` mataash, - chitraloka.com | Kannada Movie News, Reviews | Image

mataash,

  • Mataash Movie Review: Chitraloka Rating 3.5/5

    mataash movie reveiw, chitraloka rating

    Two year ago when Prime Minister Narendra Modi surprised all with demonetization, it followed with a mixed response. The aftermath of it became the most discussed issue, which still continues be in news to this date. 

    Director S D Arvind's has scripted a decent satire on the burning topic, as he wraps it up with some good rib tickling comedy.

    Mataash which literally means disgraceful end, connects to the fate of old Rs 500 and Rs 1000 currency notes. With many characters in constant motion, the movie has multiple plots which are interconnected to each other.

    A gang who want to make some quick money tries to cash in on the situation due to demonetization. Then there is another gang of corporates who are making efforts to get their black currencies exchanged for new notes. Plus there is one more gang on a holiday, who get involved in the monetary act in exchange for fun!

    With a stage well set for multiple characters including two women, and all that huge sum of money involved, Mataash turns out to be laughter ride in the end. Moreover, it does not involve in preaching the audience which gives another reason to spend your money, buying tickets to watch Mataash in theatres.

  • ಏನೇನ್ ಹೆಸರಿಟ್ಟವ್ರೆ ಯಪ್ಪಾ... ನೀವೇ ನೋಡಿ

    mataash characters has funny names

    . ಸಾಮಾನ್ಯವಾಗಿ ಚಿತ್ರದ ಪಾತ್ರಧಾರಿಗಳಿಗೆ ಚಿತ್ರ ವಿಚಿತ್ರ ಹೆಸರು ಇಡೋದ್ರಲ್ಲಿ ದುನಿಯಾ ಸೂರಿಯೇ ಫೇಮಸ್. ಆದರೆ, ಅವರನ್ನೂ ಮೀರಿಸಿದ್ದಾರೆ ಎಸ್.ಡಿ. ಅರವಿಂದ್. ಚಿತ್ರದ ಪಾತ್ರಧಾರಿಗಳ ಹೆಸರುಗಳು ಹೀಗೂ ಇರ್ತವಾ ಅಂತನ್ನಿಸೋ ಹಾಗೆ ಪಾತ್ರಧಾರಿಗಳಿಗೆ ಹೆಸರು ಇಟ್ಟಿರೋದು ಮಟಾಶ್ ಡೈರೆಕ್ಟರ್ ಎಸ್.ಡಿ.ಅರವಿಂದ್. ಸುಮ್ಮನೆ ಹಾಗೇ ನೋಡಿ..

    ರೂಲ್‍ಬುಕ್ ಅನ್ನೋ ಹೆಸರು ಬಾಲಾಜಿ ಶೆಟ್ಟಿಯದು. ನಾಗಾರ್ಜುನ್ ಪಾತ್ರದ ಹೆಸರು ಫೇಸ್‍ಬುಕ್. ಅಮೋಘ್ ರಾಹುಲ್ ಹೆಸರು ಕಾಮ್ ಸೂತ್ರ. (ಅಪಾರ್ಥ ಬೇಡ. ಅದು ಅಂಐಒ ಸೂತ್ರ.) ಸಮರ್ಥ ನರಸಿಂಹರಾಜು ಪಾತ್ರದ ಹೆಸರು ಎಲ್‍ಕೆಬಿ. ಈ ನಾಲ್ವರದ್ದೂ ಮೈಸೂರು ಗ್ರೂಪ್. 

    ಇದಕ್ಕೆ ಎದುರಾಗಿ ಬರೋದು ಬಿಜಾಪುರ್ ಗ್ರೂಪ್. ಅವರು ಬರೋದೇ ದುಡ್ಡಿಗಾಗಿ. ಅದಕ್ಕೆ ಗೋಲ್‍ಗುಂಬಜ್ ಸ್ಕೀಮ್ ಅನ್ನೋ ಹೆಸರು. 

    ನೋಟ್‍ಬ್ಯಾನ್‍ನಲ್ಲಿ ಬ್ಲಾಕ್‍ಮನಿಯನ್ನು ವೈಟ್ ಮಾಡಿಕೊಳ್ಳೋಕೆ ಹೊರಡುವವರು ಏನೇನೆಲ್ಲ ಸರ್ಕಸ್ ಮಾಡುತ್ತಾರೆ ಅನ್ನೋದನ್ನು ಪ್ರೇಕ್ಷಕರು ಥ್ರಿಲ್ಲಾಗುವಂತೆ, ನಕ್ಕೂ ನಕ್ಕೂ ಹೊಟ್ಟೆ ಹುಣ್ಣಾಗುವಂತೆ ಹೇಳಿದ್ದಾರೆ ಎಸ್.ಡಿ. ಅರವಿಂದ್. ಕಾಮಿಡಿ ಥ್ರಿಲ್ಲರ್ ಮಟಾಶ್, ನಾಳೆ ಚಿತ್ರಮಂದಿರಗಳಲ್ಲಿ ಲಗ್ಗೆ ಇಡೋಕೆ ರೆಡಿಯಾಗಿದೆ.

  • ನರಸಿಂಹರಾಜು ಮೊಮ್ಮಗನ ಗ್ರ್ಯಾಂಡ್ ಎಂಟ್ರಿ ಮಟಾಶ್

    narasimha raju's grandson to enter films through mataash

    ಎಸ್.ಡಿ.ಅರವಿಂದ್, ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ. ಜುಗಾರಿ ಚಿತ್ರದ ಮೂಲಕ ಬೆಳ್ಳಿತೆರೆಗೆ ನಿದೇಶಕರಾಗಿ ಕಾಲಿಟ್ಟವರು. ಅವಿನಾಶ್ ಅದೇ ಚಿತ್ರದಲ್ಲಿ ನಟರಾಗಿ ತೆರೆಗೆ ಬಂದವರು. ಈಗ ಅದೇ ಕುಟುಂಬದ ಮತ್ತೊಂದು ಕುಡಿ ಸಮರ್ಥ್ ಮಟಾಶ್ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ತಾತನ ಹೆಸರನ್ನು ಉಳಿಸುವಂತೆ ಕೆಲಸ ಮಾಡಿದ್ದೇನೆ ಅನ್ನೋ ವಿಶ್ವಾಸ ಸಮರ್ಥ್ ಕಣ್ಣುಗಳಲ್ಲಿದೆ.

    ಸಮರ್ಥ್, ಏಕಾಏಕಿಯಾಗಿ ಚಿತ್ರರಂಗಕ್ಕೆ ಬಂದವರೇನಲ್ಲ. ಮನೆಯಲ್ಲಿ ತಾತನ ಹೆಸರಿದ್ದರೂ, ಡಿಪ್ಲೊಮಾ ಇನ್ ಫಿಲಂ ಮೇಕಿಂಗ್ ಮಾಡಿಕೊಂಡು, ಡ್ಯಾನ್ಸ್ ಕ್ಲಾಸ್ ತರಬೇತಿ ಪಡೆದು ಬಂದವರು. ಇಷ್ಟಿದ್ದರೂ ಲಾಸ್ಟ್‍ಬಸ್‍ನಲ್ಲಿ ಪಾತ್ರ ನೀಡಿ ತರಬೇತಿ ನೀಡಿ ಈಗ ಹೀರೋ ಮಾಡಿದ್ದಾರೆ ಎಸ್.ಡಿ. ಅರವಿಂದ್.

    ಚಿತ್ರದಲ್ಲಿ ಸಮರ್ಥ್ ಅವರದ್ದು ಎಲ್‍ಕೆಬಿ ಪಾತ್ರ. ಅರ್ಥಾತ್.. ಲಕ್ಕುವಲ್ಲಿ ಕೃಷ್ಣಪ್ಪನ ಮಗ ಬಾಲು. ಇರೋ ಜೀವನವನ್ನ ಎಂಜಾಯ್ ಮಾಡಬೇಕು ಎಂದು ಹೊರಡುವ ವಿದ್ಯಾರ್ಥಿಯಾಗಿ ನಟಿಸಿದ್ದಾರೆ ಸಮರ್ಥ್. ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ. ಈ ಹಿಂದಿನ ಚಿತ್ರಗಳಲ್ಲಿ ಸತತವಾಗಿ ಸಕ್ಸಸ್ ರುಚಿ ನೋಡಿರುವ ಅರವಿಂದ್, ಈ ಬಾರಿ ಕಾಮಿಡಿ ಮತ್ತು ಥ್ರಿಲ್ಲರ್ ಕಥೆ ಇಟ್ಟುಕೊಂಡಿದ್ದಾರೆ. ನೋಟ್‍ಬ್ಯಾನ್ ಸುತ್ತಲೇ ಇಡೀ ಚಿತ್ರ ಸಾಗಲಿರುವುದು ವಿಶೇಷ.

  • ನೋಟ್‍ಬ್ಯಾನ್..ಲವ್ವ..ಕಾಮಿಡಿ..ಥ್ರಿಲ್ಲರ್.. ಮಟಾಶ್

    mataash is a combination of love, comedy and thriller

    ಮಟಾಶ್ ಚಿತ್ರದಲ್ಲಿ ಏನಿದೆ..? ಏನಿಲ್ಲ..? ಈಗಾಗಲೇ ಗೊತ್ತಿರೋ ಹಾಗೆ ಮಟಾಶ್ ಚಿತ್ರದಲ್ಲಿರೋದು ನೋಟ್‍ಬ್ಯಾನ್ ಕಥೆ. ಹಾಗಂತ ಸಿನಿಮಾದಲ್ಲಿ ನೋಟ್‍ಬ್ಯಾನ್ ಕಥೆಯನ್ನಷ್ಟೇ ಹೇಳಿಲ್ಲ. ಅಲ್ಲೊಂದು ಟ್ರಯಾಂಗಲ್ ಲವ್ ಸ್ಟೋರಿ ಇದೆ. ಗ್ಯಾಂಗ್‍ಸ್ಟರ್‍ಗಳ ಹೊಡೆದಾಟವಿದೆ. ಹೊಟ್ಟೆ ಹುಣ್ಣಾಗಿಸುವ ಕಾಮಿಡಿ ಇದೆ. ಈ ಎಲ್ಲವನ್ನೂ ಬೆಸುಗೆ ಮಾಡುವುದು ನೋಟ್‍ಬ್ಯಾನ್.

    ನೋಟ್‍ಬ್ಯಾನ್‍ನ ಆ ಅವಧಿಯಲ್ಲಿ ಕೆಲವರು ನರಳಿದರು. ಅವರ ನರಳಾಟ ನೋಡಿ ಕೆಲವರು ಮಜಾ ತಗೊಂಡ್ರು. ಅದೆಲ್ಲವನ್ನೂ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಬೆಂಗಳೂರು, ಮೈಸೂರು, ವಿಜಯಪುರದಲ್ಲಿ ಸಿನಿಮಾ ನಡೆಯುತ್ತೆ. ಮಲೆನಾಡಿನ ಹಸಿರಿನ ನಡುವೆಯೂ ಚಿತ್ರ ನಡೆಯುತ್ತೆ. 7 ಹಾಡುಗಳಿವೆ. ಪಕ್ಕಾ ಕಮರ್ಷಿಯಲ್ ಸಿನಿಮಾ ಎಂಬ ಭರವಸೆ ಕೊಡ್ತಾರೆ ನಿರ್ದೇಶಕ ಅರವಿಂದ್.

    ಸಣ್ಣ ಎಳೆಯನ್ನಿಟ್ಟುಕೊಂಡು ಪ್ರೇಕ್ಷಕರಿಗೆ ಬೋರ್ ಆಗದಂತೆ ಚಿತ್ರಕಥೆ ಮಾಡೋದ್ರಲ್ಲಿ ಎಸ್.ಡಿ.ಅರವಿಂದ್ ಪಳಗಿದ್ದಾರೆ. ಈ ಹಿಂದಿನ ಚಿತ್ರಗಳಲ್ಲಿ ಅದನ್ನು ಸಾಬೀತೂ ಮಾಡಿರುವ ಅರವಿಂದ್, ಫುಲ್ ಮನರಂಜನ ಇರೋ ಕಾಮಿಡಿ ಥ್ರಿಲ್ಲರ್ ಮಾಡಿದ್ದಾರೆ.

     

  • ಫೆಬ್ರವರಿ 1ಕ್ಕೆ ಮಟಾಶ್ - ಲಾಸ್ಟ್‍ಬಸ್ ಖ್ಯಾತಿ ನಿರ್ದೇಶಕನ ಸಿನಿಮಾ

    mataash to releas this week

    ಲಾಸ್ಟ್‍ಬಸ್ ಸಿನಿಮಾ ನೆನಪಿದೆಯಲ್ಲವೇ. ಆ ಚಿತ್ರದ ಮೂಲಕ ಪ್ರೇಕ್ಷಕರ ಎದೆಯಲ್ಲಿ ತಲ್ಲಣದ ಅಲೆ ಎಬ್ಬಿಸಿದ್ದ ನಿರ್ದೇಶಕ ಎಸ್.ಡಿ.ಅರವಿಂದ್ ಮಟಾಶ್ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಇದೇ ಫೆಬ್ರವರಿ 1ರಂದು ಸಿನಿಮಾ ರಿಲೀಸ್ ಆಗುತ್ತಿದೆ.

    ಇದು ನೋಟ್‍ಬ್ಯಾನ್ ಸುತ್ತ ನಡೆಯುವ ಕಥೆ. ನಾಲ್ವರು ಹುಡುಗ-ಹುಡುಗಿಯರು, ನೋಟ್‍ಬ್ಯಾನ್, ಭೂಗತ ಜಗತ್ತು.. ಎಲ್ಲವನ್ನೂ ಹದವಾಗಿ ಬೆರೆಸಿರುವ ಕಥೆ. ಚಿತ್ರದಲ್ಲಿ ಸಂದೇಶವಿದೆಯಾದರೂ, ಮನರಂಜನೆ, ಥ್ರಿಲ್ಲಿಂಗಿಗೇ ಆದ್ಯತೆ ಕೊಟ್ಟಿದ್ದಾರೆ ನಿರ್ದೇಶಕ ಅರವಿಂದ್.

  • ಬಜೆಟ್ ದಿನವೇ ನೋಟ್‍ಬ್ಯಾನ್ ಸಿನಿಮಾ ಮಟಾಶ್

    mataash is a story in noteban

    ಇಂದು ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದ ಕೊನೆಯ ಬಜೆಟ್ ಮಂಡನೆಯಾಗುತ್ತಿದೆ. ಇದೇ ದಿನ.. ಅಲ್ಲಿ ಬಜೆಟ್ ಮಂಡನೆಯಾಗುತ್ತಿರುವಾಗಲೇ ಇಲ್ಲಿ ಮಟಾಶ್ ಸಿನಿಮಾ ರಿಲೀಸ್ ಆಗಿರುತ್ತೆ. ಇದು ನೋಟ್‍ಬ್ಯಾನ್ ಕುರಿತ ಸಿನಿಮಾ. ಎಸ್.ಡಿ.ಅರವಿಂದ್ ನಿರ್ದೇಶನದ ಈ ಚಿತ್ರದ ಮೂಲಕಥೆಯೇ ನೋಟ್‍ಬ್ಯಾನ್.

    ನೋಟ್‍ಬ್ಯಾನ್ ನಂತರ ಎದುರಾಗಿದ್ದ ಸಮಸ್ಯೆಗಳನ್ನು, ಸವಾಲುಗಳನ್ನು ಇಲ್ಲಿ ಹಾಸ್ಯಮಯವಾಗಿ ಹೇಳಲಾಗಿದೆ. ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಮತ್ತೊಬ್ಬ ಮೊಮ್ಮಗ ಸಮರ್ಥ್ ಚಿತ್ರದ ಹೀರೋ. ಅವಿನಾಶ್ ನರಸಿಂಹರಾಜು ಪ್ರಮುಖ ಪಾತ್ರದಲ್ಲಿದ್ದಾರೆ. ಐಶ್ವರ್ಯ ಸಿಂಧೋಗಿ ನಾಯಕಿ. 

  • ಮಟಾಶ್ ನೋಡೋಕೆ ಸ್ಪೆಷಲ್ ರೀಸನ್ನುಗಳಿವೆ

    there is a special reason to watch mataash

    ಮಟಾಶ್. ಹೊಸಬರ ಚಿತ್ರ. ಹಾಗಂತ ಎಲ್ಲರೂ ಹೊಸಬರಲ್ಲ. ಚಿತ್ರದ ನಿರ್ದೇಶಕ ಎಸ್.ಡಿ. ಅರವಿಂದ್, ಲಾಸ್ಟ್‍ಬಸ್ ಚಿತ್ರದ ನಂತರ ನಿರ್ದೇಶಿಸಿರುವ ಕಾಮಿಡಿ ಥ್ರಿಲ್ಲರ್ ಮಟಾಶ್.  ಲಾಸ್ಟ್‍ಬಸ್‍ನಲ್ಲಿ ಅದ್ಭುತವಾಗಿ ಕಥೆ, ಚಿತ್ರಕಥೆ ಹೇಳಿದ್ದ ಅರವಿಂದ್, ಈ ಚಿತ್ರದಲ್ಲಿ ನೋಟ್‍ಬ್ಯಾನ್ ಕಥೆಯನ್ನು ಕಾಮಿಡಿಯಾಗಿಯೇ ಹೇಳಿದ್ದಾರೆ.

    ಹಾಗಂತ ಇದು ನೋಟ್‍ಬ್ಯಾನ್ ಸರೀನೋ.. ತಪ್ಪೋ.. ಎಂದು ವಿಶ್ಲೇಷಿಸುವ ಚಿತ್ರವಲ್ಲ. ಇದು ನೋಟ್‍ಬ್ಯಾನ್ ಆದ ವೇಳೆ ಜನ ಏನೇನು ಹೇಳಿದ್ದರೋ.. ಅವುಗಳನ್ನೆಲ್ಲ ಇಟ್ಟುಕೊಂಡು ನಿರೂಪಿಸಿರುವ ಚಿತ್ರ. 

    ಚಿತ್ರದ ನಾಯಕ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ ಸಮರ್ಥ್ ನರಸಿಂಹ ರಾಜು. 

    ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಹಾಡಿರುವ ಉತ್ತರ ಕರ್ನಾಟಕ ಶೈಲಿಯ ` ಚವಳಿಕಾಯಿ.. ಹಾಡು ಹಿಟ್ ಆಗಿದೆ. ನಮೋ ವೆಂಕಟೇಶಾ.. ವ್ಹಾಟ್ ಎ ಟ್ರ್ಯಾಜಿಡಿ ಹಾಡುಗಳೂ ಗಮನ ಸೆಳೆದಿವೆ. ಹೀಗೆ ಹಲವಾರು ಪ್ಲಸ್ಸುಗಳಿರುವ ಸಿನಿಮಾ ಈಗ ಥಿಯೇಟರಿನಲ್ಲಿದೆ. 

  • ಮಟಾಶ್‍ನಲ್ಲಿ ನೋಟ್‍ಬ್ಯಾನ್ 

    mataash has note ban story

    ನೋಟ್‍ಬ್ಯಾನ್ ಆಗಿ 2 ವರ್ಷ ಕಳೆದಿದ್ದರೂ, ಪ್ರಧಾನಿ ನರೇಂದ್ರ ಮೋದಿಯವರ ಮೇರೆ ಪ್ಯಾರ್ ದೇಶ್‍ವಾಸಿಯೋ ಅನ್ನೋ ಮಾತು ನಿನ್ನೆ ಮೊನ್ನೆ ಕೇಳಿದಂತೆ ಕಿವಿಯಲ್ಲಿ ಗುಂಯ್‍ಗುಡುತ್ತಿದೆ. ಈಗ ಅದೇ ಸಬ್ಜೆಕ್ಟ್ ಇಟ್ಟುಕೊಂಡು ಮಟಾಶ್ ಅನ್ನೋ ಸಿನಿಮಾ ಸಿದ್ಧ ಮಾಡಿಕೊಂಡು ಬಂದಿದ್ದಾರೆ ಎಸ್.ಡಿ.ಅರವಿಂದ್.

    ಮಟಾಶ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮತ್ತು ನಿರ್ಮಾಣದ ಹೊಣೆ ಹೊತ್ತಿರುವುದು ಎಸ್.ಡಿ. ಅರವಿಂದ್. ಜುಗಾರಿ, ಲಾಸ್ಟ್‍ಬಸ್ ಎಂಬ ವಿಭಿನ್ನ ಸಿನಿಮಾಗಳ ನಂತರ ಬರುತ್ತಿರುವ ಅಷ್ಟೇ ವಿಭಿನ್ನ ಸಿನಿಮಾ ಮಟಾಶ್. ಚಿತ್ರದ ಟ್ಯಾಗ್‍ಲೈನ್ ಕೂಡಾ ಮಜವಾಗಿದೆ. ಮಾಡ್ತಾ ಇರ್ತೀವಿ ಆಗ್ತಾ ಇರುತ್ತೆ... 

    ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಹೆಸರು, ಕಥೆ, ನಿರ್ದೇಶಕರ ಹಿಸ್ಟರಿ ಎಲ್ಲವೂ ಕುತೂಹಲಕಾರಿಯಾಗಿದೆ. 

    ಸತೀಶ್ ಪಾಠಕ್, ಗಿರೀಶ್ ಪಟೇಲ್, ಚಂದ್ರಶೇಖರ್ ಮಣನೂರ ಹಾಗೂ ಎಸ್.ಡಿ.ಅರವಿಂದ್ ಚಿತ್ರದ ನಿರ್ಮಾಪಕರು. 

  • ಸಜ್ಜಿ ರೊಟ್ಟಿ ಚವಳಿಕಾಯ್.. ಪುನೀತ್ ಹಾಡಿದಾಗ.. 

    puneeth rajkumar's song is highlight in mataash

    ಸಜ್ಜಿ ರೊಟ್ಟಿ ಚವಳಿಕಾಯ್.. ಪದಗಳು ಕೇಳುತ್ತಿದ್ದಂತೆ ಬಾಯಲ್ಲಿ ನೀರು ಬರೋದು ಪಕ್ಕಾ. ಅದು ಉತ್ತರ ಕರ್ನಾಟಕ ಸ್ಪೆಷಲ್. ಈ ಸಾಲುಗಳೊಂದಿಗೆ ಆರಂಭವಾಗುವ ಗೀತೆಯನ್ನು ಪುನೀತ್ ಹಾಡಿದ್ದು, ಮಟಾಶ್ ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ.

    ಉತ್ತರ ಕರ್ನಾಟಕ ಶೈಲಿಯ ಈ ಹಾಡನ್ನು ಬರೆದಿರುವುದು ಸುನಿಲ್ ಕುಮಾರ್ ಸುಧಾಕರ್. ಆ ಹಾಡಿನ ಕಿಕ್ ಹೆಚ್ಚಿಸಿದ್ದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಪುನೀತ್ ಹಾಡಿನ ಜೋಶ್‍ನ್ನು ಹೆಚ್ಚಿಸಿದ್ದಾರೆ ಎಂದು ಖುಷಿಪಟ್ಟಿದ್ದಾರೆ ನಿರ್ದೇಶಕ ಕಮ್ ನಿರ್ಮಾಪಕ ಎಸ್.ಡಿ. ಅರವಿಂದ್. ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ.