` hd revanna, - chitraloka.com | Kannada Movie News, Reviews | Image

hd revanna,

 • ರೇವಣ್ಣ ಮಾತಿಗೆ ಸುಮಲತಾ ಕೊಟ್ಟ ಉತ್ತರ 

  sumalatha's reaction to hd revanna's statement

  sಸುಮಲತಾ ಅವರು ಗಂಡ ಸತ್ತ ಒಂದು  ತಿಂಗಳಲ್ಲಿ ರಾಜಕೀಯಕ್ಕೆ ಬಂದಿದ್ದಾರೆ ಎಂದರೆ ಏನರ್ಥ..? ಎಂದಿರುವ ರೇವಣ್ಣ, ನಂತರ ಕ್ಷಮೆಯನ್ನೂ ಕೇಳಿಲ್ಲ.  ಈಯಮ್ಮನಿಗೆ ರಾಜಕೀಯ ಬೇಕಿತ್ತಾ..? ಎಂದಿರೋ ರೇವಣ್ಣ, ಕ್ಷಮೆ ಕೇಳಲ್ರೀ.. ಕ್ಷಮೆ ಕೇಳುವಂತ ತಪ್ಪು ಏನ್ ಮಾಡಿದ್ದೀನಿ ನಾನು..? ಹಿಂದೂ ಸಂಸ್ಕøತಿ ಪ್ರಕಾರವೇ ಮಾತನಾಡಿದ್ದೀನಿ.. ಎಂದು ಉತ್ತರ ಕೊಟ್ಟಿದ್ದಾರೆ.

  ರೇವಣ್ಣನವರ ಮಾತುಗಳಿಗೆ ಸುಮಲತಾ ಕೊಟ್ಟರೋ ಪ್ರತಿಕ್ರಿಯೆ ಇಷ್ಟೆ. ನಾನು ರೇವಣ್ಣನವರ ಮಾತುಗಳಿಗೆ ಪ್ರತಿಕ್ರಿಯೆ ಕೊಡಲ್ಲ. ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಲ್ಲ. ನನ್ನ ಬೆಂಬಲಿಗರಿಗೂ ಅಷ್ಟೆ, ಅವರ ಬಗ್ಗೆ ಕೇವಲವಾಗಿ ಮಾತನಾಡಬೇಡಿ ಎಂದು ಹೇಳಿದ್ದೇನೆ. ನಿಖಿಲ್ ಕೂಡಾ ನನ್ನ ಮಗ ಅಭಿಯಿದ್ದ ಹಾಗೆ. ಆತನ ಬಗ್ಗೆ ಕೆಟ್ಟದಾಗಿ ಮಾತನಾಡಿದರೂ ನನಗೆ ನೋವಾಗುತ್ತೆ ಎಂದು ಉತ್ತರ ಕೊಟ್ಟಿದ್ದಾರೆ ಸುಮಲತಾ.

 • ಸುಮಲತಾ ರಾಜಕೀಯ, ರೇವಣ್ಣ ಹೇಳಿಕೆ - ಏನ್ ಹೇಳಿದ್ರು ಶಿವಣ್ಣ..?

  shivanna's first reaction on sumalath's political entry

  ಸುಮಲತಾ ಅಂಬರೀಷ್ ಮಂಡ್ಯದಿಂದ ಸ್ಪರ್ಧೆ ಮಾಡೋದು, ಪಕ್ಷೇತರರಾಗಿ ಕಣಕ್ಕಿಳಿಯುವುದು ಖಚಿತವಾಗಿದ್ದೇ ತಡ, ರಾಜಕೀಯದ ಕೊಳಕು ನಾಲಗೆಗೆ ಸಿಕ್ಕಿದ್ದಾರೆ. ಅದರಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿ ಅಣ್ಣ ಹೆಚ್.ಡಿ.ರೇವಣ್ಣ ಆಡಿರುವ ಮಾತು ವಿವಾದವಾಗಿದೆ. ಈ ಕುರಿತಂತೆ ಹಲವರು ಖಂಡಿಸಿದ್ದಾರೆ. ಟೀಕಿಸಿದ್ದಾರೆ. ರೇವಣ್ಣ ಒಬ್ಬರನ್ನು ಬಿಟ್ಟು, ಉಳಿದವರೆಲ್ಲ ಸಾರಿ..ಸ್ಸಾರಿ ಎಂದಿದ್ದಾರೆ. ಈ ಕುರಿತು ಶಿವರಾಜ್ ಕುಮಾರ್ ಹೇಳಿರೋದು ಇಷ್ಟು.

  ರೇವಣ್ಣ ಹೇಳಿಕೆಗೆ : ಸುಮಲತಾ ಅವರ ಬಗ್ಗೆಯಷ್ಟೇ ಅಲ್ಲ, ಯಾವುದೇ ಹೆಣ್ಣಿನ ಬಗ್ಗೆ ಈ ರೀತಿ ಕೆಟ್ಟದಾಗಿ ಮಾತನಾಡಬಾರದು. ರೇವಣ್ಣನವರು ಮಾತನಾಡಿರುವುದು ತಪ್ಪು. ಸುಮಲತಾ ಪರ ಬೆಂಬಲ..? : ಆ ಬಗ್ಗೆ ಯೋಚಿಸಿಲ್ಲ. ರಾಜಕೀಯ ಪ್ರವೇಶ ಅವರ ವೈಯಕ್ತಿಕ ನಿರ್ಧಾರ. ಸುಮಲತಾ ಅವರಿಗೆ ಒಳ್ಳೆಯದಾಗಲಿ. 

  ಅಂಬರೀಷ್ ಬಗ್ಗೆ : ಅಂಬರೀಷ್ ನನಗೆ ತಂದೆ ಸಮಾನರು. ಅವರ ಬಗ್ಗೆ ನನಗೆ ಯಾವತ್ತೂ ನನಗೆ ಗೌರವ ಇದ್ದೇ ಇರುತ್ತೆ.

  ಇನ್ನು ಪತ್ನಿ ಗೀತಾ ಅವರು ಜೆಡಿಎಸ್‍ನಿಂದ ಕಣಕ್ಕಿಳಿದಾಗ ಪ್ರಚಾರ ಮಾಡಿದ್ದಕ್ಕೆ ಉತ್ತರಿಸಿರುವ ಶಿವಣ್ಣ,  ನನ್ನ ಹೆಂಡತಿಯನ್ನು ನಾನು ಪ್ರೀತಿಸುತ್ತೇನೆ. ಒಬ್ಬ ಪತಿಯಾಗಿ ನಾನು ನನ್ನ ಪತ್ನಿಯನ್ನು ಬೆಂಬಲಿಸಿದ್ದೇನೆ. ಗಂಡನಾಗಿ ಅಷ್ಟೂ ಕರ್ತವ್ಯ ನಿಭಾಯಿಸದಿದ್ದರೆ ಹೇಗೆ ಎಂದಿದ್ದಾರೆ.

I Love You Movie Gallery

Rightbanner02_butterfly_inside

One Way Movie Gallery