ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ, ಸಂತೋಷ್ ಆನಂದರಾಮ್ ನಿರ್ದೇಶನದ, ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾ ಯುವರತ್ನ. ಈಗಾಗಲೇ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ಚಿತ್ರದ ನಾಯಕಿಯನ್ನು ಫೈನಲ್ ಮಾಡಿದೆ.
ಪುನೀತ್‍ಗೆ ಹೀರೋಯಿನ್ ಆಗಿ ಬರುತ್ತಿರುವುದು ಸಯೇಷಾ. ಈಗಾಗಲೇ ತೆಲುಗು, ಹಿಂದಿಯಲ್ಲಿ ನಟಿಸಿರುವ ಸಯೇಷಾ ಪುನೀತ್ ಜೊತೆ ನಟಿಸುತ್ತಿರುವುದಕ್ಕೆ ಥ್ರಿಲ್ ಆಗಿದ್ದೇನೆ. ಶೀಘ್ರದಲ್ಲೇ ಟೀಂ ಸೇರಿಕೊಳ್ಳುತ್ತೇನೆ ಎಂದಿದ್ದಾರೆ.
ಉಳಿದಂತೆ.. ಕಥೆ, ಪಾತ್ರದ ಬಗ್ಗೆ ಅವರು ಏನೆಂದರೆ ಏನೂ ಹೇಳಿಲ್ಲ. ಹೇಳುವಂತೆಯೂ ಇಲ್ಲ. ಏಕೆಂದರೆ, ಅದು ನಿರ್ದೇಶಕರ ಕಂಡೀಷನ್ನು.