` roberrt, - chitraloka.com | Kannada Movie News, Reviews | Image

roberrt,

  • ರಾಬರ್ಟ್ ವಿಜಯಯಾತ್ರೆಗೆ ಕೊರೊನಾ ಬ್ರೇಕ್

    ರಾಬರ್ಟ್ ವಿಜಯಯಾತ್ರೆಗೆ ಕೊರೊನಾ ಬ್ರೇಕ್

    ಎಲ್ಲವೂ ಪ್ಲಾನ್ ಪ್ರಕಾರವೇ ಆಗಿದ್ದರೆ, ಇಂದಿನಿಂದ ರಾಬರ್ಟ್ ವಿಜಯಯಾತ್ರೆ ಶುರುವಾಗಬೇಕಿತ್ತು. ಬಾಕ್ಸಾಫೀಸ್‍ನಲ್ಲಿ ದೂಳೆಬ್ಬಿಸಿರುವ ರಾಬರ್ಟ್ ವಿಜಯಯಾತ್ರೆಗೆ ಎಲ್ಲ ತಯಾರಿಯನ್ನೂ ಮಾಡಿಕೊಂಡಿದ್ದ ಚಿತ್ರತಂಡ, ಕಡೆಯ ಗಳಿಗೆಯಲ್ಲಿ ವಿಜಯಯಾತ್ರೆಯನ್ನು ರದ್ದು ಮಾಡಿದೆ.

    ಹೆಚ್ಚು ಜನ ಸೇರಬಾರದು, ಕೊರೊನಾ ಹೆಚ್ಚುತ್ತಿದೆ. ದಯವಿಟ್ಟು ಜಾಗ್ರತೆಯಿಂದಿರಿ ಎಂಬ ಸರ್ಕಾರದ ಮನವಿಯೇ ಈ ವಿಜಯಯಾತ್ರೆ ನಿಲ್ಲಲು ಕಾರಣ. ಕೊರೊನಾ 2ನೇ ಅಲೆಯ ತೀವ್ರತೆ ಕಡಿಮೆಯಾದ ಮೇಲೆ ವಿಜಯಯಾತ್ರೆ ಮಾಡೋಣ ಎಂದು ಹೇಳಿದ್ದಾರೆ ದರ್ಶನ್. ಯಾವಾಗ ಮಾಡಿದರೇನು.. ದರ್ಶನ್ ಎಂಟ್ರಿ ಕೊಟ್ಟ ಕ್ಷಣ.. ಜಾತ್ರೆ ಶುರು. ವೇಯ್ಟಿಂಗ್ ಎನ್ನುತ್ತಿದ್ದಾರೆ ಡಿ ಫ್ಯಾನ್ಸ್.

  • ರಾಬರ್ಟ್ ಶೂಟಿಂಗ್ ಕಂಪ್ಲೀಟ್

    roberrt shooting complete

    ತರುಣ್ ಸುಧೀರ್ ನಿರ್ದೇಶನದ ಚಿತ್ರ ರಾಬರ್ಟ್. ಚಾಲೆಂಜಿಂಗ್ ಸ್ಟಾರ್ ಮುತುವರ್ಜಿ ವಹಿಸಿ ನಟಿಸುತ್ತಿರುವ ಚಿತ್ರವಿದು. ಈ ಚಿತ್ರಕ್ಕಾಗಿ ತಮ್ಮ ರೆಗ್ಯುಲರ್ ರೂಲ್ಸ್ ಮೀರಿ ಶೂಟಿಂಗ್ ಮಾಡೋಕೆ ಹೆಚ್ಚು ದಿನಗಳ ಅವಕಾಶ ಕೊಟ್ಟಿದ್ದಾರೆ ದರ್ಶನ್. ಕ್ರಿಸ್ಮಸ್ ಹಬ್ಬಕ್ಕೆ ಫಸ್ಟ್ ಲುಕ್ ರಿಲೀಸ್ ಮಾಡಲು ರೆಡಿಯಾಗಿರುವ ಚಿತ್ರತಂಡ ಶೂಟಿಂಗ್ ಪೂರೈಸಿದೆ.

    ವಾರಾಣಸಿಯಲ್ಲಿ ರಾಬರ್ಟ್ ಚಿತ್ರದ ಬಹುಮುಖ್ಯ ಭಾಗದ ಶೂಟಿಂಗ್ ಮಾಡಲಾಗಿದ್ದು, ಅದೊಂದು ಅದ್ಭುತ ಅನುಭವ ಎಂದಿದ್ದಾರೆ ತರುಣ್. ಪ್ಲಾನ್ ಪ್ರಕಾರ ವಾರಾಣಸಿಗೆ ಸೆಪ್ಟೆಂಬರ್ನಲ್ಲಿಯೇ ಹೋಗಬೇಕಿತ್ತಂತೆ. ಆದರೆ, ಆಗ ಪ್ರವಾಹ ಅಡ್ಡ ಬಂತು. ಮತ್ತೆ ನವೆಂಬರ್ನಲ್ಲಿ ಹೋದಾಗ ಗಂಗೆ ಮೈದುಂಬಿ ಹರಿಯುತ್ತಿದ್ದಳು. ಇಡೀ ತಂಡ ವಾಪಸ್ ಬಂತು. ಈಗ 3ನೇ ಬಾರಿಗೆ ಹೋದಾಗ ಕಾಶಿ ವಿಶ್ವನಾಥನ ದಯೆಯೊಂದಿಗೆ ಗಂಗಾರತಿಯ ಪುಣ್ಯ ದರ್ಶನವೂ ಸಿಕ್ಕಿದೆ ಎಂದಿದ್ದಾರೆ ತರುಣ್ ಸುಧೀರ್. ಉಮಾಪತಿ ರಾಬರ್ಟ್ ಚಿತ್ರದ ನಿರ್ಮಾಪಕ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.

  • ರಾಬರ್ಟ್ ಸಾಂಗ್ ಶೂಟಿಂಗ್ ಈಗ ಎಲ್ಲಿ ಗೊತ್ತಾ..?

    roberrt song shoot location hunt in india itself

    2020ರ ಸೆನ್ಸೇಷನ್ ಆಗಲಿರುವ ಸಿನಿಮಾ ರಾಬರ್ಟ್. ಏಪ್ರಿಲ್ 9ಕ್ಕೆ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ರಾಬರ್ಟ್ ಟೀಂ, ಈಗ ಚಿತ್ರದ ಬಹುಮುಖ್ಯ ಹಾಡಿನ ಶೂಟಿಂಗ್‍ಗೆ ಗುಜರಾತ್‍ನತ್ತ ಹೊರಟಿದೆ.

    ಹಾಡಿಗಾಗಿ ವಿದೇಶಕ್ಕೆ ಹೋಗಬೇಕಿದ್ದ ರಾಬರ್ಟ್ ಟೀಂ, ಕೊರೋನಾ ವೈರಸ್ ಕಾರಣದಿಂದಾಗಿ ಶೂಟಿಂಗ್ ಕ್ಯಾನ್ಸಲ್ ಮಾಡಿತ್ತು. ಸದ್ಯಕ್ಕೆ ಕೊರೋನಾ ರಿಲ್ಯಾಕ್ಸ್ ನೀಡದ ಹಿನ್ನೆಲೆ ಲೊಕೇಷನ್ ಶಿಫ್ಟ್ ಮಾಡಿದ್ದಾರೆ ನಿರ್ದೇಶಕ ತರುಣ್ ಸುಧೀರ್.


    ರಾಬರ್ಟ್ ಚಿತ್ರದ ರೊಮ್ಯಾಂಟಿಕ್ ಸಾಂಗ್ ಶೂಟಿಂಗ್ ಗುಜರಾತ್‍ನ ಕಛ್ ಪ್ರದೇಶದಲ್ಲ ನಡೆಯಲಿದೆಯಂತೆ. ದರ್ಶನ್ ಎದುರು ಆಶಾ ಭಟ್ ನಾಯಕಿ. ಸೋನಲ್ ಮಂಥೆರೋ ಕೂಡಾ ಚಿತ್ರದಲ್ಲಿದ್ದಾರೆ. ರೊಮ್ಯಾಂಟಿಕ್ ಸಾಂಗ್ ಜೋಡಿ ಯಾರು..? ಸಸ್ಪೆನ್ಸ್.. ಸಸ್ಪೆನ್ಸ್..

  • ರಾಬರ್ಟ್ ಸೀಕ್ರೆಟ್ ಹಿಂದೆ ಉಪ್ಪಿ ಟೆಕ್ನಿಕ್..!

    uppi's trick in roberrt movie

    ರಾಬರ್ಟ್ ಸಿನಿಮಾದ ಟಾಕಿ ಪೋರ್ಷನ್ ಶೂಟಿಂಗ್ ಮುಗಿದಿದೆ. ಇದು ತರುಣ್ ಸುಧೀರ್ ನಿರ್ದೇಶನದ 2ನೇ ಸಿನಿಮಾ. ಚೌಕ ಚಿತ್ರದ ನಂತರ ತರುಣ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ದರ್ಶನ್ ಅವರೇ ಹೀರೋ. ಮೊದಲ ಚಿತ್ರದಲ್ಲಿ ರಾಬರ್ಟ್ ಎಂಬ ಪಾತ್ರದ ಮೂಲಕವೇ ಅತಿಥಿ ನಟರಾಗಿದ್ದ ದರ್ಶನ್, ಈಗ ಅದೇ ಹೆಸರಿನ ಚಿತ್ರದಲ್ಲಿ ಹೀರೋ ಆಗಿರುವುದು ವಿಶೇಷ. ಆದರೆ, ಎಲ್ಲದಕ್ಕಿಂತ ಕುತೂಹಲ ಹುಟ್ಟಿಸಿರುವುದು ಚಿತ್ರದ ಕಥೆ ಏನಿರಬಹುದು ಅನ್ನೋದು.

    ಏಕೆಂದರೆ ಇದುವರೆಗೆ ತರುಣ್ ಹೊರಬಿಟ್ಟಿರೋದು ಎರಡೇ ಎರಡು ಪೋಸ್ಟರ್. ಕಳೆದ ದೀಪಾವಳಿಗೆ ಆಂಜನೇಯ ರಾಮಲಕ್ಷ್ಮಣರನ್ನು ಹೊತ್ತುಕೊಂಡು ಹೋಗುತ್ತಿದ್ದ ಪೋಸ್ಟರ್ ಇದ್ದರೆ, 2ನೇ ಪೋಸ್ಟರ್‍ನಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ದರ್ಶನ್ ಫೋಟೋ ಇತ್ತು. ಅಲ್ಲಿಯೂ ಅಷ್ಟೆ, ದರ್ಶನ್ ಮುಖ ದರ್ಶನ ಮಾಡಿಸಿಲ್ಲ. ಸಿಂಪಲ್ಲಾಗ್ ಹೇಳ್ಬೇಕಂದ್ರೆ, ರಾಬರ್ಟ್‍ನಲ್ಲಿ ದರ್ಶನ್ ಹೇಗಿದ್ದಾರೆ ಅನ್ನೋದು ತಾಜಾ ತಾಜಾ ಸೀಕ್ರೆಟ್ ಆಗಿಯೇ ಇದೆ. ಇದರ ಹಿಂದಿರೋದು ಏನು ಎಂದರೆ ತರುಣ್ ಸುಧೀರ್ ಉಪೇಂದ್ರ ಸ್ಟೈಲ್ ನೆನಪಿಸಿಕೊಳ್ತಾರೆ.

    ಉಪೇಂದ್ರ ಚಿತ್ರಗಳಲ್ಲಿ ಟೈಟಲ್ ಮತ್ತು ಪೋಸ್ಟರ್‍ಗಳು ಅತ್ಯಂತ ಪ್ರಧಾನ ಪಾತ್ರ ವಹಿಸಿದ್ದವು. ನಮಗೆ ಅದು ಕುತೂಹಲ ಹೆಚ್ಚಿಸುತ್ತಿತ್ತು. ಪೋಸ್ಟರ್ ನೋಡಿದ ಒಬ್ಬ ವ್ಯಕ್ತಿ, ಅ ಪೋಸ್ಟರ್ ಬಗ್ಗೆ 10 ಸೆಕೆಂಡ್ ತಲೆಕೆಡಿಸಿಕೊಂಡರೆ ಸಾಕು, ನಮ್ಮ ಶ್ರಮ ಮತ್ತು ಉದ್ದೇಶ ಸಾಥಕ ಎನ್ನುತ್ತಾರೆ ತರುಣ್.

    ಅಂದಹಾಗೆ.. ಉಪೇಂದ್ರ ಅವರ ಎ, ಉಪೇಂದ್ರ, ಸೂಪರ್, ಉಪ್ಪಿ 2 ಚಿತ್ರಗಳ ಪೋಸ್ಟರ್ ಅದೆಷ್ಟು ಕುತೂಹಲ ಹುಟ್ಟಿಸಿದ್ದವು ಎನ್ನುವುದು ಕನ್ನಡ ಚಿತ್ರರಸಿಕರಿಗೆ ಅರಿವಿದೆ. ಈಗ ಆ ಹಾದಿಯಲ್ಲಿ ರಾಬರ್ಟ್ ಮುನ್ನುಗ್ಗುತ್ತಿದೆ. ನಿಗೂಢಗಳ ಗಂಟುಮೂಟೆಗಳೊಂದಿಗೆ..

  • ರಾಬರ್ಟ್ ಸೃಷ್ಟಿಸಿದ ಹೊಸ ದಾಖಲೆ 78 ಕೋಟಿ..!

    ರಾಬರ್ಟ್ ಸೃಷ್ಟಿಸಿದ ಹೊಸ ದಾಖಲೆ 78 ಕೋಟಿ..!

    ರಾಬರ್ಟ್ ರಿಲೀಸ್ ಆಗೋಕು ಮುನ್ನವೇ ಹೊಸ ಹೊಸ ದಾಖಲೆಗಳನ್ನು ಬರೆದು ಮುನ್ನುಗ್ಗುತ್ತಿದೆ. ರಾಬರ್ಟ್ ಚಿತ್ರದ ಟ್ರೇಲರ್, ಹಾಡುಗಳು ಕನ್ನಡ ಮತ್ತು ತೆಲುಗಿನಲ್ಲಿ ಹೊಸ ಚರಿತ್ರೆಯನ್ನೇ ಬರೆಯುತ್ತಿವೆ. ಹೆಚ್ಚೂ ಕಡಿಮೆ 2 ಸಾವಿರ ಥಿಯೇಟರ್ಗಳಲ್ಲಿ ರಿಲೀಸ್ ಆಗೋಕೆ ಸಿದ್ಧವಾಗಿರುವ ರಾಬರ್ಟ್, ಈಗ ಬಿಡುಗಡೆಗೂ ಮೊದಲೇ ಹೊಸ ದಾಖಲೆ ಬರೆದಿದೆ.

    ರಾಬರ್ಟ್ ಚಿತ್ರದ ಕರ್ನಾಟಕದ ಡಿಸ್ಟ್ರಿಬ್ಯೂಷನ್ ರೈಟ್ಸ್ 78 ಕೋಟಿಗೆ ಮಾರಾಟವಾಗಿದೆಯಂತೆ. ಕೆಜಿಎಫ್ ನಂತರ ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾದ ದಾಖಲೆಗೀಗ ದರ್ಶನ್ ಅವರ ರಾಬರ್ಟ್ ಪಾತ್ರವಾಗಿದೆ. ದರ್ಶನ್ ಅವರ ಈ ಹಿಂದಿನ ಕುರುಕ್ಷೇತ್ರದ ದಾಖಲೆಯನ್ನೂ ರಾಬರ್ಟ್ ಬ್ರೇಕ್ ಮಾಡಿದೆ.

    ನಿರ್ಮಾಪಕ ಉಮಾಪತಿ ನಮ್ಮ ಚಿತ್ರದ ಹೀರೋ ಎನ್ನುತ್ತಿದ್ದರು ದರ್ಶನ್. ನಿರ್ದೇಶಕ ತರುಣ್ ಸುಧೀರ್ ಕೂಡಾ ಇದೇ ಮಾತು ಹೇಳಿದ್ದರು. ಹೀಗಾಗಿ ರಾಬರ್ಟ್ ಚಿತ್ರದ ರಿಯಲ್ ಹೀರೋ ಬಿಡಗಡೆಗೂ ಮೊದಲೇ ಫುಲ್ ಹ್ಯಾಪಿ.

  • ರಾಬರ್ಟ್ ಸೆಟ್‍ನಲ್ಲಿ ಡೈರೆಕ್ಟರ್ ಚತುಷ್ಟಯರ ಸಮಾಗಮ

    4 directors at roberrt set

    ತರುಣ್ ಸುಧೀರ್ : ಚೌಕ ಚಿತ್ರ ನಿರ್ದೇಶಿಸಿದ್ದವರು. ಈಗ ರಾಬರ್ಟ್ ನಿರ್ದೇಶಕ. ಪೋಸ್ಟರುಗಳ ಮೂಲಕವೇ ಕಿಚ್ಚು ಹಚ್ಚಿರುವ ಕ್ರಿಯಾಶೀಲ.

    ಹರಿ ಸಂತೋಷ್ : ಅಲೆಮಾರಿ, ಕಾಲೇಜ್ ಕುಮಾರದಂತಹ ಚಿತ್ರಗಳನ್ನು ನೀಡಿರುವ ಸಂತು, ಕನ್ನಡ, ತೆಲುಗು, ತಮಿಳಿನಲ್ಲೂ ಜನಪ್ರಿಯ. ಸದ್ಯಕ್ಕೆ ಬಿಚ್ಚುಗತ್ತಿ & ಬಂಪರ್ ಚಿತ್ರ ನಿರ್ದೇಶಿಸುತ್ತಿದ್ದಾರೆ.

    ಮಹೇಶ್ ಕುಮಾರ್ : ಅಯೋಗ್ಯ ಖ್ಯಾತಿಯ ನಿರ್ದೇಶಕ. ಮುಂದಿನದ್ದು ಮದಗಜ.

    ಚೇತನ್ ಕುಮಾರ್ : ಬಹದ್ದೂರ್, ಭರ್ಜರಿಯಂತಹ ಹಿಟ್ ಕೊಟ್ಟಿರುವ ಚೇತನ್, ಭರಾಟೆ ಹಿಂದಿದ್ದಾರೆ. ಬಂಪರ್ ಚಿತ್ರಕ್ಕೆ ಕಥೆ, ಚಿತ್ರಕಥೆ ಕೊಟ್ಟಿದ್ದಾರೆ.

    ಇವರೆಲ್ಲರೂ ಒಟ್ಟಿಗೆ ಸೇರಿದ್ದು ರಾಬರ್ಟ್ ಚಿತ್ರದ ಸೆಟ್‍ನಲ್ಲಿ. ಬಂಪರ್ ಹೀರೋ ಧನ್ವೀರ್, ದರ್ಶನ್ ಫ್ಯಾನ್. ಬಂಪರ್ ಪೋಸ್ಟರ್ ರಿಲೀಸ್ ಮಾಡಿದ್ದು ದರ್ಶನ್. ಹೀಗಾಗಿ ದರ್ಶನ್‍ರನ್ನು ನೋಡಲು ಹೋದಾಗ ಅಲ್ಲಿ ಡೈರೆಕ್ಟರ್ ಚತುಷ್ಟಯರ ಸಂಗಮವಾಗಿದೆ.

  • ರಾಬರ್ಟ್'ಗೆ ತೆಲುಗರ ನಾಡಿನಲ್ಲಿ 400+ ಥಿಯೇಟರ್ಸ್ ವೇಯ್ಟಿಂಗ್

    ರಾಬರ್ಟ್'ಗೆ ತೆಲುಗರ ನಾಡಿನಲ್ಲಿ 400+ ಥಿಯೇಟರ್ಸ್ ವೇಯ್ಟಿಂಗ್

    ರಾಬರ್ಟ್ ತೆಲುಗಿನಲ್ಲಿ ಮಾರ್ಚ್ 11ಕ್ಕೆ ರಿಲೀಸ್ ಆಗುತ್ತೋ ಇಲ್ಲವೋ ಅನ್ನೋದು ಅಧಿಕೃತವಾಗಿ ಇನ್ನೂ ಅನೌನ್ಸ್ ಆಗಿಲ್ಲ. ಆದರೆ, ತೆಲುಗು ವರ್ಷನ್ ಪ್ರಮೋಷನ್‍ಗೆ ಹೆಜ್ಜೆಯಿಟ್ಟಿದೆ ರಾಬರ್ಟ್ ಟೀಂ. ನಾಳೆ ಅಂದರೆ ಫೆಬ್ರವರಿ 3ರಂದು ರಾಬರ್ಟ್ ಚಿತ್ರದ ತೆಲುಗು ಟೀಸರ್ ರಿಲೀಸ್ ಆಗುತ್ತಿದೆ. ಮೂಲಗಳ ಪ್ರಕಾರ ತೆಲುಗಿನಲ್ಲಿಯೂ 400+ ಸೆಂಟರುಗಳಲ್ಲಿ ರಾಬರ್ಟ್ ರಿಲೀಸ್ ಆಗಲಿದೆಯಂತೆ.

    ಇಂಥಾದ್ದೊಂದು ಭರವಸೆ ಸಿಕ್ಕಿರೋ ಕಾರಣಕ್ಕೆ ರಾಬರ್ಟ್ ತೆಲುಗು ಟೀಸರ್‍ಗೆ ರೆಡಿಯಾಗಿದೆ ಉಮಾಪತಿ & ಟೀಂ. ನಿರ್ಮಾಪಕ ಉಮಾಪತಿ ಅವರನ್ನು ತೆಲುಗು ನಿರ್ಮಾಪಕರು ಮತ್ತು ವಿತರಕರು ಸನ್ಮಾನಿಸಿ ತೆಲುಗು ಚಿತ್ರರಂಗಕ್ಕೆ ಸ್ವಾಗತ ಕೋರಿದ್ದಾರೆ. 

  • ರಾಬರ್ಟ್‍ಗೆ  ಚೇತನ್ ಭರ್ಜರಿ ಸಾಹಿತ್ಯ

    roberrt introduction song written by bharjari chethan

    ಭರ್ಜರಿ ಚೇತನ್ ಕುಮಾರ್ ಹೀರೋ ಇಂಟ್ರೊಡಕ್ಷನ್ ಸಾಂಗ್ ಬರೆಯೋದ್ರಲ್ಲಿ ಎತ್ತಿದ ಕೈ. ಈಗ ದರ್ಶನ್ ಸಿನಿಮಾ ರಾಬರ್ಟ್ ಭಯಂಕರ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ. ಈ ಚಿತ್ರಕ್ಕೆ ಚೇತನ್ ಸಾಹಿತ್ಯ ಇಲ್ಲದೇ ಇದ್ರೆ ಹೇಗೆ..? ಯೆಸ್.. ರಾಬರ್ಟ್ ಚಿತ್ರದಲ್ಲಿ ಚೇತನ್ ಹಾಡು ಬರೆದಿದ್ದಾರೆ.

    ಅರ್ಜುನ್ ಜನ್ಯ, ಚೇತನ್ ಕಾಂಬಿನೇಷನ್ ಹಿಟ್ ಜೋಡಿ. ತರುಣ್ ಸುಧೀರ್, ಜನ್ಯ ಜೋಡಿಯೂ ಸೂಪರ್ ಡ್ಯೂಪರ್ ಹಿಟ್. ದರ್ಶನ್ ಚಿತ್ರಕ್ಕೂ ಅದ್ಭುತ ಮ್ಯೂಸಿಕ್ ಕೊಟ್ಟಿರೋ ಕ್ರೆಡಿಟ್ಟು ಜನ್ಯಗೆ ಇದೆ. ಹೀಗಾಗಿಯೇ ರಾಬರ್ಟ್ ಚಿತ್ರದ ಮೇಲೆ, ಚೇತನ್ ಬರೆದಿರುವ ಹಾಡಿನ ಮೇಲೆ ಭಾರಿ ಪ್ರಮಾಣದ ನಿರೀಕ್ಷೆ ಇದೆ. ರಾಬರ್ಟ್ ಬೇರೆ ಭಾಷೆಯಲ್ಲೂ ರಿಲೀಸ್ ಆಗುತ್ತಿದ್ದು, ಏಪ್ರಿಲ್ 9ಕ್ಕೆ ತೆರೆಗೆ ಬರಲಿದೆ ಎನ್ನಲಾಗಿದೆ.

  • ರಾಬರ್ಟ್‍ಗೆ ತೊಂದರೆ ಇಲ್ಲ ; ದ.ಭಾ. ಫಿಲಂ ಚೇಂಬರ್

    ರಾಬರ್ಟ್‍ಗೆ ತೊಂದರೆ ಇಲ್ಲ ; ದ.ಭಾ. ಫಿಲಂ ಚೇಂಬರ್

    ರಾಬರ್ಟ್ ಚಿತ್ರವನ್ನು ಮಾರ್ಚ್ 11ರಂದು ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ರಿಲೀಸ್ ಮಾಡಬೇಕು. ಆದರೆ ಡೇಟ್ ಘೋಷಿಸಿದ ನಂತರ ತೆಲುಗು ಚಿತ್ರಗಳಿಗಾಗಿ ರಾಬರ್ಟ್ ಮುಂದೂಡಲು ಹೇಳುತ್ತಿದ್ದಾರೆ. ಕನ್ನಡದಲ್ಲಿ ರಿಲೀಸ್ ಆದ ಒಂದು ವಾರದ ನಂತರ ಅಂಧ್ರ, ತೆಲಂಗಾಣದಲ್ಲಿ ರಿಲೀಸ್ ಮಾಡಬೇಕು. ಇದು ರಾಬರ್ಟ್ ಚಿತ್ರಕ್ಕೆ ಆಗುತ್ತಿರುವ ಅನ್ಯಾಯ ಎಂದು ರಾಬರ್ಟ್ ಚಿತ್ರತಂಡ ಸಿಡಿದೆದ್ದಿತ್ತು.

    ಹೆಚ್ಚೂ ಕಡಿಮೆ ಒಂದು ದಶಕದ ನಂತರ ಚೇಂಬರ್`ಗೆ ಭೇಟಿ ಕೊಟ್ಟಿದ್ದ ದರ್ಶನ್, ರಾಬರ್ಟ್ ಬಿಡುಗಡೆ ವಿವಾದ ಇತ್ಯರ್ಥಕ್ಕೆ ಮನವಿ ಮಾಡಿದ್ದರು. ಭಾನುವಾರ ಚೆನ್ನೈನಲ್ಲಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯಕಾರಿ ಸಮಿತಿ ಸಭೆ ಇತ್ತು. ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್, ಕಾರ್ಯದರ್ಶಿ ಎನ್.ಎಂ.ಸುರೇಶ್  ಹಾಗೂ ಥಾಮಸ್ ಡಿಸೋಜಾ ವಿವಾದವನ್ನು ತೆಲುಗು ವಾಣಿಜ್ಯ ಮಂಡಳಿ ಅಧ್ಯಕ್ಷರ ಗಮನಕ್ಕೆ ತಂದರು. ಮನವಿ ಸ್ವೀಕರಿಸಿದ ತೆಲುಗು ಚೇಂಬರ್ ಅಧ್ಯಕ್ಷ ಸಿ. ಕಲ್ಯಾಣ್ ರಾಬರ್ಟ್ ಚಿತ್ರಕ್ಕೆ ಯಾವುದೇ ತೊಂದರೆಯಾಗದಂತೆ ಬಿಡುಗಡೆಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.

  • ರಾಬರ್ಟ್‍ಗೆ ಮಾಸ್ಟರ್ ಚಾಲೆಂಜ್

    vijays master and roberrt to clash at box office on april 9th

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಇದೇ ಏಪ್ರಿಲ್ 9ಕ್ಕೆ ರಿಲೀಸ್ ಎನ್ನುವುದು ಹೆಚ್ಚೂ ಕಡಿಮೆ ಪಕ್ಕಾ ಆಗಿದೆ. ಏಪ್ರಿಲ್‍ನಲ್ಲಿ ಕನ್ನಡದಲ್ಲೇ ಸ್ಟಾರ್ ಚಿತ್ರಗಳ ಮೆರವಣಿಗೆ ಫಿಕ್ಸ್ ಆಗಿದೆ. ಹೀಗಿರುವಾಗ ರಾಬರ್ಟ್‍ಗೆ ತಮಿಳು ಸ್ಟಾರ್ ವಿಜಯ್ ಚಿತ್ರವೂ ಪೈಪೋಟಿ ಒಡ್ಡೋಕೆ ಬರ್ತಿದೆ.

    ಏಪ್ರಿಲ್ 9ಕ್ಕೆ ವಿಜಯ್ ಅಭಿನಯದ ಮಾಸ್ಟರ್ ರಿಲೀಸ್ ಆಗುತ್ತಿದೆ. ತಮಿಳಿನ ಮಾಸ್ಟರ್, ಕರ್ನಾಟಕದಲ್ಲೂ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ತಮಿಳು, ತೆಲುಗು ಸ್ಟಾರ್ ಚಿತ್ರಗಳು ಇತ್ತೀಚೆಗೆ ಭರ್ಜರಿ ಓಪನಿಂಗ್ ಪಡೆಯುತ್ತಿರುವುದು ರಹಸ್ಯವೇನೂ ಅಲ್ಲ. ಹೀಗಾಗಿ ರಾಬರ್ಟ್ ಚಿತ್ರಕ್ಕೆ ವಿಜಯ್ ಚಿತ್ರ ಎಷ್ಟರಮಟ್ಟಿಗೆ ಫೈಟ್ ಕೊಡಲಿದೆ.. ಕಾದು ನೋಡಬೇಕು.

    ರಾಬರ್ಟ್ 2020ರಲ್ಲಿ ರಿಲೀಸ್ ಆಗುತ್ತಿರುವ ಮೊದಲ ದರ್ಶನ್ ಸಿನಿಮಾ. ತರುಣ್ ಸುಧೀರ್ ದೊಡ್ಡ ಗ್ಯಾಪ್ ನಂತರ ಸ್ವತಃ ನಿರ್ದೇಶನ ಮಾಡಿರುವ ಸಿನಿಮಾ. ಸ್ಟಾರ್ ನಿರ್ಮಾಪಕ ಉಮಾಪತಿ ಬ್ಯಾನರಿನಲ್ಲಿ ದರ್ಶನ್ ನಟಿಸಿರುವ ಮೊದಲ ಸಿನಿಮಾ. ಜೊತೆಗೆ ರಾಬರ್ಟ್ ಚಿತ್ರದಲ್ಲಿ ಭರ್ಜರಿ ಸ್ಟಾರ್ ಕಾಂಬಿನೇಷನ್ ಇದೆ. ಈ ಚಿತ್ರಕ್ಕೆ ತಮಿಳಿನ ಮಾಸ್ಟರ್ ಸರಿಸಾಟಿಯಾಗುತ್ತಾ..? ನೋ ಚಾನ್ಸ್.

  • ರಾಮನವಮಿಗೆ ರಾಬರ್ಟ್ ಜೈ ಶ್ರೀರಾಮ ಹಾಡು ರಿಲೀಸ್

    roberrt song release for ramnavami

    ಈ ಕೊರೋನಾ ಒಂದು ಬರದೇ ಹೋಗಿದ್ದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಇಷ್ಟು ಹೊತ್ತಿಗೆ ಹಬ್ಬದ ಸಿದ್ಧತೆಯಲ್ಲಿರ್ತಾ ಇದ್ರು. ಆದರೆ, ಕೊರೋನಾದಿಂದಾಗಿ ಏ.9ಕ್ಕೆ ರಿಲೀಸ್ ಆಗಬೇಕಿದ್ದ ರಾಬರ್ಟ್ ರಿಲೀಸ್ ಮುಂದಕ್ಕೆ ಹೋಗಿದೆ. ಮೇ ತಿಂಗಳಿಗೆ ರಿಲೀಸ್ ಎನ್ನುತ್ತಿದ್ದರೂ, ಅಧಿಕೃತವಾಗಿ ಘೋಷಿಸುವ ಸ್ಥಿತಿಯಲ್ಲಿ ಯಾರೂ ಇಲ್ಲ. ಇದರ ನಡುವೆಯೇ ರಾಮನವಮಿಗೆ ಭರ್ಜರಿ ಗಿಫ್ಟ್ ಕೊಡೋಕೆ ರಾಬರ್ಟ್ ಟೀಂ ರೆಡಿ.

    ಏ.1ರಂದು ರಾಬರ್ಟ್ ಚಿತ್ರದ ರಾಮ ರಾಮ ಹಾಡಿನ ಇನ್ನೊಂದು ವರ್ಷನ್ ವಿಡಿಯೋ ಸಾಂಗ್ ರಿಲೀಸ್ ಆಗುತ್ತಿದೆ. ಈಗಾಗಲೇ ಒಂದು ವರ್ಷನ್ ಹಾಡು ಬಂದಿದೆ. ಇದು ಇನ್ನೊಂದು ತುಣುಕು. ಇದರಲ್ಲಿ ಅಂಥಾ ಸ್ಪೆಷಲ್ ಏನಿದೆ..? ನಿರ್ದೇಶಕ ತರುಣ್ ಸುಧೀರ್ ಗುಟ್ಟು ಬಿಟ್ಟುಕೊಡಲ್ಲ.

    ಸ್ಸೋ.. ಏ.1ರಂದು ಕೂಡಾ ಮನೆಯಲ್ಲೇ ಇರಿ, ಯೂಟ್ಯೂಬಲ್ಲಿ ಹಾಡು ನೋಡಿ. ಜೈ ಶ್ರೀರಾಮ್ ಎಂದು ಹಾಡಿ.. ಕುಣಿದು ಕುಪ್ಪಳಿಸಿ.

  • ರಿಷಬ್ ಶೆಟ್ಟಿಗೆ ಕಾಡಿದ್ದ ಖಳನಾಯಕರಿಂದಲೇ ರಾಬರ್ಟ್‍ಗೂ  ಕಾಟ..!

    ರಿಷಬ್ ಶೆಟ್ಟಿಗೆ ಕಾಡಿದ್ದ ಖಳನಾಯಕರಿಂದಲೇ ರಾಬರ್ಟ್‍ಗೂ  ಕಾಟ..!

    ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ರಿಷಬ್ ಶೆಟ್ಟಿ ಅವರ ಹೀರೋ ಚಿತ್ರಕ್ಕೆ ಪೈರಸಿ ಕ್ರಿಮಿನಲ್ಸ್ ಕಾಟ ಎದುರಾಗಿತ್ತು. ಒಂದು ಲಿಂಕ್ ಡಿಲೀಟ್ ಮಾಡಿದರೆ ಮತ್ತೊಂದು ಲಿಂಕ್ನಲ್ಲಿ ಸಿನಿಮಾ ಅಪ್ಲೋಡ್ ಆಗುತ್ತಿತ್ತು.ಈ ಬಗ್ಗೆ ತಮ್ಮ ಅಸಹಾಯಕತೆ ತೋಡಿಕೊಂಡಿದ್ದರು ರಿಷಬ್ ಶೆಟ್ಟಿ. ಇದರ ನಡುವೆಯೂ ಹೀರೋ ಸಿನಿಮಾ ಥಿಯೇಟರುಗಳಲ್ಲಿ ಒಳ್ಳೆಯ ಕಲೆಕ್ಷನ್ ಕಾಣುತ್ತಿದೆ. ಆ ಪೈರಸಿ ಕ್ರಿಮಿನಲ್ಸ್ ದರ್ಶನ್ ಅಭಿನಯದ ರಾಬರ್ಟ್ ತಂಡವನ್ನೂ ಬಿಟ್ಟಿಲ್ಲ.

    ನಂಬಿದ್ರೆ ನಂಬಿ.. ಬಿಟ್ರೆ ಬಿಡಿ.. ಕೇವಲ ಒಂದೇ ದಿನದಲ್ಲಿ ರಾಬರ್ಟ್ ಟೀಂ ಡಿಲೀಟ್ ಮಾಡಿರುವ ಪೈರಸಿ ವಿಡಿಯೋ ಲಿಂಕ್ಗಳ ಸಂಖ್ಯೆ 3 ಸಾವಿರಕ್ಕೂ ಹೆಚ್ಚು. ಅತ್ತ ಥಿಯೇಟರುಗಳಲ್ಲಿ ಫಸ್ಟ್ ಡೇ ದಾಖಲೆ ಬರೆದಿರೋ ರಾಬರ್ಟ್ ಸಿನಿಮಾ ಈಗ ಪೈರಸಿ ವಿರುದ್ಧ ಸಮರವನ್ನೇ ಸಾರಿದೆ.

    ನಿರ್ಮಾಪಕ ಉಮಾಪತಿ ಒಂದು ಕಡೆ ಸಿನಿಮಾ ಸೂಪರ್ ಸಕ್ಸಸ್ ಕಂಡಿರುವ ಖುಷಿಯಲ್ಲಿದ್ದರೆ, ಮತ್ತೊಂದು ಕಡೆ ಆ ಖುಷಿಯನ್ನೂ ಮರೆತು ಪೈರಸಿ ವಿರುದ್ಧ ಹೋರಾಡಬೇಕಾಗಿ ಬಂದಿದೆ. ಆರಂಭದಲ್ಲೇ ನಿರ್ಮಾಪಕ ಉಮಾಪತಿ ಇಂತಹ ಪೈರಸಿ ಮಾಡುವವರ ವಿರುದ್ಧ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಆ ಎಚ್ಚರಿಕೆಗೂ ಜಗ್ಗದೆ ದುರ್ಮಾರ್ಗಕ್ಕಿಳಿದಿದ್ದಾರೆ ಪೈರಸಿ ವೀರರು.

    ಚಿತ್ರಲೋಕದ ಮನವಿಯೂ ಇಷ್ಟೆ, ಚಿತ್ರಮಂದಿರಗಳನ್ನು ಚಿತ್ರಮಂದಿರದಲ್ಲೇ ನೋಡಿ. ಆಗ ಮಾತ್ರ ಕನ್ನಡ ಚಿತ್ರರಂಗ, ಕನ್ನಡ, ಕೋಟಿ ಕೋಟಿ ಸುರಿದ ನಿರ್ಮಾಪಕ ಎಲ್ಲರೂ ಉಳಿಯುತ್ತಾರೆ. ಪೈರಸಿಯಲ್ಲಿ ನೋಡಿದರೆ ಅದರ ಲಾಭ ಯಾವನೋ ಕಣ್ಣಿಗೆ ಕಾಣದ ಕ್ರಿಮಿನಲ್ ಜೇಬು ಸೇರುತ್ತದೆ. ಅಂತಹ ತಪ್ಪು ಮಾಡಬೇಡಿ.

  • ವಿನೋದ್ ಪ್ರಭಾಕರ್ ರಾಬರ್ಟ್ ರಗಡ್ ಲುಕ್

    Vinod Prabhakar's Rugged Look In 'Roberrt' Out

    ರಾಬರ್ಟ್, 2020ರಲ್ಲಿ ದೂಳೆಬ್ಬಿಸಬೇಕಿದ್ದ ಸಿನಿಮಾ, ಕೊರೊನಾದಿಂದಾಗಿ 2021ಕ್ಕೆ ಪೋಸ್ಟ್‍ಪೋನ್ ಆಗಿದೆ. ಚಿತ್ರ ಘೋಷಣೆಯಾದಾಗಿನಿಂದ ಕುತೂಹಲ ಹುಟ್ಟಿಸುತ್ತಲೇ ಬಂದಿರೋ ರಾಬರ್ಟ್, ನಟ ವಿನೋದ್ ಪ್ರಭಾಕರ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಲುಕ್ ರಿಲೀಸ್ ಮಾಡಿದೆ.

    ಗಡ್ಡಧಾರಿಯಾಗಿ, ಗನ್ ಹಿಡಿದಿರುವ ವಿನೋದ್ ಪ್ರಭಾಕರ್, ಕಂಪ್ಲೀಟ್ ರಗಡ್ ಲುಕ್‍ನಲ್ಲಿದ್ದಾರೆ. ವಿನೋದ್ ಪ್ರಭಾಕರ್, ದರ್ಶನ್ ಜೊತೆ ನಟಿಸುತ್ತಿರುವುದು ಹೊಸದೇನಲ್ಲ. ನವಗ್ರಹ ಚಿತ್ರದಲ್ಲಿ ಒಟ್ಟಿಗೇ ನಟಿಸಿದ್ದರಷ್ಟೇ ಅಲ್ಲ, ಯಜಮಾನ ಚಿತ್ರದಲ್ಲಿ ಹಾಡೊಂದರಲ್ಲಿ ಕುಣಿದು ಕುಪ್ಪಳಿಸಿದ್ದರು. ಈಗ ರಾಬರ್ಟ್‍ಗೆ ಜೊತೆಯಾಗಿದ್ದಾರೆ.

    ವಿನೋದ್ ಪ್ರಭಾಕರ್‍ಗೆ ದರ್ಶನ್, ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ಉಮಾಪತಿ ಸೇರಿದಂತೆ ಇಡೀ ಚಿತ್ರತಂಡ ಹುಟ್ಟುಹಬ್ಬದ ಶುಭಾಶಯ ಕೋರಿದೆ.

  • ವ್ಹಾರೆ ವ್ಹಾ ರಾಬರ್ಟ್

    roberrt motion poster craze

    ರಾಬರ್ಟ್ ಚಿತ್ರದ ಮೋಷನ್ ಪೋಸ್ಟರ್ ಹೊರಬಿಟ್ಟಿದ್ದಾರೆ ತರುಣ್ ಸುಧೀರ್. ದರ್ಶನ್ ಖಡಕ್ ಲುಕ್ಕಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇಂಥಾದ್ದೊಂದು ಲುಕ್ಕಿನಲ್ಲಿ ದರ್ಶನ್ ಹಿಂದೆಂದೂ ಕಾಣಿಸಿಕೊಂಡಿಲ್ಲ ಎನ್ನುವುದೇ ತರುಣ್ ಸುಧೀರ್ ಸ್ಪೆಷಾಲಿಟಿ. ಸಂಪೂರ್ಣ ಹೊಸ ಲುಕ್ಕಿನಲ್ಲಿ ದರ್ಶನ್ ಖದರು ತೋರಿಸಿದ್ದಾರೆ.

    ಉದ್ದ ಕೂದಲು, ಹಣೆ, ತಲೆ ಮಧ್ಯೆ ಒಂದು ಪಟ್ಟಿ, ಗಡ್ಡ, ಜಾಕೆಟ್, ಎದೆಯ ಮೇಲೊಂದು ಶಿಲುಬೆ, ಕೈಯ್ಯಲ್ಲಿ ಗನ್ ಹಿಡಿದಿರುವ ದರ್ಶನ್, ಹಿಂಂದಿರೋ ಜೀಪಿನ ನಂಬರ್ ಪ್ಲೇಟ್‍ನಲ್ಲಿ ಡಿ ಬಾಸ್ ಅನ್ನೋ ಅಕ್ಷರ.. ವ್ಹಾವ್.. ಅಷ್ಟು ಸಾಕು ಅಭಿಮಾನಿಗಳು ಶಿಳ್ಳೆ ಹೊಡೆಯೋಕೆ. ಅಂದಹಾಗೆ ಇದುವರೆಗೆ ಚಿತ್ರದ ಮೂರು ಲುಕ್ ಹೊರಬಿದ್ದಿವೆ.

    1. ಬಾಲಕನ ಕೈ ಹಿಡಿದುಕೊಂಡು ರಾವಣನ ಪ್ರತಿಮೆ ಹಿಂದೆ ನಿಂತಿದ್ದ ಮೊದಲ  ಪೋಸ್ಟರ್ ಹಾಗೂ ಹೆಗಲ ಮೇಲೆ ರಾಮನನ್ನು ಕೂರಿಸಿಕೊಂಡ ಆಂಜನೇಯ 2ನೇ ಪೋಸ್ಟರ್‍ನಲ್ಲಿದ್ದ

    2. ನಂತರ ಹೊರಬಂದಿದ್ದು ಫಸ್ಟ್ ಲುಕ್. ಬೈಕಿನಲ್ಲಿ ಮುಖವನ್ನೇ ತೋರಿಸದೆ ಆಟವಾಡಿಸಿದ್ದರು ತರುಣ್.

    3. ಈಗ 3ನೇಯದಾಗಿ ಮೋಷನ್ ಪೋಸ್ಟರ್ ಹೊರಬಿದ್ದಿದೆ. ಕುತೂಹಲ ಇನ್ನಷ್ಟು ಹೆಚ್ಚಿದೆಯೇ ವಿನಾ.. ಕಥೆ ಕಲ್ಪನೆಗೂ ಸಿಗುತ್ತಿಲ್ಲ.

    ನಿರ್ಮಾಪಕ ಉಮಾಪತಿ ಬ್ಯಾನರ್‍ನಲ್ಲಿ ಬರುತ್ತಿರುವ ರಾಬರ್ಟ್ ಚಿತ್ರ ಶೂಟಿಂಗ್ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಸಂಗೀತಕ್ಕೆ ಈ ಚಿತ್ರದಲ್ಲೂ ಅರ್ಜುನ್ ಜನ್ಯಾ & ಹರಿಕೃಷ್ಣ ಕಾಂಬಿನೇಷನ್ ಇದೆ. ಆಶಾ ಭಟ್ ನಾಯಕಿ. ವಿನೋದ್ ಪ್ರಭಾಕರ್ ಇನ್ನೊಂದು ಪ್ರಮುಖ ಪಾತ್ರದಲ್ಲಿದ್ದಾರೆ.

  • ವ್ಹಾರೆವ್ಹಾ.. ದರ್ಶನ್ ಸ್ಟೆಪ್ ಬೊಂಬಾಟ್

    ವ್ಹಾರೆವ್ಹಾ.. ದರ್ಶನ್ ಸ್ಟೆಪ್ ಬೊಂಬಾಟ್

    ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ.. ರಾಬರ್ಟ್ ಚಿತ್ರದ ಮೊದಲ ವಿಡಿಯೋ ಸಾಂಗ್ ಇದು. ಹಾಡು ರಿಲೀಸ್ ಆಗುತ್ತಿದ್ದಂತೆ, ಎಂದಿನಂತೆ ವ್ಯೂವ್ಸ್.. ಹಿಟ್ಸ್.. ದಾಖಲೆ.. ನಿರ್ಮಾಣವಾಗುತ್ತಿದೆ. ಆದರೆ.. ಅವೆಲ್ಲಕ್ಕಿಂತ ದರ್ಶನ್ ಫ್ಯಾನ್ಸ್ ಥ್ರಿಲ್ಲಾಗಿರೋದು ದರ್ಶನ್ ಹಾಕಿರೋ ಸ್ಟೆಪ್ಪುಗಳಿಗೆ. ಸಾಧಾರಣವಾಗಿ ದರ್ಶನ್ ಡ್ಯಾನ್ಸುಗಳಿಂದ ದೂರ. ನಾನು ಒಳ್ಳೆಯ ಡ್ಯಾನ್ಸರ್ ಅಲ್ಲ ಎಂದು ಓಪನ್ ಆಗಿಯೇ ಹೇಳಿಕೊಳ್ಳೋ ದರ್ಶನ್, ಸಿಂಪಲ್ ಡ್ಯಾನ್ಸ್ ಸ್ಟೆಪ್ಪುಗಳನ್ನಷ್ಟೇ ಹಾಕ್ತಾರೆ. ಆದರೆ.. ರಾಬರ್ಟ್ ಚಿತ್ರದ ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ.. ಹಾಡಿನಲ್ಲಿ ಮಾತ್ರ ದರ್ಶನ್ ಮೈಚಳಿ ಬಿಟ್ಟು ಕುಣಿದಿದ್ದಾರೆ.

    ಬಾಲಿವುಡ್ ಗಾಯಕ ನಕಾಶ್ ಅಜೀಜ್ ಮತ್ತು ಐಶ್ವರ್ಯಾ ರಂಗರಾಜನ್  ಹಾಡಿರೋ ಹಾಡಿಗೆ ಸಾಹಿತ್ಯ ಭರ್ಜರಿ ಚೇತನ್ ಕುಮಾರ್ ಅವರದ್ದು. ಕೊರಿಯೋಗ್ರಫಿಯೂ ಸಖತ್ತಾಗಿದ್ದು, ಜನ್ಯ ಬೀಟ್ಸ್‍ಗಳಿಗೆ ಅಷ್ಟೇ ಸೂಪರ್ಬ್ ಆಗಿ ಕೈಜೋಡಿಸಿದ್ದಾರೆ ಕೊರಿಯೋಗ್ರಫರ್ ಭುವನ್. ತರುಣ್ ಸುಧೀರ್ ನಿರ್ದೇಶನದ ಸಿನಿಮಾ, ಮಾರ್ಚ್ 11ರಂದು ರಿಲೀಸ್ ಆಗುತ್ತಿದೆ. ಸಿನಿಮಾಗೆ ರಿಲೀಸ್‍ಗೂ ಮೊದಲೇ ಸಿಗುತ್ತಿರೋ ರೆಸ್ಪಾನ್ಸ್‍ಗೆ ಫುಲ್ ಥ್ರಿಲ್ಲಾಗಿರೋದು ನಿರ್ಮಾಪಕ ಉಮಾಪತಿ.

  • ಶಂಕರ್ ನಾಗ್ ಥಿಯೇಟರಿನಿಂದ ಶುರುವಾಯ್ತು ರಾಬರ್ಟ್ ಹವಾ

    ಶಂಕರ್ ನಾಗ್ ಥಿಯೇಟರಿನಿಂದ ಶುರುವಾಯ್ತು ರಾಬರ್ಟ್ ಹವಾ

    ರಾಬರ್ಟ್ ರಿಲೀಸ್ ಹತ್ತಿರವಾಗುತ್ತಿದ್ದಂತೆಯೇ ಹವಾ ಎದ್ದಿದೆ. ಇದು ಹವಾನೋ.. ಬಿರುಗಾಳಿಯೋ.. ಸುನಾಮಿನೋ.. ಹೇಳೋಕಾಗಲ್ಲ. ಏಕೆಂದರೆ ಈ ಹವಾ ಎಬ್ಬಿಸಿರೋದು ದರ್ಶನ್ ಫ್ಯಾನ್ಸ್. ಈ ಬಾರಿ ರಾಬರ್ಟ್ ಹವಾ ಶುರುವಾಗಿರೋದು ಎಂಜಿ ರಸ್ತೆಯ ಶಂಕರ್ ನಾಗ್ ಟಾಕೀಸಿನಿಂದ.

    ಶಂಕರ್ ನಾಗ್ ಥಿಯೇಟರ್ ಎದುರು ರಾಬರ್ಟ್ ದರ್ಶನ್ರ ಕಟೌಟ್ ತಲೆಯೆತ್ತಿ ನಿಂತಿದೆ. ಈ ರೋಡಿನಲ್ಲಿ ಕನ್ನಡ ಚಿತ್ರರಂಗದ ಕಟೌಟ್ ಎದ್ದು ನಿಂತಿರೋದು ಇದೇ ಮೊದಲು. ಇನ್ನೊಂದು ಥಿಯೇಟರಿನಲ್ಲಿ ದರ್ಶನ್ ಅವರ 13 ಕಟೌಟ್ ನಿಲ್ಲಿಸಲಾಗುತ್ತಿದೆ. ಅತ್ತ ಹೈದರಾಬಾದ್ ಕಡೆ ಹೊರಟರೆ, ಹೈವೇಗಳಲ್ಲಿ ಹೆಜ್ಜೆ ಹೆಜ್ಜೆಗೂ ದರ್ಶನ್ ಚಿತ್ರದ ಪೋಸ್ಟರ್, ಕಟೌಟ್ಗಳು ರಾರಾಜಿಸುತ್ತಿವೆ.

    ತರುಣ್ ಸುಧೀರ್ ನಿರ್ದೇಶನದ ಚಿತ್ರವಿದು. ಉಮಾಪತಿ ಬ್ಯಾನರಿನಲ್ಲಿ ಬರುತ್ತಿರೋ ದರ್ಶನ್ ಅವರ ಮೊದಲ ಸಿನಿಮಾ. ಶಿವರಾತ್ರಿಗೆ ಮೊದಲೇ ದರ್ಶನ್ ಅಭಿಮಾನಿಗಳು ಚಿತ್ರದ ಪ್ರಚಾರವನ್ನು ಭರ್ಜರಿಯಾಗಿ ಮಾಡುತ್ತಿದ್ದಾರೆ. ದರ್ಶನ್ ಫ್ಯಾನ್ಸ್ ಉತ್ಸಾಹ ಚಿತ್ರತಂಡದವರಿಗಿಂತ ಡಬಲ್ ಇರೋದೇ ಸ್ಪೆಷಲ್.

  • ಶಂಕರ್ ಮಹದೇವನ್ ಕಂಠದಲ್ಲಿ ಜೈ ಶ್ರೀರಾಮ್

    shankar mahadevan's magic for jai shri ram song

    ಜೈ ಶ್ರೀರಾಮ್ ಎಂಬ ರಾಬರ್ಟ್ ಚಿತ್ರದ ಹಾಡು ಸೃಷ್ಟಿಸಿದ್ದ ಕ್ರೇಜ್ ಗೊತ್ತಿದೆಯಲ್ಲ, ಈಗ ಅದೇ ಹಾಡಿನ ಹೊಸ ವರ್ಷನ್ ಬಂದಿದೆ. ಈಗ ಆ ಹಾಡಿನ ಶಕ್ತಿ ಹೆಚ್ಚಿಸಿರುವುದು ಶಂಕರ್ ಮಹಾದೇವನ್. ರಾಮನವಮಿಗಾಗಿ ಹಾಡನ್ನು ಮತ್ತೊಮ್ಮೆ ಶಂಕರ್ ಮಹದೇವನ್ ಧ್ವನಿಯಲ್ಲಿ ರಿಲೀಸ್ ಮಾಡಿದ್ದಾರೆ ನಿರ್ದೇಶಕ ತರುಣ್ ಸುಧೀರ್.

    ದಿವ್ಯ ಕುಮಾರ್ ಧ್ವನಿಯಲ್ಲಿದ್ದ ಹಾಡಿನಲ್ಲೇ ಕುಣಿದು ಕುಪ್ಪಳಿಸಿದ್ದ ಅಭಿಮಾನಿಗಳಿಗೆ ಶಂಕರ್ ಮಹದೇವನ್ ದೈವೀಕ ಕಂಠದ ಧ್ವನಿ ಇನ್ನಷ್ಟು ರೋಮಾಂಚನ ಹುಟ್ಟಿಸಿದೆ. ನಟ ದರ್ಶನ್ ಶ್ರೀರಾಮ ಶ್ಲೋಕವನ್ನು ಪಠಿಸಿ ಹಾಡನ್ನು ಅಭಿಮಾನಿಗಳಿಗೆ ಅರ್ಪಿಸಿದ್ದಾರೆ.

    ಉಮಾಪತಿ ನಿರ್ಮಾಣದ ರಾಬರ್ಟ್ ಚಿತ್ರ, ಕೊರೋನಾ ಶಾಕ್ ಇಲ್ಲದೇ ಹೋಗಿದ್ದರೆ ಇದೇ ವಾರ ರಿಲೀಸ್ ಆಗಬೇಕಿತ್ತು. ಸದ್ಯಕ್ಕೆ ರಾಬರ್ಟ್ ಸೇರಿದಂತೆ ಯಾವುದೇ ಚಿತ್ರಗಳಿಗೆ ಏಪ್ರಿಲ್ ತಿಂಗಳಲ್ಲಿ ಥಿಯೇಟರು ಭಾಗ್ಯ ದೊರೆಯುವ ಲಕ್ಷಣಗಳಿಲ್ಲ.

  • ಸ್ಟಾರ್ಸ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

    ಸ್ಟಾರ್ಸ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

    ಕೊರೊನಾ ಲಾಕ್‍ಡೌನ್ ಮುಗಿದು, ಥಿಯೇಟರುಗಳೆಲ್ಲ ಓಪನ್ ಆದರೂ ಸರ್ಕಾರದ ನಿರ್ಬಂಧ ಮಾತ್ರ ರಿಲ್ಯಾಕ್ಸ್ ಆಗಿಲ್ಲ. ಹೀಗಿರುವಾಗಲೇ ಥಿಯೇಟರಿಗೆ ಬರುವ ನಿರ್ಧಾರ ಮಾಡಿ ಗೆದ್ದಿದೆ ತಮಿಳಿನ ಮಾಸ್ಟರ್. ವಿಜಯ್ ಅಭಿನಯದ ಮಾಸ್ಟರ್ 50% ಸೀಟುಗಳ ನಿರ್ಬಂಧದ ನಡುವೆಯೇ ಮೊದಲ 40 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದರ ಅರ್ಥ ಇಷ್ಟೆ, ಪ್ರೇಕ್ಷಕರು ಸ್ಟಾರ್ ಚಿತ್ರಗಳಿಗೆ ಕಾಯುತ್ತಿದ್ದಾರೆ. ಸದ್ಯಕ್ಕೆ ಪ್ರೇಕ್ಷಕರಿಗೆ ನೊಣ ಹೊಡೆಯುತ್ತಿರುವ ಥಿಯೇಟರುಗಳು ತುಂಬೋಕೆ ಶುರುವಾಗೋದು ಸ್ಟಾರ್ ಚಿತ್ರಗಳ ಎಂಟ್ರಿ ನಂತರಾನೇ. ಸ್ಸೋ.. ಸ್ಟಾರ್ ಚಿತ್ರಗಳಿಗೆ ರಿಲೀಸ್ ಡೇಟ್ ಫಿಕ್ಸ್ ಆಗುತ್ತಿವೆ.

    ಮೊದಲ ಸ್ಟಾರ್ ಸಿನಿಮಾ ಆಗಿ ರಿಲೀಸ್ ಆಗಲಿರುವ ಚಿತ್ರ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು. ಇದು ಫೆಬ್ರವರಿ 5ರಂದು ರಿಲೀಸ್ ಆಗುತ್ತಿದೆ. ಆದರೂ ಅದೇಕೋ ಏನೋ.. ನಿರ್ಮಾಪಕ ಬಿ.ಕೆ. ಗಂಗಾಧರ್ ರಿಲೀಸ್ ಡೇಟ್‍ನ್ನು ಅಧಿಕೃತವಾಗಿ ಘೋಷಿಸುತ್ತಿಲ್ಲ.

    ನಂತರ ಬರಲಿರೋ ಚಿತ್ರ ಸಲಗ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರಕ್ಕೆ ಮೊದಲ ಬಾರಿಗೆ ದುನಿಯಾ ವಿಜಯ್ ಡೈರೆಕ್ಷನ್ ಮಾಡಿದ್ದಾರೆ. ಈ ಸಿನಿಮಾ ದುನಿಯಾ ಸೆಂಟಿಮೆಂಟ್ ಕಾರಣಕ್ಕೆ ಫೆ.23ರಂದು ರಿಲೀಸ್ ಮಾಡ್ತಾರೆ ಅನ್ನೋ ಲೆಕ್ಕಾಚಾರವಿದೆ. ಅಂದಹಾಗೆ, ಈ ಡೇಟ್ ಕೂಡಾ ಅಫಿಷಿಯಲ್ ಅಲ್ಲ.

    ಅಫಿಷಿಯಲ್ ಆಗಿ ಘೋಷಿಸಿಕೊಂಡಿರೋದು ದರ್ಶನ್ ಅಭಿನಯದ ರಾಬರ್ಟ್, ಮಾರ್ಚ್ 11ಕ್ಕೆ ರಿಲೀಸ್. ಪುನೀತ್ ಅಭಿನಯದ ಯುವರತ್ನ ಏಪ್ರಿಲ್ 1ಕ್ಕೆ ರಿಲೀಸ್. ಸುದೀಪ್ ಅಭಿನಯದ ಕೋಟಿಗೊಬ್ಬ 3, ಏಪ್ರಿಲ್ 23ಕ್ಕೆ ರಿಲೀಸ್.

    ಆಗಸ್ಟ್ ನಂತರ ಶಿವಣ್ಣ ಅಭಿನಯದ ಭಜರಂಗಿ 2, ಯಶ್ ಅಭಿನಯದ ಕೆಜಿಎಫ್ 2, ಸುದೀಪ್ ಅಭಿನಯದ ಪ್ಯಾಂಟಮ್, ರಕ್ಷಿತ್ ಶೆಟ್ಟಿ ನಟಿಸಿರುವ 777 ಚಾರ್ಲಿ, ಗಣೇಶ್-ಭಟ್ಟರ ಕಾಂಬಿನೇಷನ್ನಿನ ಗಾಳಿಪಟ 2, ಚಿತ್ರಗಳಿವೆ.

  • ಹನುಮ ಜಯಂತಿಯ ಗುಡ್ ಫ್ರೈಡೇಗೆ ರಾಬರ್ಟ್ ಪಕ್ಕಾ

    roberrt may release between hanman jayanthi and good friday

    ಏಪ್ರಿಲ್ 8ಕ್ಕೆ ಹನುಮ ಜಯಂತಿ. ಏಪ್ರಿಲ್ 10ಕ್ಕೆ ಗುಡ್ ಫ್ರೈಡೇ. ಆ ಸಂಭ್ರಮಕ್ಕೆ ಕಿಚ್ಚು ಹಚ್ಚುತ್ತಾನಾ ರಾಬರ್ಟ್..? ಹೌದು ಎನ್ನುತ್ತಾರೆ ತರುಣ್ ಸುಧೀರ್. ಅವರಿಗೆ ಅದು ಖುಷಿಯ ವಿಷಯ.

    ರಾಬರ್ಟ್ ಚಿತ್ರದ ಪೋಸ್ಟರ್ ಬಂದಿದ್ದು ಕ್ರಿಸ್‍ಮಸ್‍ಗೆ. ಸಂಕ್ರಾಂತಿಗೆ ಬಂದಿದ್ದು ರಾಮನ ಲುಕ್ಕು. ಎಲ್ಲೋ ಒಂದ್ ಕಡೆ ಸಿಂಕ್ ಆಗುತ್ತಿವೆ ಎನ್ನುವ ತರುಣ್ 108 ದಿನಗಳ ಮ್ಯಾರಥಾನ್ ಶೂಟಿಂಗ್ ಮುಗಿಸಿದ್ದಾರೆ.

    ಮೈಸೂರು, ಬೆಂಗಳೂರು, ಹೈದರಾಬಾದ್, ಚೆನ್ನೈ, ಪಾಂಡಿಚೆರಿ, ಲಕ್ನೋ, ವಾರಾಣಸಿ ಸೇರಿದಂತೆ ಹಲವಡೆ ಶೂಟಿಂಗ್ ಆಗಿದೆ. ಮುಕ್ಕಾಲು ಚಿತ್ರೀಕರಣ ಸೆಟ್‍ಗಳಲ್ಲಿ ಆಗಿದೆ. 35ಕ್ಕೂ ಹೆಚ್ಚು ಸೆಟ್ ಹಾಕಿಸಿ ಶೂಟ್ ಮಾಡಿದ್ದೇವೆ ಎಂದು ಮಾಹಿತಿ ನೀಡುವ ತರುಣ್, ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  • ಹುಬ್ಬಳ್ಯಾಗ್ ರಾಬರ್ಟ್ ಹಬ್ಬ ಫೆ.28ಕ್ಕ ಐತ್ ರೀ..

    ಹುಬ್ಬಳ್ಯಾಗ್ ರಾಬರ್ಟ್ ಹಬ್ಬ ಫೆ.28ಕ್ಕ ಐತ್ ರೀ..

    ರಾಬರ್ಟ್. ದರ್ಶನ್ ಅಭಿನಯದ ಈ ಚಿತ್ರ ಬಿಡುಗಡೆಗೂ ಮೊದಲೇ ಹವಾ ಎಬ್ಬಿಸಿದೆ. ಟೀಸರು, ಟ್ರೇಲರುಗಳ ಜೊತೆ ಇತ್ತೀಚೆಗೆ ರಿಲೀಸ್ ಆದ ಕಣ್ಣು ಹೊಡ್ಯಾಕ ಮೊನ್ನೀ ಕಲತ್ಯಾನಿ.. ಅನ್ನೋ ಉತ್ತರ ಕರ್ನಾಟಕದ ಕನ್ನಡವನ್ನೇ ರೊಮ್ಯಾಂಟಿಕ್ ಆಗಿ ಬಳಸಿಕೊಂಡಿರೋ ಹಾಡು ಹೊಸದೊಂದು ಥ್ರಿಲ್ ಕೊಟ್ಟಿದೆ. ಹೀಗಿರುವಾಗ ಇಡೀ ಚಿತ್ರತಂಡ ಉತ್ತರ ಕರ್ನಾಟಕದಿಂದಲೇ ದಿಗ್ವಿಜಯ ಆರಂಭಿಸುತ್ತಿದೆ.

    ಫೆ.28ರಂದು ಹುಬ್ಬಳ್ಳಿಯ ರೈಲ್ವೇ ಗ್ರೌಂಡ್ಸ್‍ನಲ್ಲಿ ರಾಬರ್ಟ್ ಪ್ರೀ-ರಿಲೀಸ್ ಈವೆಂಟ್ ನಡೆಯುತ್ತಿದೆ. ಆ ಕಾರ್ಯಕ್ರಮದಲ್ಲಿ ದರ್ಶನ್, ತರುಣ್ ಸುಧೀರ್, ಉಮಾಪತಿ, ಆಶಾ ಭಟ್, ವಿನೋದ್ ಪ್ರಭಾಕರ್.. ಸೇರಿದಂತೆ ಇಡೀ ಚಿತ್ರತಂಡ ಪಾಲ್ಗೊಳ್ಳಲಿದೆ.