` sathish ninasam, - chitraloka.com | Kannada Movie News, Reviews | Image

sathish ninasam,

  • `ಪರಿಮಳ ಲಾಡ್ಜ್'ನಲ್ಲಿರೋದು ಸಲಿಂಗಿಗಕ ಕಥೆ ಅಲ್ಲ..!

    sathish ninasam clears rumors regarding parimalalodge

    ನೀನಾಸಂ ಸತೀಶ್, ಯೋಗೀಶ್ ಜೊತೆಯಾಗಿರುವ ವಿಜಯ್ ಪ್ರಸಾದ್ ನಿರ್ದೇಶನದ ಸಿನಿಮಾ ಪರಿಮಳ ಲಾಡ್ಜ್. ಚಿತ್ರದ ಟೀಸರ್ ಭರ್ಜರಿ ಸದ್ದು ಮಾಡಿದೆ. ಪರ, ವಿರೋಧಗಳ ಟೀಕೆ ಸುರಿಮಳೆಯಾಗಿದೆ. ಅದಕ್ಕೆ ಕಾರಣವಾಗಿರೋದು ಇಷ್ಟೆ, ಟೀಸರ್‍ನಲ್ಲಿ ಸತೀಶ್ ಮತ್ತು ಯೋಗೀಶ್‍ರನ್ನು ಸಲಿಂಗ ಕಾಮಿಗಳು ಎಂದು ತೋರಿಸಲಾಗಿದೆ. ಹಾಗಾದರೆ..

    ಹೌದು.. ಅದೇ ಕಾರಣಕ್ಕೆ ಚಿತ್ರ ಟೀಕೆಗೆ ಗುರಿಯಾಗಿದೆ. ಈ ಟೀಕೆಗಳಿಗೆ ಫುಲ್ ಸ್ಟಾಪ್ ಇಡುವ ಪ್ರಯತ್ನ ಮಾಡಿದ್ದಾರೆ ಸತೀಶ್. ಇದು ಸಲಿಂಗಿಗಳ ಕಥೆಯಲ್ಲ. ಚಿತ್ರದಲ್ಲೊಂದು ಕಣ್ಣೀರು ತರಿಸುವ ಕಥೆ ಇದೆ. ಟೀಸರ್‍ನಲ್ಲಿರೋದು ನಿರ್ದೇಶಕರ ಚೇಷ್ಟೆಯೇ ಹೊರತು ಮತ್ತೇನಲ್ಲ ಎಂದಿದ್ದಾರೆ ಸತೀಶ್.

    ವಿಜಯ್ ಪ್ರಸಾದ್ ಮೊದಲೇ ಚೇಷ್ಟೆ ಚತುರ. ಅದು ಈ ಹಿಂದಿನ ಸಿದ್ಲಿಂಗು, ನೀರ್‍ದೋಸೆಯಲ್ಲಿ ಸಾಬೀತಾಗಿದೆ ಕೂಡಾ. ಹೀಗಾಗಿ ಸತೀಶ್ ಮಾತುಗಳನ್ನು  ನಂಬಬಹುದು.

  • 'Ayogya' 100 Days Function On March 10th

    ayogya 100 days function on march 10th

    The 100 days function of last year's hit film 'Ayogya' starring Satish Neenasam and Rachita Ram is all set to be held on the 10th of March at the Kalavidara Sangha Auditorium in Bangalore.

    Upendra and Murali will be attending the 100 days program and will be giving away mementos to artistes and technicians who have worked for the film.

    Producer T R Chandrashekhar's another film 'Birbal' has also completed a 50 day run and the success will be celebrated during the occasion.

  • 'Bramhachari' Is This Generation's 'Anubhava'

    bramhachari is this generation's anubhava

    Satish Neenasam starrer 'Bramhachari' is all set to release tomorrow across Karnataka. Chandra Mohan has scripted the film apart from directing it. Till now, there was no news about who had written the story. Now it has been revealed that producer Uday Mehta himself has written the story of the film.

    Uday Mehta in a recent press meet has announced that he has written the story of the film and Kashinath is a big inspiration for him to write the story. 'I have grown up watching his films. That's when the idea of this film came. I would like to call the film as this generation's 'Anubhava'' says Uday Mehta.

    Though Uday Mehta wrote this story in 2015, it is being made into a film only in 2019. One of the highlight is, Satish Neenasam starrer 'Love in Mandya' produced by Uday Mehta was released on 29th November 2014. Now Satish and Uday Mehta's second outing is getting released on the same day five years later. The film will be released in more than 250 theaters across Karnataka.

  • 'Chambal' To Release On February 22nd

    chambal to release on feb 22nd

    Satish Neenasam's new film 'Chambal' is in news as the film is said to have close resemblances with the life and work of late IAS officer D K Ravi. With lot of expectations pinned on the film, the film is all set to release on the 22nd of February.

    'Chambal' is being written and directed by Jacob Verghese who earlier directed 'Savari' and 'Prithvi'. This is his fourth film as a director. Apart from Satish, Kishore, Roger Narayan, Sonu, Sardar Satya and others play prominent roles in the film. 

    'Chambal' is being distributed by Jacob Films through B K Gangadhar.

     

  • ೭ ನಿರ್ದೇಶಕರು.. ೭ ಕಥೆ.. ಕಥಾ ಸಂಗಮದ ವಿಭಿನ್ನ ಟ್ರೇಲರ್

    katha sangama trailer released

    ರಿಷಬ್ ಶೆಟ್ಟಿ ಬ್ಯಾನರಿನಲ್ಲಿ ಹೊಸದೊಂದು ಪ್ರಯೋಗದ ಮೊದಲ ಝಲಕ್ ಹೊರಬಿದ್ದಿದೆ. ೭ ಮಂದಿ ನಿರ್ದೇಶಕರು, ೭ ಕಥೆಗಳು.. ಅವುಗಳೆಲ್ಲವನ್ನೂ ಸೇರಿಸಿ ಒಂದು ಸಿನಿಮಾ. ಈ ಪ್ರಯೋಗದ ಕಥೆಯೇ ಕಥಾ ಸಂಗಮ. ವಿಶೇಷವೆಂದರೆ ಈ ೭ ಕಥೆಗಳಲ್ಲಿ ಯಾವೊಂದು ಕಥೆಗೂ ರಿಷಬ್ ಡೈರೆಕ್ಷನ್ ಇಲ್ಲ. ಆದರೆ ಒಂದು ಕಥೆಯಲ್ಲಿ ಹುಚ್ಚನಾಗಿ ಕಾಣಿಸಿಕೊಂಡಿದ್ದಾರೆ ರಿಷಬ್ ಶೆಟ್ಟಿ.

    ಫ್ಯಾಮಿಲಿ ಮ್ಯಾನ್ ಕಿಶೋರ್, ನರಳುವ ಪ್ರೇಮಿಯಾಗಿ ರಾಜ್ ಬಿ.ಶೆಟ್ಟಿ, ಹುಚ್ಚ ಅಲೆಮಾರಿಯಾಗಿ ರಿಷಬ್ ಶೆಟ್ಟಿ ಇದ್ದಾರೆ. ಹರಿಪ್ರಿಯಾ, ರಿಷಬ್ ಪಾತ್ರಕ್ಕೆ ಮುಖಾಮುಖಿಯಾಗುತ್ತಾರೆ. ಪ್ರಕಾಶ್ ಬೆಳವಾಡಿ ಬೆರಗು ಹುಟ್ಟಿಸುತ್ತಾರೆ. ಅಲ್ಲೊಂದು ತಾಯಿ ಮಗುವಿನ ಕಥೆಯೂ ಇದೆ. ವಿಭಿನ್ನ ಕಥಾ ಹಂದರ ಹೊಂದಿರುವ ಕಥಾ ಸಂಗಮ ಕುತೂಹಲ ಹುಟ್ಟಿಸುವಲ್ಲಿ ಗೆದ್ದಿದೆ.

  • Parimala Lodge' Teaser Launched

    parimala lodge teaser launched

    Trailer oF Satish Neenasam and Yogi starrer 'Parimala Lodge' was launched on Wednesday at Ayyappa Swamy Temple in Vijayanagar Bangalore. The teaser of the film was launched in an event in Bangalore.

    'Parimala Lodge' is being written and directed by Vijayaprasad of 'Sidlingu' game and is produced by Prasanna who had earlier produced 'Beautiful Manasugalu'. Prasanna and Vijayaprasad had announced a film called 'Ganesh Medicals' last year. However, the film did not take off due to various reasons and the duo is back with 'Parimala Lodge'.

    'Parimala Lodge' stars Satish Neenasam, Yogi, Suman Rangananth, Bullet Prakash, Dattanna and others in prominent roles. Anoop Seelin is the music composer, while Niranjan Babu is the cinematographer.

  • Then Lucia, Now Chambal for Movieland

    chambal to release in movieland

    Six years ago, sandalwood witnessed one of its first crowd funded film directed by the talented actor turned director Pawan Kumar. With no huge expectations, Lucia was released in Movieland theatre, which is known for its non-Kannada releases.

    The film gave two promising stars for the industry - Sathish Ninasam and Sruthi Hariharan, who both went onto establish themselves as popular actors. Now, history repeats for Sathish. His most anticipated venture 'Chambal’ directed by Jacob Varghese, is set to release in Movieland theatre in Gandhinagar this Friday. Ironically, the music for Chambal is composed by Poornachandra Tejaswi, who scored for Lucia too.

    Chambal will see Sathish in a white collar role as a IAS officer and it is alleged that it is inspired by IAS officer late D K Ravi. However, makers are tight lipped about the Ravi connection with the movie. Lucia ran for 70 days after it released, and with the kind of hype and anticipation around Chambal, Movieland is set to witness another century run.

  • ಅದೇ ಲಕ್ಕಿ ನವೆಂಬರ್ : ಬ್ರಹ್ಮಚಾರಿಗೆ ಲವ್ ಇನ್ ಮಂಡ್ಯ ನೆನಪು

    lucky,november for bramhachari producer and hero

    ಬ್ರಹ್ಮಚಾರಿ ರಿಲೀಸ್ ಸಂಭ್ರಮದಲ್ಲಿರೋ ನಟ ನೀನಾಸಂ ಸತೀಶ್ ಮತ್ತು ನಿರ್ಮಾಪಕ ಉದಯ್ ಕೆ.ಮೆಹ್ತಾ ಇಬ್ಬರಿಗೂ ನವೆಂಬರ್ ಎಂದರೆ ಲಕ್ಕಿ ಎನ್ನಿಸೋಕೆ ಕಾರಣವೂ ಇದೆ. ಕಾರಣ ಇಷ್ಟೆ, 2014ರ ನವೆಂಬರ್ 28ರಂದು ಲವ್ ಇನ್ ಮಂಡ್ಯ ರಿಲೀಸ್ ಆಗಿತ್ತು. ಈಗ ನವೆಂಬರ್ 29, ಬ್ರಹ್ಮಚಾರಿ ರಿಲೀಸ್ ಆಗುತ್ತಿದೆ.

    ಆ ಚಿತ್ರದ ನಿರ್ಮಾಪಕ ಮತ್ತು ನಾಯಕ ಇಬ್ಬರೂ ಈ ಚಿತ್ರದಲ್ಲೂ ಜೊತೆಯಾಗಿದ್ದಾರೆ. ಆ ಚಿತ್ರದಲ್ಲಿ ನೀನಾಸಂ ಸತೀಶ್ ಜೊತೆ ಸಿಂಧು ಲೋಕನಾಥ್ ನಾಯಕಿ. ಇಲ್ಲಿ ಸತೀಶ್ ಜೊತೆ ಆದಿತಿ ಪ್ರಭುದೇವ ನಾಯಕಿ.

    ಬ್ರಹ್ಮಚಾರಿಯಂತೆಯೇ ಲವ್ ಇನ್ ಮಂಡ್ಯದ ಎಲ್ಲ ಹಾಡುಗಳೂ ಹಿಟ್ ಆಗಿದ್ದವು. ಈ ಬ್ರಹ್ಮಚಾರಿಯಲ್ಲಿ ಹಿಡ್ಕ ಹಿಡ್ಕ ಹಾಡು ಸೃಷ್ಟಿಸಿದ್ದ ರೋಮಾಂಚನದAತೆಯೇ.. ಲವ್ ಇನ್ ಮಂಡ್ಯದಲ್ಲಿ ಕರೆಂಟು ಹೋದ ಟೈಮಲಿ.. ಹಾಡು ರೊಮ್ಯಾಂಟಿಕ್ ಸೆನ್ಸೇಷನ್ ಆಗಿತ್ತು.

  • ಅಪ್ಪಿಕೊಳ್ಳಲೂ ಬಿಡದೆ ಹಿಡ್ಕ ಹಿಡ್ಕ ಹಾಡು ಮಾಡಿದ್ರಂತೆ..!!!

    interesting facts about hidka hidka song

    ಸದ್ಯಕ್ಕೆ ಸ್ಯಾಂಡಲ್‌ವುಡ್‌ನ ರೊಮ್ಯಾಂಟಿಕ್ ಸೆನ್ಸೇಷನ್ ಹಿಡ್ಕ ಹಿಡ್ಕ ಸಾಂಗ್. ಎಷ್ಟು ರೊಮ್ಯಾಂಟಿಕ್ ಅಂದ್ರೆ, ಚಿತ್ರದ ಲಿರಿಕಲ್ ಮತ್ತು ಮೇಕಿಂಗ್ ವಿಡಿಯೋವನ್ನೇ ಪಡ್ಡೆಗಳು ಕಣ್ಣು ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದಾರೆ. ಆದರೆ, ಈ ಭರ್ಜರಿ ರೊಮ್ಯಾಂಟಿಕ್ ಸಾಂಗ್‌ನ ವಿಶೇಷತೆ ಏನು ಗೊತ್ತೇ..?

    ಇಡೀ ಹಾಡು ರೊಮ್ಯಾಂಟಿಕ್ ಆಗಿದ್ದರೂ, ಹಾಡಿನಲ್ಲಿ ಹೀರೋ ಹೀರೋಯಿನ್ ಒಂದ್ಸಲ ಕೂಡಾ ಕನಿಷ್ಠ ಅಪ್ಪಿಕೊಳ್ಳುವುದೂ ಇಲ್ಲವಂತೆ.. ಅರೆ.. ಅದು ಹೇಗೆ..?

    ಹೌದು, ಆ ಹಾಡಿನ ವಿಶೇಷತೆಯೇ ಅದು. ಹಾಡು ಸಖತ್ ರೊಮ್ಯಾಂಟಿಕ್ ಆಗಿದೆ. ಆದರೆ ಕೇಳೋಕೆ ಮಾತ್ರ. ದೃಶ್ಯಗಳಲ್ಲಿ ಒಂದು ಅಪ್ಪುಗೆಯ ದೃಶ್ಯವೂ ಇಲ್ಲ ಎನ್ನುತ್ತಾರೆ ಆದಿತಿ ಪ್ರಭುದೇವ.

    ಇಡೀ ಚಿತ್ರದಲ್ಲಿ ಕಾಮಿಡಿ ಇದೆ. ಅದು ಸೆಕ್ಸ್ ಕಾಮಿಡಿ ಅಲ್ಲ. ಸಿಚುಯೇಷನ್ ಕಾಮಿಡಿ ಎನ್ನುವ ಆದಿತಿ ನೀನಾಸಂ ಸತೀಶ್ ಕಷ್ಟ ನೆನಪಿಸಿಕೊಂಡು ಈಗಲೂ ನಗ್ತಾರೆ. ಅಷ್ಟರಮಟ್ಟಿಗೆ ಕ್ಯಾರೆಕ್ಟರ್ ಕಟ್ಟಿಕೊಟ್ಟಿದ್ದಾರಂತೆ ನಿರ್ದೇಶಕ ಚಂದ್ರಮೋಹನ್. ಉದಯ್ ಕುಮಾರ್ ನಿರ್ಮಾಣದ ಬ್ರಹ್ಮಚಾರಿ ಚಿತ್ರ ಇದೇ ವಾರ ರಿಲೀಸ್. ಹಿಡ್ಕ.. ಹಿಡ್ಕ.. ಹಿಡ್ಕ..

     

  • ಅಬ್ಬಾ..! ಈ ವಾರ ರಿಲೀಸ್ ಆಗುತ್ತಿರೋದು 42 ಸಿನಿಮಾಗಳು..!!

    42 films to release in karnataka this week

    ಇದು ಪ್ರವಾಹಗಳ ವರ್ಷ. ಸಿನಿಮಾ ರಂಗವೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಪ್ರವಾಹವೇ ಹರಿದಿದೆ. ಅದರಲ್ಲೂ ಈ ವಾರ.. ಒಂದಲ್ಲ.. ಎರಡಲ್ಲ.. ಒಟ್ಟು 42 ಸಿನಿಮಾಗಳು ಶುಕ್ರವಾರ ರಿಲೀಸ್ ಆಗುತ್ತಿವೆ. ಬೆಂಗಳೂರಿನಲ್ಲಿ.

    ಈ ವಾರ ಬೆಂಗಳೂರಿನಲ್ಲಿ ರಿಲೀಸ್ ಆಗುತ್ತಿರುವ ಕನ್ನಡ ಚಿತ್ರಗಳ ಸಂಖ್ಯೆ 9. 8 ತೆಲುಗು, 6 ಬೆಂಗಾಲಿ ಮತ್ತು 6 ಹಿಂದಿ. ಮಲಯಾಳಂನ 4 ಹಾಗೂ ತಮಿಳು ಮತ್ತು ಇಂಗ್ಲಿಷ್‌ನ ತಲಾ 3, ಗುಜರಾತಿ ಮತ್ತು ಮರಾಠಿಯ ತಲಾ 2, ಒಂದು ಪಂಜಾಬಿ ಸಿನಿಮಾ. ತಿಂಗಳಿಗೆ ಕನಿಷ್ಠ ಎರಡಾದರೂ ಬೋಜ್‌ಪುರಿ(ಬಿಹಾರ) ಸಿನಿಮಾಗಳು ರಿಲೀಸ್ ಆಗುತ್ತವೆ. ಈ ಬಾರ ಮೊದಲೇ ಪ್ಲಾನ್ ಆಗಿರುವ ಲಿಸ್ಟಿನಲ್ಲಿಲ್ಲ, ಅಷ್ಟೆ. ಈ ಎಲ್ಲವೂ ಸೇರಿ ಒಟ್ಟು 42 ಸಿನಿಮಾಗಳಾಗುತ್ತಿವೆ.

    ಎಲ್ಲರೂ ತೆಲುಗು, ತಮಿಳು, ಹಿಂದಿ ಅಷ್ಟೇ ಪರಭಾಷೆ ಚಿತ್ರಗಳೆಂದುಕೊAಡಿರುವಾಗ ಅವುಗಳಿಗೆ ಪೈಪೋಟಿ ಕೊಡುವಂತೆ ಬೆಂಗಾಳಿ, ಗುಜರಾತಿಗಳು ಬೆಂಗಳೂರಿಗೆ ಪ್ರವೇಶಿಸಿ ಆಗಿದೆ. ರಾಜ್ಯದಲ್ಲಿ.. ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡವೂ ಸೇರಿ ಒಟ್ಟು 10 ಭಾಷೆಗಳಿಗೆ ದೊಡ್ಡ ಮಾರುಕಟ್ಟೆ ಇದೆ. ಜಪಾನೀಸ್, ಅಸ್ಸಾಮೀ ಭಾಷೆಯ ಚಿತ್ರಗಳೂ ಆಗಾಗ್ಗೆ ಥಿಯೇಟರುಗಳಲ್ಲಿ ಪ್ರತ್ಯಕ್ಷವಾಗುತ್ತಿವೆ. ಇವೆಲ್ಲವುಗಳ ಜೊತೆಗೆ ಕನ್ನಡ ಸ್ಪರ್ಧೆ ಮಾಡಲೇಬೇಕು, ಅದು ಅನಿವಾರ್ಯ.

    ಬೆಂಗಳೂರಿನಲ್ಲಿ ಇರುವುದೇ 100+ ಸಿಂಗಲ್ ಸ್ಕಿçÃನ್ ಮತ್ತು 100+ ಮಲ್ಟಿಪ್ಲೆಕ್ಸುಗಳು. ಇವುಗಳಲ್ಲಿ ಹಿಂದಿ ಬಿಟ್ಟರೆ, ಆಲ್‌ಮೋಸ್ಟ್ ಎಲ್ಲ ಭಾಷೆಗಳವರೂ ಸಿಂಗಲ್ ಸ್ಕಿçÃನ್‌ಗೆ ಲಗ್ಗೆಯಿಡುತ್ತಾರೆ. ಸದ್ಯಕ್ಕೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡದಷ್ಟೇ ದೊಡ್ಡ ಮಟ್ಟದಲ್ಲಿ ತೆಲುಗು, ತಮಿಳು ಚಿತ್ರಗಳೂ ರಿಲೀಸ್ ಆಗುತ್ತಿವೆ. ಮುಂದಿನ ದಿನಗಳಲ್ಲಿ ಬೆಂಗಾಳಿ, ಭೋಜ್‌ಪುರಿ, ಮಲಯಾಳಂ ಇದೇ ರೀತಿಯಲ್ಲಿ ರಿಲೀಸ್ ಆಗಲು ಕ್ಯೂನಲ್ಲಿವೆ.

    ಇನ್ನು ಈ ವಾರ ರಿಲೀಸ್ ಆಗುತ್ತಿರುವ ಕನ್ನಡ ಚಿತ್ರಗಳನ್ನಷ್ಟೇ ನೋಡೋಣ. ಬ್ರಹ್ಮಚಾರಿ,  ಮುಂದಿನ ನಿಲ್ದಾಣ, ರಣಹೇಡಿ, ಮೂಕಜ್ಜಿಯ ಕನಸುಗಳು, ಮಾರ್ಗರೇಟ್, ಕಿರು ಮಿಂಕAಜ, ರಿವೀಲ್, ದಮಯಂತಿ, ನಾನೇ ರಾಜ ಚಿತ್ರಗಳು. 

  • ಕಥೆ ಕೇಳದೆ ಚಂಬಲ್ ಓಕೆ ಅಂದ್ರಂತೆ ಸೋನು ಗೌಡ

    sonu gowda accepted chambal for director

    ಚಂಬಲ್ ಚಿತ್ರದ ನಾಯಕ ನೀನಾಸಂ ಸತೀಶ್. ನಾಯಕಿ ಸೋನು ಗೌಡ. ಸತೀಶ್ ಜಿಲ್ಲಾಧಿಕಾರಿ ಪಾತ್ರದಲ್ಲಿ ನಟಿಸಿದ್ದರೆ, ಸೋನು ಗೌಡ ಡಿಸಿಯ ಪತ್ನಿ ಸುಮ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.

    `ನನ್ನದು ಸುಮ ಎಂಬ ಪಾತ್ರ. ಮುಗ್ದ ಹುಡುಗಿ. ಗಂಡ, ಮನೆಯೇ ಅವಳ ಪ್ರಪಂಚ. ಸೀರೆ, ಕುರ್ತಾದಲ್ಲಿಯೇ ಕಾಣಿಸಿಕೊಳ್ಳುವ, ಗಂಡನ ಪ್ರತಿಯೊಂದು ಕೆಲಸಕ್ಕೂ ಬೆನ್ನೆಲುಬಾಗಿ ನಿಲ್ಲುವ ಪಾತ್ರ' ಎಂದಿದ್ದಾರೆ ಸೋನುಗೌಡ.

    ಆದರೆ, ಅವರು ಸಿನಿಮಾಗೆ ಓಕೆ ಎನ್ನುವದಕ್ಕೂ ಮೊದಲು ನಿರ್ದೇಶಕರ ಬಳಿ ಕಥೆಯನ್ನೇ ಕೇಳಲಿಲ್ಲವಂತೆ. ಏಕೆಂದರೆ, ಅವರಿಗೆ ಜೇಕಬ್ ವರ್ಗಿಸ್ ಅವರ ಹಿಂದಿನ ಸಿನಿಮಾಗಳು ಗೊತ್ತಿತ್ತು. ಅವರು ಕಥೆ ಹೇಳುವ ಶೈಲಿಯೂ ಗೊತ್ತಿತ್ತು. ಕೇವಲ ಅದೊಂದು ನಂಬಿಕೆಯಿಂದ ಚಿತ್ರಕ್ಕೆ ಯೆಸ್ ಎಂದೆ. ನಾನೇ ಚಿತ್ರದ ನಾಯಕಿ ಎನ್ನುವುದು ನನಗೆ ಗೊತ್ತಾಗಿದ್ದು ಸೆಟ್‍ಗೆ ಹೋದ ಮೇಲೆ ಎಂದಿದ್ದಾರೆ ಸೋನು ಗೌಡ.

  • ಗೋದ್ರಾ ಟೀಸರ್ ಔಟ್ : ಎಂದೂ ಮುಗಿಯದ ಯುದ್ಧ

    godhra teaser out

    ನೀನಾಸಂ ಸತೀಶ್, ಶ್ರದ್ಧಾ ಶ್ರೀನಾಥ್ ಒಟ್ಟಿಗೇ ನಟಿಸಿರುವ ಮೊದಲ ಸಿನಿಮಾ ಗೋದ್ರಾ. ಎಂದೂ ಮುಗಿಯದ ಯುದ್ಧ ಅನ್ನೋದು ಟ್ಯಾಗ್‍ಲೈನ್. ಬಹುಕಾಲದ ನಿರೀಕ್ಷಿತ ಚಿತ್ರವಿದು. ಕಾರಣ ನಂ.1 ಚಿತ್ರದ ಟೈಟಲ್. ಏಕೆಂದರೆ, ಗೋದ್ರಾ ಅನ್ನೋ ಹೆಸರಿನಲ್ಲಿ ಭಾರತದ ಕರಾಳ ಇತಿಹಾಸವೊಂದು ಶಾಶ್ವತವಾಗಿ ನಿಂತಿದೆ. ಅಂಥಾದ್ದೊಂದು ಟೈಟಲ್ ಇಟ್ಟುಕೊಂಡು ಬರುತ್ತಿರುವ ಸಿನಿಮಾ ಕಥೆ ಏನಿರಬಹುದು ಅನ್ನೋ ಕುತೂಹಲ ಸಹಜವಾಗಿಯೇ ಇರುತ್ತೆ. ಚಿತ್ರದ ಟೀಸರ್ ಆ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

    ಅಲ್ಲಿ ರಾಜಕೀಯ, ಲವ್ ಸ್ಟೋರಿ, ನಕ್ಸಲ್ ಚಳವಳಿ, ಎಂಎನ್‍ಸಿಗಳ ವಿರುದ್ಧ ಹೋರಾಟ, ಹಿಂದುತ್ವದ ಕಿಚ್ಚು ಎಲ್ಲವೂ ಕಾಣಿಸುವ ಟೀಸರ್, ಕಥೆಯ ಒನ್ ಲೈನ್ ಗುಟ್ಟು ಬಿಟ್ಟುಕೊಟ್ಟಿಲ್ಲ.

    ಟೀಸರ್‍ನಲ್ಲಿ ಬರೋ ಖಡಕ್ ಡೈಲಾಗುಗಳು ರೋಮಾಂಚನ ಹುಟ್ಟಿಸುತ್ತವೆ. ನಿರ್ದೇಶಕ ಕೆ.ಎಸ್.ನಂದೀಶ್ ಭರವಸೆ ಹುಟ್ಟಿಸುತ್ತಾರೆ. ಜೇಕೋಬ್ ಫಿಲಂಸ್, ಲೀಡರ್ ಫಿಲಂಸ್ ಬ್ಯಾನರಿನಲ್ಲಿ ಬರುತ್ತಿರೋ ಚಿತ್ರದಲ್ಲಿ ಸತೀಶ್, ಶ್ರದ್ಧಾ ಜೊತೆಗೆ ಅಚ್ಯುತ್ ಕುಮಾರ್, ವಸಿಷ್ಠ ಸಿಂಹ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  • ಗೋದ್ರಾ ಟೈಟಲ್ ಚೇಂಜ್ : ಏನು ಕಾರಣ?

    ಗೋದ್ರಾ ಟೈಟಲ್ ಚೇಂಜ್ : ಏನು ಕಾರಣ?

    ಗೋದ್ರಾ. ನೀನಾಸಂ ಸತೀಶ್ ನಟಿಸಿರುವ ಸಿನಿಮಾ. ಸತೀಶ್ ಜೊತೆಗೆ ಶ್ರದ್ಧಾ ಶ್ರೀನಾಥ್, ವಸಿಷ್ಠ ಸಿಂಹ, ಅಚ್ಯುತ್ ಕುಮಾರ್, ರಕ್ಷಾ ಸೋಮಶೇಖರ್, ಸೋನು ಗೌಡ ಮೊದಲಾದವರ ನಟಿಸಿರೋ ಸಿನಿಮಾ. ಸಿನಿಮಾದ ಟೈಟಲ್ ಬದಲಿಸಲು ಚಿತ್ರತಂಡ ನಿರ್ಧರಿಸಿದೆ.

    ಆಕ್ಷೇಪ ಏಕೆ?

    ಗೋದ್ರಾ ಎಂದೊಡನೆ ಗುಜರಾತ್‍ನಲ್ಲಿ ನಡೆದಿದ್ದ ಕರಸೇವಕರ ಹತ್ಯಾಕಾಂಡ ನೆನಪಿಗೆ ಬರುತ್ತೆ. ರಾಮಮಂದಿರಕ್ಕೆ ಹೋಗಿದ್ದ ಕರಸೇವಕರಿದ್ದ ಬೋಗಿಗೆ ಹೊರಗಿನಿಂದ ಲಾಕ್ ಲಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ಆ ದುರಂತದಲ್ಲಿ ಸತ್ತವರು 59 ಜನ. ಅದಾದ ನಂತರ ಇಡೀ ಗುಜರಾತ್ ಕೋಮುಗಲಭೆಯಲ್ಲಿ ಹೊತ್ತಿ ಉರಿದು ನೂರಾರು ಜನ ಸತ್ತಿದ್ದರು. ಹೀಗಾಗಿ ಅದೇ ಟೈಟಲ್ ಇಟ್ಟುಕೊಂಡಿರೋ ಸಿನಿಮಾ ಬಗ್ಗೆ ಆಕ್ಷೇಪಗಳಿದ್ದವು.

    ಟೈಟಲ್ ಮಾತ್ರ ಗೋದ್ರಾ. ಕಥೆ ಅಲ್ಲ : ಇದು ಚಿತ್ರತಂಡದವರ ವಾದ. ಗೋದ್ರಾ ಘಟನೆಗೂ ನಮ್ಮ ಚಿತ್ರದ ಕಥೆಗೂ ಸಂಬಂಧ ಇಲ್ಲ ಎಂದು ಸೆನ್ಸಾರ್ ಮಂಡಳಿ ಅಧಿಕಾರಿಗಳು ಕೇಳಲಿಲ್ಲವಂತೆ. ಚಿತ್ರದಲ್ಲಿ ಕೆಲವು ಸಮಸ್ಯೆಗಳ ಬಗ್ಗೆ ನೇರವಂತಿಕೆಯ ಸಂಭಾಷಣೆಗಳಿರುವುದೂ ಇದಕ್ಕೆ ಕಾರಣ. ಕೊನೆಗೆ ಚಿತ್ರತಂಡ ಸೆನ್ಸಾರ್ ಮಂಡಳಿ ಅಧಿಕಾರಿಗಳ ಹಠಕ್ಕೆ ಮಣಿದಿದೆ.

    ಹೊಸ ಟೈಟಲ್ ಡಿಯರ್ ವಿಕ್ರಂ : ಈಗಾಗಲೇ ಈ ಟೈಟಲ್‍ನ್ನು ಸೆನ್ಸಾರ್‍ಗೆ ಸಲ್ಲಿಸಿದೆ ಚಿತ್ರತಂಡ. ಚಿತ್ರ ಥಿಯೇಟರುಗಳಲ್ಲಿ ರಿಲೀಸ್ ಆಗುವುದಿಲ್ಲ. ಒಟಿಟಿಗೇ ನೇರವಾಗಿ ಬರಲಿದೆ.

  • ಡಬ್ಬಿಂಗ್ ಮುಗಿಸಿದ ಗೋದ್ರಾ

    godhra dubbing completes

    ನೀನಾಸಂ ಸತೀಶ್ ಮತ್ತು ಶ್ರದ್ಧಾ ಶ್ರೀನಾಥ್ ಅಭಿನಯದ ಗೋದ್ರಾ ಚಿತ್ರ ಡಬ್ಬಿಂಗ್ ಮುಗಿಸಿದೆ. ವ್ಯವಸ್ಥೆಯಲ್ಲಿದ್ದುಕೊಂಡೇ ಆ ವ್ಯವಸ್ಥೆ ವಿರುದ್ಧ ಬಂಡೇಳುವ ಹೋರಾಟಗಾರನ ಕಥೆ ಗೋದ್ರಾದಲ್ಲಿದೆ. ಚಿತ್ರದ ಡಬ್ಬಿಂಗ್ ಮುಗಿದಿದ್ದು, ಒಂದು ಹಾಡಿನ ಚಿತ್ರೀಕರಣ ಬಾಕಿಯಿದೆ.

    ಚಿತ್ರದ ನಾಯಕನ ಇಂಟ್ರೊಡಕ್ಷನ್‌ಗಾಗಿ ಜೈ ಬೋಲೋ.. ಜೈ ಜೈ ಬೋಲೋ.. ಜೈಜೈ ಹನುಮಾನ್. ಅಂದ್ಕೊAಡAತೆ ಆಗೋದಿಲ್ಲ ಮನುಷ್ಯನ ಜನ್ಮ ಅನ್ನೋ ಹಾಡಿನ ಚಿತ್ರೀಕರಣ ಆಗಬೇಕಿದೆ.

    ಸತೀಶ್ ಮತ್ತು ಶ್ರದ್ಧಾ ಇಬ್ಬರೂ ಚಿತ್ರದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು. ಸತೀಶ್ ಸುಭಾಶ್ ಹೆಸರಿನ ಪಾತ್ರದಲ್ಲಿದ್ದರೆ, ಶ್ರದ್ಧಾ ಸತೀಶ್ ಸಂಗಾತಿ. ಕೆ.ಎಸ್. ನಂದೀಶ್ ನಿರ್ದೇಶನದ ಚಿತ್ರಕ್ಕೆ ಜಾಕೊಬ್ ಫಿಲಂಸ್ ಮತ್ತು ಲೀಡರ್ ಫಿಲಂಸ್ ನಿರ್ಮಾಪಕರು.

  • ತಮಿಳು ಚಿತ್ರದ ಶೂಟಿಂಗ್ ಮುಗಿಸಿದ ಸತೀಶ್ ನೀನಾಸಂ

    ತಮಿಳು ಚಿತ್ರದ ಶೂಟಿಂಗ್ ಮುಗಿಸಿದ ಸತೀಶ್ ನೀನಾಸಂ

    ನೀನಾಸಂ ಸತೀಶ್ ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ತಮಿಳಿನಲ್ಲಿ ಶಶಿಕುಮಾರ್ ಜೊತೆ ಪಗೈವಾನುಲು ಅರುಲ್ವಾಯ್ ಚಿತ್ರದಲ್ಲಿ ನಟಿಸುತ್ತಿರೋ ಸತೀಶ್, ಚಿತ್ರೀಕರಣ ಮುಗಿಸಿದ್ದಾರೆ.

    ಈ ಚಿತ್ರಕ್ಕೆ ಶೇಕ್ಸ್‍ಪಿಯರ್ ಅವರ ನಾಟಕವೊಂದು ಸ್ಫೂರ್ತಿಯಂತೆ. ಚಿತ್ರದಲ್ಲಿ ಸತೀಶ್ ಖೈದಿಯಾಗಿ ನಟಿಸಿದ್ದಾರೆ. ಅನಿಸ್ ಅಬ್ಬಾಸ್ ಅನ್ನೋ ಹೊಸ ಹುಡುಗ ನಿರ್ದೇಶಿಸುತ್ತಿರುವ ಚಿತ್ರವಿದು.

    ಶಶಿಕುಮಾರ್, ನೀನಾಸಂ ಸತೀಶ್, ಬಿಂದು ಮಾಧವಿ, ವಾಣಿ ಭೋಜನ್, ನಾಸರ್, ಜಯಪ್ರಕಾಶ್ ನಟಿಸಿರುವ ಚಿತ್ರವಿದು.

  • ತುಸು ಪೋಲಿ.. ಸ್ವಲ್ಪ ಜಾಲಿ.. ಭಾವನೆಗಳ ಜೋಕಾಲಿ.. : ಪೆಟ್ರೋಮ್ಯಾಕ್ಸ್ ಟ್ರೇಲರ್

    ತುಸು ಪೋಲಿ.. ಸ್ವಲ್ಪ ಜಾಲಿ.. ಭಾವನೆಗಳ ಜೋಕಾಲಿ.. : ಪೆಟ್ರೋಮ್ಯಾಕ್ಸ್ ಟ್ರೇಲರ್

    ತರಲೆ ತುಂಟಾಟಗಳನ್ನಿಟ್ಟುಕೊಂಡು ಚೇಷ್ಟೆ ಮಾಡೋದ್ರಲ್ಲಿ ವಿಜಯ ಪ್ರಸಾದ್ ಎತ್ತಿದ ಕೈ. ಬನ್ನಿ ಪಂಪ್ ಹೊಡೆಯೋಣ ಎಂದು ಹೇಳಿಯೇ ಟ್ರೇಲರ್‍ಗೆ ವೆಲ್‍ಕಂ ಹೇಳೋ ವಿಜಯ್ ಪ್ರಸಾದ್, ಇಲ್ಲಿಯೂ ಬೀಜವನ್ನು ಮರೆತಿಲ್ಲ. ಕೊನೆಗೆ ನಮ್ಮ ಮನೆಯಲ್ಲಿ ಉಕ್ಕಿಸಿದಂತೆ ನಾಳೆ ನಿಮ್ಮ ಮನೆಯಲ್ಲೂ ಉಕ್ಕಿಸಿ.. ಹಾಲನ್ನ.. ಎನ್ನೋ ಡಬಲ್ ಮೀನಿಂಗ್ ಇಟ್ಟು ಟ್ರೇಲರ್ ಮುಗಿಸಿದ್ದಾರೆ.

    ಇದು ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೇಲರು. ಮಧ್ಯೆ ಒಂದಿಷ್ಟು ಭಾವನೆಗಳ ಜೋಕಾಲಿಯೂ ಇದೆ. ನೀನಾಸಂ ಸತೀಶ್, ಹರಿಪ್ರಿಯಾ ನಟಿಸಿರುವ ಚಿತ್ರಕ್ಕೆ ನಿರ್ಮಾಪಕರೂ ನೀನಾಸಂ ಸತೀಶ್ ಅವರೇ. ಪೆಟ್ರೋಮ್ಯಾಕ್ಸ್ ಮನೆ ದೇವ್ರಾಣೆಗೂ ಅದಲ್ಲ ಅನ್ನೋ ಟ್ಯಾಗ್‍ಲೈನು ಇಟ್ಟುಕೊಂಡೇ ಬರುತ್ತಿರೋ ಸಿನಿಮಾ, ಭರಪೂರ ಮನರಂಜನೆಯ ಗಂಟೆ ಬಾರಿಸುತ್ತಿದೆ.

  • ನೀನಾಸಂ ಸತೀಶ್ ಪ್ಯಾನ್ ಇಂಡಿಯಾ ಸಿನಿಮಾಗೆ ಸೂಪರ್ ಸ್ಟಾರ್ ಬರ್ತಾರೆ..!

    ನೀನಾಸಂ ಸತೀಶ್ ಪ್ಯಾನ್ ಇಂಡಿಯಾ ಸಿನಿಮಾಗೆ ಸೂಪರ್ ಸ್ಟಾರ್ ಬರ್ತಾರೆ..!

    ಅಶೋಕ ಬ್ಲೇಡ್ ಅನ್ನೋ ಟೈಟಲ್ಲಿನ ಸಿನಿಮಾದಲ್ಲಿ ನೀನಾಸಂ ಸತೀಶ್ ನಟಿಸುತ್ತಿರುವುದು ಗೊತ್ತಿದೆಯಷ್ಟೇ, ಈಗ  ಆ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾಡೋಕೆ ನಿರ್ಧಾರ ಮಾಡಿದ್ದಾರೆ. ಕಾರಣ ಬೇರೇನಿಲ್ಲ, ಕಂಟೆಂಟ್. ಈ ಚಿತ್ರ ಪ್ಯಾನ್ ಇಂಡಿಯಾ ಆಗುತ್ತಿರುವುದಕ್ಕೋ ಏನೋ.. ಒಬ್ಬ ಸೂಪರ್ ಸ್ಟಾರ್`ನನ್ನು ಕರೆತರುತ್ತಿದ್ದಾರೆ.

    ಕಂಟೆಂಟ್ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾಡುತ್ತಿರುವುದು ಒಂದು ರೀತಿಯಲ್ಲಿ ಸವಾಲು ಎನ್ನಬಹುದು. ನನ್ನ ವೃತ್ತಿ ಬದುಕಿನಲ್ಲಿ ಇಂತಹ ಒಂದು ಸಬ್ಜೆಕ್ಟ್ ಅನ್ನು ನಾನು ಕೇಳಿರಲಿಲ್ಲ. ಯಾವಾಗಲೂ ನಾವು ಮಾಸ್ ಸಿನಿಮಾಗಳನ್ನು ಗಮನದಲ್ಲಿಟ್ಟುಕೊಂಡಿರುತ್ತೇವೆ. ಆದರೆ ಇಂತಹ ಕಥೆಗಳು ಬಂದಾಗ ಬಿಡಬಾರದು ಎನಿಸುತ್ತದೆ. ಹಾಗಾಗಿ ಕೊಂಚ ರಿಸ್ಕ್ ತೆಗೆದುಕೊಂಡು ಈ ಸಿನಿಮಾ ಮಾಡುತ್ತಿದ್ದೇನೆ. ಪ್ರಾದೇಶಿಕ ವಿಷಯ ಯಾವಾಗಲೂ ಯೂನಿವರ್ಸಲ್ ವಿಷಯವಾಗುವುದರಿಂದ ಇದು ಜನರಿಗೆ ಇಷ್ಟವಾಗುತ್ತದೆ ಎಂದಿದ್ದಾರೆ ನೀನಾಸಂ ಸತೀಶ್.

    ಅಶೋಕ ಬ್ಲೇಡ್’ ಸಿನಿಮಾದಲ್ಲಿ ಐತಿಹಾಸಿಕ ಯುದ್ಧದ ದೃಶ್ಯವೊಂದು ಬರುತ್ತದೆ. ಆ ದೃಶ್ಯದಲ್ಲಿ ನಟಿಸಲು ಒಬ್ಬ ಸೂಪರ್ ಸ್ಟಾರ್ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಅವರಾರಯರು ಎಂಬುದನ್ನು ಸದ್ಯದಲ್ಲೇ ರಿವೀಲ್ ಮಾಡುವುದಾಗಿ ಚಿತ್ರತಂಡ ಹೇಳಿದೆ. ಈ ಚಿತ್ರಕ್ಕೆ ನೀನಾಸಂ ಸತೀಶ್ ಕೇವಲ ನಟರಷ್ಟೇ ಅಲ್ಲ, ನಿರ್ಮಾಪಕರೂ ಹೌದು. ತೆಲುಗು, ತಮಿಳಿನಲ್ಲಿ ಸ್ವತಃ ಡಬ್ ಮಾಡುವುದಕ್ಕೂ ಸಿದ್ಧರಾಗಿದ್ದಾರೆ ಸತೀಶ್. ವಿನೋದ್ ವಿ.ಧೊಂಡಾಲೆ ಎಂಬ ನಿರ್ದೇಶಕರು ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಬರಲಿದ್ದಾರೆ. ಕಿರುತೆರೆಯಲ್ಲಿ ಅನುಭವಿಯಾಗಿರುವ ವಿನೋದ್ ಅವರಿಗೆ, ಇದು ಫಸ್ಟ್ ಡೈರೆಕ್ಷನ್ ಮೂವಿ.

  • ಬ್ರಹ್ಮಚಾರಿ ಗೆದ್ದನಲ್ಲ.. ಹಿಡ್ಕೊಳ್ಳೋದು ಹೆಂಗ.

    bramhachari screenings increased post movie release

    ಹಿಡ್ಕ ಹಿಡ್ಕ ಹಿಡ್ಕ ಹಿಡ್ಕ.. ಎನ್ನುತ್ತ ಹಾಡಿನ ಹವಾ ಸೃಷ್ಟಿಸಿದ್ದ ಬ್ರಹ್ಮಚಾರಿ ಗೆದ್ದೇ ಬಿಟ್ಟಿದ್ದಾನೆ. ಸಿನಿಮಾ ರಿಲೀಸ್ ಮಾಡಿದ್ದು 200 ಸೆಂಟರುಗಳಲ್ಲಿ. 2ನೇ ವಾರ ಪೂರೈಸುತ್ತಿರುವ ಬ್ರಹ್ಮಚಾರಿ, ಈಗ 225 ಸೆಂಟರುಗಳಲ್ಲಿ ನಕ್ಕು ನಲಿಸುತ್ತಿದ್ದಾರೆ. ಸಿನಿಮಾ ಗೆದ್ದಿದೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲವೇನೊ..

    ನೀನಾಸಂ ಸತೀಶ್, ಆದಿತಿ ಪ್ರಭುದೇವ ಅಭಿನಯದ ಬ್ರಹ್ಮಚಾರಿ 45 ಸಿನಿಮಾಗಳ ಜೊತೆ ರಿಲೀಸ್ ಆಗಿದ್ದ ಸಿನಿಮಾ. ಅಷ್ಟು ದೊಡ್ಡ ರೇಸ್‌ನಲ್ಲಿ ಗೆದ್ದ ಸಿನಿಮಾ. ಉದಯ್ ಕುಮಾರ್ ಮೆಹ್ತಾ-ಸತೀಶ್ ಕಾಂಬಿನೇಷನ್ ಮತ್ತೊಮ್ಮೆ ವರ್ಕೌಟ್ ಆಗಿದೆ. ಚಂದ್ರಮೋಹನ್ ತುಂಟಾಟ ಆಡಿಸಿ ಮತ್ತೊಮ್ಮೆ ಹಿಟ್ ಹಿಡ್ಕೊಂಡಿದ್ದಾರೆ. 

  • ಮ್ಯಾಟ್ನಿ ಶೋನಲ್ಲಿ ಸತೀಶ್ ಜೊತೆ ರಚಿತಾ ರಾಮ್

    ಮ್ಯಾಟ್ನಿ ಶೋನಲ್ಲಿ ಸತೀಶ್ ಜೊತೆ ರಚಿತಾ ರಾಮ್

    ಅಯೋಗ್ಯ ಹಿಟ್ ಆದ ನಂತರ ರಚಿತಾ ರಾಮ್ ಮತ್ತು ಸತೀಶ್ ನೀನಾಸಂ ಜೋಡಿ ಮತ್ತೊಮ್ಮೆ ಒಂದಾಗಿದೆ. ಅದು ಮ್ಯಾಟ್ನಿ ಚಿತ್ರದಲ್ಲಿ. ಚಿತ್ರ ಈಗ ಸೆಟ್ಟೇರಿದ್ದು, ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರದ ಹಾಡೊಂದರ ಶೂಟಿಂಗ್ ಕೂಡಾ ಶುರುವಾಗಿದೆ. ಅಂದಹಾಗೆ ಇದು ಮನೋಹರ್ ಕಂಪಳ್ಳಿ ಡೈರೆಕ್ಷನ್ ಇರೋ ಸಿನಿಮಾ.

    ರಚಿತಾ ರಾಮ್ ಕೈತುಂಬಾ ಚಿತ್ರಗಳಿವೆ. ಏಕ್ ಲವ್ ಯಾ ಮುಗಿಸಿರುವ ರಚಿತಾ, ಬ್ಯಾಡ್ ಮ್ಯಾನರ್ಸ್, ಲವ್ ಯೂ ರಚ್ಚು, ಲಿಲ್ಲಿ, ವೀರಂ.. ಹೀಗೆ ಒಂದರ ಹಿಂದೊಂದು ಚಿತ್ರಗಳಲ್ಲಿ ಕಂಪ್ಲೀಟ್ ಬ್ಯುಸಿಯಾಗಿದ್ದಾರೆ. ಅತ್ತ ನೀನಾಸಂ ಸತೀಶ್ ಕೂಡಾ ಅತ್ತ ತಮಿಳು ಚಿತ್ರವನ್ನು ಮುಗಿಸಿ, ಇತ್ತ ಕನ್ನಡದಲ್ಲಿ ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಮ್ಯಾಟ್ನಿ ಸೆಟ್ಟೇರಿದೆ.

  • ರಚಿತಾ ರಾಮ್`ಗೆ ಸಂಜೆ ಮೇಲೆ ಕಾಳ್ ಹಾಕ್ತಾವ್ರೆ ನೀನಾಸಂ ಸತೀಶ್

    ರಚಿತಾ ರಾಮ್`ಗೆ ಸಂಜೆ ಮೇಲೆ ಕಾಳ್ ಹಾಕ್ತಾವ್ರೆ ನೀನಾಸಂ ಸತೀಶ್

    ಸಂಜೆ ಮೇಲೆ ಸುಮ್ನೆ ಹಂಗೆ ಫೋನು ಮಾಡ್ಲ ನಿಂಗೆ..

    ನಿನ್ನ ಜೊತೆಗೆ ಸುತ್ತಬೇಕು ಊರ ತುಂಬ ಹಾಗೆ..

    ಎಂದು ಕರೆಯುತ್ತಾ ನೀನಾಸಂ ಸತೀಶ್, ರಚಿತಾ ರಾಮ್`ಗೆ ಕಾಳು ಹಾಕ್ತಿದ್ದಾರೆ. ಅದೂ ಮ್ಯಾಟ್ನಿಗೆ ಕರೆದುಕೊಂಡು ಹೋಗೋಕೆ..ಮ್ಯಾಟ್ನಿ ಚಿತ್ರದ ಮೊದಲ ಹಾಡು ಮೋಡಿಯನ್ನೇ ಮಾಡಿದೆ.

    ರಚಿತಾ ರಾಮ್ ಮುದ್ದು ಮುದ್ದಾಗಿ ಕಾಣ್ತಿದ್ದರೆ, ಮ್ಯಾಟ್ನಿಗೆ ಕರೆಯೋ ಹುಡುಗನಾಗಿ ಲವ್ಲಿ ಬಾಯ್ ಆಗಿದ್ದಾರೆ ನೀನಾಸಂ ಸತೀಶ್. ಮನೋಹರ್ ಕಾಂಪಲ್ಲಿ ನಿರ್ದೇಶನದ ಮ್ಯಾಟ್ನಿ ಚಿತ್ರದ ಈ ಹಾಡು, ಪ್ರೇಮಿಗಳ ಮನಸ್ಸು ಗೆದ್ದಿದೆ. ಲವರ್ಸ್‍ಗಳಿಗೆ ಹುಡುಗಿಯರನ್ನ ಕರೆಯೋಕೆ ಹೊಸ ಲಿರಿಕ್ಸು ಕೊಟ್ಟಿರೋದು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ. ವಿಜಯ್ ಪ್ರಕಾಶ್ ಅವರ ಧ್ವನಿಯಲ್ಲಿ ಹಾಡು ಚೆಂದವಾಗಿ ಮೂಡಿ ಬಂದಿದೆ.

    ಚಿತ್ರದ ಕೊರಿಯೋಗ್ರಫಿ, ಸೆಟ್ ಕೂಡಾ ಡಿಫರೆಂಟ್ ಆಗಿದ್ದು, ಸುಧಾಕರ್ ರಾಜ್ ಅವರ ಪ್ರತಿಭೆ ಮತ್ತು ಶ್ರಮ ಜೊತೆಗೆ ಪ್ರತಾಪ್ ಮೆಂಡನ್ ಅವರ ಕ್ರಿಯೇಟಿವಿಟಿ ಎದ್ದು ಕಾಣುತ್ತಿದೆ. ಪಾರ್ವತಿ ಎಸ್. ಗೌಡ ಅವರು ಚಿತ್ರದ ನಿರ್ಮಾಪಕರು.