮಾಡಿದ್ದಂತಹ ಪಾತ್ರ ನನ್ನದು. ಉದ್ಭವದಲ್ಲಿ ಅನಂತ್ ನಾಗ್ ಪಾತ್ರವಿತ್ತಲ್ಲ, ಅವರ ಮಗ ನಾನು. ತಂದೆ, ತಾಯಿ, ಪ್ರೀತಿಸುವ ಹುಡುಗಿ, ಬಿಲ್ಡರ್, ರಾಜಕಾರಣಿ, ಸ್ವಾಮೀಜಿ.. ಹೀಗೆ ಹಲವು ಪಾತ್ರಗಳು ಚಿತ್ರದಲ್ಲಿವೆ. ಒಬ್ಬೊಬ್ಬರ ಬಳಿಯೂ ಒಂದೊಂದು ರೀತಿ ವರ್ತಿಸುವ ಪಾತ್ರ ನನ್ನದು. ತುಂಬಾ ಶೇಡ್‍ಗಳಿವೆ ಎನ್ನುವ ಪ್ರಮೋದ್, ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  ದರ್ಶನ್ ತರ ಕಾಣ್ತೀಯ. ಒಂದೊಳ್ಳೆ ಕಮರ್ಷಿಯಲ್ ಸಿನಿಮಾ ಮಾಡು ಎನ್ನುತ್ತಿದ್ದವರಿಗೆ ಈ ಚಿತ್ರದಲ್ಲಿ ಉತ್ತರವಿದೆ ಎನ್ನುವ ಪ್ರಮೋದ್‍ಗೆ ನಿರ್ದೇಶಕ ಕೂಡ್ಲು ರಾಮಕೃಷ್ಣ ಮೊದಲ ಸೀನ್ ನಂತರ ಮೆಚ್ಚಿ ಚಪ್ಪಾಳೆ ತಟ್ಟಿದ್ದು ಕಿವಿಯಲ್ಲಿ ಗುಂಯ್‍ಗುಡುತ್ತಿದೆ. ಇದೇ ವಾರ ರಿಲೀಸ್ ಆಗುತ್ತಿದ್ದು, ಪ್ರೇಕ್ಷಕರ ಚಪ್ಪಾಳೆಗೆ ಕಿವಿಗೊಟ್ಟಿದ್ದಾರೆ ಪ್ರಮೋದ್.

 • ಮತ್ತೆ ಉದ್ಭವ ಟ್ರೇಲರ್ ಲಾಂಚ್ ಮಾಡಿದ ದರ್ಶನ್

  matte udbhava trailer released by darshan

  ಮತ್ತೆ ಉದ್ಭವ ಚಿತ್ರದ ಟ್ರೇಲರ್ ಲಾಂಚ್ ಮಾಡಿ ಶುಭ ಕೋರಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಕೂಡ್ಲು ರಾಮಕೃಷ್ಣ ನಿರ್ದೇಶನದ 90ರ ದಶಕದ ಸೆನ್ಸೇಷನ್ ಹಿಟ್ ಉದ್ಭವ ಚಿತ್ರದ ಸೀಕ್ವೆಲ್ ಇದು. ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಚಿತ್ರಕ್ಕೆ ಶುಭ ಕೋರಿದ್ದಾರೆ ದರ್ಶನ್.

  ಚಿತ್ರದಲ್ಲಿ ಪ್ರಸ್ತುತ ರಾಜಕೀಯವನ್ನು ವ್ಯಂಗ್ಯವಾಗಿ ಹೇಳಲಾಗಿದೆ. ಮಿಲನ ನಾಗರಾಜ್ ಇಲ್ಲಿ ರಾಜಕಾರಣಿ. ಅಂದಿನ ಅನಂತ್ ನಾಗ್ ಪಾತ್ರದಲ್ಲಿ ರಂಗಾಯಣ ರಘು ಇದ್ದಾರೆ. ಪ್ರೀಮಿಯರ್ ಪದ್ಮಿನಿಯಲ್ಲಿ ಜಗ್ಗೇಶ್ ಎದುರು ಸರಿಸಮನಾಗಿ ನಟಿಸಿದ್ದ ಪ್ರಮೋದ್ ಈ ಚಿತ್ರಕ್ಕೆ ಹೀರೋ. ಫೆಬ್ರವರಿ 7ರಂದು ಸಿನಿಮಾ ರಿಲೀಸ್ ಆಗಲಿದೆ.

 • ಮತ್ತೆ ಉದ್ಭವ ಹೀರೋಗೂ ದರ್ಶನ್ ಕಂಡರೆ ಲವ್ ಜಾಸ್ತಿ

  the kid during kariya movie release is hero now

  ಮತ್ತೆ ಉದ್ಭವ ಚಿತ್ರದ ಹೀರೋ ಪ್ರಮೋದ್. ಈ ಪ್ರಮೋದ್‍ಗೆ ದರ್ಶನ್ ಕಂಡರೆ ಸ್ವಲ್ಪ ಪ್ರೀತಿ ಜಾಸ್ತಿ. ಕಾರಣ, ಅವರೂ.. ಇವರೂ ಒಂದೇ ಊರಿನವರು.

  `ಕರಿಯ ರಿಲೀಸ್ ಆದಾಗ ನನಗೆ 7 ವರ್ಷ. ಆ ಚಿತ್ರದ ಹಾಡುಗಳನ್ನು ರೊಚ್ಚಿಗೆದ್ದು ಕೇಳಿದ್ದೆ. ನಮ್ಮೂರಿನಲ್ಲಿ ದರ್ಶನ್ ಅವರನ್ನು ಕರೆಸಿ ಸನ್ಮಾನ ಮಾಡಿದ್ದರು. ದೂರದಿಂದ ನಿಂತು ನೋಡಿದ್ದೆ. ಈಗ ಅವರು ನನ್ನ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದಾರೆ ಎನ್ನುವುದೇ ಖುಷಿ' ಎಂದು ಖುಷಿ ಖುಷಿಯಾಗಿ ಹೇಳಿಕೊಂಡಿದ್ದಾರೆ.

  ದರ್ಶನ್ ತುಂಬಾ ಸಿಂಪಲ್ ಮನುಷ್ಯ. ಅವರ ಮನೆಗೆ ಹೊದರೆ ಊಟ ಮಾಡಿಸದೆ ಕಳಿಸೋದಿಲ್ಲ ಎನ್ನುವ ಪ್ರಮೋದ್ ಮತ್ತೆ ಉದ್ಭವ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೂಡ್ಲು ರಾಮಕೃಷ್ಣ ನಿರ್ದೇಶನದ ಮತ್ತೆ ಉದ್ಭವ ಚಿತ್ರದಲ್ಲಿ ಮಿಲನ ನಾಗರಾಜ್, ರಂಗಾಯಣ ರಘು ನಟಿಸಿದ್ದಾರೆ.

 • ಮೂವರು ಸಿಎಂಗಳು.. ಇಬ್ಬರು ಸ್ವಾಮೀಜಿಗಳು.. ಮತ್ತೆ ಉದ್ಭವದಲ್ಲಿದ್ದಾರೆ..!

  matte udbhava has real characters

  ಈ ಚಿತ್ರದಲ್ಲಿ ರಾಜ್ಯ ಕಂಡ ಮೂವರು ಮಾಜಿ ಸಿಎಂಗಳನ್ನು ನೆನಪಿಸುವ ಪಾತ್ರಗಳಿವೆ. ಇಬ್ಬರು ವಿವಾದಿತ ಸ್ವಾಮಿಗಳನ್ನು ಹೋಲುವ ಕಥೆ ಇದೆ. ಅದು ವಿವಾದವಾದರೂ ಆಗಬಹುದು.

  ಹೀಗೊಂದು ವಿವಾದದ ಸುಳಿವನ್ನು ಚಿತ್ರ ರಿಲೀಸ್ ಆಗುವ ವೇಳೆ ಬಿಟ್ಟುಕೊಟ್ಟಿದ್ದಾರೆ ನಿರ್ದೇಶಕ ಕೂಡ್ಲು ರಾಮಕೃಷ್ಣ. ಮತ್ತೆ ಉದ್ಭವ ಥಿಯೇಟರುಗಳಲ್ಲಿ ಉದ್ಭವವಾಗಿರುವ ಸಮಯವಿದು. ಅವರು ಯಾರು..? ಅದು ನಿಮಗೆ ಸರಳವಾಗಿ ಅರ್ಥವಾಗುತ್ತೆ. ಊಹೆ ನಿಮಗೇ ಬಿಟ್ಟಿದ್ದು ಎನ್ನುವ ಕೂಡ್ಲು, ಅಪ್ಪಿತಪ್ಪಿಯೂ ವಿವಾದವನ್ನು ಕೆದಕಿ.. ಗಾಯ ಮಾಡಿಕೊಂಡು..ಮೈಮೇಲೆ ಎಳೆದುಕೊಳ್ಳೋಕೆ ಹೋಗೋದಿಲ್ಲ. ಒಬ್ಬ ನಿರ್ದೇಶಕನಾಗಿ ಹೇಳಬೇಕಾದ್ದನ್ನು ಹೇಳಿ ತಣ್ಣಗೆ ಕುಳಿತಿದ್ದಾರೆ ಕೂಡ್ಲು.

  ಪ್ರಮೋದ್, ರಂಗಾಯಣ ರಘು, ಮಿಲನ ನಾಗರಾಜ್, ಮೋಹನ್ ನಟಿಸಿರುವ ಚಿತ್ರಕ್ಕೆ ಕಾಫಿತೋಟ ಚಿತ್ರ ನಿರ್ಮಿಸಿದ್ದ ನಿತ್ಯಾನಂದ ಬಂಡವಾಳ ಹೂಡಿದ್ದಾರೆ.

 • ಶೃಂಗಾರ ಸ್ವಾಮಿ ಮತ್ತೆ ಉದ್ಭವ..!

  mohan as shrunga swamy in matte udbhava

  ದೇಶದಲ್ಲಿ ಎಷ್ಟೆಲ್ಲ ಸ್ವಾಮಿಗಳಿಲ್ಲ. ಪ್ರತಿಯೊಬ್ಬರೂ ಕೈ ಮುಗಿಯುವ ಶಿರಸಾಷ್ಟಾಂಗ ನಮಸ್ಕರಿಸುವ ಸ್ವಾಮಿಗಳನ್ನು ಕೊಟ್ಟ ಕರ್ನಾಟಕದಲ್ಲೇ, ಛೀಥೂ ಎಂದು ಉಗಿಸಿಕೊಳ್ಳುವ ಸ್ವಾಮಿಗಳೂ ಹುಟ್ಟಿದ್ದಾರೆ. ಇಂತಹ ಡಿಂಕಚಿಕ ಸ್ವಾಮಿಗಳ ಜೊತೆ ಸೇರಲು ಬರುತ್ತಿದ್ದಾನೆ ಶೃಂಗಾರ ಸ್ವಾಮಿ.

  ಈ ಶೃಂಗಾರ ಸ್ವಾಮಿ ಬೇಱರೂ ಅಲ್ಲ. ಮೋಹನ್. ನಟ, ನಿರ್ಮಾಪಕ, ಸಂಭಾಷಣೆಕಾರ, ನಿರ್ದೇಶಕರಾಗಿ ಹೆಸರು ಮಾಡಿರುವ ಮೋಹನ್, ಶೃಂಗಾರ ಸ್ವಾಮಿಯಾಗಿ ಮತ್ತೆ ಉದ್ಭವವಾಗಿದ್ದಾರೆ. ಇವರಿಗೆ ಶೃಂಗಾರ ಸ್ವಾಮಿಯ ವೇಷ ಹಾಕಿಸಿರುವುದು ಡಿಫರೆಂಟ್ ಸಿನಿಮಾಗಳ ಖ್ಯಾತಿಯ ಕೂಡ್ಲು ರಾಮಕೃಷ್ಣ.

  1990ರಲ್ಲಿ ಬಂದಿದ್ದ ಸೆನ್ಸೇಷನ್ ಸಿನಿಮಾ ಉದ್ಭವ ಚಿತ್ರದ ಸೀಕ್ವೆಲ್ ಇದು. ಪಾತ್ರ ಸಖತ್ತಾಗಿದೆ. ಗಮ್ಮತ್ತಿನಿಂದ ಕೂಡಿದೆ. ಅಕಸ್ಮಾತ್ ಯಾರಾದರೂ ಸ್ವಾಮಿಗೆ ಹೋಲಿಕೆಯಾದರೆ ನಾನು ಜವಾಬ್ದಾರನಲ್ಲ ಎಂದು ತುಂಟತನದ ನಗೆಯ ಉತ್ತರ ಕೊಡುತ್ತಿದ್ದಾರೆ ಮೋಹನ್.

  ಪ್ರಮೋದ್, ಮಿಲನ ನಾಗರಾಜ್, ರಂಗಾಯಣ ರಘು, ಅವಿನಾಶ್ ನಟಿಸಿರುವ ಚಿತ್ರದಲ್ಲಿ ರಂಗಾಯಣ ರಘು, ಅನಂತ್ ನಾಗ್ ಪಾತ್ರ ಮಾಡಿದ್ದಾರೆ. ಅನಂತ್ ನಾಗ್ ಅವರೇ ಮಾಡಿದ್ದರೆ, ಪಾತ್ರದ ತೂಕ ಇನ್ನಷ್ಟು ಹೆಚ್ಚುತ್ತಿತ್ತು. ಆದರೆ, ನಿರ್ದೇಶಕರಿಗೆ ನಿರಾಸೆಯಾಗದಂತೆ ನಟಿಸಿದ್ದೇನೆ ಎನ್ನುವ ವಿನಮ್ರತೆ ರಂಗಾಯಣ ರಘು ಅವರದ್ದು. ಸಿನಿಮಾ ಫೆಬ್ರವರಿ ಮೊದಲ ವಾರ ತೆರೆಗೆ ಬರುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery