ತರ್ಕ, ಉತ್ಕರ್ಷ, ಸಂಘರ್ಷ, ನಿಷ್ಕರ್ಷ, ಮರ್ಮ ಚಿತ್ರಗಳ ಮೂಲಕ ಸುನಿಲ್ ಕುಮಾರ್ ದೇಸಾಯಿ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳಿಗೆ ಹೊಸ ರೂಪವನ್ನೆ ಕೊಟ್ಟವರು. ಈಗ ಉದ್ಘರ್ಷದ ಮೂಲಕ ಮತ್ತೆ ತಮ್ಮ ಥ್ರಿಲ್ಲರ್ ಜಾನರ್‍ಗೆ ವಾಪಸ್ ಆಗಿದ್ದಾರೆ. ಉದ್ಘರ್ಷದ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ದರ್ಶನ್ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.
ಇಡೀ ಚಿತ್ರದಲ್ಲಿ ಹಿನ್ನೆಲೆ ಸಂಗೀತ, ಅನೂಪ್ ಸಿಂಗ್ ಠಾಕೂರ್ ಡೈಲಾಗ್ ಬಿಟ್ಟರೆ ಕೇಳಿಸೋದು ಕಿಚ್ಚನ ಧ್ವನಿ. ಆಲ್‍ಮೋಸ್ಟ್ ಇಂಗ್ಲಿಷ್ ವಾಯ್ಸ್ ಓವರ್ ಇದೆ. ನಿರ್ಮಾಪಕ ದೇವರಾಜ್ 4 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ.