` chemistry of kariyappa, - chitraloka.com | Kannada Movie News, Reviews | Image

chemistry of kariyappa,

  • 'Chemistry of Kariappa' Team Upset With Hero

    chemistry of kariyappa team upset with hero

    The team of 'Chemistry of Kariappa', Dr Manjunath is upset with the film's hero for not co-operating with the team and for not promoting the film.

    'Chemistry of Kariappa' was released on the 15th of February and is running to packed houses. However, Chandan Achar who is the hero of the film is not to be seen anywhere. Dr Manjunath says the team had invited the hero for the promotions and success meet of the film. However, the hero gave same reasons and backed out of the event.

    'Chemistry of Kariappa' stars Tabla Nani, Chandan Achar, Suchendra Prasad and others. Producer Manjunath is also seen in a prominent role in the film. The film is based on a real incident and talks about the story of a father and a son. The film is written and directed by Kumar. Shiva Sena is the cinematographer, while Arav Rithik is the music director.

  • Chemistry Of Kariappa, Is A ‘sensual’ Comedy 

    chemistry of kariyappa is a sensual comedy

    Based on a true incident which occurred in Mandya district, Dr. Manjunath who made Samyuktha 2 returns with his second production venture - Chemistry of Kariappa. This one launches actor Chandan Achar of Kirik Party fame as hero.

    The film which revolves around four main characters - a father, his wife, son and his daughter in law. Tabla Nani plays the father's role while Sanjana Anand, also a debutant is paired opposite Chandan.

    “It is based on true incident which took place in a village in Mandya. Not just the comedy but the movie reflects human sense and sensibilities. The censor board has given a clean U/A, and the distributors were impressed with the movie along with digital rights already being sold out for its unique content,” says Dr. Manjunath, who also plays an important role in the movie as the lawyer.

    The crux of the movie which releases in not less than 50 centres, is about the the newly married man who is being suspected by his wife for being impotent. It's a complete laughter ride which comes with a message in the end, the team reveals.

  • Chemistry Of Kariappa' On February 15th

    chemistry of kariyappa to release on feb 15th

    Actor-producer Dr Manujnath who was last seen in 'Samyukta 2' is back with a new film called 'Chemistry of Kariappa' and the film is all set to be released on the 15th of February.

    'Chemistry of Kariappa' stars Tabla Nani, Chandan Achar, Suchendra Prasad and others. Producer Manjunath is also seen in a prominent role in the film. The film is based on a real incident and talks about the story of a father and a son. 

    The film is written and directed by Kumar. Shiva Sena is the cinematographer, while Arav Rithik is the music director.

  • Chemistry Of Kariyappa Movie Review: Chitraloka Rating 3.5/ 5*

    chemistry of kariyappa movie review

    It was a laughter Friday for sandalwood this week with the release of two movies which are high on humour. While Kirik Party director Rishab Shetty nailed it with Bell Bottom, Chandan Achar who made it big with Kirik Party as an actor has made an impressive debut with Chemistry of Kariyappa. 

    The chemistry we are talking about has nothing to do with any kind of chemical reactions but an unique reaction concerning relationship between a man and his wife. A strange reaction which needs a balancing stir to contain it before it explodes causing irreparable loss to the loved ones.

    That apart, it also dwells upon the bond between a father and his son. Based on a true incident which occurred in Mandya district, the makers of this film have given it a humours touch to it to deliver an all important message to the society.

    The reel chemistry is a simple story that of Uttara Kumara (Chandan Achar), the son of Kariyappa played by Tabla Nani. As the father is worried over his son's growing age and unable to get his marriage fixed, Uttara Kumara finally finds a girl for himself. They soon fall in love and get married. But the actual chemistry is when the wife sends a divorce notice. When the actual reason behind seeking divorce becomes public, the action shifts to courtroom.

    The producer Dr. Manjunath who plays the lawyer fights for the cause. Despite the existence of jokes dealing with double entendres, Kariyappa's intention for a good cause serves purpose to the seriousness of the subject. A chemistry for life with a hint of comedy offers a good entertainment in the end.

     

  • ಕರಿಯಪ್ಪನ ಕಚಗುಳಿಗೆ ನಗ್ರಪ್ಪೋ ನಗ್ರಿ

    chemistry of kariyappa in theaters today

    ಈ ನನ್ಮಗ ಬೈಕ್ ಕೊಡಿಸ್ತೀನಿ ಅಂದಾಗ್ಲೂ ಗೇರ್ ಇಲ್ಲದ ಗಾಡಿನೇ ಬೇಕು. ಕಾರ್ ಕೊಡಿಸ್ತೀನಿ ಅಂದಾಗ್ಲೂ ಗೇರ್ ಇಲ್ಲದ ಕಾರ್ ಬೇಕು ಅಂದ. ನಂಗೊಂದು ಡೌಡು. ಇವನಿಗೆ ಗೇರು........

    ಇಂತಹ ಕಚಗುಳಿ ಇಡುವ ಡೈಲಾಗುಗಳ ಜೊತೆ ಜೊತೆಯಲ್ಲೇ ಮನಸ್ಸಿನಲ್ಲೊಂದು ಪ್ರಶ್ನೆ ಹುಟ್ಟಿಸುವ ತಾಕತ್ತು ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದಲ್ಲಿದೆ. ಕಿರಿಕ್ ಪಾರ್ಟಿ ಚಂದನ್, ಸಂಜನಾ ಆನಂದ್ ಜೋಡಿಗೆ ಅತ್ತೆ-ಮಾವನಾಗಿರುವುದು ಅಪೂರ್ವ ಮತ್ತು ತಬಲಾ ನಾಣಿ. ಕಾಂಬಿನೇಷನ್ ಬೊಂಬಾಟ್. ನಿರ್ದೇಶಕ ಕುಮಾರ್, ಚಿತ್ರವನ್ನು ಕಾಮಿಡಿಯಾಗಿಯೇ ಹೇಳಬೇಕೆಂದು ನಿರ್ಧರಿಸಿರೋದ್ರಿಂದ ಇಡೀ ಚಿತ್ರದಲ್ಲಿ ಕಚಗುಳಿಯೋ ಕಚಗುಳಿ. 

    ಕರಿಯಪ್ಪನ ಕೆಮಸ್ಟ್ರಿ ಇವತ್ತಿಂದಲೇ ಚಿತ್ರಮಂದಿರದಲ್ಲಿ ಗೊತ್ತಾಗಲಿದೆ. ಜಸ್ಟ್ ಎಂಜಾಯ್.

  • ಕರಿಯಪ್ಪನ ಕೆಮಿಸ್ಟ್ರಿಗೆ ಸೊಸೆಯೇ ಚಾಲೆಂಜ್..!

    chemistry of kariyappa's challenge with daughter in law

    ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದಲ್ಲಿ ನಿಜಕ್ಕೂ ಹೀರೋ ಯಾರು..? ನೋ ಡೌಟ್, ಅದು ಚಂದನ್ ಆಚಾರ್ಯ. ಅವರು ಕರಿಯಪ್ಪನ ಮಗ. ಜಗಳ ಶುರುವಾಗೋದು.. ಅವರ ಮತ್ತು ಅವರ ಹೆಂಡತಿ ಜೊತೆ. ಅರ್ಥಾತ್ ಸಂಜನಾ ಜೊತೆ. ಆದರೆ, ನಿಜವಾದ ಕಥೆ ಇರೋದು ಮಾವ ಮತ್ತು ಸೊಸೆ ನಡುವೆ.

    ಯೆಸ್.. ಮಾವನಾಗಿ ನಟಿಸಿರುವ ತಬಲಾ ನಾಣಿ, ಸೊಸೆಯಾಗಿ ನಟಿಸಿರುವ ಸಂಜನಾರ ಜುಗಲ್‍ಬಂದಿ, ಅವರಿಬ್ಬರ ನಡುವೆ ಪರದಾಡುವ ಚಂದನ್, ಅಮ್ಮ ಕಮ್ ಅತ್ತೆಯಾಗಿ ನಟಿಸಿರುವ ಅಪೂರ್ವ.. ಹೀಗೆ ಎಲ್ಲರ ನಡುವೆ ನಡೆಯುವ ಆಟವೇ ಕೆಮಿಸ್ಟ್ರಿ ಆಫ್ ಕರಿಯಪ್ಪ.

    ನಿರ್ದೇಶಕ ಕುಮಾರ್, ಚಿತ್ರದ ಬಗ್ಗೆ ತುಂಬಾ ಸ್ಪಷ್ಟವಾಗಿದ್ದಾರೆ. ತಾನು ಹೇಳಬೇಕಾದ್ದನ್ನು ಕಾಮಿಡಿ ಜಾಡಿನಲ್ಲೇ ಹೇಳಬೇಕು ಎಂದು ಅದಕ್ಕೆ ತಕ್ಕಂತೆಯೇ ಕತೆ, ಚಿತ್ರಕತೆ, ಸಂಭಾಷಣೆ, ಸನ್ನಿವೇಶ ಸೃಷ್ಟಿಸಿದ್ದಾರೆ. ನಾಳೆಯಿಂದ ಕೆಮಿಸ್ಟ್ರಿ ಗೊತ್ತಾಗಲಿದೆ.

  • ಕರಿಯಪ್ಪನ ಕ್ರಿಟಿಕಲ್ ಕೀರ್ತನೆಗಳು

    ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಕುಮಾರ್, ಈಗ ಕ್ರಿಟಿಕಲ್ ಕೀರ್ತನೆಗಳ ಮೂಲಕ ಬರುತ್ತಿದ್ದಾರೆ. ಅಂದಹಾಗೆ ಇಲ್ಲಿಯೂ ಕರಿಯಪ್ಪ ಚಿತ್ರದಲ್ಲಿದ್ದಂತೆ ಕೋರ್ಟು, ಕಚೇರಿ ಸೀನುಗಳಿವೆ. ಐಪಿಎಲ್ ಬೆಟ್ಟಿಂಗ್ ದಂಧೆಯ ಕಥೆಯಿದೆ. ಇಷ್ಟಿದ್ದರೂ.. ಇದೂ ಕೂಡಾ ಕಾಮಿಡಿ ಡ್ರಾಮಾ.

    ತಬಲಾ ನಾಣಿ, ಸುಚೇಂದ್ರ ಪ್ರಸಾದ್ ಕಾಂಬಿನೇಷನ್ ಕಂಟಿನ್ಯೂ ಆಗಿದ್ದು, ರಾಜೇಶ್ ನಟರಂಗ, ತರಂಗ ವಿಶ್ವ, ಧರ್ಮ, ಯಶಸ್ ಅಭಿ, ಅರುಣ್ ಬಾಲರಾಜ್ ಮೊದಲಾದವರು ನಟಿಸಿದ್ದಾರೆ. ಐಪಿಎಲ್ ಶುರುವಾಗುವ ಹೊತ್ತಿನಲ್ಲೇ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

  • ಕರಿಯಪ್ಪನ ಬಾಕ್ಸಾಫೀಸ್ ಕೆಮಿಸ್ಟ್ರಿಯೂ ಬೊಂಬಾಟು

    chemistry of kariyappa makes profit in second week

    ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ ಬಾಕ್ಸಾಫೀಸ್‍ನಲ್ಲಿ ಗೆದ್ದಿದೆ. 2ನೇ ವಾರದ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ, ಬಿಡುಗಡೆಯಾದ ಎಲ್ಲ ಕಡೆ ಅತ್ಯುತ್ತಮ ಪ್ರದರ್ಶನ ಕಾಣ್ತಿದೆ. ಗಲ್ಲಾಪೆಟ್ಟಿಗೆಯೂ ತುಂಬುತ್ತಿದೆ.

    ಮೊದಲ ವಾರ ಕರಿಯಪ್ಪ 80 ಲಕ್ಷ ಬ್ಯುಸಿನೆಸ್ ಮಾಡಿದ್ದಾನೆ. ಇನ್ನು ಚಿತ್ರದ ಆಡಿಯೋ, ಸ್ಯಾಟಲೈಟ್ ರೈಟ್ಸ್‍ಗಳೂ ಸೇರಿದಂತೆ ಚಿತ್ರ ಒಟ್ಟಾರೆ ಲಾಭದಲ್ಲಿದೆ. ಮುಂದೆ ಬರೋದೆಲ್ಲ ಬೋನಸ್ಸು.

    ತಬಲಾ ನಾಣಿ ಕರಿಯಪ್ಪನಾಗಿ ನಟಿಸಿರುವ ಚಿತ್ರದಲ್ಲಿ ಶಿಲ್ಪಾ ಮಂಜುನಾಥ್ ನಾಯಕಿ. ಮಂಜುನಾಥ್ ನಿರ್ಮಾಪಕ. ಕುಮಾರ್ ನಿರ್ದೇಶನದ ಸಿನಿಮಾದಿಂದಾಗಿ ಅತೀ ಹೆಚ್ಚು ಗುರುತಿಸಿಕೊಂಡಿರೋದು ತಬಲಾ ನಾಣಿ.

  • ಕೆಮಿಸ್ಟ್ರಿ ಆಫ್ ಕರಿಯಪ್ಪ' ಒಂದಿಡೀ ದಿನದ ಶೋ ಹಣ ಗುರು ಕುಟುಂಬಕ್ಕೆ 

    chemistry of kariyappa donates first day collections to martyr guru's family

    ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರತಂಡ ಗುರು ಕುಟುಂಬಕ್ಕೆ ನೆರವು ನೀಡಲು ಮುಂದಾಗಿದೆ. ಚಿತ್ರದ ಭಾನುವಾರದ ಎಲ್ಲ ಶೋಗಳಲ್ಲಿ ಸಂಗ್ರಹವಾದ ಒಟ್ಟು ಹಣವನ್ನು ಗುರು ಕುಟುಂಬಕ್ಕೆ ನೀಡಲು ನಿರ್ಧರಿಸಿದೆ ಚಿತ್ರತಂಡ.

    ಅಂದರೆ, ಭಾನುವಾರ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನ ಹಣವೂ ಹುತಾತ್ಮ ಯೋಧ ಗುರು ಕುಟುಂಬಕ್ಕೆ ಸಿಗಲಿದೆ.

    ಹಣವನ್ನು ತುಂಬಾ ದಿನ ಇಟ್ಟುಕೊಳ್ಳೋದಿಲ್ಲ. ಈ ದಿನವೇ  ಗುರು ಕುಟುಂಬದವರಿಗೆ ಹಣ ನೀಡುತ್ತೇನೆ ಎಂದು ತಿಳಿಸಿದೆ ಚಿತ್ರತಂಡ.

  • ಗುರು ಕುಟುಂಬಕ್ಕೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಧನಸಹಾಯ

    chemistry of kariyappa donates money to martyr guru's family

    ಪುಲ್ವಾಮಾ ಹತ್ಯಾಕಾಂಡದಲ್ಲಿ ಹುತಾತ್ಮರಾದ ಮಂಡ್ಯದ ವೀರಯೋಧ ಗುರು ಕುಟುಂಬಕ್ಕೆ ಒಂದಿಡೀ ದಿನದ ಶೋ ಹಣವನ್ನು ನೀಡುವುದಾಗಿ ಹೇಳಿದ್ದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರತಂಡ, ನುಡಿದಂತೆಯೇ ನಡೆದುಕೊಂಡಿದೆ. ಭಾನುವಾರದ ಸಂಪೂರ್ಣ ಶೋ ಹಣವನ್ನು ಗುರು ಕುಟುಂಬಕ್ಕೆ ಹಸ್ತಾಂತರಿಸಿದೆ.

    ತುಂಬಾ ದಿನ ತೆಗೆದುಕೊಳ್ಳೋದಿಲ್ಲ. ಮಾರನೇ ದಿನವೇ ಹಣ ನೀಡುತ್ತೇವೆ ಎಂದಿದ್ದ ಚಿತ್ರದ ನಿರ್ಮಾಪಕ ಮಂಜುನಾಥ್, ನಿರ್ದೇಶಕ ಕುಮಾರ್, ತಬಲಾನಾಣಿ, ಸಂಜನಾ ಆನಂದ್ ಮೊದಲಾದವರು ಗುಡಿಗೆರೆಗೆ ಭೇಟಿ ನೀಡಿ, ಗುರು ಕುಟುಂಬಕ್ಕೆ ಸಾಂತ್ವನ ಹೇಳಿದ್ರು. ಪರಿಹಾರದ ಚೆಕ್ ವಿತರಿಸಿದರು.

  • ಟ್ರೇಲರ್ ನೋಡಿದ್ರೇ ಹಿಂಗೆ.. ಸಿನಿಮಾ ಹೆಂಗೋ..

    chemistry of kariyappa trailer creates record

    ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಟ್ರೇಲರ್ ನೋಡಿದವರು ಹೀಗೆ ಅಂದ್ಕೊಂಡ್ರೆ ಯಾರೇನ್ ಮಾಡೋಕಾಗುತ್ತೆ. ಪತ್ನಿ, ಮಗನನ್ನು ಅಕ್ಕಪಕ್ಕ ನಿಲ್ಲಿಸಿಕೊಂಡು ಇವರು ನಮ್ ಸನ್ನು.. ಇವರು ನಮ್ಮ ಮೂನು ಎಂದು ಗಂಡ ಹೇಳಿದ್ರೆ, ಹೆಂಡತಿ.. ಗಂಡನನ್ನು ಇವರು ನಮ್ಮ ಹನಿ ಅಂತಾರೆ..

    ಫ್ಯಾಮಿಲಿ ಸಾಂಗಿಗೆ ಅಂತಾ ಯಜಮಾನನ ಹಾಡು ಬಂದ್ ಹೋಗುತ್ತೆ. ನಮ್ಮ ಮನೆಯಲಿ ದಿನವೂ ಮಿನುಗೋ ಚೈತ್ರವೇ.. ಆಆಆಆಆಆಆಆ....

    ಹುಡುಗನಿಗೆ ಲವ್ವಾಗುತ್ತೆ. ಹುಡುಗಿ ಯಾರಂತೆ ಅಂದ್ರೆ, ಕಸ್ಟಮರ್ ಕೇರಲ್ಲಿ ಕೆಲಸ ಮಾಡೋ ಹುಡುಗಿ ಅಂತಾನೇ ಅಪ್ಪ. ಓಓಓ.. ಕಾಲ್ ಗರ್ಲ್ ಅನ್ನಿ.. ಅಂತಾಳೆ ಅಮ್ಮ.. ಓಓಓಓಓ....

    ಹುಡುಗಿ.. ಹುಡುಗನಿಗೆ ಮೊದಲು ಕೊಡೋ ಗಿಫ್ಟು ಉಪ್ಪಿನಕಾಯಿ.. ಏನ್ ಕಿಕ್ಕು.. ಓಪ್ ಓಪ್ ಓಪ್ಪಾ..

    ಮದ್ವೆ ಗಂಡಿಗೆ ಅದೇ ಇಲ್ಲ ಅಂದ್ರೆ ಹೆಂಗ್ರೀ ಆಗುತ್ತೆ ಸಂಸಾರ.. ಅದು ನಡೆಯೋದು ಟಿವಿ ಚಾನೆಲ್ಲಲ್ಲಿ. ಅದಂದ್ರೆ.. ಅಂತಾಳೆ ಆಂಕರ್. ಥೂ.. ಹೋಗ್ರೀಪಾ.. ಎಂದು ಪ್ಯಾನೆಲ್ಲಿನಲ್ಲಿದ್ದ ಚೆಲುವೆ.. ನಾಚಿಕೊಳ್ತಾಳೆ..

    ಹಂಗಾದ್ರೆ.. ಹೀರೋ ಚಂದನ್ ಆಚಾರ್.. ಗಂಡ್ಸಲ್ವಾ..ಏನೋಪ್ಪ.. ಅವರಪ್ಪ ನೋಡಿದ್ರೆ.. ಗೇರ್ ಇಲ್ದೇ ಇರೋದನ್ನೇ ಕೇಳ್ತಾನೆ ಅಂತಾರೆ..

    ಹೋಲ್ಡ್ ಆನ್.. ಇದು ಟ್ರೇಲರ್ ಸ್ಯಾಂಪಲ್ಲು. ತಬಲಾ ನಾಣಿಯೇ ಹೀರೋ ಅಂದ್ಕೊಂಡ್ರೆ.. ನೋ ಪ್ರಾಬ್ಲಂ. ಕಾಳ್ ಹಾಕೋದು ಅವರೇ. ಕಾಳ್ ಹಾಕ್ಸೋರು ಕುಮಾರು. ಇದೇ ವಾರ ಥಿಯೇಟರಿಗೆ ಬರ್ತಿದೆ.

  • ಬೆಲ್‍ಬಾಟಂ, ಕರಿಯಪ್ಪನ ಕೆಮಿಸ್ಟ್ರಿ ಅರ್ಧಶತಕ

    bellbottom and chemistry of kariyappa completes 50 dyas

    ಕನ್ನಡ ಚಿತ್ರರಂಗಕ್ಕೆ ಈ ವಾರ ಶುಭ ಶುಕ್ರವಾರ. ಈ ವಾರ ಶಿವಣ್ಣ ಅಭಿನಯದ ಕವಚ ರಿಲೀಸ್ ಆಗುತ್ತಿದೆ. ಈ ವರ್ಷ ರಿಲೀಸ್ ಆಗುತ್ತಿರುವ ಶಿವಣ್ಣ ಅಭಿನಯದ ಮೊದಲ ಸಿನಿಮಾ ಇದು. ಇದೇ ವೇಳೆಯಲ್ಲಿ ಕನ್ನಡದ ಇನ್ನೆರಡು ಚಿತ್ರಗಳು ಅರ್ಧಶತಕ ಬಾರಿಸಿವೆ.

    ರೆಟ್ರೋ ಸ್ಟೈಲ್ ಡಿಟೆಕ್ಟಿವ್ ಕಥೆ ಹೊಂದಿದ್ದ ಬೆಲ್‍ಬಾಟಂ ಸಿನಿಮಾ 50 ದಿನ ಪೂರೈಸಿದೆ. ರಿಷಬ್ ಶೆಟ್ಟಿ ನಾಯಕರಾಗಿ ಅಭಿನಯಿಸಿದ್ದ ಮೊದಲ ಸಿನಿಮಾಗೆ ಹರಿಪ್ರಿಯಾ ನಾಯಕಿ. ಜಯತೀರ್ಥ ನಿರ್ದೇಶನದ ಸಿನಿಮಾ, ಸೈಲೆಂಟಾಗಿ ಹಿಟ್ ಆಗಿದೆ.

    ಅದೇ ವಾರ ರಿಲೀಸ್ ಆಗಿದ್ದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರವೂ ಅರ್ಧ ಶತಕ ಬಾರಿಸಿರುವುದು ವಿಶೇಷ. ಡಾ.ಮಂಜುನಾಥ್ ನಿರ್ಮಾಣದ, ಕುಮಾರ್ ನಿರ್ದೇಶನದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರಕ್ಕೆ ಒಂದರ್ಥದಲ್ಲಿ ಹೀರೋ ಆಗಿದ್ದವರು ತಬಲಾ ನಾಣಿ. 

    ಎರಡೂ ಚಿತ್ರಗಳು ಕಾಮಿಡಿ ಮೂಲಕವೇ ವಿಭಿನ್ನ ಸಂದೇಶ ಸಾರಿದ ಚಿತ್ರಗಳು ಎನ್ನುವುದು ವಿಶೇಷ. ಸ್ಯಾಂಡಲ್‍ವುಡ್ ಇನ್ನಷ್ಟು ಹಿಟ್ ಚಿತ್ರಗಳಿಗೆ ಸಾಕ್ಷಿಯಾಗಲಿ.

  • ಮಂಡ್ಯ ಸುತ್ತಮುತ್ತ ನಡೆದ ನೈಜ ಕಥೆ ಕೆಮಿಸ್ಟ್ರಿ ಆಫ್ ಕರಿಯಪ್ಪ

    chemistry of karyappa is based in true events

    ಒಂದು ಪುಟ್ಟ ಸಂಸಾರ. ಗಂಡ, ಹೆಂಡತಿ, ಮಗ. ಒಬ್ಬರ ಮೇಲೊಬ್ಬರಿಗೆ ಬಿಡಿಸಲಾಗದ ಅನುಬಂಧ. ಮಗ ಪ್ರೀತಿಸಿ ಮದುವೆಯಾಗುತ್ತಾನೆ. ಅಲ್ಲಿಂದ ಶುರು ಸಮಸ್ಯೆ. ಆ ಸಮಸ್ಯೆಯಿಂದ ಹೊರಬರಲು ಆ ಸಂಸಾರ ಪಡುವ ಪಾಡು.. ನಗು ತರಿಸುತ್ತಲೇ ಚಿಂತನೆಗೆ ಹಚ್ಚುತ್ತೆ. ಕೆಮಿಸ್ಟ್ರಿ ಆಫ್ ಕರಿಯಪ್ಪನ ಕಥೆ ಇದು.

    ಇದೇ ವಾರ ರಿಲೀಸ್ ಆಗುತ್ತಿರುವ ಚಿತ್ರದಲ್ಲಿ ತಬಲಾ ನಾಣಿ ಅಪ್ಪ. ಅಪೂರ್ವ ಅಮ್ಮ. ಕಿರಿಕ್ ಚಂದನ್ ಆಚಾರ್ ಮಗ. ಅವನ ಪ್ರೇಯಸಿ ಮತ್ತು ಪತ್ನಿ ಸಂಜನಾ. ಚಿತ್ರದಲ್ಲಿ ಮಾತೇ ಬಂಡವಾಳ. ಆದರೆ ಎಲ್ಲಿಯೂ ಬೋರ್ ಆಗಲ್ಲ ಅನ್ನೋದು ತಬಲಾ ನಾಣಿ ಭರವಸೆ.

    ಚಿತ್ರದಲ್ಲಿ ನಟಿಸಿರುವವರೆಲ್ಲ ರಂಗಭೂಮಿ ಹಿನ್ನೆಲೆಯವರೇ. ಹೀಗಾಗಿ.. ಎಲ್ಲೂ ಸಮಸ್ಯೆಯೇ ಆಗಲಿಲ್ಲ ಅಂತಾರೆ ನಾಣಿ. ಸಂಯುಕ್ತ 2 ಚಿತ್ರದ ನಂತರ ಮಂಜುನಾಥ್ ನಿರ್ಮಾಣ ಮಾಡಿರುವ ಚಿತ್ರವಿದು.

  • ಸಂಜನಾ ಕೆಮಿಸ್ಟ್ರಿ ವರ್ಕೌಟ್ ಆಗುತ್ತಾ..?

    sanjana ananda eyes for hit with chemistry of kariyappa

    ಸಂಜನಾ ಆನಂದ್. ಡೆಲ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಹುಡುಗಿ. ಈಗ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಹೀರೋಯಿನ್. ಎಂಜಿನಿಯರಿಂಗ್ ಓದಿಕೊಂಡಿದ್ದ ಸಂಜನಾಗೆ ಅವಕಾಶ ಸಿಕ್ಕಿದ್ದು ಆಕಸ್ಮಿಕ. ಆರಂಭದಲ್ಲಿ ವೀಕೆಂಡ್ ಕೆಲಸ ಎಂದುಕೊಂಡಿದ್ದ ಸಂಜನಾಗೆ, ಅಭಿನಯ ಅಷ್ಟು ಸುಲಭ ಅಲ್ಲ ಎನಿಸಿದ ನಂತರ ಸೀರಿಯಸ್ಸಾಗಿ ಹೋದರು. ಕೆಲಸಕ್ಕೆ ರಾಜೀನಾಮೆ ಕೊಟ್ಟು ಚಿತ್ರದಲ್ಲಿ ತೊಡಗಿಸಿಕೊಂಡರು. 

    ಚಿತ್ರದ ನಿರ್ದೇಶಕ ಕುಮಾರ್ ಅವರು ಮಾಡಿಸಿದ ರಿಹರ್ಸಲ್, ತಬಲಾ ನಾಣಿಯವರ ಮಾರ್ಗದರ್ಶನ ಚೆನ್ನಾಗಿ ಕೆಲಸ ಮಾಡಿತು. ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಚೆನ್ನಾಗಿ ನಟಿಸಿದ್ದೇನೆ. ನನಗಂತೂ ಆತ್ಮವಿಶ್ವಾಸ ಇದೆ. ಚಿತ್ರವೂ ಗೆಲ್ಲುತ್ತೆ. ನಾನೂ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿದ್ದಾರೆ ಸಂಜನಾ.

    ಸಿನಿಮಾದಲ್ಲಿಯೇ ಮುಂದುವರಿಯುವ ಆಸೆ ಇದೆ. ಅಕಸ್ಮಾತ್ ಆಗದೇ ಹೋದರೆ, ನೋ ಪ್ರಾಬ್ಲಂ. ಕೆಲಸವಂತೂ ಇದ್ದೇ ಇದೆ ಎನ್ನುವ ಸಂಜನಾ ಆನಂದ್, ಎಂಜಿನಿಯರ್ ಅಷ್ಟೇ ಭರತನಾಟ್ಯ ಕಲಾವಿದೆಯೂ ಹೌದು. 

  • ಸೆಂಟ್ ಪ್ರಪಂಚ ಝೀರೋ ಪರ್ಸೆಂಟ್ ಲವ್

    chemistry of kariyappa movie producer

    ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಂಯುಕ್ತ 2 ಚಿತ್ರಗಳನ್ನು ನಿರ್ಮಿಸಿದ್ದ ನಿರ್ಮಾಪಕ ಮಂಜುನಾಥ್, ಈಗ ಹೀರೋ ಆಗುತ್ತಿದ್ದಾರೆ. ಚಿತ್ರದ ಹೆಸರು ಪ್ರಸೆಂಟ್ ಪ್ರಪಂಚ ಝೀರೋ ಪರ್ಸೆಂಟ್ ಲವ್. ಸಂಯುಕ್ತ 2 ನಿರ್ದೇಶಕ ಅಭಿರಾಮ್ ಅವರೇ ಡೈರೆಕ್ಟರ್.

    ಮಂಜುನಾಥ್ ತಮ್ಮ ಹೆಸರನ್ನು ಅರ್ಜುನ್ ಮಂಜುನಾಥ್ ಎಂದು ಬದಲಿಸಿಕೊಂಡಿದ್ದಾರೆ. ಸಂಭ್ರಮಶ್ರೀ, ಅಕ್ಷತಾ ನಾಯಕಿ ಹೀರೋಯಿನ್. ತಬಲಾನಾಣಿ, ಲಯೇಂದ್ರ, ಎಸ್.ನಾರಾಯಣ್, ಓಂಪ್ರಕಾಶ್ ರಾವ್, ಚಂದನಾಚಾರ್, ಸಂಜನಾ ಕೂಡಾ ತಾರಾಗಣದಲ್ಲಿದ್ದಾರೆ.

  • ಹೊಟ್ಟೆ ತುಂಬಾ ನಗಿಸೋಕೆ ಬರ್ತಾವ್ನೆ ಕೆಮಿಸ್ಟ್ರಿ ಕರಿಯಪ್ಪ

    chemistry of kariyappa will make u cry with laughter

    ಕೆಮಿಸ್ಟ್ರಿ ಆಫ್ ಕರಿಯಪ್ಪ. ಕಿರಿಕ್ ಪಾರ್ಟಿ ಖ್ಯಾತಿಯ ಚಂದನ್ ಆಚಾರ್, ಹೊಸ ಪ್ರತಿಭೆ ಸಂಜನಾ ಆನಂದ್ ನಟಿಸಿರುವ ಸಿನಿಮಾ. ಆದರೆ, ಚಿತ್ರದ ಟೈಟಲ್ ನಿಂತಿರೋದೇ ತಬಲಾ ನಾಣಿ ಮೆಲೆ. ಏಕಂದ್ರೆ ಚಿತ್ರದ ಕರಿಯಪ್ಪ ಅವರೇ.

    ಕುಮಾರ್ ನಿರ್ದೇಶನದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ, ನಾಣಿಯವರನ್ನು ಬೇರೆಯದೇ ರೀತಿಯಲ್ಲಿ ತೋರಿಸಿದೆ. ಹೆಚ್ಚೂ ಕಡಿಮೆ ಒಂದೇ ಬ್ರಾಂಡ್‍ನ ಪಾತ್ರಗಳಿಗೆ ಸೀಮಿತವಾಗುತ್ತಿದ್ದ ತಬಲಾ ನಾಣಿ, ಇಲ್ಲಿ ಬೇರೆಯದ್ದೇ ಗೆಟಪ್ ಪಡೆದುಕೊಂಡಿದ್ದಾರೆ. 

    ಪುಟ್ಟ ಮಗನ ಸಂಸಾರದಲ್ಲಿ ಮದುವೆಯ ನಂತರ ಉಂಟಾಗುವ ಸಮಸ್ಯೆ, ಡೈವೋರ್ಸ್ ವಿಚಾರದಂತಹ ಸೀರಿಯಸ್ ವಿಷಯಗಳನ್ನು ಇಲ್ಲಿ ಹೊಟ್ಟೆ ಹುಣ್ಣಾಗಿಸುವಷ್ಟು ತಮಾಷೆಯಾಗಿ ಹೇಳಲಾಗಿದೆ. ಇದೇ ಫೆಬ್ರವರಿ 15ಕ್ಕೆ ಬರುತ್ತಿರುವ ಕರಿಯಪ್ಪ, ಹೊಟ್ಟೆ ತುಂಬಾ ನಗಿಸೋದ್ರಲ್ಲಿ ನೋ ಡೌಟ್.