` totapuri, - chitraloka.com | Kannada Movie News, Reviews | Image

totapuri,

 • 'Totapuri' First Look On Jaggesh's Birthday

  totapuri first look on jaggesh's birthday

  The team of 'Totapuri' is all set to release the first look of the film on Jaggesh's birthday on the 17th of March.

  'Totapuri' is in the making for the last six months and the team has shot for more than 80 days. There is still 20 days of shooting left for the film and 'Totapuri' will be the first film in Jaggesh's career to be shot for 100 days.

  'Totapuri' is being written and directed by Vijayprasad and K A Suresh who has produced films like 'Govindaya Namaha' and 'Shivalinga' is the producer. The film stars Jaggesh, Suman Ranganath, Dattanna, Veena Sundar, Aditi Prabhudeva, Dhananjay and others in prominent roles. Niranjan Babu is the cameraman, while Anoop Seelin in the music director.

 • 'ಕಾಂತಾರ ಚೆನ್ನಾಗಿದೆ.. ಹಾಗೆಂದು ತೋತಾಪುರಿ ಸೋಲಬಾರದು''

  'ಕಾಂತಾರ ಚೆನ್ನಾಗಿದೆ.. ಹಾಗೆಂದು ತೋತಾಪುರಿ ಸೋಲಬಾರದು''

  ಯಾವುದೇ ಕನ್ನಡ ಸಿನಿಮಾ ಆಗಲಿ. ಕನಾಟಕದಲ್ಲಿ ಗೆಲ್ಲಲಿ. ಕಾಂತಾರ ನಿಜಕ್ಕೂ ಚೆನ್ನಾಗಿದೆ. ಆದರೆ ಆ ಅಲೆಯಲ್ಲಿ ಇನ್ನೊಂದು ಚಿತ್ರ ಸೋಲಬಾರದು. ಸಾಮಾಜಿಕ ಸಾಮರಸ್ಯ ಸಾರುವ ಸಹಬಾಳ್ವೆ ಬಯಸುವ ಸಂದೇಶದ ಚಿತ್ರ ಸೋಲಬಾರದು ಎಂದು ಬಯಸಿದ್ದಾರೆ ಜಗ್ಗೇಶ್. ರಾಯರ ಭಕ್ತರಾಗಿರುವ ಜಗ್ಗೇಶ್ ಅದಕ್ಕೊಂದು ಚೆಂದದ ಕಥೆಯನ್ನೂ ಹೇಳಿದ್ದಾರೆ.

  ಸಿನಿಮಾದಲ್ಲೊಂದು ದೃಶ್ಯವಿದೆ. ರಾಯರ ಮಠದಲ್ಲಿ ವೀಣೆ ನುಡಿಸುವ ಮುಸ್ಲಿಂ ಹೆಣ್ಣು ಮಗಳನ್ನು ಮಠದ ಅರ್ಚಕರು, ಭಕ್ತರು ನಿಂದಿಸುತ್ತಾರೆ. ಆದರೆ ಆಕೆಯ ಮನೆಗೆ ಸ್ವತಃ ರಾಯರ ಬೃಂದಾವನವೇ ಬರುತ್ತದೆ. ಅದೂ.. ಮಠದ ಸ್ವಾಮಿಗಳಿಂದ. ಶಕೀಲಾ ಬಾನುಗೆ ಸ್ವಾಮಿಗಳು ನಾನು ಬೃಂದಾವನದಲ್ಲಿ ರಾಯರನ್ನು ಕಾಣುತ್ತೇನೆ. ಕೆಲವರು ಅಲ್ಲಾನನ್ನ. ಕೆಲವರು ಜೀಸಸ್‍ನನ್ನ ಕಾಣ್ತಾರೆ. ಬೃಂದಾವನ ಅನ್ನೋದು ತಿಳಿ ಮನಸ್ಸಿನಂತೆ. ನೀನು ಜೀವ ಇರುವವರೆಗೆ ವೀಣೆ ನುಡಿಸು. ಗುಡಿ, ಮಸೀದಿ, ಚರ್ಚ್ ಎಲ್ಲ ಕಡೆ ವೀಣೆ ನುಡಿಸು ಅನ್ನೋ ಮಾತನ್ನ ಸ್ವಾಮಿಗಳು ಹೇಳುತ್ತಾರೆ.

  ಈ ದೃಶ್ಯವನ್ನ ಈಗ ಚಿತ್ರತಂಡ ರಿವೀಲ್ ಮಾಡಿದೆ. ವಿಜಯ್ ಪ್ರಸಾದ್ ನಿರ್ದೇಶನದ ಚಿತ್ರದಲ್ಲಿ ಈ ಸಂದೇಶಗಳೇ ಪ್ರೇಕ್ಷಕರಿಗೆ ಇಷ್ಟವಾಗಿವೆ. ಜಗ್ಗೇಶ್-ಆದಿತಿ ಪ್ರಭುದೇವ, ಡಾಲಿ ಧನಂಜಯ-ಸುಮನ್ ರಂಗನಾಥ್, ಹೇಮಾ ದತ್, ದತ್ತಣ್ಣ ಮೊದಲಾದ ಪ್ರತಿಭೆಗಳ ಸಮ್ಮಿಲನ ಈ ತೋತಾಪುರಿ.

 • *'ತೋತಾಪುರಿ' 100 ಮಿಲಿಯನ್‌ ಮೈಲಿಗಲ್ಲು*

  *'ತೋತಾಪುರಿ' 100 ಮಿಲಿಯನ್‌ ಮೈಲಿಗಲ್ಲು*

  *'ಬಾಗ್ಲು ತೆಗಿ ಮೇರಿ ಜಾನ್‌' ಬೊಂಬಾಟ್‌ ಹಿಟ್‌*

   ನವರಸ ನಾಯಕ ಜಗ್ಗೇಶ್‌ ನಟನೆಯ `ತೋತಾಪುರಿ' ಸಾಕಷ್ಟು ವಿಷಯಗಳಿಂದ ಸದ್ದು ಮಾಡುತ್ತಿದೆ. ಕರ್ನಾಟಕ ಸೇರಿದಂತೆ ದೇಶ-ವಿದೇಶದಲ್ಲೂ ಈ ಸಿನಿಮಾದ ಹಾಡಿನ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ `ಬಾಗ್ಲು ತೆಗಿ ಮೇರಿ ಜಾನ್‌' ಹಾಡು 100 ಮಿಲಿಯನ್‌ಗೂ ಅಧಿಕ ಹಿಟ್‌್ಸ ದಾಖಲಿಸಿ ಮುನ್ನುಗ್ಗುತ್ತಿದೆ.

   `ಮೋನಿಫ್ಲಿಕ್‌್ಸ ಆಡಿಯೋಸ್‌' ಯೂ ಟ್ಯೂಬ್‌ ಚಾನಲ್‌ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಈ ಹಾಡಿಗೆ ಪ್ರಸ್ತುತ ಚಾನಲ್‌ವೊಂದರಲ್ಲೇ 15 ಮಿಲಿಯನ್‌ಗೂ ಅಧಿಕ ಹಿಟ್‌್ಸ ದಾಖಲಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ 85 ಮಿಲಿಯನ್‌ಗೂ  ಅಧಿಕ ಹಿಟ್‌್ಸ ದಾಖಲಾಗಿರುವುದು `ತೋತಾಪುರಿ' ಹೆಚ್ಚುಗಾರಿಕೆ. ಇತ್ತೀಚೆಗೆ ಬಂದ ಹಾಡುಗಳ ಪೈಕಿ ದೊಡ್ಡ ಮಟ್ಟದಲ್ಲಿ ಜನರನ್ನು ಸೆಳೆದ ಹಾಡು ಇದಾಗಿದ್ದು, ದಿನದಿಂದ ದಿನಕ್ಕೆ ಕ್ರೇಜ್‌ ಹೆಚ್ಚಿಸುತ್ತಲೇ ಇದೆ. ಯೂ ಟ್ಯೂಬ್‌ ರೀಲ್‌್ಸ, ಶಾರ್ಟ್‌್ಸ ಹಾಗೂ  ಸ್ಟೋರಿಸ್‌ಗಳಲ್ಲಿ ಈ ಹಾಡಿನ ತುಣುಕಿಗೆ ಡಾನ್‌್ಸ ಮಾಡಿ ಅಪ್ಲೋಡ್‌ ಮಾಡಿರುವುದು ವಿಶೇಷ. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೂ ಈ ಹಾಡು ಇಷ್ಟವಾಗಿರುವುದು `ತೋತಾಪುರಿ' ಹಾಡಿನ ವಿಶೇಷ.

   ನಿರ್ದೇಶಕ ವಿಜಯಪ್ರಸಾದ್‌ ಅವರೇ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದಾರೆ. ಮೋಜ್‌, ಇನ್ಸ್ಟಾಗ್ರಾಮ್‌, ಯೂ ಟ್ಯೂಬ್‌ ರೀಲ್‌್ಸ, ಶೇರ್‌ ಚಾಟ್‌, ಮ್ಯಾಕ್‌ ಟಕಾ ಟಕ್‌ ಸೇರಿದಂತೆ ಹಲವಾರು ಆ್ಯಪ್‌ಗಳಲ್ಲಿ ಈ ಹಾಡಿನ ತುಣುಕುಗಳಿರುವ ವೀಡಿಯೋಗಳು ಸಖತ್‌ ಸದ್ದು ಮಾಡುತ್ತಿವೆ.

  ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತಯಾರಾಗಿರುವ ಮೊದಲ ಕನ್ನಡ ಕಾಮಿಡಿ ಸಿನಿಮಾ ಎಂಬುದು ಒಂದೆಡೆಯಾದರೆ, ಏಕಕಾಲದಲ್ಲಿ ತೋತಾಪುರಿ ಸಿನಿಮಾ ಎರಡು ಭಾಗಗಳಾಗಿ ತಯಾರಾಗಿದೆ ಎಂಬುದು ಮತ್ತೊಂದು ವಿಶೇಷ.  ಕೆ.ಎ.ಸುರೇಶ್‌ ನಿರ್ಮಾಣವಿರುವ ಈ ಸಿನಿಮಾದ ಮೊದಲ ಭಾಗ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ನಂತರ ಮತ್ತೊಂದು ಭಾಗವನ್ನು ರಿಲೀಸ್‌ ಮಾಡಲಿದೆ ಚಿತ್ರತಂಡ. `ಡಾಲಿ' ಧನಂಜಯ್‌, ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ದತ್ತಣ್ಣ, ವೀಣಾ ಸುಂದರ್‌, ಹೇಮಾದತ್‌ ಮೊದಲಾದವರು ಚಿತ್ರದಲ್ಲಿದ್ದಾರೆ.

 • 20 ಕೋಟಿ ಲೈಕ್ಸ್ ದಾಖಲೆ ಬರೆದ ಬಾಗ್ಲು ತೆರಿ ಮೇರಿ ಜಾನ್

  20 ಕೋಟಿ ಲೈಕ್ಸ್ ದಾಖಲೆ ಬರೆದ ಬಾಗ್ಲು ತೆರಿ ಮೇರಿ ಜಾನ್

  ತೋತಾಪುರಿ ಸಿನಿಮಾದ ಬಾಗ್ಲು ತೆಗಿ ಮೇರಿ ಜಾನ್‌... ಹಾಡು ವಿಶ್ವದಾದ್ಯಂತ ಸದ್ದು ಮಾಡಿದ್ದು ಗೊತ್ತೇ ಇದೆ. ದೊಡ್ಡವರಿಂದ ಚಿಕ್ಕವರವರೆಗೂ, ದೇಶ - ವಿದೇಶದವರೂ ಫಿದಾ ಆಗಿ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಿಂದ ಹಿಡಿದು ಯಾವುದೇ ಸಮಾರಂಭ, ಮನೆ, ಕಾರು, ಕಚೇರಿ ಮೊದಲಾದ ಕಡೆಯೂ 'ತೋತಾಪುರಿ' ಹಾಡಿನದ್ದೇ ಕಲರವ..

  ಇವೆಲ್ಲದರ ಜತೆಗೆ 'ಬಾಗ್ಲು ತೆಗಿ ಮೇರಿ ಜಾನ್‌' ೨೦೦ ಮಿಲಿಯನ್‌ ಹಿಟ್ಸ್‌ ಸೃಷ್ಟಿಸಿದೆ. ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ವಿಜಯ ಪ್ರಸಾದ್‌ ಸಾಹಿತ್ಯ ರಚಿಸಿದ್ದು, ವ್ಯಾಸರಾಜ್‌ ಸೋಸಲೆ ಹಾಗೂ ಅನನ್ಯಾ ಭಟ್‌ ದನಿಗೂಡಿಸಿದ್ದಾರೆ.

  'ತೋತಾಪುರಿ' ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗಿದೆ. ಕಾಮಿಡಿ ಸಿನಿಮಾವೊಂದು ಎರಡು ಭಾಗಗಳಲ್ಲಿ ಬರುತ್ತಿರುವುದು ಇದೇ ಮೊದಲು. ಸಿನಿಮಾ ಬಿಡುಗಡೆ ನಂತರ ಸಿರೀಸ್ ಆಗುವುದು ಬೇರೆ. ಸಿನಿಮಾ ಆರಂಭದಲ್ಲಿಯೇ ಎರಡು ಭಾಗಗಳಾಗಿ ಸಿನಿಮಾ ಮಾಡುವುದು ಬೇರೆ.

  ಜಗ್ಗೇಶ್‌ ನಟಿಸಿರುವ ಸಿನಿಮಾಗಳ ಪೈಕಿ 'ತೋತಾಪುರಿ' ಬಿಗ್‌ ಬಜೆಟ್‌ ಸಿನಿಮಾ  ಆಗಿದ್ದು, ಜಗ್ಗೇಶ್ ಎದುರು ಅದಿತಿ ಪ್ರಭುದೇವ ನಾಯಕಿ. ಡಾಲಿ ಧನಂಜಯ, ಸುಮನ್‌ ರಂಗನಾಥ್‌, ವೀಣಾ ಸುಂದರ್‌, ದತ್ತಣ್ಣ, ಹೇಮಾ ದತ್‌ ಸೇರಿದಂತೆ ಅನೇಕ ಕಲಾವಿದರು ತಾರಾಗಣದಲ್ಲಿದ್ದಾರೆ. ತೋತಾಪುರಿಯಲ್ಲಿ ಹಾಸ್ಯದ ಜೊತೆಗೆ ಸಮಾಜದಲ್ಲಿ ನಡೆಯುತ್ತಿರುವ ಪ್ರಚಲಿತ ಘಟನೆಗಳು ಇವೆ ಎಂದು ನರ‍್ದೇಶಕ ವಿಜಯ ಪ್ರಸಾದ್ ತಿಳಿಸಿದ್ದಾರೆ.

 • In Tothapuri, Dhananjay Will Be Seen In Multiple Get Up's

  dhanankay in multiple get up's in totapuri

  The Director's Special actor, who shot to fame by playing the character Daali in Tagaru, will be seen in at least three different get ups in his next - Thothapuri directed by Vijayaprasad which has Navarasa Nayaka Jaggesh in the lead.

  Following the bilingual project - Bhairavageetha, the actor is back to shooting mode. Apart from Thothapuri, Daali is busing with Duniya Suri's Popcorn Monkey Tiger.

  According to the director, Dhananjay who plays Narayan Pillai, a petrol bunk owner will have three get ups - one with beard, another without beard and the third one being a surprising element. He is paired opposite actress Suman Ranganath.

 • ಈ ಭಾನುವಾರ ತೋತಾಪುರಿ ಬ್ಯಾಂಡು.. ಫಾರಿನ್ ಸೌಂಡು..

  ಈ ಭಾನುವಾರ ತೋತಾಪುರಿ ಬ್ಯಾಂಡು.. ಫಾರಿನ್ ಸೌಂಡು..

  \ತೋತಾಪುರಿ ಭಾಗ-1ರ ತೊಟ್ಟು ಕಳಚಿ ಬಿದ್ದ ಮೊದಲ ಹಾಡು ಬಾಗ್ಲು ತೆಗಿ ಮೇರಿ ಜಾನ್.. ಹಾಡು ಸೂಪರ್ ಹಿಟ್. ಹಾಡು ನೋಡಿದವರ ಸಂಖ್ಯೆ 70 ಲಕ್ಷಕ್ಕೂ ಹೆಚ್ಚು. ಜಗ್ಗೇಶ್-ಅದಿತಿಯ ಹಾವಭಾವ.. ತರಲೆ.. ಪ್ರಣಯಗಳಿಗೆ ನೋಡಿದವರು ಫುಲ್ ಮಾಕ್ರ್ಸ್ ಕೊಟ್ಟಿದ್ದಾರೆ. ಅದನ್ನು ಸಂಭ್ರಮಿಸದೇ ಹೋದರೆ ಹೇಗೆ..?

  ಇದೇ ಭಾನುವಾರ ವಿದೇಶದಲ್ಲಿರೋ ಕನ್ನಡಿಗರೇ ಇದನ್ನು ಸಂಭ್ರಮಿಸುತ್ತಿದ್ದಾರೆ. ವರ್ಚುಯಲ್ ಶೋ ಮೂಲಕ. ಭಾನುವಾರ ಬೆಳಗ್ಗೆ 8 ಗಂಟೆಗೆ ಜಗ್ಗೇಶ್ ಅನಿವಾಸಿ ಕನ್ನಡಿಗರ ಜೊತೆ ಮಾತನಾಡಲಿದ್ದಾರೆ. ವಿಜಯೇಂದ್ರ ಪ್ರಸಾದ್ ಕೂಡಾ ಜೊತೆಯಲ್ಲಿರುತ್ತಾರೆ. ಕೆ.ಎ.ಸುರೇಶ್ ನಿರ್ಮಾಣದ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಜಗ್ಗೇಶ್, ಅದಿತಿ ಜೊತೆ ಡಾಲಿ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ ಕೂಡಾ ನಟಿಸಿದ್ದಾರೆ. ಅನೂಪ್ ಸಿಳೀನ್ ಸಂಗೀತವಿದೆ.

 • ಎಂತಾ ಟೈಮಲ್ಲಿ ಎಂತಾ ಸಿನಿಮಾ? ಹೇಗಿದೆ ಗೊತ್ತಾ ತೋತಾಪುರಿ..?

  ಎಂತಾ ಟೈಮಲ್ಲಿ ಎಂತಾ ಸಿನಿಮಾ? ಹೇಗಿದೆ ಗೊತ್ತಾ ತೋತಾಪುರಿ..?

  ಇದು ಕೇವಲ ಡಬಲ್ ಮೀನಿಂಗ್.. ಸಿಂಗಲ್ ಮೀನಿಂಗ್ ಸ್ಟೋರಿ ಅಲ್ಲ.

  ನಮ್ದು ಬೊಟ್ಟು.. ನಿಮ್ದು ತೊಟ್ಟು..

  ನಲ್ಲಿ ಸಣ್ಣಕ್ಕಿದ್ರೂ ನೀರು ಫೋರ್ಸ್ ಆಗಿ ಬರುತ್ತೆ. ಕೆಲವು ನಲ್ಲಿ ಪೈಪ್ ದಪ್ಪ ಇದ್ರೂ ನೀರೇ ಬರಲ್ಲ. ನಿಮ್ ನಲ್ಲೀಲಿ ನೀರ್ ಬರಲ್ವಾ?

  ಅಕ್ಕನಿಗೆ ಬಗ್ಗಿಸಿ ಹೊಡೆಯೋದು ಅಂದ್ರೆ ತುಂಬಾ ಪ್ರಾಣ..

  ನಿಂಗೆ ಬದನೇಕಾಯಿ ಇಷ್ಟ ಆಗೋ ಹಾಗೆ.. ಅವರಿಗೆ ಪುಸ್ತಕ ಇಷ್ಟ..

  ಇದು ಕಚಗುಳಿ ಇಡೋ ಡೈಲಾಗುಗಳಾದ್ರೆ..

  ಮುಂದಿನ ಕಥೆ ಮತ್ತು ಡೈಲಾಗು.. ಮೆದುಳು ಮತ್ತು ಹೃದಯಕ್ಕೆ ಏಕಕಾಲಕ್ಕೆ ಕೈ ಹಾಕಿ ಉಪ್ಪು ಕಾರ ಹಾಕ್ತವೆ.

  ದೇವರಿಂದ ತಪ್ಪಿಸ್ಕೊಂಡ್ರೂ ಕರ್ಮಗಳಿಂದ ತಪ್ಪಿಸ್ಕೊಳ್ಳೋಕಾಗಲ್ಲ.

  ಜಾತಿ ಕಾಲಮ್ಮಲ್ಲಿ ಭಾರತದವನು ಅಂತಾ ಬರ್ಕೊಂಡ್ ಬಿಡಿ..

  ನಾನು ಧರ್ಮ, ಜಾತಿ ದತ್ತು ತಗೊಂಡಿಲ್ಲ. ಮಗುನ ದತ್ತು ತಗೊಂಡಿದ್ದೀನಿ.

  ಇಂತಹ ಹೃದಯಕ್ಕೆ ತಟ್ಟುವ ಸಂಭಾಷಣೆಗಳೂ ಇವೆ..

  ಎರಡರ ಸೃಷ್ಟಿಕರ್ತ ವಿಜಯ್ ಪ್ರಸಾದ್. ರಾಯರ ಮಠದಲ್ಲಿ ಮುಸ್ಲಿಂ ಹುಡುಗಿಯ ಪ್ರಾರ್ಥನೆ, ಪೂಜೆ.. ಕ್ರೈಸ್ತ ಸನ್ಯಾಸಿನಿ.. ಅವಳ ಪ್ರೇಮ ಪ್ರಕರಣ.. ಹಿಂದೂ ಮುಸ್ಲಿಂ ಲವ್ ಸ್ಟೋರಿ.. ಹೀಗೆ ಬೇರೆಯದೇ ಕಥೆ ಹೇಳುತ್ತಿದ್ದಾರೆ ವಿಜಯ್ ಪ್ರಸಾದ್. ತಮ್ಮ ಎಂದಿನ ನಾಟಿ ಸ್ಟೈಲಿನಲ್ಲಿ.

  ಕಳೆದ ಕೆಲವು ತಿಂಗಳಿಂದ ಇಡೀ ದೇಶ ಇದೇ ಹಿಂದೂ ಮುಸ್ಲಿಂ ಅಶಾಂತಿಯಿಂದ ನರಳುತ್ತಿದೆ. ನಲುಗುತ್ತಿದೆ. ಇಂತಹ ಹೊತ್ತಿನಲ್ಲಿ ತೆರೆಗೆ ಬರೋಕೆ ಸಿದ್ಧವಾಗಿದೆ ತೋತಾಪುರಿ. ಅಂದಹಾಗೆ ಇದು ವಿವಾದಗಳು ಶುರುವಾದ ಮೇಲೆ ಸಿದ್ಧವಾದ ಸಿನಿಮಾ ಅಲ್ಲ ಅನ್ನೋದು ಎಲ್ಲರ ಗಮನಕ್ಕಿರಲಿ.

  ಜಗ್ಗೇಶ್, ಡಾಲಿ ಧನಂಜಯ್, ಅದಿತಿ ಪ್ರಭುದೇವ, ಪವಿತ್ರಾ ಲೋಕೇಶ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್ ಮೊದಲಾದವರು ನಟಿಸಿರೋ ಚಿತ್ರವಿದು. ಕೆ.ಎ.ಸುರೇಶ್ ನಿರ್ಮಾಣದ ತೋತಾಪುರಿ 2 ಭಾಗಗಳಲ್ಲಿ ಬರುತ್ತಿದ್ದು, ಮೊದಲ ಭಾಗ ಶೀಘ್ರದಲ್ಲೇ ರಿಲೀಸ್ ಆಗಲಿದೆ.

 • ಜಗ್ಗೇಶ್ ಹುಟ್ದಬ್ಬಕ್ಕೆ ಫಸ್ಟ್ ತೋತಾಪುರಿ ನೋಡ್ಕಂಡ್ಬುಡಿ..

  totapuri first look on jaggesh's birthday

  ಜಗ್ಗೇಶ್ ಅಭಿನಯದ, ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿ ಚಿತ್ರ 100ನೇ ದಿನದತ್ತ ದಾಪುಗಾಲಿಟ್ಟಿದೆ. ಅರೇ.. ಏನ್ರೀ ಇದು.. ತೋತಾಪುರಿ ಸಿನಿಮಾ ಶೂಟಿಂಗೇ ಮುಗಿದಿಲ್ಲ ಅಂತೀರಾ..? ನಾವ್ ಹೇಳ್ತಿರೋದೂ ಅದೇ ಸ್ವಾಮಿ.. ಶೂಟಿಂಗ್ ಬಗ್ಗೆನೇ..

  ಸಾಮಾನ್ಯವಾಗಿ ಜಗ್ಗೇಶ್ ಚಿತ್ರಗಳ ಶೂಟಿಂಗ್ ತುಂಬಾ ದಿನ ನಡೆಯಲ್ಲ. ಎಷ್ಟು ಸಾಧ್ಯವೋ ಅಷ್ಟು ಕಡಿಮೆ ದಿನದಲ್ಲಿ ಶೂಟಿಂಗ್ ಮಾಡಿ ಎನ್ನುವುದು ಜಗ್ಗೇಶ್ ಪಾಲಿಸಿ. ಸದಾ ನಿರ್ಮಾಪಕರ ಜೇಬಿನ ಬಗ್ಗೆ ನಿಗಾ ಇಡುವ ನಟ ಜಗ್ಗೇಶ್, ಈ ಬಾರಿ 100ದಿನದ ಶೂಟಿಂಗಿಗೆ ಸಾಕ್ಷಿಯಾಗಿದ್ದಾರೆ. ಈಗಾಗಲೇ 80 ದಿನ ಶೂಟಿಂಗ್ ಮುಗಿಸಿರುವ ನಿರ್ದೇಶಕ ವಿಜಯ್ ಪ್ರಸಾದ್, ಫಸ್ಟ್ ಲುಕ್ ಹೊರಬಿಡಲು ರೆಡಿಯಾಗಿದ್ದಾರೆ.

  ಇದು ನೀರ್ ದೋಸೆ ಕಾಂಬಿನೇಷನ್ ಸಿನಿಮಾ. ಜಗ್ಗೇಶ್, ಸುಮನ್ ರಂಗನಾಥ್, ದತ್ತಣ್ಣ ಮತ್ತೆ ಜೊತೆಯಾಗಿದ್ದಾರೆ.. ಅದೇ ವಿಜಯ್ ಪ್ರಸಾದ್ ಸಾರಥ್ಯದಲ್ಲಿ. ಮಾರ್ಚ್ 16ಕ್ಕೆ ಜಗ್ಗೇಶ್ ಹುಟ್ಟುಹಬ್ಬ. ನೋಡ್ಕೊಂಡ್‍ಬಿಡಿ.

 • ಟೈಲರ್ ಪಾತ್ರದಲ್ಲಿ ಜಗ್ಗೇಶ್

  ಟೈಲರ್ ಪಾತ್ರದಲ್ಲಿ ಜಗ್ಗೇಶ್

  ಶಕೀಲಾ ಬಾನು ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರೆ, ಟೈಲರ್ ಆಗಿ ಜಗ್ಗೇಶ್. ಅವರ ಜೊತೆ ಬಿರಿಯಾನಿ ಅಂಗಡಿ ನಡೆಸುವ ದೊನ್ನೆ ರಂಗಮ್ಮ, ಅಸಿಸ್ಟೆಂಟ್ ಆಗಿ ನಂಜಮ್ಮ, ಮಠದ ಸ್ವಾಮೀಜಿ.. ಹೀಗೆ ಹಲವರ ಪಾತ್ರ ಒಳಗೊಂಡಿರುವ ಪಾತ್ರವೇ ತೋತಾಪುರಿ. ಚಿತ್ರದಲ್ಲಿ ಕಾಮಿಡಿ ಅಷ್ಟೇ ಅಲ್ಲ, ಅಲ್ಲೊಂದು ಸಮಾಜಮುಖಿ ಸಂದೇಶವೂ ಇದೆ. ತೋತಾಪುರಿಯನ್ನು ನವರಸ ನಾಯಕ ಜಗ್ಗೇಶ್ ಹೀಗೆ ವಿವರಿಸುತ್ತಾರೆ.

  ಸಾಮಾನ್ಯವಾಗಿ ಕಥೆ ಕೇಳುವ ನಾನು ವಿಜಯ್ ಪ್ರಸಾದ್ ಮೇಲೆ ನಂಬಿಕೆಯಿಟ್ಟು ಒಪ್ಪಿಕೊಂಡೆ. ಕಥೆ ಕೇಳಲಿಲ್ಲ. ಅವರೊಬ್ಬ ಅದ್ಭುತ ಬರಹಗಾರರು ಎನ್ನುತ್ತಾರೆ ಜಗ್ಗೇಶ್. ಜಗ್ಗೇಶ್ ಎದುರು ಆದಿತಿ ಪ್ರಭುದೇವ, ಡಾಲಿ ಧನಂಜಯ್ ಎದುರು ಸುಮನ್ ರಂಗನಾಥ್ ಇದ್ದಾರೆ. ನನ್ನ ವೃತ್ತಿ ಜೀವನದಲ್ಲಿ ಇದೊಂದು ನವಿಲುಗರಿ ಎನ್ನುವುದು ಜಗ್ಗೇಶ್ ಭರವಸೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಸಿನಿಮಾ ಸೆ.30ರಂದು ರಿಲೀಸ್ ಆಗುತ್ತಿದೆ.

 • ಡಬಲ್ ಮೀನಿಂಗ್ ಇದ್ದರೂ ತೋತಾಪುರಿಯಲ್ಲಿ ಒಂದೊಳ್ಳೆ ಸಂದೇಶವಿದೆ : ಸುಮನ್ ರಂಗನಾಥ್

  ಡಬಲ್ ಮೀನಿಂಗ್ ಇದ್ದರೂ ತೋತಾಪುರಿಯಲ್ಲಿ ಒಂದೊಳ್ಳೆ ಸಂದೇಶವಿದೆ : ಸುಮನ್ ರಂಗನಾಥ್

  ವಿಜಯ್ ಪ್ರಸಾದ್ ಅವರ ಕಥೆಗಳು ಮತ್ತು ಆಲೋಚನೆಗಳೇ ವಿಭಿನ್ನ. ಕೆಲವು ವಿಚಾರಗಳ ಬಗ್ಗೆ ಒಳಗೊಳಗೇ ಯೋಚಿಸುವ ಜನ ಅದನ್ನು ಗಟ್ಟಿಯಾಗಿ ಮಾತನಾಡಲು ಹೆದರುತ್ತಾರೆ. ಆದರೆ ವಿಜಯ ಪ್ರಸಾದ್ ಅದನ್ನು ಹಾಸ್ಯದ ಮೂಲಕ ಹೇಳುತ್ತಾರೆ. ಡಬಲ್ ಮೀನಿಂಗ್ ಹಾಸ್ಯವಿದ್ದರೂ ಅಲ್ಲೊಂದು ಸಂದೇಶವಂತೂ ಇರುತ್ತೆ.

  ಇದು ಸುಮನ್ ರಂಗನಾಥ್ ಮಾತು. ತೋತಾಪುರಿ ಚಿತ್ರದಲ್ಲಿ ಅವರು ಕ್ರೈಸ್ತ ಸನ್ಯಾಸಿನಿ ವಿಕ್ಟೋರಿಯಾ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಹಿಂದೆ ವಿಜಯ್ ಪ್ರಸಾದ್ ಜೊತೆ  ಸಿದ್ಲಿಂಗು, ನೀರ್ ದೋಸೆ, ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ನಟಿಸಿರುವ ಸುಮನ್ ಅವರಿಗೆ ವಿಜಯ್ ಪ್ರಸಾದ್ ಇಷ್ಟವಾಗುವ ನಿರ್ದೇಶಕ.

  ಚಿತ್ರದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಪಾತ್ರಗಳಿವೆ. ಆದರೆ ವಿವಾದಾತ್ಮಕ ದೃಶ್ಯಗಳಿಲ್ಲ. ಸಂಭಾಷಣೆಗಳ ಮೂಲಕವೇ ಭಾವನೆ ಹೇಳಿದ್ದೇವೆ. ಸಾಮರಸ್ಯದಿಂದ ಬದುಕುವುದು ಹೇಗೆ ಅನ್ನೋ ಕಥೆಯೂ ಚಿತ್ರದಲ್ಲಿದೆ.ವಾಸ್ತವ ಮುಂದಿಡೋಕೆ ನಿರ್ದೇಶಕರಿಗೆ ಯಾವುದೇ ಭಯವಿಲ್ಲ. ಇನ್ನು ನನ್ನ ಪಾತ್ರದ ಜೊತೆಗಾರ ಡಾಲಿ ಧನಂಜಯ್ ಅವರ ಪಾತ್ರದ ಮೂಲಕ ಶಾಶ್ವತ ಪ್ರೀತಿಯನ್ನು ನೋಡುತ್ತೇವೆ ಎನ್ನುವುದು ಸುಮನ್ ಮಾತು.

  ಜಗ್ಗೇಶ್, ಆದಿತಿ ಪ್ರಭುದೇವ ನಟಿಸಿರುವ ಚಿತ್ರ ತೋತಾಪುರಿ ಭಾಗ 1 ಇದೇ ಶುಕ್ರವಾರ ರಿಲೀಸ್ ಆಗುತ್ತಿದೆ.

   

 • ತೊಟ್ಟು..ಬೊಟ್ಟು.. ಬಾಗ್ಲು ತೆಗಿ ಮೇರಿ ಜಾನ್ ಫಸ್ಟು..

  ತೊಟ್ಟು..ಬೊಟ್ಟು.. ಬಾಗ್ಲು ತೆಗಿ ಮೇರಿ ಜಾನ್ ಫಸ್ಟು..

  ತೊಟ್ಟು.. ಬೊಟ್ಟುಗಳಲ್ಲೇ ಚೇಷ್ಟೆ ಮಾಡ್ತಿರೋ ನಿರ್ದೇಶಕ ವಿಜಯ್ ಪ್ರಸಾದ್ ಕೊನೆಗೂ ಬಾಗಿಲು ತೆಗೆಸೋಕೆ ರೆಡಿಯಾಗಿದ್ದಾರೆ. ತೋತಾಪುರಿ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಬಾಗ್ಲು ತೆಗೆ ಮೇರಿ ಜಾನ್.. ಹಾಡು ನೋಡಿದವರ ಮುಖದ ಮೇಲೊಂದು ನಗೆ ಮೂಡಿದೆ.

  ಅದಿತಿ ಪ್ರಭುದೇವ ಸೌಂದರ್ಯ ಕಣ್ಣು ಕುಕ್ಕಿದರೆ..  ಜಗ್ಗೇಶ್ ಹಾವಭಾವ.. ನಗೆಯುಕ್ಕಿಸುತ್ತಿದೆ. ಅನೂಪ್ ಸಿಳೀನ್ ಸಂಗೀತ ಕಚಗುಳಿಯಿಟ್ಟರೆ.. ಕನ್ನಡ, ಹಿಂದಿ, ಉರ್ದು ಎಲ್ಲವನ್ನೂ ತೋತಾಪುರಿಗೆ ಹಾಕಿ ಮಸಾಲೆ ಮಾಡಿರೋದು ಚೇಷ್ಟೆ ಛತ್ರಪತಿ ವಿಜಯ್ ಪ್ರಸಾದ್.

 • ತೋತಾಪುರಿಗೆ ಕೂಡಿ ಬಂತು ಕಾಲ : ಸೆಪ್ಟೆಂಬರ್ ಅಂತ್ಯಕ್ಕೆ ಫಿಲ್ಮಿ ದಸರಾ

  ತೋತಾಪುರಿಗೆ ಕೂಡಿ ಬಂತು ಕಾಲ : ಸೆಪ್ಟೆಂಬರ್ ಅಂತ್ಯಕ್ಕೆ ಫಿಲ್ಮಿ ದಸರಾ

  ನವರಸನಾಯಕ ಜಗ್ಗೇಶ್ ಅಭಿನಯದ ತೋತಾಪುರಿ ರಿಲೀಸ್ ಆಗೋಕೆ ಸಮಯ ಕೂಡಿ ಬಂದಿದೆ. ಸೆಪ್ಟೆಂಬರ್ 30ರಂದು ಸಿನಿಮಾ ರಿಲೀಸ್ ಮಾಡೋದಾಗಿ ಘೋಷಿಸಿದ್ದಾರೆ. ಅದೇ ದಿನ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಹಾಗೂ ರಿಷಬ್ ಶೆಟ್ಟಿಯವರ ಕಾಂತಾರಾ ರಿಲೀಸ್ ಆಗುತ್ತಿವೆ.

  ಅದು ದಸರಾ ರಜೆ ಸಮಯ. ಹೀಗಾಗಿ ರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ ನಿರ್ಮಾಪಕ ಸುರೇಶ್.

  ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿ ಎರಡು ಭಾಗಗಳಲ್ಲಿ ಬರುತ್ತಿದ್ದು, ಮೊದಲ ಭಾಗ ಸೆ.30ಕ್ಕೆ ರಿಲೀಸ್ ಆಗುತ್ತಿದೆ. ಆಗಸ್ಟ್ 5ಕ್ಕೆ ಜಗ್ಗೇಶ್ ಅವರ ರಾಘವೇಂದ್ರ ಸ್ಟೋರ್ಸ್ ರಿಲೀಸ್ ಆಗುತ್ತಿದ್ದು, ಆ ಸಿನಿಮಾ ರಿಲೀಸ್ ಆದ ಸರಿಯಾಗಿ 50 ದಿನಗಳ ನಂತರ ತೋತಾಪುರಿ ಬರಲಿದೆ.

  ತೋತಾಪುರಿಯಲ್ಲಿ ಜಗ್ಗೇಶ್ ಅವರ ಜೊತೆ ಡಾಲಿ ಧನಂಜಯ್ ಕೂಡಾ ನಟಿಸಿದ್ದಾರೆ. ಅದಿತಿ ಪ್ರಭುದೇವ ನಾಯಕಿ. ಸುಮನ್ ರಂಗನಾಥ್, ದತ್ತಣ್ಣ ಇನ್ನಿತರ ಪ್ರಮುಖ ಪಾತ್ರಗಳಲ್ಲಿದ್ದಾರೆ.

  ಒಟ್ಟಿನಲ್ಲಿ ಸೆ.30ಕ್ಕೆ ಧ್ರುವ ಸರ್ಜಾ-ಎ.ಪಿ.ಅರ್ಜುನ್-ಉದಯ್ ಕೆ.ಮೆಹ್ತಾ ಜೋಡಿಯ ಮಾರ್ಟಿನ್, ರಿಷಬ್ ಶೆಟ್ಟಿ-ಹೊಂಬಾಳೆ ಜೋಡಿಯ ಕಾಂತಾರಾ ಜೊತೆ ಜಗ್ಗೇಶ್-ವಿಜಯ್ ಪ್ರಸಾದ್-ಕುಮಾರ್ ಜೋಡಿಯ ತೋತಾಪುರಿ.. ಮೂರ್ ಮೂರು ಸಿನಿಮಾಗಳು ಒಟ್ಟೊಟ್ಟಿಗೆ ಬರಲಿವೆ.

 • ತೋತಾಪುರಿಯ ತೊಟ್ಟು.. ಸೂಪರ್ ಹಿಟ್ಟು.. ಜಗ್ಗೇಶ್ ಫುಲ್ ಖುಸ್ಸು..

  ತೋತಾಪುರಿಯ ತೊಟ್ಟು.. ಸೂಪರ್ ಹಿಟ್ಟು.. ಜಗ್ಗೇಶ್ ಫುಲ್ ಖುಸ್ಸು..

  ಬಾಗ್ಲು ತೆಗಿ ಮೇರಿ ಜಾನ್.. ತೋತಾಪುರಿ ಮೊದಲ ಭಾಗದ ಈ ಹಾಡು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಇಷ್ಟವಾಗಿದ್ದು ಹಾಡಿನ ಸಾಹಿತ್ಯವೋ.. ಜಗ್ಗೇಶ್ ನವರಸ ಪ್ರದರ್ಶನವೋ.. ಅದಿತಿ ಸೌಂದರ್ಯವೋ.. ವಿಜಯೇಂದ್ರ ಪ್ರಸಾದ್ ಸಾಹಿತ್ಯವೋ.. ಅನನ್ಯ ಭಟ್, ವ್ಯಾಸರಾಜ್, ಸುಪ್ರಿಯಾ ರಾಮ್ ಕಂಠವೋ.. ಅನೂಪ್ ಸಿಳೀನ್ ಸಂಗೀತವೋ.. ಒಟ್ಟಾರೆ ಹಾಡು ಮಾತ್ರ ಸೂಪರ್ ಡ್ಯೂಪರ್ ಹಿಟ್. ನೋಡಿದವರ ಸಂಖ್ಯೆ 90 ಲಕ್ಷ ದಾಟಿದೆ.

  ಇಂತಾದ್ದೊಂದು ಸಕ್ಸಸ್ ಅನುಭವ ನನಗೆ ಇದೇ ಮೊದಲು. ಜನರ ಪ್ರೀತಿ ನೋಡುತ್ತಿದ್ದರೆ ನಾನು ಇನ್ನೂ 30 ವರ್ಷ ಚಿತ್ರರಂಗದಲ್ಲೇ ಇರುತ್ತೇನೆ ಅನ್ನೋ ಫೀಲಿಂಗ್ ಇದೆ ಎಂದು ಫುಲ್ ಖುಷಿಯಾಗಿ ಹೇಳಿಕೊಂಡಿದ್ದಾರೆ ಜಗ್ಗೇಶ್.

  ಅಂದಹಾಗೆ ಜಗ್ಗೇಶ್ ವಯಸ್ಸು  60 ದಾಟಿದೆ. ಹಾಡಿನ ರಿಲೀಸ್ ಮಾಡೋಕೆ ಮೊದಲು ತುಣುಕು ಬಿಟ್ಟಾಗ ಏನಿದು ಹಿಂದಿ, ಉರ್ದು ಇದೆ, ಕನ್ನಡವೇ ಇಲ್ಲ ಎಂಬೆಲ್ಲ ಕಮೆಂಟ್ಸ್ ಬಂದವು. ಆದರೆ ಹಾಡು ರಿಲೀಸ್ ಆದ ಮೇಲೆ ಆಗಿದ್ದೇ ಬೇರೆ. ಹಾಡು ಹಿಟ್ ಆಗಿದೆ ಎಂದು ಖುಷಿ ಖುಷಿಯಾಗಿದ್ದಾರೆ ಜಗ್ಗೇಶ್.

 • ತೋತಾಪುರಿಯನ್ನು ಮಹಿಳಾ ಪ್ರೇಕ್ಷಕರೂ ಇಷ್ಟಪಟ್ಟಿದ್ದಾರೆ. ಕಲೆಕ್ಷನ್ ಚೆನ್ನಾಗಿದೆ : ಜಗ್ಗೇಶ್. ವಿಜಯ ಪ್ರಸಾದ್

  ತೋತಾಪುರಿಯನ್ನು ಮಹಿಳಾ ಪ್ರೇಕ್ಷಕರೂ ಇಷ್ಟಪಟ್ಟಿದ್ದಾರೆ. ಕಲೆಕ್ಷನ್ ಚೆನ್ನಾಗಿದೆ : ಜಗ್ಗೇಶ್. ವಿಜಯ ಪ್ರಸಾದ್

  ತೋತಾಪುರಿ ಕಳೆದ ವಾರ ಬಿಡುಗಡೆಯಾದ ಸಿನಿಮಾ. ಸಿನಿಮಾ ಥಿಯೇಟರ್‍ಗಳಲ್ಲಿ ಚೆನ್ನಾಗಿಯೇ ಹೋಗುತ್ತಿದೆ. ಜಗ್ಗೇಶ್-ಆದಿತಿ ಪ್ರಭುದೇವ, ಡಾಲಿ-ಸುಮನ್ ರಂಗನಾಥ್, ಹೇಮಾ ದತ್ ಪ್ರಮುಖ ಪಾತ್ರದಲ್ಲಿ ನಟಿಸಿರೋ ಸಿನಿಮಾಗೆ ವಿಜಯ್ ಪ್ರಸಾದ್ ನಿರ್ದೇಶನವಿದೆ. ಚಿತ್ರಕ್ಕೆ ಚಿತ್ರರಂಗದವರಿಂದಲೇ ನೆಗೆಟಿವ್ ಪ್ರಚಾರ ನಡೆಯುತ್ತಿದೆ ಎಂದು ಜಗ್ಗೇಶ್ ಕಿಡಿಕಾರಿದ್ದಾರೆ.

  ನಮ್ಮ ತೋತಾಪುರಿ ಗಜ ಗಂಭೀರದ ಹಾಗೆ. ಸ್ಥಿರತೆ ಕಾಯ್ದುಕೊಂಡಿದೆ. ಚೆನ್ನಾಗಿ ಹೋಗುತ್ತಿದೆ. ತೋತಾಪುರಿ ಜಾತೀಯತೆ ವಿರೋಧಿ ಸಿನಿಮಾ. ನಾನು 20ನೇ ವಯಸ್ಸಿನಲ್ಲೇ ಅಂತರ್ಜಾತಿ ಮದುವೆ ಆಗಿ ಮನೆಯಿಂದ ಹೊರದಬ್ಬಿಸಿಕೊಂಡವನು. ನಾನು ರಾಯರ ಭಕ್ತ. ರಾಯರೂ ಯಾವತ್ತೂ ಜಾತಿ ಧರ್ಮ ನೋಡಿದವರಲ್ಲ. ರಾಯರ ಮಠಕ್ಕೆ ಸಂಬಂಧಿಸಿದ ಕೆಲವು ದೃಶ್ಯಗಳಿಗೆ ವಿರೋಧ ವ್ಯಕ್ತವಾಗಿದೆ. ರಾಯರು ಮನುಷ್ಯನನ್ನಷ್ಟೇ ನೋಡಿದವರು. ಜಾತಿ ಧರ್ಮವನ್ನಲ್ಲ ಎಂದಿದ್ದಾರೆ ಜಗ್ಗೇಶ್.

  ಅಲ್ಲದೆ ತಮಿಳುನಾಡಿನಲ್ಲಿ ಪೊನ್ನಿಯನ್ ಸೆಲ್ವನ್ ಚಿತ್ರದ ಪ್ರಚಾರಕ್ಕೆ ಇಡೀ ತಮಿಳು ಚಿತ್ರರಂಗವೇ ಬಂದಿತ್ತು. ಆದರೆ ಕನ್ನಡದಲ್ಲಿ ಪರಿಸ್ಥಿತಿ ಹೀಗಿಲ್ಲ. ನಾವು ಬೇಲಿ ಹಾಕಿಕೊಂಡಿದ್ದೇವೆ. ನಮ್ಮದು ಮಾತ್ರ ಬೆಸ್ಟ್ ಎಂದು ಬೀಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ನಿರ್ದೇಶಕ ವಿಜಯ್ ಪ್ರಸಾದ್ ಚಿತ್ರದ ಕಲೆಕ್ಷನ್ ಚೆನ್ನಾಗಿದೆ. ಮಹಿಳಾ ಪ್ರೇಕ್ಷಕರು ಹೆಚ್ಚು ಹೆಚ್ಚು ಬರುತ್ತಿದ್ದಾರೆ. ಸಿನಿಮಾದಲ್ಲಿನ ಗಟ್ಟಿ ವಿಚಾರ, ಚೇಷ್ಟೆಯನ್ನೂ ಜನ ಮೆಚ್ಚಿಕೊಂಡಿದ್ದಾರೆ ಎಂದರು.

 • ನನ್ನ ಪಾತ್ರಕ್ಕೆ ಡಬಲ್ ಮೀನಿಂಗ್ ಡೈಲಾಗ್ ಇಲ್ಲ : ಆದಿತಿ ಪ್ರಭುದೇವ

  ನನ್ನ ಪಾತ್ರಕ್ಕೆ ಡಬಲ್ ಮೀನಿಂಗ್ ಡೈಲಾಗ್ ಇಲ್ಲ : ಆದಿತಿ ಪ್ರಭುದೇವ

  ಕೆಲವೊಂದು ನಲ್ಲಿಯಲ್ಲಿ ನೀರು ಜೋರಾಗಿ ಬರುತ್ತೆ. ಕೆಲವೊಂದರಲ್ಲಿ ಬರಲ್ಲ. ನಿಮ್ಮ ನಲ್ಲಿ ಹೇಗೆ.. ಎನ್ನುವ ಡೈಲಾಗ್ ನೆನಪಿದೆಯಾ? ತೋತಾಪುರಿ ಚಿತ್ರದ ಆ ಡೈಲಾಗ್ ಹೇಳೋದು ಆದಿತಿ ಪ್ರಭುದೇವ ಅನ್ನೋ ಟೀಚರ್ ಕ್ಯಾರೆಕ್ಟರ್.

  ತೋತಾಪುರಿ ಚಿತ್ರದ ಟ್ರೇಲರ್ ನೋಡಿದವರಿಗೆ ಅದು ಡಬಲ್ ಮೀನಿಂಗೋ.. ಸಿಂಗಲ್ ಮೀನಿಂಗೋ.. ಡೈರೆಕ್ಟ್ ಮೀನಿಂಗೋ.. ಅರ್ಥವಾಗಲ್ಲ. ಆದರೆ.. ಆದಿತಿ ಹೇಳೋದೇ ಬೇರೆ.

  ಈ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಅಷ್ಟಾಗಿ ಡಬಲ್ ಮೀನಿಂಗ್ ಡೈಲಾಗ್ಸ್ ಇಲ್ಲ. ಎಲ್ಲೋ ಮೂರ್ನಾಲ್ಕು ಕಡೆ ಬರುತ್ತದಷ್ಟೇ. ಬೇರೆ ಪಾತ್ರಗಳು ನಲ್ಲಿ, ಮೂಳೆ ಅಂತೆಲ್ಲ ಮಾತನಾಡ್ತಿರೋವಾಗ.. ಅದು ಏನು ಎಂದು ಅರ್ಥ ಮಾಡಿಕೊಂಡು ನಾನೂ ಹಾಗೆ ಮಾತನಾಡಬಹುದಾ ಎಂದೆಲ್ಲ ಯೋಚಿಸುವ ಹೊತ್ತಿಗೆ ಶೂಟಿಂಗೇ ಮುಗಿದು ಹೋಯ್ತು ಎನ್ನುತ್ತಾರೆ ಆದಿತಿ ಪ್ರಭುದೇವ.

  ಟ್ರೇಲರ್ ನೋಡಿದವರು ಕೆಲವರು ಮೆಚ್ಚಿದ್ದಾರೆ. ಕೆಲವರು ಹೀಗಳೆದೂ ಇದ್ದಾರೆ. ಎರಡನ್ನೂ ಸ್ವೀಕರಿಸಬೇಕು ಎನ್ನುವ ಆದಿತಿಗೆ ಜಗ್ಗೇಶ್ ಜೊತೆ ನಟಿಸಿದ ಖುಷಿ ಇದೆ. ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಒಳ್ಳೆಯ ಸಿನಿಮಾ. ಧರ್ಮ, ಜಾತಿ ಅನ್ನೋದನ್ನೆಲ್ಲ ಮೀರಿ ನಾವೆಲ್ಲ ಒಳ್ಳೆಯ ಮನುಷ್ಯರು ಎಂದು ಹೇಳೋ ಪ್ರಯತ್ನ ಚಿತ್ರದಲ್ಲಿದೆಯಂತೆ. ತೋತಾಪುರಿ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗುತ್ತಿದೆ.

 • ಪ್ರೀತಿ ಮಾಡಿದ್ದೀರಾ..? ತೊಟ್ಟು ಬೊಟ್ಟಿನ ಹಾಡಿಗೆ ರೆಡಿಯಾಗಿ..

  ಪ್ರೀತಿ ಮಾಡಿದ್ದೀರಾ..? ತೊಟ್ಟು ಬೊಟ್ಟಿನ ಹಾಡಿಗೆ ರೆಡಿಯಾಗಿ..

  ನಿರ್ದೇಶಕ ವಿಜಯ್ ಪ್ರಸಾದ್ ಏನೇ ಮಾಡಿದರೂ ಒಂದಿಷ್ಟು ತರಲೆ ಫಿಕ್ಸು. ಅವರ ಜೊತೆಗೆ ಜಗ್ಗೇಶ್ ಕೂಡಾ ಸೇರಿಕೊಂಡ್ರೆ ತರಲೆಯೂ ಡಬಲ್. ಕೀಟಲೆಯೂ ಡಬಲ್. ತುಂಟಾಟವೂ ಡಬಲ್. ತೋತಾಪುರಿ ಚಿತ್ರದ ಹಾಡು ಬಿಡೋಕೆ ಮೊದಲು ವಿಜಯ್ ಪ್ರಸಾದ್ ಪುಟ್ಟದೊಂದು ತೊಟ್ಟು ಬೊಟ್ಟಿನ ಟೀಸರ್ ಬಿಟ್ಟಿದ್ದಾರೆ.

  ತೊಟ್ಟು ಬೊಟ್ಟಿನ ಮೊದಲ ನೋಟ.. ಮೊದಲ ಮಾತು ಎಂದು ಹೇಳಿ ಬಿಟ್ಟಿರೋ ಟೀಸರ್‍ನಲ್ಲಿ ಹೇಳಿರೋದು ಮಾತ್ರ ಹಾಡಿನ ಬಗ್ಗೆ. ಜಗ್ಗೇಶ್ ಮತ್ತು ಅದಿತಿ ಪ್ರಭುದೇವ ನಡುವೆ ಅದೇನೋ ಕೆಮಿಸ್ಟ್ರಿ ನಡೆಯುತ್ತೆ. ಅದಿಷ್ಟನ್ನು ತೋರಿಸಿ ಹಾಡು ಬಿಡ್ತೀವಿ ಎಂದು ಹೇಳಿದ್ದಾರೆ ವಿಜಯ್ ಪ್ರಸಾದ್. ಎರಡು ಭಾಗಗಗಳಲ್ಲಿ ರಿಲೀಸ್ ಆಗಲಿರೋ ತೋತಾಪುರಿ ಚಿತ್ರದ ರಿಲೀಸ್ ಡೇಟ್‍ನ್ನು ನಿರ್ಮಾಪಕ ಕೆ.ಎ.ಸುರೇಶ್ ಇನ್ನೂ ಫಿಕ್ಸ್ ಮಾಡಿಲ್ಲ.

 • ಶಕೀಲಾ ಬಾನು ಆದಿತಿ ಪ್ರಭುದೇವ

  ಶಕೀಲಾ ಬಾನು ಆದಿತಿ ಪ್ರಭುದೇವ

  ತೋತಾಪುರಿ ಚಿತ್ರ ರಿಲೀಸ್ ಆಗೋಕೆ ರೆಡಿಯಾಗಿದೆ. ಭಾಗ 1&2 ಚಿತ್ರಗಳೆಂದರೆ.. ಅದು ಆ್ಯಕ್ಷನ್, ಐತಿಹಾಸಿಕ  ಸಿನಿಮಾಗಳು. ಬಾಹುಬಲಿ, ಕೆಜಿಎಫ್, ಪುಷ್ಪ.. ಹೀಗೆ.. ಕಾಮಿಡಿ ಚಿತ್ರಗಳು ಭಾಗ 1, ಭಾಗ 2 ಎಂದು ಬಂದಿದ್ದವಾದರೂ.. ಸಕ್ಸಸ್ ಆದ ಮೇಲೆ ಅದೇ ಟೈಟಲ್ ಇಟ್ಟುಕೊಂಡು ಬಂದಂತವೇ.. ಆದರೆ ತೋತಾಪುರಿ ಹಾಗಲ್ಲ. ಎರಡೂ ಭಾಗಗಳನ್ನು ಮೊದಲೇ ಪ್ಲಾನ್ ಮಾಡಿಕೊಂಡು ಚಿತ್ರೀಕರಿಸಿಯೇ ಮೊದಲ ಭಾಗ ರಿಲೀಸ್ ಮಾಡುತ್ತಿದ್ದಾರೆ.

  ಇದೊಂದು ದಾಖಲೆ. ಹೊಸದು. ಕಾಮಿಡಿ ಚಿತ್ರವೊಂದು ಎರಡು ಭಾಗಗಳಲ್ಲಿ ಬರುವುದು ಮೊದಲೇ ಫಿಕ್ಸ್ ಆಗಿ ಬರುತ್ತಿರುವು ಸ್ಪೆಷಲ್ ಎಂದು ಚಿತ್ರತಂಡವೇ ಖುಷಿಯಾಗಿದೆ.

  ಜಗ್ಗೇಶ್ ಎದುರು ಆದಿತಿ ನಾಯಕಿ. ಡಾಲಿ ಎದುರು ಸುಮನ್ ರಂಗನಾಥ್.. ಅಲ್ಲೇ ಚಿತ್ರದ ಕುತೂಹಲದ ಎಳೆಯೊಂದು ಇದೆ.

  ನನ್ನದು ಶಕೀಲಾ ಬಾನು ಅನ್ನೋ ಮುಸ್ಲಿಂ ಯುವತಿಯ ಪಾತ್ರ. ಟೀಚರ್. ಎಲ್ಲರೂ ಮುಸ್ಲಿಮರು ಎಂದರೆ ಹೋಗ್ಬಿಟ್ಟಿ.. ಬಂದ್ಬಿಟ್ಟಿ.. ಎಂದೆಲ್ಲ ಬಳಸ್ತಾರೆ. ನನಗೆ ನಿರ್ದೇಶಕರು ಹಾಗೆಲ್ಲ ಮಾಡಿಲ್ಲ. ಮುಸ್ಲಿಮರಲ್ಲೂ ಚೆಂದದ ಕನ್ನಡ ಮಾತನಾಡುವವರಿದ್ದಾರೆ. ಅದೇ ರೀತಿ ಸ್ವಚ್ಛವಾದ ಕನ್ನಡದಲ್ಲೇ ಸಂಭಾಷಣೆ ಹೇಳೋಕೆ ಅವಕಾಶ ಕೊಟ್ಟಿದ್ದಾರೆ ಎಂದು ಥ್ರಿಲ್ ಆಗಿದ್ದು ಆದಿತಿ ಪ್ರಭುದೇವ.

  ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿ

 • ಸೆ.30 : ಜಗ್ಗೇಶ್, ರಿಷಬ್ ಶೆಟ್ಟಿಗೆ ಐಶ್ವರ್ಯಾ ರೈ, ಮಣಿರತ್ನಂ, ಹೃತಿಕ್ ರೋಷನ್ ಚಾಲೆಂಜ್

  ಸೆ.30 : ಜಗ್ಗೇಶ್, ರಿಷಬ್ ಶೆಟ್ಟಿಗೆ ಐಶ್ವರ್ಯಾ ರೈ, ಮಣಿರತ್ನಂ, ಹೃತಿಕ್ ರೋಷನ್ ಚಾಲೆಂಜ್

  ಸೆಪ್ಟೆಂಬರ್ 30. ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಹಬ್ಬವಾಗುವ ಸೂಚನೆಯನ್ನಂತೂ ನೀಡಿದೆ. ಸೆ.30ಕ್ಕೆ ಕನ್ನಡದಲ್ಲಿ ಇಬ್ಬರು ಸ್ಟಾರ್ ನಟರ ಚಿತ್ರಗಳು ತೆರೆ ಕಾಣುತ್ತಿವೆ.

  ರಿಷಬ್ ಶೆಟ್ಟರ ಕಾಂತಾರಾ. ಇದೇ ಮೊದಲ ಬಾರಿಗೆ  ತಾವು ನಾಯಕರಾಗಿರೋ ಚಿತ್ರಕ್ಕೆ ತಾವೇ ನಿರ್ದೇಶನ ಮಾಡಿರೋ ಸಿನಿಮಾ. ರಿಷಬ್ ಶೆಟ್ಟಿ, ಕಿಶೋರ್ ಕುಮಾರ್ ಜುಗಲ್‍ಬಂದಿ ವಾರೆವ್ಹಾ ಎನಿಸುವಂತಿದೆ. ಹೊಂಬಾಳೆ ಬ್ಯಾನರ್‍ನ ಸಿನಿಮಾ ಇದು.

  ಅದೇ ದಿನ ಜಗ್ಗೇಶ್ ಅಭಿನಯದ ತೋತಾಪುರಿ -ಭಾಗ 1 ರಿಲೀಸ್ ಆಗುತ್ತಿದೆ. ವಿಜಯ ಪ್ರಸಾದ್ ನಿರ್ದೇಶನದ ತೋತಾಪುರಿಯಲಿ ಜಗ್ಗೇಶ್ ಎದುರು ಆದಿತಿ ಪ್ರಭುದೇವ, ಡಾಲಿ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾ ದತ್ ಮೊದಲಾದವರು ನಟಿಸಿದ್ದಾರೆ.

  ಅದೇ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗುತ್ತಿರುವುದು ಪೊನ್ನಿಯನ್ ಸೆಲ್ವನ್. ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿ ಐಶ್ವರ್ಯಾ ರೈ ಸೇಡಿನ ರಾಣಿಯಾಗಿದ್ದಾರೆ. ಚೋಳರಾ ಕಾಲದ ಐತಿಹಾಸಿಕ ಕಥೆಯಲ್ಲಿ ತ್ರಿಷಾ, ವಿಕ್ರಂ, ಕಾರ್ತಿ, ಜಯಂ ರವಿ, ಪ್ರಭು, ಶರತ್ ಕುಮಾರ್, ಪ್ರಕಾಶ್ ರೈ.. ಸೇರಿದಂತೆ ಘಟಾನುಘಟಿಗಳೇ ನಟಿಸಿದ್ದಾರೆ. ಎ.ಆರ್.ರೆಹಮಾನ್ ಮ್ಯೂಸಿಕ್ಕಿದೆ.

  ಅತ್ತ.. ಹಿಂದಿಯಲ್ಲಿ ವಿಕ್ರಂ ವೇದ. ತಮಿಳಿನ ವಿಕ್ರಂವೇದದ ಯಥಾವತ್ ರೀಮೇಕ್ ಆದರೂ ಹೃತಿಕ್ ರೋಷನ್, ಸೈಫ್ ಅಲಿ ಖಾನ್ ಹೀರೋ. ಹೀಗಾಗಿ ನಿರೀಕ್ಷೆಯೂ ಜಾಸ್ತಿಯೇ ಇದೆ.

  ಒಟ್ಟಿನಲ್ಲಿ ಯಾರು ಗೆಲ್ತಾರೆ ಅನ್ನೋ ಕುತೂಹಲವಂತೂ ಇದೆ.  ಎಲ್ಲರೂ ಗೆಲ್ಲಲಿ ಎಂದು ಹಾರೈಸೋಣ.

 • ಸೆಪ್ಟೆಂಬರ್ 30ಕ್ಕೆ ಕಾಂತಾರ ವರ್ಸಸ್ ತೋತಾಪುರಿ

  ಸೆಪ್ಟೆಂಬರ್ 30ಕ್ಕೆ ಕಾಂತಾರ ವರ್ಸಸ್ ತೋತಾಪುರಿ

  ಇಬ್ಬರು ಸ್ಟಾರ್ ನಟರ ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುವುದು ಹೊಸದಲ್ಲ. ಈಗದು  ವಿಶೇಷವೂ ಅಲ್ಲ. ಏಕೆಂದರೆ ಪ್ರೇಕ್ಷಕರ ಮುಂದೆ ಆಯ್ಕೆಗಳಿರುತ್ತವೆ. ಈ ಬಾರಿ ದಸರಾಗೆ ಕೂಡಾ ಹಾಗೆಯೇ ಆಗುತ್ತಿದೆ. ಸೆಪ್ಟೆಂಬರ್ 30ರಂದು ರಿಷಬ್ ಶೆಟ್ಟಿ ಮತ್ತು ಜಗ್ಗೇಶ್ ಚಿತ್ರಗಳು ಮುಖಾಮುಖಿಯಾಗುತ್ತಿವೆ.

  ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರಾ ಚಿತ್ರಕ್ಕೆ ಹೊಂಬಾಳೆ ಬ್ಯಾನರ್ ಬಂಡವಾಳ ಹೂಡಿದೆ. ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಪ್ರಮುಖ   ಪಾತ್ರದಲ್ಲಿ ನಟಿಸಿರುವ ಸಿನಿಮಾ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಬಂದ ಸಿಂಗಾರ ಸಿರಿಯೇ.. ಸಿನಿರಸಿಕರಿಗೆ ರಸಿಕತೆಯ ಕರಾವಳಿ ಅನುಭವ ಕೊಟ್ಟಿದೆ. ಈ ಶಿಕ್ಷಕರ ದಿನಾಚರಣೆ ದಿನ ಕಾಂತಾರ ಚಿತ್ರದ ಟ್ರೇಲರ್ ಹೊರಬೀಳಲಿದೆ.

  ಅದೇ ದಿನ ರಿಲೀಸ್ ಆಗುತ್ತಿರುವ ಸಿನಿಮಾ ತೋತಾಪುರಿ. ಈಗಾಗಲೇ ಬಾಗ್ಲು ತೆಗಿ ಮೇರಿ ಜಾನ್.. ಸೇರಿದಂತೆ ಚಿತ್ರದ ಹಾಡು ಮತ್ತು ಚೇಷ್ಟೆಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಜಗ್ಗೇಶ್, ಆದಿತಿ ಪ್ರಭುದೇವ, ಡಾಲಿ ಧನಂಜಯ, ಸುಮನ್ ರಂಗನಾಥ್, ದತ್ತಣ್ಣ, ಪವಿತ್ರಾ ಲೋಕೇಶ್ ಪ್ರಮುಖ ಪಾತ್ರದಲ್ಲಿರೋ ಚಿತ್ರದ ಮೇಲೆ ಭಾರಿ ನಿರೀಕ್ಷೆಯೂ ಇದೆ. ವಿಜಯ ಪ್ರಸಾದ್ ನಿರ್ದೇಶನದ ತೋತಾಪುರಿಯನ್ನು ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿದೆ. ಕೆ.ಎ.ಸುರೇಶ್ ನಿರ್ಮಾಣದ ಚಿತ್ರವೂ ಸೆ.30ರಂದೇ ರಿಲೀಸ್ ಆಗುತ್ತಿದ