` sathish ninasam, - chitraloka.com | Kannada Movie News, Reviews | Image

sathish ninasam,

 • ಸತೀಶ್ ಮ್ಯಾಟ್ನಿಗೆ ಡಿಂಪಲ್ ಜೊತೆ ಟಾಪ್ ಸುಂದ್ರೀನೂ ಎಂಟ್ರಿ

  ಸತೀಶ್ ಮ್ಯಾಟ್ನಿಗೆ ಡಿಂಪಲ್ ಜೊತೆ ಟಾಪ್ ಸುಂದ್ರೀನೂ ಎಂಟ್ರಿ

  ನೀನಾಸಂ ಸತೀಶ್ ಅಭಿನಯದ ಮ್ಯಾಟ್ನಿ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸುತ್ತಿರೋದು ರಚಿತಾ ರಾಮ್. ಅಯೋಗ್ಯ ಸಕ್ಸಸ್ ನಂತರ ಮತ್ತೊಮ್ಮೆ ಒಂದಾಗಿರೋ ಜೋಡಿ. ಚಿತ್ರ ಶುರುವಾದಾಗಲೇ ಇನ್ನೊಬ್ಬ ಹೀರೋಯಿನ್ ಬರುತ್ತಾರೆ ಎಂದಿದ್ದ ನಿರ್ದೇಶಕ ಮನೋಹರ್ ಕಾಂಪಳ್ಳಿ ಚಿತ್ರಕ್ಕೆ ಕರೆತಂದಿರೋದು ಬ್ರಹ್ಮಚಾರಿ ಸುಂದರಿ ಆದಿತಿ ಪ್ರಭುದೇವ ಅವರನ್ನ.

  ರಚಿತಾ ಮತ್ತು ಆದಿತಿ ಇಬ್ಬರಿಗೂ ಇದು ಸತೀಶ್ ಜೊತೆ 2ನೇ ಸಿನಿಮಾ. ಮೊದಲ ಚಿತ್ರಗಳು ಸಕ್ಸಸ್ ಆಗಿವೆ. ಹೀಗಾಗಿ ಮೂರೂ ಜನ ಒಟ್ಟಿಗೇ ನಟಿಸುತ್ತಿರೋ ಚಿತ್ರವೂ ಯಶಸ್ವಿಯಾಗಲಿದೆ ಅನ್ನೋದು ಚಿತ್ರತಂಡದ ನಂಬಿಕೆ.

  ಚಿತ್ರದಲ್ಲಿ ಆದಿತಿ ಮೆಡಿಕಲ್ ಸ್ಟೂಡೆಂಟ್ ಆಗಿ ನಟಿಸುತ್ತಿದ್ದಾರಂತೆ. ಚೈತ್ರಾ ಅನ್ನೋದು ಅವರ ಪಾತ್ರದ ಹೆಸರು. ಪಾರ್ವತಿ ಎಂಬುವವರು ನಿರ್ಮಾಣ ಮಾಡುತ್ತಿರೋ ಮ್ಯಾಟ್ನಿ ಚಿತ್ರದಲ್ಲಿ ಡಾರ್ಕ್ ಕಾಮಿಡಿ ಕಥೆಯಿದ್ದು, ಲವ್ ಮತ್ತು ಥ್ರಿಲ್ಲರ್ ಅಂಶಗಳೂ ಚಿತ್ರದಲ್ಲಿವೆಯಂತೆ.

 • ಸೋನುಗೌಡಗೆ ಜೇಕಬ್ ವರ್ಗಿಸ್ ಕೊಟ್ಟ ಶಾಕ್..!

  sonu gowda's shocking moment during chambal shooting

  ಚಂಬಲ್ ಚಿತ್ರದ ನಾಯಕಿ ಸೋನು ಗೌಡ. ಜೇಕಬ್ ವರ್ಗಿಸ್ ಅವರ ಹೆಸರು ಕೇಳಿಯೇ ಒಪ್ಪಿಕೊಂಡಿದ್ದ ಈ ಚೆಲುವೆಗೆ ನಿರ್ದೇಶಕರು ಸೆಟ್‍ಗೆ ಹೋದಾಗ ದೊಡ್ಡ ಶಾಕ್ ಕೊಟ್ಟಿದ್ದರಂತೆ. ಹೀರೋಯಿನ್ ಎಂದ ಮೇಲೆ ಗ್ಲಾಮರ್ ಇರುತ್ತಲ್ವಾ..? ಆದರೆ, ಸೆಟ್ಟಿಗೆ ಹೋದವರಿಗೆ ಗ್ಲಾಮರ್ ಟಚ್ ಇರಲಿ, ನಾರ್ಮಲ್ ಮೇಕಪ್ಪನ್ನು ಕೂಡಾ ತೆಗೆಸಿದ್ದರಂತೆ ನಿರ್ದೇಶಕ ಜೇಕಬ್. 

  ಅಫ್‍ಕೋರ್ಸ್, ಸೋನು ಗೌಡ ಮೇಕಪ್ ಇಲ್ಲದೆಯೂ ಸುಂದರಿಯೇನೋ ನಿಜ. ನೀನಾಸಂ ಸತೀಶ್ ಎದುರು ಚಿತ್ರದಲ್ಲಿ ಅವರು ಪತ್ನಿಯಾಗಿ ನಟಿಸಿದ್ದಾರೆ.

 • ಹಿಡ್ಕಳಿ.. ಹಿಡ್ಕಳಿ.. ಬ್ರಹ್ಮಚಾರಿ ಬರೋ ಡೇಟ್ ಗೊತ್ತಾಯ್ತು

  brahachari release date fixed

  ಹಿಡ್ಕ ಹಿಡ್ಕ ಹಿಡ್ಕ ವಸಿ ಹಿಡ್ಕ ಹಿಡ್ಕ ಹಿಡ್ಕ.. ಹಾಡಿನ ಮೂಲಕ ಪಡ್ಡೆಗಳ ಹೃದಯಕ್ಕೆ ಇಲಿಯನ್ನೇ ಬಿಟ್ಟಿರುವ ಬ್ರಹ್ಮಚಾರಿ ನವೆಂಬರ್ ೨೯ಕ್ಕೆ ಥಿಯೇಟರಿಗೆ ಬರುತ್ತಿದ್ದಾನೆ. ನೀನಾಸಂ ಸತೀಶ್ ಬ್ರಹ್ಮಚರ್ಯಕ್ಕೆ ಸವಾಲು ಹಾಕಿರೋದು ಶ್ಯಾನೆ ಟಾಪ್ ಆಗಿರೋ ಆದಿತಿ ಪ್ರಭುದೇವ.

  ಒಂದು ಯೂತ್ ಫುಲ್ ಕಾಮಿಡಿ ಕಥೆ ಹೇಳಿರೋದು ಚಂದ್ರಮೋಹನ್. ಟಿ.ಆರ್.ಚಂದ್ರಶೇಖರ್ ನಿರ್ಮಾಣದ ಚಿತ್ರದಲ್ಲಿ ಭರಪೂರ ಕಾಮಿಡಿಯಿದೆ. ಆದರೆ, ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್. ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋ ಮೂಲಕ ಕಾರ್ತಿಕ್ ಗೌಡ ವಿತರಣೆ ಮಾಡುತ್ತಿದ್ದಾರೆ. ೧೦೦% ವರ್ಜಿನ್ ಅನ್ನೋ ಟ್ಯಾಗ್‌ಲೈನ್ ಇರೋ ಚಿತ್ರ ೨೦೦% ಕಾಮಿಡಿ ಎನ್ನೋದ್ರಲ್ಲಿ ನೋ ಡೌಟ್ ಅಂತಿದೆ ಗಾಂಧಿನಗರ.