` kgf chapter 2, - chitraloka.com | Kannada Movie News, Reviews | Image

kgf chapter 2,

  • ಕೆಜಿಎಫ್ ಚಿತ್ರದಿಂದ ಅನಂತ್ ನಾಗ್ ಹೊರಕ್ಕೆ..?

    ananth nag exists from yash starrer kgf

    ಕೆಜಿಎಫ್ ಕಥೆಯ ಸೂತ್ರಧಾರ ಆನಂದ್ ಇಂಗಳಗಿ. ಪತ್ರಕರ್ತ. ಇನ್ನೊಬ್ಬ ಟಿವಿ ಚಾನೆಲ್ ಪತ್ರಕರ್ತೆ ದೀಪಾ ಹೆಗ್ಡೆ ಅಲಿಯಾಸ್ ಮಾಳವಿಕಾ ಅವಿನಾಶ್ ಎದುರು ರಾಕಿಭಾಯ್ ಕಥೆ ಹೇಳ್ತಾರೆ. ಅನಂತ್ ನಾಗ್ ವಾಯ್ಸ್ ಕೆಜಿಎಫ್ ಚಾಪ್ಟರ್ 1ನ ಹೈಲೈಟ್ಸ್‍ಗಳಲ್ಲಿ ಒಂದು. ಇಂತಹ ಅನಂತ್ ನಾಗ್ ಚಾಪ್ಟರ್ 2ನಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿಯಿದೆ. ಇದು ನಿಜಾನಾ..? ಹೊಂಬಾಳೆ ಫಿಲಂಸ್, ನಿರ್ದೇಶಕ ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಸೇರಿದಂತೆ ಯಾರೊಬ್ಬರೂ ಪ್ರತಿಕ್ರಿಯೆಗೆ ಸಿಕ್ಕಿಲ್ಲ. ಅತ್ತ ಅನಂತ್ ನಾಗ್ ಅವರ ಕಡೆಯಿಂದಲೂ ಸ್ಪಷ್ಟನೆ ಬಂದಿಲ್ಲ.

    ಸದ್ಯಕ್ಕೆ ಗಾಂಧಿನಗರದಲ್ಲಿ ಈ ಸುದ್ದಿ ಸೆನ್ಸೇಷನ್ ಸೃಷ್ಟಿಸಿರುವುದು ಸತ್ಯ. ಸುದ್ದಿ ಸತ್ಯವೇ ಆಗಿದ್ದರೆ, ಕನ್ನಡದ ಬಹು ನಿರೀಕ್ಷಿತ ಸಿನಿಮಾ ಆಗಿರುವ ಕೆಜಿಎಫ್ ಚಾಪ್ಟರ್ 2ಗೆ ಇದು ಶಾಕಿಂಗ್.

  • ಕೆಜಿಎಫ್ ಚಿತ್ರವನ್ನು ನೋಡಿ ಮೆಚ್ಚಿದ ದಿಗ್ಗಜರು..!

    ಕೆಜಿಎಫ್ ಚಿತ್ರವನ್ನು ನೋಡಿ ಮೆಚ್ಚಿದ ದಿಗ್ಗಜರು..!

    ಪ್ರತಿಯೊಬ್ಬ ಕಲಾವಿದ ಮತ್ತು ನಿರ್ದೇಶಕರಿಗೆ ಒಂದು ಕನಸಿರುತ್ತೆ. ತಮ್ಮ ಚಿತ್ರಗಳನ್ನು ತಾವು ಇಷ್ಟಪಡುವ ನಟ, ನಿರ್ದೇಶಕ, ತಂತ್ರಜ್ಞರು ನೋಡಿ ಮೆಚ್ಚಬೇಕು ಎನ್ನುವ ಕನಸದು. ಬಾಕ್ಸಾಫೀಸ್‍ನಲ್ಲಿ ಧೂಳೆಬ್ಬಿಸುತ್ತಿರೋ ಕೆಜಿಎಫ್‍ಗೆ ಈಗ ಅಂತಹ ದಿಗ್ಗಜರ ಮೆಚ್ಚುಗೆ ಸಿಕ್ಕಿದೆ.

    ಸಂಗೀತ ಲೋಕದ ಧ್ರುವತಾರೆ ಇಳಯರಾಜಾ, ಕಮಲ್‍ಹಾಸ್ ಕೆಜಿಎಫ್ ಚಾಪ್ಟರ್ 2 ನೋಡಿ ಮೆಚ್ಚಿದ್ದಾರೆ. ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಕೂಡಾ ಚಿತ್ರವನ್ನು ನೋಡಿ ಯಶ್ ಮತ್ತು ಪ್ರಶಾಂತ್ ನೀಲ್ ಅವರನ್ನು ಹೊಗಳಿದ್ದರು.

    ಇದಕ್ಕೂ ಮೊದಲು ಅಲ್ಲು ಅರ್ಜುನ್, ರಾಮ್ ಚರಣ್ ತೇಜ, ಪ್ರಭಾಸ್, ಕಂಗನಾ ರಣಾವತ್, ಸಿಬಿ ಸತ್ಯರಾಜ್, ಸುಮಂತ್, ಗುರುಕಿರಣ್, ವಿಶಾಲ್, ಕೃತಿ ಕರಬಂಧ, ರವಿಶಂಕರ್ ಗೌಡ, ರಾಮ್ ಪೊತ್ತಿನೇನಿ, ರಾಣಾ ದಗ್ಗುಬಾಟಿ, ಕಾರ್ತಿ, ಖುಷ್ ಬೂ, ಅಮೃತಾ ಅಯ್ಯಂಗಾರ್, ಬೀರ್‍ಬಲ್ ಶ್ರೀನಿ, ಶ್ರೀಮುರಳಿ, ಅಥರ್ವ, ಕಾರ್ತಿಕೇಯ, ಡಾಲಿ ಧನಂಜಯ್, ರಿಷಬ್ ಶೆಟ್ಟಿ, ಸುಮಲತಾ ಅಂಬರೀಷ್, ಕಾರ್ತಿಕ್ ಸುಬ್ಬರಾಜ್, ನವೀನ್ ಚಂದ್ರ, ಶಿವಕಾರ್ತಿಕೇಯನ್, ಪವನ್ ಒಡೆಯರ್, ರಾಘವೇಂದ್ರ ರಾಜಕುಮಾರ್, ಸಾಯಿ ಧರಮ್‍ತೇಜ್, ಸಂತೋಷ್ ಆನಂದರಾಮ್, ಹೇಮಂತ್ ರಾವ್, ಎಪಿ ಅರ್ಜುನ್, ಪ್ರೀತಂ ಗುಬ್ಬಿ.. ಹೀಗೆ ಎಲ್ಲರೂ ಹೊಗಳಿದ್ದವರೇ. ಹೊಗಳಿದವರ ಲಿಸ್ಟು ತುಂಬಾ ತುಂಬಾ ದೊಡ್ಡದು.

    ಇವರೆಲ್ಲರ ಸಾಲಿನಲ್ಲೀಗ ಇಳಯರಾಜ, ಕಮಲ್ ಹಾಸನ್ ಕೂಡಾ ಸೇರಿರೋದು ಎಂತಹ ಕಲಾವಿದ, ತಂತ್ರಜ್ಞನಿಗೂ ಖುಷಿ ಕೊಡುವ ಸಂಗತಿಯೇ...

  • ಕೆಜಿಎಫ್ ನೋಡಿದ ಶಿವಣ್ಣ : ಶಿವಣ್ಣಗೆ ಇಷ್ಟವಾಗಿದ್ದೇನು?

    ಕೆಜಿಎಫ್ ನೋಡಿದ ಶಿವಣ್ಣ : ಶಿವಣ್ಣಗೆ ಇಷ್ಟವಾಗಿದ್ದೇನು?

    ಕೆಜಿಎಫ್ ಚಾಪ್ಟರ್ 2 ರಿಲೀಸ್ ಆದ ನಂತರ ಹಲವು ಸ್ಟಾರ್‍ಗಳು ಚಿತ್ರವನ್ನು ನೋಡಿದ್ದಾರೆ. ಮೆಚ್ಚಿದ್ದಾರೆ. ಕನ್ನಡದಲ್ಲೂ ಹಲವು ಚಿತ್ರನಟರು ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ಇದೀಗ ಶಿವ ರಾಜಕುಮಾರ್ ಕೂಡಾ ಚಿತ್ರವನ್ನು ನೋಡಿ ಖುಷಿಪಟ್ಟಿದ್ದಾರೆ. ಬೆಂಗಳೂರಿನ ಒರಾಯನ್ ಮಾಲ್`ನಲ್ಲಿ ಕೆಜಿಎಫ್ ನೋಡಿದ ಶಿವಣ್ಣ ಚಿತ್ರವನ್ನು ಮನಸಾರೆ ಹೊಗಳಿದರು. ಇದು ನಮ್ಮ ಚಿತ್ರರಂಗದ ಅದ್ಧೂರಿ ಸಿನಿಮಾ ಎಂದು ಪ್ರಶಂಸಿಸಿದರು.

    ಸಿನಿಮಾ ನೋಡ್ತಾ ಇದ್ರೆ ನಮಗೆಲ್ಲ ಹೆಮ್ಮೆ ಆಗುತ್ತೆ. ಡೈಲಾಗ್‍ಗಳಂತೂ ಅದ್ಧೂರಿಯಾಗಿವೆ. ಸೌಂಡಿಂಗ್ ಕೂಡಾ ಸಖತ್ತಾಗಿದೆ. ಕೆಜಿಎಫ್ ನಮ್ಮ ಸಿನಿಮಾ ಇಂಡಸ್ಟ್ರಿಗೆ ಬೂಸ್ಟ್ ಕೊಟ್ಟಿದೆ ಎಂದ ಶಿವಣ್ಣ ಯಶ್ ನನ್ನ ತಮ್ಮನಿದ್ದಂತೆ. ಯಶ್ ಮೇಲೆ ನನಗೆ ಸಪರೇಟ್ ಪ್ರೀತಿ ಇದೆ. ಅವರ ಹಾರ್ಡ್ ವರ್ಕಿಂಗ್ ಸೂಪರ್. ಯಶ್‍ನ ನೋಡ್ತಾ ಇದ್ರೆ ನನ್ನ ತಮ್ಮ ನೆನಪಾಗ್ತಾನೆ. ನನ್ನ ತಮ್ಮನೇ ಮುಂದೆ ಬಂದಂತೆ ಅನ್ನಿಸುತ್ತೆ ಎಂದರು ಶಿವಣ್ಣ.

    ಪ್ರಶಾಂತ್ ನೀಲ್ ನಿರ್ದೇಶನವನ್ನು ಹೊಗಳಿದ ಶಿವಣ್ಣ ಪ್ರಶಾಂತ್‍ರನ್ನು ಸರಸ್ವತಿ ಪುತ್ರ ಎಂದು ಹೊಗಳಿದರು. ಕೆಜಿಎಫ್ 3 ಬರುತ್ತೋ.. ಇಲ್ವೋ ಗೊತ್ತಿಲ್ಲ. ಪ್ರಶಾಂತ್‍ಗೇ ಕಾಲ್ ಮಾಡಿ ಕೇಳ್ತೇನೆ ಎಂದರು ಶಿವಣ್ಣ.

    ನನಗೆ ಚಿತ್ರದಲ್ಲಿ ಎಲ್ಲಕ್ಕಿಂತ ತಾಯಿ ಸೆಂಟಿಮೆಂಟ್ ಸೀನ್ ಇಷ್ಟವಾಯ್ತು ಎನ್ನೋದನ್ನೂ  ಮರೆಯಲಿಲ್ಲ ಶಿವಣ್ಣ. ಯಶ್ ಮೇಲೆ ನನಗೊಂಥರಾ ವಿಶೇಷ ಪ್ರೀತಿ. ಯಶ್ ಅವರ ಆರಂಭದ ದಿನಗಳಿಂದಲೂ ನೋಡಿದ್ದೇನೆ. ಇಂಡಸ್ಟ್ರಿಯಲ್ಲಿ ಯಾರೇ ಎತ್ತರಕ್ಕೆ ಬೆಳೆದರೂ ಖುಷಿ. ಯಶ್ ಬೆಳೆದರೆ ಇನ್ನೂ ಒಂಥರಾ ಖುಷಿ ಎಂದರು ಶಿವಣ್ಣ.

  • ಕೆಜಿಎಫ್ ನೋಡಿದ.. ಸಿಗರೇಟು ಸೇದಿದ.. ಆಸ್ಪತ್ರೆ ಸೇರಿದ..

    ಕೆಜಿಎಫ್ ನೋಡಿದ.. ಸಿಗರೇಟು ಸೇದಿದ.. ಆಸ್ಪತ್ರೆ ಸೇರಿದ..

    ಒಂದು ಸಿನಿಮಾ ನೋಡುಗರ ಮೇಲೆ ಯಾವ್ಯಾವ ರೀತಿಯಲ್ಲೆಲ್ಲ ಪರಿಣಾಮ ಬೀರಬಹುದು ಎನ್ನುವುದನ್ನು ನೋಡಿದ್ದೇವೆ. ಕೇಳಿದ್ದೇವೆ. ಬೆರಗಾಗಿದ್ದೇವೆ. ನಕ್ಕಿದ್ದೇವೆ. ಒಂದೊಂದು ಸಿನಿಮಾ ಬೀರುವ ಒಂದೊಂದು ತರಾ. ಅದು ಸಿನಿಮಾಗಳಿಗಿಂತ ಹೆಚ್ಚಾಗಿ ನೋಡುವವರ ಮನಸ್ಥಿತಿ. ಈಗ ಕೆಜಿಎಫ್ ಸಿನಿಮಾ ಕೂಡಾ ಅಂಥದ್ದೇ ಕಾರಣದಿಂದ ಸುದ್ದಿಯಾಗಿದೆ.

    ಇಲ್ಲೊಬ್ಬ 15 ವಯಸ್ಸಿನ ಬಾಲಕ ಕೆಜಿಎಫ್‍ನ್ನು ಹಲವು ಬಾರಿ ನೋಡಿದ್ದಾನೆ. ನೋಡಿದ ಎಲ್ಲರಂತೆಯೇ ಇಷ್ಟಪಟ್ಟಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ರಾಕಿಭಾಯ್ ಪಾತ್ರ ಸಿಗರೇಟು ಸೇದುವುದು ಇಷ್ಟವಾಗಿ ಹೋಗಿದೆ. ಮತ್ತೆ ಮತ್ತೆ ನೋಡಿದ್ದಾನೆ. ಅಂಗಡಿಗೆ ಹೋಗಿ ಪ್ಯಾಕುಗಟ್ಟಲೆ ಸಿಗರೇಟು ತಂದಿದ್ದಾನೆ. ಪದೇ ಪದೇ ಸೇದಿದ್ದಾನೆ. ಎಷ್ಟರಮಟ್ಟಿಗೆ ಎಂದರೆ ಕೆಲವೇ ದಿನಗಳಲ್ಲಿ ಅವನ ಹೊಟ್ಟೆ ತುಂಬಾ ಅಲರ್ಜೆಟಿಕ್ ಆಗಿ ಆಸ್ಪತ್ರೆ ಸೇರಿದ್ದಾನೆ. ಆ ಹುಡುಗ ಹೈದರಾಬಾದಿನವನು. 15 ವರ್ಷದ ಹುಡುಗನಾದ ಕಾರಣ ಹೆಸರು ಮತ್ತಿತರ ವಿವರ ಹೇಳುವಂತಿಲ್ಲ. ಹೇಳಬಾರದು.

    ಇದರ ಬಗ್ಗೆ ಮಕ್ಕಳು ಹೆಚ್ಚು ನಿಗಾವಹಿಸಬೇಕು ಎನ್ನುವುದು ವೈದ್ಯರ ವಾದ. ಇನ್ನು ಸಿನಿಮಾಗಳಲ್ಲಿ ಇಂತಹ ದೃಶ್ಯಗಳು ಬೇಕಾ ಎನ್ನುವವರಿಗೂ ಕೊರತೆ ಇಲ್ಲ. ಆದರೆ ಅದೇ ಕೆಜಿಎಫ್‍ನಲ್ಲಿ ರಾಕಿಭಾಯ್ ತಾಯಿಯನ್ನು ಪ್ರೀತಿಸುವ, ಆರಾಧಿಸುವ ದೃಶ್ಯಗಳೂ ಇದ್ದವು. ಯಶ್ ಅವರಷ್ಟೇ ಸ್ಟ್ರಾಂಗ್ ಆದ ರಮಿಕಾ ಸೇನ್ ಪಾತ್ರವೂ ಇತ್ತು. ಅದೆಲ್ಲವನ್ನೂ ಬಿಟ್ಟು ಅವನಿಗೆ ರಾಕಿಭಾಯ್ ಸಿಗರೇಟು ಸೇದುವ ದೃಶ್ಯ ಇಷ್ಟವಾಗಿ, ಅದಕ್ಕೆ ಗಂಟುಬಿದ್ದರೆ ಯಾರು ಏನು ಮಾಡೋಕೆ ಆಗುತ್ತೆ. ಅಂದಹಾಗೆ ರಿಯಲ್ ರಾಕಿಭಾಯ್ ಅರ್ಥಾತ್ ಯಶ್, ತಮ್ಮ ರಿಯಲ್ ಲೈಫಿನಲ್ಲಿ ಸಿಗರೇಟು ಸೇದುವ ಚಟ ಅಂಟಿಸಿಕೊಂಡಿಲ್ಲ.

  • ಕೆಜಿಎಫ್ ಪ್ರಚಾರದ ಹೊಸ ಸ್ಟೈಲ್ : ಕೆಜಿಎಫ್ ವರ್ಸ್

    ಕೆಜಿಎಫ್ ಪ್ರಚಾರದ ಹೊಸ ಸ್ಟೈಲ್ : ಕೆಜಿಎಫ್ ವರ್ಸ್

    ಕೆಜಿಎಫ್ ಚಾಪ್ಟರ್ 2ನಲ್ಲಿ ಬರೋ ಪಾತ್ರಗಳ ಜೊತೆ ನೀವು ಮಾತನಾಡಬಹುದು. ಗೇಮ್ ಆಡಬಹುದು. ಓಡಾಡಬಹುದು... ಇದು ಕೆಜಿಎಫ್ ಪ್ರಚಾರದ ಹೊಸ ಸ್ಟೈಲ್. ಇದು ಹೇಗೆ ಸಾಧ್ಯ ಎಂದು ತಲೆಕೆಡಿಸಿಕೊಳ್ಳಬೇಡಿ. ಡಿಜಿಟಲ್ ಕ್ರಾಂತಿಯ ಜಗತ್ತಿನಲ್ಲಿ ಎಲ್ಲವೂ ಸಾಧ್ಯ. ಇದಕ್ಕಾಗಿಯೇ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಹೊಂಬಾಳೆ ಹೊಸ ವರ್ಚುವಲ್ ಜಗತ್ತನ್ನೇ ಸೃಷ್ಟಿಸಿದೆ. ಅದೇ ಕೆಜಿಎಫ್ ವರ್ಸ್.

    ಮೆಟಾವರ್ಸ್ ಅನ್ನೋದು ವರ್ಚುವಲ್ ಜಗತ್ತಿನ ಒಂದು ವರ್ಷನ್. ಅದರಲ್ಲಿಯೇ ಕೆಜಿಎಫ್ ಟೀಂ ಕೆಜಿಎಫ್ ವರ್ಸ್ ಸೃಷ್ಟಿಸಿದೆ. ಏಪ್ರಿಲ್ 7ನೇ ತಾರೀಕು ಅದಕ್ಕೆ ಸಂಬಂಧಪಟ್ಟಂತೆ ವೆಬ್‍ಸೈಟ್ ಅನಾವರಣವಾಗಲಿದೆ. ನೀವು ಆ ವೆಬ್‍ಸೈಟ್‍ಗೆ ಭೇಟಿ ಕೊಟ್ಟು, ಟೋಕನ್ ಪಡೆದರೆ ಆಯಿತು. ಚಿತ್ರದಲ್ಲಿ ಬರೋ ರಾಕೀಭಾಯ್, ರೀನಾ, ಅಧೀರ, ರುಮಿಕಾ ಸೇನ್.. ಹೀಗೆ ಪ್ರತಿಯೊಂದು ಪಾತ್ರಗಳೂ ನಿಮ್ಮನ್ನು ಎದುರುಗೊಳ್ಳಲಿವೆ.

    ಚಿತ್ರದಲ್ಲಿರೋ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಅವರ ವರ್ಚುವಲ್ ಪಾತ್ರಗಳು ನಿಮ್ಮೊಂದಿಗೆ ಆಟವಾಡುತ್ತವೆ. ಮಾತನಾಡುತ್ತವೆ. ಓಡಾಡುತ್ತವೆ.. ಇದೆಲ್ಲವೂ ಪ್ರಶಾಂತ್ ನೀಲ್ ಅವರ ಕಲ್ಪನೆ. ಇನ್ನೂ ಅನುಮಾನವಿದ್ದರೆ.. ಇದೆಲ್ಲ ಹೇಗೆ ಸಾಧ್ಯ ಎಂಬ ಪ್ರಶ್ನೆಗಳಿದ್ದರೆ.. ತಲೆಕೆಡಿಸಿಕೊಳ್ಳಬೇಡಿ. ಏಪ್ರಿಲ್ 7ರವರೆಗೆ ಕಾಯಿರಿ.

  • ಕೆಜಿಎಫ್ ಬರೆಯುತ್ತಿರೋ ಹೊಸ ಹೊಸ ದಾಖಲೆಗಳು

    ಕೆಜಿಎಫ್ ಬರೆಯುತ್ತಿರೋ ಹೊಸ ಹೊಸ ದಾಖಲೆಗಳು

    ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ ನಟಿಸಿರೋ ಸಿನಿಮಾಗೆ ಈ ಬಾರಿ ಸಂಜಯ್ ದತ್, ರವೀನಾ ಟಂಡನ್ ಬಲವೂ ಇದೆ. ಪ್ರಶಾಂತ್ ನೀಲ್ ನಿರ್ದೇಶನದ ಮ್ಯಾಜಿಕ್ ನೋಡೋಕೆ ಇಡೀ ಸಿನಿಮಾ ಜಗತ್ತು ಕುತೂಹಲದಿಂದ ಕಾಯುತ್ತಿರುವಾಗ.. ಇನ್ನೊಂದೆಡೆ ಸಿನಿಮಾ ಒಂದರ ಹಿಂದೊಂದು ದಾಖಲೆಗಳನ್ನು ಬರೆಯುತ್ತಾ ಹೋಗುತ್ತಿದೆ.

    ಅಭಿಮಾನಿಗಳು ಸಿದ್ಧಪಡಿಸಿದ ಪೋಸ್ಟರ್‍ಗಳನ್ನು ಬಳಸಿಕೊಳ್ಳುತ್ತಿದೆ ಕೆಜಿಎಫ್ ಟೀಂ. ಇದೊಂದು ರೀತಿ ಅಭಿಮಾನಿಗಳಿಂದ.. ಅಭಿಮಾನಿಗಳಿಗಾಗಿ.. ಅಭಿಮಾನಿಗಳ ಪ್ರಚಾರ ಎನ್ನಬಹುದು.

    ರಿಲೀಸ್ ಆಗುವುದಕ್ಕೂ ಮೊದಲೇ ಹಿಟ್ ಎಂದು ಸಲೀಸಾಗಿ ಘೋಷಿಸಿರುವ ಸಿನಿಮಾ ಕೆಜಿಎಫ್ ಚಾಪ್ಟರ್ 2. ಚಿತ್ರ ಗ್ರೀಸ್‍ನಲ್ಲೂ ರಿಲೀಸ್ ಆಗುತ್ತಿದೆ.ಗ್ರೀಸ್‍ನಲ್ಲಿ ರಿಲೀಸ್ ಆಗುತ್ತಿರುವ ಮೊದಲ ಕನ್ನಡ ಮತ್ತು ದ.ಭಾರತದ ಸಿನಿಮಾ ಕೆಜಿಎಫ್ ಚಾಪ್ಟರ್ 2.

    ಏಪ್ರಿಲ್ 13ರಂದು ಅಮೆರಿಕದಲ್ಲಿ ಸಿನಿಮಾ ಪ್ರೀಮಿಯರ್ ಶೋ ಇದೆ. ಕೆಜಿಎಫ್ ಟೀಂ ಅಲ್ಲಿಯೇ ಇರಲಿದೆ. ವಿದೇಶಿ ಮಾರುಕಟ್ಟೆಯನ್ನು ಈ ರೀತಿ ಆಕ್ರಮಿಸಿಕೊಳ್ಳುತ್ತಿರೋ ಮೊದಲ ಸಿನಿಮಾ ಕೆಜಿಎಫ್ ಚಾಪ್ಟರ್ 2.

    ರಷ್ಯಾದಲ್ಲಿಯೂ ರಿಲೀಸ್ ಆಗುತ್ತಿರೋ ಕೆಜಿಎಫ್ ಚಾಪ್ಟರ್ 2, ಅಲ್ಲಿಯೂ ದಾಖಲೆ ಬರೆಯುತ್ತಿದೆ. ಎಲ್ಲ ಭಾಷೆಗಳ ವರ್ಷನ್ ಕೂಡಾ ಅಲ್ಲಿ ರಿಲೀಸ್ ಆಗಲಿದೆ.

    ಅಮೆರಿಕ, ಬ್ರಿಟನ್, ಸೇರಿದಂತೆ ವಿದೇಶಗಳಲ್ಲಿ ಆಗಲೇ ಟಿಕೆಟ್ ಬುಕಿಂಗ್‍ನಲ್ಲಿ ರೆಕಾರ್ಡ್ ಬ್ರೇಕ್ ಮಾಡಿದೆ ಕೆಜಿಎಫ್.

    ರಾಕಿಂಗ್ ಫ್ಯಾನ್ಸ್ ಕ್ಲಬ್ ಕ್ರೇಜ್ ಹೇಗಿದೆಯೆಂದರೆ ಭೂಮಿಯಂದ 14 ಸಾವಿರ ಅಡಿ ಎತ್ತರದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತ್ತಾ ಸಿನಿಮಾ ಪ್ರಮೋಷನ್ ಮಾಡಿದ್ದಾರೆ.

    ಇನ್ನು ಚಿತ್ರದ ಟ್ರೇಲರ್ 155 ಮಿಲಿಯನ್ ಕ್ರಾಸ್ ಮಾಡಿ ಮುನ್ನುಗ್ಗುತ್ತಿದ್ದರೆ, ಟೀಸರ್ ವೀಕ್ಷಣೆ 250 ಮಿಲಿಯನ್ ಕ್ರಾಸ್ ಮಾಡಿದೆ. ಎರಡೂ ದಾಖಲೆಯೇ..

    ಇದರಿಂದ ಖುಷಿಯಾಗಿರೋದು ನಿರ್ಮಾಪಕ ವಿಜಯ್ ಕಿರಗಂದೂರು. ಶ್ರೀನಿಧಿ ಶೆಟ್ಟಿ ನಾಯಕಿಯಾಗಿರೋ ಚಿತ್ರದಲ್ಲಿ ಪ್ರಕಾಶ್ ರೈ, ಮಾಳವಿಕಾ ಅವಿನಾಶ್, ನಾಗಾಭರಣ, ವಸಿಷ್ಠ ಸಿಂಹ, ಬಿ.ಸುರೇಶ್.. ಮೊದಲಾದವರು ಇನ್ನಷ್ಟು ಸೆನ್ಸೇಷನ್ ಸೃಷ್ಟಿಸಿದ್ದಾರೆ.

  • ಕೆಜಿಎಫ್ ಶತದಿನೋತ್ಸವ.. ಯಶ್ 19ನೇ ಚಿತ್ರೋತ್ಸವ ಯಾವಾಗ..?

    kgf 2 image

    ಏಪ್ರಿಲ್ 14ಕ್ಕೆ ಶುರುವಾದ ದಿಗ್ವಿಜಯ ಯಾತ್ರೆ ಅದು. ಕೆಜಿಎಫ್ ಚಾಪ್ಟರ್ 2 ಆರ್ಭಟಕ್ಕೆ ದಾಖಲೆಗಳೆಲ್ಲ ಚಿಂದಿ ಚಿಂದಿಯಾಗಿ ಹೋದವು. ಬಾಕ್ಸಾಫೀಸ್‍ನ್ನೇ ನಡುಗಿಸಿದ ಚಿತ್ರ ಕೆಜಿಎಫ್ ಚಾಪ್ಟರ್, ಇಂಡಿಯಾದಲ್ಲಿ ಅತೀ ಹೆಚ್ಚು ಜನ ಥಿಯೇಟರಿನಲ್ಲಿ ನೋಡಿದ ಸಿನಿಮಾ ಎಂಬ ದಾಖಲೆಯನ್ನೂ ಬರೆಯಿತು. ಜುಲೈ 22ಕ್ಕೆ ಕೆಜಿಎಫ್ ಚಾಪ್ಟರ್ 2ಗೆ 100 ದಿನವೂ ತುಂಬಿತು. ಶತದಿನೋತ್ಸವ. ಆದರೆ.. ಅಭಿಮಾನಿಗಳ ಆ ಕಾಯುವಿಕೆಗೆ ಮಾತ್ರ ಉತ್ತರ ಸಿಕ್ಕಿಲ್ಲ.

    ಪ್ರಶಾಂತ್ ನೀಲ್ ಆಗಲೇ ಸಲಾರ್`ನಲ್ಲಿ ಬ್ಯುಸಿಯಿದ್ದಾರೆ. ಅದು ಮುಗಿದ ನಂತರ ಎನ್‍ಟಿಆರ್ ಸಿನಿಮಾ ಶುರುವಾಗಲಿದೆ. ಇದರ ಮಧ್ಯೆ ಬಘೀರನಿಗೆ ಕಥೆ ಕೊಟ್ಟಿದ್ದಾರೆ.

    ಇದು ಆರಂಭವಷ್ಟೇ ಎಂದಿದ್ದ ಹೊಂಬಾಳೆ ಬೆನ್ನು ಬೆನ್ನಿಗೆ ಚಿತ್ರಗಳನ್ನು ಘೋಷಿಸಿದೆ. ಎಲ್ಲ ಚಿತ್ರಗಳೂ ಒಂದಲ್ಲ ಒಂದು ಹಂತದಲ್ಲಿವೆ.

    ಚಿತ್ರದಲ್ಲಿ ನಟಿಸಿದ್ದ ಕಲಾವಿದರು ಮತ್ತು ತಂತ್ರಜ್ಞರೆಲ್ಲ ಒಂದಲ್ಲ ಒಂದು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ.. ಯಶ್ ಮಾತ್ರ ಉತ್ತರ ಕೊಟ್ಟಿಲ್ಲ.

    ಯೂರೋಪ್‍ನಲ್ಲಿ ಪತ್ನಿ ಮಕ್ಕಳ ಸಮೇತ ಸುತ್ತುತ್ತಿರೋ ಯಶ್ ತಮ್ಮ 19ನೇ ಚಿತ್ರದ ಗುಟ್ಟನ್ನು ಗುಟ್ಟಾಗಿಯೇ ಇಟ್ಟುಕೊಂಡಿದ್ದಾರೆ. ಅವರು ಡೈರೆಕ್ಟ್ ಮಾಡ್ತಾರಂತೆ.. ಇವರು ಪ್ರೊಡ್ಯೂಸ್ ಮಾಡ್ತಾರಂತೆ.. ಅನ್ನೋ ಅಂತೆ ಕಂತೆಗಳಿವೆ ಬರವೇ ಇಲ್ಲ. ಒಂದು ಸುದ್ದಿಯೂ ಅಧಿಕೃತವಾಗಿಲ್ಲ.

    ಯಶ್ 19ನೇ ಚಿತ್ರೋತ್ಸವ ಯಾವಾಗ..? ಯಾವಾಗ..? ಯಾವಾಗ..?

  • ಕೆಜಿಎಫ್ ಸೃಷ್ಟಿಸಿದ ದಾಖಲೆಗಳು ಮತ್ತು ಒಂದಿಷ್ಟು ಸೀಕ್ರೆಟ್ಟುಗಳು..

    ಕೆಜಿಎಫ್ ಸೃಷ್ಟಿಸಿದ ದಾಖಲೆಗಳು ಮತ್ತು ಒಂದಿಷ್ಟು ಸೀಕ್ರೆಟ್ಟುಗಳು..

    ಕೆಜಿಎಫ್ ಚಾಪ್ಟರ್ ಬರ್ತಿರೋದೇ ದಾಖಲೆ ಮಾಡೋಕೆ ಅನ್ನೋ ಹಾಗೆ ಮುನ್ನುಗ್ತಾನೇ ಇದೆ. ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಮಾಳವಿಕಾ ಅವಿನಾಶ್, ನಾಗಾಭರಣ, ವಸಿಷ್ಠ ಸಿಂಹ ನಟಿಸಿರೋ ಚಿತ್ರವಿದು. ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಆಗಿರೋ ಕಾರಣ ನಿರೀಕ್ಷೆಯೂ ಭಯಂಕರ. ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರ ಎಂದ ಮೇಲೆ ಭರ್ಜರಿ ಪ್ರಚಾರವೂ ಸಹಜ. ಹೀಗಾಗಿಯೇ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ ಕೆಜಿಎಫ್ ಚಾಪ್ಟರ್ 2.

    ರಿಲೀಸ್ ಆಗುವ ಮೊದಲೇ ವಿದೇಶದಲ್ಲಿ ಅತೀ ಹೆಚ್ಚು ಬುಕ್ಕಿಂಗ್ ಆದ ಸಿನಿಮಾ ಎಂಬ ದಾಖಲೆ ಬರೆದಿರೋದು ಕೆಜಿಎಫ್. ಅಮೆರಿಕವೊಂದರಲ್ಲೇ ವಾರಕ್ಕೂ ಮೊದಲೇ 2 ಕೋಟಿ ಬಿಸಿನೆಸ್ ಆಗಿದೆ.

    ವರ್ಸ್ ಮೂಲಕ ಚಿತ್ರದ ಪ್ರಚಾರ ಮಾಡುತ್ತಿರೋ ಮೊದಲ ಸಿನಿಮಾ ಕೆಜಿಎಫ್ ಚಾಪ್ಟರ್ 2. ಹೊಂಬಾಳೆಯವರು ವರ್ಸ್‍ಗಳನ್ನು ರಿಲೀಸ್ ಮಾಡಿದ್ದು, 10 ಸಾವಿರ ಟೋಕನ್ ಬಿಟ್ಟಿದ್ದಾರೆ. ದಾಖಲೆ ವೇಗದಲ್ಲಿ ಎಲ್ಲ ವರ್ಸ್‍ಗಳ ಟೋಕನ್‍ಗಳೂ ಸೇಲ್ ಆಗಿಬಿಟ್ಟಿವೆ.

    ಗಗನ ನೀ.. ಭುವನ ನೀ.. ಶಿಖರ ನೀ.. ಹಾಡು 35 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಇದೂ ದಾಖಲೆಯೇ.

    ಇನ್ನು ಯಶ್ & ಟೀಂ ಹೋದಲ್ಲಿ ಬಂದಲ್ಲಿ ಸೇರುತ್ತಿರೋ ಅಭಿಮಾನಿಗಳ ಸೈನ್ಯವನ್ನು ನೋಡೋದೇ ಚೆಂದ.

    ಇದರ ಜೊತೆಗೆ ಒಂದು ಸೀಕ್ರೆಟ್ ಏನಂದ್ರೆ ಧೀರ ಧೀರ ಧೀರ ಈ ಸುಲ್ತಾನಾ ಟ್ರ್ಯಾಕ್ ಕೆಜಿಎಫ್ ಚಾಪ್ಟರ್ 2 ಉದ್ದಕ್ಕೂ ಇರಲಿದೆ. ಥೀಮ್ ಸಾಂಗ್ ಹಾಗೂ ಮ್ಯೂಸಿಕ್ ಆಗಿ ಚಿತ್ರದುದ್ದಕ್ಕೂ ಪ್ರಶಾಂತ್ ನೀಲ್ ಬಳಸಿಕೊಂಡಿದ್ದಾರೆ.

  • ಕೆಜಿಎಫ್ ಹವಾ.. ಕನ್ನಡಕ್ಕಿಂತ ತೆಲುಗಿನಲ್ಲೇ ಜಾಸ್ತಿನಾ..?

    ಕೆಜಿಎಫ್ ಹವಾ.. ಕನ್ನಡಕ್ಕಿಂತ ತೆಲುಗಿನಲ್ಲೇ ಜಾಸ್ತಿನಾ..?

    ಕೆಜಿಎಫ್ ಚಾಪ್ಟರ್ 2. ರಿಲೀಸ್ ಆಗೋಕೆ ರೆಡಿಯಾಗಿದೆ. ದೇಶಾದ್ಯಂತ ಈಗ ಕೆಜಿಎಫ್ ತೂಫಾನ್. ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್  ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಮಾಳವಿಕಾ ಅವಿನಾಶ್.. ಎಲ್ಲರೂ ಈಗ ಟಾಕ್ ಆಫ್ ದಿ ಕಂಟ್ರಿ. ಈ ಕನ್ನಡದ ಸಿನಿಮಾ ಕ್ರೇಜ್ ಹೇಗಿದೆ ಅನ್ನೋದನ್ನು ನಾವೆಲ್ಲ ನೋಡಿದ್ದೇವೆ. ಆದರೆ, ಈ ಕ್ರೇಜ್ ಕನ್ನಡಕ್ಕಿಂತ ಬೇರೆ ಭಾಷೆಯಲ್ಲೇ ಹೆಚ್ಚಾಗಿದೆಯಾ ಅನ್ನೋದು ಪ್ರಶ್ನೆ. ಹೌದು ಅನ್ನೋದೇ ಉತ್ತರ.

    ಕೆಜಿಎಫ್ ಚಾಪ್ಟರ್ 2 ಟ್ರೇಲರ್ ರಿಲೀಸ್ ಆದ ನಂತರ ಅದು ಯಾವ ಭಾಷೆಗಳಲ್ಲಿ ಎಷ್ಟರಮಟ್ಟಿಗೆ ವೀಕ್ಷಣೆ ಪಡೆದಿದೆ ಅನ್ನೋದರ ಮೇಲೆ ಇದರ ಲೆಕ್ಕಾಚಾರವಿದೆ.

    ಹಿಂದಿಯಲ್ಲಿ 55 ಮಿಲಿಯನ್, ತಮಿಳಿನಲ್ಲಿ 12 ಮಿಲಿಯನ್, ಮಲಯಾಳಂನಲ್ಲಿ ಸುಮಾರು 9 ಮಿಲಿಯನ್ ಹಾಗೂ ತೆಲುಗಿನಲ್ಲಿ 20 ಮಿಲಿಯನ್ ವೀಕ್ಷಣೆ ಪಡೆದಿದೆ ಕೆಜಿಎಫ್ ಟ್ರೇಲರ್. ಆದರೆ, ಕನ್ನಡದಲ್ಲಿ ಕೆಜಿಎಫ್ ಟ್ರೇಲರ್ ನೋಡಿದವರ ಸಂಖ್ಯೆ 19 ಮಿಲಿಯನ್. ಹೌದು.. ಇದು ಹೊಂಬಾಳೆಯವರ ಅಧಿಕೃತ ಪೇಜ್‍ನ ವೀಕ್ಷಣೆಯ ಲೆಕ್ಕ ಮಾತ್ರ. ಉಳಿದ ಲೆಕ್ಕದ ಮಾತು ಬಿಡಿ.. ಆದರೆ ಯಶ್‍ಗೆ ಕನ್ನಡಕ್ಕಿಂತ ಹಿಂದಿ, ತೆಲುಗಿನಲ್ಲೇ ಹೆಚ್ಚು ಕ್ರೇಜ್ ಇದೆ ಅನ್ನೋ ಮಾತಿಗೆ ಈಗ ಬಲವೂ ಸಿಕ್ಕಿದೆ.

    ಅಂದಹಾಗೆ ಕೆಜಿಎಫ್ ಚಾಪ್ಟರ್ 2 ಟ್ರೇಲರ್ ನೋಡಿದವರ ಸಂಖ್ಯೆ ಕೇವಲ 2 ದಿನದಲ್ಲಿ 110 ಮಿಲಿಯನ್ ದಾಟಿದೆ. ಅರ್ಥಾತ್ ಟ್ರೇಲರ್ ನೋಡಿದವರ ಸಂಖ್ಯೆ 11 ಕೋಟಿಗೂ ಹೆಚ್ಚು. ಇದು ಕೇವಲ ಅಧಿಕೃತ ಹೊಂಬಾಳೆ ಪೇಜ್ ಲೆಕ್ಕ ಮಾತ್ರ..

  • ಕೆಜಿಎಫ್`ಗೆ ಇನ್ನೊಬ್ಬ ದೊಡ್ಡ ಸ್ಟಾರ್ ಸಿನಿಮಾ ಪೈಪೋಟಿ..!

    ಕೆಜಿಎಫ್`ಗೆ ಇನ್ನೊಬ್ಬ ದೊಡ್ಡ ಸ್ಟಾರ್ ಸಿನಿಮಾ ಪೈಪೋಟಿ..!

    ಕೆಜಿಎಫ್, 2022ರ ಬಹು ನಿರೀಕ್ಷಿತ ಸಿನಿಮಾ. 2020ರಿಂದಲೂ ಕಾಯುತ್ತಿರೋ ಈ ಸಿನಿಮಾ ರಿಲೀಸ್ ಆಗುತ್ತಿರೋದು ಈ ವರ್ಷ ಏಪ್ರಿಲ್ 14ಕ್ಕೆ. ವರ್ಷದ ನಂ.1 ನಿರೀಕ್ಷಿತ ಸಿನಿಮಾ ಆಗಿರೋ ಕೆಜಿಎಫ್ ಚಾಪ್ಟರ್ 2ಗೆ ಎದುರಾಗಿ ಈಗಾಗಲೇ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಫಿಕ್ಸ್ ಆಗಿದೆ. ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಈ ಬಗ್ಗೆ ಹೊಂಬಾಳೆ ಮತ್ತು ಯಶ್ ಅವರಿಗೆ ಸ್ಪಷ್ಟನೆ ನೀಡಿ ಕ್ಷಮೆಯನ್ನೂ ಕೇಳಿದ್ದಾರೆ. ಇದರ ನಡುವೆ ಮತ್ತೂ ಒಂದು ಸಿನಿಮಾ ಯಶ್`ಗೆ ಪೈಪೋಟಿ ಒಡ್ಡುತ್ತಿದೆ.

    ತಮಿಳಿನ ಸ್ಟಾರ್ ವಿಜಯ್ ಅಭಿನಯದ ಬೀಸ್ಟ್ ಕೆಜಿಎಫ್ ಚಾಪ್ಟರ್2ಗೆ ಎದುರಾಗಿ ನಿಲ್ಲುವ ಸಾಧ್ಯತೆಗಳಿವೆ. ಬೀಸ್ಟ್ ಸಿನಿಮಾದ ಟೀಸರ್ ಹೊರಬಂದಿದ್ದು, ಏಪ್ರಿಲ್‍ನಲ್ಲಿ ರಿಲೀಸ್ ಎಂದು ಘೋಷಿಸಿದೆ ಚಿತ್ರತಂಡ. ಆದರೆ ಏಪ್ರಿಲ್‍ನಲ್ಲಿ ಯಾವ ದಿನ ಅನ್ನೋದನ್ನು ಹೇಳಿಲ್ಲ. ಒಟ್ಟಿನಲ್ಲಿ ಏಪ್ರಿಲ್ ದೊಡ್ಡ ಸ್ಟಾರ್ ಚಿತ್ರಗಳ ಹಬ್ಬವನ್ನೇ ಸೃಷ್ಟಿಸಲಿದೆ ಅನ್ನೋದ್ರಲ್ಲಿ ಅನುಮಾನವಿಲ್ಲ.

  • ಕೆಜಿಎಫ್-2 : ಯಶ್ ಪಾತ್ರಕ್ಕೆ ತಮಿಳು ನಟ ಸರಣ್ ಶಕ್ತಿ..!!

    saran shakthi joins kgf chapter 2

    ಕೆಜಿಎಫ್-2ನಲ್ಲಿ ಯಶ್ ಪಾತ್ರಕ್ಕೆ ಅದೂ ರಾಕಿ ಭಾಯ್ ಪಾತ್ರಕ್ಕೆ ತಮಿಳು ನಟ ಸರಣ್ ಶಕ್ತಿ ಎಂಟ್ರಿಯಾಗಿದ್ದಾರೆ. ಕನ್‍ಫ್ಯೂಸ್ ಬಿಟ್ಹಾಕಿ. ಮೂಲಗಳ ಪ್ರಕಾರ ಸರಣ್ ಶಕ್ತಿ, ಹದಿಹರೆಯದ ರಾಕಿಭಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಚಿತ್ರತಂಡದಿಂದ ಹೊರಬಿದ್ದಿರೋ ಸೀಕ್ರೆಟ್ ಮಾಹಿತಿ.

    ವಡಾ ಚೆನ್ನೈ, ಸಗಾ ಚಿತ್ರಗಳ ಮೂಲಕ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡ ಸರಣ್ ಶಕ್ತಿ, ಕೆಜಿಎಫ್-2 ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದನ್ನು ಖುಷಿಯಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ.

    ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗುತ್ತಿದೆ. ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾ, ಈ ವರ್ಷದ ಭಾರತ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು.

  • ಕೆಜಿಎಫ್-2 ರಿಲೀಸ್ ಯಾವಾಗ..? - ಯಶ್ ಹೇಳಿದ ಸೀಕ್ರೆಟ್

    yash talks about kgf chapter 2 release date

    ಜನವರಿ 8ಕ್ಕೆ ಕೆಜಿಎಫ್-2 ಟೀಸರ್ ಎಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದ ಕೆಜಿಎಫ್ ಟೀಂ, ರಿಲೀಸ್ ದಿನದ ಗುಟ್ಟನ್ನೂ ಬಿಟ್ಟುಕೊಟ್ಟಿದೆ.  ಎಲ್ಲವೂ ಪ್ಲಾನ್ ಪ್ರಕಾರವೇ ನಡೆದರೆ ಮುಂದಿನ ವರ್ಷ ಜೂನ್ ಅಥವಾ ಜುಲೈನಲ್ಲಿ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಲಿದೆ. ಚೆನ್ನೈನಲ್ಲಿ ಈ ವಿಷಯ ಬಿಚ್ಚಿಟ್ಟಿದ್ದಾರೆ ಯಶ್.

    ಪ್ರಶಾಂತ್ ನೀಲ್ ಡೈರೆಕ್ಷನ್, ಹೊಂಬಾಳೆ ಪ್ರೊಡಕ್ಷನ್ನ ಕೆಜಿಎಫ್ ಚಾಪ್ಟರ್ 2ನಲ್ಲಿ ಸಂಜಯ್ ದತ್ ಅಧೀರನಾಗಿ ಅಬ್ಬರಿಸಲಿದ್ದಾರೆ. ಹೀಗಾಗಿಯೇ ದಾಖಲೆಗಳ ಮೇಲೆ ದಾಖಲೆ ಬರೆದ ಕೆಜಿಎಫ್ ಚಾಪ್ಟರ್ 2ನ ಒಂದೊಂದು ಸುದ್ದಿಯೂ ಸಂಚಲನ ಸೃಷ್ಟಿಸುತ್ತಿದೆ.

     

  • ಕೆಜಿಎಫ್‍ಗೆ ಮಸ್ತ್ ಮಸ್ತ್ ಹುಡುಗಿ ಬಂದ್ಲು

    raveena tandon jins kgf team

    ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಸಂಜಯ್ ದತ್ ಬರ್ತಾರೆ ಅನ್ನೋ ಸುದ್ದಿ ಇರುವಾಗಲೇ, ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್ ಬರ್ತಾರೆ ಅನ್ನೋ ಸುದ್ದಿ ಸರಿದಾಡುತ್ತಿದೆ. ಉಪೇಂದ್ರ ಚಿತ್ರದಲ್ಲಿ ಕೀರ್ತಿಯಾಗಿ ನಟಿಸಿದ್ದ ರವೀನಾ ಟಂಡನ್, ಬಾಲಿವುಡ್‍ನಲ್ಲೂ ಕೂಡಾ ತೆರೆ ಹಿಂದಿನ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

    ಈಗ ವಿಶ್ವಾದ್ಯಂತ ಸದ್ದು ಮಾಡಿದ ಕೆಜಿಎಫ್ ಚಿತ್ರದ 2ನೇ ಭಾಗಕ್ಕೆ ರವೀನಾ ಟಂಡನ್ ಓಕೆ ಎಂದಿದ್ದಾರೆ ಅನ್ನೋ ಸುದ್ದಿಯಿದೆ. ಚಾಪ್ಟರ್ 2 ಪ್ರಿ ಪ್ರೊಡಕ್ಷನ್ ಕೆಲಸಗಳು ಶುರುವಾಗಿದ್ದು, ಶೀಘ್ರದಲ್ಲೇ ಶೂಟಿಂಗ್ ಕೂಡ ಆರಂಭವಾಗಲಿದೆ.

  • ಕೊನೆಯ ಹಂತದಲ್ಲಿ ಕೆಜಿಎಫ್ 2

    kgf chapter 2 shooting in final stages

    ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಅಂತಿಮ ಹಂತಕ್ಕೆ ಬಂದಿದೆ. ಇತ್ತೀಚೆಗಷ್ಟೇ ರವೀನಾ ಟಂಡನ್ ನಟಿಸಬೇಕಿದ್ದ ದೃಶ್ಯಗಳ ಶೂಟಿಂಗ್ ಮುಗಿದಿದೆ. ರವೀನಾ ಮುಂಬೈಗೆ ವಾಪಸ್ ಆಗಿದ್ದಾರೆ. ಸಂಜಯ್ ದತ್ ದೃಶ್ಯಗಳೂ ಮುಗಿದಿವೆ. ಹೀರೋಯಿನ್ ಜೊತೆಗಿನ ದೃಶ್ಯಗಳೂ ಕಂಪ್ಲೀಟ್ ಆಗಿವೆ. ಶ್ರೀನಿಧಿ ಶೆಟ್ಟಿ ತಮಿಳು ಚಿತ್ರದಲ್ಲಿ ಬ್ಯುಸಿ. ಹೀಗಿರುವಾಗಲೇ ಚಿತ್ರೀಕರಣ ಕಡೆಯ ಹಂತಕ್ಕೆ ಬಂದಿದೆ ಎನ್ನುವ ಅಪ್‍ಡೇಟ್ ಕೊಟ್ಟಿದ್ದಾರೆ ಡೈರೆಕ್ಟರ್ ಪ್ರಶಾಂತ್ ನೀಲ್.

    ಚಿತ್ರೀಕರಣದ ಕೊನೆಯ ಹಂತದಲ್ಲಿದ್ದೇವೆ ಎಂಬ ಸಂದೇಶ ಕೊಟ್ಟಿರೋ ಪ್ರಶಾಂತ್ ನೀಲ್ ಜೊತೆಗೊಂದು ಶಾಕ್‍ನ್ನೂ ಕೊಟ್ಟಿದ್ದಾರೆ. ಇನ್ನು ಮುಂದೆ ಚಿತ್ರದ ಅಪ್‍ಡೇಟ್ಸ್ ಸಿಗುವುದು ಕಷ್ಟ ಕಷ್ಟ ಎನ್ನುವ ಶಾಕ್ ಕೊಟ್ಟಿದ್ದಾರೆ ಪ್ರಶಾಂತ್ ನೀಲ್. ಏಕೆಂದರೆ ಶೂಟಿಂಗ್ ಮುಗಿದ ನಂತರ ಪ್ರಶಾಂತ್ ನೀಲ್ ಪೋಸ್ಟ್ ಪ್ರೊಡಕ್ಷನ್‍ನಲ್ಲಿ ಬ್ಯುಸಿಯಾಗುತ್ತಾರೆ.

    ನಟ ಯಶ್ ಸೇರಿದಂತೆ ನಿರ್ಮಾಪಕ ವಿಜಯ್ ಕಿರಗಂದೂರು ಕೂಡಾ ಪ್ರಶಾಂತ್ ನೀಲ್ ಅನುಮತಿಯಿಲ್ಲದೆ, ತಿಳಿಸದೆ ಚಿತ್ರದ ಬಗ್ಗೆ ಮಾತನಾಡುವಂತಿಲ್ಲ. ಹೀಗಿರುವಾಗ ಅಪ್‍ಡೇಟ್ ಬೇಕೆಂದರೆ ನಿರ್ದೇಶಕರೇ ಬಾಯ್ಬಿಡಬೇಕು. ನಿರ್ದೇಶಕರೋ.. ಈಗಲೇ ಇನ್ನು ಮುಂದೆ ಅಪ್‍ಡೇಟ್ ಮಿಸ್ ಮಾಡಿಕೊಳ್ತೀರಿ ಅನ್ನೋ ಮೆಸೇಜ್ ಇಟ್ಟಿದ್ದಾರೆ.

  • ಕ್ರಿಸ್ಟಿಯಾನೋ ರೊನಾಲ್ಡೋ ಇರೋ ಫುಟ್'ಬಾಲ್ ಕ್ಲಬ್`ಗೂ ಕೆಜಿಎಫ್ ಕಿಕ್

    ಕ್ರಿಸ್ಟಿಯಾನೋ ರೊನಾಲ್ಡೋ ಇರೋ ಫುಟ್'ಬಾಲ್ ಕ್ಲಬ್`ಗೂ ಕೆಜಿಎಫ್ ಕಿಕ್

    ಒಂದು ಸಿನಿಮಾ ಎಲ್ಲಿಂದ ಎಲ್ಲಿಗೆ ಹೋಗಬಹುದು.. ಯಾವ ರೇಂಜ್ ತಲುಪಬಹುದು.. ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತಿದೆ ಕೆಜಿಎಫ್. ಜಗತ್ತಿನ ಮೂಲೆ ಮೂಲೆಯಲ್ಲಿರೋ ಇಂಡಿಯನ್ಸ್ ಅಷ್ಟೇ ಅಲ್ಲ.. ಬೇರೆ ಬೇರೆ ದೇಶದ ಜನರೂ ಸಿನಿಮಾ ಇಷ್ಟಪಡುತ್ತಿದ್ದಾರೆ. ಅಲ್ಲೆಲ್ಲ ರಾಕಿಭಾಯ್, ವಿಜಯ್ ಕಿರಗಂದೂರು, ಪ್ರಶಾಂತ್ ನೀಲ್ ಪರಿಚಯವಾಗಿದೆ.

    ಅದಕ್ಕೆ ಉದಾಹರಣೆ ಇಲ್ಲಿದೆ.

    ಇಂಗ್ಲೆಂಡ್‍ನ ಮ್ಯಾಂಚೆಸ್ಟರ್ ಸಿಟಿಯಲ್ಲಿರೋ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್‍ಬಾಲ್ ಕ್ಲಬ್ ಇದ್ಯಲ್ಲ.. ಇದು ಜಗತ್ತಿನಲ್ಲಿಯೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರೋ 3ನೇ ಅತೀದೊಡ್ಡ ಫುಟ್‍ಬಾಲ್ ಕ್ಲಬ್. ಈ ಟೀಂನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ ಕೂಡಾ ಇದ್ದಾರೆ ಅನ್ನೋದು ಜಸ್ಟ್ ಇನ್‍ಫರ್ಮೇಷನ್.

    ಆ ತಂಡವೀಗ ತಂಡದಲ್ಲಿರೋ ಕೆವಿನ್, ಗುಂಡೊಕನ್, ಫೊಡೆನ್ ಹೆಸರನ್ನು ಸೇರಿಸಿ ಕೆಜಿಎಫ್ ಎಂದು ಟ್ವೀಟ್ ಮಾಡಿದೆ.

    ಅತ್ತ ಅಮುಲ್ ಜಾಹೀರಾತಿನಲ್ಲೂ ಯಶ್ ಕ್ಯಾರಿಕೇಚರ್ ಬಳಸಲಾಗಿದೆ. ಆರ್.ಸಿ.ಬಿ. ಜೊತೆ ಅಧಿಕೃತ ಸಹಭಾಗಿತ್ವ ಮಾಡಿಕೊಂಡಿದೆ. ಆರ್‍ಸಿಬಿ ಆಗಲೇ ಕೊಹ್ಲಿ, ಗ್ಲೆನ್ ಮ್ಯಾಕ್ಸ್‍ವೆಲ್ ಹಾಗೂ ಫಾಪ್ ಡುಪ್ಲೆಸಿ ಹೆಸರನ್ನು ಸೇರಿಸಿ ಕೆಜಿಎಫ್ ಎಂದು ಈಗಾಗಲೇ ಘೋಷಿಸಿ ಆಗಿದೆ...ಒಟ್ಟಿನಲ್ಲಿ ಕೆಜಿಎಫ್ ಹವಾ ಬಾಕ್ಸಾಫೀಸ್‍ನಲ್ಲಷ್ಟೇ ಅಲ್ಲ.. ಅದರ ವ್ಯಾಪ್ತಿಯನ್ನೂ ಮೀರಿ ಮುನ್ನುಗ್ಗುತ್ತಿದೆ.

  • ಚಕ್ರವ್ಯೂಹ ಗೆದ್ದ ಕೆಜಿಎಫ್ 2ಗೆ ಬಿಗ್ ರಿಲೀಫ್

    kgf movie team gets relief from high court

    ಕೆಜಿಎಫ್ ಚಾಪ್ಟರ್ 2 ತಂಡಕ್ಕೆ ಎದುರಾಗಿದ್ದ ಅತಿ ದೊಡ್ಡ ಸಮಸ್ಯೆಯೊಂದು ಕೊನೆಗೂ ನಿವಾರಣೆಯಾಗಿದೆ. ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅನಂತ್ ನಾಗ್ ಅಭಿನಯದ ಕೆಜಿಎಫ್ 2ಗೆ ಅತಿದೊಡ್ಡ ರಿಲೀಫ್ ಸಿಕ್ಕಿದೆ.

    ಕೆಜಿಎಫ್‍ನ ರಾಷ್ಟ್ರೀಯ ಪ್ರಜಾ ಚಕ್ರವ್ಯೂಹ ಪಕ್ಷದ ಅಧ್ಯಕ್ಷ ಶ್ರೀನಿವಾಸ್ ಎಂಬುವವರು ಕೆಜಿಎಫ್‍ನ ಸೈನೇಡ್ ಪ್ರದೇಶದಲ್ಲಿ ಚಿತ್ರೀಕರಣ ಮಾಡದಂತೆ ನ್ಯಾಯಾಲಯದಿಂದ ತಡೆ ತಂದಿದ್ದರು. ಸೈನೇಡ್‍ನ ದಿಬ್ಬಗಳಲ್ಲಿ ಪರಿಸರಕ್ಕೆ ಹಾನಿ ಮಾಡುತ್ತಿದ್ದಾರೆ ಎಂದು ವಾದಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ನಿರ್ಮಾಪಕ ವಿಜಯ್ ಕಿರಗಂದೂರು, ಹೈಕೋರ್ಟ್‍ನಲ್ಲಿ ವಾಗ್ದಾನ ನೀಡಿ ಮತ್ತೆ ಚಿತ್ರೀಕರಣಕ್ಕೆ ಅನುಮತಿ ಪಡೆದಿದ್ದಾರೆ. 25 ದಿನಗಳಲ್ಲಿ ಚಿತ್ರೀಕರಣ ಮುಗಿಸುತ್ತೇವೆ ಹಾಗೂ ಪರಿಸರಕ್ಕೆ ಹಾನಿ ಮಾಡುವುದಿಲ್ಲ ಎಂದು ಹೈಕೋರ್ಟ್‍ನಲ್ಲಿ ವಾಗ್ದಾನ ನೀಡಿ, ಮತ್ತೆ ಚಿತ್ರೀಕರಣಕ್ಕೆ ಅನುಮತಿ ಪಡೆದಿದ್ದಾರೆ.

    ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 1, ಸೂಪರ್ ಸಕ್ಸಸ್ ಕಂಡಿದ್ದು, ಚಾಪ್ಟರ್ 2 ಮೇಲೆ ಭರ್ಜರಿ ನಿರೀಕ್ಷೆ ಇದೆ.

     

  • ಜನವರಿ 8ಕ್ಕೆ ಕೆಜಿಎಫ್ 2 ಟೀಸರ್

    kgf chapter 2 teaser on jan 8th

    ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲಂಸ್.. ಅಭಿಮಾನಿಗಳನ್ನು ಕಾಯಿಸಿ.. ಕಾಯಿಸಿ.. ಕಾಯಿಸಿ.. ಕಾಯಿಸಿ.. ಕಾಯಿಸಿ.. ಕೊನೆಗೂ ಒಂದು ಥ್ರಿಲ್ ಕೊಡೋಕೆ ಮನಸ್ಸು ಮಾಡಿದ್ದಾರೆ. ಜನವರಿ 8ಕ್ಕೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಇದು ಈ ಚಿತ್ರದ ಮೊದಲ ಟೀಸರ್ ಅನ್ನೋದು ನೆನಪಿನಲ್ಲಿರಲಿ.

    ಏಕೆಂದರೆ ಇದುವರೆಗೆ ಪ್ರಶಾಂತ್ ನೀಲ್ ತೋರಿಸಿರೋದು ಒಂದು ಪೋಸ್ಟರ್ ಮಾತ್ರ. ಅದೊಂದು ದೊಡ್ಡ ಸಾಮ್ರಾಜ್ಯ. ಅದನ್ನು ಸೃಷ್ಟಿಸಲು ನಾವು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದೇವೆ. ಮತ್ತಷ್ಟು ಬಲಿಷ್ಠರಾಗಿ, ದೊಡ್ಡದಾಗಿ ಬರುತ್ತಿದ್ದೇವೆ ಎಂದಿದ್ದಾರೆ ಪ್ರಶಾಂತ್.

    ಅಭಿಮಾನಿಗಳು ದಿನಗಳನ್ನು ಲೆಕ್ಕ ಹಾಕುತ್ತಿದ್ದಾರೆ. ಅಂದಹಾಗೆ.. ಜನವರಿ 8, ಯಶ್ ಹುಟ್ಟುಹಬ್ಬ. ಸ್ಸೋ.. ಇದು ಬರ್ತ್ ಡೇ ಗಿಫ್ಟ್.

  • ಜಸ್ಟ್ ಒಂದೂವರೆ ಗಂಟೆ : ತೂಫಾನ್ ಹಾಡು ದಾಖಲೆ

    ಜಸ್ಟ್ ಒಂದೂವರೆ ಗಂಟೆ : ತೂಫಾನ್ ಹಾಡು ದಾಖಲೆ

    ಕೆಜಿಎಫ್ ಚಾಪ್ಟರ್ 2. ಇಡೀ ಇಂಡಿಯಾ ಬಹುನಿರೀಕ್ಷೆಯಿಂದ ಕಾಯ್ತಿರೋ ಸಿನಿಮಾ. ಏಪ್ರಿಲ್ 14ಕ್ಕೆ ರಿಲೀಸ್ ಆಗಲಿರೋ ಸಿನಿಮಾ, ಬಾಕ್ಸಾಫೀಸ್ನಲ್ಲಿ ದಾಖಲೆ ಬರೆಯೋಕೆ ತುದಿಗಾಲಲ್ಲಿ ನಿಂತಿದೆ. ರಾಕಿಂಗ್ ಸ್ಟಾರ್ ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ.. ಮೊದಲಾದವರು ನಟಿಸಿರೋ ಚಿತ್ರದ ತೂಫಾನ್ ಹಾಡು ರಿಲೀಸ್ ಆಗಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಬಂದಿರೋ ಚಿತ್ರದ ಲಿರಿಕಲ್ ಸಾಂಗ್ ವಿಡಿಯೋ, ಮೇಕಿಂಗ್ ಇನ್ನೂ ಅದ್ಭುತವಾಗಿದೆ ಅನ್ನೋದನ್ನು ಸಾರಿ ಹೇಳುತ್ತಿದೆ.

    ಇದೇ ದಿನ 11 ಗಂಟೆ 7 ನಿಮಿಷಕ್ಕೆ ರಿಲೀಸ್ ಆದ ಹಾಡು ಒಂದೂವರೆ ಗಂಟೆಯಲ್ಲೇ ದಾಖಲೆ ಬರೆದಿದೆ. ಎಲ್ಲ ಭಾಷೆಗಳಲ್ಲೂ ರಿಲೀಸ್ ಆದ ಹಾಡು ಕನ್ನಡದಲ್ಲಿಯೇ ಒಂದೂವರೆ ಗಂಟೆಯಲ್ಲಿ ಒಂದು ಮಿಲಿಯನ್ ವೀಕ್ಷಣೆ ಪಡೆದಿದೆ. ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲೂ ದಾಖಲೆ ಸಂಖ್ಯೆಯ ಪ್ರೇಕ್ಷಕರು ಹಾಡು ಇಷ್ಟಪಟ್ಟಿದ್ದಾರೆ.

    ಸಂಗೀತ ನಿರ್ದೇಶಕ ರವಿ ಬಸ್ರೂರು ಅವರೇ ಹಾಡಿಗೆ ಸಾಹಿತ್ಯ ಕೊಟ್ಟಿದ್ದಾರೆ. ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರು, ರವಿ ಬಸ್ರೂರು, ಪುನೀತ್ ರುದ್ರನಾಗ್, ಮನೀಷ್ ದಿನಕರ್ ಪುರುಷ ಗಾಯಕರಾದರೆ, ವರ್ಷ ಆಚಾರ್ಯ ಗಾಯಕಿ. ಲಹರಿ ಮ್ಯೂಸಿಕ್ ರಿಲೀಸ್ ಮಾಡಿರೋ ಹಾಡು ಬೇರೆಯದೇ ಲೆವೆಲ್ಲಿನಲ್ಲಿದೆ. ವಿಜಯ್ ಕಿರಗಂದೂರು ನಿರ್ಮಾಣದ ಹೊಂಬಾಳೆ ಬ್ಯಾನರ್ನ ಸಿನಿಮಾ ರಿಲೀಸ್ ಆಗಲಿರುವುದು ಏಪ್ರಿಲ್ 14ಕ್ಕೆ.

  • ಜುಲೈ 16ಕ್ಕೆ ಕೆಜಿಎಫ್ ಚಾಪ್ಟರ್ 2

    ಜುಲೈ 16ಕ್ಕೆ ಕೆಜಿಎಫ್ ಚಾಪ್ಟರ್ 2

    ಟೀಸರ್ನಲ್ಲೇ ಸಂಚಲನ ಸೃಷ್ಟಿಸಿದ ಕೆಜಿಎಫ್ ಚಾಪ್ಟರ್ 2 ರಿಲೀಸ್ಗೆ ಡೇಟ್ ಫಿಕ್ಸ್ ಆಗಿದೆ. ಇನ್ನು 6 ತಿಂಗಳು. ಥಿಯೇಟರಿನಲ್ಲಿ ಚಿನ್ನದ ಗಣಿಯ ದೂಳು ಏಳಲಿದೆ. ರಾಕಿಭಾಯ್ ಯಶ್, ಅಧೀರ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಶ್ರೀನಿಧಿ ಶೆಟ್ಟಿ ಎಲ್ಲರನ್ನೂ ಆ ದಿನ ತೆರೆಯ ಮೇಲೆ ನೋಡಿ ಎಂಜಾಯ್ ಮಾಡಬಹುದು.

    ಚಾಪ್ಟರ್ 2 ಸೂಪರ್ ಸಕ್ಸಸ್ ಹಿನ್ನೆಲೆಯಲ್ಲಿ ಪ್ರಶಾಂತ್ ನೀಲ್ ಮೇ ಭಾರಿ ಭರವಸೆ ಇಟ್ಟುಕೊಂಡಿದ್ದಾರೆ ಪ್ರೇಕ್ಷಕರು. ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾ, ಮತ್ತೊಮ್ಮೆ ಭಾರತೀಯ ಚಿತ್ರರಂದಲ್ಲಿ ಹೊಸ ದಾಖಲೆ ಬರೆಯಲಿದೆ ಎಂಬ ನಂಬಿಕೆಯಲ್ಲಿದ್ದಾರೆ ಅಭಿಮಾನಿಗಳು.

  • ಟೀಸರ್ ಲೀಕ್ ಆದರೂ ದಾಖಲೆ ಬ್ರೇಕ್..!

    ಟೀಸರ್ ಲೀಕ್ ಆದರೂ ದಾಖಲೆ ಬ್ರೇಕ್..!

    ಕೆಜಿಎಫ್ ರಿಲೀಸ್ ಆದ ದಿನದಿಂದ ಶುರುವಾದ ದಾಖಲೆಗಳನ್ನು ಬ್ರೇಕ್ ಮಾಡುವ ದಾಖಲೆ ಅವ್ಯಾಹತವಾಗಿ ಕಂಟಿನ್ಯೂ ಆಗ್ತಿದೆ. ಕೆಜಿಎಫ್ ಚಾಪ್ಟರ್ 1 ಹಿಟ್ ಆದ ನಂತರ ಸಹಜವಾಗಿಯೇ ಇಂಡಿಯಾ ಲೆವೆಲ್ಲಿನಲ್ಲಿ ಟ್ರೆಂಡ್ ಸೃಷ್ಟಿಸಿದ್ದ ಕೆಜಿಎಫ್ ಚಾಪ್ಟರ್ 2, ಮೊದಲ ಟೀಸರ್ನಲ್ಲಿಯೂ ದಾಖಲೆ ಬರೆದಿದೆ. ಎಲ್ಲವೂ ಪ್ಲಾನ್ ಪ್ರಕಾರವೇ ಜರುಗಿದ್ದರೆ ಜನವರಿ 8ಕ್ಕೆ, ಬೆಳಗ್ಗೆ 10 ಗಂಟೆ 12 ನಿಮಿಷಕ್ಕೆ ರಿಲೀಸ್ ಆಗಬೇಕಿದ್ದ ಟೀಸರ್, ಹಿಂದಿನ ರಾತ್ರಿಯೇ ರಿಲೀಸ್ ಆಗಬೇಕಾಯ್ತು. 11 ಗಂಟೆ ಮೊದಲೇ ರಿಲೀಸ್ ಆದ ಟೀಸರ್ ದಾಖಲೆಗಳನ್ನು ಚಿಂದಿ ಉಡಾಯಿಸುತ್ತಿದೆ.

    ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಹೆಚ್ಚೂ ಕಡಿಮೆ 2 ಕೋಟಿ ಜನ ಟೀಸರ್ ನೋಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ಹೊಂಬಾಳೆ ಫಿಲಂಸ್, ವಿಜಯ್ ಕಿರಗಂದೂರು, ಪ್ರಶಾಂತ್ ನೀಲ್.. ಹೀಗೆ ಕೆಜಿಎಫ್ ಚಾಪ್ಟರ್ 2 ತಂಡದ ಪ್ರತಿಯೊಬ್ಬರೂ ಥ್ರಿಲ್ಲಾಗುವಂತಾ ದಾಖಲೆ ಇದು. ಅಫ್ಕೋರ್ಸ್.. ಕೆಜಿಎಫ್ ಚಾಪ್ಟರ್ 1 ಸೃಷ್ಟಿಸಿದ್ದ ಹವಾ ಅಂಥಾದ್ದು. ಶೀಘ್ರದಲ್ಲೇ ಥಿಯೇಟರಿಗೆ ಬರೋದಾಗಿ ಘೋಷಿಸಿರೋ ಕೆಜಿಎಫ್ ಟೀಂ, ವರ್ಷದ ಮಧ್ಯ ಭಾಗದಲ್ಲಿ ತೆರೆಗೆ ಲಗ್ಗೆಯಿಡೋ ಚಾನ್ಸ್ ಇದೆ. ಯಶ್ ಹುಟ್ಟುಹಬ್ಬಕ್ಕೆಂದೇ ಟೀಸರ್ ಬಿಟ್ಟಿರೋ ಚಿತ್ರತಂಡ, ಯಶ್, ಸಂಜಯ್ ದತ್ ಮತ್ತು ರವೀನಾ ಟಂಡನ್ ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ. ಯಶ್ ಅವರ 35ನೇ ಹುಟ್ಟುಹಬ್ಬಕ್ಕೆಂದೇ ರಿಲೀಸ್ ಆದ ಟೀಸರ್ ಇದು. ಎಲ್ಲ ಭಾಷೆಗಳಿಗೂ ಅನ್ವಯಾಗುವಂತೆ ಡೈಲಾಗ್ಗಳಿಲ್ಲದ ಒಂದೇ ಟೀಸರ್ ಬಿಟ್ಟಿದೆ ಕೆಜಿಎಫ್ ಟೀಂ. ಗುಡ್ ಲಕ್