` lanke, - chitraloka.com | Kannada Movie News, Reviews | Image

lanke,

 • 35 ವರ್ಷಗಳ ಹಿಂದೆ ನಡೆದಿದ್ದ ಸತ್ಯ ಕಥೆಯೇ ಲಂಕೆ..!

  35 ವರ್ಷಗಳ ಹಿಂದೆ ನಡೆದಿದ್ದ ಸತ್ಯ ಕಥೆಯೇ ಲಂಕೆ..!

  ಲಂಕೆ, ಚಿತ್ರದ ಟೈಟಲ್ ಮತ್ತು ಕಥೆಯ ಸೂಕ್ಷ್ಮತೆಗಳ ಮೂಲಕವೇ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಚಿತ್ರದಲ್ಲಿ ವೇಶ್ಯಾವಾಟಿಕೆಯ ಕಥೆ ಇದೆ. ಚೆಂದದ ಗ್ಲಾಮ್ ಡಾಲ್ ನಾಯಕಿ ಕಾವ್ಯಾ ಶೆಟ್ಟಿಯೇ ರಾವಣ, ನಾಯಕನೇ ಶ್ರೀರಾಮ ಎಂದೆಲ್ಲ ಹೇಳಿ ಕುತೂಹಲ ಹುಟ್ಟಿಸಿರುವ ಚಿತ್ರತಂಡ ಇನ್ನೂ ಒಂದು ಸಸ್ಪೆನ್ಸ್ ಓಪನ್ ಮಾಡಿದೆ. ಇದು 35 ವರ್ಷಗಳ ಹಿಂದಿನ ನೈಜ ಕಥೆ ಆಧರಿತ ಚಿತ್ರವಂತೆ.

  ಚಿತ್ರದ ಈ ಕುತೂಹಲ ಬಿಚ್ಚಿಟ್ಟಿದ್ದು ಚಿತ್ರದ ನಿರ್ದೇಶಕ ರಾಮ್‍ಪ್ರಸಾದ್. ರಾಮ್ ಪ್ರಸಾದ್ ಚಿತ್ರದ ನಿರ್ಮಾಪಕರೂ ಹೌದು. ಲೂಸ್ ಮಾದ ಯೋಗಿ ಜೊತೆ ಚಿತ್ರದಲ್ಲಿ ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಗಾಯತ್ರಿ ಜಯರಾಮ್ (ನೀಲಾ ಖ್ಯಾತಿ), ಎಸ್ಟರ್ ನರೋನಾ ಇದ್ದಾರೆ. ಇಷ್ಟೊಂದು ನಾಯಕಿಯರ ಜೊತೆ ಯೋಗಿಗೇನು ಕೆಲಸ ಎಂದು ಕೇಳಬೇಡಿ. ಉತ್ತರ ಸಿಗೋದು ಚಿತ್ರಮಂದಿರದಲ್ಲಿ.

  ಚಿತ್ರದ ಪ್ರಚಾರವಂತೂ ಶುರುವಾಗಿದೆ. ಚಿತ್ರದ ಆಡಿಯೋ ರಿಲೀಸ್ ಮಾಡಿದ ಡಾಲಿ ಧನಂಜಯ್, ತಮ್ಮ ಹೆಡ್ ಬುಷ್ ಚಿತ್ರದಲ್ಲಿ ಯೋಗಿ ನಟಿಸುತ್ತಿದ್ದಾರೆ. ಗ್ರ್ಯಾಂಡ್ ಆಗಿ ಅದನ್ನು ಹೇಳಲಿದ್ದೇವೆ ಎಂದಿದ್ದಾರೆ. ಚಿತ್ರದ ವಿತರಣೆ ಹೊತ್ತುಕೊಂಡಿರೋ ಮಾರ್ಸ್ ಸುರೇಶ್ ಲಂಕೆ ಚಿತ್ರದಿಂದಲೇ ಚಿತ್ರಮಂದಿರಗಳ ಗತವೈಭವ ಶುರುವಾಗಲಿ ಎಂದು ಹಾರೈಸಿದ್ದಾರೆ.

 • 75ನೇ ದಿನದತ್ತ ಯೋಗಿಯ ಲಂಕೆ

  75ನೇ ದಿನದತ್ತ ಯೋಗಿಯ ಲಂಕೆ

  ಲಂಕೆ. ಸೆಪ್ಟೆಂಬರ್ 10ರಂದು ರಿಲೀಸ್ ಆಗಿದ್ದ ಸಿನಿಮಾ. ಶೇ.50ರಷ್ಟು ಪ್ರೇಕ್ಷಕರ ಮಿತಿಯಿದ್ದಾಗ ಧೈರ್ಯ ಮಾಡಿ ತೆರೆಗೆ ಬಂದ ಸಿನಿಮಾ, ಗೆದ್ದು ಬೀಗುತ್ತಿದೆ. ಲಂಕೆ ಚಿತ್ರ 75ನೇ ದಿನದ ಯಶಸ್ವಿ ಪ್ರದರ್ಶನದತ್ತ ಸಾಗುತ್ತಿದೆ. ಈ ಮೂಲಕ ಯೋಗಿಗೂ ಬಹುದಿನಗಳ ನಂತರ ಒಂದು ಹಿಟ್ ಚಿತ್ರ ಸಿಕ್ಕಿದೆ.

  ರಾಮ್ ಪ್ರಸಾದ್ ನಿರ್ದೇಶನದ ಲಂಕೆ ಚಿತ್ರದಲ್ಲಿ ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನ್ಹಾ, ಗಾಯತ್ರಿ ಜಯರಾಂ, ಸಂಚಾರಿ ವಿಜಯ್, ಸುಚೇಂದ್ರ ಪ್ರಸಾದ್, ವಾಣಿಶ್ರೀ.. ಮೊದಲಾದವರು ನಟಿಸಿದ್ದರು. ಪಟೇಲ್ ಶ್ರೀನಿವಾಸ್, ಸುರೇಖಾ ರಾಮ್‍ಪ್ರಸಾದ್ ನಿರ್ಮಾಣದ ಸಿನಿಮಾ ಈಗ ಸಕ್ಸಸ್ ಖುಷಿಯಲ್ಲಿದೆ.

 • Lanke Movie Review - Chitraloka Rating 3.5/5

  Lanke Movie Review - Chitraloka Rating 3.5/5

  Yogi is one actor who is always known for commercial films. His latest film, 'Lanke' which is released on the occasion of Ganesh festival, also joins the bandwagon. 'Lanke' is an out and out commercial film intended mainly for his plans.

  Yogi plays the role of Ram, who returns from jail after completing a sentence. He happens to meet Pavani (Krishi Tapanda) who runs a elderly home. Pavani is abducted by Mandara (Kavya Shetty) a social worker, who runs a brothel. What all Ram does to free Pavani from the clutches of Mandara forms the crux of the film.

  ;Though this kind of films are not new, Lanke has all the ingredients to attract the masses and has a lot of fights, songs, comedy and glamour elements in it.The film has an overdose of action, songs and glamour, particularly in the second half of the film. The film manages to engage the audience with commercial elements, though there is no freshness in it. That's what makes the film watchable.

  'Lanke' is a multi starrer film with many actors playing prominent roles in it. There are three heroines in the film, with Kavya Shetty's character being the highlight. Kavya has two shades and she has done her bit. Yogi carries the role of Ram easily as he has done such kind of action films earlier. Sharath Lohitashwa who is seen in the role of a transgender manages to woo the audience with his performance. Krishi Tapanda has nothing much to do. Late Sanchari Vijay shines in a tiny role. 

  Ram Prasad makes a promising directorial debut with 'Lanke'. Karthik Sharma's music and Ramesh Babu's cinematography is an average.

 • Yogi's New Film Is 'Lanke'

  yogi's new film is lanke

  Yogi's 'Lambodara' which was released last month went unnoticed at the box-office. Now the actor has signed yet another new film 'Lanke'. The film was launched recently and the shooting for the film has started.

  'Lanke' is about the telling of Ramayana in a modern way. Ramprasad who had earlier directed 'Banna Bannada Loka' has written the script apart from directing the film.The film is being produced by Srinivas and Ramprasad jointly.

  'Lanke' stars Yogi along with Kavya Shetty and Krishi Tapanda. The film also stars Sharath Lohitashwa, Suchedra Prasad, Shobharaj amongs others. Ramesh Babu is the cinematographer, while Karthik Sharma is the music director. The film will be shot in Bangalore, Sringeri and other places.

 • ಗಣೇಶ ಹಬ್ಬಕ್ಕೆ ಲಂಕೆ ದರ್ಶನ ಫಿಕ್ಸ್

  ಗಣೇಶ ಹಬ್ಬಕ್ಕೆ ಲಂಕೆ ದರ್ಶನ ಫಿಕ್ಸ್

  ಗೌರಿ ಗಣೇಶ ಹಬ್ಬಕ್ಕೆ ಸ್ಟಾರ್ ಸಿನಿಮಾಗಳೇ ಇಲ್ಲ ಎಂದು ಬೇಸರಗೊಂಡಿದ್ದವರಿಗೆ ಲೂಸ್ ಮಾದ ಯೋಗಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸೆಪ್ಟೆಂಬರ್ 10ಕ್ಕೆ ಲಂಕೆ ಸಿನಿಮಾ ರಿಲೀಸ್ ಆಗುತ್ತಿದೆ. 200ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಲಂಕೆ ಬಿಡುಗಡೆಯಾಗುತ್ತಿದೆ.

  ಕನ್ನಡಿಗರು ಒಳ್ಳೆಯ ಸಿನಿಮಾವನ್ನ ಯಾವತ್ತೂ ಕೈಬಿಡಲ್ಲ ಅನ್ನೋ ನಂಬಿಕೆ ಇದೆ. ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದು ಈ ಸಿನಿಮಾ ಮೂಲಕ ಹಎಳಿದ್ದೇವೆ. ಶಿಕ್ಷಣದ ಮಹತ್ವವನ್ನೂ ಸಾರುವ ಥೀಮ್ ಚಿತ್ರದಲ್ಲಿದೆ ಎನ್ನುತ್ತಾರೆ ಡೈರೆಕ್ಟರ್ ರಾಮ್ ಪ್ರಸಾದ್.

  ಲೂಸ್ ಮಾದ ಯೋಗಿ ಎದುರು ಎಸ್ತರ್ ನೊರೊನ್ಹಾ, ಕಾವ್ಯಾ ಶೆಟ್ಟಿ, ಕೃಷಿ ತಾಪಂಡ ನಟಿಸಿದ್ದಾರೆ. ಸಂಚಾರಿ ವಿಜಯ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪಟೇಲ್ ಶ್ರೀನಿವಾಸ್ ನಿರ್ಮಾಣದ ಲಂಕೆ ಸೆಪ್ಟೆಂಬರ್‍ನಲ್ಲಿ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ. 2ನೇ ಲಾಕ್‍ಡೌನ್ ನಂತರ ರಿಲೀಸ್ ಆಗುತ್ತಿರುವ ಮೊದಲ ಸ್ಟಾರ್ ಸಿನಿಮಾ ಕೂಡಾ.

 • ಗೆದ್ದ ಲಂಕೆ : ಪ್ರೇಕ್ಷಕರಿಗೆ ಥ್ಯಾಂಕ್ಸ್ ಎಂದ ಲಂಕೆ ಟೀಂ

  ಗೆದ್ದ ಲಂಕೆ : ಪ್ರೇಕ್ಷಕರಿಗೆ ಥ್ಯಾಂಕ್ಸ್ ಎಂದ ಲಂಕೆ ಟೀಂ

  ನಮ್ಮ ಸಿನಿಮಾ ಗೆದ್ದಿದೆ. ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಮೊದಲ ವಾರ 100 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡಿದ್ದೆವು. ಅವುಗಳಲ್ಲಿ ಒಂದೂ ಕಡಿಮೆಯಾಗಿಲ್ಲ. ವಿತರಕರಿಂದಲೂ ಒಳ್ಳೆಯ ಕಲೆಕ್ಷನ್ ಎಂಬ ಮಾತು ಬಂದಿದೆ. ಪ್ರೇಕ್ಷಕರಿಂದ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಸ್ಸೋ.. ನಿರ್ದೇಶಕನಾಗಿ ನಾನು ಹ್ಯಾಪಿ ಎಂದಿದ್ದಾರೆ ನಿರ್ದೇಶಕ ರಾಮ್ ಪ್ರಸಾದ್.

  ರಾಮ್ ಪ್ರಸಾದ್ ಚಿತ್ರದ ನಿರ್ದೇಶಕರಷ್ಟೇ ಅಲ್ಲ, ನಿರ್ಮಾಪಕರೂ ಹೌದು. ಪಟೇಲ್ ಶ್ರೀನಿವಾಸ್ ಅವರ ಜೊತೆ ರಾಮ್‍ಪ್ರಸಾದ್ ಪತ್ನಿ ಸುರೇಖಾ ರಾಮ್ ಪ್ರಸಾದ್  ಕೂಡಾ ಚಿತ್ರದ ನಿರ್ಮಾಪಕಿ.

  ಚಿತ್ರದ ಪ್ರಚಾರದಲ್ಲಿ 100% ತೊಡಗಿಸಿಕೊಂಡಿದ್ದ ನಟ ಯೋಗೀಶ್ `ರಿಲೀಸ್ ಆದ ನಂತರ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟಾಗ ಪ್ರೇಕ್ಷಕರು ಹೊಗಳಿದ್ದು ನೋಡಿ ಖುಷಿಯಾಯ್ತು. ಅಭಿಮಾನಿಗಳು ಮತ್ತು ಪ್ರೇಕ್ಷಕರ ಆ ಪ್ರೀತಿಗೆ ನಾನು ಸದಾ ಋಣಿ' ಎಂದಿದ್ದಾರೆ ಯೋ

 • ಫಸ್ಟ್ ಸಿನಿಮಾ ರಿಲೀಸ್ ಫೀಲ್`ನಲ್ಲಿದ್ದೇನೆ : ಕೃಷಿ ತಾಪಂಡ

  ಫಸ್ಟ್ ಸಿನಿಮಾ ರಿಲೀಸ್ ಫೀಲ್`ನಲ್ಲಿದ್ದೇನೆ : ಕೃಷಿ ತಾಪಂಡ

  ಇದೇ ಗಣೇಶ ಹಬ್ಬಕ್ಕೆ ರಿಲೀಸ್ ಆಗುತ್ತಿರುವ ಲಂಕೆ ಚಿತ್ರದ ಹೀರೋಯಿನ್ ಕೃಷಿ ತಾಪಂಡ. ಯೋಗಿ ಹೀರೋ ಆಗಿರುವ ಚಿತ್ರದಲ್ಲಿ ನಾಲ್ವರು ನಾಯಕಿಯರಿದ್ದರೂ, ಲೀಡ್ ರೋಲ್ ಕೃಷಿ ತಾಪಂಡ ಅವರದ್ದೇ ಅಂತೆ. ಹೆಚ್ಚೂ ಕಡಿಮೆ ಒಂದು ವರ್ಷ ಲೇಟ್ ಆಗಿ ರಿಲೀಸ್ ಅಗುತ್ತಿರೋ ಲಂಕೆ, 2020ರಲ್ಲೇ ಥಿಯೇಟರಿಗೇ ಬರಬೇಕಿತ್ತು. ಈಗಲೂ ಅಷ್ಟೆ, ಕೊರೊನಾ ಭೀತಿಯ ನಡುವೆ ರಿಲೀಸ್ ಆಗುತ್ತಿರೋ ಮೊದಲ ಸ್ಟಾರ್ ಸಿನಿಮಾ ಲಂಕೆ.

  2018ರಲ್ಲಿ ಕನ್ನಡಕ್ಕಾಗಿ ಒಂದನ್ನು ಒತ್ತಿ ರಿಲೀಸ್ ಆಗಿದ್ದೇ ಕೊನೆ. 2019ರಲ್ಲಿ ಒಟ್ಟು 4 ಸಿನಿಮಾಗಳಲ್ಲಿ ನಟಿಸಿದೆ. ಎಲ್ಲವೂ ರೆಡಿ. 2020ಕ್ಕೆ ರಿಲೀಸ್ ಆಗಬೇಕಿದ್ದ ಆ ಯಾವ ಚಿತ್ರಗಳೂ ರಿಲೀಸ್ ಆಗಲಿಲ್ಲ. ಈಗ ಲಂಕೆ ರಿಲೀಸ್ ಆಗುತ್ತಿದೆ. ನಾನು ನನ್ನ ಮೊದಲ ಚಿತ್ರ ರಿಲೀಸ್ ಆಗುತ್ತಿದೆ ಎಂಬ ಟೆನ್ಷನ್‍ನಲ್ಲಿದ್ದೇನೆ ಎನ್ನುತ್ತಿದ್ದಾರೆ ಕೃಷಿ ತಾಪಂಡ.

  ಚಿತ್ರದಲ್ಲಿ ನನ್ನ ಪಾತ್ರಕ್ಕೆ ಹಲವಾರು ಶೇಡ್‍ಗಳಿಗೆ. ಬಬ್ಲಿ ಹುಡುಗಿ, ಅಳು, ನಗು, ಪ್ರೀತಿ, ಭಾವನೆ, ಫೈಟಿಂಗ್ ಸೀಕ್ವೆನ್ಸ್ ಎಲ್ಲವೂ ಇದೆ. ಇದೊಂದು ಮಾಸ್ ಸಿನಿಮಾ. ಎಲ್ಲ ಕಮರ್ಷಿಯಲ್ ಎಲಿಮೆಂಟ್ಸ್‍ಗಳೂ ಇವೆ ಎನ್ನುವ ಕೃಷಿ ತಾಪಂಡ, ಲಂಕೆ ದೊಡ್ಡ ಬ್ರೇಕ್ ನೀಡಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

 • ಯೋಗಿಯೇ ರಾಮ.. ಕಾವ್ಯಾ ಶೆಟ್ಟಿಯೇ ರಾವಣ..!

  ಯೋಗಿಯೇ ರಾಮ.. ಕಾವ್ಯಾ ಶೆಟ್ಟಿಯೇ ರಾವಣ..!

  ಲಂಕೆ ಚಿತ್ರ ಅಧಿಕೃತವಾಗಿ ರಿಲೀಸ್ ಡೇಟ್ ಘೋಷಿಸಿಕೊಂಡು ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದೆ. ಗೌರಿ ಗಣೇಶ ಹಬ್ಬಕ್ಕೆ ರಿಲೀಸ್ ಆಗುತ್ತಿರುವ ಏಕೈಕ ಸ್ಟಾರ್ ಸಿನಿಮಾ ಲಂಕೆ. ವಿಶೇಷವೆಂದರೆ ಈ ಚಿತ್ರದಲ್ಲಿ ವಿಲನ್ ಆಗಿರುವುದು ಸಪೂರ ಸುಂದರಿ ಕಾವ್ಯಾ ಶೆಟ್ಟಿ.

  ನೆಗೆಟಿವ್ ಶೇಡ್ ಇರೋ ಪಾತ್ರದಲ್ಲಿ ನಟಿಸಿರೋದು ನನಗೂ ಇದು ಮೊದಲ ಅನುಭವ. ಚಿತ್ರದಲ್ಲಿ ಬೇರೆ ಬೇರೆ ಪಾತ್ರಗಳಿದ್ದರೂ, ನಿರ್ದೇಶಕರು ನನಗೇ ಈ ಪಾತ್ರ ಕೊಟ್ಟರು. ಯೋಗಿ ಮತ್ತು ಕೃಷಿ ತಾಪಂಡ ಜೊತೆ ಒಂದು ಫೈಟ್ ಕೂಡಾ ಇದೆ. ಸಿಂಪಲ್ ಆಗಿ ಹೇಳ್ಬೇಕಂದ್ರೆ ಈ ಚಿತ್ರದಲ್ಲಿ ನನ್ನದು ರಾವಣನ ರೋಲ್. ಯೋಗಿ ರಾಮ ಎಂದಿದ್ದಾರೆ ಕಾವ್ಯಾ ಶೆಟ್ಟಿ.

  ರಾಮ್ ಪ್ರಸಾದ್ ನಿರ್ದೇಶನದ ಚಿತ್ರದಲ್ಲಿ ಒಟ್ಟು ನಾಲ್ವರು ನಾಯಕಿಯರಿದ್ದಾರೆ. ಸಂಚಾರಿ ವಿಜಯ್ ಕೂಡಾ ನಟಿಸಿದ್ದಾರೆ. ಈಗಾಗಲೇ ಲಂಕೆಯಲ್ಲಿ ನಟಿಸಿರುವಂತಹ ಪಾತ್ರದ ಮಾದರಿಗಳೇ ಹುಡುಕಿ ಬರುತ್ತಿವೆ. ಆದರೆ, ಲಂಕೆಗೆ ಜನರ ರೆಸ್ಪಾನ್ಸ್ ಹೇಗಿರುತ್ತೆ ನೋಡಿಕೊಂಡು ಅವುಗಳನ್ನು ಓಕೆ ಮಾಡುತ್ತೇನೆ ಎಂದಿದ್ದಾರೆ ಕಾವ್ಯಾ ಶೆಟ್ಟಿ. 

   

 • ಲಂಕೆ : ಥಿಯೇಟರ್`ಗಳಲ್ಲಿ ಯೋಗಿ ಟೀಂ ಪ್ರಚಾರ

  ಲಂಕೆ : ಥಿಯೇಟರ್`ಗಳಲ್ಲಿ ಯೋಗಿ ಟೀಂ ಪ್ರಚಾರ

  ಗಣೇಶ ಹಬ್ಬಕ್ಕೆ ರಿಲೀಸ್ ಆದ ಲಂಕೆ ಸಿನಿಮಾಗೆ ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೋವಿಡ್ ನಿಯಮ, ವೀಕೆಂಡ್ ಕಫ್ರ್ಯೂ ಹಾಗೂ ನೈಟ್ ಕಫ್ರ್ಯೂ ಹಿನ್ನೆಲೆಯಲ್ಲಿ ಚಿತ್ರಕ್ಕೆ ದೊಡ್ಡ ಮಟ್ಟದ ಓಪನಿಂಗ್ ಸಿಗಲಿಕ್ಕಿಲ್ಲ ಎಂಬ ಆತಂಕದಲ್ಲಿದ್ದ ಚಿತ್ರತಂಡದ ಆತಂಕವನ್ನು ಪ್ರೇಕ್ಷಕರು ದೂರ ಮಾಡಿದ್ದಾರೆ. ಅದ್ಭುತ ಎನ್ನುವಂತ ಓಪನಿಂಗ್ ಸಿಗದೇ ಹೊದರೂ, ಪ್ರೇಕ್ಷಕರು ವ್ಹಾವ್ ಎನ್ನುವಂತಾ ಓಪನಿಂಗ್‍ನ್ನೇ ಕೊಟ್ಟಿದ್ದಾರೆ.

  ರಾಮ್ ಪ್ರಸಾದ್ ನಿರ್ದೇಶನದ ಚಿತ್ರಕ್ಕೆ ಸಿಕ್ಕಿರುವ ಈ ಪ್ರತಿಕ್ರಿಯೆಗೆ ಖುಷಿಯಾಗಿರುವ ಚಿತ್ರತಂಡ ಈಗ ರಾಜ್ಯದ ಪ್ರಮುಖ ಥಿಯೇಟರುಗಳಿಗೆ ಭೇಟಿ ನೀಡಿ ಪ್ರೇಕ್ಷಕರನ್ನು ಭೇಟಿ ಮಾಡುತ್ತಿದೆ. ಮೊದಲ ಹಂತವಾಗಿ ಬೆಂಗಳೂರು ಹಾಗೂ ಮೈಸೂರಿನ ಥಿಯೇಟರುಗಳಿಗೆ ಭೇಟಿ ಕೊಟ್ಟಿದ್ದಾರೆ ಯೋಗಿ ಮತ್ತು ಕೃಷಿ ತಾಪಂಡ.

 • ಲಂಕೆ ಚಿತ್ರಕ್ಕೂ, ರಾಮಾಯಣಕ್ಕೂ ಏನು ಸಂಬಂಧ?

  ಲಂಕೆ ಚಿತ್ರಕ್ಕೂ, ರಾಮಾಯಣಕ್ಕೂ ಏನು ಸಂಬಂಧ?

  ಇದೇ ವಾರ ರಿಲೀಸ್ ಆಗುತ್ತಿರುವ ಸಿನಿಮಾ ಲಂಕೆ. ಹೆಸರು ಲಂಕೆ ಎಂದಿರುವ ಕಾರಣಕ್ಕೇ ಹುಟ್ಟಿರುವ ಪ್ರಶ್ನೆ ರಾಮಾಯಣದ ಸಂಬಂಧದ್ದು. ಲಂಕೆಯಿಲ್ಲದೆ ರಾವಣನಿಲ್ಲ. ರಾವಣನಿಲ್ಲದೆ ರಾಮಾಯಣವೂ ಇಲ್ಲ. ಹಾಗಾದರೆ ಈ ಚಿತ್ರಕ್ಕೂ ರಾಮಾಯಣಕ್ಕೂ ಏನಾದರೂ ಸಂಬಂಧ ಇದೆಯೇ?

  ಖಂಡಿತಾ ಇದೆ. ರಾಮಾಯಣದಲ್ಲಿ ಬರುವ ಸೀತೆಯ ಅಪಹರಣ, ರಾಮನ ಹುಡುಕಾಟ, ರಾವಣನ ಆರ್ಭಟ, ಆಂಜನೇಯ ಮಾಡುವ ಲಂಕಾದಹನ.. ಇವೆಲ್ಲವೂ ಈ ಚಿತ್ರದಲ್ಲೂ ಇವೆ. ಆದರೆ, ರೂಪಕಗಳಾಗಿ. ಹೀಗಾಗಿಯೇ ಚಿತ್ರಕ್ಕೆ ಲಂಕೆ ಎಂದು ಹೆಸರಿಟ್ಟಿದ್ದೇವೆ ಎನ್ನುತ್ತಾರೆ ನಿರ್ದೇಶಕ ರಾಮ್ ಪ್ರಸಾದ್. ಚಿತ್ರದಲ್ಲಿ ವೇಶ್ಯಾವಾಟಿಕೆ, ಮಕ್ಕಳ ಅಪಹರಣದ ಕಥೆ ಇದೆ. ಕತ್ತಲ ಲೋಕದ ಕಥೆಯನ್ನು ಮನರಂಜನೆಯ ಶೈಲಿಯಲ್ಲಿ ರಾಮಾಯಣದ ಬ್ಯಾಕ್ ಡ್ರಾಪ್‍ನಲ್ಲಿ ಹೇಳುವ ಪ್ರಯತ್ನ ನಿರ್ದೇಶಕರದ್ದು.

  ಯೋಗಿ, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಸಂಚಾರಿ ವಿಜಯ್ ನಟಿಸಿರುವ ಚಿತ್ರದಲ್ಲಿ ಒಂದೊಂದು ಪಾತ್ರವೂ ಬೆರಗು ಹುಟ್ಟಿಸುತ್ತೆ. ಪ್ರೇಕ್ಷಕರಿಗೆ ಮನರಂಜನೆಯ ಜೊತೆ ಒಂದೊಳ್ಳೆ ಸಂದೇಶವೂ ಇದೆಯಂತೆ. 

 • ಲಂಕೆ ಶತದಿನೋತ್ಸವ

  ಲಂಕೆ ಶತದಿನೋತ್ಸವ

  sಸೆಪ್ಟೆಂಬರ್ 10ರಂದು ರಿಲೀಸ್ ಆಗಿದ್ದ ಲೂಸ್ ಮಾದ ಯೋಗಿ ನಟನೆಯ ಸಿನಿಮಾ ಲಂಕೆ. ಎಂ.ಡಿ.ರಾಮ್ ಪ್ರಸಾದ್ ನಿರ್ದೇಶನದ ಚಿತ್ರ ಅಪರೂಪದ ಕಥೆಗೆ ಕೈ ಹಾಕಿ ಗೆದ್ದಿತ್ತು. ಯೋಗಿ, ಸಂಚಾರಿ ವಿಜಯ್, ಕಾವ್ಯಾ ಶೆಟ್ಟಿ, ಕೃಷಿ ತಾಪಂಡ, ಈಸ್ತರ್ ನರೋನ್ಹಾ, ಶರತ್ ಲೋಹಿತಾಶ್ವ ಮೊದಲಾದವರ ನಟಿಸಿದ್ದ ಲಂಕೆ ಈಗ 100 ದಿನ ಪೂರೈಸಿದೆ.

  ಪಟೇಲ್ ಶ್ರೀನಿವಾಸ್, ಸುರೇಖಾ ರಾಮ್‍ಪ್ರಸಾದ್ ನಿರ್ಮಾಣದ ಸಿನಿಮಾ ಇದು. ಸಿನಿಮಾ ರಿಲೀಸ್ ಆದಾಗ ಚಿತ್ರಮಂದಿರಗಳಿಗೆ ಶೇ.50 ಪ್ರೇಕ್ಷಕರಿಗೆ ಮಾತ್ರ ಅವಕಾಶವಿತ್ತು. ಇದರ ನಡುವೆಯೇ ಧೈರ್ಯವಾಗಿ ಸಿನಿಮಾ ರಿಲೀಸ್ ಮಾಡಿತ್ತು ಚಿತ್ರತಂಡ. ಚಿತ್ರವೀಗ ಸಂಯೋಜಿತ 100 ದಿನ ಪೂರೈಸಿದೆ. ಈ ಸಂಭ್ರಮವನ್ನು ಜನವರಿಯಲ್ಲಿ ಸೆಲಬ್ರೇಟ್ ಮಾಡಲು ಚಿತ್ರತಂಡ ಯೋಜಿಸಿದೆ.

 • ಲಂಕೆಗೆ 25. ತೆಲುಗಿನಲ್ಲಿ ಡಿಮ್ಯಾಂಡ್

  ಲಂಕೆಗೆ 25. ತೆಲುಗಿನಲ್ಲಿ ಡಿಮ್ಯಾಂಡ್

  ಥಿಯೇಟರ್‍ಗಳಿಗೆ 50% ಅವಕಾಶವಿದ್ದಾಗಲೇ ರಿಲೀಸ್ ಆದ ಚಿತ್ರ ಲಂಕೆ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿದೆ. ಯೋಗಿ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನ್ನಾ, ಗಾಯತ್ರಿ ಜಯರಾಂ, ಕೃಷಿ ತಾಪಂಡ.. ಮೊದಲಾದವರು ನಟಿಸಿದ್ದ ಚಿತ್ರ ಲಂಕೆ. ವಿಭಿನ್ನ ಕಥಾಹಂದರದ ಚಿತ್ರಕ್ಕೆ ಒಳ್ಳೆಯ ಓಪನಿಂಗ್ ಸಿಕ್ಕಿದ್ದು, ಚಿತ್ರಕ್ಕೀಗ ತೆಲುಗಿನಲ್ಲೂ ಡಿಮ್ಯಾಂಡ್ ಬಂದಿದೆ.

  ಲಂಕೆ ಚಿತ್ರ ತೆಲುಗಿಗೆ ರೀಮೇಕ್ ಆಗುತ್ತಿದೆ. ದೊಡ್ಡ ನಿರ್ಮಾಣ ಸಂಸ್ಥೆಯೊಂದ ರೀಮೇಕ್ ಹಕ್ಕುಗಳನ್ನು ಖರೀದಿಸಿದೆ. ಅಗ್ರಿಮೆಂಟ್ ಫೈನಲ್ ಆದ ಮೇಲೆ ಡೀಟೈಲ್ಸ್ ಕೊಡುತ್ತೇವೆ. ಸ್ಟಾರ್ ನಟರೊಬ್ಬರು ತೆಲುಗಿನಲ್ಲಿ ನಟಿಸಲಿದ್ದು, ಎಸ್ಟರ್ ನರೋನ್ನಾ ಮತ್ತು ಕಾವ್ಯಾ ಶೆಟ್ಟಿ ಅಲ್ಲಿಯೂ ನಟಿಸುತ್ತಾರೆ ಎಂದಿದ್ದಾರೆ ನಿರ್ದೇಶಕ ರಾಮ್‍ಪ್ರಸಾದ್. ನಿರ್ದೇಶಕರು ಹೀಗೆ ಹೇಳಿದ ಬೆನ್ನಲ್ಲೇ ಮತ್ತೆ ಅದೇ ಪಾತ್ರವನ್ನು ನಾನು ತೆಲುಗಿನಲ್ಲಿ ಮಾಡಲಾರೆ ಎಂದಿದ್ದಾರೆ ಕಾವ್ಯಾ ಶೆಟ್ಟಿ.

  ನಿರ್ಮಾಪಕರಾದ ನಂಜುಂಡ ಮೂರ್ತಿ, ಸುರೇಖಾ ರಾಮ್‍ಪ್ರಸಾದ್ ಕೂಡಾ ಸುದ್ದಿಗೋಷ್ಠಿಯಲ್ಲಿದ್ದು ಚಿತ್ರದ 25 ದಿನದ ಸಂಭ್ರಮ ಹಂಚಿಕೊಂಡಿದ್ದು ವಿಶೇಷ.

 • ಲಂಕೆಗೆ ಯೋಗಿಯೇ ರಾಮ.. ನಾಯಕಿಯೇ ರಾವಣ..!

  ಲಂಕೆಗೆ ಯೋಗಿಯೇ ರಾಮ.. ನಾಯಕಿಯೇ ರಾವಣ..!

  ಈ ಚಿತ್ರದಲ್ಲಿ ನನಗೆ ಮೊದಲು ಸಿಕ್ಕಿದ್ದ ಪಾತ್ರವೇ ಬೇರೆ. ಆಮೇಲೆ ಸಿಕ್ಕ ಪಾತ್ರವೇ ಬೇರೆ. ಕಂಪ್ಲೀಟ್ ನೆಗೆಟಿವ್ ಶೇಡ್. ವಿಲನ್ ಅವತಾರ. ರಾಮಾಯಣಕ್ಕೆ ಹೋಲಿಕೆ ಮಾಡಿ ನೋಡಿದರೆ.. ಈ ಚಿತ್ರದಲ್ಲಿ ನಾನೇ ರಾವಣ.

  ಹೀಗೆ ಹೇಳುತ್ತಲೇ ಥ್ರಿಲ್ ಆಗ್ತಾರೆ ಕಾವ್ಯಾ ಶೆಟ್ಟಿ. ಯೋಗಿ ಹೀರೋ ಆಗಿರುವ ಚಿತ್ರದಲ್ಲಿ ಕಾವ್ಯಾ ಶೆಟ್ಟಿ ಅವರದ್ದು ಮೇಯ್ನ್ ರೋಲ್. ರಾಮನ ಗೆಟಪ್‍ನಲ್ಲಿ ಕಾಣಿಸಿರೋದು ಲೂಸ್ ಮಾದ ಖ್ಯಾತಿಯ ಯೋಗಿ. ಹೀರೋಯಿನ್ ರಾವಣನ ಶೇಡ್ ಆದರೆ ಹೇಗೆ.. ಅನ್ನೋ ಸಸ್ಪೆನ್ಸ್‍ಗೆ ಉತ್ತರ ಸಿನಿಮಾದಲ್ಲಿಯೇ ಸಿಗಬೇಕು.

  ಯೋಗಿ, ಕಾವ್ಯಾ ಶೆಟ್ಟಿ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ದಿ.ಸಂಚಾರಿ ವಿಜಯ್ ಕೂಡಾ ನಟಿಸಿದ್ದಾರೆ. ಕೃಷಿ ತಾಪಂಡ ಇನ್ನೊಂದು ಲೀಡ್ ರೋಲ್‍ನಲ್ಲಿದ್ದಾರೆ. ರಾಮ್ ಪ್ರಸಾದ್ ನಿರ್ದೇಶನದ ಚಿತ್ರಕ್ಕೆ ಪಟೇಲ್ ಶ್ರೀನಿವಾಸ್ ಮತ್ತು ಸುರೇಖಾ ರಾಮ್ ಪ್ರಸಾದ್ ನಿರ್ಮಾಪಕರು.

 • ಲಂಕೆಯ ಮ್ಯೂಸಿಕ್ ಸ್ಟೋರಿಯೇ ಡಿಫರೆಂಟ್

  ಲಂಕೆಯ ಮ್ಯೂಸಿಕ್ ಸ್ಟೋರಿಯೇ ಡಿಫರೆಂಟ್

  ಲಂಕೆ, ಇದೇ ವಾರ ರಿಲೀಸ್ ಆಗುತ್ತಿರುವ ಮಾಸ್ ಸಿನಿಮಾ. ಕ್ಲಾಸ್ ಸಬ್ಜೆಕ್ಟ್‍ನ್ನು ಮಾಸ್ ಸ್ಟೈಲಲ್ಲಿ ಹೇಳ್ತಿದ್ದಾರೆ ಡೈರೆಕ್ಟರ್ ರಾಮ್ ಪ್ರಸಾದ್. ಯೋಗಿ, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಸಂಚಾರಿ ವಿಜಯ್ ಮೊದಲಾದವರು ನಟಿಸಿರೋ ಚಿತ್ರದ ಹಾಡುಗಳು ಬೇರೆಯದೇ ಫೀಲ್ ಕೊಟ್ಟಿವೆ. ಈ ಸಂಗೀತದ ಹಿಂದಿರೋದು ಕಾರ್ತಿಕ್ ಶರ್ಮಾ.

  ಪುಟ್ಟಗೌರಿ ಮದುವೆ ಸೀರಿಯಲ್ ಖ್ಯಾತಿಯ ಕಾರ್ತಿಕ್ ಶರ್ಮಾಗೆ, ಮಾಸ್ ಸಿನಿಮಾ ಮ್ಯೂಸಿಕ್ ಈ ಚಿತ್ರವೇ ಮೊದಲು. ಟೋಟಲ್ ಆಗಿ 4ನೇ ಸಿನಿಮಾ.

  ಸಿನಿಮಾದ ಬ್ರೀಫಿಂಗ್ ಕೊಡುವಾಗಲೇ ಚಿತ್ರದ ಮ್ಯೂಸಿಕ್ ಮಾಸ್ ಆಗಿರಲಿ ಎಂದಿದ್ದರು. ಎಕ್ಸ್‍ಪೆರಿಮೆಂಟ್ ಚಿತ್ರಗಳಿಗೆ ಮ್ಯೂಸಿಕ್ ಕೊಟ್ಟಿದ್ದ ನನಗೆ ಇದು ಹೊಸದು. ಪ್ರತಿಯೊಂದರಲ್ಲೂ ಮಾಸ್ ಫೀಲ್ ಕೊಡೋದು ಎಕ್ಸ್‍ಪೆರಿಮೆಂಟ್ ಚಿತ್ರಗಳ ಮ್ಯೂಸಿಕ್ಕಿಗಿಂತಾ ಕಷ್ಟ ಅನ್ನೋದು ಕಾರ್ತಿಕ್ ಶರ್ಮಾ ಮಾತು.

  ಚಿತ್ರದ ಹಾಡಿನಲ್ಲಿ ಗುನುಗುವ ಮ್ಯಾಜಿಕ್, ಎದೆತಟ್ಟುವ ಲಾಜಿಕ್ಕು.. ಎಲ್ಲವೂ ಇದೆ. ಪಟೇಲ್ ಶ್ರೀನಿವಾಸ್ ಮತ್ತು ಸುರೇಖಾ ರಾಮ್ ಪ್ರಸಾದ್ ನಿರ್ಮಾಣದ ಚಿತ್ರ ಇದೇ ಗಣೇಶ ಹಬ್ಬಕ್ಕೆ ಥಿಯೇಟರಿಗೆ ಬರುತ್ತಿದೆ.

 • ಲಂಕೆಯಲ್ಲಿ ಯೋಗಿ ರಾವಣನೋ..? ರಾಮನೋ..?

  ಲಂಕೆಯಲ್ಲಿ ಯೋಗಿ ರಾವಣನೋ..? ರಾಮನೋ..?

  ಲಂಕೆ, ಈ ಹೆಸರು ಕೇಳಿದಾಕ್ಷಣ ಭಾರತೀಯರ ಕಣ್ಣ ಮುಂದೆ ಬರೋ ಹೆಸರು ರಾಮಾಯಣ. ಸೀತೆಯನ್ನು ಅಪಹರಿಸಿದ್ದ ರಾವಣ, ಆಕೆಯನ್ನು ಹೊತ್ತುಕೊಂಡು ಹೋದ ಸಾಮ್ರಾಜ್ಯವೇ ಲಂಕೆ. ಆ ಲಂಕೆಯನ್ನೇ ಟೈಟಲ್ ಆಗಿಟ್ಟುಕೊಂಡಿರುವ ಸಿನಿಮಾ ಇದೇ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಹಾಗಾದರೆ, ಚಿತ್ರದ ಕಥೆ ಏನು? ಯೋಗಿಯ ಪಾತ್ರವಾದರೂ ಏನು?

  ಲಂಕೆ ಸಿನಿಮಾದಲ್ಲಿರೋದು ಚಿತ್ರರಂಗ ಮುಟ್ಟೋಕೆ ಹತ್ತು ಬಾರಿ ಯೋಚಿಸುವ ವೇಶ್ಯಾವಾಟಿಕೆ ಮತ್ತು ರೌಡಿಸಂನ ಕಥೆ. ಯೋಗಿ ಜೊತೆ ಕೃಷಿ ತಾಪಂಡ, ಕಾವ್ಯಾ ಶೆಟ್ಟಿ ನಟಿಸಿದ್ದಾರೆ. ಸಂಚಾರಿ ವಿಜಯ್ ಕೂಡಾ ಈ ಚಿತ್ರದಲ್ಲಿರೋದು ವಿಶೇಷ.

  ಯೋಗಿ ರಾಮನಾದರೆ, ನಟಿ ಕಾವ್ಯಾ ಶೆಟ್ಟಿಯೇ ರಾವಣನ ಮಾದರಿಯಂತೆ. ಇಲ್ಲಿಯವರೆಗೂ ನೀವು ನೋಡಿರುವ ಯೋಗಿಯೇ ಬೇರೆ. ಲಂಕೆಯಲ್ಲಿ ನಿಮಗೆ ಕಾಣಿಸೋ ಯೋಗಿಯೇ ಬೇರೆ ಅನ್ನೋದು ನಿರ್ದೇಶಕ ರಾಮ್ ಪ್ರಸಾದ್ ಭರವಸೆ. ಪಟೇಲ್ ಶ್ರೀನಿವಾಸ್ ಮತ್ತು ಸುರೇಖಾ ರಾಮ್ ಪ್ರಸಾದ್ ಚಿತ್ರದ ನಿರ್ಮಾಪಕರು. 

 • ಲಂಕೆಯಲ್ಲಿ ಸಂಚಾರಿ ವಿಜಯ್ ರೋಲ್ ಏನು..?

  ಲಂಕೆಯಲ್ಲಿ ಸಂಚಾರಿ ವಿಜಯ್ ರೋಲ್ ಏನು..?

  ಲಂಕೆ. ಗಣೇಶ ಹಬ್ಬದ ಸೆನ್ಸೇಷನ್ ಆಗಿರುವ ಈ ಚಿತ್ರದಲ್ಲಿ ಯೋಗಿ ಹೀರೋ. ಆ ಚಿತ್ರದಲ್ಲಿ ಸಂಚಾರಿ ವಿಜಯ್ ಪಾತ್ರವೇನು..? ಅದೊಂದು ರಿಯಲ್ ವ್ಯಕ್ತಿಯ ಪಾತ್ರ. ಆ ವ್ಯಕ್ತಿ ಒಂದು ಕಾಲದಲ್ಲಿ ಇದ್ದವರೇ. ಪಾತ್ರವನ್ನಂತೂ ವಿಜಯ್ ಅದ್ಭುತವಾಗಿ ತೆರೆಯ ಮೇಲೆ ತಂದಿದ್ದಾರೆ. ಆ ಕುತೂಹಲ ಹಾಗೆಯೇ ಇರಲಿ.ಥಿಯೇಟರ್ನಲ್ಲೇ ಆ ಥ್ರಿಲ್ ಅನುಭವಿಸಿ ಎಂದಿರೋದು ನಿರ್ದೇಶಕ ರಾಮ್ ಪ್ರಸಾದ್.

  ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಲಂಕೆ ಕಳೆದ ವರ್ಷವೇ ತೆರೆಗೆ ಬರಬೇಕಿತ್ತು. ಲಂಕೆಯ ಜೊತೆಯಲ್ಲೇ ವಿಜಯ್ ಅವರಿಗೆ ಇನ್ನೊಂದು ಸೈಕಲಾಜಿಕಲ್ ಥ್ರಿಲ್ಲರ್ ಸ್ಟೋರಿ ಹೇಳಿದ್ದೆ. ಈ ಚಿತ್ರದಲ್ಲಿ ಜೋಡಿಯಾಗಿರುವ ವಿಜಯ್ ಮತ್ತು ಏಸ್ತರ್ ಜೋಡಿಯೇ ಆ ಚಿತ್ರಕ್ಕೂ ಫೈನಲ್ ಆಗಬೇಕಿತ್ತು. ಲಂಕೆ ರಿಲೀಸ್ ಆದ ದಿನವೇ ಆ ಸಿನಿಮಾವೂ ಸೆಟ್ಟೇರಬೇಕಿತ್ತು. ದುರದೃಷ್ಟವಶಾತ್, ವಿಜಯ್ ನಮ್ಮನ್ನೆಲ್ಲ ಅಗಲಿದರು ಎಂದು ನೋವಿನಲ್ಲೇ ಹೇಳೋ ರಾಮ್ ಪ್ರಸಾದ್ ಅವರಿಗೆ ವಿಜಯ್ ಅವರ ಲಂಕೆ ಚಿತ್ರದಲ್ಲಿನ ನಟನೆ ತುಂಬಾನೇ ಇಷ್ಟವಾಗಿದೆ.

  ಯೋಗಿ, ಕಾವ್ಯಾ ಶೆಟ್ಟಿ, ಕೃಷಿ ತಾಪಂಡ ನಟಿಸಿರುವ ಚಿತ್ರ ಲಂಕೆ. ಆದರೆ ಇಡೀ ಕಥೆ ನಿಂತಿರೋದು ವಿಜಯ್ ಅವರ ಪಾತ್ರದ ಮೇಲೆ. ಹೀರೋ ಯೋಗಿ ಈ ಚಿತ್ರದಲ್ಲಿ ಸ್ಪೆಷಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.

 • ಲಂಕೆಯಲ್ಲಿ ಸೆಕ್ಸ್ ವರ್ಕರ್ಸ್ ರಿವೆಂಜ್ ಸ್ಟೋರಿ

  ಲಂಕೆಯಲ್ಲಿ ಸೆಕ್ಸ್ ವರ್ಕರ್ಸ್ ರಿವೆಂಜ್ ಸ್ಟೋರಿ

  ಲಂಕೆಯಲ್ಲಿರೋದು ಲೈಂಗಿಕ ಕಾರ್ಯಕರ್ತೆಯರ ಕಥೆ. ಅವರ ಮೇಲೆ ನಡೆಯುವ ದೌರ್ಜನ್ಯಗಳ ಸ್ಟೋರಿ. ಅವರ ನಡುವಿನಲ್ಲೇ ಹುಟ್ಟಿ ಬೆಳೆದ ಯುವಕನೊಬ್ಬ, ಲೈಂಗಿಕ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ ಮಾಡುವವರ ವಿರುದ್ಧ ಸಿಡಿದೇಳುವ ಕಥೆ ಚಿತ್ರದಲ್ಲಿದೆ. ಹೀಗಾಗಿಯೇ ಇದು ಯೋಗಿಗೆ ಕಂಪ್ಲೀಟ್ ಡಿಫರೆಂಟ್ ಅನಿಸೋದು.

  ಕಥೆಯನ್ನು ಮನರಂಜನೆ ಸ್ಟೈಲ್‍ನಲ್ಲೇ ಹೇಳಿದ್ದೇವೆ. ಆ್ಯಕ್ಷನ್ ಡ್ರಾಮಾ ಇದೆ. ಜೊತೆಯಲ್ಲಿಯೇ ಶಿಕ್ಷಣ ಎಷ್ಟು ಮುಖ್ಯ ಅನ್ನೋ ಮೆಸೇಜ್ ಕೂಡಾ ಇದೆ. ಮಾಸ್ ಎಂಟರ್‍ಟೈನರ್ ಎನ್ನುತ್ತಾರೆ ನಿರ್ದೇಶಕ ರಾಮ್ ಪ್ರಸಾದ್.

  ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ತರ್ ನರೋನ್ನ, ಗಾಯತ್ರಿ ಜಯರಾಂ.. ಹೀಗೆ ನಾಲ್ವರು ನಾಯಕಿಯರು. ನಾಲ್ವರಿಗೂ ಪ್ರಮುಖ ರೋಲ್ ಇದೆಯಂತೆ. ಸುರೇಖಾ ರಾಮ್ ಪ್ರಸಾದ್ ಮತ್ತು ಪಟೇಲ್ ಶ್ರೀನಿವಾಸ್ ನಿರ್ಮಾಪಕರು.

 • ವರಲಕ್ಷ್ಮಿ ಹಬ್ಬಕ್ಕೆ ಮಾವ-ಅಳಿಯನೇ ಫೈಟ್ ಮಾಡ್ತಾರಾ?

  ವರಲಕ್ಷ್ಮಿ ಹಬ್ಬಕ್ಕೆ ಮಾವ-ಅಳಿಯನೇ ಫೈಟ್ ಮಾಡ್ತಾರಾ?

  ಲಾಕ್ ಡೌನ್ ಫ್ರೀಯಾಗಿ, ಎಲ್ಲವೂ ಓಪನ್ ಆದ ನಂತರ ರಿಲೀಸ್ ಆಗುತ್ತಿರುವ ದೊಡ್ಡ ಚಿತ್ರ ಸಲಗ. ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರ ರಿಲೀಸ್ ಎಂದು ಹೇಳಿಕೊಂಡಿರುವ ಹೊತ್ತಲ್ಲೇ, ಇತ್ತ ಲೂಸ್ ಮಾದ ಖ್ಯಾತಿಯ  ಯೋಗಿಯ ಚಿತ್ರವೂ ಅದೇ ಹಬ್ಬಕ್ಕೆ ರಿಲೀಸ್ ಎನ್ನಲಾಗುತ್ತಿದೆ. ಯೋಗಿ ಅಭಿನಯದ ಲಂಕೆ ಚಿತ್ರವೂ ಹಬ್ಬದ ದಿನವೇ ರಿಲೀಸ್ ಎನ್ನುತ್ತಿದೆ.

  ವಿಜಯ್ ಮತ್ತು ಯೋಗಿ ಇಬ್ಬರೂ ಮಾವ ಮತ್ತು ಅಳಿಯ. ದುನಿಯಾ ಚಿತ್ರಕ್ಕೆ ನಿರ್ಮಾಪಕರಾಗಿದ್ದುದು ಯೋಗಿ ಫ್ಯಾಮಿಲಿ. ವಿಜಯ್ ಆ ಚಿತ್ರದಿಂದ ದುನಿಯಾ ವಿಜಯ್ ಆದರೆ, ಅದೇ ಚಿತ್ರದಲ್ಲಿನ ಲೂಸ್ ಮಾದ ಪಾತ್ರದ ಹೆಸರು, ಯೋಗಿಯ ಹಿಂದೆ ಅಂಟಿಕೊಳ್ತು. ಈಗ ಅವರಿಬ್ಬರೂ ನಟಿಸಿರುವ ಚಿತ್ರಗಳು ಒಂದೇ ದಿನ ರಿಲೀಸ್ ಆಗುವ ಚಾನ್ಸ್ ಹೆಚ್ಚಾಗಿದೆ.

 • ಸೆಪ್ಟೆಂಬರ್`ನಲ್ಲೇ ಲಂಕೆ ದರ್ಶನ

  ಸೆಪ್ಟೆಂಬರ್`ನಲ್ಲೇ ಲಂಕೆ ದರ್ಶನ

  ಭಜರಂಗಿ 2 ರಿಲೀಸ್ ಪಕ್ಕಾ ಆಗುತ್ತಿದ್ದಂತೆಯೇ, ಲಂಕೆ ಚಿತ್ರತಂಡ ಕೂಡಾ ಸಿನಿಮಾ ರಿಲೀಸ್ ಮಾಡುವ ಉತ್ಸಾಹ ತೋರಿಸಿದೆ. ಇದೇ ತಿಂಗಳಲ್ಲಿ. ಹಾಗೆ ನೋಡಿದರೆ ವರಮಹಾಲಕ್ಷ್ಮಿ ಹಬ್ಬಕ್ಕೇ ಸಿನಿಮಾ ರಿಲೀಸ್ ಅಗಬೇಕಿತ್ತು. ಆದರೆ, ಇದ್ದಕ್ಕಿದ್ದಂತೆ ಸರ್ಕಾರ ಮತ್ತೆ ಲಾಕ್ ಡೌನ್ ಘೋಷಿಸಲಿದೆಯಂತೆ ಎಂಬ ಸುದ್ದಿಗಳು ಜೋರಾದ ಕಾರಣ, ಬಿಡುಗಡೆಯಿಂದ ಹಿಂದೆ ಸರಿದಿತ್ತು. ಈಗ ಮತ್ತೊಮ್ಮೆ ಜಾಹೀರಾತುಗಳು ಹೊರಬಿದ್ದಿವೆ.

  ಸೆಪ್ಟೆಂಬರ್ ತಿಂಗಳಲ್ಲೇ ಸಿನಿಮಾ ಬಿಡಗಡೆ ಎಂದು ಘೋಷಿಸಿದೆ. ಅಧಿಕೃತ ದಿನಾಂಕವನ್ನು ಹೇಳಿಲ್ಲವಾದರೂ ಹಬ್ಬ ಕಳೆದುಕೊಂಡೇ ಬರಬಹುದು. ಅಷ್ಟು ಹೊತ್ತಿಗೆ ಭಜರಂಗಿ 2 ರಿಲೀಸ್ ಆಗಿ, ಪ್ರೇಕ್ಷಕರ ನಾಡಿಮಿಡಿತವೂ ಗೊತ್ತಾಗಿರುತ್ತೆ.

  ರಾಮ್ ಪ್ರಸಾದ್ ಸ್ವತಃ ನಿರ್ಮಾಪಕರೂ ಆಗಿ, ನಿರ್ದೇಶಿಸಿರುವ ಚಿತ್ರ ಲಂಕೆ. ಕ್ಲಾಸ್ ಮತ್ತು ಮಾಸ್ ಎರಡೂ ಅಂಶಗಳಿರೋ ಚಿತ್ರದಲ್ಲಿ ಯೋಗಿಗೆ ಮೂವರು ನಾಯಕಿಯರಿದ್ದಾರೆ. ದಿ. ಸಂಚಾರಿ ವಿಜಯ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

 • ಹಬ್ಬದ ದಿನ 200+ ಥಿಯೇಟರುಗಳಲ್ಲಿ ಲಂಕೆ ರಿಲೀಸ್

  ಹಬ್ಬದ ದಿನ 200+ ಥಿಯೇಟರುಗಳಲ್ಲಿ ಲಂಕೆ ರಿಲೀಸ್

  ಲಂಕೆ ದೊಡ್ಡ ಮಟ್ಟದಲ್ಲೇ ರಿಲೀಸ್ ಆಗುತ್ತಿದೆ. ಲಾಕ್ ಡೌನ್ ಮುಗಿದ ಮೇಲೆ ರಿಲೀಸ್ ಆಗುತ್ತಿರುವ ಮೊದಲ ಸ್ಟಾರ್ ಸಿನಿಮಾ ಲಂಕೆ. ಲೂಸ್ ಮಾದ ಖ್ಯಾತಿಯ ಯೋಗಿ, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ ನಟಿಸಿರೋ ಲಂಕೆ ಸೆ.10ರಂದು 200ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗುತ್ತಿದೆ.

  ಎಲ್ಲವೂ ಪಕ್ಕಾ ಆಗಿದ್ದರೆ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ ಲಂಕೆ. ದಿಢೀರನೆ ಶುರುವಾದ ಮತ್ತೆ ಲಾಕ್ ಡೌನ್ ಭೀತಿಯಿಂದಾಗಿ ಸಿನಿಮಾ ಬಿಡುಗಡೆಯಿಂದ ಹಿಂದೆ ಸರಿದಿದ್ದ ಚಿತ್ರತಂಡ ಈಗ ಧೈರ್ಯವಾಗಿ ಹೆಜ್ಜೆಯಿಟ್ಟಿದೆ. ಚಿತ್ರದ ಬಿಡುಗಡೆಗೂ ಮುನ್ನ ರಿಲೀಸ್ ಆಗಿರುವ ಟ್ರೇಲರ್, ಹಾಡುಗಳಿಗೆ ಸಿಕ್ಕಿರುವ ಒಳ್ಳೆಯ ರೆಸ್ಪಾನ್ಸ್ ನಮಗೆ ಧೈರ್ಯ ನೀಡಿದೆ ಎಂದಿದ್ದಾರೆ ನಿರ್ಮಾಪಕ ಪಟೇಲ್ ಶ್ರೀನಿವಾಸ್.

  ರಾಮ್ ಪ್ರಸಾದ್ ಅವರ ನಿರ್ದೇಶನದ ಚಿತ್ರಕ್ಕೆ ಅವರ ಪತ್ನಿ ಸುರೇಖಾ ಕೂಡಾ ಶಕ್ತಿ ತುಂಬಿದ್ದಾರೆ. ಚಿತ್ರದ ನಿರ್ಮಾಪಕರಲ್ಲಿ ಅವರೂ ಒಬ್ಬರು. ಸಂಚಾರಿ ವಿಜಯ್, ಗಾಯತ್ರಿ ಜಯರಾಂ, ಶರತ್ ಲೋಹಿತಾಶ್ವ, ಶೋಭರಾಜ್, ಸುಚೇಂದ್ರ ಪ್ರಸಾದ್, ವಾಣಿಶ್ರೀ.. ಹೀಗೆ ಅದ್ಧೂರಿ ತಾರಾಬಳಗವೇ ಚಿತ್ರದಲ್ಲಿದೆ.