` rishab shetty - chitraloka.com | Kannada Movie News, Reviews | Image

rishab shetty

 • 'Bell Bottom 2' Launched; Shooting From March

  'Bell Bottom 2' Launched; Shooting From March

  Rishab Shetty's 'Bell Bottom' which was released in 2019 was a super hit with the film not only successfully completing 100 days, but also being dubbed and remade in other languages. The team had announced that it would like to continue the franchise if the film is a success.

  According to that, the second film in the franchise called 'Bell Bottom 2 - The Curious Case of Chendoova' was launched at the Dharmagiri Manjunatha Temple in Bangalore on Thursday. Puneeth Rajakumar came over as the chief guest and sounded the clap for the first shot of the film.

  'Bell Bottom 2' is not a continuation to 'Bell Bottom'. It is a different story with the same characters. Most of the characters played by Rishab Shetty, Haripriya, Achyuth Kumar and others will be continuing here as well. Tanya Hope has joined the star cast. Jayatheertha says the film will be double to 'Bell Bottom' in terms of quality, entertainment, budget and twists.

  As of now the film is in the pre-production stage and the team is planning to start the shooting by March end as the film needs hectic preparations before the commencement of the shooting. As usual, the story is set in the 1980s and the film will be in retro style. Jayatheertha says this film needs more properties from that period and the team is busy in the research and accumulation of those properties which are needed for the film.

 • 200 ಕೋಟಿ ಕ್ಲಬ್ ಸೇರಿದ ಕಾಂತಾರ

  200 ಕೋಟಿ ಕ್ಲಬ್ ಸೇರಿದ ಕಾಂತಾರ

  ದಿನ ದಿನಕ್ಕೂ ಕಾಂತಾರ ಕ್ರೇಜ್ ಹೆಚ್ಚುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ಕ್ರೇಜ್‍ನ್ನು ರಿಲೀಸ್ ಆದ 4 ವಾರದ ನಂತರವೂ ಉಳಿಸಿಕೊಂಡ ಇನ್ನೊಂದು ಚಿತ್ರ ಇಲ್ಲ. ಈಗಾಗಲೇ ಚಿತ್ರ ನೋಡಿದವರ ಸಂಖ್ಯೆಯಲ್ಲಿ ಕೆಜಿಎಫ್ ಚಾಪ್ಟರ್ 2 ದಾಖಲೆಯನ್ನು ಮೀರಿ ಮುನ್ನುಗ್ಗುತ್ತಿರುವ ಚಿತ್ರ ಕಾಂತಾರ. ಇನ್ನು ಕೆಲವೇ ದಿನಗಳಲ್ಲಿ 1 ಕೋಟಿ ಪ್ರೇಕ್ಷಕರ ಸಂಖ್ಯೆ ಗಡಿ ದಾಟಲಿದೆ. ಹೊಂಬಾಳೆ, ರಿಷಬ್ ಶೆಟ್ಟಿ ಇಬ್ಬರೂ ದಾಖಲೆಗಳ ಸರದಾರರಾಗುತ್ತಿದ್ದಾರೆ.

  ಕಾಂತಾರ ಕನ್ನಡದಲ್ಲಿಯೇ 120 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಅದೂ ಕೂಡಾ ಕರ್ನಾಟಕದಲ್ಲಿಯೇ ಎನ್ನವುದು ವಿಶೇಷ. ವಿಶ್ವದಾದ್ಯಂತ ಸೇರಿ 150 ಕೋಟಿ ದಾಟಿದೆ ಎನ್ನುವುದು ಒಂದು ಅಂದಾಜು.

  ಹಿಂದಿಯಲ್ಲಿ ವಿಶ್ವದಾದ್ಯಂತ 27 ಕೋಟಿ ಕಲೆಕ್ಷನ್ ಮಾಡಿದ್ದು ದಿನೇ ದಿನೇ ಕಲೆಕ್ಷನ್ ಏರುತ್ತಲೇ ಇದೆ. ವಿಶೇಷವೆಂದರೆ ಟಿಕೆಟ್ ದರವನ್ನು ಕಡಿಮೆ ಮಾಡಿದ್ದರೂ ಈ ಕಲೆಕ್ಷನ್ ಒಂದು ದಾಖಲೆಯೇ. ಡಬ್ ಆದ ಸಿನಿಮಾವೊಂದು ಪ್ರತಿ ದಿನವೂ 2 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವುದು ದಾಖಲೆ. ಹಿಂದಿಯಲ್ಲೇ 50 ಕೋಟಿ ಕಲೆಕ್ಷನ್ ದಾಟುವ ಸಾಧ್ಯತೆ ಇದೆ.

  ಕನ್ನಡ ಮತ್ತು ಹಿಂದಿ ಬಿಟ್ಟರೆ ಅತಿ ಹೆಚ್ಚು ಕಲೆಕ್ಷನ್ ಆಗಿರುವುದು ತೆಲುಗಿನಲ್ಲಿ. ತೆಲುಗಿನಲ್ಲಿ 25 ಕೋಟಿ ದಾಟಿದೆ ಕಾಂತಾರ ಕಲೆಕ್ಷನ್.

  ತಮಿಳು ಹಾಗೂ ಮಲಯಾಳಂ ಬಾಕ್ಸಾಫೀಸಿನಲ್ಲೂ ಇತಿಹಾಸ ಬರೆಯುತ್ತಿದೆ. ಆದರೆ ಪಕ್ಕಾ ಲೆಕ್ಕ ಸಿಕ್ಕಿಲ್ಲ.

  ಅಮೆರಿಕದಲ್ಲಿ 1 ಮಿಲಿಯನ್ ಡಾಲರ್ ಕ್ಲಬ್ ಸೇರಿದೆ. ಕೆಜಿಎಫ್ ಬಿಟ್ಟರೆ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಕಾಂತಾರ. ಸಿಂಗಪುರ, ಮಲೇಷ್ಯಾ, ಇಂಡೋನೇಷ್ಯಾದಲ್ಲಿ ಪ್ರೇಕ್ಷಕರ ಒತ್ತಾಯದ ಮೇರೆಗೆ ತಮಿಳು ವರ್ಷನ್ ಇವತ್ತು ರಿಲೀಸ್ ಆಗುತ್ತಿದೆ.

 • 3 ನಿಮಿಷದಲ್ಲೇ ಅಷ್ಟೆಲ್ಲ ಥ್ರಿಲ್ ಕೊಟ್ಟ ಸಿನಿಮಾ.. ಥಿಯೇಟರಿಗೆ ಬಂದ್ರೆ..

  3 ನಿಮಿಷದಲ್ಲೇ ಅಷ್ಟೆಲ್ಲ ಥ್ರಿಲ್ ಕೊಟ್ಟ ಸಿನಿಮಾ.. ಥಿಯೇಟರಿಗೆ ಬಂದ್ರೆ..

  ಹೀರೋ. ರಿಷಬ್ ಶೆಟ್ಟಿ ಬ್ಯಾನರಿನ ಹೊಸ ಸಿನಿಮಾ.  ಮಾರ್ಚ್ 5ಕ್ಕೆ ರಿಲೀಸ್ ಆಗುತ್ತಿರೋ ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇರೋದು ಎರಡು ಕಾರಣಕ್ಕೆ. ಇದು ಬೆಲ್‍ಬಾಟಂ ನಂತರ ರಿಷಬ್ ಶೆಟ್ಟಿ ಮತ್ತೆ ನಾಯಕನಾಗಿ ನಟಿಸಿರೋ ಸಿನಿಮಾ ಎನ್ನುವುದು ಒಂದಾದ್ರೆ, ಎರಡನೆಯದು ಚಿತ್ರದ ಟ್ರೇಲರ್.

  ಒಂದು ಸಿನಿಮಾದಲ್ಲಿ ಏನೇನೆಲ್ಲ ಇರಬಹುದೋ.. ಅದೆಲ್ಲವನ್ನೂ  ಟ್ರೇಲರಿನಲ್ಲಿಯೇ ಕೊಟ್ಟಿರೋದು ಹೀರೋ ಚಿತ್ರದ ಪ್ಲಸ್ ಪಾಯಿಂಟ್. ಅಲ್ಲಿ ಕಾಮಿಡಿ,  ಸಸ್ಪೆನ್ಸ್, ಥ್ರಿಲ್, ಹಾರರ್, ಲವ್.. ಎಲ್ಲವನ್ನೂ ಇಟ್ಟಿದ್ದಾರೆ. ಆದರೆ.. ಯಾವುದನ್ನೂ ಬಿಟ್ಟುಕೊಟ್ಟಿಲ್ಲ. ಕುತೂಹಲವನ್ನು ಕಾಯ್ದಿರಿಸಿದ್ದಾರೆ ರಿಷಬ್ ಶೆಟ್ಟಿ.

  ಅಂದಹಾಗೆ ಈ ಚಿತ್ರಕ್ಕೆ ರಿಷಬ್ ಹೀರೋ ಮತ್ತು ನಿರ್ಮಾಪಕ ಮಾತ್ರ. ಅವರ ಜೊತೆಯಲ್ಲೇ ಇದ್ದ ಭರತ್ ರಾಜ್ ನಿರ್ದೇಶಕ. ಆದರೆ ಕಥೆಯಲ್ಲಿ ರಿಷಬ್ ಶೆಟ್ಟಿ ಪಾತ್ರವೂ ಇದೆ. ಗಾನವಿ ಲಕ್ಷ್ಮಣ್ ಹೀರೋಯಿನ್. ರಿಷಬ್ ಅವರ ಫೇವರಿಟ್ ಪ್ರಮೋದ್  ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ. ಜಯಣ್ಣ ಕಂಬೈನ್ಸ್ ಮೂಲಕ ರಿಲೀಸ್ ಆಗುತ್ತಿರೋ ಸಿನಿಮಾ, ಬೆಲ್‍ಬಾಟಂನ್ನೂ ಮೀರಿದ ಯಶಸ್ಸು ಕಾಣಲಿದೆ ಎನ್ನುವುದು ಚಿತ್ರ ನೋಡಿದವರ ಮಾತು.

 • 31 ದಿನ 305 ಕೋಟಿ : ಕಾಂತಾರ ರೆಕಾರ್ಡ್

  31 ದಿನ 305 ಕೋಟಿ : ಕಾಂತಾರ ರೆಕಾರ್ಡ್

  ಸತತ 6ನೇ ವಾರವೂ ಕಾಂತಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಷ್ಟೊಂದು ದೊಡ್ಡ ಮಟ್ಟದ ಕ್ರೇಜ್ ಹಿಂದೆಂದು ಸೃಷ್ಟಿಯಾಗಿದ್ದಿಲ್ಲ. ಈಗ 300 ಕೋಟಿಯ ಗಡಿಯನ್ನೂ ದಾಟಿರುವ ಕಾಂತಾರ 31ನೇ ದಿನಕ್ಕೆ 305 ಕೋಟಿ ಬ್ಯುಸಿನೆಸ್ ಮಾಡಿದೆ. ಸೆಪ್ಟೆಂಬರ್ 30ರಂದು ರಿಲೀಸ್ ಆದ ಚಿತ್ರಕ್ಕೆ ದಸರಾ ಹಬ್ಬದ ಓಪನಿಂಗ್ ಸಿಕ್ಕಿತ್ತು. ಆಯುಧಪೂಜೆ, ವಿಜಯದಶಮಿ, ಗಾಂಧಿ ಜಯಂತಿ, ದೀಪಾವಳಿ ಸೇರಿದಂತೆ ಸಾಲು ಸಾಲು ರಜೆಗಳಲ್ಲಿ ಪ್ರೇಕ್ಷಕರು ಚಿತ್ರ ನೋಡಲು ಮುಗಿಬಿದ್ದರು. ಈಗ ನೋಡಿದರೆ 300 ಕೋಟಿಯನ್ನೂ ದಾಟಿ ದಾಖಲೆ ಬರೆದಿದೆ.

  ಕೆಜಿಎಫ್ ಚಾಪ್ಟರ್ 2 ನಂತರ ಕಾಂತಾರ ನಂ.2 ಸಿನಿಮಾ ಎನ್ನಿಸಿಕೊಂಡಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಸಿನಿಮಾದ ಪಂಜುರ್ಲಿ ದೈವ ಹಾಗೂ ಗುಳಿಗ ಈಗ ಮನೆ ಮನೆ ಮಾತು. ಶಿವ-ಲೀಲಾ ರೊಮ್ಯಾನ್ಸ್‍ಗೆ ಕಚಗುಳಿಯಿಟ್ಟುಕೊಂಡವರಷ್ಟೋ.. ಚಿತ್ರದ ಒಂದೊಂದು ಪಾತ್ರ ಸನ್ನಿವೇಶವನ್ನೂ ಜನ ಎಂಜಾಯ್ ಮಾಡುತ್ತಿದ್ದಾರೆ.

  ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಶ್ರೀಶ್ರೀಶ್ರೀ ರವಿಶಂಕರ್, ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಸೂಪರ್ ಸ್ಟಾರ್ ರಜನಿಕಾಂತ್, ಕ್ರಿಕೆಟ್ ಆಟಗಾರ ಎಬಿ ಡೆವಿಲಿಯರ್ಸ್, ಅನಿಲ್ ಕುಂಬ್ಳೆ.. ಹೀಗೆ ಸಿನಿಮಾ ಹೊರತಾದ ದಿಗ್ಗಜರೂ ನೋಡಿ ಮೆಚ್ಚಿದ ಸಿನಿಮಾ ಕಾಂತಾರ.

  ಕನ್ನಡದಲ್ಲಿಯೇ 160 ಕೋಟಿ ಕಲೆಕ್ಷನ್ ಮಾಡಿದ್ದು, ತೆಲುಗು ಹಾಗೂ ಹಿಂದಿಯಲ್ಲಿ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ತಮಿಳು, ಮಲಯಾಳಂನಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಹೊಂಬಾಳೆ ಮತ್ತೊಂದು ದಾಖಲೆ ಸೃಷ್ಟಿಸಿದೆ.

 • 95 ಸೆಂಟರ್`ಗಳಲ್ಲಿ ಇವತ್ತೇ ಕಾಂತಾರ ಭರ್ಜರಿ ಶೋ

  95 ಸೆಂಟರ್`ಗಳಲ್ಲಿ ಇವತ್ತೇ ಕಾಂತಾರ ಭರ್ಜರಿ ಶೋ

  ಕಾಂತಾರ ರಿಲೀಸ್ ಆಗುವುದು ನಾಳೆಗೆ. ಸೆ.30ರಂದು ರಿಲೀಸ್ ಆಗಬೇಕಿದ್ದ ಕಾಂತಾರ ಚಿತ್ರದ ಪ್ರೀಮಿಯರ್ ಶೋ ಇವತ್ತೇ ಶುರುವಾಗುತ್ತಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಮೊದಲ ಚಿತ್ರ ಕಾಂತಾರ. ಹೊಂಬಾಳೆಯವರ ಜೊತೆ ಮೊದಲ ಸಿನಿಮಾ. ಚಿತ್ರ ಪ್ಯಾನ್ ಇಂಡಿಯಾ ಮೂವಿ ಅಲ್ಲ. ಆದರೆ ಇಂಗ್ಲಿಷ್ ಸಬ್ ಟೈಟಲ್ಲಿನಲ್ಲಿ ಬಿಡುಗಡೆಯಾಗುತ್ತಿದೆ.

  ಚಿತ್ರದ ಪ್ರೀಮಿಯರ್ ಶೋಗಳಿಗೆ ವ್ಯವಸ್ಥೆ ಮಾಡಲಾಗಿದ್ದು ಒಟ್ಟು 95 ಕೇಂದ್ರಗಳಲ್ಲಿ ಪ್ರೀಮಿಯರ್ ಶೋ ನಡೆಯಲಿವೆ. ಕರ್ನಾಟಕದಲ್ಲಿ 50 ಕಡೆ, ಹೈದರಾಬಾದ್, ಚೆನ್ನೈ, ಕೊಚ್ಚಿ, ಮುಂಬೈ, ಪೂನಾ, ದೆಹಲಿ, ಪಟ್ನಾ ಸೇರಿದಂತೆ ದಕ್ಷಿಣ ಭಾರತದಲ್ಲಿ 25 ಹಾಗೂ ಉತ್ತರ ಭಾರತದಲ್ಲಿ 20 ಕಡೆ ಪ್ರೀಮಿಯರ್ ಶೋಗಳಿವೆ.

  ಶಿವನಾಗಿ ರಿಷಬ್ ಶೆಟ್ಟಿ, ಲೀಲಾ ಆಗಿ ಸಪ್ತಮಿ ಗೌಡ ನಟಿಸಿದ್ದಾರೆ. ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಸೇರಿದಂತೆ ಘಟಾನುಘಟಿಗಳಿದ್ದಾರೆ. ಪ್ರೀಮಿಯರ್ ಶೋ ಹೊರತುಪಡಿಸಿ ದೇಶ ವಿದೇಶಗಳಲ್ಲೂ ಸೆ.30ರಂದೇ ರಿಲೀಸ್ ಆಗುತ್ತಿದೆ ಕಾಂತಾರ. ಎಲ್ಲೆಡೆ ಭರ್ಜರಿ ಬುಕಿಂಗ್ ಆಗಿದೆ.

  ನಮ್ಮ ಹೊಂಬಾಳೆ ಸಂಸ್ಥೆ ಪ್ರತಿ ಚಿತ್ರದ ಮೂಲಕ ಒಂದು ಹೊಸ ತರಹದ ಪ್ರಯತ್ನ ಮತ್ತು ಪ್ರಯೋಗ ಮಾಡುತ್ತಿದೆ. ಕಾಂತಾರ ಸಹ ಅಂಥದ್ದೊಂದು ವಿಭಿನ್ನ ಪ್ರಯೋಗ. ರಿಷಬ್ ಇಲ್ಲಿ ದಕ್ಷಿಣ ಕನ್ನಡದ ವಿಶಿಷ್ಟ ಆಚರಣೆ ಮತ್ತು ಸಂಸ್ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಒಂದೊಳ್ಳೆಯ ಸಂದೇಶ ಕೊಟ್ಟಿದ್ದಾರೆ. ನಮ್ಮ ಇತರೆ ಚಿತ್ರಗಳಂತೆ ಕಾಂತಾರ ಕೂಡಾ  ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತದೆ ಎಂಬ ನಂಬಿಕೆ ಇದೆ ಎಂದಿದ್ದಾರೆ ವಿಜಯ್ ಕಿರಗಂದೂರು .

 • Garuda Gamana Vrushaba Vahana Movie Review, Chitraloka Rating 4/5

  Garuda Gamana Vrishaba Vahana Movie Review, Chitraloka Rating 4/5

  Film: Garuda Gamana Vrishaba Vahana

  Director: Raj B Shetty

  Cast: Rishab Shetty, Raj B Shetty, Gopal Deshpande, 

  Duration: 151 minutes 

  Certificate: A

  Stars: 4

  Review by - S Shyam Prasad 

  A slice of gangster lives 

  A raw, violent gangster movie would be an understatement for GGVV. It is for all purposes a gangster flick, but by capturing a slice of the local flavour (set in Mangaladevi, Mangaluru) and subtly exploring the friendship between two vastly different individuals, it becomes one of the best films on the gangster genre. 

  Raj B Shetty, the director who made a completly contrasting debut with Ondu Motteya Kathe, has come up with something so stunningly different. He brings to life characters so natural, the experience is immersive. In the backdrop of the emergece of a new gang buldozzing its way through Mangaluru, the story explores the changing perceptions of close friends as power and circumstances change them beyond recognition.

  Shiva and Hari, brought together by strange circumstances in childhood grow up more as siblings. Shiva, whose rather graphic childhood story makes him a loner and immune to his surroundings, suddenly turns out to be the hammer of Hari. The two go on to build a gang that threatens the existing order of the quiet underworld. That's the basic plot. It is the way it is narrated, that makes the film special. At the interval, wow, is the word that escaped most audience. 

  The second half takes a toll on the overall plot a bit. It loses its way a bit before finding its feet in a convincingly conceptualised climax. The lack of enough interaction between Hari and Shiva could be the reason for a little loss of excitement. However, the brilliant casting and some superlative performances keeps the engagement levels high. Raj B Shetty is so convincing that you will be left wondering if he shot his own life as a movie. Rishab Shetty shows that he can fit into any role but more than that, he has shown the willingness to be part of films where he is not a conventional 'hero'. 

  The process of bringing the coastal flavour to the mainstream of Kannada films, which started a decade ago, seems to have finally hit the bullseye with GGVV. There is also perfect sync in the design of the film. The sounds, colours, styles and words come together to build a very good movie. In time, GGVV may be considered a cult classic and it has all the trappings of garnering such a status.

   

  -Movie Review By S Shyam Prasad

 • Hero Movie Review: Chitraloka Rating 3.5/5

  Hero Movie Review: Chitraloka Rating 3.5/5

  After Bell Bottom and Katha Sangama, Rishab Shetty returns with yet another entertainer with a difference! Unlike the usual hero-centric action drama, this film focuses more on the creative script, performances and its making. That apart, Ajaneesh Lokanath packs it up with a perfect background score coupled with soothing numbers in between.

  What makes 'Hero' a great watch is its subtle approach with a handful of unique characters. Further, action laced with humour makes the experience more joyful as it drives the audience for a thrilling end.

  Every aspect of Hero is attached with creativity. Made during the lockdown period, the entire team has thrived hard to make Hero a winner. And, they won in doing so. Insofar as the violence on the screen is concerned, the script justifies but has no adverse effect whatsoever as a whole and is solely made for pure entertainment.

  Bharat Raj along with his entire directorial team have delivered a good content with newness and originality written all over. Rishab Shetty along with Ganavi steal the show while Pramod as the 'main villain' and the whole team's performance is definitely the highlights of Hero. It is the story and the way which it is presented (marking) makes Hero the real Hero. Violence is just a part while the big picture is the content-driven 'action comedy'.

  Every character has something in it without being diffused in the presence of lead characters. Each and every aspect, everyone and everything in Hero is beautifully showcased with hardly anything left to criticise. It is undoubtedly one of the best in recent times. Watch 'Hero' for the story and its making. The team emerges as a hero and not just the lone usual central character referred to as 'hero' in a movie.

 • KFCC Felicitates National Award Winners

  kfcc honoring national award winners image

  The Karnataka Film Chamber of Commerce on Friday evening felicitated the National award winners. The National film awards for the year 2018 was announced recently and Kannada film industry has got a record 13 awards in various categories. This is the first time, in the history of National film awards that any film industry is getting so many awards for its contribution. The award function will be held soon. Meanwhile, the Karnataka Film Chamber of Commerce had organised a small event and felicitated the National award winners.

  Rishab Shetty, Mansore, Child artiste Rohith, Umapathy Gowda, Udayaravi Hegade and others were present at the occasion. President Jairaj, past presidents Sa Ra Govindu, S A Chinnegowda and others were also present at the occasion.

 • Rishab Shetty's 'Hero' To Release On March 5th

  Rishab Shetty's 'Hero' To Release On March 5th

  Rishab Shetty's 'Hero' which was shot during the post lockdown is all set to release on the 05th of March across Karnataka. Rishab took to his Twitter handle on Thursday and announced the release date of the film.

  Post lockdown, Rishab is said to be the first to start shooting for the film. The actor in a recently held press conference had announced that the shooting for the film commenced on the 07th of July and got completed in a 45 day single schedule in a Coffee Estate in Chickmagalur. After that, the team was busy with the post-production of the film and now has announced the release date of the film.

  'Hero' which has a caption called 'You cannot be a Hero without being a coward' is directed by debutante Bharath Raj and scripted by Rishab Shetty and team. Apart from acting and scripting, Rishab has produced the film under his Rishab Shetty Productions banner. The film stars Ganavi Lakshman, Pramod Shetty, Kolar Manju and others in prominent roles. Ajaneesh Lokanath is the music director, while Aravind Kashyap is the cinematographer.

 • VINU BALANJA'S NATHURAM IS A GANDHI FOLLOWER

  nathuram image

  The name 'Nathuram’ Godse reminds of one of the most tragic incident in the Indian history. Nathuram Vinayak Godse, a right-wing advocate of Hindu nationalism assassinated Mahatma Gandhi in New Delhi on 30 January 1948. He shot Gandhi in the chest three times at point-blank range.

  Wondering about the connection of Nathuram and the Kannada film industry? Well, the popular small screen director Vinu Balanja who makes his directorial debut in sandalwood with the movie titled 'Nathuram’, has a complete different take on it!

  The movie 'Nathuram’ starring Rishab Shetty in the lead is unique for a reason, as the director reveals that unlike the real Nathuram who shot Mahathma Gandhi, his reel character Nathuram in the movie is a follower of Gandhian principles.

  Vinu Balanja of the fame of ‘Preethi Illada Mele’, ‘Love Lavike’, and many more popular tele serials kicks starts his debut movie ‘Nathuram’ went on the floor recently with the muharat being attended by Rakshit Shetty, wishing the best to his friend Rishab Shetty.

  Seems like Rishab is on a hunt for varied characters, first as a detective in 'Bell Bottom’ and then in a different role for the upcoming anthology film 'Katha Sangama’, and 'Nathuram’ being is latest. Another director turned popular actor in the making.

 • ಅನಂತ್`ನಾಗ್ : ಇದು ಅಭಿಮಾನಿಯ ಅಭಿಮಾನದ ಕಿರುಚಿತ್ರ

  ಅನಂತ್`ನಾಗ್ : ಇದು ಅಭಿಮಾನಿಯ ಅಭಿಮಾನದ ಕಿರುಚಿತ್ರ

  ರಿಷಬ್ ಶೆಟ್ಟಿ ಅನಂತ್ ನಾಗ್ ಅವರ ಅಭಿಮಾನಿ. ಅವರಿಗೆ ನಿರ್ದೇಶನವನ್ನೂ ಮಾಡಿರುವ ರಿಷಬ್, ಅನಂತ್ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂದು ಅಭಿಯಾನವನ್ನೇ ಶುರು ಮಾಡಿದವರು. ಈಗ ಅವರನ್ನು ಪರಿಚಯಿಸುವ ಒಂದು ಕಿರುಚಿತ್ರವನ್ನೇ ಡಾಕ್ಯುಮೆಂಟರಿ ರೂಪದಲ್ಲಿ ಅಭಿಮಾನಿಗಳ ಎದುರು ಇಟ್ಟಿದ್ದಾರೆ.

  ಅನಂತ್ ನಾಗ್ ಅವರ ರಂಗಭೂಮಿ, ಹಿಂದಿ, ಮರಾಠಿ, ಕನ್ನಡ ಚಿತ್ರಗಳ ನಟನೆ, ನಟನೆಯಲ್ಲಿನ ವೈವಿಧ್ಯ, ಸಂಗೀತ... ಎಲ್ಲ ಸಾಧನೆಯನ್ನೂ ಚಿಕ್ಕದಾಗಿ ಮತ್ತು ಅಷ್ಟೇ ಚೊಕ್ಕವಾಗಿ ಚೆಂದದ ಇಂಗ್ಲೀಷಿನಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು ಅಭಿಮಾನಿಯೊಬ್ಬ.. ಅಭಿಮಾನದಿಂದ.. ಅಭಿಮಾನಕ್ಕೋಸ್ಕರವೇ ಮಾಡಿದ ಕಿರುಚಿತ್ರ.

 • ಕಂಗನಾ ಮೆಚ್ಚಿದ ಕಾಂತಾರ..

  ಕಂಗನಾ ಮೆಚ್ಚಿದ ಕಾಂತಾರ..

  ಕಾಂತಾರ ಸೃಷ್ಟಿಸಿರುವ ಸಂಚಲನಕ್ಕೆ ಇಡೀ ಇಂಡಿಯನ್ ಚಿತ್ರಪ್ರೇಮಿಗಳಷ್ಟೇ ಅಲ್ಲ, ಚಿತ್ರರಂಗವೂ ಬೆರಗಾಗಿ ನೊಡುತ್ತಿದೆ. ದೈವೀಕ ಸಿನಿಮಾಗಳಿಗೆ ಇವತ್ತಿಗೂ ಪ್ರೇಕ್ಷಕರಿದ್ದಾರಾ ಎಂಬುದು ಜನರನ್ನು ಕಾಡುತ್ತಿರುವ ಪ್ರಶ್ನೆ. ಸರಿಯಾಗಿ ತೋರಿಸಿದ್ರೆ ಒಳ್ಳೆಯ ಸಿನಿಮಾ ತೋರಿಸಿದ್ರೆ ಇವತ್ತಿಗೂ ಜನ ಮೆಚ್ಚಿಕೊಳ್ತಾರೆ. ನೋಡ್ತಾರೆ ಅನ್ನೋದನ್ನು ಕಾಂತಾರ ಸಾಬೀತು ಮಾಡಿದೆ. ಕರ್ನಾಟಕದಲ್ಲಂತೂ ಬಿಡಿ, ಇನ್ನು ನಮ್ಮ ನೆಲದ ಕಥೆ. ನೋಡಿಲ್ಲದವರಿಗೂ ಕೇಳಿಯಾದರೂ ಗೊತ್ತಿರುತ್ತೆ. ಆದರೆ ಹಿಂದಿಯವರಿಗೆ.. ಸೌಥ್ ಸಿನಿಮಾಗಳೆಂದರೆ ಏನೋ ಮಾಡ್ತಾರೆ ಎಂಬಂತೆ ನೋಡುತ್ತಿದ್ದವರಿಗೆ ಹೀಗೂ ಮಾಡ್ತಾರಾ ಎಂದು ಅಚ್ಚರಿ ಪಡುವಂತೆ ಸಿನಿಮಾ ಮಾಡಿದ್ದಾರೆ. ಒನ್ಸ್ ಎಗೇನ್ ಕಾಂತಾರ.

  ಈಗಾಗಲೇ ಕಾಂತಾರ ಚಿತ್ರ ನೋಡಿ ಮಧುರ್ ಭಂಡಾರ್‍ಕರ್, ರಾಮ್ ಗೋಪಾಲ್ ವರ್ಮಾ ಮೊದಲಾದ ದಿಗ್ಗಜ ನಿರ್ದೇಶಕರು ಮೆಚ್ಚಿದ್ದಾರೆ. ಚಿತ್ರದ ಬಗ್ಗೆ ಕೇಳುತ್ತಿದ್ದೇನೆ. ಬಿಡುವಾದ ತಕ್ಷಣ ನೋಡುತ್ತೇನೆ ಎಂದು ಹೇಳಿದ್ದರು ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್. ಈಗ ಸಿನಿಮಾ ನೋಡಿದ್ದಾರೆ.

  ವ್ಹೋವ್.. ಈಗಷ್ಟೇ ಕುಟುಂಬದೊಂದಿಗೆ ಸಿನಿಮಾ ನೋಡಿ ಬಂದೆ. ಈ ಹ್ಯಾಂಗೋವರ್‍ನಿಂದ ಹೊರಬರಲು ನನಗೆ ಇನ್ನೂ ಒಂದು ವಾರ ಸಮಯ ಬೇಕು. ನೆನಪಿಸಿಕೊಂಡರೆ ಈಗಲೂ ರೋಮಾಂಚನವಾಗುತ್ತಿದೆ. ಡೈರೆಕ್ಟರ್ ರಿಷಬ್ ಶೆಟ್ಟಿಯವರೇ ಹ್ಯಾಟ್ಸಾಫ್. ಕಥೆಗಾರ ರಿಷಬ್ ಶೆಟ್ಟಿಯವರೇ ಹ್ಯಾಟ್ಸಾಫ್. ನಟ ರಿಷಬ್ ಶೆಟ್ಟಿಯವರೇ ಹ್ಯಾಟ್ಸಾಫ್. ಚಿತ್ರದ ಆಕ್ಷನ್, ಆಕ್ಟಿಂಗ್, ಮ್ಯೂಸಿಕ್, ಅಭಿನಯ.. ಎಲ್ಲವೂ ಬ್ರಿಲಿಯಂಟ್.. ಎಂದು ಚಿತ್ರದ ಬಗ್ಗೆ ಎಕ್ಸೈಟ್ ಆಗಿ ಮಾತನಾಡಿದ್ದಾರೆ ಕಂಗನಾ.

  ಭಾರತೀಯ ಸಂಪ್ರದಾಯ, ಜನಪದ, ಇಲ್ಲಿನ ನೆಲದ ನಂಬಿಕೆ, ಸಮಸ್ಯೆಗಳನ್ನು ಚೆಂದದ ಕಥೆಯೊಂದಿಗೆ ಸಿನಿಮಾಗೆ ತಂದಿದ್ದೀರಿ. ಚಿತ್ರಮಂದಿರದಲ್ಲಿದ್ದ ಪ್ರತಿಯೊಬ್ಬರೂ ಇಂಥ ಅನುಭವ ಹಿಂದೆಂದೂ ಆಗಿರಲಿಲ್ಲ ಎಂದು ಥ್ರಿಲ್ ಆಗಿದ್ದರು ಎಂದಿದ್ದಾರೆ. ಕಂಗನಾ ರಣಾವತ್ ಅಭಿನಂದನೆಗೆ ಧನ್ಯವಾದ ಅರ್ಪಿಸಿದೆ ಕಾಂತಾರ ಟೀಂ.

 • ಕಾಂತಾರ : ವರಾಹರೂಪಂ ಹಾಡು ಡಿಲೀಟ್

  ಕಾಂತಾರ : ವರಾಹರೂಪಂ ಹಾಡು ಡಿಲೀಟ್

  ಕಾಂತಾರದ ವಿಶ್ವರೂಪವನ್ನು ಜಗತ್ತಿಗೇ ಪರಿಚಯಿಸಿದ್ದು ಕಾಂತಾರದ ವರಾಹರೂಪಂ. ಆದರೆ ಸಿನಿಮಾ ಬಿಡುಗಡೆಯಾಗದ ಕೆಲವೇ ದಿನಗಳಲ್ಲಿ ವರಾಹರೂಪಂ ಹಾಡು ವೊರಿಜಿನಲ್ ಅಲ್ಲ, ಕಾಪಿ ಮಾಡಿದ್ದು ಎಂಬ ಆರೋಪ ಕೇಳಿ ಬಂದಿತ್ತು. ಕೇರಳದ ತೈಕ್ಕುಡಂ ಬ್ರಿಡ್ಜ್ ತಂಡದವರು ಹಾಡಿನ ವಿರುದ್ಧ ಕಾಪಿ ರೈಟ್ ಉಲ್ಲಂಘನೆ ಕೇಸು ಹಾಕಿದ್ದರು. ತೈಕ್ಕುಡಂ ತಂಡದ ನವರಸಂ ಮ್ಯೂಸಿಕ್ ಆಲ್ಬಂನ ಯಥಾವತ್ ಕಾಪಿ ಈ ಹಾಡು ಎಂದು ದೂರಿದ್ದರು.

  ವರಾಹರೂಪಂ ಹಾಡು ನಮ್ಮದು. ನವರಸಂ ಮ್ಯೂಸಿಕ್‍ನ್ನು ಯಥಾವತ್ ಕಾಪಿ ಮಾಡಿ ವರಾಹರೂಪಂ ಹಾಡು ಸೃಷ್ಟಿಸಲಾಗಿದೆ. ನಮಗಿನ್ನೇನೂ ಬೇಡ, ಕ್ರೆಡಿಟ್ ಕೊಡಿ ಎಂದು ಕೇಳಿತ್ತು. ನಿರ್ದೇಶಕ ರಿಷಬ್ ಶೆಟ್ಟಿ ಕೂಡಾ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಪರವಾಗಿಯೇ ನಿಂತಿದ್ದು ಕೋರ್ಟಿನಲ್ಲಿ ಗೆಲ್ಲುವುದಕ್ಕೆ ಹೋರಾಡುತ್ತಿದ್ದಾರೆ. ಇದರ ಮಧ್ಯೆಯೇ ಹಾಡು ಡಿಲೀಟ್ ಆಗಿದೆ.

  ಕೇರಳದ ಕೊಯಿಕ್ಕೋಡ್ ನ್ಯಾಯಾಲಯ ಹಾಡಿಗೆ ಸ್ಟೇ ಕೊಟ್ಟಿತ್ತು. ಈಗ ಆ ಹಾಡನ್ನು ಹೊಂಬಾಳೆ ಯೂಟ್ಯೂಬ್ ಚಾನೆಲ್ಲಿಂದ ಡಿಲೀಟ್ ಮಾಡಲಾಗಿದೆ.

  ಕೋರ್ಟ್ ಅದೇಶ ನೀಡಿದ 2 ವಾರಗಳ ನಂತರ ಹಾಡನ್ನು ಡಿಲೀಟ್ ಮಾಡಲಾಗಿದೆ. ಈಗಲೂ ಈ ಕ್ಷಣಕ್ಕೂ ಹೊಂಬಾಳೆ ತಂಡ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಡು ತಮ್ಮ ವೊರಿಜಿನಲ್ ಸೃಷ್ಟಿಯೇ ಹೊರತು ಕದ್ದಿದ್ದಲ್ಲ ಎಂದು ವಾದಿಸುತ್ತಿದ್ದಾರೆ. ಇದುವರೆಗೆ ಈ ಹಾಡನ್ನು ಮೂರೂವರೆ ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದರು.

 • ಕಾಂತಾರ : ಸಮ್‍ಥಿಂಗ್ ಸ್ಪೆಷಲ್

  ಕಾಂತಾರ : ಸಮ್‍ಥಿಂಗ್ ಸ್ಪೆಷಲ್

  ಕಾಂತಾರ. ಅದೊಂದು ಅಪರೂಪದ ಪದ. ಕನ್ನಡದ ಬಗ್ಗೆ ತುಂಬಾ ಒಳ್ಳೆಯ ಜ್ಞಾನ ಇರುವವರು ಕೇಳಿರಬಹುದಾದ ಪದ ಕಾಂತಾರ. ಡಿಕ್ಷನರಿ ನೋಡಿದರೆ ಕಾಂತಾರಾ ಅಂದರೆ ದಟ್ಟ ಕಾಡು ಅನ್ನೋ ಅರ್ಥವಿದೆ. ಅಂತಾದ್ದೊಂದು ಅಪರೂಪದ ಪದವನ್ನ ತಮ್ಮ ಚಿತ್ರಕ್ಕೆ ಟೈಟಲ್ ಮಾಡಿದ್ದಾರೆ ರಿಷಬ್ ಶೆಟ್ಟಿ.

  ಇಂತಾದ್ದೊಂದು ವಿಶೇಷದೊಂದಿಗೆ ಶುರುವಾಗುವ ಚಿತ್ರದಲ್ಲಿರೋದು ಪರಿಸರದ ಕಥೆ. ಇತ್ತೀಚೆಗೆ ತಾವೊಂದು ಸಿನಿಮಾ ಮಾಡುತ್ತಿದ್ದು, ಪರಿಸರದ ಕಥೆ ಹೇಳುತ್ತೇನೆ ಎಂದಿದ್ದರು ರಿಷಬ್. ಆ ಕಥೆಗೀಗ ಹೊಂಬಾಳೆ ಫಿಲಮ್ಸ್ ಕೈಜೋಡಿಸಿದೆ.

  ಹೊಂಬಾಳೆ ಎಂದರೇನೇ ಚಿಗುರು. ಪರಿಸರದ ಕಥೆಗೂ ಬ್ಯಾನರ್‍ಗೂ ಹೊಂದಿಕೆಯಾಗುತ್ತಿದೆ.

  ಸದ್ಯಕ್ಕೆ ಕನ್ನಡದಲ್ಲಿ ಯಶ್, ಪುನೀತ್, ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ಮಾಡುತ್ತಿರೋ ಹೊಂಬಾಳೆ ಅತ್ತ ತೆಲುಗಿನಲ್ಲಿ ಪ್ರಭಾಸ್ ಜೊತೆ ಸಿನಿಮಾ ಮಾಡುತ್ತಿದೆ. ಜ್ಯೂ.ಎನ್‍ಟಿಆರ್ ಜೊತೆ ಸಿನಿಮಾ ಘೋಷಿಸಿದೆ. ಹೀಗೆ ದೇಶದ ದೊಡ್ಡ ಬ್ಯಾನರ್ ಆಗಿರುವ ಹೊಂಬಾಳೆ ಫಿಲಮ್ಸ್ ಈಗ ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡಲು ಮುಂದಾಗಿರುವುದೇ ವಿಶೇಷ.

  ಅಂದಹಾಗೆ ಈ ಚಿತ್ರದಲ್ಲಿ ರಿಷಬ್ ಅವರೇ ಹೀರೋ ಮತ್ತು ರಿಷಬ್ ಅವರೇ ಡೈರೆಕ್ಟರ್. ಇದುವರೆಗೆ ರಿಷಬ್ ತಾವು

  ಹೀರೋ ಆಗಿ ನಟಿಸಿರುವ ಚಿತ್ರಕ್ಕೆ ತಾವೇ ನಿರ್ದೇಶಕರಾಗಿರಲಿಲ್ಲ. ಇದು ಮತ್ತೊಂದು ವಿಶೇಷ.

  ಚಿತ್ರದ ಪೋಸ್ಟರಿನಲ್ಲಿ ಕಾಡ್ಗಿಚ್ಚು, ಕಂಬಳ, ದೈವದ ಕಾಲುಗಳ ದರ್ಶನವಾಗುತ್ತಿದೆ. ಚಿತ್ರದ ಬಹುತೇಕ ಚಿತ್ರೀಕರಣ ಕುಂದಾಪುರದ ಕೆರಾಡಿಯಲ್ಲಿ ನಡೆಯಲಿದೆ. ಆಗಸ್ಟ್ 27ರಿಂದ ಶೂಟಿಂಗ್ ಸ್ಟಾರ್ಟ್ ಎಂದಿದ್ದಾರೆ ರಿಷಬ್ ಶೆಟ್ಟಿ. ಪ್ರಮೋದ್ ಶೆಟ್ಟಿ, ಕಿಶೋರ್, ಅಚ್ಯುತ್ ಕುಮಾರ್ ನಟಿಸುತ್ತಿದ್ದಾರೆ. 

 • ಕಾಂತಾರ 2ಗೆ ದೈವದ ಅಪ್ಪಣೆ

  ಕಾಂತಾರ 2ಗೆ ದೈವದ ಅಪ್ಪಣೆ

  ರಿಷಬ್ ಶೆಟ್ಟಿ ಕಾಂತಾರ ನಂತರ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕಾಂತಾರ ನಂತರ ಮತ್ತೊಮ್ಮೆ ಕಾಂತಾರ. ಅಷ್ಟೆ. ರಿಷಬ್ ಶೆಟ್ಟಿ ಮತ್ತು ತಂಡ ಕಾಂತಾರ ಚಿತ್ರದ ಸೀಕ್ವೆಲ್ ಮಾಡಲು ನಿರ್ಧರಿಸಿದ್ದು, ಕಾಂತಾರ 2 ಸ್ಕ್ರಿಪ್ಟ್ ವರ್ಕ್ ಶುರುವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಕಾಂತಾರ 2 ಬರುತ್ತಾ ಎನ್ನುವ ಪ್ರಶ್ನೆಯ ಜೊತೆಯಲ್ಲೇ ದೈವಗಳ ಕುರಿತು ಸಿನಿಮಾ ಮಾಡಲು ಕೆಲವರು ಆಕ್ಷೇಪವನ್ನೂ ವ್ಯಕ್ತ ಪಡಿಸಿದ್ದರು. ಹೀಗಾಗಿ ಕಾಂತಾರ 2 ಬಗ್ಗೆ ಸಹಜವಾಗಿಯೇ ಕುತೂಹಲ ಕೂಡ ಮೂಡಿತ್ತು. ರಿಷಬ್ ಶೆಟ್ಟಿ ಪಂಜುರ್ಲಿ ದೈವದ ಮೊರೆ ಹೋಗಿದ್ದರು. ದೈವ ಹಲವು ಷರತ್ತುಗಳೊಂದಿಗೆ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.

  ಮಂಗಳೂರು ಹೊರವಲಯದಲ್ಲಿ ನಡೆದ  ಪಂಜುರ್ಲಿ ಕೋಲದಲ್ಲಿ ಕಾಂತಾರ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರ್, ನಾಯಕಿ ಗೌತಮಿ ಗೌಡ ಸೇರಿದಂತೆ ಬಹುತೇಕ ಸದಸ್ಯರು ಹಾಜರಿದ್ದರು. ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ನೇತೃತ್ವದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲಾದಲ್ಲಿ ಕಾಂತರ 2 ಸಿನಿಮಾ ಮಾಡುವ ಕುರಿತು ರಿಷಬ್ ಒಪ್ಪಿಗೆ ಕೇಳಿದ್ದರು.

  ದೈವದ ಜೊತೆಗಿನ ಮಾತುಕತೆಯಲ್ಲಿ ದೈವ ಹಲವು ಸೂಚನೆಗಳ ಜೊತೆ ಸಿನಿಮಾ ಮಾಡಲು ಅನುಮತಿ ನೀಡಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಿನಿಮಾದ ಕಥೆ ಮಾಡಲು ರಿಷಬ್ ಶೆಟ್ಟಿ ಅಂಡ್ ಟೀಮ್ ಹುರುಪಿನಿಂದಲೇ ತಯಾರಾಗಿದೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಆದರೆ ಮೂಲಗಳ ಪ್ರಕಾರ ಕೆಲವೇ ದಿನಗಳಲ್ಲಿ ಕಾಂತಾರ 2 ಸೆಟ್ಟೇರಲಿದೆ ಎನ್ನಲಾಗಿದೆ.

 • ಕಾಂತಾರ ಕರ್ನಾಟಕದಲ್ಲಿ 1 ಕೋಟಿ ದಾಖಲೆ

  ಕಾಂತಾರ ಕರ್ನಾಟಕದಲ್ಲಿ 1 ಕೋಟಿ ದಾಖಲೆ

  ಕಾಂತಾರ ಚಿತ್ರ ಮತ್ತೊಂದು ದಾಖಲೆ ಬರೆದಿದೆ. ರಿಷಬ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಕಾಂತಾರ ನಿರೀಕ್ಷೆಗೂ ಮೀರಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. 6ನೇ ವಾರದಲ್ಲಿ ಮುನ್ನುಗ್ಗುತ್ತಿರುವ ಚಿತ್ರದ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ ಕಾಂತಾರದ್ದು ದೈವೀಕ ಹಿಟ್. ಈಗ ಈ ಚಿತ್ರ ಕರ್ನಾಟಕದಲ್ಲಿ ಒಂದು ವಿಶೇಷ ದಾಖಲೆ ಬರೆದಿದೆ.

  ಕರ್ನಾಟಕದಲ್ಲಿ ಕಾಂತಾರ ನೋಡಿದವರ ಸಂಖ್ಯೆ 1 ಕೋಟಿ ದಾಟಿದೆ. ಇದು ಇದುವರೆಗೆ ಕಂಡು ಕೇಳಿಲ್ಲದ ದಾಖಲೆ. ಸೆಪ್ಟೆಂಬರ್ 30ರಂದು ರಿಲೀಸ್ ಆಗಿದ್ದ ಕಾಂತಾರ 25 ದಿನದಲ್ಲಿ ಕೆಜಿಎಫ್ 2 ದಾಖಲೆ ಬ್ರೇಕ್ ಮಾಡಿತ್ತು. 77 ಲಕ್ಷ ಟಿಕೆಟ್ ಸೇಲ್ ಆಗಿತ್ತು. ಅದು ಒಂದು ದಾಖಲೆ. ತನ್ನದೇ ದಾಖಲೆಯನ್ನು ಮುರಿಯುತ್ತಾ ಮುನ್ನುಗ್ಗುತ್ತಿರುವ ಕಾಂತಾರ ಚಿತ್ರದ ಟಿಕೆಟ್ ಸೇಲ್ ಆಗಿರುವ ಸಂಖ್ಯೆ 1 ಕೋಟಿ ದಾಟಿದೆ. ಇದು ಕೇವಲ ಕರ್ನಾಟಕದ ಲೆಕ್ಕ.

  ಕಾಂತಾರದ ಪ್ರಮುಖ ಚಿತ್ರಮಂದಿರ ವೀರೇಶ್ ಸಿನಿಮಾಸ್‍ನಲ್ಲಿಯೇ 1.30 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೇಲ್ ಆಗಿವೆಯೆಂದರೆ ಅದು ಕಾಂತಾರ ಪವಾಡ. ತೆಲುಗು ಹಾಗೂ ಹಿಂದಿಯಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ. ತೆಲುಗಿನಲ್ಲಿ 50 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿರುವ ಕಾಂತಾರ ಹಿಂದಿಯಲ್ಲಿ ಆಗಲೇ 70 ಕೋಟಿ ಹತ್ತಿರದಲ್ಲಿದೆ. ಅಧಿಕೃತ ಅಥವಾ ಸೋರ್ಸ್ ಲೆಕ್ಕವೂ ಸಿಗದೇ ಇರುವುದು ತಮಿಳು ಹಾಗೂ ಮಲಯಾಳಂನಲ್ಲಿ ಮಾತ್ರ. ಅಮೆರಿಕದಲ್ಲಿ 2 ಮಿಲಿಯನ್ ಡಾಲರ್ ಕಲೆಕ್ಷನ್ ಮಾಢಿದ ಮೊದಲ ಕನ್ನಡ ಸಿನಿಮಾ. ಹಾಗೆ ನೋಡಿದರೆ ಅತೀ ಹೆಚ್ಚು ಜನ ಚಿತ್ರಮಂದಿರಕ್ಕೆ ಬರುವಂತೆ ಮಾಡಿದ ಕಾಂತಾರದ್ದು ನಿಜವಾದ ಯಶಸ್ಸು.

 • ಕಾಂತಾರ ಕ್ರೇಜ್ ಸ್ಟಾರ್ಟ್ : ತುಳುವಿನಲ್ಲೂ ರಿಲೀಸ್

  ಕಾಂತಾರ ಕ್ರೇಜ್ ಸ್ಟಾರ್ಟ್ : ತುಳುವಿನಲ್ಲೂ ರಿಲೀಸ್

  ರಿಷಬ್ ಶೆಟ್ಟಿ ಹೀರೋ ಮತ್ತು ನಿರ್ದೇಶಕ. ಹೊಂಬಾಳೆ ಬ್ಯಾನರ್‍ನ ಸಿನಿಮಾ.. ಇಷ್ಟಿದ್ದ ಮೇಲೆ ಕ್ರೇಜ್ ಶುರುವಾಗುತ್ತದೆಂದೇ ಲೆಕ್ಕ. ನಿರೀಕ್ಷೆ  ಸುಳ್ಳಾಗಿಲ್ಲ. ಬುಕ್ಕಿಂಗ್ ಶುರುವಾಗಿದ್ದೇ ತಡ.. ಪ್ರೇಕ್ಷಕರು ರೆಡಿಯಾಗುತ್ತಿದ್ದಾರೆ.

  ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿರೋ ಚಿತ್ರ ಕಾಂತಾರ. ಕಾಡು ಮತ್ತು ಮನುಷ್ಯರ ನಡುವಿನ ಹೊಡೆದಾಟದ ಕಥೆಯಲ್ಲಿ ಕರಾವಳಿಯ ಸಂಸ್ಕøತಿ ಇದೆ. ಸೊಗಡು ಇದೆ.

  ಚಿತ್ರದ ಪೇಯ್ಡ್ ಪ್ರೀಮಿಯರ್ ಶೋಗಳು ಶುರುವಾಗಿವೆ. ಬೆಂಗಳೂರು, ಮೈಸೂರು, ಮಂಗಳೂರು,  ಶಿವಮೊಗ್ಗ, ಉಡುಪಿ, ಕುಂದಾಪುರದಲ್ಲಿ ಪ್ರೀಮಿಯರ್ ಶೋಗಳಿವೆ. ವಿಶೇಷವೆಂದರೆ ಕೇರಳದ ಕಾಸರಗೋಡಿನಲ್ಲೂ ಪ್ರೀಮಿಯರ್ ಶೋ ಇರೋದು. ಚೆನ್ನೈ,  ಹೈದರಾಬಾದ್, ಕೊಚ್ಚಿಯಲ್ಲೂ ಪ್ರೀಮಿಯರ್ ಶೋಗಳಿವೆ.

  ಕನ್ನಡದ ಜೊತೆಗೆ ತುಳುವಿನಲ್ಲೂ ಬರುತ್ತಿರುವುದು ವಿಶೇಷ. ಸುಮಾರು ಸಿನಿಮಾ ರಿಲೀಸ್ ಆಗುವ ಥಿಯೇಟರ್, ಮಲ್ಟಿಪ್ಲೆಕ್ಸುಗಳ ಕಥೆ ಬಿಡಿ.. ಹೆದ್ದಾರಿಗಳಲ್ಲೂ 150ಕ್ಕೂ ಹೆಚ್ಚು ಕಟೌಟ್ ಹಾಕಲಾಗಿದೆ.

  ಚಿತ್ರದ ಹಾಡು, ಟ್ರೇಲರ್, ಮೇಕಿಂಗ್ ದೃಶ್ಯಗಳ ಕಂಟೆಂಟ್ ಬಿಟ್ಟಿದ್ದೇವೆ. ಪ್ರೇಕ್ಷಕರಿಗೆ ಇಷ್ಟವಾಗಿದೆ. ಅದೆಲ್ಲವೂ ಈಗ ಟಿಕೆಟ್ಟುಗಳಾಗಿ ಬದಲಾಗಬೇಕಿದೆ ಎಂದಿದ್ದಾರೆ ರಿಷಬ್ ಶೆಟ್ಟಿ

 • ಕಾಂತಾರ ದಾಖಲೆಗಳ ಬೇಟೆಗಾರ : 200 ಕೋಟಿ ಕ್ಲಬ್ ಸೇರುತ್ತಾ?

  ಕಾಂತಾರ ದಾಖಲೆಗಳ ಬೇಟೆಗಾರ : 200 ಕೋಟಿ ಕ್ಲಬ್ ಸೇರುತ್ತಾ?

  ಕಾಂತಾರ ಚಿತ್ರದ ಅಬ್ಬರ.. ಆರ್ಭಟ.. ನಿಂತಿಲ್ಲ. ಬಾಕ್ಸಾಫೀಸ್ ಸಂಚಲನ ಗುಳಿಗನ ಆರ್ಭಟದಂತೆಯೇ ಜೋರಾಗಿದೆ. ಪಂಜುರ್ಲಿಯ ದೈವವರೀತಂ.. ಚಿತ್ರದ ಓಟಕ್ಕೆ ಚಿತ್ರರಂಗ ಬೆರಗಾಗಿದೆ. ಚಿತ್ರ ಈಗಾಗಲೇ ಎಲ್ಲ ಭಾಷೆಗಳಲ್ಲೂ 150 ಕೋಟಿ ಕಲೆಕ್ಷನ್ ದಾಟಿ ಮುನ್ನಡೆಯುತ್ತಿದೆ. ಕನ್ನಡದಲ್ಲಿಯೇ 100 ಕೋಟಿಗೂ ಹೆಚ್ಚು ಗಳಿಕೆ ಮಾಡಿರುವುದು ಕಾಂತಾರದ ದಾಖಲೆ.

  ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಹಿಂದಿಯಲ್ಲಿ ಭರ್ಜರಿ ಸಕ್ಸಸ್ ಕಂಡಿದ್ದು. ಹಿಂದಿಯಲ್ಲಿ 20 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಮೊದಲ ದಿನಕ್ಕಿಂತ 2ನೇ ದಿನ, 2ನೇ ದಿನಕ್ಕೆ 3ನೇ ದಿನ, 3ನೇ ದಿನಕ್ಕಿಂತ 4ನೇ ದಿನ.. ಹೀಗೆ ಕಲೆಕ್ಷನ್ ಏರುಗತಿಯಲ್ಲೇ ಇದೆ. 8ನೇ ದಿನಕ್ಕೆ 20 ಕೋಟಿ ಕ್ಲಬ್ ಸೇರಿದ್ದು ಹಿಂದಿಯೊಂದರಲ್ಲಿಯೇ 50 ಕೋಟಿ ಗಡಿ ದಾಟುವ ಎಲ್ಲ ಸಾಧ್ಯತೆಗಳೂ ಇವೆ.

  ತೆಲುಗಿನಲ್ಲಿ 25 ಕೋಟಿ ಕಲೆಕ್ಷನ್ ದಾಟಿ ಮುನ್ನಡೆದಿದ್ದರೆ ತಮಿಳಿನಲ್ಲಿ ಹಿಟ್ ಎನಿಸಿಕೊಂಡಿದೆ. ಕಲೆಕ್ಷನ್ ಲೆಕ್ಕ ಸಿಕ್ಕಿಲ್ಲ. ಮಲಯಾಳಂನಲ್ಲಿ ಸೂಪರ್ ಹಿಟ್ ಎನಿಸಿಕೊಳ್ಳುವ ಹಾದಿಯಲ್ಲಿದೆ. ಕನ್ನಡದಲ್ಲಿ 25 ದಿನ ದಾಟಿ ಮುನ್ನಡೆಯುತ್ತಿರುವ ಕಾಂತಾರ ಹೊಂಬಾಳೆಗೆ ಮತ್ತೊಮ್ಮೆ ಯಶಸ್ಸು ತಂದುಕೊಟ್ಟಿದೆ.

 • ಕಾಂತಾರದ ಮ್ಯೂಸಿಕ್ ಕದ್ದಿದ್ದಲ್ಲ

  ಕಾಂತಾರದ ಮ್ಯೂಸಿಕ್ ಕದ್ದಿದ್ದಲ್ಲ

  ಕಾಂತಾರ ಚಿತ್ರ ಹಿಟ್ ಆದ ಕೆಲವು ದಿನಗಳಲ್ಲೇ ಈ ಸುದ್ದಿ ಹರಿದಾಡೋಕೆ ಶುರುವಾಯ್ತು. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರದ ಹೈಲೈಟ್ಸ್‍ಗಳಲ್ಲಿ ಒಂದು ಮ್ಯೂಸಿಕ್. ಅಜನೀಶ್ ಲೋಕನಾಥ್ ಮ್ಯೂಸಿಕ್ ಗುಂಗು ಹಿಡಿಸುತ್ತದೆ. ಚಿತ್ರದ ಕಥೆಗೆ ಕಥೆಯ ವೇಗಕ್ಕೆ ಹೊಂದಿಕೊಂಡು ಹೋಗುವ ಪ್ರೇಕ್ಷಕರನ್ನು ಬೇರೆಯದೇ ಲೋಕಕ್ಕೆ ತೆಗೆದುಕೊಂಡು ಹೋಗುವುದು ಅಜನೀಶ್ ಲೋಕನಾಥ್ ಸಂಗೀತ. ಚಿತ್ರದಲ್ಲಿ ವರಾಹ ರೂಪಂ.. ಹಾಡು ಚಿತ್ರಕ್ಕೊಂದು ಕಿರೀಟವಿದ್ದಂತೆ. ಆದರೆ ಅದೇ ಹಾಡನ್ನು ಕದ್ದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

  5 ವರ್ಷಗಳ ಹಿಂದೆ ಮಲಯಾಳಂನಲ್ಲಿ ನವರಸಂ ಅನ್ನೋ ಆಲ್ಬಂ ಬಂದಿತ್ತು. ಅದರಲ್ಲಿ ಬರುವ ಥೈಕ್ಕುಡಂ ಬ್ರಿಡ್ಜ್‍ನ ಮ್ಯೂಸಿಕ್  ಹಾಗೂ ಕಾಂತಾರದ ವರಾಹ ರೂಪಂ ಮ್ಯೂಸಿಕ್ ಎರಡೂ ಒಂದೇ ಎನ್ನುವುದು ಆರೋಪ.

  ಆ ಹಾಡನ್ನು ನಾನೂ ಕೇಳಿದ್ದೇನೆ. ಸ್ಫೂರ್ತಿಗೊಂಡಿದ್ದೇನೆ. ಆದರೆ ಈ ವರಾಹ ರೂಪಂ ಹಾಡು.. ಕದ್ದಿದ್ದಲ್ಲ ಎನ್ನುವುದು ಅಜನೀಶ್ ಲೋಕನಾಥ್ ಪ್ರತಿಕ್ರಿಯೆ. ಅಲ್ಲದೆ ನವರಸಂನ ಹಾಡಿನಲ್ಲಿರುವ ತೋಡಿ, ವರಾಳಿ ಹಾಗೂ ಮಖಾರಿ ರಾಗಗಳನ್ನೇ ಬಳಸಿದ್ದೇವೆ. ಹೀಗಾಗಿ ಸಂಗೀತದ ಹೋಲಿಕೆಯ ಭಾವನೆ ಬರುತ್ತದೆ. ಆದರೆ ಸಂಯೋಜನೆ ಬೇರೆ. ಟ್ಯೂನ್ ಕೂಡಾ ಬೇರೆ. ಕಂಪೋಸಿಷನ್ ಬೇರೆ. ರಾಗಗಳ ಛಾಯೆ ಒಂದೇ ರೀತಿ ಇರುತ್ತಾದ ಕಾರಣ ಹಾಗೆ ಅನಿಸುತ್ತದೆ. ಆದರೆ ಒಬ್ಬ ಸಂಗೀತ ನಿರ್ದೇಶಕನಿಗೆ ಅದರ ಸೂಕ್ಷ್ಮಗಳು ಅರ್ಥವಾಗುತ್ತವೆ ಎಂದಿದ್ದಾರೆ ಅಜನೀಶ್ ಲೋಕನಾಥ್.

 • ಕಾಂತಾರದ ಲೀಲಾ ಕಥೆ ಕೇಳಿ

  ಕಾಂತಾರದ ಲೀಲಾ ಕಥೆ ಕೇಳಿ

  ಲೀಲಾ. ಕಾಂತಾರದ ಸಿಂಗಾರ ಸಿರಿಯೇ.. ಆಕೆ. ಫಾರೆಸ್ಟ್ ಗಾರ್ಡ್ ಆಗಬೇಕು ಅನ್ನೋದು ಅವಳ ಕನಸು ಮತ್ತು ಗುರಿ. ಕನಸು ಈಡೇರುತ್ತೆ. ಫಾರೆಸ್ಟ್ ಗಾರ್ಡ್ ಆದ ನಂತರ ಹಳ್ಳಿಯವರು ಮತ್ತು ಕಾಡಿನ ಅಧಿಕಾರಿಗಳ ನಡುವಿನ ಕೊಂಡಿಯಾಗುತ್ತಾಳೆ. ಅಲ್ಲಿಂದ ಕಥೆ ತಿರುವು ಪಡೆಯುತ್ತೆ.. ಕಥೆಯನ್ನು ಬಿಚ್ಚಿಡುತ್ತಾರೆ ಸಪ್ತಮಿ ಗೌಡ.

  ಪಾಪ್ ಕಾರ್ನ್ ಮಂಕಿ ಟೈಗರ್ ಗಿರಿಜಾ, ಕಾಂತಾರದಲ್ಲಿ ಲೀಲಾ ಆಗಿ ಬದಲಾಗಿದ್ದಾರೆ. ಎರಡು ವರ್ಷಗಳ ನಂತರ ಇದು ಅವರ 2ನೇ ಚಿತ್ರ. ಚಿತ್ರದಲ್ಲಿ ನನ್ನದು ಮಂಗಳೂರು ಕನ್ನಡ ಮಾತನಾಡುವ ಪಾತ್ರ. ಟೀಮಿನವರು ಅದೆಷ್ಟು ಪರ್ಫೆಕ್ಟ್ ಇದ್ದರು ಅಂದ್ರೆ 2 ತಿಂಗಳ ವರ್ಕ್ ಶಾಪ್ ಮಾಡಿಸಿದರು. ಇದು ನನ್ನ ಪಾತ್ರ ಮತ್ತು ಅಭಿನಯದ ಮೇಲೆ ಪ್ರಭಾವ ಬೀರಿದೆ. ಇದರಿಂದಾಗಿ ನಾನು ಕ್ಯಾರೆಕ್ಟರ್ ಅರ್ಥ ಮಾಡಿಕೊಳ್ಳೋಕೆ ಸುಲಭವಾಯ್ತು ಎನ್ನುತ್ತಾರೆ ಸಪ್ತಮಿ ಗೌಡ.

  ಕಾಡಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. 2 ಕಿ.ಮೀ. ದಾರಿ ಸಾಗೋಕೆ 45 ನಿಮಿಷ ವ್ಯಯಿಸಿದ್ದೇವೆ. ಕಾಡಿನ ಬದುಕು ಕಷ್ಟ ಕಷ್ಟ ಎನ್ನುವ ಸಪ್ತಮಿಗೆ ಸಿಂಗಾರ ಸಿರಿಯೇ ಹಾಡು ಹಿಟ್ ಆಗಿರುವುದು ಖುಷಿ ಕೊಟ್ಟಿದೆ.

  ನಮ್ಮ ಚಿತ್ರತಂಡದ ಕ್ಯಾಪ್ಟನ್ ರಿಷಬ್ ಶೆಟ್ಟಿ. ಅವರ ಎನರ್ಜಿ ದೊಡ್ಡದು. ಒಂದು ಕಡೆ ನಟನೆ, ಇನ್ನೊಂದು ಕಡೆ ನಿರ್ದೇಶನ. ಇದೆಲ್ಲದರ ನಡುವೆ ಅವರಿಗೆ ಪ್ರತಿ ಪಾತ್ರದ ಸಣ್ಣ ಸಣ್ಣ ವ್ಯತ್ಯಾಸವನ್ನೂ ಗುರುತಿಸುವ ಪರಿಗೆ ಬೆರಗಾಗಿದ್ದಾರಂತೆ ಸಪ್ತಮಿ.

  ಕಾಂತಾರ ಚಿತ್ರ ಇದೇ ಸೆ.30ರಂದು ಬಿಡುಗಡೆಯಾಗುತ್ತಿದ್ದು, 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಹೊಂಬಾಳೆ ಪ್ರೊಡಕ್ಷನ್ಸ್ ಭರ್ಜರಿಯಾಗಿಯೇ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರದ ಪ್ರೀಮಿಯರ್ ಶೋಗಳು ಶುರುವಾಗಿವೆ.