ಆಕೆ ಡೆತ್ ವಾರೆಂಟ್ ಕೊಡಲು ಬಂದಿದ್ದಾರೆ ಎಂದು ಪ್ರಶಾಂತ್ ನೀಲ್ ಹೇಳಿದ್ದರೆ, ಕೆಜಿಎಫ್ ಚಾಪ್ಟರ್ 1ನಲ್ಲಿ ಕಾಣಿಸಿದ್ದ ಮಹಿಳೆಯ ಪುಟ್ಟ ದೃಶ್ಯಗಳನ್ನು ಇಂದಿರಾ ಗಾಂಧಿಗೆ ಹೋಲಿಸಿ ಪುಳಕಗೊಂಡಿದ್ದರು ಪ್ರೇಕ್ಷಕರು. ಆದರೆ, ಈ ಎಲ್ಲ ಕುತೂಹಲಗಳ ಮೇಲೊಂದು ದೀಪ ಹಚ್ಚಿ ಸಸ್ಪೆನ್ಸ್‍ನ್ನು ಇನ್ನಷ್ಟು ದೊಡ್ಡದು ಮಾಡಿದ್ದಾರೆ ರವೀನಾ ಟಂಡನ್.
ನಾನು ಚಿತ್ರದಲ್ಲಿ ಪ್ರಧಾನಮಂತ್ರಿಯ ಪಾತ್ರ ಪೋಷಿಸಿದ್ದೇನೆ. ಅದೊಂದು ಸವಾಲಿನ ಪಾತ್ರ. ಪಾಸಿಟಿವ್ ಮಹಿಳೆಯ ಪಾತ್ರ. ಪ್ರತಿಯೊಬ್ಬರೂ ಇಂದಿರಾ ಗಾಂಧಿ ಇರಬಹುದು ಎಂದು ಭಾವಿಸಿದ್ದಾರೆ. ಅದು ತಪ್ಪು ಪರಿಕಲ್ಪನೆ. ಅದು ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಸಹ ಆಗಿರಬಹುದು ಅಲ್ಲವೇ..
ಇದು ರವೀನಾ ಪ್ರಶ್ನೆ. ಅಫ್‍ಕೋರ್ಸ್.. ಅದು ಬೆನಜಿರ್ ಬುಟ್ಟೋ ಆಗಿದ್ದರೂ ಆಶ್ಚರ್ಯವಿಲ್ಲ. ಆದರೆ, ಭಾರತಕ್ಕೆ ಇದುವರೆಗೆ ಮಹಿಳಾ ಪ್ರಧಾನಿಯಾಗಿರುವ ಏಕೈಕ ವ್ಯಕ್ತಿ ಇಂದಿರಾ ಗಾಂಧಿ.
ಸ್ಸೋ.. ರವೀನಾ ಟಂಡನ್ ಅದೇನೇ ಸಸ್ಪೆನ್ಸ್ ಇಟ್ಟರೂ ರಾಕಿ ಭಾಯ್ ಫ್ಯಾನ್ಸ್ ನಾವ್ ಅಂದ್ಕೊಂಡಿರೋ ಸತ್ಯ ಕಣ್ರೋ ಅಂತಾರೆ. ನೋ ಡೌಟ್.
ಆದರೆ, ಎಲ್ಲ ಕುತೂಹಲ, ಸಸ್ಪೆನ್ಸ್, ನಿರೀಕ್ಷೆಗೂ ಉತ್ತರ ಸಿಕ್ಕೋದು ಅಕ್ಟೋಬರ್ 23ಕ್ಕೆ. ಹೊಂಬಾಳೆ ಪ್ರೊಡಕ್ಷನ್ಸ್‍ನ ಮೆಗಾ ಪ್ರಾಜೆಕ್ಟ್ ಸಿನಿಮಾಗೆ ಅಲ್ಲಿಯವರೆಗೂ ಕಾಯದೇ ವಿಧಿ ಇಲ್ಲ.