` aditi prabhudeva, - chitraloka.com | Kannada Movie News, Reviews | Image

aditi prabhudeva,

 • `ಸಿಂಗ'ನದ್ದು ತಾಯಿ-ಮಗನ ಸೆಂಟಿಮೆಂಟ್ ಕಥೆ..!

  sings has mother and son's sentiment

  ಶ್ಯಾನೆ ಟಾಪಾಗವ್ಳೆ.. & ವ್ಹಾಟ್ ಎ ಬ್ಯೂಟಿಫುಲ್ಲು ಹುಡುಗಿ ಶಿವ ಸಿವಾ.. ಹಾಡು ಕೇಳಿದವರು, ಟ್ರೇಲರ್‍ನಲ್ಲಿ ಫೈಟು ನೋಡಿದವರು.. ಇದೊಂದು ಪಕ್ಕಾ ಮಾಸ್ ಸಿನಿಮಾ ಇರಬೇಕು ಎಂದುಕೊಳ್ತಾರೆ. ಚಿರಂಜೀವಿ ಸರ್ಜಾ, ಅದಿತಿ ಪ್ರಭುದೇವ ಅವರ ಹಾಡು, ಕುಣಿತ, ಫೈಟು ಹಾಗೆಯೇ ಇವೆ. ಆದರೆ, ಇದು ಎಲ್ಲ ಕಮರ್ಷಿಯಲ್ ಅಂಶಗಳೂ ಇರೋ ತಾಯಿ-ಮಗನ ಸೆಂಟಿಮೆಂಟ್ ಕಥೆ ಎನ್ನುವ ಮೂಲಕ ಕುತೂಹಲ ಹುಟ್ಟಿಸುತ್ತಾರೆ ನಿರ್ಮಾಪಕ ಉದಯ್ ಮೆಹ್ತಾ.

  ಚಿತ್ರದಲ್ಲಿ ಚಿರು ತಾಯಿಯಾಗಿ ನಟಿಸಿರೋದು ನಟಿ ತಾರಾ ಅನುರಾಧ. ನಾಯಕಿಯನ್ನು, ನಾಯಕನಿಗಿಂತಲೂ ಮೊದಲು ಇಷ್ಟಪಡುವುದು ಅವರೇ. ಹೀರೋಗೆ ಸಿಂಗ ಎಂದು ಹೆಸರಿಡೋಕೂ ಕಾರಣವಿದೆ. ಅದು ಚಿತ್ರದಲ್ಲಿ ಗೊತ್ತಾಗಲಿದೆ ಎನ್ನುವ ಉದಯ್ ಮೆಹ್ತಾ, ಚಿತ್ರವನ್ನು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುತ್ತಿದ್ದಾರೆ.

  ವಿಜಯ್ ಕಿರಣ್ ನಿರ್ದೇಶನದ ಚಿತ್ರದಲ್ಲಿ ಮಾಸ್ ಮತ್ತು ಕ್ಲಾಸ್ ಎರಡೂ ವರ್ಗಕ್ಕೆ ರೀಚ್ ಆಗುವ ಅಂಶಗಳಿವೆ.

 • 'Ranganayaki' Censored With 'U/A' Certificate

  ranganayaki censored u/a

  Dayal's new film 'Ranganayaki' is ready for release and the Regional Board of Film Certification has given 'U/A' certificate for the film.

  Dayal who has been making films with different content off late, has selected yet another different subject for his new film. The film talks about how a rape victim deals with what has happened to her as an incident, without self-pitying. The censor board has given an 'U/A' certificate without any mutes or cuts.

  The new film stars Aditi Prabhudeva, M G Srinivas and others in prominent roles. Naveen Krishna has written the dialogue s. Manikanth Kadri is the music composer, while Rakesh is the cinematographer.

 • 20 ಕೋಟಿ ಲೈಕ್ಸ್ ದಾಖಲೆ ಬರೆದ ಬಾಗ್ಲು ತೆರಿ ಮೇರಿ ಜಾನ್

  20 ಕೋಟಿ ಲೈಕ್ಸ್ ದಾಖಲೆ ಬರೆದ ಬಾಗ್ಲು ತೆರಿ ಮೇರಿ ಜಾನ್

  ತೋತಾಪುರಿ ಸಿನಿಮಾದ ಬಾಗ್ಲು ತೆಗಿ ಮೇರಿ ಜಾನ್‌... ಹಾಡು ವಿಶ್ವದಾದ್ಯಂತ ಸದ್ದು ಮಾಡಿದ್ದು ಗೊತ್ತೇ ಇದೆ. ದೊಡ್ಡವರಿಂದ ಚಿಕ್ಕವರವರೆಗೂ, ದೇಶ - ವಿದೇಶದವರೂ ಫಿದಾ ಆಗಿ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಿಂದ ಹಿಡಿದು ಯಾವುದೇ ಸಮಾರಂಭ, ಮನೆ, ಕಾರು, ಕಚೇರಿ ಮೊದಲಾದ ಕಡೆಯೂ 'ತೋತಾಪುರಿ' ಹಾಡಿನದ್ದೇ ಕಲರವ..

  ಇವೆಲ್ಲದರ ಜತೆಗೆ 'ಬಾಗ್ಲು ತೆಗಿ ಮೇರಿ ಜಾನ್‌' ೨೦೦ ಮಿಲಿಯನ್‌ ಹಿಟ್ಸ್‌ ಸೃಷ್ಟಿಸಿದೆ. ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ವಿಜಯ ಪ್ರಸಾದ್‌ ಸಾಹಿತ್ಯ ರಚಿಸಿದ್ದು, ವ್ಯಾಸರಾಜ್‌ ಸೋಸಲೆ ಹಾಗೂ ಅನನ್ಯಾ ಭಟ್‌ ದನಿಗೂಡಿಸಿದ್ದಾರೆ.

  'ತೋತಾಪುರಿ' ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗಿದೆ. ಕಾಮಿಡಿ ಸಿನಿಮಾವೊಂದು ಎರಡು ಭಾಗಗಳಲ್ಲಿ ಬರುತ್ತಿರುವುದು ಇದೇ ಮೊದಲು. ಸಿನಿಮಾ ಬಿಡುಗಡೆ ನಂತರ ಸಿರೀಸ್ ಆಗುವುದು ಬೇರೆ. ಸಿನಿಮಾ ಆರಂಭದಲ್ಲಿಯೇ ಎರಡು ಭಾಗಗಳಾಗಿ ಸಿನಿಮಾ ಮಾಡುವುದು ಬೇರೆ.

  ಜಗ್ಗೇಶ್‌ ನಟಿಸಿರುವ ಸಿನಿಮಾಗಳ ಪೈಕಿ 'ತೋತಾಪುರಿ' ಬಿಗ್‌ ಬಜೆಟ್‌ ಸಿನಿಮಾ  ಆಗಿದ್ದು, ಜಗ್ಗೇಶ್ ಎದುರು ಅದಿತಿ ಪ್ರಭುದೇವ ನಾಯಕಿ. ಡಾಲಿ ಧನಂಜಯ, ಸುಮನ್‌ ರಂಗನಾಥ್‌, ವೀಣಾ ಸುಂದರ್‌, ದತ್ತಣ್ಣ, ಹೇಮಾ ದತ್‌ ಸೇರಿದಂತೆ ಅನೇಕ ಕಲಾವಿದರು ತಾರಾಗಣದಲ್ಲಿದ್ದಾರೆ. ತೋತಾಪುರಿಯಲ್ಲಿ ಹಾಸ್ಯದ ಜೊತೆಗೆ ಸಮಾಜದಲ್ಲಿ ನಡೆಯುತ್ತಿರುವ ಪ್ರಚಲಿತ ಘಟನೆಗಳು ಇವೆ ಎಂದು ನರ‍್ದೇಶಕ ವಿಜಯ ಪ್ರಸಾದ್ ತಿಳಿಸಿದ್ದಾರೆ.

 • ೭ ನಿರ್ದೇಶಕರು.. ೭ ಕಥೆ.. ಕಥಾ ಸಂಗಮದ ವಿಭಿನ್ನ ಟ್ರೇಲರ್

  katha sangama trailer released

  ರಿಷಬ್ ಶೆಟ್ಟಿ ಬ್ಯಾನರಿನಲ್ಲಿ ಹೊಸದೊಂದು ಪ್ರಯೋಗದ ಮೊದಲ ಝಲಕ್ ಹೊರಬಿದ್ದಿದೆ. ೭ ಮಂದಿ ನಿರ್ದೇಶಕರು, ೭ ಕಥೆಗಳು.. ಅವುಗಳೆಲ್ಲವನ್ನೂ ಸೇರಿಸಿ ಒಂದು ಸಿನಿಮಾ. ಈ ಪ್ರಯೋಗದ ಕಥೆಯೇ ಕಥಾ ಸಂಗಮ. ವಿಶೇಷವೆಂದರೆ ಈ ೭ ಕಥೆಗಳಲ್ಲಿ ಯಾವೊಂದು ಕಥೆಗೂ ರಿಷಬ್ ಡೈರೆಕ್ಷನ್ ಇಲ್ಲ. ಆದರೆ ಒಂದು ಕಥೆಯಲ್ಲಿ ಹುಚ್ಚನಾಗಿ ಕಾಣಿಸಿಕೊಂಡಿದ್ದಾರೆ ರಿಷಬ್ ಶೆಟ್ಟಿ.

  ಫ್ಯಾಮಿಲಿ ಮ್ಯಾನ್ ಕಿಶೋರ್, ನರಳುವ ಪ್ರೇಮಿಯಾಗಿ ರಾಜ್ ಬಿ.ಶೆಟ್ಟಿ, ಹುಚ್ಚ ಅಲೆಮಾರಿಯಾಗಿ ರಿಷಬ್ ಶೆಟ್ಟಿ ಇದ್ದಾರೆ. ಹರಿಪ್ರಿಯಾ, ರಿಷಬ್ ಪಾತ್ರಕ್ಕೆ ಮುಖಾಮುಖಿಯಾಗುತ್ತಾರೆ. ಪ್ರಕಾಶ್ ಬೆಳವಾಡಿ ಬೆರಗು ಹುಟ್ಟಿಸುತ್ತಾರೆ. ಅಲ್ಲೊಂದು ತಾಯಿ ಮಗುವಿನ ಕಥೆಯೂ ಇದೆ. ವಿಭಿನ್ನ ಕಥಾ ಹಂದರ ಹೊಂದಿರುವ ಕಥಾ ಸಂಗಮ ಕುತೂಹಲ ಹುಟ್ಟಿಸುವಲ್ಲಿ ಗೆದ್ದಿದೆ.

 • Aditi Prabhudeva Roped In For 'Gajanana and Gang'

  aditi prabhudeva roped in for in for gajanana and gand

  Actress Aditi Prabhudeva has been roped in as a heroine for a new film called 'Gajanana and Gang'. The film is being directed by Abhishek Shetty, who had earlier directed and acted in 'Nam Gani Bcom Pass'.

  'Gajanana and Gang' is a film based on some true event that occurred between 2014 and 2021. The film talks about friendship, love, middle class sentiments and other issues.

  Aditi Prabhudeva will be playing heroine opposite Mahadev in this film. Mahadev had earlier acted in 'Iruvudellava Bittu' as a hero. Apart from Mahadev and Aditi Prabhudeva, Abhishek Shetty is also seen in a prominent role. 

  The film is likely to start in the month of September. Pradhyothan is the music director, while Uday Leela is the cinematographer. 

 • Bazaar' Team Complains About Piracy

  bazaar team complaints against piracy

  'Simple' Suni's new film 'Bazaar' which was released last week is getting good response all over. Meanwhile, the team has complained to the Cyber Police about the piracy of the film.

  Recently, somebody has shot the film inside theater and has uploaded to internet which has caught the attention of 1.82 lakh viewers. So, the makers of the film have approached the Cyber Police and has filed a complaint regarding the piracy. 

  'Bazaar' stars newcomer Dhanveer Gowda along with Aditi Prabhudeva. The film is produced by Thimmegowda. M L Prasanna has written the story, while Suni has written the screenplay apart from directing it. Santhosh Rai Pathaje is the cinematographer, while Ravi Basrur is the music director.

 • Darshan Releases A Song From 'Singa'

  darshan releases a song from singa

  Actor Darshan on Saturday released a song from Chiranjeevi Sarja starrer 'Singha'. Earlier, a song called 'Shaane Top Aagavle' was released and now another song called 'What a Beautiful Lady' was released by Darshan.

  Producer Uday Mehta has organised a success meet for songs and Darshan had come as a chief Guest. Chiranjeevi Sarja, Aditi Prabhudeva, Tara and others were present at the occasion.

  'Singha' is scheduled to release on the 19th of July across Karnataka. The film is  produced by Uday Mehta under Vasavi Productions and Vijay Kiran is the director. The film stars Chiranjeevi Sarja, Aditi Prabhudeva, Ravishankar and others in prominent roles.

 • First Look Of 'Bramhachari' on May 24th

  first look of bramhachari on may 24th

  Satish Neenasam's new film 'Bramhachari' has completed the first schedule and the team is planning to release the first look of the film on the 24th of May.

  Recently, the team has completed 27 days of shoot and most of the talkie portion is completed in this schedule. Satish Neenasam, Aditi Prabhudeva, Shivaraj K R Pet, Dattanna, Padmaja Rao and others participated in the first schedule.

  'Bramhachari' is being scripted and directed by Chandra Mohan who had earlier directed 'Bombay Mitai' and 'Double Engine'. The film is being produced by Uday Mehta. 

 • Ranganayaki To Be Screened in Goa Intl Film Festival

  ranganayaki to be screened in goa inti film festival

  Talented filmmaker Dayal Padmanabhan returns with yet another promising venture titled 'Ranganayaki' starring the beautiful Aditi Prabhudeva in the lead. Even as the film is set for release on November 1, the movie has made it to the list of films to screened at Goa International Film Festival.

  Dayal's film Ranganayaki will be screened under Indian Panorama category during the festival. The director is overjoyed with the selection since selection of films for International film festival such as Goa is believed to be one of the toughest to make it to the list.

  As the title suggests, Ranganayaki, is a women-centric tale which is ready to enthrall the move lovers this festive season.

 • Satish Neenasam Gets 'Bramhachari' Teaser As Birthday Gift

  sathish neenasam gets bramhachari teaser as birthday gift

  Satish Neenasam who celebrated his birthday on Thursday got a special gift from the team of 'Bramhachari'. The team officially released the teaser of the film as a birthday gift for Satish.

  The shooting for 'Bramhachari' is almost complete and the team intends to complete the remaining portions soon. 'Bramhachari' is directed by Chandra Mohan and being produced by Uday Mehta.

  The film stars Satish Neenasam, Aditi Prabhudeva, Shivaraj K R Pet, Dattanna, Padmaja Rao and others in prominent roles. Dharma Vish is the music director, while Ravi is the cinematographer.

 • ಅತ್ಯಾಚಾರಕ್ಕೊಳಗಾದ ಯುವತಿ.. ಹೋರಾಟ.. ರಂಗನಾಯಕಿ ಟ್ರೇಲರ್ ಅಚ್ಚರಿ

  ranganayaki reflects a strong message

  ದಯಾಳ್ ಪದ್ಮನಾಭನ್ ನಿರ್ದೇಶನದ ರಂಗನಾಯಕಿ ಚಿತ್ರದ ಟ್ರೇಲರ್ ಹೊರಬಿದ್ದಿದೆ. ಟ್ರೇಲರ್‍ಗೆ ವ್ಯಾಲ್ಯೂಮ್ 1 ವರ್ಜಿನಿಟಿ ಎಂದು ಹೆಸರಿಟ್ಟು ಟ್ರೇಲರ್ ಬಿಟ್ಟಿದ್ದಾರೆ ದಯಾಳ್. ಬಜಾರ್, ಸಿಂಗ ಚಿತ್ರಗಳಲ್ಲಿ ಗ್ಲಾಮರ್ ಗೊಂಬೆಯಾಗಿ ಮಿಂಚಿದ್ದ ಆದಿತಿ ಪ್ರಭುದೇವ, ರಂಗನಾಯಕಿಯಲ್ಲಿ ಬೆರಗು ಹುಟ್ಟಿಸುತ್ತಾರೆ.

  ಅತ್ಯಾಚಾರಕ್ಕೊಳಗಾಗುವ ನಾಯಕಿ, ನ್ಯಾಯಕ್ಕಾಗಿ ಹೋರಾಡುವ ಯುವತಿ, ಡ್ರಗ್ಸ್, ಹೆಜ್ಜೆ ಹೆಜ್ಜೆಗೂ ಹಿಂಸೆ ನೀಡುವ ಸಿಸ್ಟಂ, ಪ್ರತೀಸುವ ಹುಡುಗ.. ಹೀಗೆ ಹಲವು ಮಜಲುಗಳನ್ನು ಒಂದೇ ಟ್ರೇಲರ್‍ನಲ್ಲಿ ಪುಟ್ಟ ಪುಟ್ಟ ದೃಶ್ಯಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ ದಯಾಳ್.

  ಆದಿತಿ ಪ್ರಭುದೇವ, ಶ್ರೀನಿ, ತ್ರಿವಿಕ್ರಮ್, ಸುಚೇಂದ್ರ ಪ್ರಸಾದ್ ನಟಿಸಿರುವ ಚಿತ್ರಕ್ಕೆ ಎಸ್.ವಿ.ನಾರಾಯಣ್ ನಿರ್ಮಾಪಕ. 

 • ಅದೇ ಲಕ್ಕಿ ನವೆಂಬರ್ : ಬ್ರಹ್ಮಚಾರಿಗೆ ಲವ್ ಇನ್ ಮಂಡ್ಯ ನೆನಪು

  lucky,november for bramhachari producer and hero

  ಬ್ರಹ್ಮಚಾರಿ ರಿಲೀಸ್ ಸಂಭ್ರಮದಲ್ಲಿರೋ ನಟ ನೀನಾಸಂ ಸತೀಶ್ ಮತ್ತು ನಿರ್ಮಾಪಕ ಉದಯ್ ಕೆ.ಮೆಹ್ತಾ ಇಬ್ಬರಿಗೂ ನವೆಂಬರ್ ಎಂದರೆ ಲಕ್ಕಿ ಎನ್ನಿಸೋಕೆ ಕಾರಣವೂ ಇದೆ. ಕಾರಣ ಇಷ್ಟೆ, 2014ರ ನವೆಂಬರ್ 28ರಂದು ಲವ್ ಇನ್ ಮಂಡ್ಯ ರಿಲೀಸ್ ಆಗಿತ್ತು. ಈಗ ನವೆಂಬರ್ 29, ಬ್ರಹ್ಮಚಾರಿ ರಿಲೀಸ್ ಆಗುತ್ತಿದೆ.

  ಆ ಚಿತ್ರದ ನಿರ್ಮಾಪಕ ಮತ್ತು ನಾಯಕ ಇಬ್ಬರೂ ಈ ಚಿತ್ರದಲ್ಲೂ ಜೊತೆಯಾಗಿದ್ದಾರೆ. ಆ ಚಿತ್ರದಲ್ಲಿ ನೀನಾಸಂ ಸತೀಶ್ ಜೊತೆ ಸಿಂಧು ಲೋಕನಾಥ್ ನಾಯಕಿ. ಇಲ್ಲಿ ಸತೀಶ್ ಜೊತೆ ಆದಿತಿ ಪ್ರಭುದೇವ ನಾಯಕಿ.

  ಬ್ರಹ್ಮಚಾರಿಯಂತೆಯೇ ಲವ್ ಇನ್ ಮಂಡ್ಯದ ಎಲ್ಲ ಹಾಡುಗಳೂ ಹಿಟ್ ಆಗಿದ್ದವು. ಈ ಬ್ರಹ್ಮಚಾರಿಯಲ್ಲಿ ಹಿಡ್ಕ ಹಿಡ್ಕ ಹಾಡು ಸೃಷ್ಟಿಸಿದ್ದ ರೋಮಾಂಚನದAತೆಯೇ.. ಲವ್ ಇನ್ ಮಂಡ್ಯದಲ್ಲಿ ಕರೆಂಟು ಹೋದ ಟೈಮಲಿ.. ಹಾಡು ರೊಮ್ಯಾಂಟಿಕ್ ಸೆನ್ಸೇಷನ್ ಆಗಿತ್ತು.

 • ಆದಿತಿ ಪ್ರಭುದೇವ ಅವರ 25 ಸಾವಿರ ರೂ. ಗೇಮ್ : ಉತ್ತರ ಕೊಟ್ಟವರಿಗೆಲ್ಲ ಉಚಿತ..!

  ಆದಿತಿ ಪ್ರಭುದೇವ ಅವರ 25 ಸಾವಿರ ರೂ. ಗೇಮ್ : ಉತ್ತರ ಕೊಟ್ಟವರಿಗೆಲ್ಲ ಉಚಿತ..!

  ಆದಿತಿ ಪ್ರಭುದೇವ ಕೇವಲ ನಗುವಿಗಷ್ಟೇ ಅಲ್ಲ, ತರಲೆ, ಬೋಲ್ಡ್ ನೆಸ್`ಗೂ ಫೇಮಸ್. ಅಷ್ಟೇ ಕ್ರಿಯೇಟಿವಿಟಿಯೂ ಇರೋ ಹುಡುಗಿ. ಇದೀಗ ಈ ದಾವಣಗೆರೆ ಬೆಣ್ಣೆ ದೋಸೆ ಇನ್ನೊಂದು ಆಟ ಆಡಿದ್ದಾರೆ. ಅದು 25 ಸಾವಿರ ರೂ. ಆಟ. ಬೆಂಗಳೂರಿನಿಂದ ದಾವಣಗೆರೆವರೆಗೆ..  ಇಷ್ಟು ದಿನ ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಅಡುಗೆ, ಜ್ಯೂಸ್, ಸಿಂಪಲ್ ರೆಸಿಪಿ, ಸಿನಿಮಾ, ಫ್ಯಾಮಿಲಿ ಆಂಡ್ ಶಾಪಿಂಗ್ ಎಂದು ವಿಡಿಯೋ ಮಾಡುತ್ತಿದ್ದ ಆದಿತಿ ಪ್ರಭುದೇವ,  ಈ ಸಲ ಡಿಫರೆಂಟ್ ಆಗಿರಬೇಕು ಎಂದು ಬೆಂಗಳೂರಿನಿಂದ ತಮ್ಮ ಹುಟ್ಟೂರು ದಾವಣಗೆರೆಗೆ ಪ್ರಯಾಣ ಮಾಡುವಾಗ ಕ್ರಿಯೇಟಿವ್ ಆಗಿ ಯೋಚಿಸಿ ಆಡಿರುವ ಆಟವೇ 25 ಸಾವಿರ ರೂಪಾಯಿ ಆಟ.

  25 ಸಾವಿರ ಹಣವನ್ನು ಒಂದು ಕವರ್ಗಳಲ್ಲಿ ಹಾಕುವೆ. ಒಂದರಲ್ಲಿ 2 ಸಾವಿರ ಇದೆ ಮತ್ತೊಂದರಲ್ಲಿ 6 ಸಾವಿರ.. ಹೀಗೆ.. ಅವರಿಗೆ ದಾನ ಕೊಟ್ಟಂತೆಯೂ ಇರಬಾರದು. ಪುಟ್ಟ ಪುಟ್ಟ ಪ್ರಶ್ನೆ ಕೇಳುತ್ತೇನೆ. ಸರಿ ಉತ್ತರ ಕೊಟ್ಟವರಿಗೆ ಗಿಫ್ಟ್ ಎಂದು ಆರಂಭ ಮಾಡಿದ್ದಾರೆ ಆದಿತಿ ಪ್ರಭುದೇವ. 25 ಸಾವಿರ ರೂ. ಹಣವನ್ನು ದಾವಣಗೆರೆ ತಲುಪುವ ಹೊತ್ತಿಗೆ ಖಾಲಿ ಮಾಡಿದ್ದಾರೆ. ಇದು ಯೂಟ್ಯೂಬ್ ಚಾನೆಲ್ ಕ್ಲಿಕ್ ಮಾಡಿಸಿಕೊಳ್ಳೋ ಗಿಮಿಕ್ ಎಂದು ಲೇವಡಿ ಮಾಡಿದವರೂ ಇದ್ದಾರೆ. ಒಂದೊಳ್ಳೆ ಕೆಲ್ಸ ಎಂದು ಬೆನ್ನು ತಟ್ಟಿದವರೂ ಇದ್ದಾರೆ.

 • ಈ ವರ್ಷದ ಕೊನೆಯಲ್ಲೂ ಡಾಲಿಯದ್ದೇ ಸಿನಿಮಾ

  ಈ ವರ್ಷದ ಕೊನೆಯಲ್ಲೂ ಡಾಲಿಯದ್ದೇ ಸಿನಿಮಾ

  2021ರಲ್ಲಿ ಬಿಡುಗಡೆಯಾದ ಕೊನೆಯ ಸಿನಿಮಾ ಬಡವ ರಾಸ್ಕಲ್. ಡಾಲಿ ಧನಂಜಯ ಮತ್ತು ಅಮೃತಾ ಅಯ್ಯಂಗಾರ್ ಪ್ರಧಾನ ಪಾತ್ರದಲ್ಲಿದ್ದ ಸಿನಿಮಾದೊಂದಿಗೆ 2021 ಮುಗಿದಿತ್ತು. ಜೊತೆಯಲ್ಲೇ ಡಾಲಿಯ ಅದೃಷ್ಟದ ಬಾಗಿಲೂ ತೆರೆದಿತ್ತು. ನಿರ್ಮಾಪಕರಾಗಿಯೂ ಗೆದ್ದಿದ್ದರು ಡಾಲಿ ಧನಂಜಯ. ಈಗ 2022ರ ಕೊನೆ ಹತ್ತಿರವಾಗುತ್ತಿದೆ. ಈ ಬಾರಿಯೂ ಕೊನೆಯ ಸಿನಿಮಾ ಡಾಲಿ ಧನಂಜಯ್ ಅವರದ್ದೇ. ಡಿ.30ರಂದು ಇದೇ ಮೊದಲ ಬಾರಿಗೆ ಡಾಲಿ ಮತ್ತು ಆದಿತಿ ಪ್ರಭುದೇವ ಜೊತೆಯಾಗಿ ನಟಿಸಿರೋ ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ ಸಿನಿಮಾ ರಿಲೀಸ್ ಆಗಲಿದೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ರಿಲೀಸ್ ಆಗಲಿದೆ.

  ಕನ್ನಡಕ್ಕಾಗಿ ಒಂದನ್ನು ಒತ್ತಿ ಖ್ಯಾತಿಯ ಕುಶಾಲ್ ಗೌಡ ಆಕ್ಷನ್ ಕಟ್ ಹೇಳಿದ್ದು ನಿಹಾರಿಕ ಮೂವಿಶ್ ಲಾಂಛನದಡಿ ಶ್ರೀ ಹರಿ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದು ಹಿನ್ನೆಲೆ ಸಂಗೀತವನ್ನ ಅನೂಪ್ ಸೀಳಿನ್ ಸಂಯೋಜಿಸಿದ್ದಾರೆ.

  ಡಾಲಿ, ಆದಿತಿ ಜೊತೆಗೆ ಚಿತ್ರದಲ್ಲಿ ಭಾವನಾ ರಾಮಯ್ಯ, ಬಾಲನಟಿ ಪ್ರಾಣ್ಯ ರಾವ್, ಯಶ್ ಶೆಟ್ಟಿ ಕೂಡಾ ನಟಿಸಿದ್ದಾರೆ. ಹಿರೋಶಿಮಾ, ನಾಗಸಾಕಿ, ಕಾರು, ಮತ್ತೇ ಅವ್ಳು ..! ಪ್ರತಿ ಪಾತ್ರಗಳ ಹಿಂದೆ ಕಥೆಯಿದೆ, ಆ ಕಥೆಗಳ ಒಳಗೆ ಹಲವು ಕುತೂಹಲ ಘಟನೆಗಳು. ಒಂದೊಂದರ ಹಿಂದೆಯೂ ಒಂದೊಂದು ಕಥೆಯಿದೆ ಅನ್ನೋ ಸುಳಿವು ಕೊಟ್ಟಿದ್ದಾರೆ ಡಾಲಿ ಧನಂಜಯ್.

 • ಎಂತಾ ಟೈಮಲ್ಲಿ ಎಂತಾ ಸಿನಿಮಾ? ಹೇಗಿದೆ ಗೊತ್ತಾ ತೋತಾಪುರಿ..?

  ಎಂತಾ ಟೈಮಲ್ಲಿ ಎಂತಾ ಸಿನಿಮಾ? ಹೇಗಿದೆ ಗೊತ್ತಾ ತೋತಾಪುರಿ..?

  ಇದು ಕೇವಲ ಡಬಲ್ ಮೀನಿಂಗ್.. ಸಿಂಗಲ್ ಮೀನಿಂಗ್ ಸ್ಟೋರಿ ಅಲ್ಲ.

  ನಮ್ದು ಬೊಟ್ಟು.. ನಿಮ್ದು ತೊಟ್ಟು..

  ನಲ್ಲಿ ಸಣ್ಣಕ್ಕಿದ್ರೂ ನೀರು ಫೋರ್ಸ್ ಆಗಿ ಬರುತ್ತೆ. ಕೆಲವು ನಲ್ಲಿ ಪೈಪ್ ದಪ್ಪ ಇದ್ರೂ ನೀರೇ ಬರಲ್ಲ. ನಿಮ್ ನಲ್ಲೀಲಿ ನೀರ್ ಬರಲ್ವಾ?

  ಅಕ್ಕನಿಗೆ ಬಗ್ಗಿಸಿ ಹೊಡೆಯೋದು ಅಂದ್ರೆ ತುಂಬಾ ಪ್ರಾಣ..

  ನಿಂಗೆ ಬದನೇಕಾಯಿ ಇಷ್ಟ ಆಗೋ ಹಾಗೆ.. ಅವರಿಗೆ ಪುಸ್ತಕ ಇಷ್ಟ..

  ಇದು ಕಚಗುಳಿ ಇಡೋ ಡೈಲಾಗುಗಳಾದ್ರೆ..

  ಮುಂದಿನ ಕಥೆ ಮತ್ತು ಡೈಲಾಗು.. ಮೆದುಳು ಮತ್ತು ಹೃದಯಕ್ಕೆ ಏಕಕಾಲಕ್ಕೆ ಕೈ ಹಾಕಿ ಉಪ್ಪು ಕಾರ ಹಾಕ್ತವೆ.

  ದೇವರಿಂದ ತಪ್ಪಿಸ್ಕೊಂಡ್ರೂ ಕರ್ಮಗಳಿಂದ ತಪ್ಪಿಸ್ಕೊಳ್ಳೋಕಾಗಲ್ಲ.

  ಜಾತಿ ಕಾಲಮ್ಮಲ್ಲಿ ಭಾರತದವನು ಅಂತಾ ಬರ್ಕೊಂಡ್ ಬಿಡಿ..

  ನಾನು ಧರ್ಮ, ಜಾತಿ ದತ್ತು ತಗೊಂಡಿಲ್ಲ. ಮಗುನ ದತ್ತು ತಗೊಂಡಿದ್ದೀನಿ.

  ಇಂತಹ ಹೃದಯಕ್ಕೆ ತಟ್ಟುವ ಸಂಭಾಷಣೆಗಳೂ ಇವೆ..

  ಎರಡರ ಸೃಷ್ಟಿಕರ್ತ ವಿಜಯ್ ಪ್ರಸಾದ್. ರಾಯರ ಮಠದಲ್ಲಿ ಮುಸ್ಲಿಂ ಹುಡುಗಿಯ ಪ್ರಾರ್ಥನೆ, ಪೂಜೆ.. ಕ್ರೈಸ್ತ ಸನ್ಯಾಸಿನಿ.. ಅವಳ ಪ್ರೇಮ ಪ್ರಕರಣ.. ಹಿಂದೂ ಮುಸ್ಲಿಂ ಲವ್ ಸ್ಟೋರಿ.. ಹೀಗೆ ಬೇರೆಯದೇ ಕಥೆ ಹೇಳುತ್ತಿದ್ದಾರೆ ವಿಜಯ್ ಪ್ರಸಾದ್. ತಮ್ಮ ಎಂದಿನ ನಾಟಿ ಸ್ಟೈಲಿನಲ್ಲಿ.

  ಕಳೆದ ಕೆಲವು ತಿಂಗಳಿಂದ ಇಡೀ ದೇಶ ಇದೇ ಹಿಂದೂ ಮುಸ್ಲಿಂ ಅಶಾಂತಿಯಿಂದ ನರಳುತ್ತಿದೆ. ನಲುಗುತ್ತಿದೆ. ಇಂತಹ ಹೊತ್ತಿನಲ್ಲಿ ತೆರೆಗೆ ಬರೋಕೆ ಸಿದ್ಧವಾಗಿದೆ ತೋತಾಪುರಿ. ಅಂದಹಾಗೆ ಇದು ವಿವಾದಗಳು ಶುರುವಾದ ಮೇಲೆ ಸಿದ್ಧವಾದ ಸಿನಿಮಾ ಅಲ್ಲ ಅನ್ನೋದು ಎಲ್ಲರ ಗಮನಕ್ಕಿರಲಿ.

  ಜಗ್ಗೇಶ್, ಡಾಲಿ ಧನಂಜಯ್, ಅದಿತಿ ಪ್ರಭುದೇವ, ಪವಿತ್ರಾ ಲೋಕೇಶ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್ ಮೊದಲಾದವರು ನಟಿಸಿರೋ ಚಿತ್ರವಿದು. ಕೆ.ಎ.ಸುರೇಶ್ ನಿರ್ಮಾಣದ ತೋತಾಪುರಿ 2 ಭಾಗಗಳಲ್ಲಿ ಬರುತ್ತಿದ್ದು, ಮೊದಲ ಭಾಗ ಶೀಘ್ರದಲ್ಲೇ ರಿಲೀಸ್ ಆಗಲಿದೆ.

 • ಎಲ್ಲರೂ ಪ್ರೀತಿಸಿದ್ರೆ.. ಮೂವರಲ್ಲಿ ಗಣಪ ಸಿಕ್ಕೋದ್ಯಾರಿಗೆ?

  ಎಲ್ಲರೂ ಪ್ರೀತಿಸಿದ್ರೆ.. ಮೂವರಲ್ಲಿ ಗಣಪ ಸಿಕ್ಕೋದ್ಯಾರಿಗೆ?

  ಒಬ್ಬಳು ಭಾವುಕತೆಯಲ್ಲೇ ಮಿಂದೇಳುವವಳು. ಮೇಘಾ ಶೆಟ್ಟಿ. ಅವಳು ಐ ಲವ್ ಯೂ ಅಂತಾಳೆ. ಮತ್ತೊಬ್ಬಳು ಪಟಾಕಿ. ತರಲೆ. ಬೋಲ್ಡ್. ಆದಿತಿ ಪ್ರಭುದೇವ. ಅವಳೂ ಐ ಲವ್ ಯೂ ಅಂತಾಳೆ.

  ಮತ್ತೊಬ್ಬಳು ಮುಗ್ಧತೆಯನ್ನೇ ಮುಖವಾಡದಂತೆ ಹೊತ್ತು ಬದುಕುವವಳು. ಆಕ್ಚುವಲಿ ಮುಗ್ದೆ. ಇನ್ನೋಸೆಂಟ್. ರಚನಾ ಇಂದರ್. ಅವಳೂ ಐ ಲವ್ ಯೂ ಅಂತಾಳೆ. ಅವರಿಬ್ಬರ ಪ್ರೀತಿ ಸ್ವೀಕರಿಸಬೇಕಾದವನು ಒಬ್ಬನೇ. ಗೋಲ್ಡನ್ ಸ್ಟಾರ್ ಗಣೇಶ್.

  ತ್ರಿಬ್ಬಲ್ ರೈಡಿಂಗ್ ಚಿತ್ರದ ಟ್ರೇಲರ್ ನೋಡಿದವರಿಗೆ ಒಂದು ಮಜಾಕ್ ನಕ್ಕೊಂಡ್ ಬರೋಣು ಎನ್ನಿಸಿದ್ರೆ ಅದು ಸಹಜ. ಮಹೇಶ್ ಗೌಡ ಕಾಮಿಡಿಯನ್ನೇ ಆಯ್ಕೆ ಮಾಡಿಕೊಂಡು ನಗಿಸೋ ಕಾಯಕ ಮಾಡಿದ್ದಾರೆ. ಹಾಗಂತ ಆಕ್ಷನ್, ಡ್ರಾಮಾ, ಚೇಸಿಂಗ್, ಫೈಟಿಂಗು ಇಲ್ಲ ಎಂದಲ್ಲ. ಎಲ್ಲವೂ ಇದೆ. ಹದವಾಗಿ ಬೆರೆಸಿ ತ್ರಿಬ್ಬಲ್ ರೈಡಿಂಗ್ ಮಾಡಲಾಗಿದೆ. ಸಾಧುಕೋಕಿಲ, ರವಿಶಂಕರ್.. ಹೀಗೆ ಎಲ್ಲರೂ ಇದ್ದಾರೆಂದ ಮೇಲೆ ಇದೊಂದು ಫ್ಯಾಮಿಲಿ ಪ್ಯಾಕೇಜ್ ಎನ್ನುವುದರಲ್ಲಿ ಅನುಮಾನವಿಲ್ಲ. ನವೆಂಬರ್ 16ಕ್ಕೆ ತ್ರಿಬ್ಬಲ್ ರೈಡಿಂಗ್ ರಿಲೀಸ್ ಆಗಲಿದೆ.

 • ಓಲ್ಡ್ ಮಾಂಕ್ ಅನಾಗ್ಲಿಫ್ ಪ್ರಮೋಷನ್

  ಓಲ್ಡ್ ಮಾಂಕ್ ಅನಾಗ್ಲಿಫ್ ಪ್ರಮೋಷನ್

  ಓಲ್ಡ್ ಮಾಂಕ್. ಫೆಬ್ರವರಿಯಲ್ಲಿ ರಿಲೀಸ್ ಆಗುತ್ತಿರೋ ಸಿನಿಮಾ. ಶ್ರೀನಿ, ಅದಿತಿ ಪ್ರಭುದೇವ, ಎಸ್.ನಾರಾಯಣ್ ಪ್ರಧಾನ ಪಾತ್ರದಲ್ಲಿರೋ ಚಿತ್ರ ಓಲ್ಡ್ ಮಾಂಕ್. ಚಿತ್ರದಲ್ಲಿ ನಾರದನ ಕಥೆಯೂ ಇದೆ. ವಿಭಿನ್ನ ಕಥೆಯ ಚಿತ್ರವನ್ನು ವಿಭಿನ್ನವಾಗಿಯೇ ಪ್ರಚಾರ ಮಾಡುತ್ತಿದೆ ಚಿತ್ರತಂಡ. ಅದು ಅನಾಗ್ಲಿಫ್ ಪ್ರಮೋಷನ್.

  ಏನಿದು ಅನಾಗ್ಲಿಫ್ ಪ್ರಮೋಷನ್ ಎಂದು ತಲೆಕೆಡಿಸಿಕೊಳ್ಳಬೇಡಿ. ಇದು ಅನಾಗ್ಲಿಫ್ ಎಂದು ಕರೆಯಲ್ಪಡೋ 3ಡಿ ಸ್ಟಾಂಡಿ. ಇಲ್ಲಿ ಎರಡು ಕನ್ನಡಕಗಳಿರುತ್ತವೆ.  ಒಂದು ಕೆಂಪು, ಇನ್ನೊಂದು ನೀಲಿ. ಒಂದು ಕಡೆಯಿಂದ ನಾಯಕನ ಪಾತ್ರ ಕಾಣಿಸಿದರೆ, ಇನ್ನೊಂದು ಕಡೆಯಿಂದ ನಾರದನ ಪಾತ್ರ ಕಾಣಿಸುತ್ತೆ. ಈ ಅನಾಗ್ಲಿಫ್ ಟೆಕ್ನಾಲಜಿಯನ್ನು ಬಳಸುತ್ತಿರುವ ಮೊದಲ ಕನ್ನಡ ಚಿತ್ರ ಓಲ್ಡ್ ಮಾಂಕ್. ರಾಜ್ಯದಲ್ಲಿ ಸುಮಾರು 70 ಕಡೆ ಈ ರೀತಿ ಪ್ರಚಾರ ಮಾಡುತ್ತಿದ್ದಾರೆ ಹೀರೋ ಕಂ ನಿರ್ದೇಶಕ ಶ್ರೀನಿವಾಸ್.

  ಪ್ರದೀಪ್ ಶರ್ಮಾ, ಸೃಜನ್ ಯರಬೋಲು, ಸೌರಭ್-ವೈಭವಿ ಮತ್ತು ಶ್ರೀನಿ ಚಿತ್ರದ ನಿರ್ಮಾಣಕ್ಕೆ ಹೆಗಲು ಕೊಟ್ಟಿದ್ದಾರೆ. 

 • ಗಣೇಶ್ ಚೆಲುವೆಯರ ಚಿತ್ತಾರ

  ಗಣೇಶ್ ಚೆಲುವೆಯರ ಚಿತ್ತಾರ

  ಗೋಲ್ಡನ್ ಸ್ಟಾರ್  ಗಣೇಶ್ ಮೂರು ಜನ ಬ್ಯೂಟಿಫುಲ್ ಹೀರೋಯಿನ್ಸ್ ಜೊತೆ ತ್ರಿಬಲ್ ರೈಡಿಂಗ್ ಮಾಡಿದ್ದಾರೆ. ನಗುವಿನಲ್ಲೇ ಸಂಭ್ರಮದ ಅಲೆ ಎಬ್ಬಿಸೋ ಆದಿತಿ ಪ್ರಭುದೇವ, ಮುಗ್ಧತೆಯ ಮತ್ತೊಂದು ಅವತಾರ ರಚನಾ ಇಂದರ್, ಅಮಾಯಕತೆಯನ್ನು ಕಣ್ಣುಗಳಲ್ಲಿ ತುಂಬಿಕೊಂಡಿರೊ ಮೇಘಾ ಶೆಟ್ಟಿ ಜೊತೆ ಗಣೇಶ್ ತ್ರಿಬ್ಬಲ್ ರೈಡಿಂಗ್ ಮಾಡಿರುವುದು ಸ್ಪೆಷಲ್ಲು. ಗಣೇಶ್ ನಟನೆಯ ತ್ರಿಬಲ್ ರೈಡಿಂಗ್ ಸಿನಿಮಾ ಇದೇ ನವೆಂಬರ್ 25ಕ್ಕೆ ಬೆಳ್ಳಿತೆರೆಗೆ ಬರಲಿದೆ. ಸಿನಿಮಾದ ಪ್ರಚಾರವನ್ನ ವಿಭಿನ್ನವಾಗಿ ಮಾಡಿರೋ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಚೆಲುವಿನ ಚಿತ್ತಾರ ಸಿನಿಮಾದ ಸ್ಟೈಲ್ನಲ್ಲೇ ಅಭಿಮಾನಿಗಳ ಜೊತೆ ಸೇರಿ ಬೈಕ್ ರೈಡಿಂಗ್ ಮಾಡಿದ್ದಾರೆ.

  ಗೋಲ್ಡನ್ ಸ್ಟಾರ್ ಗಣೇಶ್, ಚೆಲುವೆಯರ ಚಿತ್ತಾರವಿದು. ಸ್ಟೈಲು, ಸ್ಮೈಲಿಗಷ್ಟೇ ಅಲ್ಲ, ಟ್ರೆಂಡ್ ಸೆಟ್ಟರ್ ಕೂಡ ಆಗಿರೋ ಗಣೇಶ್ ಈಗ ಬೈಕ್ ಕ್ರೇಜ್ ಸೃಷ್ಟಿಸಿದ್ದಾರೆ. ಮುಂಗಾರು ಮಳೆ ಸಿನಿಮಾ ಬಂದಾಗ ಗಣೇಶ್ ಹಾಕಿದ್ದ ಕಾಸ್ಟ್ಯೂಮ್ಗಳು ಟ್ರೆಂಡ್ ಆಗಿದ್ದರೆ, ಚೆಲುವಿನ ಚಿತ್ತಾರದಲ್ಲಿ ಗಣೇಶ್ ಬೈಕ್ ಓಡಿಸಿದ್ದ ಸ್ಟೈಲ್ ಟ್ರೆಂಡ್ ಆಗಿತ್ತು. ಈಗ ಅದೇ ಸ್ಟೈಲ್ನಲ್ಲಿ ತ್ರಿಬ್ಬಲ್ ರೈಡಿಂಗ್ ಮಾಡಿದ್ದಾರೆ ಗಣೇಶ್.

  ಮಹೇಶ್ ಹೌಡ ನಿರ್ದೇಶನದ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಯಟ್ಟ ಯಟ್ಟ ಅನ್ನೋ ಸಾಂಗ್ ಇದೆ. ಈ ಹಾಡಿನಲ್ಲಿ ಗಣಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡಿನ ಹುಕ್ ಸ್ಟೆಪ್ಸ್ ಯಾರು ಚನ್ನಾಗಿ ಡಾನ್ಸ್ ಮಾಡುತ್ತಾರೋ ಅವರಲ್ಲಿ 25 ಜನರನ್ನ ಆಯ್ಕೆ ಮಾಡಿಕೊಂಡು ಅವರ ಜೊತೆ ರೈಡಿಂಗ್ ಹೋಗುತ್ತೇನೆ ಅಂತ ಗಣೇಶ್ ಹೇಳಿದ್ರು. ಹೀಗಾಗಿ ಈ ಡೈಹಾರ್ಡ್ ಪ್ಯಾನ್ಸ್ ಜೊತೆ ಗಣಿ ಬೈಕ್ ರೈಡ್ ಮಾಡಿದ್ದಾರೆ ಎಲ್ಲ 25 ಜನರ ಜೊತೆಯಲ್ಲೂ ರೈಡಿಂಗ್ ಹೋಗಿದ್ದು ವಿಶೇಷ.

  ತ್ರಿಬಲ್ ರೈಡಿಂಗ್ ಹೀರೋಯಿನ್ಸ್ ಕೂಡ ನಾವೇನು ಕಮ್ಮಿ ಅನ್ನೋ ತರಾ  ಫ್ಯಾನ್ಸ್ ಜೊತೆ ಬೈಕ್ ಹತ್ತಿ ರೈಡ್ ಮಾಡಿದ್ದಾರೆ. ನಟಿ ಆದಿತಿ ಪ್ರಭುದೇವ, ರಚನಾ ಇಂದರ್, ಮೇಘಾ ಶೆಟ್ಟಿ ರೈಡ್ ಮಾಡಿ ಸಂಭ್ರಮಿಸಿದ್ದಾರೆ. ಅಂದಹಾಗೆ ನಾಯಕಿಯರೆಲ್ಲ ಹುಡುಗರ ಜೊತೆ ರೈಡಿಂಗ್ ಹೋದರೆ, ಗಣೇಶ್ ಹುಡುಗರು-ಹುಡುಗಿಯರು ಎಂಬ ಭೇದ ಭಾವ ಮಾಡಲಿಲ್ಲ.

 • ಚಿರು ಮೇಲೆ ಆದಿತಿಯ ಪುಟ್ಟ ಪುಟ್ಟ ಆಸೆ

  another song of singa released

  ಸಿಂಗ ಚಿತ್ರ ರಿಲೀಸ್‍ಗೂ ಮೊದಲೇ ಭರ್ಜರಿ ಸದ್ದು ಮಾಡ್ತಿದೆ. ಸಿಂಗ ಚಿತ್ರದ ಶ್ಯಾನೆ ಟಾಪಾಗವ್ಳೆ ಹಾಡು ಹಿಟ್ ಆಗಿದ್ದರ ಹಿಂದೆಯೇ, ಚಿತ್ರದ ಇನ್ನೊಂದು ಹಾಡು ಹೊರಬಿದ್ದಿದೆ. ಪುಟ್ಟ ಪುಟ್ಟ ಆಸೆ ನಮಗೆಲ್ಲ.. ಎಂದು ಶುರುವಾಗುವ ಹಾಡಿನಲ್ಲಿ, ನಾಯಕಿಯೇ ನಾಯಕನ ಮೇಲಿನ ಆಸೆ ಹೇಳಿಕೊಳ್ಳುವ ಸಾಹಿತ್ಯವಿದೆ. ಹಾಡು ಹಾಡಿರೋದು ಅನುರಾಧಾ ಭಟ್. 

  ಚಿರಂಜೀವಿ ಸರ್ಜಾ ಮೇಲೆ ಆದಿತಿ ಪ್ರಭುದೇವ ಕ್ರಷ್ ಹೇಳಿಕೊಳ್ಳೋ ಹಾಡಿಗೆ ಧರ್ಮವಿಶ್ ಸಂಗೀತವಿದೆ. ಉದಯ್ ಮೆಹ್ತಾ ನಿರ್ಮಾಣದ ಚಿತ್ರಕ್ಕೆ ವಿಜಯ್ ಕಿರಣ್ ನಿರ್ದೇಶಕ. ಹಾಡನ್ನು ರಿಲೀಸ್ ಮಾಡಿ ಶುಭ ಕೋರಿರುವುದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್.

 • ಜಮಾಲಿಗುಡ್ಡದ ಕಥೆ ಏನು?

  ಜಮಾಲಿಗುಡ್ಡದ ಕಥೆ ಏನು?

  ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ. ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರವನ್ನು ಡೈರೆಕ್ಟ್ ಮಾಡಿದ್ದ ಕುಶಾಲ್ ಗೌಡ ನಿರ್ದೇಶನದ ಸಿನಿಮಾ. ಡಾಲಿ ಧನಂಜಯ್, ಅದಿತಿ ಪ್ರಭುದೇವ, ಭಾವನಾ ಮೊದಲಾದವರು ನಟಿಸಿರೋ ಚಿತ್ರದ ಚಿತ್ರೀಕರಣ ಬೆಂಗಳೂರು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ನಡೆಯುತ್ತಿದೆ.

  ಆಕ್ಚುಯಲಿ ಜಮಾಲಿಗುಡ್ಡ ಅನ್ನೋ ಸ್ಥಳ ಇಲ್ಲ. ಅದು ನಮ್ಮ ಕಲ್ಪನೆಯ ಜಾಗ. ಲವ್, ಆ್ಯಕ್ಷನ್ ಎಲ್ಲವೂ ಇರೋ ಎಂಟರ್‍ಟೈನರ್. ಜಮಾಲಿಗುಡ್ಡ ಅನ್ನೋ ಸ್ಥಳದಲ್ಲಿ ಒಂದು ಕಾಲದಲ್ಲಿ ಏನೆಲ್ಲ ನಡೀತು ಅನ್ನೋದೆ ನಮ್ಮ ಕಥೆ. ಹೀಗಾಗಿ ಜಾನರ್ ಹೇಳಲ್ಲ ಎನ್ನುತ್ತಾರೆ ಕುಶಾಲ್ ಗೌಡ.

  ಶ್ರೀಹರಿ ರೆಡ್ಡಿ ನಿರ್ಮಾಣದ ಸಿನಿಮಾ ಈಗಾಗಲೇ 45 ದಿನದ ಶೂಟಿಂಗ್ ಮುಗಿಸಿದೆ. ಮೇಕಿಂಗ್ ಅದ್ಧೂರಿಯಾಗಿಯೇ ಇದೆ. ಸತತವಾಗಿ ಸಕ್ಸಸ್ ಕಾಣುತ್ತಿರೋ ಡಾಲಿ ಧನಂಜಯ್ ಸಿನಿಮಾ, ಇನ್ನೊಂದೆರಡು ತಿಂಗಳಲ್ಲಿ ರಿಲೀಸ್‍ಗೆ ರೆಡಿಯಾಗುವ ನಿರೀಕ್ಷೆ ಇದೆ.