` rashmika mandanna - chitraloka.com | Kannada Movie News, Reviews | Image

rashmika mandanna

 • ಅಭಿಮಾನಿಯ ಅಪ್ಪುಗೆಯ ಬೇಡಿಕೆಗೆ ರಶ್ಮಿಕಾ ಓಕೆ ಅಂತಾರಾ..?

  rashmika's cute fan requests for a hug

  ನೀವು ತುಂಬಾ ಚೆನ್ನಾಗಿದ್ದೀರಿ. ನಿಮ್ಮ ಮುಖ ಚೆಂದ. ನೀವೊಬ್ಬ ಸುಂದರ ಮಹಿಳೆ. ನಿಮ್ಮ ಗೀತಗೋವಿಂದಂ ಚಿತ್ರ ನೋಡಿದ ಮೇಲೆ ಹೆಣ್ಣು ಮಕ್ಕಳನ್ನು ಗೌರವಿಸುವುದು ಹೇಗೆಂದು ಅರ್ಥ ಮಾಡಿಕೊಂಡೆ. ನಾನು ನಿಮ್ಮನ್ನೊಮ್ಮೆ ಭೇಟಿ ಮಾಡಬೇಕು. ಭೇಟಿ ಮಾಡಿದಾಗ ನಿಮ್ಮನ್ನು ಅಪ್ಪಿಕೊಳ್ಳಬೇಕು. 

  ಹೀಗೆಂದು ಅಭಿಮಾನಿಯೊಬ್ಬ ಪತ್ರ ಬರೆದರೆ, ನಟಿಯರ ಪ್ರತಿಕ್ರಿಯೆ ಹೇಗಿದ್ದಿರಬಹುದು. ಆದರೆ, ರಶ್ಮಿಕಾ ಮಂದಣ್ಣ ಈ ಅಭಿಮಾನಿಯ ಅಪ್ಪುಗೆಯ ಬಯಕೆ ಈಡೇರಿಸುವ ಸಾಧ್ಯತೆಯೇ ಹೆಚ್ಚು. ಏಕೆಂದರೆ, ಇಂಥಾದ್ದೊಂದು ಪತ್ರ ಬರೆದಿರುವ ಅಭಿಮಾನಿಯ ವಯಸ್ಸು ಕೇವಲ 8 ವರ್ಷ. ಈ ಪುಟ್ಟ ಅಭಿಮಾನಿಯ ಅಪ್ಪುಗೆಯ ಪತ್ರ ಈಗ ರಶ್ಮಿಕಾ ಫ್ಯಾನ್ಸ್ ಪೇಜುಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. 

 • ಎಲ್ಲೇ ಹೋದರೂ ಇಲ್ಲಿಗೆ ಬರಬೇಕು ಅನ್ನೋದು ಗೊತ್ತಿದೆ : ರಶ್ಮಿಕಾ

  ಎಲ್ಲೇ ಹೋದರೂ ಇಲ್ಲಿಗೆ ಬರಬೇಕು ಅನ್ನೋದು ಗೊತ್ತಿದೆ : ರಶ್ಮಿಕಾ

  ರಶ್ಮಿಕಾ ಮಂದಣ್ಣ ಕನ್ನಡ ಮತ್ತು ಕನ್ನಡ ಚಿತ್ರರಂಗವನ್ನೇ ಮರೆತುಬಿಟ್ಟಿದ್ದಾರೆ. ಅವರಿಗೆ ತೆಲುಗು, ತಮಿಳು ಚಿತ್ರಗಳು ಹಾಗೂ ಅಲ್ಲಿನವರಷ್ಟೇ ಕಾಣುತ್ತಿದ್ದಾರೆ ಎಂದೆಲ್ಲ ಟೀಕಿಸುವವರಿಗೆ ರಶ್ಮಿಕಾ ಮಂದಣ್ಣ ಉತ್ತರ ಕೊಟ್ಟಿದ್ದಾರೆ.

  ನಾನು ಎಲ್ಲಿಗೇ ಹಓದರೂ ಇಲ್ಲಿಗೆ ಬರಬೇಕು ಅನ್ನೋದು ಗೊತ್ತಿದೆ. ಯಾವ ಇಂಡಸ್ಟ್ರಿಗೆ ಹೋದರೂ ಮನೆಗೆ ಬರಲೇಬೇಕು. ನಾನು ಸ್ಯಾಂಡಲ್‍ವುಡ್ ಬಿಟ್ಟಿಲ್ಲ ಎಂದಿದ್ದಾರೆ ರಶ್ಮಿಕಾ ಮಂದಣ್ಣ.

  ಕನ್ನಡ ಚಿತ್ರ ಮಾಡಬೇಕು ಎಂದು ಹಠಕ್ಕೆ ಬಿದ್ದು ಒಪ್ಪಿಕೊಂಡ ಸಿನಿಮಾ ಪೊಗರು. ಸ್ಕ್ರಿಪ್ಟ್ ಮತ್ತು ನನ್ನ ಪಾತ್ರ ಇಷ್ಟ ಆಯ್ತು. ಧ್ರುವ ಮತ್ತು ನಂದ ಸರ್ ಜೊತೆ ಕೆಲಸ ಮಾಡುವ ಎಕ್ಸೈಟ್‍ಮೆಂಟ್ ಇತ್ತು. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಕನ್ನಡ ಸಿನಿಮಾನೂ ಮಾಡ್ತೀನಿ ಅನ್ನೋದು ರಶ್ಮಿಕಾ ಮಂದಣ್ಣ ಸ್ಪಷ್ಟನೆ.

  ಅಂದಹಾಗೆ ಕನ್ನಡದಲ್ಲಿ ಪ್ರಶಾಂತ್ ನೀಲ್ ಮತ್ತು ಯಶ್ ಜೊತೆ ಕೆಲಸ ಮಾಡೋ ಆಸೆಯಿದೆ ಅನ್ನೋದನ್ನ ಬಹಿರಂಗವಾಗಿಯೇ ಹೇಳಿದ್ದಾರೆ ರಶ್ಮಿಕಾ.

 • ಒಂದು ವಾರ ಮೊದಲೇ ಶುರುವಾಗುತ್ತೆ ಯಜಮಾನನ ಕ್ರೇಜ್..!

  yajamana movie craze will begin soon

  ದರ್ಶನ್ ಅಭಿನಯದ ಯಜಮಾನ ಚಿತ್ರ ರಿಲೀಸ್ ಆಗುವುದು ಮಾರ್ಚ್ 01ಕ್ಕೆ. ಮಾರ್ಚ್ 1ರವರೆಗೂ ಕಾಯೋಕ್ ಆಗಲ್ಲ. ನೀವು ಅವತ್ತೇ ರಿಲೀಸ್ ಮಾಡಿ. ಆದರೆ, ನಮಗೆ ಮೊದಲು ಟಿಕೆಟ್ ಕೊಡಿ. ಒಂದು ವಾರ ಮೊದಲೇ ನಮಗೆ ಟಿಕೆಟ್ ಬೇಕು ಎಂದು ಡಿಮ್ಯಾಂಡ್ ಇಟ್ಟಿರೋದು ದರ್ಶನ್ ಫ್ಯಾನ್ಸ್.

  ನಿರ್ಮಾಪಕಿ ಶೈಲಜಾ ನಾಗ್ ಕೂಡಾ ದರ್ಶನ್ ಅಭಿಮಾನಿಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನೇ ಕೊಟ್ಟಿದ್ದಾರೆ. ಒಂದು ವಾರ ಮೊದಲೇ ಆನ್‍ಲೈನ್ ಟಿಕೆಟ್ ಮಾರಾಟಕ್ಕೆ ರೆಡಿಯಾಗುತ್ತಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ತಾಂತ್ರಿಕ ಕೆಲಸಗಳೂ ಆಗಬೇಕಲ್ಲವೇ.. ಹೀಗಾಗಿ ಶೈಲಜಾ ನಾಗ್ ಈಗ ರಿಲೀಸ್ ಆಗುವುದಕ್ಕೂ ಮುನ್ನಾ ಕೆಲಸಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿ.

  ಒಟ್ಟಿನಲ್ಲಿ ದರ್ಶನ್, ರಶ್ಮಿಕಾ ಮಂದಣ್ಣ, ದೇವರಾಜ್, ಧನಂಜಯ್ ಅಭಿನಯದ, ಹರಿಕೃಷ್ಣ ನಿರ್ದೇಶನದ ಸಿನಿಮಾದ ಕ್ರೇಜ್ ರಿಲೀಸ್ ಆಗುವುದಕ್ಕೂ ಒಂದು ವಾರ ಮೊದಲೇ ಶುರುವಾಗಲಿದೆ. ಹಬ್ಬ ಏನಿದ್ದರೂ, ಮಾರ್ಚ್ 1ನೇ ತಾರೀಕಿಗೇ..

 • ಕನಸಲ್ಲಿ ಅಲೆಲೆಲೆ.. ಈ ಫೋಟೋದಲ್ಲಿ ರಶ್ಮಿಕಾ ಮಂದಣ್ಣ ವಯಸ್ಸೆಷ್ಟು..?

  who is cuter junior or senior rashmika

  ಈಗಿನ ರಶ್ಮಿಕಾ ಮಂದಣ್ಣ ಆಗ ಹೇಗಿದ್ದರೋ.. ಅಭಿಮಾನಿಗಳಲ್ಲಿ ಒಂದು ಕುತೂಹಲ ಸಹಜವಾಗಿಯೇ ಇರುತ್ತೆ. ಇದು ರಶ್ಮಿಕಾ ಮಂದಣ್ಣ ಅವರೇ ತೆಗೆಸಿಕೊಂಡಿರೋ ಫೋಟೋ. 2001ರಲ್ಲಿ ಈ ಫೋಟೋಗೆ ಪೋಸು ಕೊಟ್ಟಾಗ ರಶ್ಮಿಕಾಗೆ ಜಸ್ಟ್ 6 ವರ್ಷ. ಆಗಲೇ ತಮಿಳು ಮಾಸ ಪತ್ರಿಕೆಯೊಂದರ ಮುಖಪುಟವನ್ನು ಚೆಂದಗಾಣಿಸಿದ್ದರು ರಶ್ಮಿಕಾ ಮಂದಣ್ಣ. ಈಗ ಆ ನೆನಪು ಹಂಚಿಕೊಂಡಿದ್ದಾರೆ.

  ಅಷ್ಟೇ ಅಲ್ಲ, ಮಗುವಾಗಿದ್ದಾಗ ಪೋಸ್ ಕೊಟ್ಟಿದ್ದಂತೆಯೇ ಒಂದು ಪೋಸ್ ಕೊಟ್ಟಿದ್ದಾರೆ ರಶ್ಮಿಕಾ ಮಂದಣ್ಣ. ದೊಡ್ಡ ರಶ್ಮಿಕಾಗಿಂತ ಪುಟ್ಟ ರಶ್ಮಿಕಾನೇ ಚೆಂದ ಕಾಣಿಸಿದ್ದರೆ.. ಅದು ಆ ಮಗುವಿಗೆ ಹೋಗಬೇಕಿರುವ ಕ್ರೆಡಿಟ್ಟು.

 • ಕನ್ನಡ ಕಷ್ಟ ಎಂದು ತಮಿಳಿನಲ್ಲಿ ಹೇಳಿದ ರಶ್ಮಿಕಾ ಮಂದಣ್ಣ

  rashmika in controversy again

  ರಶ್ಮಿಕಾ ಮಂದಣ್ಣ, ಕನ್ನಡದವರೇ. ಕೊಡಗಿನ ಹುಡುಗಿ. ಹುಟ್ಟಿದ್ದು, ಬೆಳೆದಿದ್ದು, ಓದಿದ್ದು, ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಎಲ್ಲವೂ ಕನ್ನಡದಲ್ಲಿಯೇ. ಆದರೆ ಈಗ ಹೊಸದೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

  ರಶ್ಮಿಕಾ-ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೇಡ್ ಸಿನಿಮಾ ಪ್ರಚಾರಕ್ಕೆ ಚೆನ್ನೈಗೆ ಹೋಗಿದ್ದ ವೇಳೆ ರಶ್ಮಿಕಾ `ನನಗೆ ಕನ್ನಡ ಮಾತಾಡುವುದು ಕಷ್ಟ' ಎಂದು ಸ್ಪಷ್ಟ ತಮಿಳಿನಲ್ಲಿ ಹೇಳಿದ್ದಾರೆ. ಅದೂ ವೇದಿಕೆಯಲ್ಲಿ.

  ಕನ್ನಡ ಸಿನಿಮಾ ಪ್ರಚಾರದ ವೇಳೆ ಕನ್ನಡಕ್ಕಿಂತ ಹೆಚ್ಚು ಇಂಗ್ಲಿಷ್‍ನಲ್ಲಿಯೇ ಮಾತನಾಡುವ ರಶ್ಮಿಕಾ, ತಮಿಳು ಹಾಗೂ ತೆಲುಗಿನಲ್ಲಿ ಇಂಗ್ಲಿಷ್‍ನ್ನು ಬಳಸುವುದು ಕಡಿಮೆಯೇ. 

  ಸಹಜವಾಗಿಯೇ ರಶ್ಮಿಕಾರ ಈ ಧೋರಣೆ ಕನ್ನಡಿಗರನ್ನು ಕೆರಳಿಸಿದೆ. ಮಾತೃಭಾಷೆಯೇ ಕಷ್ಟ ಎನ್ನುವ ನಟಿಯ ಚಿತ್ರವನ್ನು ನಾವೇಕೆ ನೋಡಬೇಕು ಎಂಬ ಅಭಿಯಾನವೇ ಶುರುವಾಗಿದೆ. ಪ್ರಾಬ್ಲಂ ಇರುವುದೇ ಇಲ್ಲಿ. ಬೇರೆ ಭಾಷೆಗಳನ್ನು ಸಹಜವಾಗಿ ಕಲಿತು ಮಾತನಾಡುವ ನಾವು, ನಮಗೆ ಕನ್ನಡ ಬರೋದಿಲ್ಲ ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಸದ್ಯಕ್ಕಂತೂ ರಶ್ಮಿಕಾ ಮಂದಣ್ಣ ವಿವಾದದ ಕೇಂದ್ರಬಿಂದುವಾಗಿದ್ದಾರೆ.

   

 • ಕನ್ನಡ, ದೇವರಕೊಂಡ ಡೇಟಿಂಗ್ ಪ್ರಶ್ನೆಗೆ ರಶ್ಮಿಕಾ ಕೊಟ್ಟ ಉತ್ತರ ಇದು

  rashmika clarifies romors

  ರಶ್ಮಿಕಾ ಮಂದಣ್ಣ ತೆಲುಗು, ತಮಿಳಿನಲ್ಲಿ ಸ್ಟಾರ್ ಆದಮೇಲೆ ಕನ್ನಡ ಮರೆತರು ಎನ್ನುವುದು ಅವರ ಮೇಲಿರುವ ಅತಿದೊಡ್ಡ ಆರೋಪ. ಅದಕ್ಕೆ ತಕ್ಕಂತೆ ರಶ್ಮಿಕಾ ಇತ್ತೀಚೆಗೆ ಚೆನ್ನೈನಲ್ಲಿ `ಕನ್ನಡದಲ್ಲಿ ಡಬ್ ಮಾಡುವುದು ಕಷ್ಟ' ಎಂದಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದಕ್ಕೆ ರಶ್ಮಿಕಾ ಕೊನೆಗೂ ಮೌನ ಮುರಿದಿದ್ದಾರೆ.

  `ನನಗೆ ನನ್ನ ತಾಯಿಯಷ್ಟೇ ಕನ್ನಡವೂ ಮುಖ್ಯ. ನೆಗೆಟಿವ್ ಕಾಮೆಂಟ್ ಮಾಡುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ಅವರು ಹೇಗೆ ಅಂದ್ರೆ ನಾವು ಯಾವುದನ್ನು ಮಾಡಬೇಡಿ ಅಂತೀವೋ ಅದನ್ನೆ ಮಾಡ್ತಾರೆ. ನಾನು ಕನ್ನಡ ಮಾತನಾಡಿದಾಗ ಗುರುತಿಸಲ್ಲ. ಮಾತನಾಡದೇ ಇದ್ದಾಗ ಹುಡುಕಿ ಹುಡುಕೀ ಹೈಲೈಟ್ ಮಾಡ್ತಾರೆ. ಅವರಿಗೆ ಡೋಂಟ್ ಕೇರ್' ಎಂದಿದ್ದಾರೆ ರಶ್ಮಿಕಾ.

  ಇನ್ನು ವಿಜಯ್ ದೇವರಕೊಂಡ ಅವರ ಜೊತೆ ಡೇಟಿಂಗ್‍ನಲ್ಲಿದ್ದೀರಾ ಎಂಬ ಪ್ರಶ್ನೆಗೆ ರಶ್ಮಿಕಾ ಸ್ಟೈಟ್ ಫಾರ್ವರ್ಡ್ ಉತ್ತರ `ನೋ. ಅವರಿಗೂ ಕೆಲಸ ಇದೆ. ನನಗೂ ಕೆಲಸ ಇದೆ. ಎಲ್ಲಕ್ಕಿಂತ ಮಿಗಿಲಾಗಿ ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್. ಇಬ್ಬರಿಗೂ ಪುರುಸೊತ್ತಿಲ್ಲ. ಅಕಸ್ಮಾತ್ ಬಿಡುವು ಸಿಕ್ಕರೂ.. ನಾವಿಬ್ಬರೂ ಡೇಟಿಂಗ್ ಮಾಡಲ್ಲ' ಎಂದಿದ್ದಾರೆ ರಶ್ಮಿಕಾ.

 • ಕಮೆಂಟುಗಳಿಗೆ ಉತ್ತರಿಸೋಕೆ ಟೈಮಿಲ್ಲ - ರಶ್ಮಿಕಾ

  i have no time to respond to trolls

  ಯಜಮಾನ ಚಿತ್ರದ ರಿಲೀಸ್ ಹೊತ್ತಲ್ಲಿ ಮಾತನಾಡಿರುವ ರಶ್ಮಿಕಾ ಮಂದಣ್ಣ, ಟ್ರೋಲ್‍ಗಳಿಗೆ ಉತ್ತರ ಕೊಟ್ಟಿದ್ದಾರೆ. ನಾನು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರ್ತೀನಿ ನಿಜ. ಅದು ಅಭಿಮಾನಿಗಳ ಜೊತೆ ಬೆರೆಯುವ ಒಂದು ಮಾರ್ಗ. ಹಾಗಂತ ಟ್ರೋಲ್ ಮಾಡುವವರಿಗೆಲ್ಲ ಉತ್ತರ ಕೊಡೋಕಾಗಲ್ಲ. ನಾನು ಬ್ಯುಸಿ. ಅವರಿಗೆ ಉತ್ತರ ಕೊಟ್ಟುಕೊಂಡು ನಾನೇಕೆ ನನ್ನ ಟೈಂ ವೇಸ್ಟ್ ಮಾಡಲಿ. ನನಗೆ ಸಾಕಷ್ಟು ಕೆಲಸ ಇದೆ. ಕೆಲವನ್ನು ಸಹಿಸಿಕೊಳ್ಳಲೇಬೇಕು. ಅಷ್ಟು ತಾಳ್ಮೆ ನನಗೂ ಇದೆ ಎಂದಿದ್ದಾರೆ ರಶ್ಮಿಕಾ.

  ಒಳ್ಳೆ ಸಂಗತಿ ಹಂಚಿಕೊಳ್ಳೋಣ. ಮಿಕ್ಕವನ್ನು ಇಗ್ನೋರ್ ಮಾಡೋಣ ಎಂದಿದ್ದಾರೆ. ದಕ್ಷಿಣ ಭಾರತದ ಕೆಲವು ಸ್ಟಾರ್‍ಗಳ ಜೊತೆ ಹೆಸರು ಕೇಳಿ ಬರುತ್ತಿರುವ ಬಗ್ಗೆಯಂತೂ ಜಸ್ಟ್ ಇಗ್ನೋರ್. ತಲೆ ಕೆಡಿಸಿಕೊಳ್ಳಲ್ಲ ಎಂದಷ್ಟೆ ಉತ್ತರಿಸಿದ್ದಾರೆ ರಶ್ಮಿಕಾ ಮಂದಣ್ಣ.

 • ಕಿರಿಕ್ ಪಾರ್ಟಿ ಕಿರಿಕ್ THE END

  ಕಿರಿಕ್ ಪಾರ್ಟಿ ಕಿರಿಕ್ THE END

  ಕಿರಿಕ್ ಪಾರ್ಟಿ ಚಿತ್ರದ ವರ್ಷಗಳ ವಿವಾದವೊಂದು ಸದ್ದಿಲ್ಲದೆ ಸುಖಾಂತ್ಯವಾಗಿದೆ. ಕಿರಿಕ್ ಪಾರ್ಟಿ ಚಿತ್ರದಲ್ಲಿ ಬಳಸಿದ್ದ ಹೇ ಹೂ ಆರ್ ಯೂ.. ಹಾಡಿನ ಮ್ಯೂಸಿಕ್, ಶಾಂತಿ ಕ್ರಾಂತಿಯ ಮಧ್ಯರಾತ್ರಿಲಿ.. ಹಾಡಿನ ಮ್ಯೂಸಿಕ್‍ನ್ನು ಹೋಲುತ್ತಿದೆ. ಇದು ಕಾಪಿರೈಟ್ ಆಕ್ಟ್ ಉಲ್ಲಂಘನೆ ಎಂದು ಕೋರ್ಟ್ ಮೆಟ್ಟಿಲೇರಿದ್ದರು ಲಹರಿ ವೇಲು. ಕಿರಿಕ್ ಪಾರ್ಟಿಗೆ ಅಜನೀಶ್ ಲೋಕನಾಥ್ ಮ್ಯೂಸಿಕ್ ಇದ್ದರೆ, ರಿಷಬ್ ಶೆಟ್ಟಿ ನಿರ್ದೇಶನವಿತ್ತು.

  ಅತ್ತ.. ಹಂಸಲೇಖ ಸಂಗೀತ ನೀಡಿದ್ದ ಶಾಂತಿ ಕ್ರಾಂತಿ ಚಿತ್ರದ ಹಾಡಿನ ರೈಟ್ಸ್ ಲಹರಿ ವೇಲು ಬಳಿಯಿತ್ತು. ಅದಾದ ಬಳಿಕ ವಿವಾದ ಏನೇನೋ ಆಗಿ.. ಈಗ ಸುಖಾಂತ್ಯ ಕಂಡಿದೆ. ಅದೂ ರಾಜೀ ಸಂಧಾನದ ಮೂಲಕ ಎನ್ನುವುದು ವಿಶೇಷ.

  ಪ್ರೀತಿ ಮತ್ತು ಪರಸ್ಪರ ಗೌರವ ನೀಡುವುವವರು ಪರಸ್ಪರ ಭೇಟಿಯಾದಾಗ, ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಟ್ವೀಟ್ ಮಾಡಿರುವ ರಕ್ಷಿತ್ ಶೆಟ್ಟಿ, ಪರಸ್ಪರ ಭೇಟಿಯಾದಾಗ ಎಲ್ಲವೂ ಸರಿ ಹೋಗಿದೆ ಎಂಬರ್ಥದಲ್ಲಿ ಹೇಳಿದ್ದಾರೆ.

  ಅತ್ತ ಲಹರಿ ವೇಲು ಕೂಡಾ ಅಷ್ಟೆ, ನಾವು ಒಂದೇ ಇಂಡಸ್ಟ್ರಿಯವರು. ನನಗೆ ಯಾರ ವಿರುದ್ಧವೂ ದ್ವೇಷ  ಇಲ್ಲ. ನಾನು ಮೌಲ್ಯಗಳಿಗಾಗಿ ಹೋರಾಡುವವನು. ಸಣ್ಣ ಪುಟ್ಟ ಅಚಾತುರ್ಯಗಳಾಗುವುದು ಸಹಜ. ಆದರೆ, ಕೆಲವು ನೀತಿ ನಿಯಮಗಳಿರುತ್ತವೆ. ಅದನ್ನು ಯಾರೂ ಮೀರಬಾರದು. ಪ್ರೀತಿಗೆ ತಲೆಬಾಗಬೇಕು. ಇದಕ್ಕಾಗಿ ನಾವು ರಕ್ಷಿತ್ ಶೆಟ್ಟಿ ಜೊತೆಗಿರುತ್ತೇವೆ ಎಂದಿದ್ದಾರೆ ಲಹರಿ ವೇಲು.

  ಒಟ್ಟಿನಲ್ಲಿ ವಿವಾದಕ್ಕೆ ಇತಿಶ್ರೀ ಹಾಡಲಾಗಿದೆ.

 • ಕೀಳುಮಟ್ಟದ ಟ್ರೋಲ್ : ರೊಚ್ಚಿಗೆದ್ದ ರಶ್ಮಿಕಾ ಕೊಟ್ಟ ಖಡಕ್ ಉತ್ತರ

  rashmika fumes at trolls for her derogatory comments

  ರಶ್ಮಿಕಾ ಮಂದಣ್ಣ, ಈಗ ಸೌಥ್ ಇಂಡಿಯಾ ಕ್ರಶ್. ಕನ್ನಡದಲ್ಲಷ್ಟೇ ಅಲ್ಲ, ತೆಲುಗಿನಲ್ಲೂ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈಗ ತಮಿಳಿಗೂ ಕಾಲಿಟ್ಟಿದ್ದಾರೆ. ಇಷ್ಟೆಲ್ಲ ಫೇಮಸ್ ಆಗಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಟ್ರೋಲ್ಗೆ ಗುರಿಯಾಗಿರುವ ನಟಿ ರಶ್ಮಿಕಾ. ಕೆಲವಂತೂ ಹೊಲಸು ಭಾಷೆಯಲ್ಲಿ, ಕೀಳು ಅಭಿರುಚಿಯಲ್ಲಿರುತ್ತವೆ. ಇತ್ತೀಚೆಗೆ ರಶ್ಮಿಕಾ ತಮ್ಮ ಬಾಲ್ಯದ ದಿನಗಳದ್ದೊಂದು ಫೋಟೋ ಪೋಸ್ಟ್ ಮಾಡಿದ್ದರು. ಮುದ್ದು ಮುದ್ದಾಗಿ ಕಾಣುವ ಪುಟಾಣಿ ರಶ್ಮಿಕಾ ಫೋಟೋವನ್ನೂ ಬಿಡದೆ ಕೆಟ್ಟ ಕೆಟ್ಟ ಭಾಷೆಯಲ್ಲಿ ಟ್ರೋಲ್ ಮಾಡಲಾಗಿದೆ. ಹೀಗಾಗಿಯೇ ಈ ಬಾರಿ ರಶ್ಮಿಕಾ ಗರಂ ಆಗಿದ್ದಾರೆ.

  ‘ನಟರ ಬಗ್ಗೆ ಕಮೆಂಟ್‌ ಮಾಡೋದ್ರಿಂದ ನಿಮಗೇನು ಸಿಗುತ್ತೋ ನನಗೆ ಗೊತ್ತಿಲ್ಲ. ಬಹುಶಃ, ಕಮೆಂಟ್‌ ಮಾಡೋಕೆ ನಾವು ಸುಲಭವಾಗಿ ಸಿಗುತ್ತೇವೆ ಎನ್ನುವುದೇ ಕಾರಣ ಇರಬೇಕು. ಪಬ್ಲಿಕ್‌ ಫಿಗರ್‌ ಆದ ತಕ್ಷಣ  ನೀವು ಹೇಗೆ ಬೇಕಾದರೂ ನಿರ್ಲಜ್ಜವಾಗಿ ಮಾತನಾಡಬಹುದು. ಟಾರ್ಗೆಟ್‌ ಮಾಡಬಹುದು ಎಂದಲ್ಲ. ಅನೇಕರು ಇಂಥ ಕೆಟ್ಟ ಕಾಮೆಂಟ್ಸ್‌, ಟ್ರೋಲ್ಸ್‌ನ್ನು ನಿರ್ಲಕ್ಷಿಸಿ ಎನ್ನುತ್ತಿದ್ದಾರೆ. ನಾನೂ ಅದನ್ನೇ ಮಾಡಿದ್ದೇನೆ.

  ನಮ್ಮ ಕೆಲಸದ ಬಗ್ಗೆ ಏನಾದರೂ ಹೇಳುವುದಿದ್ದರೆ.. ಖಂಡಿತಾ ಹೇಳಿ, ನಿಮಗೆ ನಮ್ಮ ವೃತ್ತಿಯ ಬಗ್ಗೆ ಮಾತನಾಡೋಕೆ ಹಕ್ಕಿದೆ. ಆದರೆ, ನಮ್ಮ ವೈಯಕ್ತಿಕ ಬದುಕು, ಕುಟುಂಬದ ವಿಷಯದಲ್ಲಿ ಮಾತನಾಡುವ ಹಕ್ಕು ನಿಮಗ್ಯಾರಿಗೂ ಇಲ್ಲ. ಪ್ರತಿ ವೃತ್ತಿಗೂ ಒಂದು ಗೌರವವಿದೆ. ಮನುಷ್ಯರಾದವರು ಪರಸ್ಪರ ಗೌರವಿಸೋದನ್ನು ಕಲಿಯಬೇಕು ಎಂದಿದ್ದಾರೆ ರಶ್ಮಿಕಾ. ಚಿತ್ರರಂಗದ ಹಲವರು ರಶ್ಮಿಕಾಗೆ ಬೆಂಬಲ ಸೂಚಿಸಿದ್ದಾರೆ.

 • ಕುರಿ ಕಾಯ್ತಾವ್ರೆ ಕಿರಿಕ್ ಸುಂದರಿ

  rashmika in de glam role for her next film

  ಸೌಥ್ ಇಂಡಿಯಾ ಕ್ರಷ್ ಆಗಿರುವ ರಶ್ಮಿಕಾ ಮಂದಣ್ಣ, ಈಗ ಕುರಿ ಕಾಯುತ್ತಿದ್ದಾರೆ. ನೀವೇ ನೋಡಿ.. ಫೋಟೋ ಇಲ್ಲೇ ಇದೆ. ಮೇಕಪ್ಪಿಲ್ಲದೆ.. ಕಾಟನ್ ಸೀರೆಯಲ್ಲಿ.. ಕೋಲು ಹಿಡಕೊಂಡು ಕುರಿ ಕಾಯ್ತಾ ನಿಂತವ್ರೆ ರಶ್ಮಿಕಾ ಮಂದಣ್ಣ. ರಿಯಲ್ ಲೈಫಲ್ಲೂ ಶ್ರೀಮಂತೆಯೇ ಅಗಿರುವ ರಶ್ಮಿಕಾ  ಈ ವೇಷದಲ್ಲಿ ಕಾಣಿಸಿಕೊಂಡಿರೋದು ತಮಿಳು ಚಿತ್ರಕ್ಕಾಗಿ.

  ತಮಿಳಿನಲ್ಲಿ ಕಾರ್ತಿ ಜೊತೆ ನಟಿಸುತ್ತಿರುವ ರಶ್ಮಿಕಾ, ಆ ಚಿತ್ರದಲ್ಲಿ ಡಿ ಗ್ಲಾಮ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಭಾಗ್ಯರಾಜ್ ನಿರ್ದೇಶನದ ಆ ಚಿತ್ರಕ್ಕೆ ಇನ್ನೂ ಟೈಟಲ್ ಇಟ್ಟಿಲ್ಲ

 • ಕೆಸರು ಗದ್ದೆಯಲ್ಲಿ ಕೃಷಿಗಿಳಿದ ರಶ್ಮಿಕಾ ಮಂದಣ್ಣ

  ಕೆಸರು ಗದ್ದೆಯಲ್ಲಿ ಕೃಷಿಗಿಳಿದ ರಶ್ಮಿಕಾ ಮಂದಣ್ಣ

  ನ್ಯಾಷನಲ್ ಕ್ರಷ್ ಆಗಿರುವ ರಶ್ಮಿಕಾ ಮಂದಣ್ಣ, ಕೆಸರು ಗದ್ದೆಯಲ್ಲಿ ಟ್ರಿಲ್ಲರ್ ಹಿಡಿದು ಕೃಷಿ ಮಾಡಲು ಹೊರಟರೆ ಹೇಗಿರಬೇಡ.. ಅದೇ ಆಗಿರೋದು.. ರಶ್ಮಿಕಾ ಮಂದಣ್ಣ, ಅಪ್ಪಟ ರೈತ ಮಗಳ ಡ್ರೆಸ್‍ನಲ್ಲಿ ಕೃಷಿ ಮಾಡುತ್ತಿರೋ ದೃಶ್ಯವೊಂದು ವೈರಲ್ ಆಗಿದೆ.

  ಅಂದಹಾಗೆ.. ಒನ್ಸ್ ಎಗೇಯ್ನ್.. ಇದೂ ಕೂಡಾ ಸಿನಿಮಾದ ದೃಶ್ಯವೇ ಬಿಡಿ. ರಿಯಲ್ ಅಲ್ಲ. ತಮಿಳಿನ ಸುಲ್ತಾನ್ ಚಿತ್ರದ ಶೂಟಿಂಗ್ ಸೀನ್ ಅಷ್ಟೆ. 

 • ಜನವರಿ 29ಕ್ಕೆ ಪೊಗರು

  ಜನವರಿ 29ಕ್ಕೆ ಪೊಗರು

  ಕನ್ನಡದ ಮೊದಲ ಸ್ಟಾರ್ ಸಿನಿಮಾ ರಿಲೀಸ್ ಆಗೋಕೆ ಮುಹೂರ್ತ ಕೂಡಿ ಬಂದಂತಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು, 2020ರಲ್ಲಿ ಕಂಪ್ಲೀಟ್ ಸೆನ್ಸೇಷನ್ ಸೃಷ್ಟಿಸಿತ್ತು. ಈಗ ಸಿನಿಮಾ ರಿಲೀಸ್ ಆಗೋಕೆ ಡೇಟ್ ಫಿಕ್ಸ್ ಮಾಡಿದೆ. ಜನವರಿ 29ಕ್ಕೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

  ನಂದಕಿಶೋರ್ ನಿರ್ದೇಶಿಸಿರುವ ಚಿತ್ರ ಕನ್ನಡದಲ್ಲಷ್ಟೇ ಅಲ್ಲ, ತಮಿಳು, ತೆಲುಗಿನಲ್ಲೂ ಬರುತ್ತಿದೆ. ಹಾಲಿವುಡ್ ನಟರೂ ನಟಿಸಿರುವ ಚಿತ್ರವಿದು. ಸಹಜವಾಗಿಯೇ ಹೆವಿ ನಿರೀಕ್ಷೆ ಇದೆ.

  ಜನವರಿ 29ರ ಹೊತ್ತಿಗೆ ಕರ್ನಾಟಕದಲ್ಲಿ ಪ್ರೇಕ್ಷಕರ ಭರ್ತಿಗೆ ಇರುವ ನಿರ್ಬಂಧ ಸಡಿಲಿಕೆಯಾಗುವ ನಿರೀಕ್ಷೆಯೂ ಇದೆ.

 • ತಮಿಳಿನ `ಸೆಮ್ಮ ತಿಮಿರು'ನಲ್ಲಿ ಧ್ರುವ ಸರ್ಜಾ

  ತಮಿಳಿನ `ಸೆಮ್ಮ ತಿಮಿರು'ನಲ್ಲಿ ಧ್ರುವ ಸರ್ಜಾ

  ಕನ್‍ಫ್ಯೂಸ್ ಏನೂ ಆಗಬೇಡಿ. ಧ್ರುವ ಸರ್ಜಾ ತಮಿಳು ಚಿತ್ರವನ್ನೇನು ಒಪ್ಪಿಕೊಂಡಿಲ್ಲ. ಆದರೆ ತಮಿಳು ಚಿತ್ರರಂಗಕ್ಕೆ ಹೋಗುತ್ತಿದ್ದಾರೆ. ಚಿತ್ರದ ಹೆಸರು ಸೆಮ್ಮ ತಿಮಿರು. ಕನ್ನಡದ ಪೊಗರು ಚಿತ್ರ ತಮಿಳಿನಲ್ಲೂ ರಿಲೀಸ್ ಆಗುತ್ತಿದ್ದು, ತಮಿಳಿನಲ್ಲಿ ಸೆಮ್ಮ ತಿಮಿರು ಅನ್ನೋ ಹೆಸರಿಡಲಾಗಿದೆ.

  ಬಹುಶಃ ಜನವರಿ ಅಂತ್ಯ ಅಥವಾ ಫೆಬ್ರವರಿಯಲ್ಲಿ ಪೊಗರು ರಿಲೀಸ್ ಆಗಬಹುದು. ಒಟ್ಟಿಗೇ ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲಿ ಸಿನಿಮಾ ರಿಲೀಸ್ ಮಾಡೋ ಪ್ಲಾನ್‍ನಲ್ಲಿದೆ ಪೊಗರು ಟೀಂ. ಬಿ.ಕೆ. ಗಂಗಾಧರ್ ನಿರ್ಮಾಣದ ಚಿತ್ರಕ್ಕೆ ನಂದಕಿಶೋರ್ ಡೈರೆಕ್ಟರ್. ಧ್ರುವ ಸರ್ಜಾ ಎದುರು ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದು, ಈಗಾಗಲೇ ಚಂದನ್ ಶೆಟ್ಟಿ ನಿರ್ದೇಶಿಸಿರುವ ಹಾಡುಗಳು ಸಿಕ್ಕಾಪಟ್ಟೆ ಹಿಟ್ ಆಗಿವೆ.

 • ತೆಲುಗಿನಲ್ಲೂ ಖರಾಬು ದಾಖಲೆ

  pogaru karabuu song image

  ಧ್ರುವ ಸರ್ಜಾ ಅಭಿನಯದ ಪೊಗರು ತೆಲುಗಿನಲ್ಲೂ ಬಂದಾಗಿದೆ. ಕನ್ನಡದಲ್ಲಿ ಈಗಾಗಲೇ 10 ಕೋಟಿ ವೀಕ್ಷಣೆ ಪಡೆದಿರುವ ಹಾಡು, ತೆಲುಗಿನಲ್ಲೂ ರೋಮಾಂಚನ ಸೃಷ್ಟಿಸಿದೆ. ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 100 ಮಿಲಿಯನ್ ವ್ಯೂವ್ಸ್ ಪಡೆದುಕೊಂಡಿದೆ.

  ಚಂದನ್ ಶೆಟ್ಟಿ ರಚಿಸಿ, ಸಂಗೀತ ನೀಡಿರುವ ಹಾಡು ಖರಾಬು ಸಾಂಗ್. ಪಡ್ಡೆ ಹುಡುಗರಿಗೆ ಸಿಕ್ಕಾಪಟ್ಟೆ ಇಷ್ಟವಾಗಿರುವ ಹಾಡು, ತೆಲುಗಿನಲ್ಲಿ ರಶ್ಮಿಕಾ ಮಂದಣ್ಣ ಅವರಿಂದ ಹೆಚ್ಚು ಆಕರ್ಷಣೆ ಪಡೆದುಕೊಂಡಿದೆ. ಧ್ರುವ ಸರ್ಜಾಗೆ ತೆಲುಗಿನಲ್ಲಿದು ಮೊದಲ ಪ್ರಯತ್ನ.

  you_tube_chitraloka1.gif

  ತೆಲುಗಿನಲ್ಲಿ ಅಲಾ ವೈಕುಂಠಪುರಂಲೋ ಚಿತ್ರದ ರಾಮುಲೋ.. ರಾಮುಲಾ ಹಾಡಿದ್ದ ಅನುರಾಗ್ ಕುಲಕರ್ಣಿ ಹಾಡಿದ್ದಾರೆ. ನಂದಕಿಶೋರ್ ನಿರ್ದೇಶನದ ಚಿತ್ರಕ್ಕೆ ಬಿ.ಕೆ.ಗಂಗಾಧರ್ ನಿರ್ಮಾಪಕ.

   

 • ತೆಲುಗುಗೆ ಪೊಗರಿನ ಖರಾಬ್ ಸಾಂಗ್

  pogaru image

  ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರ ರಿಲೀಸ್`ಗೆ ರೆಡಿ. ಸದ್ಯಕ್ಕೆ ಈ ಚಿತ್ರದ ಖರಾಬು ಸಾಂಗ್ ಸಿಕ್ಕಾಪಟ್ಟೆ ಹವಾ ಎಬ್ಬಿಸಿಬಿಟ್ಟಿದೆ. ಕನ್ನಡದಲ್ಲಿ ಈಗಾಗಲೇ 9 ಕೋಟಿಗೂ ಹೆಚ್ಚು ಜನ ನೋಡಿರೋ ಹಾಡಿದು. ಈಗ ಈ ಹಾಡಿನ ತೆಲುಗು ವರ್ಷನ್ ತೆಲುಗಿನಲ್ಲಿ ಆಗಸ್ಟ್ 6ರಂದು ರಿಲೀಸ್ ಆಗುತ್ತಿದೆ. ತೆಲುಗಿಗೆ ಧ್ರುವ ಸರ್ಜಾ ಹೊಸಬರಾದರೂ, ರಶ್ಮಿಕಾ ಮಂದಣ್ಣ, ಟಾಲಿವುಡ್ ಪ್ರೇಕ್ಷಕರ ಹಾಟ್ ಫೇವರಿಟ್. ತೆಲುಗಿನಲ್ಲಿ ಸತತ ಹಿಟ್ ಕೊಟ್ಟಿರೋ ರಶ್ಮಿಕಾ ಇರೋದ್ರಿಂದ ಈ ಹಾಡು ತೆಲುಗಿನಲ್ಲೂ ಸೂಪರ್ ಹಿಟ್ ಆಗುವ ನಿರೀಕ್ಷೆ ಇದೆ.

  you_tube_chitraloka1.gif

  ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರಕ್ಕೆ ಬಿ.ಕೆ. ಗಂಗಾಧರ್ ನಿರ್ಮಾಪಕ. ಧ್ರುವ ಸರ್ಜಾ ಜೊತೆಗೆ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್, ಡಾಲಿ ಧನಂಜಯ್, ರವಿಶಂಕರ್, ಮಯೂರಿ, ಸಾಧುಕೋಕಿಲ.. ಮೊದಲಾದವರು ನಟಿಸಿದ್ದಾರೆ. ಚಂದನ್ ಶೆಟ್ಟಿ, ಸ್ವತಃ ಸಂಗೀತ ನೀಡಿ, ಬರೆದು ಹಾಡಿರುವ ಖರಾಬ್ ಸಾಂಗ್ ತೆಲುಗಿನಲ್ಲೂ ಮೋಡಿ ಮಾಡುವ ನಿರೀಕ್ಷೆ ಇದೆ.

 • ದರ್ಶನ್ ಬಗ್ಗೆ ಇದ್ದ ಭಯ ಸೆಟ್ಟಿಗೆ ಹೋದ ಮೇಲೆ ಹೋಯ್ತು - ರಶ್ಮಿಕಾ

  rashmika talks about her working experience with darshan

  ದರ್ಶನ್ ಜೊತೆ ನನಗಿದು ಮೊದಲನೇ ಸಿನಿಮಾ. ಈ ಮೊದಲು ಬಂದಿದ್ದ ಆಫರ್, ಡೇಟ್ಸ್ ಪ್ರಾಬ್ಲಂನಿಂದಾಗಿ ಕೈ ತಪ್ಪಿತ್ತು. ಈ ಬಾರಿ ಹಾಗಾಗಲಿಲ್ಲ. ಇಷ್ಟಿದ್ದರೂ, ಒಂದು ಆತಂಕ ಇದ್ದೇ ಇತ್ತು. ದರ್ಶನ್ ದೊಡ್ಡ ಸ್ಟಾರ್.. ಹೇಗೋ ಏನೋ.. ಎಂಬ ಆತಂಕವದು. ಆ ಆತಂಕ ಸೆಟ್ಟಿಗೆ ಹೋಗಿ ದರ್ಶನ್ ಜೊತೆ ಕುಳಿತ ಕೆಲವೇ ನಿಮಿಷಗಳಲ್ಲಿ ಮಾಯವಾಗಿ ಬಿಡ್ತು..

  ದರ್ಶನ್ ಕುರಿತು ಉತ್ಸಾಹದಿಂದ ಹೀಗೆ ಹೇಳ್ತಾ ಹೋಗ್ತಾರೆ ರಶ್ಮಿಕಾ ಮಂದಣ್ಣ. ಯಜಮಾನ ಚಿತ್ರದಲ್ಲಿ ಆಕೆಯೇ ಯಜಮಾನಿ.. ಅರ್ಥಾತ್ ನಾಯಕಿ. 

  ದರ್ಶನ್‍ಗೆ ಅಹಂಕಾರವಿಲ್ಲ. ಎಲ್ಲರೊಂದಿಗೆ ಸರಳವಾಗಿ ಬೆರೆಯುವ ವ್ಯಕ್ತಿತ್ವ ಅವರದ್ದು ಎಂದಿದ್ದಾರೆ ರಶ್ಮಿಕಾ ಮಂದಣ್ಣ. ದರ್ಶನ್ ಮತ್ತು ನನ್ನ ಕೆಮಿಸ್ಟ್ರಿ ಅದ್ಭುತವಾಗಿದೆ. ತೆರೆ ಮೇಲೆ ಬಂದಾಗ ಕಾಮಿಡಿ, ರೊಮ್ಯಾನ್ಸ್ ಎಲ್ಲವೂ ಇದೆ. ನೋಡೋಕೆ ಚೆಂದ ಚೆಂದ. ದರ್ಶನ್ ಜೊತೆ ನಟಿಸುವುದೂ ಒಂದು ಒಳ್ಳೆಯ ಎಕ್ಸ್‍ಪೀರಿಯನ್ಸ್ ಎಂದಿದ್ದಾರೆ ರಶ್ಮಿಕಾ ಮಂದಣ್ಣ.

  ಶೈಲಜಾ ನಾಗ್ ನಿರ್ಮಾಣದ ಸಿನಿಮಾಗೆ ಹರಿಕೃಷ್ಣ, ಪಿ.ಕುಮಾರ್ ನಿರ್ದೇಶನವಿದೆ. ರಶ್ಮಿಕಾ ಜೊತೆ ತಾನ್ಯಾ ಹೋಪ್ ಕೂಡಾ ಚಿತ್ರದ ನಾಯಕಿ.

 • ದ್ವೇಷಿಸುವವರನ್ನು ಏನು ಮಾಡಬೇಕು..? - ರಶ್ಮಿಕಾ ಹೇಳಿದ್ದು 100% ಸತ್ಯ..!

  rashmika ansers how to deal with haters

  ಜೀವನದಲ್ಲಿ ಪ್ರೀತಿಸುವವರು, ದ್ವೇಷಿಸುವವರು ಇದ್ದೇ ಇರುತ್ತಾರೆ. ಅವರಿದ್ದರೇನೇ ಜೀವನ. ಹಾಗಾದರೆ ನಮ್ಮನ್ನು ದ್ವೇಷಿಸುವವರನ್ನು ಏನು ಮಾಡಬೇಕು..? ಅದಕ್ಕೆ ನಟಿ ರಶ್ಮಿಕಾ ಮಂದಣ್ಣ ಒಂದು ಸೂಪರ್ ಉತ್ತರ ಕೊಟ್ಟಿದ್ದಾರೆ.

  `ನಿಮ್ಮನ್ನು ದ್ವೇಷಿಸುವವರ ಎದುರು ನೀವು ಸೂರ್ಯನ ಕಿರಣಗಳಂತೆ ಬೆಳಗಬೇಕು. ಅದರ ಬೆಳಕಿನಿಂದ ಅವರಿಗೆ ಕಣ್ಣು ಕಾಣದಂತಾಗುತ್ತದೆ' ಎಂದಿದ್ದಾರೆ ರಶ್ಮಿಕಾ.

  ಲಾಕ್ ಡೌನ್ ಕಾರಣದಿಂದಾಗಿ 2 ತಿಂಗಳು ಮನೆಯಲ್ಲೇ ಉಳಿದಿಕೊಂಡಿರುವ ರಶ್ಮಿಕಾ, ವಿಶ್ರಾಂತಿ ಸುಖ ಅನುಭವಿಸುತ್ತಿದ್ದಾರೆ. ತುಂಬಾ ದಿನಗಳ ಕೆಲಸ ಮುಗಿಸಿ ಮನೆಗೆ ಬಂದರೆ ಇಂತಹ ಪ್ರೀತಿ ಸಿಗುತ್ತದೆ ಎಂದಿರುವ ರಶ್ಮಿಕಾ, ದ್ವೇಷಿಸುವವರಿಗೆ ಕೊಟ್ಟಿರೋ ಉತ್ತರ ಇದು.

 • ನಿನಗೆ ಸಾಟಿಯೇ ಇಲ್ಲ.. ರಶ್ಮಿಕಾ ನಾಪತ್ತೆಯಾದ್ರಲ್ಲ..!

  rashmika missing in Sarileku Neekevvaru teaser

  ಇದು ತೆಲುಗು ಸಿನಿಮಾ ಸ್ಟೋರಿ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸರಿಲೇಕು ನೀಕೆವ್ವರು ಚಿತ್ರದ ಟೀಸರ್ ಹೊರಬಂದಿದೆ. ೧.೨೭ ನಿಮಿಷದ ಟೀಸರಿನಲ್ಲಿ ಅಬ್ಬರಿಸಿರುವುದು ಮಹೇಶ್ ಬಾಬು. ಅಫ್‌ಕರ‍್ಸ್.. ಅವರೇ ಹೀರೋ. ಅವರನ್ನು ಬಿಟ್ಟರೆ ಗಮನ ಸೆಳೆಯುವುದು ಪ್ರಕಾಶ್ ರೈ. ತೆಲುಗಿನಲ್ಲಿ ಎಫ್ ೨, ರಾಜಾ ದಿ ಗ್ರೇಟ್, ಪಟ್ಟಾಸ್‌ನಂತಹ ಹಿಟ್ ಕೊಟ್ಟಿದ್ದ ಅನಿಲ್ ರವಿಪುಡಿ ಚಿತ್ರದ ನಿರ್ದೇಶಕರು. ಹೀಗಾಗಿ ಚಿತ್ರದಲ್ಲಿ ನಾಯಕಿಗೂ ಒಳ್ಳೆಯ ರೋಲ್ ಇರುತ್ತೆ ಎಂದುಕೊAಡಿದ್ದವರಿಗೆ ಶಾಕ್ ಕೊಟ್ಟಿರುವುದು ಚಿತ್ರದ ಈ ಟೀಸರ್.

  ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಹೀರೋಯಿನ್. ಆದರೆ, ಇದುವರೆಗೆ ಚಿತ್ರದ ಟೀಸರ್‌ಗಳಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿಲ್ಲ. ಮುಖವನ್ನೇ ತೋರಿಸಿಲ್ಲ. ಇದು ರಶ್ಮಿಕಾ ಮಂದಣ್ಣ ಅಭಿಮಾನಿಗಳ ಹೃದಯವನ್ನು ಚೂರು ಚೂರಾಗಿಸಿರುರುವುದು ಸತ್ಯ.

 • ಪೊಗರು : ಮತ್ತೊಂದು ಪೋಸ್ಟರ್ ಬಂತು..

  pogaru new poster rleased

  ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ನಟಿಸುತ್ತಿರುವ, ಬಿ.ಕೆ.ಗಂಗಾಧರ್ ನಿರ್ಮಾಣದ ಪೊಗರು ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್ ಆಗಿದೆ. ಖಳನೊಬ್ಬನ ಕುತ್ತಿಗೆ ಹಿಡಿದು ನಿಂತಿರುವ ಧ್ರುವ ಸರ್ಜಾ ಲುಕ್ಕಿಗೆ ಅಭಿಮಾನಿಗಳೇನೋ ಫುಲ್ ಫಿದಾ. ಆದರೆ, ಅವರದ್ದೆಲ್ಲ ಒಂದೇ ಪ್ರಶ್ನೆ. ಸಿನಿಮಾ ರಿಲೀಸ್ ಯಾವಾಗ ಸರ್ ಅನ್ನೋದು..

  ಏಕೆಂದರೆ, ಒನ್ಸ್ ಎಗೇಯ್ನ್ ಪೊಗರು ಚಿತ್ರ ಕೂಡಾ ಧ್ರುವ ಅವರ ಹಿಂದಿನ ಅದ್ಧೂರಿ, ಬಹದ್ದೂರ್, ಭರ್ಜರಿ ಚಿತ್ರಗಳಂತೆಯೇ ಎರಡು ವರ್ಷ ಪೂರೈಸುತ್ತಿದೆ. ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರಕ್ಕೆ ಇನ್ನೂ ಹಲವು ದಿನಗಳ ಶೂಟಿಂಗ್ ಬಾಕಿಯಿದೆ. ಜೂನ್ 30ರಿಂದ ಮತ್ತೊಂದು ಹಂತದ ಶೂಟಿಂಗ್ ಹೈದರಾಬಾದ್‍ನಲ್ಲಿ ಶುರುವಾಗಲಿದೆ. 

 • ಪೊಗರು ಡಬ್ಬಿಂಗ್ ಶುರು

  pogaru image

  ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಡಬ್ಬಿಂಗ್ ಕಾರ್ಯ ಶುರುವಾಗಿದೆ. ಸುಮಾರು 2 ವರ್ಷಗಳಿಂದ ಪ್ರೊಡಕ್ಷನ್ ಹಂತದಲ್ಲಿರೋ ಪೊಗರು, ಮಾರ್ಚನಲ್ಲಿ ಬರುವುದು ಪಕ್ಕಾ ಆಗಿದೆ. ಧ್ರುವ ಸರ್ಜಾ ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ಡಬ್ಬಿಂಗ್ ಮಾಡುತ್ತಿದ್ದಾರೆ.

  ಐಟಿ ರೇಡ್‍ನಿಂದಾಗಿ ರಶ್ಮಿಕಾ ಮಂದಣ್ಣ ಡೇಟ್ಸ್ ಕ್ಲಾಶ್ ಆಗಿದ್ದು, ರಶ್ಮಿಕಾ ಡಬ್ಬಿಂಗ್ ನಿಧಾನವಾಗಿ ನಡೆಯಲಿದೆ. ನಂದಕಿಶೋರ್ ನಿರ್ದೇಶನದ ಚಿತ್ರಕ್ಕೆ ಬಿ.ಕೆ.ಗಂಗಾಧರ್ ನಿರ್ಮಾಪಕ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery