` kgf chapter 2, - chitraloka.com | Kannada Movie News, Reviews | Image

kgf chapter 2,

  • ಟೀಸರ್`ಗೆ ಮುನ್ನ ಪೇಪರ್ ಹಬ್ಬ

    ಟೀಸರ್`ಗೆ ಮುನ್ನ ಪೇಪರ್ ಹಬ್ಬ

    ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆಗೆ ಮೊದಲೇ ಒಂದು ಹವಾ ಎದ್ದುಬಿಟ್ಟಿದೆ. ಹವಾ ಎಬ್ಬಿಸಿರುವುದು ಹೊಂಬಾಳೆ ಫಿಲಂಸ್. ಜನವರಿ 8ಕ್ಕೆ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಆ ಹುಟ್ಟುಹಬ್ಬಕ್ಕೆ ಟೀಸರ್ ಗಿಫ್ಟ್ ನೀಡುತ್ತಿದೆ ಹೊಂಬಾಳೆ. ಆ ಟೀಸರ್ ಬರೋಕೂ ಮುನ್ನ ಪೇಪರ್ ಬಂದಿದೆ.

    ಕೆಜಿಎಫ್ ಟೈಮ್ಸ್ ಅನ್ನೋ ಪೇಪರ್, ಆ ಪೇಪರ್‍ನಲ್ಲಿ ಒಬ್ಬ ನಾಯಕನನ್ನು ಅವನ ಒಳ್ಳೆಯ ಕೆಲಸಗಳಿಂದ, ಖಳನಾಯಕನನ್ನು ಅವನ ಕೆಟ್ಟ ಕೆಲಸಗಳಿಂದ ನಿರ್ಧರಿಸಲಾಗುತ್ತಿದೆ. ಒಬ್ಬನೇ ವ್ಯಕ್ತಿ ಆ ಎರಡನ್ನೂ ಮಾಡಿದರೆ.. ಅವನು ನಾಯಕನಾ..? ಖಳನಾಯಕನಾ..? ಎಂಬ ಹೆಡ್ಡಿಂಗ್. ಮಧ್ಯೆ ಮಧ್ಯೆ ಕೆಜಿಎಫ್ ಚಾಪ್ಟರ್ 1 ನೆನಪಿಸುವ ಬಾಕ್ಸ್ ಐಟಂಗಳು.. ಜನವರಿ 8ಕ್ಕೆ ರಿವೀಲ್ ಮಾಡ್ತೀವಿ ಅನ್ನೋ ಸೀಲ್.

    ಟೋಟಲ್ ಆಗ್ ಹೇಳ್ಬೇಕಂದ್ರೆ, ಈ ಬಾರಿ ಪ್ರಶಾಂತ್ ನೀಲ್, ಸಿನಿಮಾ ಪ್ರಚಾರವನ್ನು ಇನ್ನೂ ಒಂದು ಹಂತ ಮೇಲಕ್ಕೆ ಹೊತ್ತೊಯ್ಯುತ್ತಿದ್ದಾರೆ. ವೇಯ್ಟ್ ಮಾಡಬೇಕಷ್ಟೆ.. ಜನವರಿ 8ರ ತನಕ.

  • ಡ್ಯೂಪ್ ಇಲ್ಲದೇ ಆ್ಯಕ್ಷನ್ ಮಾಡಿದ್ದಾರಂತೆ ಸಂಜಯ್ ದತ್..!

    ಡ್ಯೂಪ್ ಇಲ್ಲದೇ ಆ್ಯಕ್ಷನ್ ಮಾಡಿದ್ದಾರಂತೆ ಸಂಜಯ್ ದತ್..!

    ಸಂಜಯ್ ದತ್ ಕೆಜಿಎಫ್ ಚಾಪ್ಟರ್ 2ನಲ್ಲಿ ಅಧೀರನಾಗಿ ನಟಿಸುತ್ತಿರೋದು ಗೊತ್ತಿದೆ ತಾನೇ. ಹಿಂದಿ ಹೊರತುಪಡಿಸಿ ಸಂಜಯ್ ದತ್ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿರೋ ಸಿನಿಮಾ ಕೆಜಿಎಫ್ ಚಾಪ್ಟರ್ 2. ಅಫ್ಕೋರ್ಸ್, ಇದು ಪ್ಯಾನ್ ಇಂಡಿಯಾ ಸಿನಿಮಾ ಎನ್ನುವ ಮಾತು ಬೇರೆ. ಈ ಚಿತ್ರದಲ್ಲಿ ಸಂಜಯ್ ದತ್ ಈ ಹಿಂದೆ ಕಾಣಿಸಿಕೊಳ್ಳದೇ ಇರೋ ಗೆಟಪ್ಪಿನಲ್ಲಿ ನಟಿಸಿದ್ದಾರೆ. ಚಿತ್ರದ ಇನ್ನೂ ಒಂದು ವಿಶೇಷ ಸ್ವಲ್ಪ ಮಾತ್ರ ಹೊರಬಿದ್ದಿದೆ. 

    ಚಿತ್ರದಲ್ಲಿ ಡ್ಯೂಪ್ಗಳನ್ನು ಬಳಸದೆ ಸ್ಟಂಟ್ ಮಾಡಿದ್ದಾರಂತೆ. ಚಿತ್ರೀಕರಣದ ವೇಳೆ ಸಂಜಯ್ ದತ್ ಅವರ ಆರೋಗ್ಯವೂ ಕೆಟ್ಟಿತ್ತು. ಸುದೀರ್ಘ ಚಿಕಿತ್ಸೆ ಪಡೆದುಕೊಂಡಿದ್ದರು. ಜೊತೆಗೆ ವಯಸ್ಸು. ಹೀಗಾಗಿ ಚಿತ್ರತಂಡ ಸೇಫ್ಟಿ ದೃಷ್ಟಿಯಿಂದ ಬಾಡಿ ಡಬಲ್ ಬಳಸೋಕೆ ಪ್ಲಾನ್ ಮಾಡಿತ್ತಂತೆ. ಆದರೆ, ಚಿತ್ರದ ಕ್ವಾಲಿಟಿ ಇಷ್ಟು ಚೆನ್ನಾಗಿ ಬರುತ್ತಿರೋವಾಗ ಬಾಡಿ ಡಬಲ್ ಮಾಡೋದು ಬೇಡ. ಕ್ವಾಲಿಟಿ ಹಾಳಾಗುತ್ತೆ ಎಂದು ಸಂಜಯ್ ದತ್, ಇಡೀ ಚಿತ್ರತಂಡವನ್ನು ಒಪ್ಪಿಸಿದರಂತೆ.

    ಸಂಜಯ್ ದತ್ ಆರೋಗ್ಯದ ಕಾರಣಕ್ಕಾಗಿ ಸಿಂಪಲ್ಲಾದ ಸ್ಟಂಟ್ ಸಂಯೋಜಿಸುವುದಕ್ಕೂ ಮುನ್ನಾಭಾಯ್ ಬೇಡ ಎಂದು ಹೇಳಿದರಂತೆ. ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಮಾತನಾಡಿ ನನಗೆ ಅವಮಾನ ಮಾಡಬೇಡಿ. ಪ್ರೇಕ್ಷಕರಿಗೂ ಮೋಸ ಮಾಡಬೇಡಿ. ಸ್ಟಂಟ್ ಎಷ್ಟೇ ಕಷ್ಟದ್ದಾಗಿರಲಿ, ನಾನು ಮಾಡುತ್ತೇನೆ ಎಂದು ಮನವೊಲಿಸಿದರಂತೆ. ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ಕ್ಕೆ ರಿಲೀಸ್ ಆಗುತ್ತಿದೆ.

  • ತಮಿಳುನಾಡಿನಲ್ಲೊಂದು.. ದ.ಕೊರಿಯಾದಲ್ಲೊಂದು ದಾಖಲೆ..!

    ತಮಿಳುನಾಡಿನಲ್ಲೊಂದು.. ದ.ಕೊರಿಯಾದಲ್ಲೊಂದು ದಾಖಲೆ..!

    ಕೆಜಿಎಫ್ 2.. ರಿಲೀಸ್ ಆಗಿದೆ ರೆಕಾರ್ಡ್ ಮಾಡೋಕೆ.. ಅನ್ನೋ ಲೆವೆಲ್ಲಿಗೆ ಹೋಗುತ್ತಿರೋ ಸಿನಿಮಾ. ಈಗಾಗಲೇ 1000 ಕೋಟಿ ಕಲೆಕ್ಷನ್ ರೆಕಾರ್ಡ್ ಬರೆದಿರೋ ಕೆಜಿಎಫ್ ಚಾಪ್ಟರ್ ಒಂದರ ಹಿಂದೊಂದು ದಾಖಲೆಗಳನ್ನು ಸೃಷ್ಟಿಸುತ್ತಲೇ ಇದೆ. ಬರೆದಿದ್ದೆಲ್ಲ ಹೊಸ ಇತಿಹಾಸ.

    ಕೆಜಿಎಫ್ ರಿಲೀಸ್ ಆದಾಗ ಒಂದು ದಿನ ಮುನ್ನ ತಮಿಳುನಾಡಿನಲ್ಲಿ ವಿಜಯ್ ಅಭಿನಯದ ಬೀಸ್ಟ್ ರಿಲೀಸ್ ಆಗಿತ್ತು. ಫ್ಯಾನ್ಸ್ ಎಷ್ಟೇ ವಾರ್ ಸೃಷ್ಟಿಸಿದರೂ, ಯಶ್ ಅದನ್ನು ಗಾಂಭೀರ್ಯದಿಂದ ನಿಭಾಯಿಸಿದ್ದರು. ರಿಲೀಸ್ ಆದ ನಂತರ ಆಗಿದ್ದೇ ಬೇರೆ. ವಿಜಯ್ ಚಿತ್ರದ ಕಲೆಕ್ಷನ್‍ನ್ನೂ ಹಿಂದಿಕ್ಕಿ ಮುನ್ನುಗ್ಗಿತು ಕೆಜಿಎಫ್. ತಮಿಳುನಾಡಿನಲ್ಲಿ ಸಿನಿಮಾ ರಿಲೀಸ್ ಆದ ನಂತರ ಸತತ 2 ವಾರ ನೂರಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಪ್ರತಿದಿನ 5 ಶೋಗಳು ಪ್ರದರ್ಶನ ಕಂಡವು. ಬೀಸ್ಟ್ ಚಿತ್ರವನ್ನೇ ತೆಗೆದು ಕೆಜಿಎಫ್ ಹಾಕಲಾಯಿತು. ಇದಾಗಿ ಈಗ ಕೆಜಿಎಫ್ 2, ತಮಿಳುನಾಡಿನಲ್ಲಿಯೇ 100 ಕೋಟಿ ಕಲೆಕ್ಷನ್ ಮಾಡಿದೆ. 17 ದಿನಕ್ಕೆ 100 ಕೋಟಿ ಕಲೆಕ್ಷನ್ ಮಾಡಿದೆ.

    ಕನ್ನಡದಲ್ಲಿ 200 ಕೋಟಿ ಹಾಗೂ  ತೆಲುಗುನಲ್ಲಿ 100 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿರೋ ಕೆಜಿಎಫ್ 2, ಹಿಂದಿಯಲ್ಲಿ 400 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ. ಮಲಯಾಳಂನಲ್ಲಿ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ತಮಿಳುನಾಡಿನಲ್ಲಿ ಬಾಹುಬಲಿ, ಆರ್.ಆರ್.ಆರ್. ನಂತರ 100 ಕೋಟಿ ಬಿಸಿನೆಸ್ ಮಾಡಿದ ಸಿನಿಮಾ ತಮಿಳೇತರ ಸಿನಿಮಾ ಕೆಜಿಎಫ್ 2.

    ಇದರ ಮಧ್ಯೆ ಇದೇ ಮೊದಲ ಬಾರಿಗೆ ದಕ್ಷಿಣ ಕೊರಿಯಾದಲ್ಲೂ ರಿಲೀಸ್ ಆಗುತ್ತಿದೆ. ಅಂದಹಾಗೆ ದ.ಕೊರಿಯಾ ಕಿಮ್ ಜಾಂಗ್ ಉನ್`ನ ಕೊರಿಯಾ ಅಲ್ಲ. ಅದು ಉತ್ತರ ಕೊರಿಯಾ. ಇದು ದ.ಕೊರಿಯಾ. ಮೇ 7ರಂದು ಸಿಯೋಲ್ (ದ.ಕೊರಿಯಾ ರಾಜಧಾನಿ)ನಲ್ಲಿ ಕನ್ನಡ ಮತ್ತು ಹಿಂದಿ ವರ್ಷನ್ ರಿಲೀಸ್ ಆಗುತ್ತಿವೆ.

    ಅಂದಹಾಗೆ ಕೆಜಿಎಫ್‍ನ ಒಟಿಟಿ ರೈಟ್ಸ್ ಅಮೇಜಾನ್‍ಗೆ 320 ಕೋಟಿಗೆ ಸೇಲ್ ಆಗಿದೆ ಅನ್ನೋ ಸುದ್ದಿ ಇದೆ. ಅಧಿಕೃತವಾಗಿಲ್ಲ.

  • ದಂಗಲ್, ಬಾಹುಬಲಿ 2 ಇದ್ದರೂ ಹಿಂದಿಯಲ್ಲಿ ನಂ.2 ಕೆಜಿಎಫ್ ಚಾಪ್ಟರ್ 2 : ಹೇಗೆ? ಇಲ್ಲಿದೆ ಉತ್ತರ

    ದಂಗಲ್, ಬಾಹುಬಲಿ 2 ಇದ್ದರೂ ಹಿಂದಿಯಲ್ಲಿ ನಂ.2 ಕೆಜಿಎಫ್ ಚಾಪ್ಟರ್ 2 : ಹೇಗೆ? ಇಲ್ಲಿದೆ ಉತ್ತರ

    ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಿದ್ದಾಯ್ತು. ದಾಖಲೆಗಳನ್ನು ಮುರಿದದ್ದೂ ಆಯ್ತು.. ಇಲ್ಲ.. ಇನ್ನೂ ಮುರಿಯುತ್ತಿದೆ. ಅಪರೂಪಕ್ಕೊಮ್ಮೆ ಸೃಷ್ಟಿಯಾಗುವ ಇತಿಹಾಸವಿದು. ಈಗ ಕೆಜಿಎಫ್ ಚಾಪ್ಟರ್ 2 ಹಿಂದಿಯಲ್ಲಿ ನಂ.2 ಸ್ಥಾನಕ್ಕೇರಿದೆ. 400 ಕೋಟಿ ಕ್ಲಬ್ ಸೇರಿರುವ ಕೆಜಿಎಫ್ ಚಾಪ್ಟರ್ 2ಗೆ ಬಾಹುಬಲಿ 2 ನಂತರದ ಸ್ಥಾನವಿದೆ.

    ಇದನ್ನು ನೋಡಿದ ಬಹುತೇಕರು ಕೇಳುತ್ತಿರೋ ಪ್ರಶ್ನೆ ಇದು. ಕೆಜಿಎಫ್ 2 ಗಳಿಸಿರೋದು ಈಗ 1130 ಕೋಟಿಗಿಂತ ಹೆಚ್ಚು. ಹಿಂದಿಯಲ್ಲಿ 400 ಕೋಟಿಗೂ ಹೆಚ್ಚು.

    ಬಾಹುಬಲಿ 2 ಗಳಿಕೆ ಸುಮಾರು 1400 ಕೋಟಿ. ಆದರೆ ದಂಗಲ್ 2 ಸಾವಿರ ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ. ಇದು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಇದೆಯಲ್ಲವೇ.?

    ಕೆಜಿಎಫ್ 2 ನಂ.2 ಆಗಿರೋದು ಹಿಂದಿ ಭಾಷೆಯಲ್ಲಿ ಮತ್ತು ಪ್ರಾದೇಶಿಕ ಮಾರ್ಕೆಟ್‍ನಲ್ಲಿ. ಬಾಹುಬಲಿ 2 ಕೂಡಾ ಅಷ್ಟೆ.

    ದಂಗಲ್ ಸಿನಿಮಾ ಹಿಂದಿಯಲ್ಲಿ ಹೆಚ್ಚೂ ಕಡಿಮೆ 400 ಕೋಟಿ ಗಳಿಸಿತ್ತು. ಉಳಿದಂತೆ ದಂಗಲ್‍ನ ದೊಡ್ಡ ಮೊತ್ತ ಬಂದಿದ್ದು ಚೀನಾ ಮಾರ್ಕೆಟ್‍ನಲ್ಲಿ. ಮ್ಯಾಂಡರಿನ್ ಭಾಷೆಗೆ ಡಬ್ ಆಗಿ ರಿಲಿಸ್ ಆದ ದಂಗಲ್, ಅಲ್ಲಿ ದೊಡ್ಡ ಮೊತ್ತ ಗಳಿಸಿತ್ತು.

    ಸ್ಥಳೀಯ ಅರ್ಥಾತ್ ಇಂಡಿಯನ್ ಮಾರ್ಕೆಟ್ ಬಾಕ್ಸಾಫೀಸ್‍ನಲ್ಲಿ ಈಗಲೂ ಬಾಹುಬಲಿ 2, ನಂ.1 ಸ್ಥಾನದಲ್ಲಿದೆ. ಕೆಜಿಎಫ್ ಚಾಪ್ಟರ್ 2 ನಂ.2 ಸ್ಥಾನಕ್ಕೇರಿದೆ.

  • ಧೀರ ಸುಲ್ತಾನನ ಎದುರಿಗೆ ಎಂಟ್ರಿ ಕೊಟ್ಟ ಅಧೀರ

    adheera enters kgf 2 shooting sets

    ಕೆಜಿಎಫ್ 2 ಚಿತ್ರದಲ್ಲಿ ಸಂಜಯ್ ದತ್ ನಟಿಸುವುದು ಪಕ್ಕಾ ಆಗಿದ್ದರೂ, ಅವರಿನ್ನೂ ಶೂಟಿಂಗ್ ಟೀಂ ಸೇರಿಕೊಂಡಿರಲಿಲ್ಲ. ಈಗ ಅಧೀರನಾಗಿ ನಟಿಸುತ್ತಿರುವ ಸಂಜಯ್ ದತ್ ಪ್ರವೇಶವಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2ನಲ್ಲಿ ರಾಕಿಭಾಯ್ ಎದುರು ಸೇಡು ತೀರಿಸಿಕೊಳ್ಳುವ ಖಳನಾಯಕನಾಗಿ ಬರಲಿದ್ದಾರೆ ಸಂಜಯ್ ದತ್.

    ಈ ಚಿತ್ರದ ಮೂಲಕ ಸಂಜಯ್ ದತ್ 21 ವರ್ಷಗಳ ದಕ್ಷಿಣ ಭಾರತ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 21 ವರ್ಷಗಳ ಹಿಂದೆ ತೆಲುಗಿನಲ್ಲಿ ಚಂದ್ರಲೇಖಾ ಅನ್ನೋ ಹೆಸರಿನ ಸಿನಿಮಾ ಬಂದಿತ್ತು. ನಾಗಾರ್ಜುನ, ರಮ್ಯಾಕೃಷ್ಣ ಜೊತೆಗೆ ಸಂಜಯ್ ದತ್ ನಟಿಸಿದ್ದರು. ಈಗ ಕನ್ನಡದ ಮೂಲಕ ದಕ್ಷಿಣ ಭಾರತಕ್ಕೆ ಮತ್ತೆ ಬಂದಿದ್ದಾರೆ ಸಂಜಯ್ ದತ್.

  • ಪ್ಯಾನ್ ಇಂಡಿಯಾ ಚಿತ್ರಗಳ ರಿಲೀಸ್ ಡೇಟ್ ಫಿಕ್ಸ್ : ಯಾರಿಗೆ ಟೆನ್ಷನ್?

    ಪ್ಯಾನ್ ಇಂಡಿಯಾ ಚಿತ್ರಗಳ ರಿಲೀಸ್ ಡೇಟ್ ಫಿಕ್ಸ್ : ಯಾರಿಗೆ ಟೆನ್ಷನ್?

    ಬಾಹುಬಲಿ & ಕೆಜಿಎಫ್ ನಂತರ ದ.ಭಾರತ ಚಿತ್ರರಂಗದಲ್ಲಿ ಶುರುವಾದ ಪ್ಯಾನ್ ಇಂಡಿಯಾ ಚಿತ್ರಗಳ ಅಬ್ಬರ.. ಆರ್ಭಟ ಮುಂದುವರೆಯುತ್ತಿದೆ. ಕೆಜಿಎಫ್ ಚಿತ್ರವೇನೋ 2022ರ ಏಪ್ರಿಲ್ 14ಕ್ಕೆ ಡೇಟ್ ಫಿಕ್ಸ್ ಮಾಡಿಕೊಂಡಾಯ್ತು. ಆದರೆ ಇನ್ನೂ ಹಲವಾರು ಚಿತ್ರಗಳು ಕ್ಯೂನಲ್ಲಿವೆ.

    ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ನಟಿಸಿರುವ, ಸುಕುಮಾರ್ ನಿರ್ದೇಶನದ ಪುಷ್ಪ ಡಿಸೆಂಬರ್ 17ಕ್ಕೆ ರಿಲೀಸ್ ಆಗುತ್ತಿದೆ.

    2022ರ ಜನವರಿ ಮೊದಲ ವಾರ, ಜನವರಿ 7ಕ್ಕೆ ಆರ್‍ಆರ್‍ಆರ್ ರಿಲೀಸ್. ಅದು ರಾಜಮೌಳಿ ಡೈರೆಕ್ಷನ್‍ನಲ್ಲಿ ಎನ್‍ಟಿಆರ್, ರಾಮ್‍ಚರಣ್ ತೇಜ, ಅಜಯ್ ದೇವಗನ್, ಅಲಿಯಾ ಭಟ್.. ನಟಿಸಿರುವ ಚಿತ್ರ.

    ಇದರ ನಡುವೆ ಡಿಸೆಂಬರ್ ಹೊತ್ತಿಗೆ ಕನ್ನಡದ ಹಲವು ಚಿತ್ರಗಳು ರಿಲೀಸ್ ಆಗುವ ಸಾಧ್ಯತೆ ಇದೆ. ಶ್ರೀಮುರಳಿಯವರ ಮದಗಜ, ರಕ್ಷಿತ್ ಶೆಟ್ಟಿಯವರ ಚಾರ್ಲಿ 777 ಡಿಸೆಂಬರ್‍ಗೆ ರಿಲೀಸ್ ಆಗುತ್ತಿವೆ. ಈ ಎರಡೂ ಚಿತ್ರಗಳು ಈಗ ತಮ್ಮ ಚಿತ್ರಗಳಿಗೆ ಸ್ಪೆಷಪ್ ಪ್ಲಾನ್ ಮಾಡಿಕೊಳ್ಳಬೇಕು

  • ಪ್ರಶಾಂತ್ ನೀಲ್ ಬಗ್ಗೆ ಎದ್ದಿರೋ ಪ್ರಶ್ನೆಗಳಿಗೆಲ್ಲ ಅವರೇ ಕೊಟ್ಟ ಉತ್ತರಗಳಿವು..!

    ಪ್ರಶಾಂತ್ ನೀಲ್ ಬಗ್ಗೆ ಎದ್ದಿರೋ ಪ್ರಶ್ನೆಗಳಿಗೆಲ್ಲ ಅವರೇ ಕೊಟ್ಟ ಉತ್ತರಗಳಿವು..!

    ಪ್ರಶಾಂತ್ ನೀಲ್ ಈಗ ಸೆನ್ಸೇಷನಲ್ ಡೈರೆಕ್ಟರ್. ಇಡೀ ಇಂಡಿಯಾ ಅವರ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಎದುರು ನೋಡುತ್ತಿದೆ. ಪ್ರಶಾಂತ್ ನೀಲ್ ಚಿತ್ರರಂಗಕ್ಕೆ ಹೊಸಬರೇ. ಶ್ರೀಮುರಳಿ ಅವರಿಗೆ ಭಾವ ಎನ್ನುವುದನ್ನು ಬಿಟ್ಟರೆ ಚಿತ್ರರಂಗದ ಪರಿಚಯ ಅಷ್ಟಾಗಿ ಇರಲಿಲ್ಲ. ಆದರೆ, ಅನುಭವಕ್ಕಾಗಿಯೇ ಉಗ್ರಂ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ.. ತಾವು ಮಾಡಿದ್ದು ತಮಗೇ ಇಷ್ಟವಾಗದೆ ಮತ್ತೆ ಇಡೀ ಚಿತ್ರವನ್ನು ಹೊಸದಾಗಿ ಶೂಟ್ ಮಾಡಿ ಗೆದ್ದು ತೋರಿಸಿದವರು ಪ್ರಶಾಂತ್ ನೀಲ್. ಅಂತಹ ಪ್ರಶಾಂತ್ ನೀಲ್ ಬಗ್ಗೆ ಕನ್ನಡಿಗರ ಪ್ರಶ್ನೆಗಳು ಹತ್ತಾರಿವೆ. ಆ ಎಲ್ಲ ಪ್ರಶ್ನೆಗಳಿಗೂ ಪ್ರಶಾಂತ್ ನೀಲ್ ಹಲವು ಕಡೆ ಉತ್ತರ ಕೊಟ್ಟಿದ್ದಾರೆ.

    ಪ್ರಶ್ನೆ : ಪ್ರಶಾಂತ್ ನೀಲ್ ಇನ್ನು ಮುಂದೆ ಕನ್ನಡ ಚಿತ್ರಗಳನ್ನು ಮಾಡುವುದಿಲ್ಲವಾ?

    ಉತ್ತರ : ಹಾಗಿಲ್ಲ. ನಾನು ಕನ್ನಡದವನೇ. ಕೆಜೆಎಫ್ ನಂತರ ನನಗೆ ಬಂದ ಅವಕಾಶಗಳು, ಅವಕಾಶ ಕೊಟ್ಟವರು ತೋರಿಸಿದ ಪ್ರೀತಿ, ಗೌರವ ಅವುಗಳನ್ನು ಒಪ್ಪಿಕೊಳ್ಳುವಂತೆ ಮಾಡಿದೆ ಅಷ್ಟೆ. ನಾನೂ ಕೂಡಾ ವೃತ್ತಿಯಲ್ಲಿ ಮೇಲೇರಲೇಬೇಕಲ್ಲ. ಹಾಗಂತ ಕನ್ನಡ ಬಿಡಲ್ಲ. ಶ್ರೀಮುರಳಿಗೆ ಮಾತು ಕೊಟ್ಟಿದ್ದೇನೆ. ಅವರ ಸಿನಿಮಾ ಮೂಲಕ ಮತ್ತೆ ಕನ್ನಡಕ್ಕೆ ಬರುತ್ತೇನೆ.

    ಪ್ರಶ್ನೆ : ಕೆಜಿಎಫ್ ಚಾಪ್ಟರ್ 2ನಲ್ಲಿ ಅನಂತ್ ನಾಗ್ ಯಾಕಿಲ್ಲ.

    ಉತ್ತರ : ಹೇಳಲಾರೆ. ಅದು ಅವರ ವೈಯಕ್ತಿಕ ನಿರ್ಧಾರ. ಅವರ ನಿರ್ಧಾರವನ್ನು ಗೌರವಿಸುತ್ತೇವೆ.

    ಪ್ರಶ್ನೆ : ಅನಂತ್ ನಾಗ್ ಪಾತ್ರವನ್ನು ಪ್ರಕಾಶ್ ರೈ ಹೇಗೆ ಮಾಡಿದ್ದಾರೆ?

    ಉತ್ತರ : ಅನಂತ್ ಸರ್ ಮಾಡಲ್ಲ ಎಂದ ಮೇಲೆ ಸ್ಕ್ರಿಪ್ಟ್‍ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಪ್ರಕಾಶ್ ರೈ ಪಾತ್ರವನ್ನು ತಂದಿದ್ದೇವೆ.

    ಪ್ರಶ್ನೆ : ಯಶ್ ಜೊತೆ ಮತ್ತೆ ಸಿನಿಮಾ ಮಾಡ್ತೀರಾ?

    ಉತ್ತರ : ಅವರಿಗಾಗಿಯೇ ಒಂದು ಕಥೆ ಇದೆ. ಒಪ್ಪಿಕೊಂಡರೆ ಖಂಡಿತಾ ಸಿನಿಮಾ ಮಾಡ್ತೇನೆ.

    ಪ್ರಶ್ನೆ : ಪ್ರಶಾಂತ್ ನೀಲ್ ಅವರಿಗೆ ಕಥೆ ಹೇಗೆ ಹೊಳೆಯುತ್ತೆ?

    ಉತ್ತರ : ಎಣ್ಣೆ ಹೊಡೆಯೋವಾಗ. ಎಣ್ಣೆ ಹೊಡೆಯದಿದ್ದರೆ ನನಗೆ ತಲೆಯೇ ಓಡೋದಿಲ್ಲ. ಕೆಜಿಎಫ್ ಕಥೆ ಕೂಡಾ ಎಣ್ಣೆ ಹೊಡೆಯುವಾಗಲೇ ಹೊಳೆದ ಕಥೆ.

  • ಬಾಕ್ಸಾಫೀಸ್ ಅಲ್ಲ.. ಟಿಕೆಟ್ ರಿಪೋರ್ಟ್ : ಕೆಜಿಎಫ್ 2 ನೋಡಿದ್ದು ಎಷ್ಟು ಜನ..?

    ಬಾಕ್ಸಾಫೀಸ್ ಅಲ್ಲ.. ಟಿಕೆಟ್ ರಿಪೋರ್ಟ್ : ಕೆಜಿಎಫ್ 2 ನೋಡಿದ್ದು ಎಷ್ಟು ಜನ..?

    ಕೆಜಿಎಫ್ ಚಾಪ್ಟರ್ 2 ರಿಲೀಸ್ ಆದ ದಿನದಿಂದ ಇಲ್ಲಿಯವರೆಗೆ ದಾಖಲೆಗಳ ಮೇಲೆ ದಾಖಲೆ ಬರೆದು.. ಹಳೆದ ರೆಕಾರ್ಡುಗಳನ್ನೆಲ್ಲ ಚಿಂದಿ ಚಿಂದಿ ಮಾಡಿ.. ಹೊಸ ಹೊಸ ದಾಖಲೆಗಳನ್ನೆಲ್ಲ ಗಂಟುಮೂಟೆ ಕಟ್ಟಿ ಹೊತ್ತುಕೊಂಡಿದೆ. ಆ ದಾಖಲೆಗಳಿಗೆ ಇನ್ನೂ ಹೊಸ ಹೊಸ ದಾಖಲೆಗಳು ಸೇರುತ್ತಲೇ ಇವೆ. ಕಲೆಕ್ಷನ್‍ನಲ್ಲಿ ಅರ್ಥಾತ್ ಬಾಕ್ಸಾಫೀಸ್ ಕಲೆಕ್ಷನ್‍ನಲ್ಲಿ 1200 ಕೋಟಿ ಸಮೀಪದಲ್ಲಿರೋ ಕೆಜಿಎಫ್ ಚಾಪ್ಟರ್ 2 ಎದುರು ಇರೋದು ಬಾಹುಬಲಿ 2 ರೆಕಾರ್ಡ್ ಮಾತ್ರ. ಆದರೆ, ನಾವಿಲ್ಲಿ ಹೇಳ್ತಿರೋದು ಬಾಕ್ಸಾಫೀಸ್ ಕಲೆಕ್ಷನ್‍ನ ದುಡ್ಡಿನ ದಾಖಲೆ ಅಲ್ಲ. ಎಷ್ಟು ಜನ ಕೆಜಿಎಫ್ ಅನ್ನು ನೋಡಿದರು ಅನ್ನೋ ರಿಪೋರ್ಟ್.

    1975ರಲ್ಲಿ ರಿಲೀಸ್ ಆಗಿದ್ದ ಭಾರತೀಯ ಚಿತ್ರರಂಗದ ಟ್ರೆಂಡ್ ಸೆಟ್ಟರ್ ಶೋಲೆಯನ್ನು ಆಗಿನ ಕಾಲಕ್ಕೆ ಟಿಕೆಟ್ ಖರೀದಿಸಿ ನೋಡಿದ್ದವರ ಸಂಖ್ಯೆ 18 ಮಿಲಿಯನ್ ಅರ್ಥಾತ್ 1 ಕೋಟಿ 80 ಲಕ್ಷ ಜನ.

    ಸನ್ನಿಡಿಯೋಲ್, ಅಮಿಶಾ ಪಟೇಲ್ ಅಭಿನಯದ ಇಂಡಿಯನ್ ಪಾಕಿಸ್ತಾನ್ ಹುಡುಗ ಹುಡುಗಿ ಲವ್ ಸ್ಟೋರಿ ಗದ್ದರ್ ಏಕ್ ಪ್ರೇಮ್‍ಕಥಾ ಚಿತ್ರವನ್ನು 5.05 ಕೋಟಿ ಜನ ನೋಡಿದ್ದರು. ಸಲ್ಮಾನ್ ಖಾನ್, ಮಾಧುರಿ ದೀಕ್ಷಿತ್ ಅಭಿನಯದ ಹಮ್ ಆಪ್ಕೆ ಹೈ ಕೌನ್ ಚಿತ್ರವನ್ನು ಟಿಕೆಟ್ ಕೊಂಡು ನೋಡಿದ್ದ ಪ್ರೇಕ್ಷಕರ ಸಂಖ್ಯೆ 7.39 ಕೋಟಿ.

    ರಾಜಮೌಳಿಯ ಬಾಹುಬಲಿ 2 ಚಿತ್ರವನ್ನು ನೋಡಿದ್ದ ಪ್ರೇಕ್ಷಕರ ಸಂಖ್ಯೆ 5.25 ಕೋಟಿ. ಶಾರೂಕ್-ಕಾಜಲ್ ಲವ್ ಸ್ಟೋರಿ, ದಿಲ್‍ವಾಲೆ ದುಲ್ಹನಿಯಾ ಜಾಯೇಂಗೆ ಚಿತ್ರ ನೋಡಿದ್ದ ಪ್ರೇಕ್ಷಕರ ಸಂಖ್ಯೆ 4 ಕೋಟಿ 70 ಲಕ್ಷ.

    ಅಮೀರ್ ಖಾನ್- ಕರಿಷ್ಮಾ ಕಪೂರ್ ಅಭಿನಯದ ರಾಜಾ ಹಿಂದೂಸ್ತಾನಿಯ 4.09 ಕೋಟಿ ಟಿಕೆಟ್ ಮಾರಾಟವಾಗಿದ್ದವು.

    ಆದರೆ ಇವೆಲ್ಲವನ್ನೂ ಪುಡಿಗಟ್ಟಿರುವ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದವರ ಸಂಖ್ಯೆ ಐದೂವರೆ ಕೋಟಿ ಎನ್ನುವ ಅಂದಾಜು ಸದ್ಯಕ್ಕೆ ಸಿಕ್ಕಿದೆ. ಕನ್ನಡ ಮತ್ತು ತಮಿಳಿನಲ್ಲಿ ತಲಾ 70 ಲಕ್ಷ ಜನ, ತೆಲುಗಿನಲ್ಲಿ 80 ಲಕ್ಷ ಜನ, ಮಲಯಾಳಂನಲ್ಲಿ 45 ಲಕ್ಷ ಜನ ಸಿನಿಮಾ ನೋಡಿದ್ದರೆ ಹಿಂದಿಯಲ್ಲಿ ಅಂದಾಜು ಎರಡೂವರೆ ಕೋಟಿ ಜನ ಕೆಜಿಎಫ್ 2 ಸಿನಿಮಾ ನೋಡಿದ್ದಾರೆ.

  • ಬಾಕ್ಸಾಫೀಸ್ ದೊಡ್ಡಪ್ಪ ರಾಕಿಂಗ್ ಸ್ಟಾರ್

    ಬಾಕ್ಸಾಫೀಸ್ ದೊಡ್ಡಪ್ಪ ರಾಕಿಂಗ್ ಸ್ಟಾರ್

    ಯಶ್ ಅವರನ್ನ ಫ್ಯಾನ್ಸ್ ರಾಕಿಂಗ್ ಸ್ಟಾರ್, ರಾಜಾಹುಲಿ, ನಮ್ ಅಣ್ತಮ್ಮ, ಗಜಕೇಸರಿ, ಯಶ್ ಬಾಸ್.. ಎಂದೆಲ್ಲ ಪ್ರೀತಿಯಿಂದ ಕರೀತಾರೆ. ಆ ಬಿರುದುಗಳಿಗೀಗ ಹೊಸ ಸೇರ್ಪಡೆ. ಯಶ್ ಈಗ ಬಾಕ್ಸಾಫೀಸ್ ದೊಡ್ಡಪ್ಪ. ದೊಡ್ಡಪ್ಪ ಅಂತಾ ಯಾಕೆ ಕರೆದ್ರು ಅನ್ನೋದನ್ನ ತಿಳ್ಕೋಳ್ಳೋಕೆ ನೀವು ಕೆಜಿಎಫ್ ಚಾಪ್ಟರ್ 2 ನೋಡಬೇಕು.

    ಅಂದಹಾಗೆ ಮೊದಲ ದಿನ 134 ಕೋಟಿ ಗಳಿಸಿದ್ದ ಕೆಜಿಎಫ್ ಚಾಪ್ಟರ್ 2, 2ನೇ ದಿನಕ್ಕೆ 240 ಕೋಟಿ ಬಿಸಿನೆಸ್ ದಾಟಿ ಮುನ್ನುಗ್ಗಿದೆ. 3ನೇ ದಿನದ ಗಳಿಕೆ 350 ಕೋಟಿ ದಾಟಿ ಆಗಿದೆ.

    ಹಿಂದಿಯಲ್ಲಿ ಬಾಹುಬಲಿ-2, ದಂಗಲ್ ಚಿತ್ರಗಳ ರೆಕಾರ್ಡುಗಳನ್ನೆಲ್ಲ ಚಿಂದಿ ಮಾಡಿರೋ ಕೆಜಿಎಫ್, 2ನೇ ದಿನವೇ 100 ಕೋಟಿ ದಾಟಿದೆ. ಭಾನುವಾರದ ಬಿಸಿನೆಸ್ ಸೇರಿಸಿದರೆ 4 ದಿನಕ್ಕೇ 200 ಕೋಟಿ ದಾಟುವ ಎಲ್ಲ ಸಾಧ್ಯತೆಗಳೂ ಇವೆ.

    ತಮಿಳುನಾಡಿನಲ್ಲೇ ವಿಜಯ್ ಅವರ ಬೀಸ್ಟ್ ಚಿತ್ರವನ್ನು ಹಿಂದಿಕ್ಕಿರೋ ಸಿನಿಮಾ ಕೆಜಿಎಫ್. ಆಂಧ್ರ, ತೆಲಂಗಾಣ, ಕೇರಳ.. ಎಲ್ಲ ಕಡೆಯೂ ಬಾಕ್ಸಾಫೀಸ್‍ನಲ್ಲಿ ಈಗ ನಂ.1 ಆಗಿರೋದು ಕೆಜಿಎಫ್ ಚಾಪ್ಟರ್ 2.

    ಸೂಪರ್ ಸ್ಟಾರ್ ರಜಿನಿಕಾಂತ್ ಕೂಡಾ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ನೋಡಿ ಮೆಚ್ಚಿದ್ದಾರೆ. ದಾಖಲೆಗಳು ದಾಖಲೆಗಳಷ್ಟೇ. ಅ ಬಾಕ್ಸಾಫೀಸ್ ದಾಖಲೆಗಳ ದೊಡ್ಡಪ್ಪ ಈಗ ಯಶ್. 

  • ಬಾಹುಬಲಿ 2ನ ಆ ದಾಖಲೆಯೂ ಕೆಜಿಎಫ್ ಎದುರು ಧೂಳ್

    ಬಾಹುಬಲಿ 2ನ ಆ ದಾಖಲೆಯೂ ಕೆಜಿಎಫ್ ಎದುರು ಧೂಳ್

    ಕನ್ನಡದ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆದ ಕ್ಷಣದಿಂದಲೂ ದಾಖಲೆಗಳನ್ನು ಉಡಾಯಿಸುತ್ತಲೇ ಮುನ್ನುಗ್ಗುತ್ತಿದೆ. ಪ್ರಶಾಂತ್ ನೀಲ್ ಅವರ ಡೈರೆಕ್ಷನ್, ಯಶ್-ರವೀನಾ-ಸಂಜಯ್ ದತ್-ಶ್ರೀನಿಧಿ ಶೆಟ್ಟಿ ನಟನೆ.. ಪ್ರೇಕ್ಷಕರನ್ನು ಎಷ್ಟರ ಮಟ್ಟಿಗೆ ಮೋಡಿ ಮಾಡಿದೆಯೆಂದರೆ.. ಇದು ಕನ್ನಡದವರ ಸಿನಿಮಾ ಎಂದು ಹೇಳಿಕೊಳ್ಳೋದೇ ಕನ್ನಡಿಗರ ಹೆಮ್ಮೆಯಾಗಿಬಿಟ್ಟಿದೆ. ಈಗ ಕೆಜಿಎಫ್ ಚಾಪ್ಟರ್ 2, ಬಾಹುಬಲಿ 2ನ ದಾಖಲೆಯನ್ನೂ ಮೀರಿದೆ.

    ಬಾಹುಬಲಿ 2, ಇಂಡಿಯನ್ ಮಾರುಕಟ್ಟೆಯಲ್ಲಿ 1810 ಕೋಟಿ ಗಳಿಸಿತ್ತು. ದಂಗಲ್ ಚಿತ್ರದ ಬಾಕ್ಸಾಫೀಸ್ ಕಲೆಕ್ಷನ್ 2100 ಕೋಟಿ ಬಿಸಿನೆಸ್ ಮಾಡಿರುವುದು ನಿಜವಾದರೂ, ಇಂಡಿಯಾ ಮಾರುಕಟ್ಟೆಯಲ್ಲಿ ದಂಗಲ್ ಕಲೆಕ್ಷನ್ 400 ಕೋಟಿಯಷ್ಟೆ. ಬಾಹುಬಲಿ 2 ನಂತರ ಇಂಡಿಯನ್ ಭಾಷೆಗಳ ಮಾರುಕಟ್ಟೆಯಲ್ಲಿ 1000 ಕೋಟಿ ದಾಟಿದ್ದ ಚಿತ್ರಗಳು ಆರ್.ಆರ್.ಆರ್. ಮತ್ತು ಕೆಜಿಎಫ್ ಚಾಪ್ಟರ್ 2 ಮಾತ್ರ. ಆರ್.ಆರ್.ಆರ್. ಚಿತ್ರದ 1100 ಕೋಟಿ ಕಲೆಕ್ಷನ್‍ನ್ನು ಯಾವತ್ತೋ ಮೀರಿದ್ದ ಕೆಜಿಎಫ್ ಚಾಪ್ಟರ್ 2, ಈಗ ಬಾಹುಬಲಿ 2ನ ಗಳಿಕೆಯನ್ನೂ ಮೀರಿದೆ. 33 ದಿನಗಳ ನಂತರ ಕೆಜಿಎಫ್ ಚಾಪ್ಟರ್ 2 1200 ಕೋಟಿ ಕಲೆಕ್ಷನ್ ದಾಟಿದೆ. ಇದು ಬಾಹುಬಲಿ 2, ಇಂಡಿಯನ್ ಮಾರುಕಟ್ಟೆಯಲ್ಲಿ ಗಳಿಸಿದ್ದ 1800 ಕೋಟಿಗಿಂತ ಹೆಚ್ಚು.

    ಇದರ ನಡುವೆ ಕೆಜಿಎಫ್ ಚಾಪ್ಟರ್ 2 ಒಟಿಟಿಗೂ ಬಂದಿದೆ. ಅಮೇಜಾನ್ ಪ್ರೈಂನಲ್ಲಿ ಕೆಜಿಎಫ್ ಚಾಪ್ಟರ್ 2 ನೋಡೋಕೆ ಸಿಗುತ್ತಿದೆ. ಆದರೆ, ಅದು ಫ್ರೀ ಅಲ್ಲ. ಅಮೇಜಾನ್ ಸಬ್‍ಸ್ಕ್ರಿಪ್ಷನ್ ಇದ್ದರೂ ಕೂಡಾ ಕೆಜಿಎಫ್ 2 ನೋಡೋಕೆ ಎಕ್ಸ್‍ಟ್ರಾ 199 ರೂ. ಕೊಡಬೇಕು. ಈ ಪೇ&ವ್ಯೂ ಸಿಸ್ಟಂ ಒಂದು ತಿಂಗಳು ಇರುತ್ತದೆ.

  • ಮಗನ ಬೀಸ್ಟ್`ಗಿಂತ ಕೆಜಿಎಫ್ ಇಷ್ಟವಾಯ್ತು : ವಿಜಯ್ ತಂದೆ

    ಮಗನ ಬೀಸ್ಟ್`ಗಿಂತ ಕೆಜಿಎಫ್ ಇಷ್ಟವಾಯ್ತು : ವಿಜಯ್ ತಂದೆ

    ಕೆಜಿಎಫ್ ಚಾಪ್ಟರ್ 2 ರಿಲೀಸ್ ಆದ ಹಿಂದಿನ ದಿನ ತಮಿಳಿನಲ್ಲಿ ರಿಲೀಸ್ ಆದ ಸಿನಿಮಾ ಬೀಸ್ಟ್. ಕೆಜಿಎಫ್‍ಗೆ ಭರ್ಜರಿ ಪೈಪೋಟಿ ನೀಡಲಿದೆ ಎಂಬ ಸುದ್ದಿಯಿತ್ತು. ಹವಾ ಕೂಡಾ ಇತ್ತು. ಆದರೆ ರಿಲೀಸ್ ಆದ ಮರುದಿನವೇ ಚಿತ್ರಕ್ಕೆ ಬಂದ ಮಿಶ್ರ ಪ್ರತಿಕ್ರಿಯೆಗಳು ಚಿತ್ರವನ್ನು ಗೆಲ್ಲಿಸಲಿಲ್ಲ. ಬದಲಿಗೆ ಕೆಜಿಎಫ್ ಚಾಪ್ಟರ್ 2 ತಮಿಳಿನಲ್ಲೂ ಹಿಟ್ ಆಗಿ ಬಿಸ್ಟ್ ಅನ್ನು ಹಿಂದಿಕ್ಕಿತ್ತು. ತಮಿಳುನಾಡಿನಲ್ಲಿ ಕನ್ನಡದ ಚಿತ್ರವೊಂದು ದಾಖಲೆಯ 100 ಕೋಟಿ ಕ್ಲಬ್ ಸೇರಿದ್ದು ಹೊಸ ಇತಿಹಾಸವನ್ನೇ ಸೃಷ್ಟಿಸಿತು. ಈಗ ಕೆಜಿಎಫ್ ಬಗ್ಗೆ ವಿಜಯ್ ಅವರ ತಂದೆಯೇ ಮಾತನಾಡಿದ್ದಾರೆ.

    ವಿಜಯ್ ಅವರ ತಂದೆ ಎಸ್.ಎ.ಚಂದ್ರಶೇಖರ್ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಬೀಸ್ಟ್ ಚಿತ್ರವನ್ನು ನೋಡಿದ್ದ ಚಂದ್ರಶೇಖರ್ ಮಗನ ಆಕ್ಟಿಂಗ್, ಪರ್ಫಾಮೆನ್ಸ್ ಇಷ್ಟವಾಯಿತು. ಅದರೆ ನಿರ್ದೇಶಕರು ಎಡವಿದ್ದಾರೆ ಎಂದಿದ್ದರು. ಹಾಗಂತ ಬಿಸ್ಟ್ ಅಟ್ಟರ್ ಫ್ಲಾಪ್ ಚಿತ್ರವಲ್ಲ. ನಿರ್ಮಾಪಕರಿಗೆ ಹಾಗೂ ವಿತರಕರಿಗೆ ಮೋಸ ಮಾಡಿಲ್ಲ. ಕಾರಣ ವಿಜಯ್ ಸ್ಟಾರ್‍ಡಮ್ ಮತ್ತು ತಮಿಳು ಚಿತ್ರಗಳಿಗೆ ಇರುವ ದೊಡ್ಡ ಪ್ರೇಕ್ಷಕ ಬಳಗ.

    ಅದಾದ ನಂತರ ಕೆಜಿಎಫ್ ಚಾಪ್ಟರ್ 2 ನೋಡಿರುವ ಮಗನ ಚಿತ್ರಕ್ಕಿಂತ ಕೆಜಿಎಫ್ ಚೆನ್ನಾಗಿದೆ ಎಂದಿದ್ದಾರೆ. ಸಿನಿಮಾ ಪ್ರೇಕ್ಷಕರನ್ನು 3 ಗಂಟೆ ಕಾಲ ಹಿಡಿದಿಡುತ್ತೆ. ಸಣ್ಣ ಪುಟ್ಟ ಲೋಪದೋಷಗಳಿವೆ. ಆದರೆ ಓವರ್ ಆಲ್ ಸಿನಿಮಾ ಚೆನ್ನಾಗಿದೆ ಎಂದಿದ್ದಾರೆ.

  • ಮನೆ ಮನೆಗೆ ರಾಕಿಭಾಯ್ : ಮುಹೂರ್ತ ಫಿಕ್ಸ್

    ಮನೆ ಮನೆಗೆ ರಾಕಿಭಾಯ್ : ಮುಹೂರ್ತ ಫಿಕ್ಸ್

    ಕೆಜಿಎಫ್ ಚಾಪ್ಟರ್ 2. ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ದಾಖಲೆಗಳ ಮೇಲೆ ದಾಖಲೆ ಬರೆದ ಸಿನಿಮಾ. ಈ ಚಿತ್ರದ ಮೂಲಕ ರಾಕಿಭಾಯ್ ಅನ್ನೋ ಹೆಸರು ಈಗ ಇಂಡಿಯಾದ ಮನೆ ಮನೆಗೂ ತಲುಪಿದೆ. ಬಾಕ್ಸಾಫೀಸಿನಲ್ಲಿ ಸಾವಿರಾರು ಕೋಟಿ ದುಡಿದ ಕೆಜಿಎಫ್ ಚಾಪ್ಟರ್ 2, ಒಟಿಟಿಗಳಲ್ಲೂ ನಂ.1 ಸ್ಥಾನ ಅಲಂಕರಿಸಿತ್ತು. ಈಗ ಮನೆ ಮನೆಗೆ ಬರುತ್ತಿದೆ.

    ಕೆಜಿಎಫ್ ಚಾಪ್ಟರ್ 2 ಚಿತ್ರದ ಹಕ್ಕುಗಳನ್ನು ಝೀಟಿವಿ ಖರೀದಿಸಿತ್ತು. ಇದೇ 20ನೇ ತಾರೀಕು ಅಂದರೆ ಶನಿವಾರ ರಾತ್ರಿ 7ಕ್ಕೆ ಸರಿಯಾಗಿ ಮನೆ ಮನೆಯಲ್ಲೂ ರಾಕಿಭಾಯ್ ದರ್ಶನ ಕೊಡಲಿದ್ದಾನೆ. ಶ್ರೀನಿಧಿ ಜೊತೆ ರೊಮ್ಯಾನ್ಸ್ ಮಾಡುತ್ತಾನೆ. ಅಧೀರನ ಜೊತೆ ಗುದ್ದಾಡುತ್ತಾನೆ. ರಮಿಕಾ ಸೇನ್ ಠೇಂಕಾರವನ್ನು ಎದುರಿಸುತ್ತಾನೆ. ಝೀ ಕನ್ನಡದಲ್ಲಿ ಪ್ರಶಾಂತ್ ನೀಲ್ ಸೃಷ್ಟಿಸಿದ ಮ್ಯಾಜಿಕಲ್ ಸಿನಿಮಾ ಕಣ್ತುಂಬಿಕೊಳ್ಳಬಹುದು.

  • ಮಾರ್ಚ್ 21 & ಏಪ್ರಿಲ್ 13 ಮತ್ತು ಕೆಜಿಎಫ್ ಚಾಪ್ಟರ್ 2..!

    ಮಾರ್ಚ್ 21 & ಏಪ್ರಿಲ್ 13 ಮತ್ತು ಕೆಜಿಎಫ್ ಚಾಪ್ಟರ್ 2..!

    ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗುತ್ತಿರೋದು ಏಪ್ರಿಲ್ 14ಕ್ಕೆ. ಚಿತ್ರದ ಪ್ರಮೋಷನ್ ಶುರುವಾಗಿದೆ. ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ನಾಗಾಭರಣ, ವಸಿಷ್ಠ ಸಿಂಹ.. ಹೀಗೆ ಬೃಹತ್ ಕಲಾವಿದರ ತಂಡವಿರೋ ಚಿತ್ರಕ್ಕೆ ಕ್ಯಾಪ್ಟನ್ ಪ್ರಶಾಂತ್ ನೀಲ್. ಹೊಂಬಾಳೆ ಬ್ಯಾನರ್‍ನ ಕೆಜಿಎಫ್ ಚಾಪ್ಟರ್ 2 ಇದುವರೆಗೆ ಪೋಸ್ಟರ್ ಮತ್ತು ಟೀಸರ್ ಬಿಟ್ಟಿರೋದ್ರ ಹೊರತಾಗಿ ಬೇರೇನನ್ನೂ ಪ್ರೇಕ್ಷಕರಿಗೆ ತೋರಿಸಿಲ್ಲ. ಅವೆಲ್ಲದಕ್ಕೂ ಈಗ ಮುಹೂರ್ತ ಕೂಡಿ ಬಂದಿದೆ.

    ಮಾರ್ಚ್ 21. ಆ ದಿನ ಬೆಳಗ್ಗೆ 11.07ರ ಶುಭ ಮುಹೂರ್ತದಲ್ಲಿ ಕೆಜಿಎಫ್ ಚಾಪ್ಟರ್ 2ನ ಮೊದಲ ಹಾಡು ತೂಫಾನ್ ರಿಲೀಸ್ ಆಗಲಿದೆ.

    ಏಪ್ರಿಲ್ 13ರಂದು ಉತ್ತರ ಅಮೆರಿಕದಲ್ಲಿ ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ.

  • ಮೇ ತಿಂಗಳಿಂದ ಕೆಜಿಎಫ್ ಚಾಪ್ಟರ್ 2 ಆರಂಭ

    kgf chapter 2 shooting to start from may

    ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣವನ್ನು ಮೇ ತಿಂಗಳಿಂದ ಆರಂಭಿಸಲು ಚಿತ್ರತಂಡ ನಿರ್ಧರಿಸಿಬಿಟ್ಟಿದೆ. ಚಾಪ್ಟರ್ 2ನ ಶೇ.25ರಷ್ಟು ಚಿತ್ರೀಕರಣವನ್ನು ಈಗಾಗಲೇ ಮುಗಿಸಿರುವ ಚಿತ್ರತಂಡ, ಉಳಿದ ಭಾಗದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ. ಕೆಜಿಎಫ್ ಚಾಪ್ಟರ್ 1ಕ್ಕೆ ಮಾಡಿಕೊಂಡಂತೆಯೇ, ಶೂಟಿಂಗಿಗೆ ಹೋಗುವ ಮುನ್ನವೇ ಎಲ್ಲವನ್ನೂ ತಯಾರು ಮಾಡಿಕೊಳ್ಳುತ್ತಿದೆ ಕೆಜಿಎಫ್ ಟೀಂ.

    ಯಶ್ ಈಗಾಗಲೇ ಗಡ್ಡ ಬೆಳೆಸೋಕೆ ಶುರು ಮಾಡಿದ್ದಾರೆ. ಮೇ ತಿಂಗಳ ಹೊತ್ತಿಗೆ ಕೆಜಿಎಫ್ ಚಾಪ್ಟರ್ 1 ಲೆವೆಲ್ಲಿಗೆ ಬರಲಿದೆ ಯಶ್ ಗಡ್ಡ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಚಿತ್ರ ರೆಡಿಯಾಗುತ್ತಿದೆ. ಸದ್ಯಕ್ಕಂತೂ ಯಶ್ ಕೆಜಿಎಫ್ ಬಿಟ್ಟು ಬೇರೆ ಧ್ಯಾನ ಮಾಡೋದಿಲ್ಲ. ಕೆಜಿಎಫ್ ಚಾಪ್ಟರ್ 2, 2020ರಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

  • ಮೈಸೂರು ಅರಮನೆಯಲ್ಲಿ ಕೆಜಿಎಫ್ ಚಾಪ್ಟರ್ 2 ಶೂಟಿಂಗ್

    kgf chapter 2 shooting in mysore

    ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಬಳ್ಳಾರಿಯಿಂದ ಮೈಸೂರಿಗೆ ಶಿಫ್ಟ್ ಆಗಿದೆ. ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್‍ನಲ್ಲಿ ಕೆಜಿಎಫ್ 2 ಶೂಟಿಂಗ್ ನಡೆಯುತ್ತಿದೆ. ಅಷ್ಟೇ ಅಲ್ಲ, ನಾಯಕಿ ಶ್ರೀನಿಧಿಯ ಶೂಟಿಂಗ್ ಕಂಪ್ಲೀಟ್ ಆಗಿದೆ ಎಂಬ ಸುದ್ದಿಗಳಿವೆ.

    ಕೆಜಿಎಫ್ ಚಾಪ್ಟರ್ 1 ಶೂಟಿಂಗ್ ಕೂಡಾ ಲಲಿತ್ ಮಹಲ್ ಪ್ಯಾಲೇಸ್‍ನಲ್ಲಿ ನಡೆದಿತ್ತು. ಅರಮನೆಯಲ್ಲಿ ಚಿತ್ರದ ಅತ್ಯಂತ ಪ್ರಮುಖ ಭಾಗಗಳ ಶೂಟಿಂಗ್ ನಡೆದಿದೆ ಎನ್ನಲಾಗಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಬಿಡುವಿಲ್ಲದೆ ಚಿತ್ರೀಕರಣ ಮಾಡುತ್ತಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣದ ಕೆಜಿಎಫ್, 2020ರ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು.

  • ಮೊದಲ ದಿನವೇ 100 ಕೋಟಿ ಕಲೆಕ್ಷನ್ ನಿರೀಕ್ಷೆ..!

    ಮೊದಲ ದಿನವೇ 100 ಕೋಟಿ ಕಲೆಕ್ಷನ್ ನಿರೀಕ್ಷೆ..!

    ಕೆಜಿಎಫ್ ಚಾಪ್ಟರ್ 2 ದಾಖಲೆ ಬರೆಯಲೆಂದೇ ನಿರ್ಮಾಣವಾದ ಇಂಡಿಯನ್ ಸಿನಿಮಾ. ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಮಾಳವಿಕಾ ಅವಿನಾಶ್, ಪ್ರಕಾಶ್ ರೈ, ನಾಗಾಭರಣ, ವಸಿಷ್ಠ ಸಿಂಹ ಮೊದಲಾದವರು ನಟಿಸಿರೋ ಚಿತ್ರ ಏಪ್ರಿಲ್ 14ರಂದು ರಿಲೀಸ್ ಆಗುತ್ತಿದೆ. ಆ ದಿನ ಕೆಜಿಎಫ್ ಹಬ್ಬವೇ ನಡೆಯುತ್ತಿದೆ. ರಿಲೀಸ್ ಆಗುತ್ತಿರೋದು 10 ಸಾವಿರಕ್ಕೂ ಹೆಚ್ಚು ಥಿಯೇಟರುಗಳಲ್ಲಿ.

    ಅಮೆರಿಕ, ಬ್ರಿಟನ್, ದುಬೈ, ಯುಎಇ, ಸೌದಿ ಅರೇಬಿಯಾ, ರಷ್ಯಾ, ಗ್ರೀಸ್, ಫ್ರಾನ್ಸ್, ಆಸ್ಟ್ರೇಲಿಯಾ, ಮಲೇಷಿಯಾ ಸೇರಿದಂತೆ ಜಗತ್ತಿನ ಸುಮಾರು 50 ರಾಷ್ಟ್ರಗಳಲ್ಲಿ ರಿಲೀಸ್ ಆಗುತ್ತಿರೋ ಚಿತ್ರದ ಮೊದಲ ದಿನದ ಬಾಕ್ಸಾಫೀಸ್ ಗಳಿಕೆ ಎಷ್ಟಿರಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಮೊದಲ ದಿನವೇ 100 ಕೋಟಿ ಕಲೆಕ್ಷನ್ ದಾಟಬಹುದು ಎಂಬುದು ಎಲ್ಲರ ನಿರೀಕ್ಷೆ.

    ಪ್ರಶಾಂತ್ ನೀಲ್ ಮ್ಯಾಜಿಕ್ ಮತ್ತೊಮ್ಮೆ ಕೆಲಸ ಮಾಡಿದ್ದು, ಇದರಿಂದ ಖುಷಿಯಾಗಲಿರೋದು ಹೊಂಬಾಳೆ ಫಿಲಮ್ಸ್‍ನ ಬ್ರಹ್ಮ ವಿಜಯ್ ಕಿರಗಂದೂರು. ಕನ್ನಡ ಚಿತ್ರವೊಂದು ಈ ಪರಿ ಸದ್ದು ಮಾಡುತ್ತಿರೋದು ಎಲ್ಲರಿಗೂ ಖುಷಿ ಕೊಟ್ಟಿದೆ. ಕರ್ನಾಟಕದಲ್ಲಿ ಕನ್ನಡ ವರ್ಷನ್ ಕೆಜಿಎಫ್ ಮೊದಲ ವಾರದಲ್ಲಿಯೇ 100 ಕೋಟಿ ದಾಟಬಹುದು ಎಂಬ ನಿರೀಕ್ಷೆಯೂ ಇದೆ. ಒಟ್ಟಿನಲ್ಲಿ ಕೆಜಿಎಫ್ ಬಂದಿರೋದೇ ದಾಖಲೆ ಬರೆಯೋಕೆ ಎಂಬ ವಾತಾವರಣ ಎಲ್ಲೆಡೆ ಇದೆ. ಅಂದಹಾಗೆ ಬುಕ್ಕಿಂಗ್ ಇವತ್ತಿಂದ ಆರಂಭ.

  • ಮೊದಲ ದಿನವೇ 100 ಕೋಟಿ ಕ್ಲಬ್`ಗೆ ಕೆಜಿಎಫ್ : ಬಾಕ್ಸಾಫೀಸ್ ಎಲ್ಲಿಂದ ಎಷ್ಟೆಷ್ಟು..?

    ಮೊದಲ ದಿನವೇ 100 ಕೋಟಿ ಕ್ಲಬ್`ಗೆ ಕೆಜಿಎಫ್ : ಬಾಕ್ಸಾಫೀಸ್ ಎಲ್ಲಿಂದ ಎಷ್ಟೆಷ್ಟು..?

    134 ಕೋಟಿ. ಇದು ಹೊಂಬಾಳೆಯವರೇ ಹೊರಗೆ ಬಿಟ್ಟ ಅಧಿಕೃತ ಲೆಕ್ಕಾಚಾರ. ಮೊದಲ ದಿನವೇ 100 ಕೋಟಿ ಕ್ಲಬ್ ಸೇರಿದ ಸಿನಿಮಾ ಕೆಜಿಎಫ್ ಚಾಪ್ಟರ್ 2. ರಾಕಿಂಗ್ ಸ್ಟಾರ್ ಯಶ್ ಫುಲ್ ರಾಕಿಂಗ್. ಪ್ರಶಾಂತ್ ನೀಲ್ ಅವರ ಝೀಲ್ ಡಬಲ್ ಆಗಿದ್ದರೆ, ಫುಲ್ ಖುಷಿಯಾಗಿರೋದು ವಿಜಯ್ ಕಿರಗಂದೂರು. 134 ಕೋಟಿಯನ್ನು ಮೊದಲ ದಿನವೇ ಗಳಿಸಿದ ಕೆಜಿಎಫ್‍ನ ಮೊದಲ 4 ದಿನದ ಎಲ್ಲ ಶೋಗಳೂ ಬುಕ್ ಆಗಿರುವುದು ವಿಶೇಷ. ಅಲ್ಲಿಗೆ ಭಾನುವಾರದವರೆಗೆ ಕೆಜಿಎಫ್‍ಗೆ ಎದುರಾಳಿಗಳೇ ಇಲ್ಲ. ಈ 134 ಕೋಟಿಯಲ್ಲಿ ವಿದೇಶದ ಎಲ್ಲ 75 ದೇಶಗಳ ಬಾಕ್ಸಾಫೀಸ್ ಲೆಕ್ಕಾಚಾರ ಸಿಕ್ಕಿಲ್ಲ. ಈಗ ಬರುತ್ತಿರೋ ವರದಿಗಳ ಪ್ರಕಾರ ವಿಶ್ವದಾದ್ಯಂತ ಮೊದಲ ದಿನದ ಗಳಿಕೆ 165 ಕೋಟಿ ದಾಟಿದೆ. ಈ ಹಾದಿಯಲ್ಲಿ ಕೆಜಿಎಫ್ ಸೃಷ್ಟಿಸಿದ ದಾಖಲೆಗಳನ್ನೊಮ್ಮೆ ನೋಡೋಣ.

    ಕರ್ನಾಟಕದಲ್ಲೀಗ ಮೊದಲ ದಿನವೇ ಅತೀ ಹೆಚ್ಚು ದುಡಿದ ದಾಖಲೆ ಈಗ ಕೆಜಿಎಫ್ ಚಾಪ್ಟರ್ 2ನದ್ದು.

    ವಿಶ್ವದಾದ್ಯಂತ ಮೊದಲ ದಿನವೇ ದೊಡ್ಡ ಗಳಿಕೆ ಮಾಡಿದ ಚಿತ್ರಗಳ ಸಾಲಿನಲ್ಲಿ  ಕೆಜಿಎಫ್‍ನದ್ದು 3ನೇ ಸ್ಥಾನ. ಮೊದಲ 2 ಸ್ಥಾನದಲ್ಲಿರೋದು ಬಾಹುಬಲಿ ಮತ್ತು ಆರ್.ಆರ್.ಆರ್.

    ಆಂಧ್ರ ಮತ್ತು ತೆಲಂಗಾಣದಲ್ಲಿ ಆರ್.ಆರ್.ಆರ್. ದಾಖಲೆಯ ಸಮೀಪಕ್ಕೆ ಹೋಗಿದೆ. ಕರ್ನಾಟಕಕ್ಕಿಂತ ಹೆಚ್ಚು ಜನ ಅಲ್ಲಿ ಸಿನಿಮಾ ನೋಡಿದ್ದರೂ, ಗಳಿಕೆ ಕರ್ನಾಟಕಕ್ಕಿಂತ ಕಡಿಮೆ. ಕಾರಣ ಇಷ್ಟೆ. ಅಲ್ಲಿನ ಜಗನ್ ಸರ್ಕಾರ ಟಿಕೆಟ್ ದರವನ್ನು ಇಲ್ಲಿನಂತೆ ಏರಿಸೋಕೆ ಅವಕಾಶ ಕೊಟ್ಟಿಲ್ಲ. ಗರಿಷ್ಠ 250 ರೂ. ಅಷ್ಟೆ.

    ಕೇರಳದಲ್ಲಿ ಬೀಸ್ಟ್ ಸ್ಕ್ರೀನ್‍ಗಳ ಸಂಖ್ಯೆ ಡೌನ್ ಆಗಿದ್ದರೆ, ಕೆಜಿಎಫ್ ಸ್ಕ್ರೀನ್ ಸಂಖ್ಯೆ ತ್ರಿಬಲ್ ಆಗಿದೆ.

    ತಮಿಳುನಾಡಿನಲ್ಲಿ 2 ಮತ್ತು 3ನೇ ದಿನವೂ ಮಧ್ಯರಾತ್ರಿ ಶೋ ನಡೆಯುತ್ತಿವೆ. ವಿಶೇಷವೆಂದರೆ ಅಲ್ಲಿಯೂ ಬೀಸ್ಟ್ ಸ್ಕ್ರೀನ್ ಕಡಿಮೆಯಾಗಿದ್ದು, ಕೆಜಿಎಫ್ ಶೋಗಳ ಸಂಖ್ಯೆ ಹೆಚ್ಚಾಗಿದೆ.

    ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಕರ್ನಾಟಕದಲ್ಲಿ ಎಲ್ಲ ಭಾಷೆಗಳ ಶೋಗಳೂ ಹೌಸ್‍ಫುಲ್.

    ಹಿಂದಿಯಲ್ಲಿ ಮೊದಲ ದಿನವೇ 50 ಕೋಟಿ ದಾಟಿರೋ ಕೆಜಿಎಫ್, ಚಾಪ್ಟರ್ 1ನ ಲೈಫ್‍ಟೈಂ ಗಳಿಕೆಯನ್ನು ಮೊದಲ ದಿನವೇ ದಾಟಿಬಿಟ್ಟಿದೆ. ಚಾಪ್ಟರ್ 1, ಹಿಂದಿಯಲ್ಲಿ ಒಟ್ಟಾರೆ 44 ಕೋಟಿ ಬಿಸಿನೆಸ್ ಮಾಡಿತ್ತು. ಈಗ ಮೊದಲ ದಿನವೇ 54 ಕೋಟಿ ಬಿಸಿನೆಸ್ ಮಾಡಿದೆ.

    ಹಿಂದಿಯಲ್ಲಿ 54 ಕೋಟಿ, ಕನ್ನಡದಲ್ಲಿ 35 ಕೋಟಿ, ತೆಲುಗಿನಲ್ಲಿ 30 ಕೋಟಿ, ತಮಿಳಿನಲ್ಲಿ 9 ಕೋಟಿ ಹಾಗೂ ಮಲಯಾಳಂನಲ್ಲಿ 8 ಕೋಟಿ ಫಸ್ಟ್ ಡೇ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಅಮೆರಿಕದಲ್ಲಿಯೂ ದಾಖಲೆ ಬರೆದಿರೋ ಕೆಜಿಎಫ್‍ನ ಒಟ್ಟಾರೆ ಫಾರಿನ್ ಬಾಕ್ಸಾಫೀಸ್ ಲೆಕ್ಕ 30 ಕೋಟಿಗೂ ಹೆಚ್ಚು.

  • ಯಶ್ ಅಭಿಮಾನಿಗಳ ಕ್ಷಮೆ ಕೋರಿದ ಕೆಜಿಎಫ್ ನಿರ್ದೇಶಕ

    kgf director apologoze to yash fans

    ಯಶ್ ಅಭಿಮಾನಿಗಳ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗುತ್ತಿಲ್ಲ. ನಿಮ್ಮ ನಿರೀಕ್ಷೆಯಂತೆ ಯಶ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಕ್ಷಮಿಸಿ ಎಂದು ಕ್ಷಮೆ ಕೋರಿದ್ದಾರೆ ಪ್ರಶಾಂತ್ ನೀಲ್.

    ಜನವರಿ 8ಕ್ಕೆ ಯಶ್ ಹುಟ್ಟುಹಬ್ಬ. ಯಶ್ ಬರ್ತ್‍ಡೇಗೆ ಒಂದು ಟೀಸರ್ ಆದರೂ ಪಕ್ಕಾ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಇದು ನಿರಾಸೆ ಮೂಡಿಸಿರುವುದು ಸುಳ್ಳಲ್ಲ. ಪ್ರಶಾಂತ್ ಕೊಡುತ್ತಿರುವ ಕಾರಣ ಇದು, ಶೂಟಿಂಗ್ ಮುಗಿಸಿಕೊಂಡು ಇಡೀ ತಂಡ ಬೆಂಗಳೂರಿಗೆ ಬರುವುದೇ ಜನವರಿ 7ಕ್ಕೆ. ಉಳಿಯುವುದು ಇನ್ನೊಂದೇ ದಿನ. ಒಂದು ದಿನದಲ್ಲಿ ದಿ ಬೆಸ್ಟ್ ಎನ್ನುವ ಕ್ವಾಲಿಟಿ ಕೊಡಲು ಸಾಧ್ಯವಿಲ್ಲ. ಬೆಸ್ಟ್ ಕೊಡದೇ ಹೋದರೆ ತಪ್ಪಾಗುತ್ತದೆ. ಹೀಗಾಗಿ ಟೀಸರ್ ಬಿಡುಗಡೆಯನ್ನೇ ಮುಂದೂಡಿದ್ದಾರೆ ಪ್ರಶಾಂತ್ ನೀಲ್.

    ನಿರ್ದೇಶಕ ಪ್ರಶಾಂತ್ ನೀಲ್ ಕಮಿಟ್‍ಮೆಂಟ್ ಬಗ್ಗೆ ಅವರ ಜೊತೆ ಕೆಲಸ ಮಾಡಿರುವವರಿಗೆ ಚೆನ್ನಾಗಿ ಗೊತ್ತು. ಅಂದುಕೊಂಡಂತೆ ಔಟ್‍ಪುಟ್ ಸಿಗುವವರೆಗೂ ರಾಜಿಯಾಗದ ಸ್ವಭಾವ ಅವರದ್ದು. ಸ್ಸೋ.. ಟೀಸರ್ ವಿಚಾರದಲ್ಲೂ ರಾಜಿ ಮಾಡಿಕೊಳ್ಳುತ್ತಿಲ್ಲ. ಆದರೆ, ಜನವರಿ 8ಕ್ಕೆ, ಬೆಳಗ್ಗೆ 10 ಗಂಟೆ 8 ನಿಮಿಷಕ್ಕೆ ಸರಿಯಾಗಿ ಕೆಜಿಎಫ್ ಚಾಪ್ಟರ್ 2ನ ಸೆಕೆಂಡ್ ಪೋಸ್ಟರ್ ಹೊರಬೀಳಲಿದೆ.

  • ಯಶ್ ಅವರಲ್ಲಿ ಅಮಿತಾಭ್ ಕಂಡ ಬಾಲಿವುಡ್ ಕ್ವೀನ್

    ಯಶ್ ಅವರಲ್ಲಿ ಅಮಿತಾಭ್ ಕಂಡ ಬಾಲಿವುಡ್ ಕ್ವೀನ್

    ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ತಿರುಗುವಂತೆ ಮಾಡಿರೋದು ಕೆಜಿಎಫ್ ಚಾಪ್ಟರ್ 2. ಬಾಕ್ಸಾಫೀಸ್ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದು ಚಿಂದಿ ಉಡಾಯಿಸುತ್ತಿರೋ ಸಿನಿಮಾ. ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿದ ಯಶ್, ಬಾಲಿವುಡ್ನ ದೊಡ್ಡ ದೊಡ್ಡ ಸ್ಟಾರ್ಗಳಿಗೆ ನಡುಕ ಹುಟ್ಟಿಸಿರುವುದು ಸತ್ಯ. ಇದು ಯಶ್ ಯಶಸ್ಸಿನ ಸ್ಟೊರಿ.

    ಸಕ್ಸಸ್ ಫುಲ್ ಸಿನಿಮಾಗಳಿಂದ ಮತ್ತು ವಿವಾದಗಳಿಂದ.. ಎರಡರಿಂದಲೂ ಖ್ಯಾತವಾಗಿರೋ ನಟಿ ಕಂಗನಾ ರಾವತ್. ಬಾಲಿವುಡ್ ಕ್ವೀನ್. ಬಾಲಿವುಡ್ನ ಬಾದ್ಷಾಗಳಿಗೆ ನೇರಾನೇರ ಸವಾಲು ಹಾಕುವ ಚೆಲುವೆ ಕಂಗನಾ ರಾವತ್. ಅವರೀಗ ಯಶ್ ಅವರಿಗೆ ದೊಡ್ಡ ಸ್ಥಾನವೊಂದನ್ನು ನೀಡಿದ್ದಾರೆ.

    ದಶಕಗಳಿಂದ ಭಾರತೀಯ ಚಿತ್ರರಂಗ  ಆಂಗ್ರಿ ಯಂಗ್ ಮ್ಯಾನ್‌ನ್ನು ಮಿಸ್ ಮಾಡಿಕೊಂಡಿತ್ತು. 70ರ ದಶಕದ ನಂತರ ಅಮಿತಾಭ್‌ ಬಚ್ಚನ್ ನಿರ್ವಹಿಸಿ ಬಿಟ್ಟಿದ್ದ ಆಂಗ್ರಿ ಯಂಗ್ ಮ್ಯಾನ್‌ ಜಾಗವನ್ನು ಯಶ್ ತುಂಬಿದ್ದಾರೆ. ಅದ್ಭುತವಾಗಿ ನಟಿಸಿದ್ದಾರೆ

    ಇದು ಕಂಗನಾ ರಾವತ್ ಮಾತು. ಬಚ್ಚನ್ ಅವರಿಗೆ ಆಂಗ್ರಿ ಯಂಗ್ ಮ್ಯಾನ್ ಪಟ್ಟ ಕೊಟ್ಟಿದ್ದ ಚಿತ್ರಗಳು ಡಾನ್, ದೀವಾರ್.. ಮೊದಲಾದ ಅಂಡರ್ವರ್ಡ್ ಸಿನಿಮಾಗಳು. ಯಶ್ ಕೂಡಾ ಅಂತಹುದೇ ಕಥೆಯ ಮೂಲಕ ಬಾಲಿವುಡ್ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.

    ಯಶ್ ಅವರನ್ನು ಅಮಿತಾಬ್ ಬಚ್ಚನ್ ಅವರಂತಾ ಲೆಜೆಂಡ್ಗೆ ಈಗಲೇ ಹೋಲಿಸುವುದು ತಪ್ಪು ಎನ್ನುವ ಅಭಿಪ್ರಾಯ ಎಲ್ಲರದ್ದು. ಆದರೆ ಬಚ್ಚನ್ ಅವರಿಗೆ ಆಂಗ್ರಿ ಯಂಗ್ ಮ್ಯಾನ್ ಸಿಕ್ಕಿದ್ದು ಅವರ ಆರಂಭದ ದಿನಗಳಲ್ಲಿ. ತಪ್ಪೇನಿಲ್ಲ ಎನ್ನುವ ಅಭಿಪ್ರಾಯ ಇನ್ನೂ ಕೆಲವರದ್ದು.

    ಆದರೆ ಯಶ್ ಅವರಿಗೆ ಕನ್ನಡ ಚಿತ್ರರಂಗದಿಂದಷ್ಟೇ ಅಲ್ಲ, ತಮಿಳು, ತೆಲುಗು, ಹಿಂದಿ, ಮಲಯಾಳಂ.. ಹೀಗೆ ದೇಶದ ಎಲ್ಲ ಭಾಷೆಯ ಚಿತ್ರರಂಗದವರಿಂದಲೂ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ. ಕಂಗನಾ ರಣಾವತ್ ದೊಡ್ಡ ಮಟ್ಟದ ಹೋಲಿಕೆ ಮಾಡಿದ್ದಾರೆ.. ಅಷ್ಟೆ. ಖುಷಿ ಪಡೋ ಸಮಯವಿದು.

  • ಯಶ್ ಪಾತ್ರಕ್ಕೆ ಸಂಭಾಷಣೆ ಯಶ್ ಅವರದ್ದೇ..!

    ಯಶ್ ಪಾತ್ರಕ್ಕೆ ಸಂಭಾಷಣೆ ಯಶ್ ಅವರದ್ದೇ..!

    ಇದೊಂದು ಕುತೂಹಲ ಹಾಗೆಯೇ ಇತ್ತು. ಕೆಜಿಎಫ್ ಚಾಪ್ಟರ್ 1 ಯಶಸ್ಸಿನಲ್ಲಿ ದೊಡ್ಡ ಪಾತ್ರ ಸಂಭಾಷಣೆಗಳದ್ದು. ಇವತ್ತಿಗೂ ಆ ಸಂಭಾಷಣೆಗಳು ಆಗಾಗ್ಗೆ ಸನ್ನಿವೇಶಕ್ಕೆ ತಕ್ಕಂತೆ ಬಳಕೆಯಾಗುತ್ತಲೇ ಇರುತ್ತವೆ. ಆ ಸಂಭಾಷಣೆಗಳ ಸೃಷ್ಟಿಕರ್ತ ಪ್ರಶಾಂತ್ ನೀಲ್. ಆದರೆ ಚಾಪ್ಟರ್ 2ನಲ್ಲಿ ಅದರಲ್ಲಿ ಸ್ವಲ್ಪ ಬದಲಾವಣೆಯಾಗಿದೆ.

    ಚಿತ್ರದಲ್ಲಿನ ರಾಕಿಭಾಯ್ ಪಾತ್ರಕ್ಕೆ ಸಂಭಾಷಣೆ ಬರೆದಿರುವುದು ಸ್ವತಃ ಯಶ್. ಅವರ ಜೀವನಾನುಭವ ದೊಡ್ಡದು. ಪ್ರತಿದಿನ ಸೆಟ್‍ಗೆ ಬಂದ ಮೇಲೆ ಅವರೇ ಸಂಭಾಷಣೆ ಬರೆಯೋಕೆ ಶುರು ಮಾಡುತ್ತಿದ್ದರು. ಸಂಭಾಷಣೆ ಚೆನ್ನಾಗಿ ಬಂದಿದೆ ಎಂದಿದ್ದಾರೆ ಪ್ರಶಾಂತ್ ನೀಲ್.

    ಚಿತ್ರದಲ್ಲಿ ವಯೋಲೆನ್ಸ್ ಲೈಕ್ ಮೀ ಡೈಲಾಗ್ ಫೇಮಸ್ ಆಗಿದೆ. ಅದಕ್ಕೆ ತಕ್ಕಂತೆ ದಾಖಲೆ ಬರೆಯುತ್ತಿರೋ ಹಿನ್ನೆಲೆಯಲ್ಲಿ ರೆಕಾಡ್ರ್ಸ್.. ರೆಕಾಡ್ರ್ಸ್.. ರೆಕಾಡ್ರ್ಸ್.. ರಾಕಿ ಡೋಂಟ್ ಲೈಕ್ ರೆಕಾಡ್ರ್ಸ್.. ಹಿ ಅವಾಯ್ಡ್ ಇಟ್. ಬಟ್ ರೆಕಾಡ್ರ್ಸ್ ಲೈಕ್ಸ್ ರಾಕಿ..  ಎಂಬ ಡೈಲಾಗ್ ಹೊರಬಿದ್ದಿದೆ.