` rashmika mandanna - chitraloka.com | Kannada Movie News, Reviews | Image

rashmika mandanna

 • ರಶ್ಮಿಕಾ ಮಂದಣ್ಣಗೆ ಅಭಿಮಾನಿಗಳಿಂದ ನೂರಾರು ನಾಮಕರಣ..!

  rashmika asks her fans an questions

  ಚಿತ್ರರಂಗಕ್ಕೆ ಬಂದ ಮೇಲೆ ತಾರೆಯರು ತಮ್ಮ ಹೆಸರನ್ನು ಬದಲಿಸಿಕೊಳ್ಳೋದು ಹೊಸ ವಿಚಾರವೇನೂ ಅಲ್ಲ. ಎಲ್ಲೋ ಕೆಲವೇ ಕೆಲವರು ತಮ್ಮ ಮೂಲ ಹೆಸರಿನಿಂದಲೇ ಚಿತ್ರರಂಗದಲ್ಲಿ ಗುರುತಿಸಿಕೊಳ್ತಾರೆ. ಎಷ್ಟರಮಟ್ಟಿಗೆ ಅಂದ್ರೆ ಅವರ ವೊರಿಜಿನಲ್ ಹೆಸರೇ ಮರೆತು ಹೋಗುವಷ್ಟು. ಆದರೆ ರಶ್ಮಿಕಾ ಮಂದಣ್ಣಗೆ ತಮ್ಮ ಮೂಲ ಹೆಸರಿನಲ್ಲೇ ಮಿಂಚುವ ಅದೃಷ್ಟವಿತ್ತು. ಅಂತಹಾ ರಶ್ಮಿಕಾ ಮಂದಣ್ಣ, ಈಗ ಅಭಿಮಾನಿಗಳ ಎದುರು ಒಂದು ಚಾಲೆಂಜ್ ಇಟ್ಟರು. ತಾನೇನಾದರೂ ಮುಂದಿನ ದಿನಗಳಲ್ಲಿ ಹೆಸರು ಬದಲಿಸಿಕೊಳ್ಳಬೇಕು ಎಂದು ನಿರ್ಧರಿಸಿದರೆ ನನಗೆ ಯಾವ ಹೆಸರು ಚೆನ್ನಾಗಿರುತ್ತೆ ಅನ್ನೋ ಸ್ಪರ್ಧೆಯನ್ನೇ ಇಟ್ಟರು. ಅಭಿಮಾನಿಗಳು ಕೊಟ್ಟ ಹೆಸರುಗಳೂ ಅಷ್ಟೇ ಚೆಂದವಾಗಿದ್ದವು. ನೋಡ ನೋಡುತ್ತಿದ್ದಂತೆ ರಶ್ಮಿಕಾಗೆ ನೂರಾರು ನಾಮಕರಣವಾದವು. ಅವುಗಳ ಸ್ಯಾಂಪಲ್ ಇಲ್ಲಿವೆ ನೋಡಿ.

  ದಳಪತಿ ಮಂದಣ್ಣ ಎನ್ನೋ ಹೆಸರು ಕೊಟ್ಟವರು ಮೋಸ್ಟ್‍ಲೀ ಜೆಡಿಎಸ್ ಅಭಿಮಾನಿಯೇ ಇರಬೇಕು. ಬಂಗಾರದಂತ ಹುಡುಗಿ ಅನ್ನೋ ಕಾರಣಕ್ಕೆ ಇನ್ನೊಬ್ಬ ಕನಕದುರ್ಗ ಅನ್ನೋ ಹೆಸರಿಟ್ಟರೆ, ತೆಲುಗಿನ ಅಭಿಮಾನಿಯೊಬ್ಬ ಬಂಗಾರಂ ಅನ್ನೋ ನಾಮಕರಣ ಮಾಡಿದ. ಅವರೇ ನಟಿಸಿದ್ದ ಪಾತ್ರಗಳ ಫೇಮಸ್ ಹೆಸರುಗಳಾದ ಸಾನ್ವಿ, ಖುಷಿ, ಲಿಲ್ಲಿ, ಗೀತಾ ಹೆಸರನ್ನೂ ಅಭಿಮಾನಿಗಳು ಕೊಟ್ಟರು. ಮೋನಿ, ದಳಶ್ಮಿಕಾ, ಮಂಕದ, ಕ್ಯೂಟಿ, ಚಾರುಶೀಲ, ಮೀರಾ, ಜೆನಿಫರ್, ಸೋನಾ, ಇಶಮಿಕಾ, ಜಾನು, ಚೈತ್ರಾ, ರೂಬಿ, ಜೆಸ್ಸಿಕಾ, ಒಲಾವಿಯಾ ಷಾರ್ಲೆಟ್,

  ಇಸಬೆಲ್ಲ, ಅಶ್ವಿತಾ, ಪೂಜಾ, ಜೂಲಿಯೆಟ್, ಮುಮ್ತಾಜ್, ಮಹಾಲಕ್ಷ್ಮಿ, ಕಾಶ್ಮೀರ, ಶ್ರೇಯಾ, ಮುಸ್ಕಾನ್, ಮೊನಾಲಿಸಾ, ಕ್ಯೂಟ್‍ಮಿಕಾ, ರಮ್ಯಕೃಷ್ಣನ್, ಮಹಂ, ರಾಧಾ, ಮಲ್ಲಮ್ಮ.. ಹೀಗೆ ಚಿತ್ರವಿಚಿತ್ರ ಸುಂದರ ಹೆಸರಿಟ್ಟರು.

  ರಕ್ಷಿತಾ ಶೆಟ್ಟಿ, ರಶ್ಮಿಕಾ ಶೆಟ್ಟಿ, ವಿಜಯ ದೇವರಕೊಂಡ ರೇಶ್ಕೊಂಡ ಅನ್ನೋ ಹೆಸರುಗಳೂ ಬಂದವು. ಕಾರಣ ನಾವು ಹೇಳಬೇಕಿಲ್ಲ. ಎಲ್ಲವೂ ಅಭಿಮಾನಿಗಳಿಗೆ ಬಿಟ್ಟಿದ್ದು. ಅಂದಹಾಗೆ ಇಷ್ಟೂ ಹೆಸರುಗಳಲ್ಲಿ ನಿಮಗೆ ಇಷ್ಟವಾದ ಹೆಸರು ಯಾವುದು..?

 • ರಶ್ಮಿಕಾ ಮಂದಣ್ಣಗೆ ರಕ್ಷಿತ್ ಶೆಟ್ಟಿ ಶುಭ ಹಾರೈಕೆ

  ರಶ್ಮಿಕಾ ಮಂದಣ್ಣಗೆ ರಕ್ಷಿತ್ ಶೆಟ್ಟಿ ಶುಭ ಹಾರೈಕೆ

  ಏರು..ಏರು.. ಇನ್ನಷ್ಟು ಎತ್ತರಕ್ಕೆ ಏರು ಹುಡುಗಿ..

  ನಿನ್ನ ಕನಸು, ಗುರಿಗಳೆಲ್ಲ ನನಸಾಗಲಿ..

  ಇಂಥಾದ್ದೊಂದು ಟ್ವೀಟ್ ಮಾಡಿದ್ದಾರೆ ರಕ್ಷಿತ್ ಶೆಟ್ಟಿ. ಅದೂ ರಶ್ಮಿಕಾ ಮಂದಣ್ಣಗೆ.

  ಇತ್ತೀಚೆಗೆ ಬೆಳಗೆದ್ದು ಯಾರ ಮುಖವಾ.. ಹಾಡು 10 ಕೋಟಿ ವೀಕ್ಷಕರನ್ನು ತಲುಪಿ ದಾಖಲೆ ಬರೆದಿದೆ. ಇದನ್ನು ರಶ್ಮಿಕಾ ಮಂದಣ್ಣ ಟ್ವಿಟರಿನಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದರು. ಚಿತ್ರದ ಮೇಕಿಂಗ್ ಕ್ಷಣಗಳನ್ನು ಹಂಚಿಕೊಂಡು ಅದನ್ನು ರಕ್ಷಿತ್ ಶೆಟ್ಟಿ ಸೇರಿದಂತೆ ಚಿತ್ರತಂಡದ ಎಲ್ಲರಿಗೂ ಟ್ಯಾಗ್ ಮಾಡಿದ್ದರು.

  ಆ ಟ್ವಿಟ್‍ಗೆ ರಿಯಾಕ್ಷನ್ ಕೊಟ್ಟಿರುವ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣಗೆ ಶುಭ ಹಾರೈಸಿದ್ದಾರೆ.

 • ರಶ್ಮಿಕಾ ಮದುವೆಯಾಗೋ ಹುಡುಗ ಹೀಗಿರಬೇಕು

  rashmika talks about the qualities in her future husband

  ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ವಿವಾದಗಳಿಂದಲೂ ಸುದ್ದಿಯಾಗಿದ್ದಾರೆ. ಇದೆಲ್ಲದರ ಜೊತೆಯಲ್ಲೇ ಅವರು ತಮ್ಮ ಮದುವೆ, ಮದುವೆಯಾಗುವ ಹುಡುಗ ಹೇಗಿರಬೇಕು ಎಂದೆಲ್ಲ ಮಾತನಾಡಿದ್ದಾರೆ. ಇಷ್ಟಕ್ಕೂ ರಶ್ಮಿಕಾ ಮದುವೆಯಾಗುವ ಹುಡುಗ ಹೇಗಿರಬೇಕು. 

  ಸ್ಮೋಕ್ ಮಾಡುವ ಹುಡುಗ ಬೇಡ. ಸಿಗರೇಟು ಸೇದುವವರು ಎಂದರೆ ನನಗೆ ದ್ವೇಷ.

  ಆಲ್ಕೋಹಾಲ್ ಓಕೆ.. ಆದರೆ ಕುಡುಕನಾಗಿರಬಾರದು. 

  ಸೀರಿಯಸ್ ಆಗಿರಬಾರದು, ರೊಮ್ಯಾಂಟಿಕ್ ಆಗಿರಬೇಕು. ಸುಳ್ಳು ಹೇಳಲೇಬಾರದು.

  ವಯಸ್ಸು ವಿಷಯವೇ ಅಲ್ಲ, ಆದರೆ ರಶ್ಮಿಕಾಗಾಗಿ ಸಮಯ ಕೊಡಲೇಬೇಕು. 

  ರಶ್ಮಿಕಾ ಎತ್ತರ 5.5 ಅಡಿ. ಅವರು ಮದುವೆಯಾಗುವ ಹುಡುಗ ಅವರಿಗಿಂತ ಎತ್ತರವಾಗಿರಬೇಕು. 

  ಸಿಕ್ಸ್‍ಪ್ಯಾಕ್ ಬೇಡ ಆದರೆ ಫಿಟ್ & ಫೈನ್ ಆಗಿರಬೇಕು.

 • ರಶ್ಮಿಕಾ ಮಾಡಬೇಕಿದ್ದ ನಿತ್ಯಶ್ರೀ ಸಕ್ಸಸ್

  nityashri debuts in kannada

  ವೃತ್ರ.. ಹೌದು ನೀವು ಓದಿಕೊಂಡಿರೋದು ಸರಿಯಾಗಿಯೇ ಇದೆ. ಇದು ವೃತ್ತ ಅಲ್ಲ.. ವೃತ್ರ. ಹಾಗೆ ನೋಡಿದರೆ ಇದು ರಶ್ಮಿಕಾ ಮಂದಣ್ಣ ನಟಿಸಬೇಕಿದ್ದ ಸಿನಿಮಾ. ಈಗ ನಿತ್ಯಶ್ರೀ ನಟಿಸಿದ್ದಾರೆ. ಗೌತಮ್ ಅಯ್ಯರ್ ನಿರ್ದೇಶನದ ಚಿತ್ರದಲ್ಲಿ ನಿತ್ಯಶ್ರೀ, ಇನ್ವೆಸ್ಟಿಗೇಷನ್ ಆಫೀಸರ್. ಆಕೆ ಫೇಸ್ ಮಾಡುವ ಮೊದಲ ಕೇಸಿನ ಕಥೆಯೇ ವೃತ್ರ.

  ರಶ್ಮಿಕಾ ಮಂದಣ್ಣ ಅವರಿಗಾಗಿ ಸಿದ್ಧತೆಯಾಗಿತ್ತು. ಫೋಟೋಶೂಟ್ ಕೂಡಾ ಆಗಿತ್ತು. ಕಾರಣಾಂತರಗಳಿಂದ ಅವರು ಹಿಂದೆ ಸರಿದರು. ಆಗ ಫೇಸ್‍ಬುಕ್‍ನಲ್ಲಿ ಕಂಡವರು ನಿತ್ಯಶ್ರೀ. ಅವರು ಅಡಿಷನ್‍ಗೆ ಬಂದಾಗ ಪಾತ್ರವೇ ಕಣ್ಣ ಮುಂದೆ ಬಂದಂತಾಯ್ತು. ಅದ್ಭುತವಾಗಿ ನಟಿಸಿದ್ದಾರೆ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ ಗೌತಮ್ ಅಯ್ಯರ್.

  ನಿತ್ಯಶ್ರೀ, ಮಣಿರತ್ನಂ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಹುಡುಗಿ. ಇವರ ಜೊತೆ ಪ್ರಕಾಶ್ ಬೆಳವಾಡಿ, ಸುಧಾರಾಣಿಯಂತಹ ಸೀನಿಯರ್ ಕಲಾವಿದರೂ ಇದ್ದಾರೆ.

 • ರಶ್ಮಿಕಾಗೆ ಕನ್ನಡ ಸಿನಿಮಾ ಅಂದ್ರೆ ಇಷ್ಟು ಪೊಗರಾ..?

  Fans Angry Over Rashmika For Neglecting Kannada Film Industry ?

  ರಶ್ಮಿಕಾ ಮಂದಣ್ಣ, ಕನ್ನಡ ಮತ್ತು ಕನ್ನಡ ಸಿನಿಮಾಗಳಿಂದ ದೂರ ಇದ್ದಾರೆ ಅನ್ನೋದು ಗುಟ್ಟೇನಲ್ಲ. ಕನ್ನಡದ ಅಭಿಮಾನಿಗಳು ಏನೇ ಹಾರಾಡಿ ಕೂಗಾಡಿದರೂ.. ರಶ್ಮಿಕಾ ಮಂದಣ್ಣ ನೋಡಲಿಲ್ಲ.. ಕೇಳಲಿಲ್ಲ.. ಗೊತ್ತೇ ಆಗಲಿಲ್ಲ ಎಂಬಂತೆ ಇದ್ದು ಬಿಡ್ತಾರೆ. ಆದರೆ.. ಒಪ್ಪಿಕೊಂಡ ಸಿನಿಮಾದಲ್ಲಿ ಅವರು ಇದೇ ಕೆಲಸ ಮಾಡಲ್ಲ ಅನ್ನೋ ನಿರೀಕ್ಷೆಯೂ ಹುಸಿಯಾಗಿದೆ.

  ರಶ್ಮಿಕಾ ಮಂದಣ್ಣ ನಟಿಸಿರುವ ಕನ್ನಡ ಸಿನಿಮಾ ಪೊಗರು. ಇದನ್ನು ಬಿಟ್ಟರೆ ರಶ್ಮಿಕಾ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಪೊಗರು ರಿಲೀಸ್ ಆಗುವ ಹೊತ್ತಿಗೆ ರಶ್ಮಿಕಾ ತೆಲುಗು, ತಮಿಳು ಸ್ಟಾರ್ ನಟಿಯಾಗಿಬಿಟ್ಟರು. ಪ್ರಾಬ್ಲಂ ಆಗಿದ್ದೇ ಇಲ್ಲಿ.

  ತೆಲುಗು, ತಮಿಳು ಚಿತ್ರಗಳ ಪುಟ್ಟ ಪುಟ್ಟ ಸುದ್ದಿಗಳನ್ನೂ ಖುಷಿ ಖುಷಿಯಾಗಿ ಹಂಚಿಕೊಳ್ಳುವ ರಶ್ಮಿಕಾ ಮಂದಣ್ಣ, ಕನ್ನಡದ ಪೊಗರು ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆದರೂ ಅದನ್ನು ಹೇಳುವ, ಪ್ರಚಾರ ಮಾಡುವ ಕೆಲಸಕ್ಕೆ ಮುಂದಾಗುತ್ತಿಲ್ಲ. ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾ ಪೇಜುಗಳಲ್ಲಿ ಪೊಗರು ಚಿತ್ರದ ಸಣ್ಣ ಅಪ್‍ಡೇಟ್ ಕೂಡಾ ಸಿಕ್ಕಲ್ಲ. ಹೀಗ್ಯಾಕೆ..?

  ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಹಿಟ್ ಆದ ಮೇಲೆ ಕನ್ನಡವನ್ನು ಮರೆತಿದ್ದಾರೆ. ತೆಲುಗಿನ ಚೂಟು ಸ್ಟಾರ್‍ಗಳಿಗೆಲ್ಲ ವಿಷ್ ಮಾಡೋ ರಶ್ಮಿಕಾ, ಕನ್ನಡದ ಯಾವೊಬ್ಬ ಕಲಾವಿದರ ಹುಟ್ಟುಹಬ್ಬವನ್ನೂ ನೆನಪಿಸಿಕೊಳ್ಳಲ್ಲ. ಆಕೆಯ ಕಣ್ಣಿಗೆ ಕನ್ನಡ ಮತ್ತು ಕನ್ನಡ ಚಿತ್ರರಂಗ ಈಗ ಯಕಶ್ಚಿತ್ ಆಗಿಬಿಟ್ಟಿದೆ.. ಎಂದೆಲ್ಲ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಟ್.. ರಶ್ಮಿಕಾ ಮಂದಣ್ಣ ಈ ಯಾವ ಪ್ರಶ್ನೆಗಳಿಗೂ ಉತ್ತರ ಕೊಡಲ್ಲ. ಡೋಂಟ್ ಕೇರ್ ಆಟಿಟ್ಯೂಡ್. ಅಭಿಮಾನಿಗಳು ರೊಚ್ಚಿಗೇಳುತ್ತಲೇ ಇದ್ದಾರೆ.

 • ರಶ್ಮಿಕಾಗೆ ಲಡ್ಡು ಬಂದು ಡೈರೆಕ್ಟ್ ಆಗಿ ಬಾಯಿಗ್ ಬಿತ್ತು..!

  rahsmika bags aa film offer in telugu

  ಅಲ್ಲು ಅರ್ಜುನ್, ಟಾಲಿವುಡ್‍ನ ಸ್ಟೈಲಿಷ್ ಸ್ಟಾರ್. ವರ್ಷಕ್ಕೊಂದೋ.. ಎರಡು ವರ್ಷಕ್ಕೊಂದೋ ಸಿನಿಮಾ ಮಾಡುವ ಅಲ್ಲು ಅರ್ಜುನ್ ಇದುವರೆಗೆ ನಟಿಸಿರುವುದು 19 ಸಿನಿಮಾ ಮಾತ್ರ. ಅಲ್ಲು ಅರ್ಜುನ್ ಚಿತ್ರಗಳಲ್ಲಿ ಚಾನ್ಸ್ ಸಿಗುವುದೆಂದರೆ ಅದೃಷ್ಟ ಎಂದು ಪರಿಭಾವಿಸುವ ನಾಯಕಿಯರಿಗೇನೂ ಕೊರತೆಯಿಲ್ಲ.

  ಇನ್ನು ಸುಕುಮಾರ್. ಆರ್ಯ, ಆರ್ಯ 2, 100% ಲವ್, ನಾನ್ನಕು ಪ್ರೇಮತೋ, ರಂಗಸ್ಥಳಂ.. ಹೀಗೆ ಡಿಫರೆಂಟ್ ಡಿಫರೆಂಟ್ ಹಿಟ್ ಚಿತ್ರಗಳನ್ನೇ ಕೊಟ್ಟಿರುವ ನಿರ್ದೇಶಕ. 

  ಅಲ್ಲು ಅರ್ಜುನ್ ಸ್ಟಾರ್ ನಟರಾಗಿದ್ದು ಇದೇ ಸುಕುಮಾರ್ ಅವರ ಆರ್ಯ ಚಿತ್ರದಿಂದ. ಈಗ ಈ ಜೋಡಿ ಮತ್ತೊಮ್ಮೆ ಜೊತೆಯಾಗಿದೆ. ಅದು ಅಲ್ಲು ಅರ್ಜುನ್‍ರ 20ನೇ ಸಿನಿಮಾ.

  ಆ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿರುವುದು ರಶ್ಮಿಕಾ ಮಂದಣ್ಣ. ಅಲ್ಲು ಅರ್ಜುನ್ ಅವರ ಬ್ಯಾನರ್‍ನ ಗೀತಗೋವಿಂದಂ ಸಿನಿಮಾ ಮೂಲಕ ಸ್ಟಾರ್ ನಟಿಯಾದ ರಶ್ಮಿಕಾ, ಈಗ ಅಲ್ಲು ಅರ್ಜುನ್ ಅವರಿಗೇ ಹೀರೋಯಿನ್ ಆಗುತ್ತಿದ್ದಾರೆ. ಸದ್ಯಕ್ಕೆ ಎಎ20 ಎಂಬ ಟೈಟಲ್‍ನಲ್ಲಿ ಸಿನಿಮಾ ಶುರುವಾಗುತ್ತಿದೆ. ರಶ್ಮಿಕಾಗೆ ಲಡ್ಡು ಬಂದು ಬಾಯಿಗೆ ಬಿದ್ದಿದೆ.

 • ಸಾರಥಿಯನ್ನು ನೆನಪಿಸುತ್ತಾ ಯಜಮಾನ..?

  jallikattu bulls in yajamana

  ಸಾರಥಿ, ದರ್ಶನ್ ಅಭಿನಯದ ಬ್ಲಾಕ್‍ಬಸ್ಟರ್ ಸಿನಿಮಾ. ಆ ಚಿತ್ರದಲ್ಲಿ ಗಮನ ಸೆಳೆದೆದ್ದುದು ಕಣಿವೆಯಲ್ಲಿ ಗೂಳಿಗಳ ಓಟ. ಚಿತ್ರದ ಹೈಲೈಟ್‍ಗಳಲ್ಲಿ ಅದೂ ಒಂದಾಗಿತ್ತು. ಅದು ಮತ್ತೆ ಯಜಮಾನನಲ್ಲಿ ಮರುಕಳಿಸಿದೆ. ಯಜಮಾನ ಚಿತ್ರದಲ್ಲಿ 10 ಜಲ್ಲಿಕಟ್ಟು ಗೂಳಿಗಳನ್ನು ಬಳಸಿಕೊಳ್ಳಲಾಗಿದೆ.

  ತಮಿಳುನಾಡಿನಿಂದ ಜಲ್ಲಿಕಟ್ಟುಗಾಗಿಯೇ ತಯಾರು ಮಾಡಿದ ಕಟ್ಟುಮಸ್ತಾದ 10 ಗೂಳಿಗಳನ್ನು ದಿನಕ್ಕೆ 10 ಸಾವಿರದಂತೆ ಬಾಡಿಗೆ ಕೊಟ್ಟು ಕರೆಸಿಕೊಂಡು ಚಿತ್ರೀಕರಣ ಮಾಡಿದೆ ಚಿತ್ರತಂಡ. ಯಜಮಾನ ಚಿತ್ರದ ಹೈಲೈಟ್ ಅದು.

  ಮಾರ್ಚ್ 1ಕ್ಕೆ ರಿಲೀಸ್ ಆಗುತ್ತಿರುವ ಯಜಮಾನ ಚಿತ್ರದ ಅತಿದೊಡ್ಡ ಹೈಲೈಟ್ ಈ ಜಲ್ಲಿಕಟ್ಟು ಗೂಳಿಗಳು. ಚಿತ್ರದಲ್ಲಿ ದರ್ಶನ್ ನಂದಿಯ ಎದುರು ನಿಂತಿರುವುದಕ್ಕೂ, ಈ ಗೂಳಿಗಳಿಗೂ ಸಂಬಂಧವಿದೆ ಎನ್ನಿಸಿದ್ರೆ ಅಚ್ಚರಿಯಿಲ್ಲ. 

  ಬಿ.ಸುರೇಶ್, ಶೈಲಜಾ ನಾಗ್ ನಿರ್ಮಾಣದ ಚಿತ್ರಕ್ಕೆ ಹರಿಕೃಷ್ಣ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಚಿತ್ರ ಬಿಡುಗಡೆಗೂ ಮುನ್ನವೇ ಭರ್ಜರಿ ಹವಾ ಎಬ್ಬಿಸಿದೆ. ದರ್ಶನ್ ಸಿನಿಮಾ ಹೆಚ್ಚೂ ಕಡಿಮೆ ಎರಡು ವರ್ಷದ ಗ್ಯಾಪ್ ನಂತರ ತೆರೆಗೆ ಬರುತ್ತಿರುವುದೇ ಅಭಿಮಾನಿಗಳಿಗೆ ಹಬ್ಬ.

 • ಸೆನ್ಸೇಷನ್ ಸ್ಟಾರ್ ರಶ್ಮಿಕಾ

  sensation star awardee rashmika image

  ಸೌಥ್ ಇಂಡಿಯಾ ಕ್ರಶ್ ಎಂದೇ ಹೆಸರಾಗಿರುವ ರಶ್ಮಿಕಾ ಮಂದಣ್ಣ, ಈಗ ಸೆನ್ಸೇಷನ್ ಸ್ಟಾರ್ ಆಗಿದ್ದಾರೆ. ಕಿರಿಕ್ ಪಾರ್ಟಿ ಮೂಲಕ ಬೆಳ್ಳಿತೆರೆಗೆ ಬಂದ ರಶ್ಮಿಕಾಗೆ ಈಗ ದಕ್ಷಿಣ ಭಾರತದ ತುಂಬಾ ಅಭಿಮಾನಿಗಳು. ಈ ರಶ್ಮಿಕಾಗೆ ಈಗ ಸೆನ್ಸೇಷನ್ ಆಫ್ ದಿ ಇಯರ್ ಅನ್ನೋ ಪ್ರಶಸ್ತಿ ಸಿಕ್ಕಿದೆ.

  ಜೆಎಫ್‍ಡಬ್ಲ್ಯು ಮ್ಯಾಗಜಿನ್ ನೀಡುವ ಈ ಸೆನ್ಸೇಷನ್ ಪ್ರಶಸ್ತಿ ಈ ಬಾರಿ ರಶ್ಮಿಕಾಗೆ ಸಿಕ್ಕಿದೆ. ನನ್ನ ಏಳಿಗೆಗೆ ಕಾರಣಕರ್ತರಾದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ ರಶ್ಮಿಕಾ ಮಂದಣ್ಣ.

   

 • ಸ್ಯಾಂಡಲ್‍ವುಡ್‍ನಲ್ಲಿ ಕೊಡಗಿನ ಚೆಲುವೆಯರ ಸೊಬಗು..!

  sandalwoll filled with kodagu beauties

  ಕೊಡಗು, ದೇಶಕ್ಕೆ ಇಬ್ಬರು ಜನರಲ್‍ಗಳನ್ನು ಕೊಟ್ಟ ಊರು. ಕಾರಿಯಪ್ಪ ಮತ್ತು ತಿಮ್ಮಯ್ಯ. ಕೊಡಗು, ಕರ್ನಾಟಕಕ್ಕೆ ಕಾವೇರಿಯನ್ನು ಕೊಟ್ಟ ಊರು. ಕಾಫಿ, ಕಿತ್ತಳೆಯನ್ನು ಕೊಟ್ಟಿರುವ ಈ ಸುಂದರ ನಗರಿ, ಸೌಂದರ್ಯವತಿಯರ ತವರೂರು ಎಂದರೆ ತಪ್ಪಿಲ್ಲ. ಇಂತಹ ಕೊಡಗು ಈಗ ಕನ್ನಡಕ್ಕೆ ಇನ್ನೊಬ್ಬ ಚೆಲುವೆಯನ್ನು ಕೊಟ್ಟಿದೆ.

  ಜೋಗಿ ಪ್ರೇಮ್ ಅವರ ಏಕ್ ಲವ್ ಯಾ ಚಿತ್ರದಲ್ಲಿ ನಾಯಕಿಯಾಗಿರುವ ರೀಷ್ಮಾ ನಾಣಯ್ಯ, ಕೊಡಗಿನಿಂದ ಬರುತ್ತಿರುವ ಹೊಸ ಚೆಲುವೆ.

  ಲಿಸ್ಟು ನೋಡಿದರೆ ಮಾರುದ್ದ ಇದೆ. ಹೆಚ್ಚೂ ಕಡಿಮೆ ಒಂದು ದಶಕ ಕನ್ನಡ ಚಿತ್ರರಂಗವನ್ನು ಆಳಿದ ಪ್ರೇಮಾ ಕೊಡಗಿನವರು. ಡೈಸಿ ಬೋಪಣ್ಣ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ಅನು ಪೂವಮ್ಮ, ಪ್ರಜ್ವಲ್ ಪೂವಯ್ಯ, ಕೃಷಿ ತಾಪಂಡ, ದಿಶಾ ಪೂವಯ್ಯ, ಟೀನಾ ಪೊನ್ನಪ್ಪ, ರಾಗವಿ.. ಹೀಗೆ ಪಟ್ಟಿ ತುಂಬಾ ದೊಡ್ಡದು.

  ಕನ್ನಡ ಚಿತ್ರರಂಗದಿಂದ ಬಂದು ದಕ್ಷಿಣ ಭಾರತವನ್ನೇ ವ್ಯಾಪಿಸಿಕೊಂಡಿರುವ ಸೌಥ್ ಇಂಡಿಯಾ ಕ್ರಷ್ ರಶ್ಮಿಕಾ ಮಂದಣ್ಣ ಕೂಡಾ ಕೊಡವರ ಹುಡುಗಿಯೇ.. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery