` karnataka tourism policy, - chitraloka.com | Kannada Movie News, Reviews | Image

karnataka tourism policy,

 • ಚಿತ್ರ ನಿರ್ಮಾಪಕರಿಗೆ ಸಿಎಂ ಕುಮಾರಸ್ವಾಮಿ ಬಂಪರ್ ಆಫರ್

  state government starts karnataka tourism pilicy

  ಕರ್ನಾಟಕದ ಪ್ರವಾಸಿ ತಾಣಗಳಲ್ಲೇ ಚಿತ್ರೀಕರಣ ಮಾಡಿ. ಗರಿಷ್ಠ 1 ಕೋಟಿ ರೂ. ಬಹುಮಾನ ಗೆಲ್ಲಲಿ. ಇದು ಸಿನಿಮಾ ನಿರ್ಮಾಪಕರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಬಂಪರ್ ಆಫರ್. ಹೀಗೆ ಬಹುಮಾನ ನೀಡಲೆಂದೇ ಸರ್ಕಾರ ಎರಡೂವರೆ ಕೋಟಿ ರೂ.ಗಳನ್ನು ತೆಗೆದಿರಿಸಿದೆ. ಇದು ಕೇವಲ ಕನ್ನಡ ಚಿತ್ರಗಳಿಗಷ್ಟೆ ಅಲ್ಲ, ದೇಶದ ಎಲ್ಲ ಭಾಷೆಯ ಚಿತ್ರಗಳಿಗೂ ಇದು ಅನ್ವಯ.

  ನೀವು ಮಾಡಬೇಕಿರೋದು ಇಷ್ಟೆ, ರಾಜ್ಯದಲ್ಲಿ ಸರ್ಕಾರ 319 ಸ್ಥಳಗಳನ್ನು ಪ್ರವಾಸಿ ತಾಣಗಳೆಂದು ಗುರುತಿಸಿದೆ. ಆ 319 ತಾಣಗಳಲ್ಲಿ ಚಿತ್ರ ನಿರ್ಮಾಪಕರು ಕನಿಷ್ಟ 3 ತಾಣಗಳಲ್ಲಿ ಸಿನಿಮಾ ಶೂಟಿಂಗ್ ಮಾಡಬೇಕು. ಇದನ್ನು ಪಾಯಿಂಟ್ಸ್ ಲೆಕ್ಕಚಾರದಲ್ಲಿ ನೋಡಿ, ನಂತರ ಪ್ರೋತ್ಸಾಹ ಧನ ನೀಡುವ ಪ್ಲಾನ್ ಸರ್ಕಾರದ್ದು.

  ಒಟ್ಟಾರೆ 100 ಪಾಯಿಂಟ್ಸ್ ನಿಗದಿ ಮಾಡಲಾಗಿದ್ದು, ಕ್ಲಾಸ್ ಎ ನಲ್ಲಿ 90 ಅಥವಾ 90ಕ್ಕಿಂತ ಹೆಚ್ಚು ಪಾಯಿಂಟ್ಸ್ ಪಡೆದ ಚಿತ್ರಗಳನ್ನು, ಕ್ಲಾಸ್ ಬಿ ಯಲ್ಲಿ 75 ಅಥವಾ 75ಕ್ಕಿಂತ ಹೆಚ್ಚು ಪಾಯಿಂಟ್ಸ್ ಪಡೆದ ಚಿತ್ರಗಳನ್ನು ಪಟ್ಟಿ ಮಾಡಲಾಗುತ್ತೆ. ಈ ವರ್ಷ 8 ಸಿನಿಮಾಗಳಿಗೆ ಎರಡೂವರೆ ಕೋಟಿ ಪ್ರೋತ್ಸಾಹಧನವನ್ನು ಹಂಚುವ ಚಿಂತನೆ ಸರ್ಕಾರದ ಎದುರು ಇದೆ.

  ಪಾಯಿಂಟ್ಸ್ ಲೆಕ್ಕಾಚಾರ ಹೀಗಿರುತ್ತೆ.

  ಚಿತ್ರದ ಬಜೆಟ್‍ಗೆ - ಗರಿಷ್ಠ 30 ಅಂಕ

  ಪ್ರವಾಸಿತಾಣಗಳನ್ನು ದೃಶ್ಯ ತೋರಿಸಿರುವ ರೀತಿ - ಗರಿಷ್ಠ 10 ಅಂಕ

  ರಾಜ್ಯದ ಸಂಸ್ಕøತಿಯನ್ನು ಬಿಂಬಿಸಿರುವ ರೀತ - ಗರಿಷ್ಠ 5 ಅಂಕ

  ದೇಶಾದ್ಯಂತ ಚಿತ್ರ ಬಿಡುಗಡೆಯಾದರೆ - ಗರಿಷ್ಠ 15 ಅಂಕ

  ಜಾಗತಿಕ ಮಟ್ಟದಲ್ಲಿ ಚಿತ್ರ ಬಿಡುಗಡೆಯಾದರೆ - ಗರಿಷ್ಠ 15 ಅಂಕ

  ಪ್ರವಾಸಿ ತಾಣಗಳ ವಿವರಗಳನ್ನು ತೋರಿಸಿದ್ದರೆ - ಗರಿಷ್ಠ 20 ಅಂಕ

  ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಿದ್ದರೆ - ಗರಿಷ್ಠ 5 ಅಂಕ

  ಒಟ್ಟಿನಲ್ಲಿ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಭಿನ್ನ ಹೆಜ್ಜೆಯಿಟ್ಟಿರುವುದಂತೂ ಸತ್ಯ. ಆದರೆ, ರಾಜ್ಯದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡುವ ಕುರಿತಂತೆ ಈಗಲೂ ಸಿಂಗಲ್ ವಿಂಡೋ ಪದ್ಧತಿ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಅದು ಜಾರಿಯಾಗದೆ, ಈ ರೀತಿಯ ಪ್ರೋತ್ಸಾಹಧನದ ಪ್ಯಾಕೇಜ್ ಯಶಸ್ವಿಯಾಗುವುದೇ ಎನ್ನುವುದಕ್ಕೆ ಕಾಲವೇ ಉತ್ತರ ಹೇಳಬೇಕು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery