` roberrt, - chitraloka.com | Kannada Movie News, Reviews | Image

roberrt,

 • ರಾಬರ್ಟ್ 100 ಕೋಟಿ

  ರಾಬರ್ಟ್ 100 ಕೋಟಿ

  ಯುವರತ್ನ ರಿಲೀಸ್ ಆಗಿರುವ ಹೊತ್ತಿನಲ್ಲೇ ಸ್ಯಾಂಡಲ್‍ವುಡ್‍ಗೆ ಇನ್ನೊಂದು ಗುಡ್ ನ್ಯೂಸ್. 3 ವಾರದ ಹಿಂದೆ ರಿಲೀಸ್ ಆಗಿದ್ದ ರಾಬರ್ಟ್, ಬಾಕ್ಸಾಫೀಸ್‍ನಲ್ಲಿ 100 ಕೋಟಿ ಗಳಿಕೆ ಮಾಡಿದೆ. 20 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿದೆ ರಾಬರ್ಟ್.

  ಈ ಹಿಂದೆ ಕೆಜಿಎಫ್, ಕುರುಕ್ಷೇತ್ರ ಚಿತ್ರಗಳ ಕಲೆಕ್ಷನ್ 100 ಕೋಟಿ ದಾಟಿತ್ತಾದರೂ, ಎಲ್ಲ ಭಾಷೆಗಳ ಒಟ್ಟು ಕಲೆಕ್ಷನ್ ಎನ್ನಲಾಗಿತ್ತು. ಆದರೀಗ ರಾಬರ್ಟ್, ಕನ್ನಡವೊಂದರಲ್ಲೇ 100 ಕೋಟಿ ದಾಟಿದೆಯಂತೆ. ಚಿತ್ರತಂಡ ಇದನ್ನು ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲವಾದರೂ, ಪೋಸ್ಟರುಗಳಂತೂ ಓಡಾಡುತ್ತಿವೆ.

  ಬಿಕೆಟಿಯಲ್ಲಿ 30 ಕೋಟಿ, ಮೈಸೂರು ಭಾಗದಿಂದ 24 ಕೋಟಿ, ದಾವಣಗೆರೆ, ಚಿತ್ರದುರ್ಗದಿಂದ 15 ಕೋಟಿ, ಶಿವಮೊಗ್ಗದಿಂದ 9 ಕೋಟಿ, ಹೈದರಾಬಾದ್ ಕರ್ನಾಟಕದಿಂದ 13 ಕೋಟಿ, ಮುಂಬೈ ಕರ್ನಾಟಕದಿಂದ 9 ಕೋಟಿ ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ.

  ಹೌದಾ.. ಉಮಾಪತಿಯವರೇ ಉತ್ತರ ಹೇಳಬೇಕು. ಆದರೀಗ ಉಮಾಪತಿ ಫುಲ್ ಜೋಶ್‍ನಲ್ಲಿದ್ದಾರೆ. ಬಾಕ್ಸಾಫೀಸ್ ವಿಚಾರದಲ್ಲಿ ಮಾತ್ರ, ಸದ್ಯಕ್ಕೆ ಸೈಲೆಂಟು.

 • ರಾಬರ್ಟ್ 100 ಡೇಸ್.. ನಾನ್‌ಸ್ಟಾಪ್

  roberrt shooting completes 100 days

  ಬಿಡುಗಡೆಯೇ ಅಗದ ರಾಬರ್ಟ್ ಚಿತ್ರ, ಶೂಟಿಂಗ್‌ನಲ್ಲಿಯೇ 100 ದಿನ ಪೂರೈಸಿದೆ. ರಾಬರ್ಟ್ ಶೂಟಿಂಗ್ ಅವಧಿ ಈಗಾಗಲೇ 100 ದಿನಗಳನ್ನು ದಾಟಿ ಮುನ್ನಡೆದಿದ್ದು, ಇನ್ನೂ 15 ದಿನ ಶೂಟಿಂಗ್ ಮಾಡಬೇಕಿದೆಯಂತೆ. ತರುಣ್ ಸುಧೀರ್ ನಿರ್ದೇಶನದ ಭಾರಿ ಬಜೆಟ್‌ನ ಸಿನಿಮಾ ರಾಬರ್ಟ್. ಈ ಚಿತ್ರಕ್ಕಾಗಿ ದರ್ಶನ್ ತಮ್ಮ ಎಂದಿನ ಕಟ್ಟುನಿಟ್ಟಿನ ರೂಲ್ಸ್ ಕೂಡಾ ಬ್ರೇಕ್ ಮಾಡಿದ್ದಾರೆ.

  ಸಾಮಾನ್ಯವಾಗಿ ಒಂದು ಸಿನಿಮಾಗೆ 60-65 ದಿನಗಳ ಕಾಲ್‌ಶೀಟ್ ಕೊಡುತ್ತಿದ್ದ ದರ್ಶನ್, ಈ ಚಿತ್ರಕ್ಕೆ ಅದನ್ನು ಸಡಿಲ ಮಾಡಿದ್ದಾರೆ. ಕಾರಣ ಇಷ್ಟೆ, ಚಿತ್ರಕ್ಕೆ ಅಷ್ಟು ದಿನಗಳ ಶೂಟಿಂಗ್ ಏಕೆ ಬೇಕು ಎಂಬುದನ್ನು ತರುಣ್ ವಿವರಿಸಿದ್ದಾರೆ. ಅದು ದರ್ಶನ್‌ಗೆ ಓಕೆ ಎನಿಸಿದೆ.

  ಚಿತ್ರದ ಕಥೆಯೇ ಸುದೀರ್ಘ ಶೂಟಿಂಗ್‌ನ್ನು ಡಿಮ್ಯಾಂಡ್ ಮಾಡುತ್ತೆ. ಹೀಗಾಗಿ 100ಕ್ಕೂ ಹೆಚ್ಚು ದಿನ ಶೂಟಿಂಗ್ ನಡೆಯುತ್ತಿದೆ. ಈಗಾಗಲೇ ಮೈಸೂರು, ಬೆಂಗಳೂರು, ಹೈದರಾಬಾದ್ ಶೂಟಿಂಗ್ ಮುಗಿಸಿದ್ದೇವೆ. ಈಗ ವಾರಾಣಸಿಯಲ್ಲಿದ್ದೇವೆ. ಅದ್ಧೂರಿ ಸೆಟ್ ಸಿದ್ಧ ಮಾಡಿದ್ದೇವೆ ಎಂದಿದ್ದಾರೆ ತರುಣ್ ಸುಧೀರ್. ಉಮಾಪತಿ ಬ್ಯಾನರ್‌ನ ಚಿತ್ರ 2020ರ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು.

 • ರಾಬರ್ಟ್ 25

  ರಾಬರ್ಟ್ 25

  ಬಾಕ್ಸಾಫೀಸ್ನಲ್ಲಿ ದೂಳೆಬ್ಬಿಸಿದ ರಾಬರ್ಟ್ ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದೆ. ಪೊಗರು ಮತ್ತು ಹೀರೋ ನಂತರ 25 ದಿನ ಪೂರೈಸಿ ಮುನ್ನುಗ್ಗುತ್ತಿರೋ ಚಿತ್ರ ರಾಬರ್ಟ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ಚಿತ್ರ ಈಗಲೂ ಥಿಯೇಟರುಗಳಲ್ಲಿ ಸಕ್ಸಸ್ ಫುಲ್ ಶೋ ನೋಡುತ್ತಿದೆ.

  ತರುಣ್ ಸುಧೀರ್ ನಿರ್ದೇಶನದ ಚಿತ್ರ, ಸ್ಯಾಂಡಲ್ವುಡ್ಗೆ ಭರ್ಜರಿ ಟಾನಿಕ್ ಕೊಟ್ಟಿತ್ತು. ನಿರ್ಮಾಪಕ ಉಮಾಪತಿ ಪ್ರಚಾರದ ಹೊಸ ಮಜಲನ್ನು ತೋರಿಸಿದ್ದರು. ಒಂದರ ಹಿಂದೊಂದು ಚಿತ್ರಗಳ ಸಕ್ಸಸ್ ಕನ್ನಡ ಚಿತ್ರರಂಗಕ್ಕೆ ಆಕ್ಸಿಜನ್ ನೀಡಿವೆ. ಯುವರತ್ನ ಚಿತ್ರ ಇನ್ನೊಂದು ಬ್ಲಾಕ್ ಬಸ್ಟರ್ ಆಗುವ ನಿರೀಕ್ಷೆ ಹುಟ್ಟಿಸಿದೆ. ಇದರ ಮಧ್ಯೆ ಕೊರೊನಾ ಹೊಡೆತವನ್ನೂ ಯುವರತ್ನ ಎದುರಿಸುತ್ತಿದೆ.

 • ರಾಬರ್ಟ್ ಆಂಜನೇಯ ಚಾಲೆಂಜಿಂಗ್ ಸ್ಟಾರ್

  d53 title is robaerrt

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 35ನೇ ಸಿನಿಮಾದ ಟೈಟಲ್ ರಾಬರ್ಟ್. ಹೆಸರಷ್ಟೇ ರಾಬರ್ಟ್. ಪೋಸ್ಟರ್‍ನಲ್ಲಿರೋದು ಆಂಜನೇಯ.. ಶ್ರೀರಾಮ.. ಭಗವಾ ಧ್ವಜ.. ಇದು ತರುಣ್ ಸುಧೀರ್ ನಿರ್ದೇಶನದ ಉಮಾಪತಿ ನಿರ್ಮಾಣದ ಸಿನಿಮಾ. ಕ್ರಿಸ್‍ಮಸ್‍ಗೆಂದೇ ಚಿತ್ರದ ಟೈಟಲ್ ಹೊರಬಿಟ್ಟ ಚಿತ್ರತಂಡ, ದರ್ಶನ್ ಹುಟ್ಟುಹಬ್ಬಕ್ಕೆ ಫಸ್ಟ್‍ಲುಕ್ ರಿಲೀಸ್ ಮಾಡಲಿದೆಯಂತೆ.

  ಇನ್ನು ಚಿತ್ರದಲ್ಲಿ ದರ್ಶನ್ ಜೊತೆಗೆ ಬಾಲಿವುಡ್ ಸ್ಟಾರ್ ನಟರೊಬ್ಬರು ನಟಿಸುತ್ತಿದ್ದು, ಅವರು ಯಾರು ಎನ್ನುವುದನ್ನು ಶೀಘ್ರದಲ್ಲಿಯೇ ತಿಳಿಸೋದಾಗಿ ತರುಣ್ ಸುಧೀರ್ ಹೇಳಿದ್ದಾರೆ.

 • ರಾಬರ್ಟ್ ಏಪ್ರಿಲ್'ಗೆ ಬರೋದು ಪಕ್ಕಾನಾ..?

  will roberrt release amidst corona virus scare ?

  ರಾಬರ್ಟ್ ಸಿನಿಮಾ ಏಪ್ರಿಲ್ ತಿಂಗಳಲ್ಲಿ ಬರೋದು ಪಕ್ಕಾನಾ..? ಅಂಥಾದ್ದೊಂದು ಪ್ರಶ್ನೆ ಹುಟ್ಟಿಸಿರುವುದು ಕೊರೋನಾ. ಮಾರ್ಚ್ 12ರಂದು ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್‍ನಲ್ಲಿ ಚಿತ್ರದ 90% ಕೆಲಸಗಳು ಮುಗಿದಿವೆ. ಏಪ್ರಿಲ್‍ನಲ್ಲಿ ರಿಲೀಸ್ ಆಗೋಕೆ ಫುಲ್ ಜೋರ್ಶನಲ್ಲಿ ಬರುತ್ತಿದ್ದ ರಾಬರ್ಟ್, ಏಪ್ರಿಲ್‍ಗೆ ಬರೋದು ಕನ್‍ಫರ್ಮ್ ಹೌದಾ ಅಲ್ವಾ..? ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

  ಮಾರ್ಚ್ 12ರಂದು ದರ್ಶನ್ ಶೂಟಿಂಗ್ ಮುಗೀತು ಎಂದು ಟ್ವೀಟ್ ಮಾಡಿದ್ದಾರೆ. ಅದಾದ ಮೇಲೆ ಕೊರೋನಾ ನಿಷೇಧ ಬೆನೇರಿದೆ. ಮುಂದಾ..?

 • ರಾಬರ್ಟ್ ಚಿತ್ರ ಅಂದ್ರೆ ತೆಲುಗಿನವರಿಗೆ ಭಯಾನಾ..?

  ರಾಬರ್ಟ್ ಚಿತ್ರ ಅಂದ್ರೆ ತೆಲುಗಿನವರಿಗೆ ಭಯಾನಾ..?

  ರಾಬರ್ಟ್. ದರ್ಶನ್ ನಟಿಸಿರುವ ತರುಣ್ ಸುಧೀರ್ ನಿರ್ದೇಶನದ ಉಮಾಪತಿ ನಿರ್ಮಾಣದ ಬಹುನಿರೀಕ್ಷಿತ ಸಿನಿಮಾ. ಮಾರ್ಚ್ 11ಕ್ಕೆ ರಿಲೀಸ್ ಆಗುತ್ತಿದೆ. ಕನ್ನಡದ ಸ್ಟಾರ್ ನಟರ ಚಿತ್ರಗಳು ಕ್ಯೂನಲ್ಲಿರೋ ಕಾರಣ, ಒಂದಕ್ಕೊಂದು ಎದುರಾಳಿಯಾಗಬಾರದು ಎಂಬ ಕಾರಣಕ್ಕೆ ಎಲ್ಲರೂ ಒಟ್ಟಾಗಿ ಕುಳಿತು ನಿರ್ಧರಿಸಿರುವ ರಿಲೀಸ್ ಡೇಟ್ ಮಾರ್ಚ್ 11. ವಿಶೇಷ ಅಂದ್ರೆ ತೆಲುಗಿನಲ್ಲೂ ಬರುತ್ತಿರೋ ಈ ಚಿತ್ರಕ್ಕೆ ಅಲ್ಲಿನ ವಿತರಕರೂ ಓಕೆ ಎಂದಿದ್ದರು. ಅದೇ ಮಾರ್ಚ್ 11ನೇ ತಾರೀಕಿಗೆ. ಆದರೆ ರಿಲೀಸ್ ಡೇಟ್ ಹತ್ತಿರ ಬರುತ್ತಿದ್ದಂತೆ ವಿತರಣೆಗೆ ಒಪ್ಪಿಕೊಂಡಿದ್ದ ಅಲ್ಲಿನ ವಿತರಕರು ಉಲ್ಟಾ ಹೊಡೆಯುತ್ತಿದ್ದಾರೆ.

  ಮಾರ್ಚ್ 11ರಂದು ತೆಲುಗಿನಲ್ಲಿ 4 ಚಿತ್ರಗಳು ರಿಲೀಸ್ ಆಗುತ್ತಿವೆಯಂತೆ. ಹೀಗಾಗಿ ಕನ್ನಡದಿಂದ ಡಬ್ ಆಗಿ ಬರುತ್ತಿರುವ ರಾಬರ್ಟ್ಗೆ ಥಿಯೇಟರುಗಳೇ ಇಲ್ಲ. ಒಂದು ವಾರ ಬಿಟ್ಟು ಬನ್ನಿ ಎನ್ನುತ್ತಿದ್ದಾರಂತೆ. ರಾಬರ್ಟ್ ಚಿತ್ರತಂಡವನ್ನು ಈ ವಾದ ಕೆರಳಿಸಿದೆ.  ಅದೀಗ ಫಿಲಂ ಚೇಂಬರ್ ಮೆಟ್ಟಿಲೇರಿದೆ.

  ಅವರದ್ದು 4 ಸಣ್ಣ ಸಿನಿಮಾಗಳಿವೆಯಂತೆ. ನಮ್ಮ ಸಿನಿಮಾಗಳಿಂದ ಅವರಿಗೆ ತೊಂದರೆ ಆಗುತ್ತಿದೆಯಂತೆ. ಯಾಕೆ? ಅವರ ಹೀರೋ ಸಿನಿಮಾಗಳಿಂದ ನಾವು ತೊಂದರೆ ತೆಗೆದುಕೊಳ್ಳುತ್ತಿಲ್ಲವೇ? ಇದು ನಾವು ನೀವು ಕುಳಿತುಕೊಂಡು ಮಾತನಾಡುವುದಲ್ಲ. ಮೊದಲು ನಮ್ಮಲ್ಲಿರುವವರು ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳಬೇಕಿದೆ. ತಮಿಳು, ತೆಲುಗಿನವರಿಗೆ ಇರುವಷ್ಟು ಭಾಷಾಭಿಮಾನ ನಮ್ಮವರಿಗಿಲ್ಲ. ಇದನ್ನು ನಾನು ಓಪನ್ ಆಗಿ ಹೇಳುತ್ತೇನೆ ಎಂದು ಗುಡುಗಿದ್ದಾರೆ ದರ್ಶನ್.

  ಯಾರಾದ್ರೂ ತಮಿಳಿನವನು ಬಂದರೆ, ನಾವು ಅವರ ಜೊತೆ ತಮಿಳಿನಲ್ಲಿ ಮಾತನಾಡುತ್ತೇವೆ. ತೆಲುಗಿನವನು ಬಂದರೆ ತೆಲುಗಿನಲ್ಲಿ ಮಾತನಾಡುತ್ತೇವೆ. ಆದರೆ, ಅವರಲ್ಲಿ ಒಬ್ಬರಾದರೂ ಕನ್ನಡದಲ್ಲಿ ಮಾತನಾಡುತ್ತಾರಾ? ಕನ್ನಡದವರು ಹೋಗಿ ಅಲ್ಲಿ ಮಾರ್ಕೆಟ್‌ನ ಆವರಿಸಿಕೊಳ್ಳುತ್ತಾರೆ ಅನ್ನೋ ಭಯ ಅವರಿಗೆ ಶುರುವಾಗಿದೆ ಎಂದಿರೋ ದರ್ಶನ್,

  'ನಾನಿಲ್ಲಿ 'ರಾಬರ್ಟ್' ಚಿತ್ರ ಒಂದರ ಪರವಾಗಿ ಬಂದಿಲ್ಲ. ನನ್ನದಾಗಲೇ 50 ಸಿನಿಮಾ ಆಗಿದೆ. ಆದರೆ, ಈಗಿನ ಯುವನಟರ  ಕಥೆ ಏನು..? ಯುವ ಕಲಾವಿದರು ಒಳ್ಳೆ ಚಿತ್ರಗಳೊಂದಿಗೆ ಬರುತ್ತಿದ್ದಾರೆ. ಅವರಿಗೆ ದಾರಿಯಾಗಲೀ ಎಂಬುದು ನನ್ನ ಉದ್ದೇಶ ಎಂದಿದ್ದಾರೆ.

  ರಾಬರ್ಟ್ ಚಿತ್ರ ಮಾರ್ಚ್ 11ರಂದೇ ತೆಲುಗಿನಲ್ಲೂ ರಿಲೀಸ್ ಆಗಲಿದೆ. ಅವರ ಜೊತೆ ಕುಳಿತು ಮಾತನಾಡುತ್ತೇವೆ. ಅಕಸ್ಮಾತ್ ಆಗದೇ ಹೋದರೆ, ತೆಲುಗು ಚಿತ್ರಗಳೂ ಕನ್ನಡದಲ್ಲಿ ಇದೇ ಪರಿಸ್ಥಿತಿ ಎದುರಿಸಲಿವೆ ಎಂದಿದ್ದಾರೆ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು.

 • ರಾಬರ್ಟ್ ಚಿತ್ರದ ಕಥೆ ಥೀಮ್ ಪೋಸ್ಟರ್‍ನಲ್ಲೇ ಇದೆ. ಗೊತ್ತಾಯ್ತಾ..? 

  robert theme poster hints at story

  ದರ್ಶನ್ ಅಭಿನಯದ ಥೀಮ್ ಪೋಸ್ಟರ್ ಹೊರಬಿದ್ದಿದೆ. ಸದಾ ಶಾರ್ಟ್ ಹೇರ್‍ಕಟ್‍ನಲ್ಲಿರುತ್ತಿದ್ದ ದರ್ಶನ್, ಈ ಚಿತ್ರದಲ್ಲಿ ಉದ್ದ ಕೂದಲು ಬಿಟ್ಟಿದ್ದಾರೆ. ಫೇಸ್ ಗೆಟಪ್ ಬದಲಾಗಿದೆಯಾ..? ಯಾರಿಗ್ಗೊತ್ತು... ತರುಣ್ ಸುಧೀರ್ ದರ್ಶನ್ ಮುಖವನ್ನೇ ತೋರಿಸಿಲ್ಲ.

  ಪೋಸ್ಟರ್‍ನಲ್ಲಿ ಕೆ3 19, ಡಿ 8055 ಬೈಕ್‍ನಲ್ಲಿ ದರ್ಶನ್ ಕುಳಿತಿರುವ ಚಿತ್ರವದು. ಕೆಎ 19, ಮಂಗಳೂರಿನ ರಿಜಿಸ್ಟ್ರೇಷನ್ ನಂಬರ್. ಡಿ 8055 ಅಂದ್ರೆ ಡಿ ಬಾಸ್ ಎಂದರ್ಥ.

  ಉಮಾಪತಿ ನಿರ್ಮಾಣದ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಹೀರೋಯಿನ್ ಇನ್ನೂ ಅಂತಿಮವಾಗಿಲ್ಲ.

  ಚಿತ್ರದ ಕಥೆ ಏನು..? ದರ್ಶನ್ ಪಾತ್ರ ಏನಿರಬಹುದು..? ಇವುಗಳ ಬಗ್ಗೆ ಥೀಮ್ ಪೋಸ್ಟರ್‍ನಲ್ಲಿ ಸುಳಿವು ಕೊಟ್ಟಿದ್ದಾರಂತೆ ನಿರ್ದೇಶಕರು. ನಿಮಗೇನಾದ್ರೂ ಗೊತ್ತಾಯ್ತಾ..?

 • ರಾಬರ್ಟ್ ಚಿತ್ರದ ಸೆಟ್‍ನಲ್ಲಿ ರ್ಯಾಂಕ್ ಸ್ಟೂಡೆಂಟ್ಸ್ ಫಾರ್ಮುಲಾ

  robert movie adapts rank student concept

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಸೆಟ್‍ನಲ್ಲಿ ಎಸ್‍ಎಸ್‍ಎಲ್‍ಸಿ, ಪಿಯು, ಯುಪಿಎಸ್‍ಸಿ ರ್ಯಾಂಕ್ ಸ್ಟೂಡೆಂಟ್‍ಗಳ ಫಾರ್ಮುಲಾ ಅಳವಡಿಸಿಕೊಳ್ಳಲಾಗ್ತಿದೆ. ಇಷ್ಟಕ್ಕೂ ಏನದು ರ್ಯಾಂಕ್ ಸ್ಟೂಡೆಂಟ್ಸ್ ಫಾರ್ಮುಲಾ ಅಂದ್ಕೊಂಡ್ರಾ..?

  ನೀವೇ ನೋಡಿ.. ಇತ್ತೀಚೆಗೆ ಹಾಗೆ ರ್ಯಾಂಕ್ ಬಂದ ವಿದ್ಯಾರ್ಥಿಗಳೆಲ್ಲ ಹೇಳಿರೋದು ಬಹುತೇಕ ಒಂದೇ ವಿಷಯ. ಅವರು ಫೋನ್, ವಾಟ್ಸಪ್, ಫೇಸ್‍ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾದಿಂದ ದೂರವಿದ್ದು ಓದಿದವರು. ಹಲವರ ಈ ಯಶಸ್ಸಿನ ಗುಟ್ಟನ್ನೇ ತನ್ನ ಸೆಟ್ಟಲ್ಲಿ ಅಳವಡಿಸಿಕೊಳ್ಳೋಕೆ ಮುಂದಾಗಿದ್ದಾರೆ ನಿರ್ದೇಶಕ ತರುಣ್ ಸುಧೀರ್.

  ಅವರ ಈ ನಿರ್ಧಾರಕ್ಕೆ ಕಾರಣ ಇಷ್ಟೆ, ಸಿನಿಮಾ ಚೆನ್ನಾಗಿ ಬರಬೇಕು, ಕೆಲಸಗಳು ಬೇಗ ಬೇಗ ಸರಾಗವಾಗಿ ಆಗಬೇಕು, ಮಧ್ಯೆ ಮಧ್ಯೆ ಡೈವರ್ಷನ್‍ಗಳು ಇರಬಾರದು. ಇದ್ಯಾವುದೂ ಆಗಬಾರದು ಎಂದರೆ, ಸೆಟ್ಟಿನಲ್ಲಿದ್ದವರ ಬಳಿ ಮೊಬೈಲ್ ಇರಬಾರದು. ಅಷ್ಟೇ ಅಲ್ಲ, ಹೀಗೆ ಮಾಡುವುದರಿಂದ ಚಿತ್ರದ ಶೂಟಿಂಗ್ ಸ್ಥಳದ ಫೋಟೋ, ವಿಡಿಯೋ ಲೀಕ್ ಆಗುವುದನ್ನೂ ತಪ್ಪಿಸಬಹುದು. ಹೀಗೆ ಹಲವು ಲೆಕ್ಕಾಚಾರ ಹಾಕಿಕೊಂಡೇ ನಿರ್ಧಾರಕ್ಕೆ ಬಂದಿದ್ದಾರೆ ತರುಣ್. ನಿರ್ದೇಶಕರೇ ಸಮಯದ ಉಳಿತಾಯಕ್ಕೆ, ಕೆಲಸದ ವೇಗಕ್ಕೆ ಇಷ್ಟೊಂದು ಮುತುವರ್ಜಿ ವಹಿಸುತ್ತಿರುವಾಗ ನಿರ್ಮಾಪಕರು ಖುಷಿಯಾಗದೇ ಇರ್ತಾರಾ..? ಪ್ರೊಡ್ಯೂಸರ್ ಉಮಾಪತಿ ಫುಲ್ ಹ್ಯಾಪಿ.

 • ರಾಬರ್ಟ್ ಚೆಲುವೆ ಆಶಾ ಭಟ್ : ಯಾರಿವಳು..?

  asha bhatt is the heroine for roberrt

  ದರ್ಶನ್ ಅಭಿನಯದ ರಾಬರ್ಟ್ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿರುವಾಗಲೇ ಚಿತ್ರದ ಹೀರೋಯಿನ್ ಯಾರು ಎಂಬ ಕುತೂಹಲಕ್ಕೆ ಉತ್ತರ ಕೊಟ್ಟಿದ್ದಾರೆ ನಿರ್ದೇಶಕ ತರುಣ್ ಸುಧೀರ್. ಪೋಸ್ಟರ್‍ಗಳ ಮೂಲಕವೇ ಕುತೂಹಲ ಹುಟ್ಟಿಸಿರುವ ಚಿತ್ರವಿದು. ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ತಾರೆಯರು ನಾಯಕಿಯಾಗುತ್ತಾರೆ ಎಂಬ ಸುದ್ದಿಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದ ತರುಣ್, ಅಪ್ಪಟ ಕನ್ನಡದ ಹುಡುಗಿಯನ್ನೇ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ಆಶಾಭಟ್, ದರ್ಶನ್ ಎದುರು ನಟಿಸಲಿರುವ ನಾಯಕಿ.

  ಆಶಾಭಟ್, ಬಣ್ಣದ ಲೋಕಕ್ಕೆ ಹೊಸಬರೇನಲ್ಲ. ಹಿಂದಿಯಲ್ಲಿ ಜಂಗ್ಲಿ ಅನ್ನೋ ಸಿನಿಮಾಗೆ ನಾಯಕಿಯಾಗಿದ್ದವರು. ಇನ್ನು ಆಶಾಭಟ್, ಭದ್ರಾವತಿಯ ಹುಡುಗಿ. 2014ರಲ್ಲಿ ಮಿಸ್ ಸೂಪರ್ ನ್ಯಾಷನಲ್ ಪಟ್ಟ ಗೆದ್ದಿದ್ದ ಚೆಲುವೆ. ಈ ಚಿತ್ರದ ಮೂಲಕ ಕನ್ನಡದ ಹುಡುಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

  ಚಿತ್ರದ ನಾಯಕಿ ಆಶಾ ಭಟ್‍ಗೆ ರಾಬರ್ಟ್ ಕುಟುಂಬಕ್ಕೆ ಸ್ವಾಗತ ಎಂದು ವೆಲ್‍ಕಂ ಹೇಳಿದ್ದಾರೆ ತರುಣ್ ಸುಧೀರ್. ಉಮಾಪತಿ ಚಿತ್ರದ ನಿರ್ಮಾಪಕ.

 • ರಾಬರ್ಟ್ ಟೀಂಗೆ ಆಶಾ ಭಟ್ ಬಂದಿದ್ದು ಹೇಗೆ..?

  ರಾಬರ್ಟ್ ಟೀಂಗೆ ಆಶಾ ಭಟ್ ಬಂದಿದ್ದು ಹೇಗೆ..?

  ಆಶಾ ಭಟ್, ಮಿಸ್ ಸುಪ್ರಾ ಇಂಟರ್‍ನ್ಯಾಷನಲ್ ಅವಾರ್ಡ್ ವಿಜೇತೆ. ಅಪ್ಪಟ ಕನ್ನಡತಿಯೇ ಆದರೂ ಮಾಡೆಲಿಂಗ್ ವೃತ್ತಿಯಲ್ಲಿ ತೊಡಗಿದ ಮೇಲೆ ಮುಂಬೈನಲ್ಲೇ ಸೆಟಲ್ ಆಗಿದ್ದವರು. ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದ ಆಶಾ ಭಟ್ ತರುಣ್ ಸುಧೀರ್ ಕಣ್ಣಿಗೆ ಬಿದ್ದಿದ್ದು ಹೇಗೆ..?

  ನಾನು ಮುಂಬೈನಲ್ಲೇ ಇದ್ದೆ. ಮಾಡೆಲಿಂಗ್ ಮಾಡುತ್ತಿದ್ದ ಕಾರಣ, ಬಾಲಿವುಡ್ ಆಫರ್‍ಗಳು ಬರೋಕೆ ಶುರುವಾಯ್ತು. ಆಗ ಸಿಕ್ಕ ಆಫರ್ ಹಿಂದಿಯ ಜಂಗ್ಲಿ ಸಿನಿಮಾ. ವಿದ್ಯುತ್ ಜಮ್ವಾಲ್ ಎದುರು ನಟಿಸಿದ್ದೆ. ಅದನ್ನು ನೋಡಿ ತರುಣ್ ಸುಧೀರ್ ನನ್ನನ್ನು ಕಾಂಟ್ಯಾಕ್ಟ್ ಮಾಡಿದರು. ನನಗೂ ಕ್ಯಾರೆಕ್ಟರ್, ಕಥೆ ಮತ್ತು ಟೀಂ ಇಷ್ಟವಾಯ್ತು. ಒಪ್ಪಿಕೊಂಡೆ ಎಂದಿದ್ದಾರೆ ಆಶಾ ಭಟ್.

  ಆಶಾ ಭಟ್, ಅವರ ಆಕ್ಟಿಂಗ್ ಸ್ಕಿಲ್ ಮತ್ತು ಕಾನ್ಫಿಡೆನ್ಸ್ ರಾಬರ್ಟ್ ಚಿತ್ರಕ್ಕೆ ಆಕೆಯನ್ನು ಓಕೆ ಮಾಡಲು ಕಾರಣವಂತೆ. ತರುಣ್ ಸುಧೀರ್‍ಗೂ ಇದು ದೊಡ್ಡ ಚಾಲೆಂಜ್. ದರ್ಶನ್, ವಿನೋದ್ ಪ್ರಭಾಕರ್, ದೇವರಾಜ್, ಜಗಪತಿ ಬಾಬು, ರವಿಶಂಕರ್‍ರಂತಹ ದಿಗ್ಗಜರನ್ನು ಹ್ಯಾಂಡಲ್ ಮಾಡೋದು ಸುಲಭದ ವಿಷಯ ಅಲ್ಲ. ನಿರ್ಮಾಪಕ ಉಮಾಪತಿಯವರಂತೂ ದೊಡ್ಡ ಚಾಲೆಂಜ್‍ನ್ನೇ ತೆಗೆದುಕೊಂಡಿದ್ದಾರೆ. ಅವರೆಲ್ಲರ ಶ್ರಮಕ್ಕೆ ಮಾರ್ಚ್ 11ರಂದು ಪ್ರೇಕ್ಷಕರ ರೆಸ್ಪಾನ್ಸ್‍ನಲ್ಲಿ ಬೆಲೆ ಸಿಗಲಿದೆ.

 • ರಾಬರ್ಟ್ ಟ್ರೇಲರ್ : ದಾಖಲೆಗಳಿಗೆಲ್ಲ ಬಾಸು

  ರಾಬರ್ಟ್ ಟ್ರೇಲರ್ : ದಾಖಲೆಗಳಿಗೆಲ್ಲ ಬಾಸು

  ಅದು ಅಭಿಮಾನಿಗಳೆಲ್ಲ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದ ಕ್ಷಣ. ಹೀಗಾಗಿಯೇ ದರ್ಶನ್ ಹುಟ್ಟುಹಬ್ಬಕ್ಕೆಂದು ರಿಲೀಸ್ ಆದ ರಾಬರ್ಟ್ ಟ್ರೇಲರ್ ಹವಾ ಎಬ್ಬಿಸಿದೆ. ಟ್ರೇಲರ್ನ ಒಂದೊಂದು ಡೈಲಾಗುಗಳೂ ಶಿಳ್ಳೆ ಹೊಡೆಸಿಕೊಳ್ಳುತ್ತಿವೆ.

  ಒಬ್ಬರ ಲೈಫ್ನಲ್ಲಿ ಹೀರೋ ಆಗಬೇಕು ಅಂದ್ರೆ, ಇನ್ನೊಬ್ಬರ ಲೈಫಿನಲ್ಲಿ ವಿಲನ್ ಆಗಲೇಬೇಕು..

  ನಾವು ನೋಡೋಕೆ ಮಾತ್ರ ಕ್ಲಾಸು. ವಾರ್ಗೆ ಇಳಿದ್ರೆ ಫುಲ್ ಮಾಸು..

  ಏ ತುಕಾಲಿ.. ನೀನು ಮಾಸ್ ಆದ್ರೆ, ನಾನು ಮಾಸ್ಗೇ ಬಾಸು..

  ಈ ಕೈಗೆ ಶಬರಿ ಮುಂದೆ ಸೋಲೋದೂ ಗೊತ್ತು. ರಾವಣನ ಎದುರು ಗೆಲ್ಲೋದೂ ಗೊತ್ತು..

  ಡೈಲಾಗುಗಳು ಅಭಿಮಾನಿಗಳ ಹೃದಯದಲ್ಲಿ ಅಕ್ಷರಶಃ ಕಿಚ್ಚೆಬ್ಬಿಸಿವೆ. ಉಮಾಪತಿ ನಿರ್ಮಾಣದ ಈ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನವಿದೆ. ಆಶಾಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು, ಸೋನಲ್ ಮಂಥೆರೋ, ಅವಿನಾಶ್, ರವಿ ಕಿಶನ್.. ಹೀಗೆ ಭರ್ಜರಿ ತಾರಾಗಣ ಇರೋ ಚಿತ್ರದ ಟ್ರೇಲರ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಸಿನಿಮಾ ಮಾರ್ಚ್ 11ಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ.

 • ರಾಬರ್ಟ್ ತೆಲುಗು ವಿತರಣೆ ಹಕ್ಕು ಭಾರೀ ಮೊತ್ತಕ್ಕೆ ಸೇಲ್

  ರಾಬರ್ಟ್ ತೆಲುಗು ವಿತರಣೆ ಹಕ್ಕು ಭಾರೀ ಮೊತ್ತಕ್ಕೆ ಸೇಲ್

  ರಾಬರ್ಟ್ ಸಿನಿಮಾ ತೆಲುಗಿನಲ್ಲಿ ಅಂದುಕೊಂಡಂತೆ ರಿಲೀಸ್ ಆಗುತ್ತೋ ಇಲ್ಲವೋ ಎಂಬ ಗೊಂದಲಗಳಿಗೆಲ್ಲ ಕೊನೆಗೂ ತೆರೆ ಬಿದ್ದಿದೆ. ಮಾರ್ಚ್ 11ರಂದು ತೆಲುಗಿನಲ್ಲೂ ರಾಬರ್ಟ್ ರಿಲೀಸ್ ಆಗುತ್ತಿದೆ.

  ತೆಲುಗಿನ ಚಟಲವಾಡ ಶ್ರೀನಿವಾಸ ರಾವ್ ಅವರ ವೆಂಕಟೇಶ್ವರ ಮೂವೀಸ್, ತೆಲುಗು ರಾಬರ್ಟ್ ವಿತರಣೆ ಹಕ್ಕನ್ನು ಖರೀದಿಸಿದ್ದಾರೆ. ಭಾರಿ ಮೊತ್ತಕ್ಕೇ ಖರೀದಿ ನಡೆದಿದೆ ಎನ್ನಲಾಗಿದೆ. ಎಷ್ಟಕ್ಕೆ ಅನ್ನೋದು ಸಸ್ಪೆನ್ಸ್. ತೆಲುಗಿನಲ್ಲಿ ರಾಬರ್ಟ್ 400ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗುತ್ತಿದೆ.

  ಕನ್ನಡದಲ್ಲಿ ಚಿತ್ರವನ್ನು ಇನ್ನೂ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡೋಕೆ ಮುಂದಾಗಿದ್ದಾರೆ ನಿರ್ಮಾಪಕ ಉಮಾಪತಿ. ನಿರ್ದೇಶಕ ತರುಣ್ ಸುಧೀರ್ ಚಿತ್ರದ ಬಿಡುಗಡೆ ಮತ್ತು ಪ್ರಚಾರವನ್ನು ವಿಭಿನ್ನವಾಗಿ ಮಾಡಲು ಪ್ಲಾನ್ ಮಾಡುತ್ತಿದ್ದಾರೆ.

 • ರಾಬರ್ಟ್ ಬಂದ ಮೇಲಷ್ಟೇ ಪೊಗರು

  pogaru will release after roberrt

  2017, ಸೆಪ್ಟೆಂಬರ್ 15. ಭರ್ಜರಿ ರಿಲೀಸ್ ಆದ ಡೇಟ್. ಅದು ಮುಗಿದ ಕೆಲವೇ ದಿನಗಳಲ್ಲಿ ಸೆಟ್ಟೇರಿದ ಸಿನಿಮಾ ಪೊಗರು. 2 ವರ್ಷ ಕಳೆದುಹೋಗಿ, ಇನ್ನೇನು ರಿಲೀಸ್ ಆಗುವ ಡೇಟ್ ಹತ್ತಿರ ಬಂದಾಗಿದೆ. ಇದೇ ಏಪ್ರಿಲ್‍ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಆದರೆ.. ಅದೇ ತಿಂಗಳು ರಾಬರ್ಟ್ ಬರುತ್ತಿದೆ. ಹೀಗಾಗಿ ನಿರ್ದೇಶಕ ನಂದ ಕಿಶೋರ್ ಒಂದು ಸ್ಪಷ್ಟನೆ ಕೊಟ್ಟಿದ್ದಾರೆ. ಬರೋದೇನಿದ್ದರೂ ರಾಬರ್ಟ್ ನಂತರವೇ ಎಂದಿದ್ದಾರೆ ನಂದ ಕಿಶೋರ್.

  ಚಿತ್ರ ಯಾಕೆ ಲೇಟ್ ಆಯ್ತು ಎಂದು ಹೇಳೋಕಾಗಲ್ಲ. ಆಗುವುದೆಲ್ಲ ಒಳ್ಳೆಯದಕ್ಕೆ ಎಂದುಕೊಂಡಿದ್ದೇನೆ ಎನ್ನುವ ನಂದ, ಈ ಚಿತ್ರ ಧ್ರುವ ಸರ್ಜಾ ಕೆರಿಯರ್‍ನಲ್ಲಿ ಬೇರೆಯದೇ ಲೆವೆಲ್ಲಿನ ಸಿನಿಮಾ ಎನ್ನುತ್ತಾರೆ.

  ತಾಯಿ ಮತ್ತು ಬಾಂಧವ್ಯದ ಸುತ್ತ ಇರುವ ಕಥೆ ಇದು. ಸಣ್ಣ ಭಿನ್ನಾಭಿಪ್ರಾಯ ಮನುಷ್ಯನ ಮನಸ್ಸಿನ ಮೇಲೆ ಏನೆಲ್ಲ ಪರಿಣಾಮ ಬೀರುತ್ತವೆ. ನಮ್ಮ ತಪ್ಪುಗಳು, ಕರ್ಮಫಲಗಳದ್ದೇ ಕಥೆ ಚಿತ್ರದಲ್ಲಿದೆ. ಚಿತ್ರದಲ್ಲಿ ಧ್ರುವ ಎಕ್ಸ್‍ಟ್ರೀಮ್ ಆಗಿ ನಟಿಸಿದ್ದರೆ, ರಶ್ಮಿಕಾ ಮಂದಣ್ಣ ಸೂಕ್ಷ್ಮಮನಸ್ಸಿನ ಶಿಕ್ಷಕಿಯಾಗಿ ನಟಿಸಿದ್ದಾರೆ. ರಾಘವೇಂದ್ರ ರಾಜ್‍ಕುಮಾರ್ ಗುರುವಿನ ಪಾತ್ರದಲ್ಲಿದ್ದಾರೆ. ಬಿ.ಕೆ.ಗಂಗಾಧರ್ ಚಿತ್ರದ ನಿರ್ಮಾಪಕ.

 • ರಾಬರ್ಟ್ ಮಾಸ್ಕ್

  robert masks image

  ಕೊರೊನಾ ಬಂದ ಬೆನ್ನಲ್ಲೇ ಥರೇವಾರಿ ಮಾಸ್ಕ್‍ಗಳೂ ಮಾರುಕಟ್ಟೆಗೆ ಬಂದಿವೆ. ಆದರೆ, ದರ್ಶನ್ ಫ್ಯಾನ್ಸ್, ಅಭಿಮಾನದಲ್ಲಿ ತಾವು ಎಂದೆಂದೂ ಮುಂದೆ ಅನ್ನೋದನ್ನ ಮತ್ತೆ ಸಾಬೀತು ಮಾಡಿದ್ದಾರೆ. ಮಾರುಕಟ್ಟೆಯಲ್ಲೀಗ ರಾಬರ್ಟ್ ಮಾಸ್ಕ್‍ಗಳಿವೆ.

  you_tube_chitraloka1.gif

  ಇದು ಅಭಿಮಾನಿಗಳದ್ದೇ ಐಡಿಯಾ. ರಾಬರ್ಟ್ ಚಿತ್ರದ ಕ್ರೇಜ್ ಹೇಗಿದೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲವೇನೋ. ಉಮಾಪತಿ, ತರುಣ್ ಸುಧೀರ್ ಮತ್ತು ದರ್ಶನ್ ಕಾಂಬಿನೇಷನ್ನಿನ ಚಿತ್ರ ರಾಬರ್ಟ್. ಚಿತ್ರೀಕರಣ, ಡಬ್ಬಿಂಗ್ ಎಲ್ಲವನ್ನೂ ಮುಗಿಸಿ ಸೆನ್ಸಾರ್ ಅಂಗಳಕ್ಕೇರಲು ಕಾಯುತ್ತಿರೋ ಚಿತ್ರಕ್ಕೆ ಸದ್ಯಕ್ಕೆ ಬ್ರೇಕ್ ಹಾಕಿರೋದು ಕೊರೊನಾ. ಕೊರೊನಾ ಹೋದ ಕೂಡ್ಲೇ ಥಿಯೇಟರುಗಳಲ್ಲಿರುತ್ತೆ. ಸದ್ಯಕ್ಕೆ ಅಭಿಮಾನಿಗಳು ತಮ್ಮ ಮಾಸ್ಕ್‍ನಲ್ಲಿ ರಾಬರ್ಟ್‍ನನ್ನು ಅರೆಸ್ಟ್ ಮಾಡಿದ್ದಾರೆ.

 • ರಾಬರ್ಟ್ ಮೆಚ್ಚುಗೆ ಗಳಿಸಿದ ಆ ಹೀರೋಗಳು ಯಾರ್ ಗೊತ್ತಾ..?

  roberrt ream salutes real hero's

  ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಹೀರೋಗಳ ಕಥೆ. ಅರೆ.. ಹೀರೋ ದರ್ಶನ್ ಅಲ್ಲವಾ ಅಂದ್ಕೋಬೇಡಿ. ಇಡೀ ಚಿತ್ರತಂಡ ಚಿತ್ರದ ಹೀರೋಗಳೆಂದು ಪರಿಗಣಿಸಿರೋದು ಚಿತ್ರಕ್ಕೆ ತೆರೆಯ ಹಿಂದೆ ದುಡಿದ ಕಾರ್ಮಿಕರನ್ನ.

  ಮೇ 01ರ ಕಾರ್ಮಿಕ ದಿನಾಚರಣೆ ವಿಶೇಷವಾಗಿ ಚಿತ್ರದ ಮೇಕಿಂಗ್ ವಿಡಿಯೋ ಹೊರಬಿಟ್ಟಿರುವ ರಾಬರ್ಟ್ ಟೀಂ, ಚಿತ್ರದ ಕಾರ್ಮಿಕರನ್ನು ಹೀರೋಗಳ ಪಟ್ಟಕ್ಕೇರಿಸಿ ಧನ್ಯವಾದ ಅರ್ಪಿಸಿದೆ.

  ನಮ್ಮ ಕನಸು ಸಾಕಾರಗೊಳಿಸುವ ನಿಜವಾದ ನಾಯಕರು ಬೆಳ್ಳಿ ಪರದೆ ಹಿಂದಿದ್ದಾರೆ. ರಾಬರ್ಟ್ ಟೀಂನಲ್ಲಿ ದುಡಿಯುತ್ತಿರುವ ತಾಂತ್ರಿಕ ವರ್ಗಕ್ಕೆ ಕಾರ್ಮಿಕ ದಿನಾಚರಣೆ ಶುಭಾಶಯಗಳು ಎಂದಿದೆ ರಾಬರ್ಟ್ ಟೀಂ.

  ಉಮಾಪತಿ ನಿರ್ಮಾಣದ ಚಿತ್ರ ರಾಬರ್ಟ್. ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾ ಇಷ್ಟು ಹೊತ್ತಿಗೆ ರಿಲೀಸ್ ಆಗಿ ಥಿಯೇಟರಿನಲ್ಲಿ ಹವಾ ಎಬ್ಬಿಸಬೇಕಿತ್ತು. ಲಾಕ್ ಡೌನ್ ಕಾರಣದಿಂದಾಗಿ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಲಾಕ್ ಡೌನ್ ಮುಗಿದು ಥಿಯೇಟರುಗಳು ಓಪನ್ ಆದ ತಕ್ಷಣ ಸಿನಿಮಾ ರಿಲೀಸ್ ಆಗಬಹುದು.

 • ರಾಬರ್ಟ್ ರಂಜಾನ್ ಗೆಟಪ್

  roberrt's ramadhan special poster creates senston

  ಪ್ರತಿ ಹಬ್ಬಕ್ಕೂ ಒಂದೊಂದು ಸ್ಪೆಷಲ್ ಟ್ರೀಟ್‍ಮೆಂಟ್ ಕೊಡುತ್ತಲೇ ಬಂದ ರಾಬರ್ಟ್, ರಂಜಾನ್ ಹಬ್ಬಕ್ಕೆ ವಿಶೇಷ ಪೋಸ್ಟರ್ ಜೊತೆ ಕಿಕ್ ಕೊಟ್ಟಿದ್ದಾನೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ತರುಣ್ ಸುಧೀರ್ ಮತ್ತು ಉಮಾಪತಿ ಕಾಂಬಿನೇಷನ್ನಿನ ಚಿತ್ರ ರಾಬರ್ಟ್. ಕೊರೊನಾ ಇಲ್ಲದೇ ಹೋಗಿದ್ದರೆ ಇಷ್ಟು ಹೊತ್ತಿಗೆ ಚಿತ್ರಮಂದಿರಗಳಲ್ಲಿ ದೂಳೆಬ್ಬಿಸಬೇಕಿದ್ದ ಸಿನಿಮಾ ಲಾಕ್ ಡೌನ್ ಮುಕ್ತಿಗೆ ಕಾಯುತ್ತಿದೆ.

  ಪೋಸ್ಟರ್ ರಿಲೀಸ್ ಮಾಡಿರುವ ದರ್ಶನ್, ಎಲ್ಲರ ಜೀವನ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಈ ಚಿತ್ರ ನಿಮ್ಮ ಮಡಿಲು ಸೇರಲಿದೆ. ಮನೆಯಲ್ಲೇ ಇರಿ, ಮನೆಯಲ್ಲಿರುವವರಿಗೆ ಜಾಗೃತವಾಗಿರಿ ಎಂದು ಸಂದೇಶ ನೀಡಿದ್ದಾರೆ.

 • ರಾಬರ್ಟ್ ರಿಲೀಸ್ ಆಗೋಕೂ ಮೊದಲೇ ಸೂಪರ್ ಹಿಟ್

  even before the movie release roberrt is super hit

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇರುವ ಇನ್ನೊಂದು ಬಿರುದೇ ಬಾಕ್ಸಾಫೀಸ್ ಸುಲ್ತಾನ. ಅದು ರಾಬರ್ಟ್ ಚಿತ್ರದಲ್ಲಿ ಮತ್ತೊಮ್ಮೆ ಸಾಬೀತಾಗುವ ಸೂಚನೆಗಳಿವೆ. ಏಕೆಂದರೆ ರಾಬರ್ಟ್ ಚಿತ್ರ ರಿಲೀಸ್ ಆಗುವುದಕ್ಕೂ ಮೊದಲೇ 50 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಸಿದೆ.

  ಉಮಾಪತಿ ನಿರ್ಮಾಣದ ರಾಬರ್ಟ್ ಚಿತ್ರದ ಡಿಸ್ಟ್ರಿಬ್ಯೂಷನ್ ಹಕ್ಕುಗಳು 35 ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದೆಯಂತೆ. ಚಿತ್ರದ ಆಡಿಯೋ, ಸ್ಯಾಟಲೈಟ್, ಡಬ್ಬಿಂಗ್ ರೈಟ್ಸ್ ಎಲ್ಲವನ್ನೂ ಲೆಕ್ಕ ಹಾಕಿದರೆ ಬಿಸಿನೆಸ್ ಮೊತ್ತ 50 ಕೋಟಿಗೂ ಹೆಚ್ಚು.

  ದರ್ಶನ್ ಅವರಿಗೆ ಇದೇ ಮೊದಲ ಬಾರಿಗೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿನೋದ್ ಪ್ರಭಾಕರ್ ಇನ್ನೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಶಾ ಭಟ್, ಸೋನಲ್ ಮಂಥೆರೋ ಕೂಡಾ ಪ್ರಧಾನ ಪಾತ್ರಗಳಲ್ಲಿರೋ ಚಿತ್ರ ಏಪ್ರಿಲ್ 9ರಂದು ರಿಲೀಸ್ ಆಗಲಿದೆ.

   

 • ರಾಬರ್ಟ್ ರಿಲೀಸ್ ಡೇಟ್ ಫಿಕ್ಸ್

  roberrt releae date fixed

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ರಿಲೀಸ್ ಡೇಟ್ ಪಕ್ಕಾ ಆಗಿದೆ ಎನ್ನುತ್ತಿದೆ ಗಾಂಧಿನಗರ. ಚಿತ್ರತಂಡ ಅಧಿಕೃತವಾಗಿ ಘೋಷಿಸಿಕೊಳ್ಳದೆ ಇದ್ದರೂ, ಏಪ್ರಿಲ್ 9ಕ್ಕೆ ರಾಬರ್ಟ್ ರಿಲೀಸ್ ಎನ್ನಲಾಗುತ್ತಿದೆ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಪೋಸ್ಟರುಗಳಿಂದಲೇ ಭರ್ಜರಿ ಕುತೂಹಲ ಹುಟ್ಟಿಸಿರುವ ಚಿತ್ರ.

  ರಾಬರ್ಟ್ ಚಿತ್ರ ಮೊದಲು ಅನೌನ್ಸ್ ಆಗಿದ್ದು, ಪೋಸ್ಟರ್ ರಿಲೀಸ್ ಆಗಿದ್ದೆಲ್ಲ ಕ್ರಿಸ್‍ಮಸ್ ವಿಶೇಷ ದಿನವೇ ರಿಲೀಸ್ ಆಗಿತ್ತು. ಇದೇ ವಿಶೇಷತೆ ಏಪ್ರಿಲ್ 9ಕ್ಕೂ ಇದೆ. ಏಪ್ರಿಲ್ 10ರಂದು ಗುಡ್ ಫ್ರೈಡೇ ಬರಲಿದೆ.

  ದರ್ಶನ್ ನಾಯಕರಾಗಿರುವ ಚಿತ್ರದಲ್ಲಿ ಆಶಾ ಭಟ್ ನಾಯಕಿ. ವಿನೋದ್ ಪ್ರಭಾಕರ್ ಮತ್ತು ಸೋನಲ್ ಮಂಥೆರೋ ಪ್ರಮುಖ ಪಾತ್ರಗಳಲ್ಲಿರೋ ಚಿತ್ರವಿದು. ಅವರ ಪಾತ್ರ ಮತ್ತು ಕಥೆಯ ಬಗ್ಗೆ ನಿಗೂಢತೆ ಕಾಪಾಡಿಕೊಂಡೇ ಬಂದಿದ್ದಾರೆ ತರುಣ್ ಸುಧೀರ್. ಉಮಾಪತಿ ನಿರ್ಮಾಣದ ರಾಬರ್ಟ್ ಚಿತ್ರ ಈ ಕಾರಣಕ್ಕಾಗಿಯೇ ಭಾರಿ ಕುತೂಹಲ ಮೂಡಿಸಿದೆ.

 • ರಾಬರ್ಟ್ ಲುಕ್ಕು.. ಸ್ಯಾಂಡಲ್ ವುಡ್ ಕಿಕ್ಕು

  sandalwood celebrates roberrt motion poster release

  ಉದ್ದ ಆರಡಿ..

  ಹೃದಯ ಮೆಲೋಡಿ..

  ಕೋಪ ಕಾಲಡಿ..

  ಬಾ ಬಾ ಬಾ ನಾ ರೆಡಿ..

  ಶ್ಯೂರ್ ಶಾಟ್ ಬರೆದಿಡಿ..

  ಇದು ಸಿಂಪಲ್ ಸುನಿ ಬರೆದ ಸಾಲು. ಇದು ಅಭಿಮಾನಿಗಳನ್ನು ಅದೆಷ್ಟು ಥ್ರಿಲ್ಲಾಗಿಸಿದೆ ಎಂದರೆ, ಇದು ರಾಬರ್ಟ್ ಚಿತ್ರದ ಹಾಡಿರಬೇಕು ಎಂದು ಕಲ್ಪಿಸಿಕೊಂಡು ಥ್ರಿಲ್ಲಾಗಿಬಿಟ್ಟಿದ್ದಾರೆ. ದರ್ಶನ್, ತರುಣ್ ಸೇರಿದಂತೆ ಎಲ್ಲರಿಗೂ ಈ ಸಾಲುಗಳು ಖುಷಿ ಕೊಟ್ಟಿವೆ.

  ವಿಶೇಷವೆಂದರೆ, ಇಡೀ ಸ್ಯಾಂಡಲ್‍ವುಡ್ ರಾಬರ್ಟ್ ಮೋಷನ್ ಪೋಸ್ಟರ್ ಹಬ್ಬವನ್ನು ಸಂಭ್ರಮಿಸಿದೆ.

  ನಟ ನಿರ್ದೇಶಕ ರಿಷಬ್ ಶೆಟ್ಟಿ, ಚೇತನ್ ಕುಮಾರ್, ಎಪಿ ಅರ್ಜುನ್, ಅನೂಪ್ ಭಂಡಾರಿ, ಶ್ರೀಮುರಳಿ, ಪ್ರಜ್ವಲ್ ದೇವರಾಜ್, ಮಹೇಶ್ ಕುಮಾರ್, ಪವನ್ ಒಡೆಯರ್,

  ನಟಿಯರಾದ ಅಶಿಕಾ ರಂಗನಾಥ್, ಪವಿತ್ರಾ ಗೌಡ,

  ನಟರಾದ ಸೃಜನ್ ಲೋಕೇಶ್, ಶರಣ್, ನಿರೂಪ್ ಭಂಡಾರಿ, ಧರ್ಮ ಕೀರ್ತಿರಾಜ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್, ಶೈಲಜಾ ನಾಗ್ ಮೊದಲಾದವರು ಅಭಿನಂದಿಸಿದ್ದಾರೆ. 

 • ರಾಬರ್ಟ್ ವಿಜಯಯಾತ್ರೆ ಮುಹೂರ್ತ ಫಿಕ್ಸ್

  ರಾಬರ್ಟ್ ವಿಜಯಯಾತ್ರೆ ಮುಹೂರ್ತ ಫಿಕ್ಸ್

  ಬಾಕ್ಸಾಫೀಸ್ ಸುಲ್ತಾನ್ ಒಂದು ಕಡೆ ಗಲ್ಲಾ ಪೆಟ್ಟಿಗೆ ಚಿಂದಿ ಉಡಾಯಿಸುತ್ತಿದೆ. ದಿನ ದಿನವೂ ಕೋಟಿಗಳ ಲೆಕ್ಕದಲ್ಲಿ ಬಾಕ್ಸಾಫೀಸ್ ಭರ್ತಿಯಾಗುತ್ತಿದೆ. ಚಿತ್ರದ ಸಕ್ಸಸ್ ಮೀಟ್ನಲ್ಲಿ ಹೇಳಿದ್ದಂತೆ ದರ್ಶನ್ ನೇತೃತ್ವದಲ್ಲಿ ರಾಬರ್ಟ್ ಟೀಂ ವಿಜಯೋತ್ಸವವನ್ನಾರಂಭಿಸಿದೆ.

  ಮಾರ್ಚ್ 29ರಿಂದ ರಾಬರ್ಟ್ ಚಿತ್ರದ ವಿಜಯಯಾತ್ರೆ ಶುರುವಾಗಲಿದೆ. ಮಾರ್ಚ್ 29ಕ್ಕೆ ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಮತ್ತು ಮಾರ್ಚ್ 30ರಂದು ಧಾರವಾಡ, ಹುಬ್ಬಳ್ಳಿ,ಹಾವೇರಿಯಲ್ಲಿ ವಿಜಯೋತ್ಸವ ನಡೆಯಲಿದೆ.

  ಮಾರ್ಚ್ 30ರಂದು ಶಿವಮೊಗ್ಗ, ಹಾಸನ ಮತ್ತು ತಿಪಟೂರು ಹಾಗೂ ಏಪ್ರಿಲ್ 1ರಂದು ಗುಂಡ್ಲುಪೇಟೆ, ಮೈಸೂರು, ಮಂಡ್ಯ ಮತ್ತು ಮದ್ದೂರಿನಲ್ಲಿ ವಿಜಯಯಾತ್ರೆ ಫಿಕ್ಸ್ ಆಗಿದೆ. ದರ್ಶನ್ ಮತ್ತು ಟೀಂಗೆ ಕಣ್ಣು ಹೊಡೆಯೋಕೆ ಕಾಯ್ತಾ ಇರಿ..

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery