` aditi prabhudeva, - chitraloka.com | Kannada Movie News, Reviews | Image

aditi prabhudeva,

 • ಸಕಲಕಲಾವಲ್ಲಭನ ಲವ್  ಸ್ಟೋರಿಗಳು..!

  ಸಕಲಕಲಾವಲ್ಲಭನ ಲವ್  ಸ್ಟೋರಿಗಳು..!

  ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾಗಳಲ್ಲಿ ಒಬ್ಬರಿಗಿಂತ ಹೆಚ್ಚು ಹೀರೋಯಿನ್ಸ್ ಇರುವುದು ಹೊಸದೇನಲ್ಲ. ಇತ್ತೀಚೆಗೆ ಮುಗುಳುನಗೆ ಚಿತ್ರದಲ್ಲಿ ಮೂರ್ ಮೂರು ಜನ ಹೀರೋಯಿನ್ಸ್ ಇದ್ದರು. ಆಶಿಕಾ ರಂಗನಾಥ್, ನಿಖಿತಾ ನಾರಾಯಣನ್, ಅಪೂರ್ವ ಅರೋರಾ ನಾಯಕಿಯರಾಗಿದ್ದರು. ಕೊನೆಯದಾಗಿ ಅಮೂಲ್ಯ 4ನೇ ನಾಯಕಿಯಾಗಿ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದರು. ಈಗ ಅದೇ ತ್ರಿಬ್ಬಲ್ ರೈಡಿಂಗ್ಲ್ಲೂ ಆಗುತ್ತಾ ಅನ್ನೋ ಕುತೂಹಲ ಹುಟ್ಟಿಸಿದ್ದಾರೆ ಡೈರೆಕ್ಟರ್ ಮಹೇಶ್ ಗೌಡ. ಅಂದಹಾಗೆ ಗಣೇಶ್ ಈ ಚಿತ್ರದಲ್ಲಿ ಸಕಲಕಲಾವಲ್ಲಭ. ಆತನ ಮಾತಿಗೆ..ಮೋಡಿಗೆ ಹುಡುಗಿಯರು ಫಿದಾ ಆಗುತ್ತಾರೆ. ಆದರೆ.. ಆಮೇಲೆ ಆಗುವುದೇ ಬೇರೆ.. 

  ಗಣೇಶ್ ಚಿತ್ರಗಳಲ್ಲಿ ಕಾಮಿಡಿ, ಲವ್ ಸ್ಟೋರಿ ಟ್ರ್ಯಾಕ್, ಚೆಂದವಾದ ಹಾಡುಗಳು, ಸುಂದರ ಹೀರೋಯಿನ್ ಇರುವ ನಿರೀಕ್ಷೆ ಇದೆ. ತ್ರಿಬ್ಬಲ್ ರೈಡಿಂಗ್ ಕೂಡಾ ಹಾಗೆಯೇ ಇದೆ. ತ್ರಿಬಲ್ ರೈಡಿಂಗ್ನಲ್ಲಿ ಈಗಾಗಲೇ ಒಬ್ಬರಲ್ಲ, ಮೂರ್ ಜನ ಇದ್ದಾರೆ. ಎಲ್ಲರ ಜೊತೆಯಲ್ಲೂ ಲವ್ ಟ್ರ್ಯಾಕ್ ಇದೆ. ಗಣೇಶ್ ಎದುರು ಆದಿತಿ ಪ್ರಭುದೇವ, ರಚನಾ ಇಂದರ್ ಹಾಗೂ ಮೇಘಾ ಶೆಟ್ಟಿ ಹೀರೋಯಿನ್ಸ್. ಇವರಲ್ಲದೆ ಚಿತ್ರದ ಕೊನೆಯಲ್ಲಿ ನಾಯಕಿ ಬರುತ್ತಾರೆ ಎಂದಿದ್ದಾರೆ ಮಹೇಶ್ ಗೌಡ. ಆ ನಾಯಕಿ ಯಾರು ಅನ್ನೋದನ್ನು ಸಸ್ಪೆನ್ಸ್ ಆಗಿಟ್ಟಿದ್ದಾರೆ. ಪ್ರೀತಿ ಮತ್ತು ಕುಟುಂಬದ ಕಥೆಯೊಂದಿಗೆ ಬಂದಿರುವ ನಿರ್ದೇಶಕರುತಮ್ಮ ಪಾತ್ರಗಳಿಗೆ ಜೀವ ತುಂಬುವ ಕೆಲವೇ ಕೆಲವು ನಟರಲ್ಲಿ ಗಣೇಶ್ ಸಹ ಒಬ್ಬರು.

  ಚಮಕ್ ನಂತರ ಟ್ರಿಬಲ್ ರೈಡಿಂಗ್ನಲ್ಲಿ ಗಣೇಶ್ ಮತ್ತೊಮ್ಮೆ ಡಾಕ್ಟರ್ ಆಗಿದ್ದಾರೆ. ಯೋಗರಾಜ್ ಭಟ್, ದುನಿಯಾ ಸೂರಿಯವರ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಮಹೇಶ್ ಗೌಡ, ಈ ಹಿಂದೆ ವಿನೋದ್ ಪ್ರಭಾಕರ್ ಅವರಿಗೆ ರಗಡ್ ಚಿತ್ರವನ್ನು ನಿರ್ದೇಶಿಸಿದ್ದರು. ಆಗ ಆಕ್ಷನ್ ನೀಡಿದ್ದ ಡೈರೆಕ್ಟರ್, ಈಗ ಲವ್ ಬ್ರೇಕಪ್ ಕಾಮಿಡಿ ಸಿನಿಮಾ ಮಾಡಿದ್ದಾರೆ. ಸಾಧು ಕೋಕಿಲ, ರವಿಶಂಕರ್, ಶರತ್ ಲೋಹಿತಾಶ್ವ, ಶೋಭರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್ ಸೇರಿದಂತೆ ಚಿತ್ರದ ತಾರಾಬಳಗವಿದೆ. ರಾಮ್ ಗೋಪಾಲ್ ನಿರ್ಮಾಣದ ತ್ರಿಬಲ್ ರೈಡಿಂಗ್ ಈಗ ಥಿಯೇಟರಿನಲ್ಲಿದೆ. 4ನೇ ಹೀರೋಯಿನ್ ಯಾರು ಅನ್ನೋದು ಪ್ರೇಕ್ಷಕರಿಗೂ ಗೊತ್ತಾಗಿರುತ್ತೆ. ಅ ಥ್ರಿಲ್ನ್ನ ಥಿಯೇಟರಲ್ಲೇ ಅನುಭವಿಸಿ.

  ಎಲ್ಲರನ್ನೂ ಮೋಡಿ ಮಾಡೋ ಹುಡುಗ ಸಕಲಕಲಾವಲ್ಲಭ. ಈ ಚಿತ್ರದಲ್ಲಿಯೂ ಹಾಗೆಯೇ ಮೂರು ಹುಡುಗಿಯರನ್ನ  ಪ್ರೀತಿಯ ಬಲೆಗೆ ಬೀಳಿಸಿಕೊಳ್ಳೋ ಹುಡುಗ. ನಂತರ ಯಾವ ರೀತಿ ಆ ಪ್ರೀತಿಯ ಬಲೆಯಿಂದ ಹೊರ ಬರುತ್ತಾನೆ ಎನ್ನುವುದೇ ಚಿತ್ರದ ಕಥೆ. ಕಾಮಿಡಿ ಮತ್ತು ಪ್ರೀತಿ ಎರಡೂ ಸಖತ್ತಾಗಿದೆ ಎಂದಿದ್ದಾರೆ ಗಣೇಶ್

 • ಸತೀಶ್ ಮ್ಯಾಟ್ನಿಗೆ ಡಿಂಪಲ್ ಜೊತೆ ಟಾಪ್ ಸುಂದ್ರೀನೂ ಎಂಟ್ರಿ

  ಸತೀಶ್ ಮ್ಯಾಟ್ನಿಗೆ ಡಿಂಪಲ್ ಜೊತೆ ಟಾಪ್ ಸುಂದ್ರೀನೂ ಎಂಟ್ರಿ

  ನೀನಾಸಂ ಸತೀಶ್ ಅಭಿನಯದ ಮ್ಯಾಟ್ನಿ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸುತ್ತಿರೋದು ರಚಿತಾ ರಾಮ್. ಅಯೋಗ್ಯ ಸಕ್ಸಸ್ ನಂತರ ಮತ್ತೊಮ್ಮೆ ಒಂದಾಗಿರೋ ಜೋಡಿ. ಚಿತ್ರ ಶುರುವಾದಾಗಲೇ ಇನ್ನೊಬ್ಬ ಹೀರೋಯಿನ್ ಬರುತ್ತಾರೆ ಎಂದಿದ್ದ ನಿರ್ದೇಶಕ ಮನೋಹರ್ ಕಾಂಪಳ್ಳಿ ಚಿತ್ರಕ್ಕೆ ಕರೆತಂದಿರೋದು ಬ್ರಹ್ಮಚಾರಿ ಸುಂದರಿ ಆದಿತಿ ಪ್ರಭುದೇವ ಅವರನ್ನ.

  ರಚಿತಾ ಮತ್ತು ಆದಿತಿ ಇಬ್ಬರಿಗೂ ಇದು ಸತೀಶ್ ಜೊತೆ 2ನೇ ಸಿನಿಮಾ. ಮೊದಲ ಚಿತ್ರಗಳು ಸಕ್ಸಸ್ ಆಗಿವೆ. ಹೀಗಾಗಿ ಮೂರೂ ಜನ ಒಟ್ಟಿಗೇ ನಟಿಸುತ್ತಿರೋ ಚಿತ್ರವೂ ಯಶಸ್ವಿಯಾಗಲಿದೆ ಅನ್ನೋದು ಚಿತ್ರತಂಡದ ನಂಬಿಕೆ.

  ಚಿತ್ರದಲ್ಲಿ ಆದಿತಿ ಮೆಡಿಕಲ್ ಸ್ಟೂಡೆಂಟ್ ಆಗಿ ನಟಿಸುತ್ತಿದ್ದಾರಂತೆ. ಚೈತ್ರಾ ಅನ್ನೋದು ಅವರ ಪಾತ್ರದ ಹೆಸರು. ಪಾರ್ವತಿ ಎಂಬುವವರು ನಿರ್ಮಾಣ ಮಾಡುತ್ತಿರೋ ಮ್ಯಾಟ್ನಿ ಚಿತ್ರದಲ್ಲಿ ಡಾರ್ಕ್ ಕಾಮಿಡಿ ಕಥೆಯಿದ್ದು, ಲವ್ ಮತ್ತು ಥ್ರಿಲ್ಲರ್ ಅಂಶಗಳೂ ಚಿತ್ರದಲ್ಲಿವೆಯಂತೆ.

 • ಸೂಪರ್ ವುಮೆನ್ ಫಸ್ಟ್ ಲುಕ್ ಲೀಕ್ ಆಗಿದ್ದು ಹೇಗೆ..?

  ಸೂಪರ್ ವುಮೆನ್ ಫಸ್ಟ್ ಲುಕ್ ಲೀಕ್ ಆಗಿದ್ದು ಹೇಗೆ..?

  ಕನ್ನಡದಲ್ಲಿ ಸೂಪರ್ ಮ್ಯಾನ್ ಸಬ್ಜೆಕ್ಟ್ ಸಿನಿಮಾಗಳೇ ಇಲ್ಲ. ಹೀಗಿರುವಾಗ ಇದೇ ಮೊದಲ ಬಾರಿಗೆ ಸೂಪರ್ ವುಮೆನ್ ಕ್ಯಾರೆಕ್ಟರ್ ಇಟ್ಟುಕೊಂಡು ಸಿನಿಮಾ ಬರುತ್ತಿದೆ. ಆದಿತಿ ಪ್ರಭುದೇವ ಸೂಪರ್ ವುಮೆನ್ ಕ್ಯಾರೆಕ್ಟರ್‍ನಲ್ಲಿ ನಟಿಸುತ್ತಿರುವ ಚಿತ್ರ ಆನ.

  ಆದರೆ, ವಂಡರ್ ವುಮೆನ್ ಗೆಟಪ್‍ನಲ್ಲಿರೋ ಆದಿತಿ ಪ್ರಭುದೇವ ಅವರ ಗೆಟಪ್, ಸೆಟ್‍ನಿಂದಲೇ ಲೀಕ್ ಆಗಿದೆ. ಫಸ್ಟ್ ಲುಕ್ ರಿವೀಲ್ ಮಾಡಲು ಮಾರ್ಚ್ 24ರ ಮುಹೂರ್ತ ಫಿಕ್ಸ್ ಮಾಡಿತ್ತು ಚಿತ್ರತಂಡ.

  ಇತ್ತೀಚೆಗೆ ಕೆಜಿಎಫ್ ಚಾಪ್ಟರ್ 2 ಟೀಸರ್‍ಗೂ ಇದೇ ಗತಿಯಾಗಿತ್ತು. ಯಶ್ ಹುಟ್ಟುಹಬ್ಬಕ್ಕೆಂದೇ ಸಿದ್ಧ ಮಾಡಿದ್ದ ಟೀಸರ್‍ನ್ನು ಯಾರೋ ಲೀಕ್ ಮಾಡಿದ ಕಾರಣ, ಒಂದು ದಿನ ಮೊದಲೇ ಟೀಸರ್ ಹೊರಬಿಟ್ಟಿತ್ತು ಕೆಜಿಎಫ್ ಟೀಂ. ತಮ್ಮ ಚಿತ್ರದ ಫಸ್ಟ್ ಲುಕ್ ಲೀಕ್ ಲೀಕ್ ಆಗಿರುವುದಕ್ಕೆ ಬೇಸರ ತೋಡಿಕೊಂಡಿದ್ದಾರೆ ಆದಿತಿ ಪ್ರಭುದೇವ.

 • ಸೆ.9ಕ್ಕೆ ಜಮಾಲಿಗುಡ್ಡ : ಡಾಲಿ, ಆದಿತಿ ಲವ್ ಸ್ಟೋರಿ

  ಸೆ.9ಕ್ಕೆ ಜಮಾಲಿಗುಡ್ಡ : ಡಾಲಿ, ಆದಿತಿ ಲವ್ ಸ್ಟೋರಿ

  ಡಾಲಿ ಧನಂಜಯ್ ಮತ್ತು ಆದಿತಿ ಪ್ರಭುದೇವ ಒಟ್ಟಿಗೇ ನಟಿಸಿರುವ ಮೊದಲ ಸಿನಿಮಾ ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ. ಸೆಪ್ಟೆಂಬರ್ 9ಕ್ಕೆ ರಿಲೀಸ್ ಆಗುತ್ತಿದೆ.

  ಕುಶಾಲ್ ಗೌಡ ನಿರ್ದೇಶನದ ಚಿತ್ರವಿದು.

  ಬಾಬಾ ಬುಡನ್‍ಗಿರಿ, ಕುದುರೆಮುಖ, ಚಿಕ್ಕಮಗಳೂರಿನಲ್ಲೆ ಹೆಚ್ಚು ಚಿತ್ರೀಕರಣಗೊಂಡಿರುವ ಚಿತ್ರದಲ್ಲಿ ವಿಭಿನ್ನ ಕಥೆಯಂತೂ ಇದೆ. ಡಾಲಿ ಬಾರ್ ಸಪ್ಲೈಯರ್ ಪಾತ್ರದಲ್ಲಿದ್ದರೆ, ಆದಿತಿ ಮಸಾಜ್ ಪಾರ್ಲರ್‍ನಲ್ಲಿ ಕೆಲಸ ಮಾಡೋ ಹುಡುಗಿಯ ಪಾತ್ರ ಮಾಡಿದ್ದಾರೆ. ಇವರಿಬ್ಬರ ಮಧ್ಯೆ ಪ್ರೀತಿಯಾಗುತ್ತದೆ. ಚಿತ್ರದ ಮೊದಲ ಪೋಸ್ಟರ್‍ನಲ್ಲಿ ಡಾಲಿ ಪುಟ್ಟ ಮಗುವಿನ ಜೊತೆ ಕುಳಿತಿರುವ ಪೊಸ್ಟರ್ ತೋರಿಸಿದ್ದರು. ಹಾಗಾದರೆ.. ಕಥೆ ಏನು..? ಆ ಕುತೂಹಲಕ್ಕೆ ಉತ್ತರ ಸೆಪ್ಟೆಂಬರ್ 9ಕ್ಕೆ ದೊರೆಯಲಿದೆ.

  ನಟಿ ಭಾವನಾ ರಾಮಣ್ಣ ಈ ಚಿತ್ರದ ಮೂಲಕ ಕಮ್‍ಬ್ಯಾಕ್ ಮಾಡುತ್ತಿರೋದು ವಿಶೇಷ. ತ್ರಿವೇಣಿ ರಾವ್, ಪ್ರಕಾಶ್ ಬೆಳವಾಡಿ, ಯಶ್ವಂತ್ ಶೆಟ್ಟಿ ಮೊದಲಾದವರು ನಟಿಸಿರೊ ಚಿತ್ರಕ್ಕೆ ಶ್ರೀಹರಿ ನಿರ್ಮಾಪಕರು.

 • ಹಿರೋಷಿಮಾ.. ನಾಗಸಾಕಿ.. : ಜಮಾಲಿಗುಡ್ಡದಲ್ಲಿ 2ನೇ ವಿಶ್ವಯುದ್ಧದ ದುರಂತ ನಗರ ನೆನಪಾಗಿದ್ಯಾಕೆ?

  ಹಿರೋಷಿಮಾ.. ನಾಗಸಾಕಿ.. : ಜಮಾಲಿಗುಡ್ಡದಲ್ಲಿ 2ನೇ ವಿಶ್ವಯುದ್ಧದ ದುರಂತ ನಗರ ನೆನಪಾಗಿದ್ಯಾಕೆ?

  ಹಿರೋಷಿಮಾ ಮತ್ತು ನಾಗಸಾಕಿ. ಈ ಎರಡೂ ಹೆಸರನ್ನು ಜಗತ್ತು ಮರೆಯುವಂತೆಯೇ ಇಲ್ಲ. ಅಮೆರಿಕ ಸೃಷ್ಟಿಸಿದ್ದ ವಿಧ್ವಂಸಕ ಪರಮಾಣು ಬಾಂಬ್ ಪ್ರಯೋಗಕ್ಕೆ ಬಲಿಯಾದ ಜಪಾನ್‍ನ ನಗರಗಳಿವು. ಆ ದುರಂತದ ತೀವ್ರತೆ.. ಭಯಾನಕತೆ.. ಈಗ ನೋಡಿದರೂ ಎದೆ ನಡುಗುತ್ತದೆ. ಆದರೆ.. ಜಮಾಲಿಗುಡ್ಡದಲ್ಲಿ ಹಾಗಾಗಿಲ್ಲ. ಅವು ಪಾತ್ರಗಳಾಗಿ ಬಂದಿವೆ.

  ಹೀರೋ ಡಾಲಿ ಧನಂಜಯ್ ಹಿರೋಷಿಮಾ ಅಂತೆ. ವಿಲನ್ ಯಶ್ ಶೆಟ್ಟಿ ನಾಗಸಾಕಿಯಂತೆ. ಅವರಿಬ್ಬರೂ ಖೈದಿಗಳೇ ಇರಬೇಕು ಅನ್ನೋ ಅರ್ಥ ಡಾಲಿಯ ಸ್ಟೇಟ್`ಮೆಂಟ್`ನಲ್ಲಿದೆ. ಅವಳಿ ಖೈದಿಗಳು ಅವಳಿ ನಗರಗಳ ಹೆಸರಲ್ಲಿ ಅಂದಿದ್ದಾರೆ ಡಾಲಿ.

  ಡಾಲಿ ಜಮಾಲಿಗುಡ್ಡ ಒನ್ಸ್ ಅಪಾನ್ ಎ ಟೈಂ ಚಿತ್ರದಲ್ಲಿ ಬಾರ್ ಸಪ್ಲೈಯರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದಿತಿ ಪ್ರಭುದೇವ ಹೀರೋಯಿನ್. ಕುಶಾಲ್ ಗೌಡ ನಿರ್ದೇಶನದ ಚಿತ್ರಕ್ಕೆ ಶ್ರೀಹರಿ ನಿರ್ಮಾಪಕರು.