` rashmika mandanna - chitraloka.com | Kannada Movie News, Reviews | Image

rashmika mandanna

 • ಪೊಗರು ಡಿ.25ಕ್ಕಾ.. ಜನವರಿ 1ಕ್ಕಾ..

  pogaru to release on

  ಧ್ರುವ ಸರ್ಜಾ ಅಭಿನಯದ ಪೊಗರು ರಿಲೀಸ್ ಯಾವಾಗ..? ಚಿತ್ರತಂಡ ಎರಡು ಡೇಟ್ ಹೇಳುತ್ತಿದೆ. ಮೊದಲನೆಯದ್ದು ಡಿಸೆಂಬರ್ 25. ಇನ್ನೊಂದು ಜನವರಿ 1.

  ಸ್ಟಾರ್ ಸಿನಿಮಾ ರಿಲೀಸ್ ಆಗದೇ ಹೋದರೆ ಥಿಯೇಟರು ಭರ್ತಿಯಾಗಲ್ಲ. ಅದು ಮತ್ತೊಮ್ಮೆ ಸಾಬೀತಾಗಿದೆ. ಹೀಗಾಗಿ ಪೊಗರು ರಿಲೀಸ್ ಆಗಲಿ ಎನ್ನುವ ನಿರೀಕ್ಷೆಯೇನೋ ಇದೆ. ಇನ್ನು 20 ದಿನಗಳಲ್ಲಿ ಮೊದಲ ಪ್ರತಿ ಹೊರಬರಲಿದ್ದು, ರಿಲೀಸ್‍ಗೂ ಡೇಟ್ ಫಿಕ್ಸ್ ಮಾಡಿದೆ ಚಿತ್ರತಂಡ.

  ಎರಡು ಡೇಟ್ಸ್ ಹಿಂದೆ ಕಾರಣವೂ ಇದೆ. ಸದ್ಯಕ್ಕೆ ಥಿಯೇಟರಿನಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅವಕಾಶವಿದೆ. ಸ್ಟಾರ್ ಸಿನಿಮಾಗಳಿಗೆ ಇದು ಸಾಕಾಗಲ್ಲ. ಆದರೆ ಜನವರಿ ಹೊತ್ತಿಗೆ ಪರಿಸ್ಥಿತಿ ಸುಧಾರಿಸಿ, ಶೇ.100ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಸಿಗಬಹುದು ಎಂಬ ನಿರೀಕ್ಷೆ ಚಿತ್ರತಂಡದ್ದು. ಆ ರೀತಿಯ ಸುಳಿವು ಸಿಕ್ಕರೆ ಜನವರಿ 1ಕ್ಕೆ ರಿಲೀಸ್.

  ಅಕಸ್ಮಾತ್.. ಯಾವುದೇ ಬದಲಾವಣೆ ಆಗಲ್ಲ ಎಂದು ಅನ್ನಿಸಿದ್ರೆ ಡಿ.25ಕ್ಕೇ ರಿಲೀಸ್ ಮಾಡೋ ಪ್ಲಾನ್ ಚಿತ್ರತಂಡದ್ದು. ಧ್ರುವ, ರಶ್ಮಿಕಾ ಮಂದಣ್ಣ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ನಂದಕಿಶೋರ್ ಡೈರೆಕ್ಟರ್. ರಾಘವೇಂದ್ರ ರಾಜ್‍ಕುಮಾರ್, ಧನಂಜಯ್, ರವಿಶಂಕರ್, ಮಯೂರಿ ಕೂಡಾ ನಟಿಸಿರುವ ಚಿತ್ರಕ್ಕೆ ಬಿ.ಕೆ.ಗಂಗಾಧರ್ ನಿರ್ಮಾಪಕ.

 • ಪೊಗರು ಸೆಟ್ಟಲ್ಲಿ ರಶ್ಮಿಕಾ ಬರ್ತ್ ಡೇ

  rashmika's birthday celebrations in pogaru set

  ಕಿರಿಕ್ ಪಾರ್ಟಿಯ ಸಾನ್ವಿ ಅಲಿಯಾಸ್ ರಶ್ಮಿಕಾ, ಈಗ ಸೌಥ್ ಇಂಡಿಯಾ ಕ್ರಶ್. ಪಡ್ಡೆ ರಸಿಕರ ಡಾರ್ಲಿಂಗ್. ಕನಸಲ್ಲೂ ಅಲೆಲೆಲೆಲೆ ಎನ್ನಿಸುವ ಸುಂದರಿ, ಈಗಷ್ಟೇ 22 ಮುಗಿಸಿ, 23ಕ್ಕೆ ಕಾಲಿಟ್ಟಿದ್ದಾರೆ. ಹಾಗೆ ಹುಟ್ಟುಹಬ್ಬ ಸಂಭ್ರಮಿಸುವ ವೇಳೆಯಲ್ಲಿ ಅವರು ಇದ್ದುದು ಪೊಗರು ಚಿತ್ರದ ಸೆಟ್ಟಿನಲ್ಲಿ.

  ಧ್ರುವ ಸರ್ಜಾ ಅವರಿಗೆ ಟೀಚರ್ ಆಗಿ ನಟಿಸುತ್ತಿರುವ ರಶ್ಮಿಕಾ ಅವರಿಗೆ, ನಿರ್ದೇಶಕ ನಂದಕಿಶೋರ್ ಸೇರಿದಂತೆ ಇಡೀ ಚಿತ್ರತಂಡ ಹುಟ್ಟುಹಬ್ಬ ಶುಭಾಶಯ ಕೋರಿ ಸಂಭ್ರಮಿಸಿದೆ. ಸೆಟ್‍ನಲ್ಲೇ ಕೇಕ್ ಕಟ್ ಮಾಡಿ ಖುಷಿ ಪಟ್ಟಿದ್ದಾರೆ ರಶ್ಮಿಕಾ ಮಂದಣ್ಣ.

 • ಪೊಗರು'ನ ಕರಾಬು ಹಾಡಿಗೆ ಕೊರೋನಾ ಬ್ರೇಕ್

  pogaru's khabaru song release postponed

  ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟು ಹೊತ್ತಿಗೆ ಪೊಗರು ಚಿತ್ರದ ಕರಾಬು ಸಾಂಗ್ ರಿಲೀಸ್ ಆಗಬೇಕಿತ್ತು. ಆದರೆ ಅಭಿಮಾನಿಗಳ ನಿರೀಕ್ಷೆಗೆ ಕೊರೋನಾ ಬ್ರೇಕ್ ಹಾಕಿದೆ. ಅರೆ.. ಹಾಡು ರಿಲೀಸ್ ಆಗೋದು ಯೂಟ್ಯೂಬ್ ಚಾನೆಲ್ಲಲ್ಲಿ, ಅದಕ್ಕೇಕೆ ಬ್ರೇಕ್ ಹಾಕಬೇಕು ಅನ್ನೋ ಅಭಿಮಾನಿಗಳ ಪ್ರಶ್ನೆಗೆ ಧ್ರುವ ಸರ್ಜಾ ಕೊಟ್ಟಿರುವ ಉತ್ತರ ಅಷ್ಟೇ ಸಿಂಪಲ್.

  ಎಲ್ಲರೂ ಆತಂಕದಲ್ಲಿದ್ದಾರೆ. ಯುಗಾದಿಯ ಸಂಭ್ರಮವೂ ಇಲ್ಲ. ಎಲ್ಲರೂ ಆತಂಕದಲ್ಲಿರೋವಾಗ ನಮಗೆ ಸಂಭ್ರಮ ಬೇಕಾ ಅನ್ನೋದು ಧ್ರುವ ಸರ್ಜಾ ವಾದ.

  ಸ್ಸೋ.. ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರದ ಹಾಡು ಇವತ್ತಿಲ್ಲ. ಮುಂದೆ.. ಕಾದು ನೊಡೋಣ.

 • ಪ್ರಭಾಸ್ ಅಂದ್ರೆ ರಶ್ಮಿಕಾಗೆ ಕ್ರಶ್ ಅಂತೆ..!

  ಪ್ರಭಾಸ್ ಅಂದ್ರೆ ರಶ್ಮಿಕಾಗೆ ಕ್ರಶ್ ಅಂತೆ..!

  ಕಿರಿಕ್ ಪಾರ್ಟಿ ರಶ್ಮಿಕಾ ಮಂದಣ್ಣ, ಈಗ ನ್ಯಾಷನಲ್ ಕ್ರಶ್ ಆಗಿರೋದು ಗೊತ್ತಿರೋ ವಿಷಯಾನೇ. ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ತಮಿಳುನಾಡಿನ ಸೊಸೆಯಾಗುವ ಆಸೆ ಹೇಳಿಕೊಂಡಿದ್ದರು. ಈಗ ಪ್ರಭಾಸ್ ಮೇಲಿರೋ ಕ್ರಶ್ ಬಿಚ್ಚಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ನೀವು ಯಾರ ಜೊತೆ ಡೇಟಿಂಗ್ ಹೋಗೋಕೆ ಇಷ್ಟಪಡ್ತೀರಿ ಎಂಬ ಪ್ರಶ್ನೆಗೆ ರಶ್ಮಿಕಾ ಥಟ್ ಅಂತಾ ಹೇಳಿದ ಉತ್ತರ ಬಾಹುಬಲಿ ಪ್ರಭಾಸ್.

  ನನಗೆ ಪ್ರಭಾಸ್ ಅಂದ್ರೆ ತುಂಬಾ ಇಷ್ಟ. ಆಕ್ಚಯಲಿ ನನಗೆ ಅವರ ಮೇಲೆ ಕ್ರಶ್ ಆಗಿದೆ. ಚಾನ್ಸ್ ಸಿಕ್ಕರೆ ಅವರ ಜೊತೆ ಡೇಟಿಂಗ್‍ಗೂ ಹೋಗುತ್ತೇನೆ. ಅವರ ಜೊತೆ ನಟಿಸೋಕೆ ಕಾಯುತ್ತಿದ್ದೇನೆ ಎಂದಿದ್ದಾರೆ ರಶ್ಮಿಕಾ.

 • ಬಂದೇ ಬರ್ತಾರೆ ರಶ್ಮಿಕಾ ಬಂದೇ ಬರ್ತಾರೆ..!

  ಬಂದೇ ಬರ್ತಾರೆ ರಶ್ಮಿಕಾ ಬಂದೇ ಬರ್ತಾರೆ..!

  ರಶ್ಮಿಕಾ ಮಂದಣ್ಣಗೆ ಕನ್ನಡದ ಪೊಗರು ಚಿತ್ರದ ಬಗ್ಗೆ ಇಂಟ್ರೆಸ್ಟ್ ಇಲ್ಲ. ಅವರ್ಯಾಕೆ ಪೊಗರು ಬಗ್ಗೆ ಪ್ರಮೋಟ್ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಈಗ ಚಿತ್ರತಂಡವೇ ಉತ್ತರ ಕೊಟ್ಟಿದೆ.

  ಅಂತಹುದ್ದೇನಿಲ್ಲ. ರಶ್ಮಿಕಾ ಖಂಡಿತಾ ಪೊಗರು ಚಿತ್ರದ ಪ್ರಚಾರಕ್ಕೆ ಬರುತ್ತಾರೆ. ನಾವು ಅವರ ಜೊತೆ ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ ನಿರ್ದೇಶಕ ನಂದ ಕಿಶೋರ್.

  ಬಿ.ಕೆ.ಗಂಗಾಧರ್ ನಿರ್ಮಾಣದ ಪೊಗರು, ಫೆಬ್ರವರಿ 19ರಂದು ರಿಲೀಸ್ ಆಗುತ್ತಿದೆ. ಬಿಡುಗಡೆಗೆ ಮುನ್ನ ಒಂದಿಡೀ ತಿಂಗಳು ಚಿತ್ರದ ಪ್ರಚಾರವನ್ನು ಹೈ ಲೆವೆಲ್ಲಿನಲ್ಲಿಡಲು ಚಿತ್ರತಂಡ ಪ್ಲಾನ್ ಮಾಡಿದೆ. ಪೊಗರು ಕನ್ನಡದಲ್ಲಷ್ಟೇ ಅಲ್ಲ, ಹಿಂದಿ, ತಮಿಳು, ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ.

  ಧ್ರುವ ಸರ್ಜಾ ನಾಯಕರಾಗಿರುವ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ.

 • ಬಿಗ್ ಬಿ ಜೊತೆ ರಶ್ಮಿಕಾ ಗುಡ್ ಬೈ

  ಬಿಗ್ ಬಿ ಜೊತೆ ರಶ್ಮಿಕಾ ಗುಡ್ ಬೈ

  ಕಿರಿಕ್ ಪಾರ್ಟಿ ಮೂಲಕ ಕನ್ನಡಿಗರ ಹೃದಯಕ್ಕೇ ಲಗ್ಗೆಯಿಟ್ಟ ರಶ್ಮಿಕಾ ಮಂದಣ್ಣ, ಈಗ ತೆಲುಗು, ತಮಿಳಿನಲ್ಲೂ ಕ್ರಷ್ ಆಗಿದ್ದಾರೆ. ಈ ನ್ಯಾಷನಲ್ ಕ್ರಷ್ ಈಗ ಬಿಗ್ ಜೊತೆ ಗುಡ್ ಬೈ ಹೇಳೋಕೆ ಹೊರಟಿದೆ.

  ಬಾಲಿವುಡ್‍ಗೂ ಕಾಲಿಟ್ಟಿರುವ ರಶ್ಮಿಕಾ ಮಂದಣ್ಣ, ಅಮಿತಾಭ್ ಬಚ್ಚನ್ ಜೊತೆ ನಟಿಸುತ್ತಿರುವ ಹೊಸ ಚಿತ್ರ ಗುಡ್ ಬೈ. ಕ್ವೀನ್, ಸೂಪರ್ 30 ಯಂತಾ ಹಿಟ್ ಚಿತ್ರಗಳನ್ನು ಕೊಟ್ಟಿರುವ ಡೈರೆಕ್ಟರ್ ವಿಕಾಸ್ ಬಹ್ಲ್, ಈ ಚಿತ್ರದ ನಿರ್ದೇಶಕ.

 • ಮಾ.27ಕ್ಕೆ ಪೊಗರುನ ಕರಾಬ್ ಸಾಂಗ್

  khabaru song on marcha 27th

  ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಮತ್ತು ನಂದ ಕಿಶೋರ್ ಕಾಂಬಿನೇಷನ್ನಿನ ಸಿನಿಮಾ ಪೊಗರು. ಟ್ರೇಲರಿನ ಪೊಗರು ನೋಡಿಯೇ ಥ್ರಿಲ್ಲಾಗಿರುವ ಫ್ಯಾನ್ಸ್‍ಗೆ ಮಾರ್ಚ್ 27ಕ್ಕೆ ಕರಾಬು ಸಾಂಗ್ ಮೂಲಕ ಮತ್ತೊಂದು ಥ್ರಿಲ್ ಕೊಡೋಕೆ ರೆಡಿಯಾಗಿದೆ ಪೊಗರು ಟೀಂ.

  ಮಾ.27ರಂದು ಆನಂದ್ ಆಡಿಯೋನಲ್ಲಿ ಪೊಗರು ಚಿತ್ರದ ಕರಾಬ್.. ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗುತ್ತಿದೆ. 

 • ಮಾರ್ಚ್ ಅಂತ್ಯಕ್ಕೆ ಪೊಗರು

  pogaru to release in march

  ಧ್ರುವ ಸರ್ಜಾ ಅಭಿನಯದ ಪೊಗರು ಯಾವಾಗ ರಿಲೀಸ್ ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಚಿತ್ರದ ಶೂಟಿಂಗ್ ಮುಗಿಸಿದ್ದು, ಮೊದಲನೇ ಹಂತದ ಡಬ್ಬಿಂಗ್ ಕೂಡಾ ಮುಗಿದಿದೆಯಂತೆ.

  ದ್ವಿತಿಯಾರ್ಧದ ಡಬ್ಬಿಂಗ್‌ ಕೆಲಸ ನಡೆಯುತ್ತಿದೆ. ಫೆಬ್ರವರಿಯಲ್ಲಿ ಮೊದಲ ಕಾಪಿ ಬರಲಿದೆ. ಮಾರ್ಚ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಕನ್ಫರ್ಮ್ ಮಾಡಿದ್ದಾರೆ ನಿರ್ದೇಶಕ ನಂದ ಕಿಶೋರ್.

  ಧ್ರುವ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅಂತರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡರ್‌ಗಳಾದ ಮೋರ್ಗನ್‌ ಆಸ್ಟೆ, ಕೈಗ್ರೀನ್‌ , ಜಾನ್‌ ಲುಕಾಸ್‌, ಜೋಸ್ಥೆಟಿಕ್ಸ್‌ ಧ್ರುವ ಜೊತೆ ಫೈಟ್ ಮಾಡಿದ್ದು, ಚಿತ್ರಕ್ಕೆ ಸಹಜವಾಗಿಯೇ ದೊಡ್ಡ ಮಟ್ಟದ ಹೈಪ್ ಸಿಕ್ಕಿದೆ. ಈ ಚಿತ್ರ ರಿಲೀಸ್ ಆದ ಮೇಲೆ ಧ್ರುವ ಅವರಿಗಾಗಿಯೇ ಮತ್ತೊಂದು ಸಿನಿಮಾ ಮಾಡಲಿದ್ದೇನೆ. ಪೊಗರು ರಿಲೀಸ್ ಆದ ಮೇಲೆ ಆ ಚಿತ್ರದ ಬಗ್ಗೆ ಹೇಳುತ್ತಾರಂತೆ ನಂದಕಿಶೋರ್.

 • ಮಿಠಾಯಿ ಸೂರಿಗೆ ಮಿಠಾಯಿ ಕೊಡೋರೇ ಇಲ್ವಂತೆ.. ಪಾಪ..!

  mitayi suri has no lady love in yajamana movie

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರದಲ್ಲಿ ಮಿಠಾಯಿ ಸೂರಿ ಅನ್ನೋ ಪಾತ್ರವಿದೆ. ಆ ಪಾತ್ರ ಮಾಡಿರೋದು ಡಾಲಿ ಧನಂಜಯ್. ಟಗರು ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದಿದ್ದ ಧನಂಜಯ್, ಇಲ್ಲಿ ಪುಟ್ಟದೊಂದು ಪಾತ್ರ ಮಾಡಿದ್ದಾರೆ. ಮಿಠಾಯಿ ಸೂರಿಯಾಗಿದ್ದಾರೆ.

  `ನನ್ನದು ಮಿಠಾಯಿ ಸೂರಿ ಪಾತ್ರ. ಹುಂಬತನವೇ ಮೈವೆತ್ತಿಕೊಂಡಿರುವ ಕ್ಯಾರೆಕ್ಟರ್. ಸಿಕ್ಕಾಪಟ್ಟೆ ಕಿರಿಕ್ ಮಾಡುತ್ತೆ. ಆದರೆ ವಿಲನ್ ಅಲ್ಲ' ಎನ್ನುವ ಧನಂಜಯ್ ಅವರಿಗೆ ಅದೊಂದೇ ಬೇಜಾರು.

  ಮಿಠಾಯಿ ಸೂರಿಗೆ ಮಿಠಾಯಿ ತಿನ್ನಿಸೋರೇ ಇಲ್ಲ. ಸಿಂಗಲ್. ಅರ್ಥಾತ್.. ಮಿಠಾಯಿ ಸೂರಿಗೆ ಹೀರೋಯಿನ್ ಇಲ್ಲ.

  ಯಜಮಾನ ಚಿತ್ರ ಮಾರ್ಚ್ 1ರಂದು ತೆರೆಗೆ ಬರುತ್ತಿದ್ದು, ಭರ್ಜರಿ ಓಪನಿಂಗ್ ಎದುರು ನೋಡುತ್ತಿದೆ.

 • ಯಜಮಾನ 800+

  yajamana to release in more than 800 screens

  ದರ್ಶನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಯಜಮಾನ ಸಿನಿಮಾ ರಿಲೀಸ್‍ಗೆ ಕ್ಷಣಗಣನೆ ಶುರುವಾಗಿದೆ. ದರ್ಶನ್ ಚಿತ್ರ ಮಾರ್ಚ್ 1ರಂದು 800ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾಗುತ್ತಿದೆ. ಅದು ದರ್ಶನ್ ಕ್ರೇಜ್.

  ಕಲಾತ್ಮಕ ಚಿತ್ರಗಳ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಿರ್ಮಾಪಕರಾದ ಶೈಲಜಾ ನಾಗ್, ಬಿ.ಸುರೇಶ್ ಇದೇ ಮೊದಲ ಬಾರಿಗೆ ಕಮರ್ಷಿಯಲ್ ಸಿನಿಮಾ ಮಾಡಿದ್ದಾರೆ. ಹರಿಕೃಷ್ಣ, ಕುಮಾರ್ ಜಂಟಿ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್ ನಾಯಕಿಯರು. ದೇವರಾಜ್, ಧನಂಜಯ್, ರವಿಶಂಕರ್, ಸಾಧುಕೋಕಿಲ ನಸಿರುವ ಯಜಮಾನ, ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

 • ಯಜಮಾನ ಚಿತ್ರದಲ್ಲಿ ನರೇಂದ್ರ ಮೋದಿ ಸಂದೇಶ..!

  does yajamana movie have modi;'s make in india concept

  ಸಿನಿಮಾ ರಿಲೀಸ್‍ಗೂ ಮೊದಲೆ ಚಿತ್ರದಲ್ಲಿ ಮನರಂಜನೆ ಜೊತೆಗೆ ಸಂದೇಶವೂ ಇದೆ ಎಂದಿದ್ದರು ದರ್ಶನ್. ಅಷ್ಟೇ ಅಲ್ಲ, ಚಿತ್ರದ ಕಥೆ ಡಿಫರೆಂಟ್ ಎಂದಿದ್ದರು. ಹಾಗೆಯೇ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಒಂದು ಪ್ರಬಲ ಸಂದೇಶವಿದೆ. ಅದು ಮೇಕ್ ಇನ್ ಇಂಡಿಯಾ. 

  ಚಿತ್ರದಲ್ಲಿ ದರ್ಶನ್, ಸ್ವೀಟ್ ಬ್ರಾಂಡ್ ಕಂಪೆನಿಯ ಓನರ್. ಆ ಬ್ರಾಂಡ್ ಕಸಿದುಕೊಳ್ಳೋಕೆ ನಡೆಯುವ ಸಂಚಿನ ವಿರುದ್ಧ ಹೋರಾಡುತ್ತಾನೆ. ಅದು ಮೋದಿಯ ಮೇಕ್ ಇನ್ ಇಂಡಿಯಾ ಕಾನ್ಸೆಪ್ಟಿಗೆ ಹತ್ತಿರವಾಗಿದೆ ಅನ್ನೋದು ದರ್ಶನ್ ಮತ್ತು ಮೋದಿ.. ಇಬ್ಬರಿಗೂ ಅಭಿಮಾನಿಗಳಾಗಿರುವವರ ಮಾತು. 

 • ಯಜಮಾನ ರೈತರ ಕಥೆನಾ..?

  is yajamana stor about farmers

  ಯಜಮಾನ ಚಿತ್ರದಲ್ಲಿರೋದು ರೈತರ ಕಥೆನಾ..? ಅಂಥಾದ್ದೊಂದು ನಿರೀಕ್ಷೆ ಚಿತ್ರದಲ್ಲಿದೆ. ಚಿತ್ರದಲ್ಲಿ ಅಂತಹುದ್ದೇನಿದೆ ಅನ್ನೋ ಮಾತಿಗೆ ದರ್ಶನ್ ಕೊಟ್ಟಿರೋ ಉತ್ತರ ಅದು. ರೈತನೊಬ್ಬ ಕಷ್ಟಪಟ್ಟು ದುಡೀತಾನೆ. ಬೆವರು ಬಸೀತಾನೆ. ಆದರೆ, ಬೆವರನ್ನೇ ಸುರಿಸದ ಮಧ್ಯವರ್ತಿ ಅದರ ಲಾಭ ಪಡೀತಾನೆ. ಇತ್ತ, ಅದೇ ರೈತ ಬೆಂಗಳೂರಿನ ಹೋಟೆಲ್ಲು, ಮಾರ್ಕೆಟ್ಟುಗಳಲ್ಲಿ ಕೂಲಿಯಾಗ್ತಾನೆ. ರೈತನಿಗೆ ನ್ಯಾಯ ಎಲ್ಲಿ ಸಿಗುತ್ತೆ.. ಇಂಥ ಪ್ರಶ್ನೆಯನ್ನ ನಮ್ಮ ಸಿನಿಮಾ ಎತ್ತಿ ಹೇಳುತ್ತೆ ಎಂದಿದ್ದಾರೆ.

  ಸ್ವಲ್ಪ ನೆನಪಿಸಿಕೊಳ್ಳಿ, ಸಾರಥಿ ಚಿತ್ರದ ರೇಷ್ಮೆ ಬೆಳೆಯುವ ರೈತ ಮತ್ತು ಪೊಲೀಸ್ ದೃಶ್ಯವನ್ನು ಕಣ್ಣ ಮುಂದೆ ತಂದುಕೊಳ್ಳಿ. ಆ ಸೀನ್ ಅದೆಷ್ಟು ವೈರಲ್ ಎಂದರೆ, ಈಗಲೂ ಆಗಾಗ್ಗೆ ವಾಟ್ಸಪ್ಪು, ಫೇಸ್‍ಬುಕ್‍ಗಳಲ್ಲಿ ಮೆರೆದಾಡುತ್ತೆ. ಹಾಗಾದರೆ, ಹರಿಕೃಷ್ಣ ಯಜಮಾನನಲ್ಲಿ ಅದೇ ಕಥೆ ಹೇಳಿದ್ದಾರಾ..?

  ಇಷ್ಟೆ ದಿನ ಕಾದಿದ್ದೀವಂತೆ.. ಇನ್ನೊಂದು ದಿನ ಕಾಯೋಕಾಗಲ್ವಾ..? ಯಜಮಾನ ನಾಳೆಯೇ ರಿಲೀಸ್.

 • ರಶ್ಮಿಕಾ ದುಡಿದದ್ದು ಎಷ್ಟು ಕೋಟಿ..? ಇಲ್ಲಿದೆ ಡೀಟೈಲ್ಸ್

  Rashmika Mandanna image

  ರಶ್ಮಿಕಾ ಮಂದಣ್ಣ ಅವರ ಮನೆ ಮೇಲೆ ಐಟಿ ರೇಡ್ ಆದ ನಂತರ ಒಂದೊಂದೇ ಮಾಹಿತಿ ಹೊರಬೀಳುತ್ತಿವೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ನಟಿಯೊಬ್ಬರ ಮನೆ ಮೇಲೆ ಐಟಿ ರೇಡ್ ಆಗಿದ್ದು ಇದೇ ಮೊದಲು. ಸತತ 29 ಗಂಟೆ ವಿಚಾರಣೆ ಮುಗಿಸಿದ ಐಟಿ ಅಧಿಕಾರಿಗಳು, 21ನೇ ತಾರೀಕು ವಿಚಾರಣೆಗೆ ಬರುವಂತೆ ರಶ್ಮಿಕಾ ಮಂದಣ್ಣ, ಮದನ್ ಮಂದಣ್ಣ ಮತ್ತು ಸುಮನ್ ಮಂದಣ್ಣಗೆ ನೋಟಿಸ್ ಕೊಟ್ಟಿದ್ದಾರೆ.

  ಅಂದಹಾಗೆ ರಶ್ಮಿಕಾ ಇದುವರೆಗೆ ತಮ್ಮ ಚಿತ್ರಗಳಿಂದ ಪಡೆದಿರುವ ಸಂಭಾವನೆ ಒಟ್ಟು 2 ಕೋಟಿ 10 ಲಕ್ಷ ಎಂದು ಅವರ ತಂದೆ ಮದನ್ ಮಂದಣ್ಣ ತಿಳಿಸಿದ್ದಾರೆ. ಆ 2 ಕೋಟಿ 10 ಲಕ್ಷದಲ್ಲಿ 70 ಲಕ್ಷ ಟ್ಯಾಕ್ಸ್ ಕಟ್ಟಿದ್ದ, 40 ಲಕ್ಷ ರೂ. ಖರ್ಚು ಮಾಡಿದ್ದಾರೆ. ಉಳಿದ 90 ಲಕ್ಷ ಅಕೌಂಟ್‍ನಲ್ಲಿದೆ ಎಂದಿದ್ದಾರೆ.

  ಅಂದಹಾಗೆ ರಶ್ಮಿಕಾ ಕಿರಿಕ್ ಪಾರ್ಟಿಗೆ ಎರಡೂವರೆ ಲಕ್ಷ, ಚಮಕ್ ಚಿತ್ರಕ್ಕೆ 5 ಲಕ್ಷ ಹಾಗೂ ಅಂಜನೀಪುತ್ರ ಚಿತ್ರಕ್ಕೆ 6 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ ಎಂದು ಸ್ವತಃ ಮದನ್ ಮಂದಣ್ಣ ತಿಳಿಸಿದ್ದಾರೆ. ಸದ್ಯಕ್ಕೆ ರಶ್ಮಿಕಾ ಸಂಭಾವನೆ 30 ರಿಂದ 35 ಲಕ್ಷ. ಇದುವರೆಗೆ ಕೋಟಿ ಸಂಭಾವನೆ ಪಡೆದಿಲ್ಲ ಎಂದಿದ್ದಾರೆ.

 • ರಶ್ಮಿಕಾ ನಿಷೇಧಕ್ಕೆ ಕನ್ನಡ ಸಂಘಟನೆಗಳ ಮನವಿ

  kannada groups demand film chamber to ban rashmika

  ಕನ್ನಡದಲ್ಲಿ ಡಬ್ಬಿಂಗ್ ಮಾಡುವುದು ಭಾರೀ ಕಷ್ಟ ಎಂದಿದ್ದ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಚಿತ್ರರಂಗದಿಂದ ನಿಷೇಧಿಸಬೇಕು ಎಂಬ ಕೂಗು ಬಲವಾಗತೊಡಗಿದೆ. ಚೆನ್ನೈನಲ್ಲಿ ಡಿಯರ್ ಕಾಮ್ರೇಡ್ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿದ್ದ ರಶ್ಮಿಕಾ ಮಂದಣ್ಣ ತಮಗೆ ಕನ್ನಡದಲ್ಲಿ ಡಬ್ಬಿಂಗ್ ಮಾಡುವುದು ಕಷ್ಟ ಎಂದಿದ್ದರು. ಒಬ್ಬ ಕನ್ನಡತಿಯಾಗಿ ಹೀಗೆ ಹೇಳಿದ್ದು ಸರೀನಾ ಎಂದು ಸಿಟ್ಟಿಗೆದ್ದಿರುವ ಕೆಲವು ಕನ್ನಡ ಸಂಘಟನೆಗಳು ರಶ್ಮಿಕಾ ಮಂದಣ್ಣರನ್ನು ಕನ್ನಡ ಚಿತ್ರರಂಗದಿಂದಲೇ ನಿಷೇಧಿಸಬೇಕು ಎಂದು ಒತ್ತಾಯಿಸಿವೆ.

  ಕರ್ನಾಟಕ ಸಂಘಟನೆಗಳ ಒಕ್ಕೂಟ ಈ ಕುರಿತು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದೆ. ಈ ಕುರಿತು ರಶ್ಮಿಕಾ ಮಂದಣ್ಣ ಅವರನ್ನು ಕರೆದು ಮಾತುಕತೆ ನಡೆಸೋದಾಗಿ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ತಿಳಿಸಿದ್ದಾರೆ.

 • ರಶ್ಮಿಕಾ ಫಿಟ್ನೆಸ್ ಸೀಕ್ರೆಟ್ ಯಾರು ಗೊತ್ತಾ..?

  rashmika reveals her firness secret

  ಸೌಥ್ ಇಂಡಿಯಾ ಕ್ರಶ್ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ, ಸದಾ ಫಿಟ್ & ಫೈನ್. ಆಗಾಗ್ಗೆ ರಶ್ಮಿಕಾ ಮಂದಣ್ಣ ವರ್ಕೌಟ್ ಮಾಡ್ತಿರೋ ವಿಡಿಯೋಗಳು ಭರ್ಜರಿ ಸದ್ದು ಮಾಡೋದಿದೆ. ಈಗಲೂ ಅಷ್ಟೆ, ಜಿಮ್‌ನಲ್ಲಿ ಬೆವರು ಸುರಿಸುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಹೀಗಾಗಿಯೇ ರಶ್ಮಿಕಾ ಸದಾ ಫಿಟ್ & ಫೈನ್. ಎಕ್ಸ್ಟ್ರಾ ಕೊಬ್ಬು ಇಲ್ಲದ ಸಪೂರ ದೇಹದ ಬೆಡಗಿಯಾಗಿಯೇ ಉಳಿದಿದ್ದಾರೆ ರಶ್ಮಿಕಾ.

  ಏನಿದು ಫಿಟ್‌ನೆಸ್ ಸೀಕ್ರೆಟ್ ಎಂದರೆ ರಶ್ಮಿಕಾ ಹೇಳೋದು ಅವರ ತಂದೆ ಮಂದಣ್ಣ ಅವರ ಬಗ್ಗೆ. `ನನಗೆ ಚಿಕ್ಕಂದಿನಲ್ಲೇ ನಮ್ಮಪ್ಪ ಫಿಟ್ ನೆಸ್ ಬಗ್ಗೆ ಹೇಳಿಕೊಟ್ಟರು. ನಾನು ಚಿತ್ರರಂಗಕ್ಕೇ ಬಂದಿರಲಿಲ್ಲ. ಆಗಲೇ ಅಪ್ಪ ವರ್ಕೌಟ್ ಮಾಡುವಂತೆ ಹೇಳುತ್ತಿದ್ದರು. ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಯಾವುದರಲ್ಲೂ ಕಡಿಮೆ ಇರಬಾರದು ಎನ್ನುತ್ತಿದ್ದರು. ವರ್ಕೌಟ್ ಮಾಡಿದರೆ ನೆಗೆಟಿವ್ ಆಲೋಚನೆ ದೂರವಾಗುತ್ತದೆ'' ಎಂದಿದ್ದಾರೆ ರಶ್ಮಿಕಾ ಮಂದಣ್ಣ.

 • ರಶ್ಮಿಕಾ ಮಂದಣ್ಣ ಅಲ್ಲ.. ರಶ್ಮಿಕಾ ಮಂಡೂಕ..!!

  chiranjeiivi takes rashmika's anme wrong

  ರಶ್ಮಿಕಾ ಮಂದಣ್ಣ, ಸದ್ಯಕ್ಕೆ ಸೌಥ್ ಇಂಡಿಯಾ ಕ್ರಶ್. ಇಂತಹ ರಶ್ಮಿಕಾ ಮಂದಣ್ಣ, ಈಗ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಸರಿಲೇರು ನೀಕೆವ್ವರು ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಇದೇ ಸಂಕ್ರಾಂತಿಗೆ ರಿಲೀಸ್. ಈಗಾಗಲೇ ಈ ಚಿತ್ರದ ಟ್ರೇಲರ್ ಮತ್ತು ಹಿ ಈಸ್ ಸ್ವೀಟ್ ಹಾಡಿನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ ರಶ್ಮಿಕಾ. ಈ ರಶ್ಮಿಕಾ ಮಂದಣ್ಣ ಅವರನ್ನು ರಶ್ಮಿಕಾ ಮಂಡೂಕ ಎಂದು ಕರೆದವರು ಬೇರೆ ಯಾರೂ ಅಲ್ಲ, ಮೆಗಾಸ್ಟಾರ್ ಚಿರಂಜೀವಿ.

  ಸರಿಲೇರು ನೀಕೆವ್ವರು ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿರಂಜೀವಿ, ರಶ್ಮಿಕಾ ಮಂದಣ್ಣ ಅವರನ್ನು ಹಲವು ಬಾರಿ ರಶ್ಮಿಕಾ ಮಂಡೂಕ ಎಂದೇ ಉಚ್ಚರಿಸಿದ್ರು. ಅದು ತಪ್ಪು ಎನ್ನುವುದು ಕಾರ್ಯಕ್ರಮ ಮುಗಿದ ನಂತರವೂ ಅವರ ಗಮನಕ್ಕೆ ಬರಲಿಲ್ಲ.

  ಹಾಗಂತ ರಶ್ಮಿಕಾ ಮಂದಣ್ಣ, ಚಿರಂಜೀವಿಗೆ ಹೊಸಬರಲ್ಲ. ರಶ್ಮಿಕಾ ಅವರ ಚಲೋ, ಗೀತ ಗೋವಿಂದಂ ಚಿತ್ರದ ಆಡಿಯೋ ರಿಲೀಸ್ನಲ್ಲೂ ರಶ್ಮಿಕಾ ಮಂದಣ್ಣ ಪರಿಚಿತರು. ಗೀತ ಗೋವಿಂದಂ, ಚಿರಂಜೀವಿ ಕುಟುಂಬದ ಬ್ಯಾನರ್ ಸಿನಿಮಾ. ಇಷ್ಟಿದ್ದರೂ ಹೆಸರು ತಪ್ಪಿದ್ದೇಕೆ..? ಗೊತ್ತಿಲ್ಲ.

  ಅಂದಹಾಗೆ ಮಂಡೂಕ ಎಂದರೆ ಕಪ್ಪೆ ಎಂದರ್ಥ. ರಾವಣನ ಪತ್ನಿ ಮಂಡೋದರಿ ಗೊತ್ತಿರಲೇಬೇಕಲ್ಲ, ಮಂಡೋದರಿ ಎಂದರೆ ಕಪ್ಪೆಯ ಉದರದಿಂದ ಜನಿಸಿದವಳು ಎಂದರ್ಥ. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ, ರಶ್ಮಿಕಾ ಮಂಡೂಕ ಆಗಿಬಿಟ್ಟಿದ್ದಾರೆ.

 • ರಶ್ಮಿಕಾ ಮಂದಣ್ಣ ಐಟಿ ಡ್ರಿಲ್ - ಆಸ್ತಿ ಎಷ್ಟು..? ಏನೇನು ಸಿಕ್ತು..?

  rashmika mandanna it raid ends

  ಚಿತ್ರನಟಿ ರಶ್ಮಿಕಾ ಮಂದಣ್ಣ ಮನೆ ಮೇಲಿನ ಐಟಿ ದಾಳಿಯಲ್ಲಿ ಕೆಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ. ರಶ್ಮಿಕಾ ಮಂದಣ್ಣ ಅವರ ಕೊಡಗಿನ ವಿರಾಜಪೇಟೆಯಲ್ಲಿರುವ ಮನೆ, ಕಚೇರಿಗಳ ಮೇಲೆ ಐಟಿ ರೇಡ್ ನಡೆದಿದೆ.

  ಹುಟ್ಟೂರು ಮೈತಾಡಿ ಗ್ರಾಮದಲ್ಲಿ ಕಾಫಿತೋಟ, ಬಿಟ್ಟಂಗಾಲದಲ್ಲಿ ಇತ್ತೀಚೆಗೆ ಖರೀದಿಸಿದ್ದ 5 ಎಕರೆ ಜಾಗ, ಐಷಾರಾಮಿ ಕಾರು ಹಾಗೂ ಅವುಗಳಿಗೆ ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಪರಿಶೀಲನೆ ನಡೆದಿದೆ.

  ಸುಮಾರು 10 ಅಧಿಕಾರಿಗಳು ರಶ್ಮಿಕಾ ಅವರನ್ನು ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ಮಾಡಿದ್ದಾರೆ. ರಶ್ಮಿಕಾ ತಂದೆ ಮದನ್ ಮಂದಣ್ಣ ಅವರ ಮೂಲಕ ರಶ್ಮಿಕಾ ಅವರ ಎಲ್ಲ ವ್ಯವಹಾರಗಳನ್ನೂ ಜಾಲಾಡಿದ್ದಾರೆ.

  ಪಂಜರ್‍ಪೇಟೆಯಲ್ಲಿ ರಶ್ಮಿಕಾ ಅವರಿಗೆ ಸೇರಿದ್ದ ಸೆರನಿಟಿ ಹಾಲ್ ಕಚೇರಿಯ ಮೇಲೆ ದಾಳಿ ಮಾಡಿ ದಾಖಲೆ ಪತ್ರಗಳ ಪರಿಶೀಲನೆ ಮಾಡಲಾಗಿದೆ. ಸಿಬ್ಬಂದಿಯನ್ನೂ ವಿಚಾರಣೆಗೊಳಪಡಿಸಲಾಗಿದೆ.

  ಇತ್ತೀಚೆಗೆ ಖರೀದಿಸಿದ್ದ 5 ಎಕರೆ ಜಾಗದಲ್ಲಿ ಪೆಟ್ರೋಲ್ ಬಂಕ್ ಮತ್ತು ವಸತಿ ಶಾಲೆ ತೆರೆಯುವ ಯೋಜನೆ ಹೊಂದಿದ್ದು, ನೆಲವನ್ನು ಸಮತಟ್ಟು ಮಾಡಿದ್ದರು.

  ಅಂದಹಾಗೆ ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ, ಕಾಂಗ್ರೆಸ್ ಸದಸ್ಯರು. ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯರಾಗಿದ್ದವರು. ಇವರಿಗೆ ಇತ್ತೀಚೆಗೆ ಐಟಿ ದಾಳಿಗೆ ಒಳಗಾದ ಕಾಂಗ್ರೆಸ್ ನಾಯಕರೊಬ್ಬರ ಜೊತೆ ನಂಟಿದೆ ಎನ್ನಲಾಗಿದೆ. ಆದರೆ ಇದನ್ನು ರಶ್ಮಿಕಾ ಮತ್ತವರ ಕುಟುಂಬ ನಿರಾಕರಿಸಿದೆ.

  ರಶ್ಮಿಕಾ ಮನೆಯಲ್ಲಿ 25 ಲಕ್ಷ ಕ್ಯಾಶ್ ಪತ್ತೆ : ರಶ್ಮಿಕಾ ಮನೆಯಲ್ಲಿ 25 ಲಕ್ಷ ಕ್ಯಾಶ್ ಸಿಕ್ಕಿದ್ದು, ಈ ಹಣದ ಮೂಲ ಯಾವುದು ಎನ್ನುವುದಕ್ಕೆ ಸ್ಪಷ್ಟ ಸಮಾಧಾನ ಐಟಿಯವರಿಗೆ ಸಿಕ್ಕಿಲ್ಲ. ರಶ್ಮಿಕಾ ಮನೆಯಿಂದ ಮೂರು ಬ್ಯಾಗ್, ಒಂದು ಸೂಟ್‍ಕೇಸ್‍ನಷ್ಟು ದಾಖಲೆಗಳನ್ನು ಐಟಿಯವರು ಕೊಂಡೊಯ್ದಿದ್ದಾರೆ. ಒಟ್ಟು 29 ಗಂಟೆ ನಡೆದ ವಿಚಾರಣೆಯಲ್ಲಿ 10 ಐಟಿ ಆಫೀಸರ್ಸ್ ಪಾಲ್ಗೊಂಡಿದ್ದರು.

 • ರಶ್ಮಿಕಾ ಮಂದಣ್ಣ ಬೋಲ್ಡ್ ಫೋಟೋಶೂಟ್

  rashmika mandanna poses for a bold photoshoot

  ರಶ್ಮಿಕಾ ಮಂದಣ್ಣ ಬಾಲಿವುಡ್ಡಿಗೆ ಎಂಟ್ರಿ ಕೊಡುತ್ತಿರುವ ಸುದ್ದಿ ಬಿರುಗಾಳಿಯಂತೆ ಓಡುತ್ತಿರುವ ನಡುವೆಯೇ ರಶ್ಮಿಕಾ ಫುಲ್ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ. ಅದು ಬ್ಯಾಕ್‍ಲೆಸ್.

  ಡಾರ್ಕ್ ಪಿಂಕ್ ಬಣ್ಣದ ಬ್ಯಾಕ್‍ಲೆಸ್ ಟಾಪ್‍ನಲ್ಲಿ ರಶ್ಮಿಕಾ ಮತ್ತೇರಿಸುವ ಲುಕ್ಕು ಕೊಟ್ಟಿದ್ದಾರೆ. ಅಫ್‍ಕೋರ್ಸ್.. ಕೆಲವು ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದರೆ, ಇನ್ನೂ ಕೆಲವರು ಗುರ್ರ್ ಎಂದಿದ್ದಾರೆ.

 • ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ

  Rashmika Mandanna Image

  ಸೌತ್ ಇಂಡಿಯಾ ಕ್ರಶ್ ಆಗಿರುವ ಚಿತ್ರನಟಿ ರಶ್ಮಿಕಾ ಮಂದಣ್ಣ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಳಗ್ಗೆ 5.30ರ ಸುಮಾರಿಗೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿರುವ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ರೇಡ್ ಮಾಡಿದ್ದಾರೆ.

  ರಕ್ಷಿತ್ ಶೆಟ್ಟಿಯವರ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ರಶ್ಮಿಕಾ ಅದಾದ ನಂತರ ಕನ್ನಡದಲ್ಲಿ ಪುನೀತ್, ಗಣೇಶ್, ಧ್ರುವ ಸರ್ಜಾ ಜೊತೆ ನಟಿಸಿದ್ದಾರೆ. ತೆಲುಗಿನಲ್ಲಿ ವಿಜಯ್ ದೇವರಕೊಂಡ, ನಾನಿ, ಮಹೇಶ್ ಬಾಬು, ನಾಗಶೌರ್ಯ ಜೊತೆ ನಟಿಸಿದ್ದಾರೆ.

  ಇತ್ತೀಚೆಗೆ ತೆಲುಗಿನಲ್ಲಿ ರಿಲೀಸ್ ಆದ ಸರಿಲೇರು ನೀಕೆವ್ವರು ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಬಹುತೇಕ ಸ್ಟಾರ್ ನಟರ ಜೊತೆ ನಟಿಸುತ್ತಿರುವ ರಶ್ಮಿಕಾ ಇತ್ತೀಚೆಗಷ್ಟೇ ನಾನು ಕೋಟಿ ಸಂಭಾವನೆ ಪಡೆಯುತ್ತಿಲ್ಲ. ಮುಂದೊಂದು ದಿನ ಪಡೆಯುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದರು. ಹಾಗೆ ಹೇಳಿಕೆ ಕೊಟ್ಟ ಕೆಲವೇ ದಿನಗಳಲ್ಲಿ ಈ ಐಟಿ ರೇಡ್ ಆಗಿದೆ.

 • ರಶ್ಮಿಕಾ ಮಂದಣ್ಣ ಸಿನಿಮಾ ಎಂಟ್ರಿಗೆ ಕಾರಣ, ಅಕ್ಕಿ ಜೊತೆಗಿದ್ದ ಆ ಫೋಟೋ..!

  photo with akshay kumar helped rashmikaget roles

  ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತದ ಮೋಸ್ಟ್ ಬ್ಯುಸಿ ಹೀರೋಯಿನ್. ತೆಲುಗಿನಲ್ಲಂತೂ ಆಕೆ ಸದ್ಯಕ್ಕೆ ನಂ.1. ಇಂತಹ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಬಂದಿದ್ದು ಹೇಗೆ..? ಕಿರಿಕ್ ಪಾರ್ಟಿ ಮೂಲಕ ಎಂಟ್ರಿ ಅನ್ನೋದು ಗೊತ್ತು. ಆದರೆ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಕಣ್ಣಿಗೆ ಬಿದ್ದಿದ್ದು ಹೇಗೆ..? ಅದಕ್ಕೆಲ್ಲ ಕಾರಣವಾಗಿದ್ದು ಒಂದು ಫೋಟೋ.

  2014ರಲ್ಲಿ ಫ್ರೆಶ್ ಫೇಸ್ ಆಫ್ ಇಂಡಿಯಾ ಅನ್ನೋ ಒಂದು ಸ್ಪರ್ಧೆ ನಡೆದಿತ್ತು. ಆಗ ಫ್ರೆಶ್ ಫೇಸ್ ಆಗಿ ಆಯ್ಕೆಯಾಗಿದ್ದವರು ರಶ್ಮಿಕಾ ಮಂದಣ್ಣ. ಹಾಗೆ ಪ್ರಶಸ್ತಿ ಗೆದ್ದ ರಶ್ಮಿಕಾರಿಗೆ ಅವಾರ್ಡ್ ಕೊಟ್ಟಿದ್ದವರು ಅಕ್ಷಯ್ ಕುಮಾರ್ ಮತ್ತು ರಾಣಾ ದಗ್ಗುಬಾಟಿ.

  ಆ ಫೋಟೋ ನೋಡಿಯೇ ರಕ್ಷಿತ್ ಮತ್ತು ರಿಷಬ್ ರಶ್ಮಿಕಾರನ್ನು ಕಾಂಟ್ಯಾಕ್ಟ್ ಮಾಡಿದ್ದು. ಅಭಿಮಾನಿಯೊಬ್ಬರ ಪ್ರಶ್ನೆಗೆ ರಶ್ಮಿಕಾ ಕೊಟ್ಟಿರೋ ಉತ್ತರ ಇದು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery