` bicchugatti, - chitraloka.com | Kannada Movie News, Reviews | Image

bicchugatti,

 • 'Bichchugatti' Motion Poster To Release Along With 'Yajamana'

  bichchugatti motion poster along with yajamana

  The first poster of Rajavardhan starrer historical film 'Bichchugatti' was released recently. Meanwhile, the motion poster of the film is all set to be released on Friday along with Darshan starrer 'Yajamana'.

  'Bichchugatti' is based on the novel 'Bichchugatti Bharamanna Nayaka' by well known writer Dr B L Venu. The author himself has written the screenplay and dialogues for the film. The shooting for the film is half way through and the team intends to complete the shooting soon.

  'Bichchugatti' is being directed by Hari Santhosh, while Om Sai Krishna Productions of Chitradurga is producing the film. Hamsalekha has written the lyrics apart from composing the film. Guru Prashanth Rai. Apart from Rajavardhan, Haripriya, 'Bahubali' Prabhakar and others play prominent roles in the film.

 • 16ನೇ ಶತಮಾನದ ರಕ್ತಸಿಕ್ತ ಕಥೆ ಬಿಚ್ಚುಗತ್ತಿ

  bicchugathi is 16th century period drama based on palegaras of chitradurga

  ಚಿತ್ರದುರ್ಗದ ಇತಿಹಾಸ ಗೊತ್ತಿದ್ದವರಿಗೆ ಮದಕರಿ ನಾಯಕನ ಕಥೆಯಷ್ಟೇ ಅಲ್ಲ, ಆಗ ನಡೆದ ದಳವಾಯಿ ದಂಗೆಯೂ ಗೊತ್ತಿರುತ್ತೆ. ಆ ದಳವಾಯಿ ದಂಗೆಯ ಕುರಿತು ಬಿ.ಎಲ್‌. ವೇಣು ಅವರು ಬರೆದಿದ್ದ  ಕಾದಂಬರಿ ಈಗ ಬಿಚ್ಚುಗತ್ತಿ ಸಿನಿಮಾ ಆಗಿದೆ. ಚಿತ್ರಕಥೆಯೂ ಅವರದ್ದೇ.

  ಹದಿನಾರನೇ ಶತಮಾನದ ಅಂತ್ಯ ದುರ್ಗದ ಪಾಲಿಗೆ ಕರಾಳ ದಿನ. ಆಗ ಅಧಿಕಾರಕ್ಕಾಗಿ ನಡೆದ ನೆತ್ತರಿನ ಕಥೇಯೇ ಬಿಚ್ಚುಗತ್ತಿ. ಫೆ. 28ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್, ಹರಿಪ್ರಿಯಾ ಪ್ರಧಾನ ಪಾತ್ರಗಳಲ್ಲಿದ್ದಾರೆ.

  ರಾಜವರ್ಧನ್ ಭರಮಣ್ಣನಾಗಿದ್ದಾರೆ. ದೇಹ ದಂಡಿಸಿದ್ದಾರೆ. ಕುದುರೆ ಸವಾರಿ, ಕಳರಿಯಪಟ್ಟು ಕಲಿತಿದ್ದಾರೆ. ಹರಿಪ್ರಿಯಾ ಕೂಡಾ ಹಿಂದೆ ಬಿದ್ದಿಲ್ಲ. ಸಿದ್ಧಾಂಬೆಯ ಪಾತ್ರಕ್ಕೆ ಅವರೂ ಕತ್ತಿ ವರಸೆ, ಕುದುರೆ ಸವಾರಿ ಕಲಿತು ನಟಿಸಿದ್ದಾರೆ. ಹರಿ ಸಂತೋಷ್ ನಿರ್ದೇಶನದ ಚಿತ್ರ ಐತಿಹಾಸಿಕ ಚಿತ್ರ ಎಂಬ ಕಾರಣಕ್ಕೇ ಕುತೂಹಲ ಹುಟ್ಟಿಸಿರುವ ಚಿತ್ರ.

 • Hariprriya Trends Again, This Time For Bicchugathii Chapter 1

  haripriya trends again this time for bucchugatti madakari nayaka chapter 1

  One of the most beautifully talented actresses, Hariprriya is riding high on her recent successes and most importantly for her notable performances. With a couple of projects in her kitty, the actress is yet again in the news for her brand new look in the upcoming release 'Bicchugathii Chapter 1'.

  Starring alongside the Rajavardhan, son of popular actor Dingri Nagaraj, Hariprriya plays a vital role in the film directed by Hari Santosh, which is based on the novel by B L Venu.

  The historical venture sees Hariprriya in a de-glamorous role whereas Rajavardhan plays the role of Baramanna Nayaka from 15th Century. One of the highlights of this one is Nadabrahma Hamsalekha, who has composed the music for Bichugathii Chapter 1, and actor Prabhakar of Bahubali series fame playing the antagonist's role. 

   

 • Rajavardhan Has A Great Future As Actor, Hamsalekha Predicts

  rajavardhan has a great future as actor

  Musical maestro Nadabrahma Hamsalekha who is impressed with the works of debutant Rajavardhan, son of popular actor Dingri Nagaraj, in the upcoming periodical 'Bicchugathii' predicts that the actor has a great future. However, he advises him to select films judiciously for a prospective future as an actor.

  He also revealed that initially Bicchugathii was his project but due to budget constraints, the producers backed off. "As promised to director Hari Santhu, I handed over this periodic film and I must admit, he has done a wonderful job," he says.

  He goes onto add that making a historical film is a hard task but with dedication and adopting the present technology could help making it effectively. "There are numerous such historical stories which can be made with great details," says Hamsalekha who has also composed songs for Bicchugathii.

  Whereas, actor Dingri Nagaraj urged everyone to extend the same kind of support and love towards his son Rajavardhan.

  Directed by Hari Santhu, the film is based on the novel titled Dalavai Muddanna by senior writer B L Venu. Along with Rajavardhan as Bharamanna Nayaka, Hariprriya and Prabhakar of Bahubali fame as Mudanna are in the lead role. The film is set for release in the coming weeks.

 • ದರ್ಶನ್ ಜೊತೆ ಸ್ಪರ್ಧೆ ಇಲ್ಲ - ಬಿಚ್ಚುಗತ್ತಿ ರಾಜವರ್ಧನ್

  bicchugathi hero rajavardhan

  ಒಂದು ಕಡೆ ದರ್ಶನ್ ಮದಕರಿ ನಾಯಕನಾಗಿ ನಟಿಸುತ್ತಿದ್ದರೆ, ಅವರ ಕಟ್ಟಾ ಅಭಿಮಾನಿಯೂ ಆಗಿರುವ ರಾಜವರ್ಧನ್, ಬಿಚ್ಚುಗತ್ತಿಯಲ್ಲಿ ಮದಕರಿ ನಾಯಕನ ನಂಬುಗೆಯ ಬಂಟ ಭರವಣ್ಣನಾಗಿ ನಟಿಸಿದ್ದಾರೆ. ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ.

  ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ದಳವಾಯಿ ದಂಗೆಗೂ ಮೊದಲಿದ್ದ ಇತಿಹಾಸದ ಸುಳಿವು ಕೊಟ್ಟಿದೆ. ರಾಜವರ್ಧನ್ ಕತ್ತಿ ವರಸೆ, ಹುಲಿ ಜೊತೆ ಕದನ, ಹರಿಪ್ರಿಯಾರ ಕತ್ತಿ ವರಸೆ.. ಎಲ್ಲವೂ ಗಮನ ಸೆಳೆಯುತ್ತಿದೆ.

  ಇದೇ ವೇಳೆ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ದರ್ಶನ್ ಸರ್ ಜೊತೆ ಸ್ಪರ್ಧೆ ಸಾಧ್ಯವಿಲ್ಲ ಎಂದಿದ್ದಾರೆ. ನಾನು ಚಿತ್ರದ ಚಿತ್ರೀಕರಣಕ್ಕೆ ಮೊದಲು ದರ್ಶನ್ ಸರ್ ಅವರಿಂದಲೇ ಟಿಪ್ಸ್ ಪಡೆದಿದ್ದೆ ಎಂದಿರುವ ರಾಜವರ್ಧನ್, ಚಿತ್ರದ ಪ್ರತಿ ಫ್ರೇಮಿನಲ್ಲೂ ಭರಮಣ್ಣನ ಪೌರುಷ ತೋರಿಸಿದ್ದಾರೆ.

  ಈ ಚಿತ್ರಕ್ಕೆ ನಿರ್ದೇಶಕ ಹರಿ ಸಂತೋಷ್. ಕಾಲೇಜು ಕುಮಾರದಂತಹ ಚಿತ್ರ ಮಾಡಿರುವ ಅವರಿಗೆ ಇದು ಮೊದಲನೇ ಐತಿಹಾಸಿಕ ಚಿತ್ರ. ಬಿ.ಎಲ್.ವೇಣು ಅವರ ಕಾದಂಬರಿ ಆಧರಿಸಿರುವ ಚಿತ್ರದ ಮೇಕಿಂಗ್ ಭರ್ಜರಿಯಾಗಿದೆ. ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದಾರೆ.

 • ದರ್ಶನ್, ಸುದೀಪ್‍ಗಿಂತ ಮೊದಲೇ ರಾಜವರ್ಧನ್ ರೆಡಿ. ಕ್ಲಾಪ್ ಮಾಡಿದ್ದೂ ದರ್ಶನ್

  bicchugathi movie starts

  `ಗಂಡುಗಲಿ ಮದಕರಿ ನಾಯಕ'ನ ಹೆಸರಿನಲ್ಲಿ ದರ್ಶನ್ ಸಿನಿಮಾ ಸಂಕ್ರಾಂತಿಗೆ ಸೆಟ್ಟೇರಬೇಕು. `ದುರ್ಗದ ಹುಲಿ' ಹೆಸರಿನ ಸುದೀಪ್ ಸಿನಿಮಾ ಕೂಡಾ ಸೆಟ್ಟೇರಬೇಕು. ಈ ಎರಡೂ ಕಥೆಗಳು ಸೆಟ್ಟೇರುವ ಮೊದಲೇ ಕೋಟೆನಾಡಿನ ಹುಲಿಯೊಂದರ ಕಥೆ ಸೆಟ್ಟೇರಿದೆ. ಬಿಚ್ಚುಗತ್ತಿ ಭರಮಣ್ಣನಾಯಕ - ದಳವಾಯಿ ದಂಗೆ 1 ಅನ್ನೋ ಹೆಸರಿನ ಸಿನಿಮಾ.

  ರಾಜವರ್ಧನ್ ನಾಯಕರಾಗಿರುವ ಸಿನಿಮಾದಲ್ಲಿರೋದು ಮದಕರಿ ನಾಯಕನಿಗೆ ಪಾಳೆಗಾರನಾಗಿದ್ದ, ನಂಬಿಕಸ್ಥ ಬಂಟನಾಗಿದ್ದ ಬಿಚ್ಚುಗತ್ತಿ ಭರಮಣ್ಣ ನಾಯಕನದು. ಹರಿಪ್ರಿಯಾ, ಬಿಚ್ಚುಗತ್ತಿಗೆ ನಾಯಕಿ. ಈ ಚಿತ್ರಕ್ಕೂ ಬಿ.ಎಲ್. ವೇಣು ಅವರದ್ದೇ ಕಥೆ. ಚಿತ್ರಕ್ಕೆ ದರ್ಶನ್ ಅವರೇ ಕ್ಲಾಪ್ ಮಾಡಿ ಶುಭ ಕೋರಿದ್ದಾರೆ. ಹರಿ ಸಂತೋಷ್ ಇದೇ ಮೊದಲ ಬಾರಿಗೆ ಐತಿಹಾಸಿಕ ಕಥೆಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

 • ಪ್ರಕಾಶ್ ರೈ, ರಜನಿಕಾಂತ್, ಉಪೇಂದ್ರಗೆ ಮಿಸ್ಸಾಗಿದ್ದ ಮುದ್ದಣ್ಣ.. ಪ್ರಭಾಕರನಿಗೆ ಒಲಿದ

  bicchugathi dalayavi muddanna

  ದಳವಾಯಿ ಮುದ್ದಣ, ಕನ್ನಡ ಚಿತ್ರರಂಗದಲ್ಲಿ ಪದೇ ಪದೇ ಪ್ರಸ್ತಾಪವಾಗುತ್ತಿದ್ದ ಐತಿಹಾಸಿಕ ಪಾತ್ರದ ಹೆಸರು. ಆತ ದುರ್ಗದ ಪಾಳೆಯಗಾರರಲ್ಲೇ ಪರಮ ಕ್ರೂರಿ ನಾಯಕ. ಆ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಹಲವರು ಚಿತ್ರ ನಿರ್ಮಿಸುವ ಯೋಜನೆ ರೂಪಿಸಿದ್ದರು. ಅಂತಹವರಲ್ಲಿ ಪ್ರಮುಖರು ಟಿ.ಎಸ್.ನಾಗಾಭರಣ.

  ನಾಗಮಂಡಲದ ಹೊತ್ತಲ್ಲಿ ಅದು ಪ್ರಕಾಶ್ ರೈ ಬಳಿಗೆ ಹೋಗಿತ್ತು. ಒಂದಷ್ಟು ತೆರೆಮರೆಯ ಕೆಲಸಗಳೂ ಆಗಿ ಅದೇಕೋ ಪ್ರಾಜೆಕ್ಟ್ ಅರ್ಧಕ್ಕೇ ನಿಂತುಬಿಟ್ಟಿತ್ತು. ಅದಾದ ಮೇಲೆ ಆ ಪಾತ್ರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್, ರಿಯಲ್ ಸ್ಟಾರ್ ಉಪೇಂದ್ರ ಹೆಸರೂ ಕೇಳಿಬಂತು. ಈಗ ಅವರೆಲ್ಲರ ಆಸೆ ಆಸೆಯಾಗಿಯೇ ಉಳಿದುಹೋಯ್ತು.

  ಅಂತಹ ಘಟಾನುಘಟಿ ಸ್ಟಾರ್ಗಳ ಕೈ ತಪ್ಪಿದ್ದ ದಳವಾಯಿ ಮುದ್ದಣ್ಣನ ಪಾತ್ರ ಕಾಲಕೇಯ ಪ್ರಭಾಕರ್ ಪಾಲಾಗಿದ್ದೇ ವಿಶೇಷ. ಬಿಚ್ಚುಗತ್ತಿ ಚಿತ್ರ ಇದೇ ವಾರ ರಿಲೀಸ್ ಆಗುತ್ತಿದ್ದು, ಬಿಚ್ಚುಗತ್ತಿ ಭರಮಣ್ಣನಾಗಿ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಕಾಣಿಸಿಕೊಂಡಿದ್ದಾರೆ. ಇದುವರೆಗೆ ಕಮರ್ಷಿಯಲ್ ಚಿತ್ರಗಳನ್ನೇ ನಿರ್ದೇಶಿಸಿದ್ದ ಹರಿ ಸಂತೋಷ್, ಇದೇ ಮೊದಲ ಬಾರಿಗೆ ಐತಿಹಾಸಿಕ ಚಿತ್ರ ಮಾಡಿದ್ದಾರೆ. ಹರಿಪ್ರಿಯಾ ಸಿದ್ದಾಂಬೆಯಾಗಿ ಕಂಗೊಳಿಸಿದ್ದಾರೆ. ಇಡೀ ಚಿತ್ರ ತಂಡಕ್ಕೆ ಬೆಂಬಲವಾಗಿ ನಿಂತಿರೋ ಹಂಸಲೇಖ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಓಂ ಸಾಯಿ ಪ್ರೊಡಕ್ಷನ್ಸ್ ಚಿತ್ರವನ್ನು ನಿರ್ಮಾಣ ಮಾಡಿದೆ.

 • ಬಿಚ್ಚುಗತ್ತಿ ಟ್ರೇಲರ್ ವ್ಹಾರೆವಾಹ್

  bicchugathi trailer

  ಬಿಚ್ಚುಗತ್ತಿ ಭರಮಣ್ಣನ ಕಥೆಯ ಟ್ರೇಲರ್ ಹೊರಬಿದ್ದಿದೆ. ಟೀಸರ್‍ನಲ್ಲಿ ಬೆರಗು ಹುಟ್ಟಿದ್ದ ಬಿಚ್ಚುಗತ್ತಿ, ಟ್ರೇಲರ್‍ನಲ್ಲಿ ಏಳು ಸುತ್ತಿನ ಕೋಟೆಯ ರಕ್ತಸಿಕ್ತ ಕಥೆ ಹೇಳುತ್ತಿದ್ದೇವೆ ಎಂಬ ಸುಳಿವು ಕೊಟ್ಟಿದೆ.

  ಭರಮಣ್ಣನಾಗಿ ರಾಜವರ್ಧನ್, ಸಿದ್ಧಾಂಬೆಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಹರಿಪ್ರಿಯಾಗೆ ಕೂಡಾ ಆ್ಯಕ್ಷನ್ ಸೀನ್‍ಗಳಿವೆ. ಹರಿ ಸಂತೋಷ್ ನಿರ್ದೇಶನದ ಚಿತ್ರ ರಿಲೀಸ್‍ಗೆ ರೆಡಿಯಾಗಿದ್ದು, ಬಿ.ಎಲ್.ವೇಣು ಅವರ ಕಥೆ ಚಿತ್ರಕ್ಕಿದೆ. 

 • ಬಿಚ್ಚುಗತ್ತಿ ಡಬ್ಬಿಂಗ್ ರೈಟ್ಸ್‍ಗೆ ಭಾರಿ ಡಿಮ್ಯಾಂಡ್

  bicchugatthi hindi dubbing rights gets huge demnd

  ಚಿತ್ರದುರ್ಗದ ಏಳು ಸುತ್ತಿನ ಕೋಟೆ ಸುತ್ತಿದರೆ, ಅಲ್ಲಿ ಕೇವಲ ಮದಕರಿ ನಾಯಕ, ಓಬವ್ವನ ಕಥೆಯಷ್ಟೇ ಅಲ್ಲ, ವೀರ ದಳವಾಯಿಗಳ ಕಥೆಯನ್ನೂ ಅಲ್ಲಿನ ಬಂಡೆಗಳು ಹೇಳುತ್ತವೆ. ಅಂತಹ ಒಬ್ಬ ವೀರನ ಕಥೆ ಬಿಚ್ಚುಗತ್ತಿ.

  ಮದಕರಿ ನಾಯಕನ ನಂಬುಗೆಯ ಬಂಟನಾಗಿದ್ದ ಬಿಚ್ಚುಗತ್ತಿ  ಭರಮಣ್ಣನ ಕಥೆಯಿದು. ಹರಿ ಸಂತೋಷ್ ನಿರ್ದೇಶನದ ಚಿತ್ರದಲ್ಲಿ ರಾಜವರ್ಧನ್, ಹರಿಪ್ರಿಯಾ ಪ್ರಧಾನ ಪಾತ್ರಗಳಲ್ಲಿದ್ದಾರೆ. ವಾಲ್ಮೀಕಿ ಜಾತ್ರೆಯಲ್ಲಿ ಕಿಚ್ಚ ಸುದೀಪ್ ಆಡಿಯೋ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಇದರ ನಡುವೆ ಚಿತ್ರರಂಗಕ್ಕೆ ಸಿಕ್ಕಿರೋ ಗುಡ್ ನ್ಯೂಸ್ ಎಂದರೆ ಡಬ್ಬಿಂಗ್‍ಗೆ ಸಿಗುತ್ತಿರುವ ಡಿಮ್ಯಾಂಡ್.

  ಬಿಚ್ಚುಗತ್ತಿಯ ಹಿಂದಿ ಡಬ್ಬಿಂಗ್ ರೈಟ್ಸ್‍ಗೆ 3 ಕೋಟಿ 20 ಲಕ್ಷದ ಡಿಮ್ಯಾಂಡ್ ಬಂದಿದೆಯಂತೆ. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ.

 • ಬಿಚ್ಚುಗತ್ತಿ ದಳವಾಯಿ ದಂಗೆ ಶೂಟಿಂಗ್ ಕಂಪ್ಲೀಟ್

  bicchugatthi baramanna nayaka shooting complete

  ಬಿಚ್ಚುಗತ್ತಿ ಭರಮಣ್ಣ ನಾಯಕ, ದುರ್ಗದ ಹುಲಿಗಳಲ್ಲಿ ಒಂದು. ಮದಕರಿ ನಾಯಕನ ಬಲಗೈ ಭಂಟನಾಗಿದ್ದ ಭರಮಣ್ಣ ನಾಯಕನ ಕಥಾ ಚಿತ್ರವಿದು. ಬಿ.ಎಲ್.ವೇಣು ಅವರ ಕಾದಂಬರಿ ಆಧರಿಸಿ ನಿರ್ಮಾಣವಾಗಿರುವ ಚಿತ್ರದ ಶೂಟಿಂಗ್ ಮುಗಿದಿದೆ. ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಭರಮಣ್ಣ ನಾಯಕನಾಗಿ ನಟಿಸಿದ್ದು, ಹರಿಪ್ರಿಯಾ ನಾಯಕಿ. ಕಾಲೇಜ್ ಕುಮಾರ್, ವಿಕ್ಟರಿ-2 ಚಿತ್ರಗಳ ಖ್ಯಾತಿಯ ಸಂತೋಷ್ ಕುಮಾರ್ ನಿರ್ದೇಶಕ.

  ಕೆಜಿಎಫ್, ಬಾಹುಬಲಿ ಮಾದರಿಯಲ್ಲಿಯೇ ಇದೂ ಕೂಡಾ ಎರಡು ಭಾಗಗಳಲ್ಲಿ ತೆರೆ ಕಾಣಲಿದೆ. ಮೊದಲ ಭಾಗದಲ್ಲಿ ದಳವಾಯಿಗಳ ದಂಗೆಯ ಕಥಾವಸ್ತು ಇಟ್ಟುಕೊಳ್ಳಲಾಗಿದೆ. ಐತಿಹಾಸಿಕ ಚಿತ್ರವೊಂದನ್ನು ಸೀಕ್ವೆಲ್ ರೂಪದಲ್ಲಿ ತೆರೆಗೆ ತರುತ್ತಿರುವುದು ಇದೇ ಮೊದಲು.

  ಶ್ರೀಕೃಷ್ಣ ಪ್ರೊಡಕ್ಷನ್ಸ್ ಬ್ಯಾನರ್‍ನ ಚಿತ್ರಕ್ಕೆ ಹಂಸಲೇಖ ಸಂಗೀತ ನಿರ್ದೇಶನವಿದೆ.

 • ಬಿಚ್ಚುಗತ್ತಿ ಮುದ್ದಣ್ಣನ ಧ್ವನಿ ಬದಲಾವಣೆ

  bicchugathi mudaana gets new voice

  ಬಿಚ್ಚುಗತ್ತಿ, ಇದೇ ವಾರ ರಿಲೀಸ್ ಆಗಿ ಜನ ಮೆಚ್ಚುಗೆ ಪಡೆದಿರುವ ಸಿನಿಮಾ. ಬಿಚ್ಚುಗತ್ತಿ ಭರಮಣ್ಣನಾಗಿ ರಾಜವರ್ಧನ್, ಸಿದ್ದಾಂಬೆಯಾಗಿ ಹರಿಪ್ರಿಯಾ ಸಿನಿಮಾವನ್ನು ಆವರಿಸಿಬಿಟ್ಟಿದ್ದಾರೆ. ಚಿತ್ರದಲ್ಲಿ ಅಷ್ಟೇ ಪ್ರಮುಖವಾದ ಪಾತ್ರ ದಳವಾಯಿ ಮುದ್ದಣ್ಣನದ್ದು. ಈ ಪಾತ್ರಕ್ಕೆ ಜೀವ ತುಂಬಿರೋದು ಬಾಹುಬಲಿ ಪ್ರಭಾಕರ್. ಅಭಿನಯ ಬೊಂಬಾಟ್ ಇದ್ದರೂ, ತೆಲುಗಿನವರಾದ ಪ್ರಭಾಕರ್ ಡಬ್ಬಿಂಗ್‍ನಲ್ಲಿ ಕೆಲವು ಅಪಭ್ರಂಶಗಳಿದ್ದವು. ಇವುಗಳ್ನು ಪ್ರೇಕ್ಷಕರು ಗುರುತಿಸಿ, ಬದಲಿಸುವಂತೆ ಒತ್ತಡ ಬಂದ ಕಾರಣ, ಬಿಚ್ಚುಗತ್ತಿ ಚಿತ್ರತಂಡ ಧ್ವನಿ ಬದಲಿಸಲು ಮುಂದಾಗಿದೆ.

  ಪ್ರಭಾಕರ್ ಅರ್ಥಾತ್ ಮುದ್ದಣ್ಣನ ಪಾತ್ರಕ್ಕೆ ಬೇರೊಬ್ಬ ಕಲಾವಿದರಿಂದ ಡಬ್ಬಿಂಗ್ ಮಾಡಿಸುತ್ತಿದೆ ಚಿತ್ರತಂಡ. ಈಗಾಗಲೇ ಡಬ್ಬಿಂಗ್ ಮುಕ್ತಾಯದ ಹಂತಕ್ಕೆ ಬಂದಿದೆ. ಮುಂದಿನ ವಾರ ಅಂದರೆ ಶುಕ್ರವಾರದಿಂದ ಹೊಸ ಮುದ್ದಣ್ಣನ ಧ್ವನಿ ಚಿತ್ರಮಂದಿರದಲ್ಲಿ ಮೊಳಗಲಿದೆ.

 • ಬಿಚ್ಚುಗತ್ತಿ ಹೀರೋ 85 ಕೆಜಿಯಿಂದ 108 ಕೆಜಿಗೆ ಏರಿದ ಕಥೆ..!

  bicchuagthi hero's amazing transformation

  ಬಿಚ್ಚುಗತ್ತಿ ಭರಮಣ್ಣ ನಾಯಕ ಚಿತ್ರದ ನಾಯಕ ರಾಜವರ್ಧನ್. ಸ್ಫುರದ್ರೂಪಿ. ಆಕರ್ಷಕ ಅಂಗಸೌಷ್ಟವವಿದ್ದ ನಟ. ಸಿನಿಮಾಗೂ ಮೊದಲು ಚಾಕೊಲೇಟ್ ಹೀರೋ ಆಗಿ ಕಾಣಿಸುತ್ತಿದ್ದ ರಾಜವರ್ಧನ್, ಈ ಚಿತ್ರದಲ್ಲಿ ಬಲಭೀಮನಾಗಿದ್ದಾರೆ.

  ಬಿಚ್ಚುಗತ್ತಿ ಸಿನಿಮಾ ಆರಂಭದಲ್ಲಿ ನಾನು 85 ಕೆ.ಜಿ. ಇದ್ದೆ. ಆದರೆ ನನ್ನ ಎದುರು ಖಳನಾಗಿ ದಳವಾಯಿ ಮುದ್ದಣ್ಣನ ಪಾತ್ರ ಮಾಡಿರುವ ಬಾಹುಬಲಿ ಖ್ಯಾತಿಯ ಪ್ರಭಾಕರ್ ಬರೋಬ್ಬರಿ 130 ಕೆ.ಜಿ. ಇದ್ದರು. ಅವರ ಮುಂದೆ ನಾಯಕನ ಪಾತ್ರ ಪೇಲವ ಎನ್ನಿಸಬಾರದು ಎಂಬ ಕಾರಣಕ್ಕೆ ದೇಹದ ತೂಕ ಹೆಚ್ಚಿಸಿಕೊಂಡೆ. ಸತತ 6 ತಿಂಗಳು ಕಷ್ಟಪಟ್ಟು 85 ಕೆ.ಜಿ. ಇದ್ದ ದೇಹತೂಕವನ್ನು 108ಕ್ಕೆ ಏರಿಸಿಕೊಂಡೆ ಎನ್ನುತ್ತಾರೆ ರಾಜವರ್ಧನ್.

  ಅಷ್ಟೇ ಅಲ್ಲ, ನಿರ್ದೇಶಕ ಹರಿ ಸಂತೋಷ್ ಸೂಚನೆಯಂತೆ ಬಿಚ್ಚುಗತ್ತಿ ಭರಮಣ್ಣನಾಗಲು ಕುದುರೆ ಸವಾರಿ ಮಾತ್ರವಲ್ಲದೆ, ಕಳರಿಪಯಟ್ಟು ಮುಂತಾದ ಸಮರಕಲೆಯನ್ನೂ ಕಲಿತಿದ್ದಾರೆ.ಓಂ ಸಾಯಿಕೃಷ್ಣ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ಹರಿ ಸಂತೋಷ್ ನಿರ್ದೇಶನ ಮಾಡಿರುವ ‘ಬಿಚ್ಚುಗತ್ತಿ: ಚಾಪ್ಟರ್ 1, ದಳವಾಯಿ ದಂಗೆ ಇದೇ ವಾರ ರಿಲೀಸ್ ಆಗುತ್ತಿದೆ.ಗುಡಿಕೋಟೆ ರಾಜಕುಮಾರಿ ಸಿದ್ದಾಂಬೆ ಪಾತ್ರದಲ್ಲಿ ನಟಿ ಹರಿಪ್ರಿಯಾ ಅಭಿನಯಿಸಿದ್ದಾರೆ.

 • ಸಿದ್ದಾಂಬೆ ರಾಣಿ ಹರಿಪ್ರಿಯಾ

  haripriya as chitradurga queen in bicchugathi movie

  ಇಡೀ ವರ್ಷ ಸುದ್ದಿಯಲ್ಲಿದ್ದ ತಾರೆ ಹರಿಪ್ರಿಯಾ. ಬೆಲ್‍ಬಾಟಂನ ಕಳ್ಳಭಟ್ಟಿ ಕುಸುಮಾ, ಕುರುಕ್ಷೇತ್ರದ ಮಾಯಾ, ಸೂಜಿದಾರದ ಮಧ್ಯಮ ವರ್ಗದ ಗೃಹಿಣಿ, ಡಾಟರ್ ಆಫ್ ಪಾರ್ವತಮ್ಮ ಚಿತ್ರದ ಆ್ಯಕ್ಷನ್ ಕ್ವೀನ್.. ಹೀಗೆ ಒಂದಕ್ಕಿಂತ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹರಿಪ್ರಿಯಾ, ಬಿಚ್ಚುಗತ್ತಿ ಚಿತ್ರದಲ್ಲಿ ಸಿದ್ಧಾಂಬೆ ಎನ್ನುವ ರಾಣಿಯ ಪಾತ್ರ ಮಾಡುತ್ತಿದ್ದಾರೆ.

  ರಾಣಿ ಎಂದರೆ ಅರಮನೆಯ ರಾಣಿಯಲ್ಲ. ಕಿತ್ತೂರು ಚೆನ್ನಮ್ಮ, ಬಭ್ರುವಾಹನ ಚಿತ್ರದಲ್ಲಿ ಬಿ.ಸರೋಜಾದೇವಿ ನಿರ್ವಹಿಸಿದ್ದರಲ್ಲ. ಹೋರಾಟಗಾರ್ತಿ ರಾಣಿಯ ಪಾತ್ರ.. ಆ ರೀತಿಯ ಪಾತ್ರವಿದು.

  ರಾಜ, ರಾಜ್ಯ ಉಳಿಸಿಕೊಳ್ಳಲು ಹೋರಾಡುವ ಪಾತ್ರ ನನ್ನದು. ಕತ್ತಿವರಸೆ, ಕುದುರೆ ಸವಾರಿ ಎಲ್ಲವೂ ಇದೆ. ಯುದ್ಧದ ಸನ್ನಿವೇಶಗಳಿವೆ. ನಿರ್ದೇಶಕ ಸಂತು ಅಪಾರ ಶ್ರಮವಹಿಸುತ್ತಿದ್ದಾರೆ. ಪಾತ್ರಕ್ಕಾಗಿ ನಾನು ತರಬೇತಿ ಪಡೆದಿದ್ದೇನೆ ಎಂದಿದ್ದಾರೆ ಹರಿಪ್ರಿಯಾ.