` adachanege kshamisi, - chitraloka.com | Kannada Movie News, Reviews | Image

adachanege kshamisi,

  • Adachanegagi Kshamisi review: Chitraloka Rating 3.5/5

    adachangegai kshamisi movie review

    Once again a new team with an experimental subject has exceeded the expectations. A well scripted suspense thriller runs simultaneously between present and the past! Director Bharath Navunda has managed to pack enough surprises for an engaging tale which comes along with soothing numbers and most importantly, the background score which enhances the thrilling moments.

    The film revolves around a boy who has been brought up in an uncultured family and is hardly aware of social etiquette. What follows is his struggle to adjust in society, he does not even know how to live in. Will he succumb to societal pressure? Well, the answer to it will certainly not disappoint anyone after experiencing it for over two hours. 

    While the first half hints about what is in store, it is actually the second part where the reel action exists with sudden twists and turns in the tale. A naive concept, the probe gets deeper with more interesting facts starts churning out before it heads for a big climax in the end.

    The sincere efforts stands out with pretty good performances by Pradeep Varma, Megha, Preetu Pooja and Vidya Kulkarni in the lead. It also features Srinivas Prabu, K.S.Sridhar, Shiva Manju, Auto Nagaraj, Hari Prasad, Abhimanyu, Jagadhish Venky, Ravi L Pujari in the supporting roles.

    As the teaser talks about unexpected events in life, the crime thriller keeps the audience guessing for an edge of the seat experience. It ends on a high note with a meaningful message. Enjoy the thriller ride for a pakka paisa vasool entertainment.

     

  • ಅಡಚಣೆಗಾಗಿ ಕ್ಷಮಿಸಿ.. ಇನ್ನೊಂದು ಆಪ್ತಮಿತ್ರ - ನಾರ್ವೆ ಕನ್ನಡಿಗರ ಮೆಚ್ಚುಗೆ

    adachanegagi kshamisi gets appreciation from norway kannadigas

    ಕನ್ನಡದ ಸಿನಿಮಾಗಳು ಇಲ್ಲಿ ರಿಲೀಸ್ ಆಗುವ ಮುನ್ನವೇ ವಿದೇಶದಲ್ಲಿ ರಿಲೀಸ್ ಆಗಿ ಮೆಚ್ಚುಗೆ ಗಳಿಸುತ್ತಿರುವುದು ಕನ್ನಡ ಚಿತ್ರರಂಗದ ಹೊಸ ಬೆಳವಣಿಗೆ. ಈ ಸಾಲಿಗೆ ಹೊಸ ಸೇರ್ಪಡೆ ಅಡಚಣೆಗಾಗಿ ಕ್ಷಮಿಸಿ. ಹಿರಿಯ ಸಂಗೀತ ನಿರ್ದೇಶಕ ಸದ್ಗುಣ ಮೂರ್ತಿ ಅವರ ಪುತ್ರ ಪ್ರದೀಪ್ ವರ್ಮ ನಾಯಕರಾಗಿ ನಟಿಸಿರುವ ಚಿತ್ರ ಅಡಚಣೆಗಾಗಿ ಕ್ಷಮಿಸಿ. ನಾರ್ವೆಯ ಓಸ್ಲೋ ನಗರದಲ್ಲಿನ ಕನ್ನಡಿಗರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿತ್ತು ಅಡಚಣೆಗಾಗಿ ಕ್ಷಮಿಸಿ ಚಿತ್ರತಂಡ.

    ಇದು ಇನ್ನೊಂದು ಆಪ್ತಮಿತ್ರವಾಗಲಿದೆ. ತಾಂತ್ರಿಕವಾಗಿ ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ ಎಂಬ ಸರ್ಟಿಫಿಕೇಟ್ ಕೊಟ್ಟಿದ್ದಾರೆ ನಾರ್ವೆ ಕನ್ನಡಿಗರು. ಸೈಕಲಾಜಿಕಲ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಅಡಚಣೆಗಾಗಿ ಕ್ಷಮಿಸಿ ಚಿತ್ರಕ್ಕೆ ಭರತ್ ಎಸ್ ನಾವುಂದ ನಿರ್ದೇಶನವಿದೆ. 

  • ಅಡಚಣೆಗಾಗಿ ಕ್ಷಮಿಸಿ'ಗೆ ಚೆನ್ನೈನಿಂದ ಸ್ವೀಟ್ ನ್ಯೂಸ್

    adachanegagi kshamisi to release in chennai

    ಹೊಸಬರೇ ನಟಿಸಿ ನಿರ್ದೇಶಿಸಿರುವ ವಿಭಿನ್ನ ಕಥಾಹಂದರ ಚಿತ್ರ ಅಡಚಣೆಗಾಗಿ ಕ್ಷಮಿಸಿ. ಈಗಾಗಲೇ ನಾರ್ವೆಯಲ್ಲಿ ನಡೆದ ಚಿತ್ರೋತ್ಸವದಲ್ಲಿ ಕನ್ನಡಿಗರು ಮೆಚ್ಚಿಕೊಂಡಿದ್ದರು. ಅದಾದ ಮೇಲೆ ಆಸ್ಟ್ರೇಲಿಯ, ರ್ಮನಿಯ ಕನ್ನಡಿಗರಿಗೂ ಸಿನಿಮಾ ಇಷ್ಟವಾಗಿತ್ತು. ಇದು ಮತ್ತೊಂದು ಆಪ್ತಮಿತ್ರ ಆಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೆಲ್ಲದರ ನಡುವೆ ಈಗ ಚಿತ್ರತಂಡಕ್ಕೆ ಖುಷಿ ಕೊಡುವ ಸುದ್ದಿ ಚೆನ್ನೈನಿಂದ ಬಂದಿದೆ.

    ಇದೇ ವಾರ ರಿಲೀಸ್ ಆಗುತ್ತಿರುವ ಚಿತ್ರ ಚೆನ್ನೈನ ಪಿವಿಆರ್‍ನಲ್ಲಿ ಅದೇ ದಿನ ರಿಲೀಸ್ ಆಗುತ್ತಿದೆ. ಹೊಸಬರ ಚಿತ್ರವೊಂದಕ್ಕೆ ಈ ಮಟ್ಟದ ಬೇಡಿಕೆ ಸಿಗುವುದು ಅಪರೂಪ. ಚಿತ್ರದ ನಾಯಕ ಮತ್ತು ನಿರ್ಮಾಪಕ ಪ್ರದೀಪ್ ವರ್ಮಾಗೆ ಈ ರೀತಿಯ ಮೆಚ್ಚುಗೆಯೇ ಖುಷಿ ಕೊಟ್ಟಿದೆ. ಭರತ್ ನಾವುಂದ ನಿರ್ದೇಶನದ ಸಿನಿಮಾ 60ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾಗುತ್ತಿದೆ.

  • ಮಗನ ಸಿನಿಮಾ.. ಅಪ್ಪನ ಗಾಯನ..

    adachanege kshamisi has a unique song combination

    ಅಡಚಣೆಗಾಗಿ ಕ್ಷಮಿಸಿ.. ಕೇವಲ ಟೈಟಲ್ ಮೂಲಕವೇ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಸಂಗೀತ ನಿರ್ದೇಶಕ ಪ್ರದೀಪ್ ವರ್ಮ, ತಾವೇ ನಾಯಕರಾಗಿ ನಟಿಸಿರುವ ಚಿತ್ರ ಅಡಚಣೆಗಾಗಿ ಕ್ಷಮಿಸಿ. ಸದ್ಗುಣ ಮೂರ್ತಿ ಚಿತ್ರದ ನಿರ್ಮಾಪಕರು. ಅಂದಹಾಗೆ ಸದ್ಗುಣ ಮೂರ್ತಿ, ಪ್ರದೀಪ್ ವರ್ಮ ಅವರ ತಂದೆಯೂ ಹೌದು.

    ಈ ಹಿಂದೆ ಜಗ್ಗೇಶ್ ಅಭಿನಯದ ವೀರಣ್ಣ, ಮನೆ ಮನೆ ರಾಮಾಯಣ ಚಿತ್ರಗಳಿಗೆ ಸಂಗೀತ ನೀಡಿದ್ದ ಸದ್ಗುಣ ಮೂರ್ತಿ, ಈಗ ಮಗನ ಚಿತ್ರಕ್ಕೆ ಗಾಯಕರಾಗಿದ್ದಾರೆ. ಇದು ಬ್ರಹ್ಮನ ಹಿಡಿ ಶಾಪನಾ.. ಇದು ನ್ಯಾಯಾನಾ.. ಪ್ರತಿ ಹಾಳೆಗು ಪ್ರತಿ ಹಾದೀಲು ಪ್ರತಿ ಕಾರಣ.. ಎಂಬ ಗೀತೆಗೆ ಧ್ವನಿ ನೀಡಿದ್ದಾರೆ ಸದ್ಗುಣ ಮೂರ್ತಿ.

    ಹೈ ಪಿಚ್‍ನಲ್ಲಿ ಹಾಡಿರುವ ಈ ಹಾಡು, ಇಳಯರಾಜ ಅವರ ಧ್ವನಿಯನ್ನು ಹೋಲುತ್ತಿದೆ. ಭರತ್ ಎಸ್.ನವುಂದ ನಿರ್ದೇಶನದ ಅಡಚಣೆಗಾಗಿ ಕ್ಷಮಿಸಿ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ.