` roberrt, - chitraloka.com | Kannada Movie News, Reviews | Image

roberrt,

 • ಡಿ ಅಂದ್ರೆ ಡಿ ಡಿ ಡಿ ಡಿ ಬಾಸ್ ಫ್ಯಾನ್ಸ್ ಬಾ ಬಾ ಬಾ ರೆಡಿ.. ರೆಡಿ..

  roberrt;s first single ba ba ba na ready

  ಹಡಗು ಹಿಡಿದು ಪಡೆಯೆ ಬರಲಿ..

  ಹೊಸಕಿ ಬಿಡುವೆ ಕಾಲಡಿ.. ಡಿಡಿಡಿ..

  ಗುಡುಗು ಸಿಡಿಲು ಜೊತೆಗೆ ಬರಲಿ..

  ಕೆಡವಿ ಹೊಡೆಯೋ ಗಾರುಡಿ.. ಡಿಡಿಡಿ..

  ಮೀಸೆ ತಿರುವದೆ ಪೊಗರು ಅದುಮಿಡಿ..

  ಅಹಂಕಾರ ಅನುವುದ ಮೊದಲು ಹೊರಗಿಡಿ..

  ಕಾಲು ಕೆರೆದರೆ ಎಲುಬು ಪುಡಿ ಪುಡಿ..

  ಚಾರ್ಜು ಮಾಡೋ ಪವರಿದೆ.. ಇವನು ಎವರೆಡಿ..

  ಬಾ ಬಾ ಬಾ ನಾನ್ ರೆಡಿ...

  ಹಾಡಿನ ತುಂಬಾ ಡಿ.. ಡಿ..ಡಿ.. ಹಾಡು ರಿಲೀಸ್ ಮಾಡೋಕೂ ಮುನ್ನ ತರುಣ್ ಸುಧೀರ್ ಒಂದು ಟ್ವೀಟ್ ಮಾಡಿದ್ದರು. ಡಿ ಅನ್ನೋದು ಹಲವರಿಗೆ ಅಕ್ಷರವೇ ಇರಬಹುದು ಆದರೆ ಡಿ ಬಾಸ್ ಅಭಿಮಾನಿಗಳಿಗೆ ಅದೊಂದು ಎಮೋಷನ್ ಎಂದಿದ್ದರು. ಅದಕ್ಕೆ ತಕ್ಕಂತೆ ಡಿ ಬಾಸ್‍ಗೆ ಹಬ್ಬದೂಟ ಕೊಟ್ಟಿದ್ದಾರೆ ತರುಣ್ ಸುಧೀರ್.

  ರಾಬರ್ಟ್ ಚಿತ್ರದ ಮೊದಲ ಲಿರಿಕಲ್ ಸಾಂಗ್ ಇದು. 3 ನಿಮಿಷದ ಹಾಡಿಗೆ ಸಾಹಿತ್ಯ ಬರೆದಿರೋದು ನಾಗೇಂದ್ರ ಪ್ರಸಾದ್. ಪ್ರತಿ ಸಾಲೂ ಕೊನೆಯಾಗೋದು ಡಿ ಯಿಂದ ಅನ್ನೋದ್ರಲ್ಲೇ ನಾಗೇಂದ್ರ ಪ್ರಸಾದ್ ಟಚ್ ಇದೆ. ವ್ಯಾಸರಾಜ್ ಘೋಸಲೆ ಹಾಡಿರುವ ಹಾಡಿಗೆ ಮ್ಯೂಸಿಕ್ಕು ಅರ್ಜುನ್ ಜನ್ಯ ಅವರದ್ದು.

  ವ್ಯಾಸರಾಯ ಜೊತೆಗೆ ಸಂತೋಷ್ ವೆಂಕಿ, ಅನಿರುದ್ಧ ಶಾಸ್ತ್ರಿ, ಸುಪ್ರೀತ್ ಫಾಲ್ಗುಣ ಮತ್ತು ನಿಖಿಲ್ ಪಾರ್ಥ ಸಾರಥಿ ಕೂಡಾ ಹಾಡಿದ್ದಾರೆ. ದರ್ಶನ್ ಸ್ಪೆಷಲ್ ಲುಕ್ಕುಗಳ ಸ್ಟಿಲ್‍ಗಳು ವ್ಹಾವ್ ಎನ್ನುವಂತಿದೆ. ಉಮಾಪತಿ ನಿರ್ಮಾಣದ ರಾಬರ್ಟ್ ಏಪ್ರಿಲ್ 9ರಂದು ತೆರೆ ಮೇಲೆ ರಾರಾಜಿಸಲಿದೆ.

 • ಡೈಲಾಗುಗಳನ್ನು ಲಿಂಕ್ ಮಾಡಿಕೊಳ್ಳಬೇಡಿ : ದರ್ಶನ್

  ಡೈಲಾಗುಗಳನ್ನು ಲಿಂಕ್ ಮಾಡಿಕೊಳ್ಳಬೇಡಿ : ದರ್ಶನ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ರಿಲೀಸ್ ಆಗೋಕೂ ಮೊದಲೇ ಈ ಒಂದು ಮಾತು ಹೇಳಿಬಿಟ್ಟಿದ್ದಾರೆ. ಅವರು ಈ ಮಾತು ಹೇಳೋಕೆ ಕಾರಣ ಇತ್ತೀಚಿನ ಘಟನೆ ಮತ್ತು ಅನುಭವಗಳು. ಒಬ್ಬ ಸ್ಟಾರ್ ಸಿನಿಮಾ ರಿಲೀಸ್ ಆದ್ರೆ ಸಾಕು, ಆ ಚಿತ್ರದ ಡೈಲಾಗುಗಳನ್ನು ಅವರವರ ಪರ್ಸನಲ್ ಲೈಫಿಗೆ ಕನೆಕ್ಟ್ ಮಾಡಿಕೊಂಡು ಗದ್ದಲ ಮಾಡೋವ್ರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿಯೇ ದರ್ಶನ್ ಒಂದು ಸ್ಪಷ್ಟನೆ ಕೊಟ್ಟುಬಿಟ್ಟಿದ್ದಾರೆ.

  ನಾನು ಈ ಚಿತ್ರದ ಪ್ರತಿ ಡೈಲಾಗ್ನ್ನು ಮುತುವರ್ಜಿ ವಹಿಸಿಯೇ ಮಾಡಿದ್ಧೇನೆ. ಸಂಭಾಷಣೆ ಬರೆದಿರುವ ಕೆ.ಎಲ್.ರಾಜಶೇಖರ್ ಜೊತೆ ಕುಳಿತಿದ್ದೇನೆ. ಚಿತ್ರದಲ್ಲಿರೋ ಯಾವುದೇ ಸಂಭಾಷಣೆಯನ್ನು ಇನ್ಯಾವುದೋ ಹೀರೋ ಅಥವಾ ಮತ್ತೊಬ್ಬರಿಗೆ ನೋವಾಗುವಂತೆ ಮಾಡಿಲ್ಲ. ಚಿತ್ರದ ಕಥೆ ಮತ್ತು ಪಾತ್ರಕ್ಕೆ ಇರೋ ಡೈಲಾಗ್ಸ್. ಅವುಗಳನ್ನು ನಿಮಗೆ ತೋಚಿದಂತೆ ಕಲ್ಪಿಸಿಕೊಂಡು ವಿವಾದ ಮಾಡಬೇಡಿ. ನಾನು ಸಿನಿಮಾ ನೋಡುವುದು ಮತ್ತು ಬೇರೆಯವರ ಸಿನಿಮಾಗಳ ಅಪ್ಡೇಟ್ ತೆಗೆದುಕೊಳ್ಳೋದು ಕಡಿಮೆ. ಇನ್ನು ಸಂಭಾಷಣೆಯಲ್ಲಿ ಫ್ರೆಶ್ನೆಸ್ ಇರಬೇಕು ಎಂದಷ್ಟೇ ಬಯಸಿ ತಿದ್ದಿ ತೀಡಿದ್ದೇವೆ. ಅಷ್ಟೆ ಎಂದು ಕ್ಲಿಯರ್ ಆಗಿ ಹೇಳಿದ್ಧಾರೆ ದರ್ಶನ್.

  ತರುಣ್ ಸುಧೀರ್ ನಿರ್ದೇಶನದ ಉಮಾಪತಿ ನಿರ್ಮಾಣದ ಸಿನಿಮಾ ರಾಬರ್ಟ್ ಇದೇ ವಾರ ರಿಲೀಸ್. ರಿಲೀಸ್ ಮಾಡುವ ಮುನ್ನವೇ ವಿವಾದ ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಿದ್ಧಾರೆ ದರ್ಶನ್.

 • ತೂಗುದೀಪ ಮನೆಯ ಮೇಲಿರೋ ಉತ್ತರ ಕರ್ನಾಟಕ ಮಂದಿಯ ಋಣ

  ತೂಗುದೀಪ ಮನೆಯ ಮೇಲಿರೋ ಉತ್ತರ ಕರ್ನಾಟಕ ಮಂದಿಯ ಋಣ

  ದರ್ಶನ್ ಅವರದ್ದೊಂದು ಗುಣವಿದೆ. ಅವರಿಗೆ ಕಷ್ಟ ಕಾಲದಲ್ಲಿ ನೆರವಾದ ಒಬ್ಬರನ್ನೂ ಅವರು ಮರೆಯೋದಿಲ್ಲ. ಅದು ರಾಬರ್ಟ್ ಚಿತ್ರದ ಪ್ರೀ-ಈವೆಂಟ್ ಶೋನಲ್ಲೂ ಗೊತ್ತಾಯ್ತು. ರಾಬರ್ಟ್ ಈವೆಂಟ್ಗೆ ಹುಬ್ಬಳ್ಳಿಯಲ್ಲಿ ಜನಸ್ತೋಮವೇ ಸೇರಿತ್ತು. ಅಲ್ಲಿ ವೇದಿಕೆಯೇರಿದ ದರ್ಶನ್ ಇದ್ದಕ್ಕಿದ್ದಂತೆ ಚಪ್ಪಲಿ ಬಿಟ್ಟು ಮಾತನಾಡೋಕೆ ಶುರು ಮಾಡಿದ್ರು. ಅದಕ್ಕೆ ಕಾರಣವೂ ಇತ್ತು.

  ನಮ್ಮ  ಅಪ್ಪನಿಗೆ ಇದ್ದಕ್ಕಿದ್ದಂತೆ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾಗಿದ್ದವು. ಹೆಚ್ಚೂ ಕಡಿಮೆ ಒಂದು ವರ್ಷ ಸಿನಿಮಾನೇ ಇರಲಿಲ್ಲ. ನಟಿಸುವುದು ಬಿಟ್ಟು ಬೇರೇನೂ ಗೊತ್ತಿಲ್ಲದ ನಮ್ಮ ತಂದೆ ಆಗ ಉತ್ತರ ಕರ್ನಾಟಕದಲ್ಲಿ ನಾಟಕ ಪ್ರದರ್ಶನ ಮಾಡಿದ್ರು. ಆಗೆಲ್ಲ ಟಿಕೆಟ್ಟಿನ ಬೆಲೆ ಎರಡೂವರೆ ರೂಪಾಯಿ, 5 ರೂಪಾಯಿ ಮತ್ತು 10 ರೂಪಾಯಿ. ಆಗ ಉತ್ತರ ಕರ್ನಾಟಕದ ಜನ ನಮ್ಮ ತಂದೆಯ ಕಂಪೆನಿಯ ನಾಟಕಗಳನ್ನು ನೋಡಿ ಕೊಟ್ಟ ಹಣವೇ ಇವತ್ತಿನ ನಮ್ಮ ಮೈಸೂರಿನ ಮನೆ. ಆ ಮನೆ ಉತ್ತರ ಕರ್ನಾಟಕದ ಜನರ ಪ್ರೀತಿಯ ಋಣ ಎಂದರು ದರ್ಶನ್.

  ಅಷ್ಟೇ ಅಲ್ಲ, ಸಂಗೊಳ್ಳಿ ರಾಯಣ್ಣ  ಚಿತ್ರದ ವಿಜಯೋತ್ಸವದಲ್ಲಿ ಉತ್ತರ ಕರ್ನಾಟಕಕ್ಕೆ ಹೋಗಿದ್ದಾಗ ಅಲ್ಲಿನ ಹೆಣ್ಣು ಮಕ್ಕಳು ತಲೆಯ ಮೇಲೆ ಸೆರಗು ಹೊದ್ದು, ಚಪ್ಪಲಿ ಬಿಟ್ಟು ದರ್ಶನ್ಗೆ ನಮಸ್ಕಾರ ಮಾಡುತ್ತಿದ್ದರಂತೆ. ಅದನ್ನೆಲ್ಲ ನೋಡಿದಾಗ ನಾವು ಇದಕ್ಕೆಲ್ಲ ಲಾಯಕ್ ಇದ್ದೇವಾ ಅನಿಸಿಬಿಡುತ್ತೆ. ಹೀಗಾಗಿಯೇ ಉತ್ತರ ಕರ್ನಾಟಕದಲ್ಲಿ ಎಲ್ಲೇ ಕಾರ್ಯಕ್ರಮ ನಡೆಯಲಿ, ವೇದಿಕೆಯ ಮೇಲೆ ನಿಂತಾಗ ಚಪ್ಪಲಿ ಧರಿಸೋಕೆ ಮುಜುಗರವಾಗುತ್ತೆ ಎಂದಿದ್ದಾರೆ ದರ್ಶನ್.

  ದರ್ಶನ್ ಹೀಗೆ ಕೃತಜ್ಞತೆಯ ಭಾರವನ್ನು ಉತ್ತರ  ಕರ್ನಾಟಕದ ಜನರ ಮೇಲೆ ಹೊರಿಸಿದರೆ, ಉತ್ತರ ಕರ್ನಾಟಕದ ಮಂದಿ ಅಭಿಮಾನದ ಹೂಮಳೆಯನ್ನೇ ದರ್ಶನ್ ಮೇಲೆ ಸುರಿಸಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್ ಇದೇ ಮಾರ್ಚ್ 11ಕ್ಕೆ ರಿಲೀಸ್ ಆಗುತ್ತಿದೆ. ವಿನೋದ್ ಪ್ರಭಾಕರ್, ಆಶಾ ಭಟ್, ರವಿಶಂಕರ್ ನಟಿಸಿರುವ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನವಿದ್ದರೆ, ಉಮಾಪತಿ ಚಿತ್ರದ ಪ್ರೊಡ್ಯೂಸರ್.

 • ದರ್ಶನ್ V/s ಸುದೀಪ್ : ಏಪ್ರಿಲ್'ನಲ್ಲಿ ಸ್ಟಾರ್ ವಾರ್..?

  ದರ್ಶನ್ V/s ಸುದೀಪ್ : ಏಪ್ರಿಲ್'ನಲ್ಲಿ ಸ್ಟಾರ್ ವಾರ್..?

  ಕನ್ನಡದಲ್ಲಿ ರಿಲೀಸ್ ಡೇಟ್ ಘೋಷಿಸಿದ ಮೊದಲ ಸ್ಟಾರ್ ಸಿನಿಮಾ ಯುವರತ್ನ. ಏಪ್ರಿಲ್ 1ಕ್ಕೆ ಯುವರತ್ನ, ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಬರೋದಾಗಿ ಘೋಷಿಸಿತು.

  ಬೆನ್ನಲ್ಲೇ ಪೊಗರು ಜನವರಿ 29ಕ್ಕೆ ಬರೋದಾಗಿ ಹೇಳಿಕೊಂಡಿತು. ಆದರೆ, ಏಪ್ರಿಲ್, ಸ್ಟಾರ್ ವಾರ್`ಗೆ ಸಾಕ್ಷಿಯಾಗುತ್ತಾ..? ಅಂಥಾದ್ದೊಂದು ಕುತೂಹಲವಂತೂ ಉದ್ಭವಿಸಿದೆ.

  ಏಪ್ರಿಲ್ 23ಕ್ಕೆ ಬರೋದಾಗಿ ರಾಬರ್ಟ್ ನಿರ್ಮಾಪಕ ಉಮಾಪತಿ ಘೋಷಿಸಿದ್ದಾರೆ. ಸೂರಪ್ಪ ಬಾಬು ಅವರ ಕೋಟಿಗೊಬ್ಬ 3 ಕೂಡಾ ಅದೇ ದಿನ ಬರೋದಾಗಿ ಹೇಳಿಕೊಂಡಿದೆ. ಹಾಗಾದರೆ ಏ.23 ದರ್ಶನ್ ವರ್ಸಸ್ ಸುದೀಪ್ ವಾರ್ ಆಗುತ್ತಾ..?

  ಇಲ್ಲ, ಇಲ್ಲ, ಹಾಗೇನೂ ಆಗಲ್ಲ. ನಾವೆಲ್ಲರೂ ಸ್ನೇಹಿತರೇ. ನಾವು ನಿರ್ಮಾಪಕರು ಕುಳಿತು ಮಾತನಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ತೇವೆ ಎನ್ನುತ್ತಾರೆ ನಿರ್ಮಾಪಕ ಉಮಾಪತಿ.

 • ದರ್ಶನ್ ಕಣ್ಣ ಮುಂದೆ ಆಡಿ ಬೆಳೆದ ಹುಡುಗ ಅವರಿಗೇ ಟೀಚರ್ ಆದ ಕಥೆ..!

  ದರ್ಶನ್ ಕಣ್ಣ ಮುಂದೆ ಆಡಿ ಬೆಳೆದ ಹುಡುಗ ಅವರಿಗೇ ಟೀಚರ್ ಆದ ಕಥೆ..!

  ಮಾಸ್ಟರ್ ಕಿಶನ್. ದರ್ಶನ್ ಕಣ್ಣ ಮುಂದೆ ಆಡಿ ಬೆಳೆದ ಹುಡುಗ. ಈಗ ರಾಬರ್ಟ್ ಚಿತ್ರದಲ್ಲಿ ಅವರಿಗೇ ಟೀಚರ್ ಆಗಿಬಿಟ್ಟಿದ್ದಾರೆ.

  ರಾಬರ್ಟ್ ಚಿತ್ರದಲ್ಲಿ ಅಂಡರ್ ವಾಟರ್ ಸೀನ್ ಇದೆ. ಅಂಡರ್ ವಾಟರ್ ಸೀನ್‍ನಲ್ಲಿ ಸ್ವತಃ ದರ್ಶನ್ ನಟಿಸಿದ್ದಾರೆ. ವಿಶೇಷ ಅಂದ್ರೆ ದರ್ಶನ್ ಅವರಿಗೆ ಈಜು ಬರಲ್ಲ. ಹೌದು, ಖಂಡಿತಾ ಈಜು ಬರೋದಿಲ್ಲ. ಅದನ್ನು ಅವರೇ ಹೇಳಿಕೊಂಡಿದ್ದಾರೆ.

  `ಆ ಸೀನ್ ಶೂಟಿಂಗ್‍ಗೆ ಹೋಗುವಾಗ ಬೇಡಬೇಡವೆಂದರೂ ನೆನಪಾಗಿದ್ದು ಮಾಸ್ತಿಗುಡಿ ದುರಂತ. ಹೀಗಾಗಿ ನನಗೆ ಈಜು ಬರಲ್ಲ ಎನ್ನೋದನ್ನೂ ಉಮಾಪತಿ ಮತ್ತು ತರುಣ್ ಇಬ್ಬರಿಗೂ ಹೇಳಿದೆ. ಅವರು ಅದಕ್ಕೆ ಸಾಕಷ್ಟು ಮುಂಜಾಗ್ರತೆ ತೆಗೆದುಕೊಂಡರು. ನನಗೆ ಅಚ್ಚರಿಯಾಗಿದ್ದು ಮಾಸ್ಟರ್ ಕಿಶನ್. ನನ್ನ ಕಣ್ಣ ಮುಂದೆ ಆಡಿ ಬೆಳೆದ ಹುಡುಗ. ಆದರೆ, ಸ್ಕೂಬಾ ಡೈವಿಂಗ್ ವಿಷಯದಲ್ಲಿ ಅದೆಷ್ಟು ಮಾಹಿತಿ ತಿಳಿದುಕೊಂಡಿದ್ದಾನೆ ಅಂದ್ರೆ, ವ್ಹಾವ್ ಎನಿಸುತ್ತೆ.  ಆತ ನನಗೆ ಸಾಕಷ್ಟು ಗೈಡ್ ಮಾಡಿದ' ಎಂದಿದ್ದಾರೆ ದರ್ಶನ್.

 • ದರ್ಶನ್ ತೆಲುಗು ಟೀಸರ್ ರಿಲೀಸ್

  ದರ್ಶನ್ ತೆಲುಗು ಟೀಸರ್ ರಿಲೀಸ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ತೆಲುಗು ಟೀಸರ್ ರಿಲೀಸ್ ಆಗಿದೆ. ರಾಬರ್ಟ್ ಬಿಡುಗಡೆಗೆ ಎದುರಾಗಿದ್ದ ಎಲ್ಲ ಅಡೆತಡೆಗಳೂ ತೆರವಾಗಿದ್ದು, ಮಾರ್ಚ್ 11ರಂದು ರಾಬರ್ಟ್ ತೆಲುಗು ಡಬ್ಬಿಂಗ್ ವರ್ಷನ್, ಆಂಧ್ರ ಮತ್ತು ತೆಲಂಗಾಣದಲ್ಲಿ ರಿಲೀಸ್ ಆಗಲಿದೆ.

  ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ರಾಬರ್ಟ್ ಟೀಸರ್ ಹವಾ ಎಬ್ಬಿಸಿಬಿಡ್ತು. ಉಮಾಪತಿ ನಿರ್ಮಾಣದ ರಾಬರ್ಟ್ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನವಿದೆ. ವಿನೋದ್ ಪ್ರಭಾಕರ್, ಆಶಾ ಭಟ್, ಸೋನಲ್ ಮಂಥೆರೋ ನಟಿಸಿರುವ ಚಿತ್ರ ಈ ವರ್ಷದ ಬಹುನಿರೀಕ್ಷಿತ ಸಿನಿಮಾ.

 • ದರ್ಶನ್ ಫ್ಯಾನ್ಸ್`ಗೆ ಬೇಸರದ ಸುದ್ದಿ

  sad news from roberrt move team

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಜವೀರ ಮದಕರಿ ಚಿತ್ರದ ಚಿತ್ರೀಕರಣವೇ ಮುಂದಕ್ಕೆ ಹೋಯಿತು ಎಂದು ಬೇಸರದಲ್ಲಿರೋ ದರ್ಶನ್ ಅಭಿಮಾನಿಗಳಿಗೆ ಇನ್ನೊಂದು ಬೇಸರದ ಸುದ್ದಿ ಇದು. ಕೊರೊನಾ ಮುಗಿದ ತಕ್ಷಣ ರಿಲೀಸ್ ಆಗಲಿದೆ ಎನ್ನಲಾಗುತ್ತಿದ್ದ ರಾಬರ್ಟ್ ಚಿತ್ರ ಈ ವರ್ಷ ರಿಲೀಸ್ ಆಗುವುದೇ ಡೌಟ್.

  ಕೊರೊನಾ ವ್ಯಾವಹಾರಿಕ ಜಗತ್ತನ್ನೇ ಬದಲಿಸಿಬಿಟ್ಟಿದೆ. ದೊಡ್ಡ ಬಜೆಟ್ ಸಿನಿಮಾ. ಆತುರವಾಗಿ ರಿಲೀಸ್ ಮಾಡೋದು ಬೇಡ. ಹೀಗಾಗಿ ಕೊರೊನಾ ವೈರಸ್ ಸಂಕಷ್ಟವೆಲ್ಲ ಮುಗಿದು, ಎಲ್ಲವೂ ಸಹಜ ಸ್ಥಿತಿಗೆ ಬಂದಮೇಲಷ್ಟೇ ಚಿತ್ರ ರಿಲೀಸ್ ಮಾಡುತ್ತೇವೆ ಎಂದು ಸುಳಿವು ಕೊಟ್ಟಿದ್ದಾರೆ ನಿರ್ಮಾಪಕ ಉಮಾಪತಿ.

  ದರ್ಶನ್ ಅಭಿನಯದ ರಾಬರ್ಟ್ ಚಿತ್ರ, ಈಗಾಗಲೇ ಟ್ರೇಲರ್, ಟೀಸರ್, ಪೋಸ್ಟರ್, ಹಾಡುಗಳಿಂದ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಚಿತ್ರ. ತರುಣ್ ಸುಧೀರ್, ದರ್ಶನ್ ಮತ್ತು ಉಮಾಪತಿ ಕಾಂಬಿನೇಷನ್‍ನ ಚಿತ್ರ ಬಹುಶಃ 2021ರ ಆರಂಭದಲ್ಲಿ ರಿಲೀಸ್ ಆಗಬಹುದು ಎನ್ನಲಾಗುತ್ತಿದೆ.

   

 • ದರ್ಶನ್ ರಾಬರ್ಟ್ ಚಿತ್ರಕ್ಕೆ ಇನ್ನೊಬ್ಬ ಚೆಲುವೆ..!

  another beauty oins darshan's roberrt

  ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ 2020ರ ಬಹುನಿರೀಕ್ಷಿತ ಸಿನಿಮಾ ರಾಬರ್ಟ್. ಈ ಚಿತ್ರದ ಚಿತ್ರೀಕರಣವೂ ಮುಗಿದಿದೆ. ಈ ಚಿತ್ರಕ್ಕೆ ಆಶಾ ಭಟ್ ಹೀರೋಯಿನ್. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರದಲ್ಲಿ ಈಗ ಇನ್ನೊಬ್ಬ ಚೆಲುವೆ ಪ್ರತ್ಯಕ್ಷವಾಗಿದ್ದಾರೆ.

  ರಾಬರ್ಟ್ ಚಿತ್ರಕ್ಕೆ ಬಂದ ಇನ್ನೊಬ್ಬ ಚೆಲುವೆ ತೇಜಸ್ವಿನಿ ಪ್ರಕಾಶ್‌. 2008ರಲ್ಲಿ ತೆರೆ ಕಂಡ ದರ್ಶನ್‌ ಅಭಿನಯದ ಗಜ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ನಟಿಸಿದ್ದ ತೇಜಸ್ವಿನಿ, ಈಗ ರಾಬರ್ಟ್‌ ಚಿತ್ರದಲ್ಲಿ ಮತ್ತೂಮ್ಮೆ ದರ್ಶನ್‌ ಜೊತೆಯಾಗಿದ್ದಾರೆ. ಮಾತಾಡ್‌ ಮಾತಾಡ್‌ ಮಲ್ಲಿಗೆ, ಪ್ರೀತಿ ಏಕೆ ಭೂಮಿ ಮೇಲಿದೆ, ಅರಮನೆ ಮೊದಲಾದ ಚಿತ್ರಗಳಲ್ಲಿ ನಟಿಸಿರುವ ತೇಜಸ್ವಿನಿ, ಚಿತ್ರರಂಗದಿಂದ ದೂರವೇ ಉಳಿದಿದ್ದರು.

  ಉಮಾಪತಿ ನಿರ್ಮಾಣದ ಚಿತ್ರದಲ್ಲಿ ತೇಜಸ್ವಿನಿ ಪಾತ್ರವೇನು ಎಂಬ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ. ಇಷ್ಟಕ್ಕೂ ತರುಣ್ ಸುಧೀರ್ ಚಿತ್ರದ ಯಾವ ಗುಟ್ಟನ್ನು ಹೊರಹಾಕಿದ್ದಾರೆ ಹೇಳಿ. ಗುಟ್ಟನ್ನು ಕಾಪಾಡಿಕೊಂಡೇ ಬರುತ್ತಿರುವ ತರುಣ್ ಸುಧೀರ್ ಚಿತ್ರದಲ್ಲಿ ವಿನೋದ್‌ ಪ್ರಭಾಕರ್‌ ಕೂಡಾ ನಟಿಸಿದ್ದಾರೆ. ಈ ಚಿತ್ರದಲ್ಲಿ ಹಾಡುಗಳಿಗೆ ಅರ್ಜುನ್‌ ಜನ್ಯ, ಹರಿಕೃಷ್ಣ ಹಿನ್ನಲೆ ಸಂಗೀತವಿದೆ.

 • ದರ್ಶನ್ ರೆಕಾರ್ಡ್ BREAK ಮಾಡಿದ ದರ್ಶನ್..!

  ದರ್ಶನ್ ರೆಕಾರ್ಡ್ BREAK ಮಾಡಿದ ದರ್ಶನ್..!

  ದಾಖಲೆ ಇರುವುದೇ ಮುರಿಯೋಕೆ ಅನ್ನೋದು ಈ ಬಾರಿಯೂ ಸುಳ್ಳಾಗಿಲ್ಲ. ಒನ್ಸ್ ಎಗೇನ್ ದರ್ಶನ್ ಸಿನಿಮಾ ಬಾಕ್ಸಾಫೀಸ್ನಲ್ಲಿ ದಾಖಲೆ ಬರೆಯೋಕೆ ಶುರು ಮಾಡಿದೆ. ಈ ಬಾರಿ ದರ್ಶನ್ ಸಿನಿಮಾ ದಾಖಲೆಯನ್ನು ದರ್ಶನ್ ಸಿನಿಮಾನೇ ಬ್ರೇಕ್ ಮಾಡಿದೆ ಅನ್ನೋದು ಸ್ಪೆಷಲ್.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತರುಣ್ ಕಿಶೋರ್ ಸುದೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಫಸ್ಟ್ ಡೇ ಕಂಪ್ಲೀಟ್ ಹೌಸ್ಫುಲ್ ಶೋ ಕಂಡಿದೆ. ರಾಬರ್ಟ್ ರಾಜ್ಯದಲ್ಲಿಯೇ 600 ಕ್ಕೂ ಹೆಚ್ಚು ಕಡೆ ರಿಲೀಸ್ ಆಗಿತ್ತು. ಆಂದ್ರ ತೆಲಂಗಾಣ, ದೆಹಲಿ, ಮುಂಬೈ, ಗೋವಾ ಎಲ್ಲ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿರೋ ಸಿನಿಮಾ, ಮೊದಲ ದಿನವೇ 17 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ರಾಜ್ಯ ಒಂದರಲ್ಲಿಯೇ ಬರೋಬ್ಬರಿ 17.5 ಕೋಟಿ ಗಳಿಸಿದೆ ರಾಬರ್ಟ್ ಸಿನಿಮಾ. ಆಂಧ್ರ ಹಾಗೂ ತೆಲಂಗಾಣದಲ್ಲಿ 3.12 ಕೋಟಿ ಗಳಿಕೆ ಮಾಡಿ ಜಯಭೇರಿ ಮೊಳಗಿಸಿದೆ.

  ಎರಡನೇ ದಿನವೂ ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಈ ಅಬ್ಬರ ಇನ್ನೂ ಕಂಟಿನ್ಯೂ ಆಗೋ ಎಲ್ಲ ಸೂಚನೆಗಳೂ ಇವೆ.

  ಬಿಕೆಟಿ ಏರಿಯಾದಲ್ಲಿ 7 ಕೋಟಿ ಗಳಿಸಿದ್ದರೆ, ಮೈಸೂರು, ಮಂಡ್ಯ ಮತ್ತು ಹಾಸನದಲ್ಲಿ ರಾಬರ್ಟ್ 2 ಕೋಟಿ ರೂ. ಬಾಚಿಕೊಂಡಿದ್ರೆ, ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ 2.24 ಕೋಟಿ ರೂ. ಗಳಿಸಿದೆ. ಶಿವಮೊಗ್ಗ 1ಕೋಟಿ ರೂ., ಹೈದರಾಬಾದ್ ಕರ್ನಾಟಕ 3 ಕೋಟಿ ರೂ., ಬಾಂಬೆ ಕರ್ನಾಟಕದಲ್ಲಿ 2 ಕೋಟಿ ರೂ ಕಲೆಕ್ಷನ್ ಆಗಿದೆ. ಕರ್ನಾಟಕದಲ್ಲಿ ರಾಬರ್ಟ್ ಗಳಿಸಿದ್ದು, ಒಟ್ಟು 17.24 ಕೋಟಿ ರೂಪಾಯಿ. ಅಂದಹಾಗೆ ಇದು ಫಸ್ಟ್

 • ದರ್ಶನ್ ಹುಟ್ಟುಹಬ್ಬಕ್ಕೆ ರಾಬರ್ಟ್ ಕಾಣಿಕೆ

  roberrt team gifts teaser for darshan't birthday

  ದರ್ಶನ್ ಹುಟ್ಟುಹಬ್ಬ ಎಂದಿನಂತೆ ಈ ಬಾರಿಯೂ ಸಮಾಜಸೇವೆಯ ಕೆಲಸಗಳೊಂದಿಗೆ ನಡೆಯಲಿದೆ. ಅಭಿಮಾನಿಗಳು ದರ್ಶನ್ ಮನೆಗೆ ಆಗಮಿಸಿ ಶುಭ ಕೋರುತ್ತಾರೆ. ಕೇಕ್ ಚೆಲ್ಲಾಡುವುದಿಲ್ಲ. ಪಟಾಕಿ ಸಿಡಿಯುವುದಿಲ್ಲ. ಹಾರಾಟ.. ಕೂಗಾಟ.. ಇರುವುದಿಲ್ಲ. ಬದಲಿಗೆ ಅಭಿಮಾನಿಗಳು ಧವಸಧಾನ್ಯ ಸಂಗ್ರಹಿಸಿ ಅನಾಥಾಶ್ರಮ, ಮಠ, ವೃದ್ಧಾಶ್ರಮಗಳಿಗೆ ತಲುಪಿಸುವ ಕೈಂಕರ್ಯ ಮಾಡುತ್ತಾರೆ. ಇದೆಲ್ಲದರ ಜೊತೆಗೆ ರಾಬರ್ಟ್ ಚಿತ್ರತಂಡ ಒಂದು ಉಡುಗೊರೆ ಕೊಡುತ್ತಿದೆ. ರಾಬರ್ಟ್ ಟೀಸರ್ ರಿಲೀಸ್ ಮಾಡುತ್ತಿದೆ.

  ಈಗಾಗಲೇ ಚಿತ್ರೀಕರಣ ಮುಗಿಸಿರುವ ರಾಬರ್ಟ್ ಚಿತ್ರತಂಡ, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಫೆ.16ರ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಟೀಸರ್ ರಿಲೀಸ್ ಆಗಲಿದೆ.

  ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ಉಮಾಪತಿ ದರ್ಶನ್ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಸೆಲಬ್ರೇಟ್ ಮಾಡಲು ಪ್ಲಾನ್ ಮಾಡಿದ್ದಾರೆ.

 • ದರ್ಶನ್`ರ ರಾಬರ್ಟ್ ತೆಲುಗಿಗೆ

  ದರ್ಶನ್`ರ ರಾಬರ್ಟ್ ತೆಲುಗಿಗೆ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರಗಳು ಬೇರೆ ಬೇರೆ ಭಾಷೆಗೆ ಡಬ್ ಆಗಿವೆ. ಅದರಲ್ಲೂ ಭೋಜ್‍ಪುರಿ ಹಾಗೂ ಹಿಂದಿಯಲ್ಲಿ ದರ್ಶನ್ ಚಿತ್ರಗಳಿಗೆ ಒಳ್ಳೆಯ ಡಿಮ್ಯಾಂಡ್ ಇದೆ. ಇತ್ತೀಚೆಗೆ ದರ್ಶನ್`ರ ಕುರುಕ್ಷೇತ್ರಕ್ಕೆ ಒಳ್ಳೆಯ ಮಾರ್ಕೆಟ್ ಕೂಡಾ ಸಿಕ್ಕಿತ್ತು. ಈಗ ರಾಬರ್ಟ್ ಆಗಿ ತೆಲುಗಿಗೆ ಹೊರಟಿದ್ದಾರೆ ಡಿ ಬಾಸ್.

  ತರುಣ್ ಸುಧೀರ್ ನಿರ್ದೇಶನದ ರಾಬರ್ಟ್, ಕನ್ನಡದಲ್ಲಿ ದೊಡ್ಡದೊಂದು ಸಂಚಲನವನ್ನೇ ಸೃಷ್ಟಿಸಿದೆ. ದರ್ಶನ್, ವಿನೋದ್ ಪ್ರಭಾಕರ್, ಆಶಾ ಭಟ್, ಸೋನಲ್ ಮಂಥೆರೋ ನಟಿಸಿರುವ ಚಿತ್ರಕ್ಕೆ ಉಮಾಪತಿ ನಿರ್ಮಾಪಕ.

  ಹೊಸ ಹೊಸ ಸಾಹಸಗಳಿಗೆ ಕೈ ಹಾಕುವ ಸಾಹಸಿ ನಿರ್ಮಾಪಕ ಉಮಾಪತಿ, ರಾಬರ್ಟ್ ಚಿತ್ರವನ್ನು ಬೇರೆಯದೇ ಎತ್ತರಕ್ಕೆ ಹೊತ್ತೊಯ್ಯೊವ ಪ್ಲಾನ್ ಮಾಡಿರುವ ಹಾಗಿದೆ.

 • ದರ್ಶನ್‍ಗೆ ಇರಿಟೇಟ್ ಮಾಡಿದ್ದ ಹುಡುಗನೇ ಇಷ್ಟವಾದ ಕಥೆ..!

  ದರ್ಶನ್‍ಗೆ ಇರಿಟೇಟ್ ಮಾಡಿದ್ದ ಹುಡುಗನೇ ಇಷ್ಟವಾದ ಕಥೆ..!

  ದರ್ಶನ್ ಶೂಟಿಂಗ್ನಲ್ಲಿರುವಾಗ ನಿರ್ಮಾಪಕರ ಪೈಸೆ ಪೈಸೆಯನ್ನೂ ಲೆಕ್ಕ ಹಾಕ್ತಾರೆ. ಅದನ್ನವರು ಹಲವೆಡೆ ಹೇಳಿಕೊಂಡೂ ಇದ್ದಾರೆ. ರಾಬರ್ಟ್ ಶೂಟಿಂಗ್ನಲ್ಲೂ ಹಾಗೆಯೇ ಆಗಿತ್ತಂತೆ.

  ರಾಬರ್ಟ್ ಚಿತ್ರಕ್ಕೆ ಕ್ಯಾಮೆರಾಮನ್ ಆಗಿರೋದು ಸುಧಾಕರ್. ತರುಣ್ ಸುಧೀರ್ ಇಷ್ಟದ ಕ್ಯಾಮೆರಾಮನ್. ಆದರೆ ರಾಬರ್ಟ್ ಶುರುವಾದ ಮೊದಲ ಕೆಲವು ದಿನ ದರ್ಶನ್ ಇವರ ಬಗ್ಗೆ ತುಂಬಾ ಇರಿಟೇಟ್ ಮಾಡಿಕೊಂಡಿದ್ದರಂತೆ.

  ಒಂದೊಂದು ಫ್ರೇಮ್ ಇಡೋಕೂ ತುಂಬಾ ಟೈಮ್ ತೆಗೆದುಕೊಳ್ತಾ ಇದ್ರು. ನನಗೇ ಬೇಜಾರು ಬಂದು ನೀನು ತುಂಬಾ ಕಾಯಿಸ್ತಾ ಇದ್ದೀಯ ಎಂದು ಡೈರೆಕ್ಟ್ ಆಗಿಯೇ ಹೇಳಿದ್ದೆ. ಆದರೆ, ಆತನ ಫ್ರೇಮ್ ನೋಡಿ ಇಷ್ಟವಾಗಿಬಿಡ್ತು. ಅದಾದ ಮೇಲೆ ಸುಧಾಕರ್ಗೆ ನಿನಗೆ ಎಷ್ಟು ಟೈಂ ಬೇಕಾದರೂ ತಗೋ, ಡೋಂಟ್ ವರಿ ಎಂದಿದ್ದೆ. ಸುಧಾಕರ್ ಈ ಚಿತ್ರದ ಇನ್ನೊಬ್ಬ ಹೀರೋ ಎಂಬರ್ಥದಲ್ಲಿ ಮಾತನಾಡಿದ್ದಾರೆ ದರ್ಶನ್.

  ರಾಬರ್ಟ್ ಚಿತ್ರದ ಟ್ರೇಲರುಗಳಲ್ಲಿ ಇದು ಎದ್ದು ಕಾಣಿಸ್ತಿದೆ. ವಿಷ್ಯುವಲ್ ಕ್ವಾಲಿಟಿಯೂ ಸಖತ್ತಾಗಿದೆ. ಮೇಕಿಂಗ್ನಲ್ಲಿ ತರುಣ್ ಸುಧೀರ್ ರಾಜಿಯಾಗಿಲ್ಲ. ಅದ್ಧೂರಿತನದಲ್ಲಿ ಉಮಾಪತಿ ಕಡಿಮೆ ಮಾಡಿಲ್ಲ. ಇಷ್ಟೆಲ್ಲ ಶ್ರಮ ಹಾಕಿರೋ ಸಿನಿಮಾ ರಾಬರ್ಟ್ ಇದೇ ಶಿವರಾತ್ರಿಯಂದು ತೆರೆಗೆ ಬರುತ್ತಿದೆ.

 • ದೇಶವೇ ಜೈ ಹಿಂದ್ ಎನ್ನುವಾಗ ಬರ್ತಾನಾ ರಾಬರ್ಟ್..?

  roberrt release date speculations once again

  ರಾಬರ್ಟ್ ರಿಲೀಸ್ ಯಾವಾಗ ಅನ್ನೋ ಪ್ರಶ್ನೆಗೆ ಚಿತ್ರತಂಡ ಉತ್ತರವನ್ನೇನೋ ಕೊಟ್ಟಿತ್ತು. ಕೊಟ್ಟ ಮಾತಿನಂತೆ ಹೆಜ್ಜೆಯನ್ನೂ ಇಟ್ಟಿತ್ತು. ಆದರೆ ಎಲ್ಲವನ್ನೂ ಕೊರೊನಾ ನುಂಗಿಹಾಕಿತು. ಈಗ ಲಾಕ್ ಡೌನ್ ಮುಗಿಯುವ ಮುನ್ನವೇ ಮತ್ತೆ ಅಭಿಮಾನಿಗಳು ಕೇಳುತ್ತಿದ್ದಾರೆ ರಾಬರ್ಟ್ ರಿಲೀಸ್ ಯಾವಾಗ..?

  ದರ್ಶನ್ ಅಭಿಮಾನಿಗಳನ್ನು ಸಮಾಧಾನ ಮಾಡೋಕೆ ಸಿನಿಮಾ ರಿಲೀಸ್ ಆಗಲೇಬೇಕು. ಆದರೆ ಏನ್ ಮಾಡೋದು..? ಈ ಹಿಂದೆ ರಾಬರ್ಟ್ ಚಿತ್ರದ ಪ್ರತಿ ಅಪ್‍ಡೇಟ್‍ಗಳನ್ನೂ ಸ್ಪೆಷಲ್ ದಿನಗಳಂದೇ ಅಭಿಮಾನಿಗಳಿಗೆ ಉಡುಗೊರೆ ಕೊಟ್ಟಿದೆ ಚಿತ್ರತಂಡ.

  ಗುಡ್ ಫ್ರೈಡೇ, ರಾಮನವಮಿ, ಮೇ 1ರ ಕಾರ್ಮಿಕ ದಿನಾಚರಣೆ ಸೇರಿದಂತೆ ಸ್ಪೆಷಲ್ ಸ್ಪೆಷಲ್ ದಿನಗಳನ್ನೇ ಚಿತ್ರದ ಅಪ್‍ಡೇಟ್‍ಗೆ ಸೆಲೆಕ್ಟ್ ಮಾಡಿಕೊಂಡಿತ್ತು ಉಮಾಪತಿ ಮತ್ತು ತರುಣ್ ಸುಧೀರ್ ಜೋಡಿ. ಈಗ ರಿಲೀಸ್ ಸಸ್ಪೆನ್ಸ್.

  ಹೌದು, ಒಂದು ಮೂಲದ ಪ್ರಕಾರ ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಮಾಡೋ ಬಗ್ಗೆ ಉಮಾಪತಿ ಯೋಚಿಸುತ್ತಿದ್ದಾರಂತೆ. ಆದರೆ ನಿರ್ಧಾರವೇನೇ ಇದ್ದರೂ, ಲಾಕ್ ಡೌನ್ ಮುಗಿದ ಬಳಿಕ. ಮೊದಲು ಜನ ಸೇಫ್ ಆಗಲಿ. ನಂತರ ಸಿನಿಮಾ ಬಗ್ಗೆ ನೋಡೋಣ ಎಂದಿದ್ದಾರೆ ಉಮಾಪತಿ. ಸದ್ಯಕ್ಕೇನೋ ಇಡೀ ದೇಶ ವಂದೇ ಮಾತರಂ ಜೈ ಹಿಂದ್ ಎನ್ನುತ್ತಿರುವಾಗ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಹೆಚ್ಚಿದೆ.

 • ನಿರ್ಮಾಪಕರಿಗೆ ದರ್ಶನ್ ಹೇಳಿದ ಹಾಲು ಕರೆಯುವ ಕಥೆ..!

  ನಿರ್ಮಾಪಕರಿಗೆ ದರ್ಶನ್ ಹೇಳಿದ ಹಾಲು ಕರೆಯುವ ಕಥೆ..!

  ರಾಬರ್ಟ್ ಚಿತ್ರ ಸೂಪರ್ ಸಕ್ಸಸ್ ಆಗಿದೆ. ದರ್ಶನ್ ವೃತ್ತಿ ಜೀವನದ ಇನ್ನೊಂದು ಭರ್ಜರಿ ಸಕ್ಸಸ್ ಸಿನಿಮಾ ಇದು. ಈ ಸಿನಿಮಾದ ಯಶಸ್ಸನ್ನು ನಿರ್ಮಾಪಕರಿಗೆ ಅರ್ಪಿಸಿದ ದರ್ಶನ್ ನಿರ್ಮಾಪಕರಿಗೆ ಹೇಳಿದ್ದು ಹಾಲು ಕರೆಯುವ ಕಥೆ.

  ``ನಾನು ಮೊದಲು ಒಂದು ಎಮ್ಮೆ ತಗೊಂಡೆ. ಅದು 12 ಲೀಟರ್ ಹಾಲು ಕೊಡುತ್ತಿತ್ತು. ಹಾಲು ಕರೆಯುವವನು ವಾರದಲ್ಲಿ 3 ದಿನ ಬಂದರೆ 4 ದಿನ ಕೈಕೊಡುತ್ತಿದ್ದ. ಕೊನೆಗೆ ಬೇಸತ್ತು ನಾನೇ ಒಂದು ದಿನ ಟ್ರೈ ಮಾಡಿದೆ. ಮೊದಲ ದಿನ ನನಗೆ 12 ಲೀಟರ್ ಕರೆಯೋಕೆ ಆಗಲಿಲ್ಲ. 8 ಲೀಟರ್ ಮಾತ್ರ ಕರೆದೆ. ಆಮೇಲೆ ಟ್ರೈ ಮಾಡ್ತಾ ಹೋದೆ. ಹೋಗ್ತಾ ಹೋಗ್ತಾ  ಇನ್ನೂ ಹೆಚ್ಚು ಹಾಲು ಕರೆದೆ. ರಾಬರ್ಟ್‍ನಲ್ಲಿ ಆಗಿದ್ದೂ ಅದೇ'' ಎಂದಿದ್ದಾರೆ ದರ್ಶನ್. ಇಷ್ಟಕ್ಕೂ ರಾಬರ್ಟ್‍ನಲ್ಲಿ ಆಗಿದ್ದೇನು..? ಹಾಲು ಕರೆಯೋ ಕಥೆ ಹೇಳಿದ್ದೇಕೆ..? ಆಗಿದ್ದು ಇಷ್ಟೆ..

  ನಿರ್ಮಾಪಕ ಉಮಾಪತಿ ಚಿತ್ರವನ್ನು ಅಚ್ಚುಕಟ್ಟಾಗಿ ರೀಚ್ ಮಾಡಿಸಿದ್ರು. ಡಿಸ್ಟ್ರಿಬ್ಯೂಷನ್‍ನ್ನು ಅದ್ಭುತವಾಗಿ ನಿರ್ವಹಿಸಿದ್ರು. ನಾನು ಹೇಳೋದಿಷ್ಟೆ, ನನ್ನ ಚಿತ್ರವನ್ನು ಸರಿಯಾಗಿ ರೀಚ್ ಮಾಡಿಸುವ ಶಕ್ತಿ ಇದ್ದರೆ ಮಾತ್ರ ಬನ್ನಿ. ಇಲ್ಲದಿದ್ರೆ ಬೇಡವೇ ಬೇಡ. ಆರಂಭದಲ್ಲಿ ಎಲ್ಲರಿಗೂ ಅಡೆತಡೆಗಳಾಗುತ್ತವೆ. ಹಾಗಂತ ಬಿಟ್ಟರೆ ಗೆಲ್ಲೋಕೆ ಸಾಧ್ಯನಾ..? ನಾವು ನಮ್ಮವರಿಗೆ ಆಫರ್ ಕೊಡೋಣ. 53 ಸಿನಿಮಾ ಆದಮೇಲೆ ನಾನೊಂದು ಪಾಠ ಕಲಿತಿದ್ದೇನೆ. ಡಿಸ್ಟ್ರಿಬ್ಯೂಟರುಗಳನ್ನು ಸರಿಯಾಗಿ ಹಿಡಿದುಕೊಳ್ಳಬೇಕು. ಇಲ್ಲದೇ ಹೋದರೆ ಎಸಿ ರೂಂನಲ್ಲಿ ಕುಳಿತುಕೊಂಡು ಕೋಟಿ ಕೋಟಿ ಹೊಡ್ಕೊಳ್ತಾರೆ ಎಂದಿದ್ದಾರೆ ದರ್ಶನ್.

 • ಫೆಬ್ರವರಿ 5ರಿಂದ ಮೇ 14 : ಸ್ಟಾರ್ ಹಬ್ಬ ಫಿಕ್ಸ್

  ಫೆಬ್ರವರಿ 5ರಿಂದ ಮೇ 14 : ಸ್ಟಾರ್ ಹಬ್ಬ ಫಿಕ್ಸ್

  ಕನ್ನಡದಲ್ಲಿ ಸ್ಟಾರ್ ಸಿನಿಮಾಗಳು ಬಂದರೆ ಪ್ರೇಕ್ಷಕರು ಥಿಯೇಟರಿಗೆ ಖಂಡಿತಾ ಬರುತ್ತಾರೆ ಎಂಬ ವಾದ, ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿದೆ. ಸ್ಟಾರ್ ಚಿತ್ರಗಳೇ ಕ್ಯೂನಲ್ಲಿರೋದ್ರಿಂದ ಎಲ್ಲರೂ ಕುಳಿತು ಮಾತನಾಡಿ, ಒಂದಷ್ಟು ಗ್ಯಾಪ್ ಕೊಟ್ಟು ಥಿಯೇಟರಿಗೆ ಬಂದರೆ ಚಿತ್ರರಂಗಕ್ಕೇ ಒಳ್ಳೆಯದು ಎಂಬ ಅಭಿಪ್ರಾಯವೂ ಕೇಳಿ ಬಂದಿತ್ತು. ಹೀಗಾಗಿಯೇ ಎಲ್ಲ ಚಿತ್ರಗಳ ನಿರ್ಮಾಪಕರೂ ಒಟ್ಟಿಗೇ ಕುಳಿತು ಮಾತನಾಡಿಕೊಂಡು ಒಂದು ಚಿತ್ರ ಇನ್ನೊಂದು ಚಿತ್ರಕ್ಕೆ ಅಡ್ಡಿ ಮಾಡದಂತೆ ರಿಲೀಸ್ ಮಾಡುತ್ತಿದ್ದಾರೆ.

  ಫೆ.5 : ಇನ್ಸ್‍ಪೆಕ್ಟರ್ ವಿಕ್ರಂ : ಪ್ರಜ್ವಲ್ ದೇವರಾಜ್, ಭಾವನಾ ಜೋಡಿ. ಡೈರೆಕ್ಟರ್ ನರಸಿಂಹ, ನಿರ್ಮಾಪಕ ವಿಖ್ಯಾತ್

  ಫೆ.19 : ಪೊಗರು : ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಜೋಡಿ. ನಂದಕಿಶೋರ್ ನಿರ್ದೇಶನ, ಬಿ.ಕೆ.ಗಂಗಾಧರ್ ನಿರ್ಮಾಣ

  ಮಾ.11 : ರಾಬರ್ಟ್, ದರ್ಶನ್, ವಿನೋದ್ ಪ್ರಭಾಕರ್, ಆಶಾ ಭಟ್, ಸೋನಲ್ ಮಂಥೆರೋ ಕಾಂಬಿನೇಷನ್. ತರುಣ್ ಸುಧೀರ್ ನಿರ್ದೇಶನ. ಉಮಾಪತಿ ನಿರ್ಮಾಣ

  ಏ.01 : ಯುವರತ್ನ. ಪುನೀತ್ ರಾಜ್‍ಕುಮಾರ್, ಸಯೇಷಾ  ಜೋಡಿ. ಸಂತೋಷ್ ಆನಂದ ರಾಮ್ ನಿರ್ದೇಶನ, ವಿಜಯ್ ಕಿರಗಂದೂರು ನಿರ್ಮಾಣ

  ಏ.15 : ಸಲಗ, ದುನಿಯಾ ವಿಜಯ್ ನಾಯಕ ಮತ್ತು ನಿರ್ದೇಶಕ. ಸಂಜನಾ ಆನಂದ್ ನಾಯಕಿ. ಡಾಲಿ ಧನಂಜಯ್ ನಟಿಸಿರುವ ಚಿತ್ರಕ್ಕೆ ಕೆ.ಪಿ.ಶ್ರೀಕಾಂತ್ ನಿರ್ಮಾಪಕ.

  ಏ.29 : ಕೋಟಿಗೊಬ್ಬ 3. ಕಿಚ್ಚ ಸುದೀಪ್ ನಟಿಸಿರುವ ಚಿತ್ರಕ್ಕೆ ಶಿವ ಕಾರ್ತಿಕ್ ನಿರ್ದೇಶಕ. ಸೂರಪ್ಪ ಬಾಬು ನಿರ್ಮಾಪಕ.

  ಮೇ. 14 : ಭಜರಂಗಿ 2. ಶಿವರಾಜ್ ಕುಮಾರ್, ಜಾಕಿ ಭಾವನಾ, ಶೃತಿ ನಟಿಸಿರುವ ಚಿತ್ರಕ್ಕೆ ಹರ್ಷ ನಿರ್ದೇಶಕ. ಜಯಣ್ಣ ನಿರ್ಮಾಪಕ.

 • ಬಾ ಬಾ ಬಾ ಮಾರ್ಚ್ 3ಕ್ಕೆ ನಾನ್ ರೆಡಿ

  roberrt's baa baa naan ready tomorrow

  ದಿನಾಂಕ : ಮಾರ್ಚ್ 3

  ಸಮಯ : ಸಂಜೆ 5 ಗಂಟೆ 01 ನಿಮಿಷ

  ಲಗ್ನ : ರಾಬರ್ಟ್ ಲಗ್ನ

  ಮುಹೂರ್ತ : ಅಭಿಮಾನಿಗಳು ಘೋಷಣೆ ಮಾಡುವ ಸಮಯ

  ರಾಬರ್ಟ್ ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋ. ಬಾ ಬಾ ಬಾ ನಾನ್ ರೆಡಿ ಅನ್ನೋ ಹಾಡು ಹೊರಬೀಳಲಿದೆ. ಅಭಿಮಾನಿಗಳು ಹಬ್ಬ ಮಾಡ್ಕೊಳಿ. ಕುತೂಹಲಿಗಳು ತಲೆಗೆ ಕ್ವಶ್ಚನ್ ಮಾರ್ಕ್ ಬಿಟ್ಕೊಳಿ.

  ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರ ಇದುವರೆಗೆ ಟೀಸರು, ಪೋಸ್ಟರುಗಳ ಮೂಲಕವೇ ಕುತೂಹಲ ಹುಟ್ಟಿಸಿರುವ ಸಿನಿಮಾ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಇರೋ ಕಾರಣದ ಜೊತೆ ಜೊತೆಯಲ್ಲಿ, ಇನ್ನಷ್ಟು ಮತ್ತಷ್ಟು ಕುತೂಹಲ ಸೃಷ್ಟಿಸಿಬಿಟ್ಟಿದ್ದಾರೆ ತರುಣ್ ಸುಧೀರ್.

  ಜೊತೆಗೆ ವಿನೋದ್ ಪ್ರಭಾಕರ್, ಸೋನಲ್ ಮಂಥೆರೋ, ಆಶಾ ಭಟ್ ನಟಿಸಿರುವ ಚಿತ್ರಕ್ಕೆ ಅರ್ಜುನ್ ಜನ್ಯಾ ಮ್ಯೂಸಿಕ್ಕಿದೆ.

  ಬಾ ಬಾ ಬಾ ನಾನ್ ರೆಡಿ ಅನ್ನೋ ಹಾಡಿನ ಮೂಲಕ ಪ್ರಚಾರದ ಮೊದಲ ಹೆಜ್ಜೆಯಿಡಲಿದ್ದಾರೆ ನಿರ್ಮಾಪಕ ಉಮಾಪತಿ. ಏಕಕಾಲಕ್ಕೆ ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

 • ಮದಗಜ ನಿರ್ದೇಶಕರಿಗೆ ರಾಬರ್ಟ್ ನಿರ್ಮಾಪಕರಿಂದ ಕಾರ್ ಗಿಫ್ಟ್

  ಮದಗಜ ನಿರ್ದೇಶಕರಿಗೆ ರಾಬರ್ಟ್ ನಿರ್ಮಾಪಕರಿಂದ ಕಾರ್ ಗಿಫ್ಟ್

  ರೋರಿಂಗ್ ಸ್ಟಾರ್ ಮುರಳಿ ನಟನೆಯ ಹೊಸ ಸಿನಿಮಾ ಮದಗಜ. ಆ ಚಿತ್ರಕ್ಕೆ ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶಕ. ಅವರಿಗೆ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಕಾರ್‍ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಂದಹಾಗೆ ಮದಗಜ ಚಿತ್ರಕ್ಕೂ ಉಮಾಪತಿ ಅವರೇ ಪ್ರೊಡ್ಯೂಸರ್.

  ಮದಗಜ ಚಿತ್ರದ ನಿರ್ದೇಶಕರಾದರೂ, ರಾಬರ್ಟ್ ಚಿತ್ರದ ಪ್ರಚಾರ, ಪೈರಸಿ ವಿರುದ್ಧದ ಹೋರಾಟ ಸೇರಿದಂತೆ ಪ್ರತಿ ಹಂತದಲ್ಲೂ ರಾಬರ್ಟ್ ಟೀಂ ಜೊತೆಯಲ್ಲಿದ್ದವರು ಮಹೇಶ್. ಅದರ ಎಫೆಕ್ಟ್ ಪ್ರತಿ ಹಂತದಲ್ಲೂ ಗೋಚರಿಸಿತ್ತು ಕೂಡಾ.

  ಇದರಿಂದ ಖುಷಿಯಾಗಿರುವ ನಿರ್ಮಾಪಕ ಉಮಾಪತಿ ತಮ್ಮ ನಿರ್ದೇಶಕರಿಗೆ ಕಾರ್ ಗಿಫ್ಟ್ ಕೊಟ್ಟಿದ್ದಾರೆ. ಇದು ಮಹೇಶ್ ಅವರ ಮೊದಲ ಕಾರ್ ಎನ್ನುವುದು ವಿಶೇಷ. ತಮಗೆ ಕಾರ್ ಗಿಫ್ಟ್ ಕೊಟ್ಟ ನಿರ್ಮಾಪಕರಿಗೆ ಥ್ಯಾಂಕ್ಸ್ ಹೇಳಿದ್ದಾರೆ ಮಹೇಶ್ ಕುಮಾರ್.

 • ಮನೆ ಮನೆಗೆ ರಾಬರ್ಟ್ : ಮುಹೂರ್ತ ಫಿಕ್ಸ್

  ಮನೆ ಮನೆಗೆ ರಾಬರ್ಟ್ : ಮುಹೂರ್ತ ಫಿಕ್ಸ್

  ಯುವರತ್ನ, ಪೊಗರು ನಂತರ ಮತ್ತೊಂದು ಸ್ಟಾರ್ ಸಿನಿಮಾ ಮನೆ ಮನೆಗೆ ಬರುತ್ತಿದೆ. 50 ದಿನ ಪೂರೈಸಿದ ಮರುವಾರವೇ ಟಿವಿಗಳಲ್ಲೂ ಬಂದ ಪೊಗರು, ಓಟಿಟಿಗಳಲ್ಲಿ ಅದಕ್ಕೂ ಮೊದಲೇ ಬಂದಿತ್ತು. ಇನ್ನು ಯುವರತ್ನ ಚಿತ್ರ ರಿಲೀಸ್ ಆದ 2ನೇ ದಿನಕ್ಕೆ ಸರ್ಕಾರದ ತಿಕ್ಕಲು ನಿರ್ಧಾರಕ್ಕೆ ಬಲಿಯಾಯ್ತು. 2ನೇ ವಾರಕ್ಕೆ ಅಮೇಜಾನ್‍ಗೆ ಬಂದ ಯುವರತ್ನ, ಅಲ್ಲಿಯೂ ಜನ ಮೆಚ್ಚುಗೆ ಗಳಿಸಿದ್ದು ಸುಳ್ಳಲ್ಲ. ಈಗ ರಾಬರ್ಟ್ ಸರದಿ.

  ಅಮೇಜಾನ್ ಪ್ರೈಂನಲ್ಲಿ ಏಪ್ರಿಲ್ 25ರಿಂದ ರಾಬರ್ಟ್ ಪ್ರಸಾವಾಗಲಿದೆ. ಅಮೇಜಾನ್‍ನವರು ದೊಡ್ಡ ಮೊತ್ತ ಕೊಟ್ಟು ರಾಬರ್ಟ್ ಖರೀದಿಸಿದ್ದಾರೆ ಎಂಬ ಸುದ್ದಿ ಇದೆಯಾದರೂ, ಆ ಮೊತ್ತ ಎಷ್ಟು ಅನ್ನೋದು ಎಂದಿನಂತೆ ನಿಗೂಢವಾಗಿಯೇ ಇದೆ.  ಕೊರೊನಾ, 50% ಸೀಟುಗಳ ನಿರ್ಧಾರದಿಂದ ಭಯ ಬಿದ್ದವರು ಈಗ ಮನೆಯಲ್ಲೋ.. ಮೊಬೈಲ್‍ನಲ್ಲೋ ಸಿನಿಮಾ ನೋಡಿಕೊಳ್ಳಬಹುದು.

 • ಮಾರ್ಚ್ 11 : ಕನ್ನಡ, ತೆಲುಗಿನಲ್ಲಿ ರಾಬರ್ಟ್ ರಿಲೀಸ್

  ಮಾರ್ಚ್ 11 : ಕನ್ನಡ, ತೆಲುಗಿನಲ್ಲಿ ರಾಬರ್ಟ್ ರಿಲೀಸ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುಭಾಷೆಯ ಚಿತ್ರಗಳತ್ತ ಮುಖ ಮಾಡಿದ್ದಾರೆ. ಹಾಗೆ ನೋಡಿದರೆ ಹಿಂದಿ ಮತ್ತು ಬೋಜ್‍ಪುರಿ ಭಾಷೆಗಳಲ್ಲಿ ದರ್ಶನ್ ಅವರ ಡಬ್ಬಿಂಗ್ ಚಿತ್ರಗಳಿಗೆ ಒಳ್ಳೆಯ ಡಿಮ್ಯಾಂಡ್ ಇದೆ. ಈಗ ದರ್ಶನ್ ತೆಲುಗಿಗೂ ಲಗ್ಗೆಯಿಡುತ್ತಿದ್ದಾರೆ. ಪುನೀತ್ ಯುವರತ್ನ ಮೂಲಕ ಎಂಟ್ರಿ ಕೊಡುತ್ತಿರುವ ಹೊತ್ತಲ್ಲೇ ದರ್ಶನ್ ಕೂಡಾ ರಾಬರ್ಟ್ ಮೂಲಕ ಎಂಟ್ರಿಯಾಗುತ್ತಿರುವುದು ವಿಶೇಷ. ಆದರೆ, ದರ್ಶನ್ ಸಿನಿಮಾ ಯುವರತ್ನ ಚಿತ್ರಕ್ಕೂ ಹೆಚ್ಚು ಕಡಿಮೆ ಒಂದು ತಿಂಗಳು ಮೊದಲೇ ಬರಲಿದೆ.

  ರಾಬರ್ಟ್ ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡ್ತಿಲ್ಲ. ಥಿಯೇಟರಿನಲ್ಲೇ ರಿಲೀಸ್ ಮಾಡ್ತೇವೆ. ಶೇ.25ರಷ್ಟು ಪ್ರೇಕ್ಷಕರಿಗೆ ಅವಕಾಶ ಕೊಟ್ಟರೂ ಥಿಯೇಟರಿನಲ್ಲೇ ಬರುತ್ತೇವೆ. ಕನ್ನಡ ಮತ್ತು ತೆಲುಗು ಡಬ್ಬಿಂಗ್ ಮುಗಿದಿದೆ. ಎಲ್ಲವೂ ರೆಡಿ ಇದೆ ಎಂದು ಮಾಹಿತಿ ನೀಡಿದ್ದಾರೆ ದರ್ಶನ್.

  ಈ ಚಿತ್ರಕ್ಕೆ ಉಮಾಪತಿ ನಿರ್ಮಾಪಕರಾದರೆ, ತರುಣ್ ಸುಧೀರ್ ನಿರ್ದೇಶಕ. ಇದು ದರ್ಶನ್‍ರ 53ನೇ ಸಿನಿಮಾ. ಚಿತ್ರದಲ್ಲಿ ವಿನೋದ್ ಪ್ರಭಾಕರ್, ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿದ್ದರೆ, ಆಶಾ ಭಟ್ ಹೀರೋಯಿನ್. ಸೋನಲ್ ಮಂಥೆರೋ ಇನ್ನೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ 3 ಹಾಡುಗಳು ರಿಲೀಸ್ ಆಗಿದ್ದು, ಸೂಪರ್ ಹಿಟ್ ಲಿಸ್ಟ್ ಸೇರಿವೆ.

 • ರಾ ರಾ ರಾ ನಾನ್ ರೆಡಿ

  ರಾ ರಾ ರಾ ನಾನ್ ರೆಡಿ

  ರಾಬರ್ಟ್ ಚಿತ್ರದ ಸೂಪರ್ ಹಿಟ್ ಸಾಂಗ್ ಬಾಬಾಬಾ ನಾನ್ ರೆಡಿ. ದರ್ಶನ್ ಅಭಿಮಾನಿಗಳಿಗಂತೂ ಇದು ಹುಚ್ಚೇ ಹಿಡಿಸಿರುವ ಹಾಡು. ಇದೇ ಹಾಡು ಈಗ ರಾರಾರಾ ನಾ ರೆಡಿ ಆಗಿದೆ, ತೆಲುಗಿನಲ್ಲಿ. ಮಾರ್ಚ್ 11ಕ್ಕೆ ರಿಲೀಸ್ ಆಗುತ್ತಿರೋ ಚಿತ್ರದ ಪ್ರಮೋಷನ್ ಶುರುವಾಗಿದ್ದು, ತೆಲುಗು ಆಡಿಯನ್ಸ್‍ಗಾಗಿ ತೆಲುಗು ವರ್ಷನ್ ಸಾಂಗ್ ರಿಲೀಸ್ ಮಾಡಿದ್ದಾನೆ ರಾಬರ್ಟ್.

  ಉಮಾಪತಿ ನಿರ್ಮಾಣದ ರಾಬರ್ಟ್ ಚಿತ್ರಕ್ಕೆ ನಂದಕಿಶೋರ್ ನಿರ್ದೇಶಕ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ವಿನೋದ್ ಪ್ರಭಾಕರ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಕನ್ನಡದ ಜೊತೆ ಜೊತೆಗೆ ಈ ಬಾರಿ ತೆಲುಗು ಮಾರ್ಕೆಟ್ಟಿಗೂ ಏಕಕಾಲಕ್ಕೆ ಲಗ್ಗೆಯಿಡುತ್ತಿದ್ದಾರೆ ದರ್ಶನ್.