ಯಜಮಾನ ಚಿತ್ರದ ಮೂರನೇ ಹಾಡಿನ ಲಿರಿಕಲ್ ವಿಡಿಯೋ ಹೊರಬಿದ್ದಿದೆ. ಬಸಣ್ಣಿ ಹಾಡಿನ ಸಾಹಿತ್ಯ ಕೇಳಿದವರು ಭಟ್ಟರು ಇಂಥ ಪದಗಳನ್ನ ಅದೆಲ್ಲಿಟ್ಟಿದ್ರು ಅಂತಾ ಬೆರಗುಗೊಂಡಿದ್ದಾರೆ.
ಹಾಡಿನಲ್ಲಿ ಭಟ್ಟರು ಗಾದೆ, ನಾಣ್ಣುಡಿ, ಆಡುಮಾತು, ಪೋಲಿಮಾತು ಎಲ್ಲವನ್ನೂ ಹದವಾಗಿ ಬೆರೆಸಿ ಕಟ್ಟಿಕೊಟ್ಟಿದ್ದಾರೆ.
ಹುಡ್ಗೀನ ಕೈ ತೊಳ್ಕೊಂಡು ಮುಟ್ಬೇಕು.. ಸಂಬಂಧ ಫಿಕ್ಸ್ ಮಾಡೋಕೆ ಬಂದೀನಿ.. ಲಕ್ಸು ಸೋಪ್ ಹಾಕ್ಕೊಂಡು ಜಳಕ ಮಾಡೀನಿ.. ಉಳ್ಳಾಗಡ್ಡಿ ತಿನ್ನೋದು ಯಾಕೆ ಅನ್ನೋದೂ ಹಾಡಿನ ಪದವಾಗಿದೆ.
ಇಳಕಲ್ ಸೀರೆ ಮೊಣಕಾಲಿನ ಮೇಲೆ ಉಡೋದ್ಯಾಕೆ, ಮಕಮಲ್ ಟೋಪಿ, ತಮ್ಮ ಶ್ರೀದೇವಿ ಮೇಲಿನ ಪ್ರೀತಿ.. ಎಲ್ಲವನ್ನೂ ಹಾಡಿಗೆ ತಂದಿದ್ದಾರೆ. ದರ್ಶನ್ ಅವರಿಗಾಗಿ ಭಟ್ಟರು ಡಿಫರೆಂಟ್ ಡಿಫರೆಂಟ್ ಪದಗಳ ಹಾಡನ್ನು ಸೃಷ್ಟಿಸಿ ಒನ್ಸ್ ಎಗೇಯ್ನ್ ಹಾಡನ್ನು ಗೆಲ್ಲಿಸಿದ್ದಾರೆ.
ಅಪ್ಪಟ ತುಂಡೈಕ್ಳ ಹಾಡಿಗೆ ಹರಿಕೃಷ್ಣ ಸಂಗೀತ ಜೋಡಿಸಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರೋ ಚಿತ್ರಕ್ಕೆ ಶೈಲಜಾ ನಾಗ್ ನಿರ್ಮಾಪಕಿ. ಹಾಡು ಹಿಟ್ಟಾಗಿದೆ. ವೈರಲ್ಲಾಗಿದೆ.