` darshan son vineesh, - chitraloka.com | Kannada Movie News, Reviews | Image

darshan son vineesh,

 • ದರ್ಶನ್ ಮಗ ಸಿನಿಮಾಗೆ ಬರಬೇಕಂದ್ರೆ ಕಸ ಹೊಡೀಬೇಕಂತೆ..!

  ದರ್ಶನ್ ಮಗ ಸಿನಿಮಾಗೆ ಬರಬೇಕಂದ್ರೆ ಕಸ ಹೊಡೀಬೇಕಂತೆ..!

  ಬಹುಶಃ ಈ ಮಾತನ್ನು ಬೇರೆ ಯಾರೋ ಹೇಳಿದ್ದರೆ ವಿವಾದವಾಗುತ್ತಿತ್ತೇನೋ.. ಆದರೆ, ಈ ಮಾತು ಹೇಳಿರೋದು ಸ್ವತಃ ದರ್ಶನ್. ರಾಬರ್ಟ್ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿರೋ ದರ್ಶನ್ಗೆ ಎದುರಾಗಿರೋ ಪ್ರಶ್ನೆ ಇದು. ನಿಮ್ಮ ಪುತ್ರ ವಿನೀಶ್ ಚಿತ್ರರಂಗಕ್ಕೆ ಬರೋದು ಯಾವಾಗ..?

  ನಾನು ಅದಕ್ಕೆಲ್ಲ ಪ್ಲಾನ್ ಮಾಡಿಲ್ಲ. ಅವನಿಗೆ ಚಿತ್ರರಂಗಕ್ಕೆ ಬರಬೇಕು ಅನ್ನೋ ಆಸೆ ಇದ್ದರೆ ಅವನು ಮೊದಲು ಇಲ್ಲಿ ಕಸ ಹೊಡೆಯೋದನ್ನು ಕಲೀಲಿ. ಅವನಿಗೆ ಇಷ್ಟ ಇದ್ದರೆ ಚಿತ್ರರಂಗಕ್ಕೆ ಬರಲಿ. ಆದರೆ, ಬರೋಕೆ ಮುಂಚೆ ಅವನು ಚಿತ್ರರಂಗದ ಎಲ್ಲ ವಿಭಾಗದಲ್ಲೂ ಕೆಲಸ ಮಾಡಿರಬೇಕು ಎಂದಿದ್ದಾರೆ ದರ್ಶನ್.

  ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡಿರೋ ದರ್ಶನ್, ನಾನು ಲೈಟ್ ಬಾಯ್ ಆಗಿ ಬಂದು ಹೀರೋ ಆದವನು. ಆ ಹಾದಿಯಲ್ಲಿ ಏನೆಲ್ಲ ಕಷ್ಟಗಳಿವೆ ಅನ್ನೋದು ನನಗೆ ಗೊತ್ತು. ಅವುಗಳ ಅನುಭವ ಇರಬೇಕು ಎಂದಿದ್ದಾರೆ. 

  ಸದ್ಯಕ್ಕೆ ರಾಬರ್ಟ್ ಬಿಡುಗಡೆ ಬ್ಯುಸಿಯಲ್ಲಿದ್ದಾರೆ ದರ್ಶನ್. ಉಮಾಪತಿ ಜೊತೆ ತರುಣ್ ಸುಧೀರ್ ಡೈರೆಕ್ಟ್ ಮಾಡಿರೋ ಸಿನಿಮಾ ಇದೇ ಮಾರ್ಚ್ 11ರ ಶಿವರಾತ್ರಿಯಂದು ರಿಲೀಸ್ ಆಗ್ತಿದೆ. ಹೀಗಾಗಿ ಹವಾನೂ ಜೋರಾಗೇ ಇದೆ.

 • ದರ್ಶನ್ ಮಗ ಸಿನಿಮಾಗೆ ಬರೋದು ಗ್ಯಾರಂಟಿ

  will bring my son into films says darshan

  `ನನ್ನ ಮಗ ಇಂಡಸ್ಟ್ರಿಗೆ ಬರೋಕೆ ಇನ್ನೂ ಟೈಂ ಇದೆ. ಅವನು ಚಿತ್ರರಂಗಕ್ಕೆ ಬರೋದು ಗ್ಯಾರಂಟಿ. ನನ್ನ ನಂತರವೂ ನನ್ನ ಬ್ರ್ಯಾಂಡ್ ಇರಬೇಕಲ್ಲ. ಹಾಗಾಗಿ ಅವನನ್ನು ಚಿತ್ರರಂಗಕ್ಕೆ ತರುತ್ತೇನೆ' ಯಾವುದೇ ಅನುಮಾನಕ್ಕೆ ಅವಕಾಶವಿಲ್ಲದಂತೆ ಹೇಳಿದ್ದಾರೆ ದರ್ಶನ್.

  ನನ್ನ ಮಗ ಪ್ರತಿದಿನವೂ ಮುಂದಿನ ಸಿನಿಮಾ ಯಾವುದು ಅಂತಾ ಕೇಳ್ತಾ ಇರ್ತಾನೆ ಎನ್ನುವ ದರ್ಶನ್, ಈಗಾಗಲೇ ತಮ್ಮ ಐರಾವತ ಮತ್ತು ಯಜಮಾನ ಚಿತ್ರಗಳಲ್ಲಿ ಪುತ್ರ ವಿನೀಶ್‍ರನ್ನು ಬೆಳ್ಳಿತೆರೆಯಲ್ಲಿ ಕಾಣಿಸಿದ್ದಾರೆ.

  ದರ್ಶನ್ ಕುಟುಂಬವೇ ಕಲಾವಿದರ ಕುಟುಂಬ. ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್, ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದರಲ್ಲಿ ಒಬ್ಬರು. ದರ್ಶನ್ ಚಾಲೆಂಜಿಂಗ್ ಸ್ಟಾರ್ ಆದರೆ, ದರ್ಶನ್ ತಮ್ಮ ದಿನಕರ್ ಸ್ಟಾರ್ ಡೈರೆಕ್ಟರ್. ಈಗ ದರ್ಶನ್ ಕುಟುಂಬದಿಂದ ಇನ್ನೊಂದು ಕುಡಿ ಚಿತ್ರರಂಗಕ್ಕೆ ಬರೋಕೆ ರೆಡಿ. ಯಾವಾಗ ಬರ್ತಾರೆ ಗೊತ್ತಿಲ್ಲ. ವೆಲ್‍ಕಂ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery