` sonal monterio, - chitraloka.com | Kannada Movie News, Reviews | Image

sonal monterio,

  • 'Panchatantra' On March 29th

    panchatantra on march 29th

    Yogaraj Bhatt's new film 'Panchatantra' is all set for release. Bhatt and his team has decided to release the film across Karnataka on the 29th of March.

    'Panchatantra' stars Vihaan Gowda along with Akshara Gowda and Sonal Monteiro. Rangayana Raghu, Deepak Shetty, Karisubbu and others in prominent roles. Bhatt himself has written the story, screenplay and dialogues apart from directing the film. V Harikrishna is the music director, while Sugnan is the cameraman.

  • 'Panchatantra' Releasing on March 29th

    panchatantra on march 29th

    Yogaraj Bhatt's new film 'Panchatantra' is all set for release. Bhatt and his team has decided to release the film across Karnataka on the 29th of March.

    'Panchatantra' stars Vihaan Gowda along with Akshara Gowda and Sonal Monteiro. Rangayana Raghu, Deepak Shetty, Karisubbu and others in prominent roles.

    Bhatt himself has written the story, screenplay and dialogues apart from directing the film. V Harikrishna is the music director, while Sugnan is the cameraman.

  • Bhatt Likely To Remake 'Panchatantra' In Telugu

    bhatt likely to remkae panchatantra in telugu

    Yogaraj Bhatt's 'Panchatantra' which was released on Friday across Karnataka is getting good response all over. Meanwhile, Bhatt has said that the film might not only be remade in Telugu, but he himself may direct the Telugu version of 'Panchatantra' in the coming days.

    'Panchatantra' is getting dubbing and remake inquiries from other languages and there is a proposal from a Telugu producer to remake the film in Telugu. The producer is also planning to rope in Yogaraj Bhatt to direct the film in Telugu. Bhatt has also fixed the title of the film and has named the film as 'Andhra versus Telangana'. While Andhra represents the elders in the film, Telangana represents youngsters.

    More details about the film is yet awaited.

     

  • Panchatantra Beauty Sonal In Roberrt

    panchatrantra beauty sonal in roberrt

    Sonal Monteiro, who shot to fame in 'Panchatantra' directed by renowned filmmaker Yogaraj Bhat, is one of the most sought after actress. She will be seen playing one of the three lead actresses in Tharun Sudhir's Roberrt featuring Challenging Star Darshan.

    The Panchatantra girl reveals that she will be playing an important role in the film while she is all excited about sharing the screen space with Darshan in such a short span of her acting career.

    She says that Darshan sir and Tharun Sudhir made her feel very comfortable at the sets, and that she was never treated like a fresher. Along with Sonal, Asha Bhat and Tejaswini Prakash plays the other two lead actresses. 

    Post Roberrt, Sonal is busy with Banaras, which is being directed by Jayatheertha and then with most anticipated sequels - Gaalipata 2 and Buddhivantha 2.

  • Sonal Monteiro Bags Upendra's Film

    sonal monterio bags upendra's film

    Sonal Monteiro's latest film 'Panchatantra' directed by Yogaraj Bhatt might not have been a big hit at the box-office. But the actress sure is getting good offers from Sandalwood and among those offers, Sonal has bagged the best.

    Sonal will be acting opposite Upendra in a new untitled film. The film is being produced by T R Chandrashekhar of Crystal Park Films. Currently Upendra is in vacation in North America and the film will be launched on the 27th of May, after he returns from his vacations.

    Well known music director Gurukiran will be composing the music for this film after a short gap.

  • Sonal Monteiro To Act Opposite Vasishta In 'Talwarpete'

    sonal monterio to act opposite vasishta in talwarpere

    Actress Sonal Monteiro is currently shooting for Upendra's 'Buddhivantha 2', which will be followed by Yogaraj Bhatt's 'Galipata 2'. Now the actress has bagged a new film called 'Talwarpete', in which she is paired opposite Vasishta Simha.

    'Talwarpete' is being directed by Lakshman Sri Ram. He along with his twin brother Ram Sri Lakshman has written the story, screenplay and dialogues for the film.

    The new film is all set to be launched soon. Harshavardhan is the music directed, while 'Jogaiah' fame Nandakumar is the cinematographer of the film.

  • ಎಂಎಲ್‍ಎ ಅಂದ್ರೆ ಮದರ್ ಪ್ರಾಮಿಸ್ ಲೆಕ್ಕಕ್ಕೆ ಸಿಗದ ಆಸಾಮಿ

    mla movie image

    ಎಂಎಲ್‍ಎ. ಒಳ್ಳೆ ಹುಡ್ಗ ಪ್ರಥಮ್ ಅಭಿನಯದ ಸಿನಿಮಾ ತೆರೆಗೆ ಬರುತ್ತಿದೆ. ಎಂಎಲ್‍ಎ ಅಂದ್ರೆ ಮದರ್ ಪ್ರಾಮಿಸ್ ಲೆಕ್ಕಕ್ಕೆ ಸಿಗದ ಆಸಾಮಿ ಅನ್ನೋ ಅರ್ಥ ಇದ್ಯಂತೆ. ಕಾಮಿಡಿ ಕಾಮಿಡಿಯಾಗಿಯೇ ಸಾಗುವ ಕಥೆಯಲ್ಲಿ ಪ್ರಥಮ್ ಇಮೇಜ್‍ಗೆ ತಕ್ಕಂತ ಪಾತ್ರವಿದೆ.

    ಮಂಜು ಮೌರ್ಯ ಅವರದ್ದೇ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ. ಸೋನಾಲ್ ಮಾಂಟೆರೋ ಚಿತ್ರದ ನಾಯಕಿ. ಸ್ಪರ್ಶ ರೇಖಾ ಚಿತ್ರದ ಖಳನಾಯಕಿ. ಕುರಿ ಪ್ರತಾಪ್, ನವೀನ್, ಚಂದ್ರಕಲಾ ಮೋಹನ್ ನಟಿಸಿರುವ ಚಿತ್ರಕ್ಕೆ ವೆಂಕಟೇಶ್ ರೆಡ್ಡಿ ನಿರ್ಮಾಪಕ. 

    ಪ್ರಥಮ್ ನಿಜ ಜೀವನಕ್ಕೂ ಹತ್ತಿರ ಇರುವ ಸಿನಿಮಾದಲ್ಲಿ, ಸಾಮಾನ್ಯನೊಬ್ಬ ಎಂಎಲ್‍ಎ ಆಗುವ, ಸವಾಲು ಗೆಲ್ಲುವ ಕಥೆ ಇದೆ. ಮಾಜಿ ಸಚಿವ ಎಚ್.ಎಂ.ರೇವಣ್ಣ, ಚಿತ್ರದಲ್ಲಿ ಸಿಎಂ ರೇವಣ್ಣ ಆಗಿದ್ದಾರೆ.

  • ಕನ್ನಡದಲ್ಲಿ ಸ್ಟಾರ್ ಆದರೂ.. ತುಳು ಮರೆಯಲಿಲ್ಲ ಸೋನಲ್

    sonal monterio in full demand

    ಪಂಚತಂತ್ರ ಚಿತ್ರದ ಮೂಲಕ ಪಡ್ಡೆಗಳ ಹೃದಯದ ಹೊಂಗೆಮರದಲ್ಲಿ ಶೃಂಗಾರದ ಹೂ ಅರಳಿಸಿದ ಚೆಲುವೆ ಸೋನಲ್ ಮಂಥೆರೋ. ಈಗ ಸೋನಲ್‍ಗೆ ಫುಲ್ ಡಿಮ್ಯಾಂಡು. ಭಟ್ಟರ ಗಾಳಿಪಟ-2, ಬುದ್ದಿವಂತ-2, ಹಿಂದಿಯಲ್ಲಿ ಸಾಜನ್ ಚಲೇ ನಸುರಾಲ್-2 ಸೇರಿದಂತೆ ಐದಾರು ಸಿನಿಮಾಗಳಿವೆ. ಹೀಗಿದ್ದರೂ ಸೋನಲ್ ಮಂಥೆರೋ `2 ಎಕ್ರೆ' ತುಳು ಚಿತ್ರವೊಂದರಲ್ಲಿ ಪುಟ್ಟ ಪಾತ್ರವೊಂದನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ.

    ನನಗೆ ಮೊದಲು ಅವಕಾಶ ಕೊಟ್ಟಿದ್ದೇ ತುಳು ಚಿತ್ರರಂಗ. ಪಿಲಿಬೈಲ್ ಯಮುನಕ್ಕ ಚಿತ್ರದ ಮೂಲಕವೇ ಸೋನಲ್ ಅನ್ನೋ ನಟಿ ಹೊರಜಗತ್ತಿಗೆ ಗೊತ್ತಾಗಿದ್ದು. ಅದೇ ಚಿತ್ರದ ನಿರ್ಮಾಪಕ ಸಂದೇಶ್ ಬಂಗೇರ, ನಿರ್ದೇಶಕ ವಿನಾಯಕ್ ಈ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನನಗೊಂದು ಪುಟ್ಟ ಪಾತ್ರವಿದೆ. ಒಂದು ದಿನ ಕಾಲ್‍ಶೀಟ್ ಬೇಕು ಎಂದರು. ಒಪ್ಪಿಕೊಂಡೆ ಎಂದಿದ್ದಾರೆ ಸೋನಲ್.

    ತುಳು ಚಿತ್ರದಲ್ಲಿ ನಟಿಸದೇ ಹೋಗಿದ್ದರೆ, ಕನ್ನಡದಲ್ಲಾಗಲೀ, ಹಿಂದಿಯಲ್ಲಾಗಲೀ ನನಗೆ ಅವಕಾಶ ಸಿಗುತ್ತಿತ್ತೇ.. ನಾವು ನಡೆದು ಬಂದ ದಾರಿಯನ್ನು ಮರೆಯಬಾರದು ಅಂತಾರೆ ಸೋನಲ್.

  • ಕಾಶಿಯ ಶವಸಂಸ್ಕಾರ ಸೋನಲ್‍ಗೆ ಕಲಿಸಿದ ಪಾಠ

    kashi thought a lot about sonal monterio

    ಪಂಚತಂತ್ರದ ಚೆಲುವೆ ಸೋನಲ್ ಮಂಥೆರೋ, ಬನಾರಸ್ ಚಿತ್ರದ ಶೂಟಿಂಗ್‍ನಲ್ಲಿದ್ದಾರೆ. ಜಯತೀರ್ಥ ನಿರ್ದೇಶನದ ಚಿತ್ರದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಪುತ್ರ ಜುನೇದ್ ಖಾನ್ ಲಾಂಚ್ ಆಗುತ್ತಿರುವ ಚಿತ್ರವಿದು. ಚಿತ್ರದ ಶೂಟಿಂಗ್‍ಗಾಗಿ ಕಾಶಿಯಲ್ಲೇ ಬೀಡುಬಿಟ್ಟಿದೆ ಜಯತೀರ್ಥ & ಟೀಂ.

    ಕಾಶಿಯ ಬಗ್ಗೆ ಕೇಳಿದ್ದೆ. ನೋಡಿರಲಿಲ್ಲ. ಇಲ್ಲಿ ಹರಿಶ್ಚಂದ್ರ ಘಾಟ್ ಮತ್ತು ಮಣಿಕರ್ಣಿಕಾ ಘಾಟ್ ಎಂಬ ಎರಡು ಘಾಟ್‍ಗಳಿವೆ. ಅಲ್ಲಿ ಪ್ರತಿ ಕ್ಷಣ ಬೆಂಕಿ ಉರಿಯುತ್ತಲೇ ಇರುತ್ತದೆ. ಚಿತೆಯ ಬೆಂಕಿ. ಆರಂಭದಲ್ಲಿ ಅದನ್ನು ನೋಡಿ ಭಯವಾಗಿತ್ತು. ನಿದ್ರೆ ಬರುತ್ತಿರಲಿಲ್ಲ. ಊಟ ಸೇರುತ್ತಿರಲಿಲ್ಲ. ಡಿಸ್ಟರ್ಬ್ ಆಗಿದ್ದೆ ಎನ್ನುವ ಸೋನಲ್‍ಗೆ ಆನಂತರ ಅದು ಅಭ್ಯಾಸವಾಗಿ ಹೋಯ್ತಂತೆ.

    ಕಣ್ಣೆದುರೇ ಮನುಷ್ಯರ ಹೆಣ ಸುಡುವುದು ಎಂಥವರಿಗೂ ಆಘಾತ ತರುತ್ತೆ. ನಾವೂ ದಿನ ದಿನವೂ ಅದನ್ನು ನೋಡ್ತಾ ನೋಡ್ತಾ ನಿರ್ಭಾವುಕರಾದೆವು. ಕಾಶಿಯವರಷ್ಟೇ ನಿರ್ಭಾವುಕರಾಗಿಬಿಟ್ಟೆವು ಎನ್ನುತ್ತಾರೆ ಸೋನಲ್. ಕಾಶಿ, ಎಂಥವರಿಗೂ ಬದುಕಿನ ಸತ್ಯ ದರ್ಶನ ಮಾಡಿಸುತ್ತೆ ಎನ್ನುವುದಂತೂ ಸತ್ಯ.

  • ಜಮೀರ್ ಪುತ್ರನ ಚಿತ್ರಕ್ಕೆ ಶುರುವಾಯ್ತು ಬಾಯ್ಕಾಟ್ ಕ್ಯಾಂಪೇನ್

    ಜಮೀರ್ ಪುತ್ರನ ಚಿತ್ರಕ್ಕೆ ಶುರುವಾಯ್ತು ಬಾಯ್ಕಾಟ್ ಕ್ಯಾಂಪೇನ್

    ಬಾಯ್ಕಾಟ್..ಬಾಯ್ಕಾಟ್..ಬಾಯ್ಕಾಟ್.. ಬಾಲಿವುಡ್‍ನಲ್ಲಿ ಘಟಾನುಘಟಿ ಚಿತ್ರಗಳನ್ನು ಸೋಲಿಸಿದ ಟ್ರೆಂಡ್. ಅಮೀರ್ ಖಾನ್, ಕರೀನಾ ಕಪೂರ್, ಶಾರೂಕ್ ಖಾನ್, ರಣಬೀರ್ ಕಪೂರ್, ಅಲಿಯಾ ಭಟ್, ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ, ತಾಪ್ಸಿ ಪನ್ನು, ಸೈಫ್ ಅಲಿ ಖಾನ್.. ಒಬ್ಬಿಬ್ಬರಲ್ಲ. ಹಿಂದೂ, ಹಿಂದುತ್ವದ ಕುರಿತ ನಕಾರಾತ್ಮಕ ಹೇಳಿಕೆಗಳು ಹಾಗೂ ಒನ್ ಸೈಡೆಡ್ ಅಜೆಂಡಾಗಳು ಇದಕ್ಕೆ ಕಾರಣವಾಗಿರೋದು ಸುಳ್ಳಲ್ಲ. ಇದಕ್ಕೆ  ಪ್ರತಿಯಾಗಿ ಹಿಂದುತ್ವದ ಹಾಗೂ ಮೋದಿ ಪರ ನಿಂತ ಕಾರಣಕ್ಕೆ ಅಕ್ಷಯ್ ಕುಮಾರ್, ಕಂಗನಾ ರಣಾವತ್ ಚಿತ್ರಗಳು ಕೂಡಾ ಬಾಯ್ಕಾಟ್ ಬಿಸಿ ಅನುಭವಿಸಿದೆ. ಈಗ ಇದು ಸ್ಯಾಂಡಲ್‍ವುಡ್‍ಗೂ ತಟ್ಟಿದೆ.

    ಸ್ಯಾಂಡಲ್`ವುಡ್`ಗೆ ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರನ ಎಂಟ್ರಿಯಾಗುತ್ತಿದೆ. ಝೈದ್ ಖಾನ್ ಹೀರೋ ಆಗಿರೋ ಚಿತ್ರಕ್ಕೆ ಜಯತೀರ್ಥ ನಿರ್ದೇಶಕ. ಸೋನಲ್ ಮಂಥೆರೋ ನಾಯಕಿ. ಜಯತೀರ್ಥ ಬೆಲ್ ಬಾಟಂ, ಒಲವೇ ಮಂದಾರದಂತಾ ವಿಭಿನ್ನ ಚಿತ್ರಗಳನ್ನು ನೀಡಿರುವ ನಿರ್ದೇಶಕ. ಸೋನಲ್ ಮಂಥೆರೋ ಕೂಡಾ ಪಂಚತಂತ್ರದ ಮೂಲಕ ಗಮನ  ಸೆಳೆದ ಪ್ರತಿಭಾವಂತೆ. ಆದರೆ ಬಾಯ್ಕಾಟ್‍ಗೆ ಕಾರಣವಾಗಿರೋದು ಝೈದ್ ಖಾನ್. ಅವರು ಜಮೀರ್ ಪುತ್ರ ಎನ್ನುವುದೇ ಕಾರಣ.

    ಜಮೀರ್ ಅಹ್ಮದ್ ಮುಸ್ಲಿಮರ ನಾಯಕ ಎನ್ನುವುದಷ್ಟೇ ಅಲ್ಲ.. ಹಿಂದೂಗಳ ವಿರೋಧಿ ಅನ್ನೋ ಹಣೆಪಟ್ಟವನ್ನು ಕೂಡಾ ಕಟ್ಟಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಗಣೇಶ ಹಬ್ಬಕ್ಕೆ ಶುಭ ಕೋರುವ ಜಮೀರ್, ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶನನ್ನು ಕೂರಿಸಲು ಅಡ್ಡಿಯಾಗುತ್ತಾರೆ. ತಾವೇ 2006ರಲ್ಲಿ ಮಾಡಿದ್ದ ಒಡಂಬಡಿಕೆಯನ್ನೂ ನಿರಾಕರಿಸುತ್ತಾರೆ. ಸುಪ್ರೀಂಕೋರ್ಟಿನವರೆಗೂ ವಿವಾದ ಕೊಂಡೊಯ್ಯುತ್ತಾರೆ ಎನ್ನುವುದು ಒಂದು ಕಾರಣವಾದರೆ, ಕೊಡವರು ಮತ್ತು ಮಲಬಾರ್ ಕ್ರೈಸ್ತರ ಪಾಲಿನ ಖಳನಾಯಕ ಟಿಪ್ಪು ಸುಲ್ತಾನ್ ಬಗ್ಗೆ ಹಾಡಿ ಹೊಗಳುತ್ತಾರೆ. ಹೀಗಾಗಿಯೇ ಝೈದ್ ಖಾನ್ ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಎನ್ನುವ ಕೂಗು ಸೋಷಿಯಲ್ ಮೀಡಿಯಾಗಳಲ್ಲಿ ಶುರುವಾಗಿದೆ.

    ಅದೇ ಕಾರಣಕ್ಕೆ ಏನೋ ಜಮೀರ್ ಅಹ್ಮದ್ ತಮ್ಮ ಕಚೇರಿಯಲ್ಲಿ ಇದೇ ಮೊದಲ ಬಾರಿಗೆ ಗಣೇಶನನ್ನು ಕೂರಿಸಿದ್ದಾರೆ. ಝೈದ್ ಖಾನ್ ಕೂಡಾ ಗಣೇಶ ಹಬ್ಬಕ್ಕೆ ತೆರಳಿ ಪೂಜೆ ಮಾಡಿಸಿದ್ದಾರೆ.

    ಇನ್ನೂ ಒಂದು ವಿಶೇಷವಿದೆ. ಬನಾರಸ್ ಎಂದರೆ ಕಾಶಿ. ಆ ಬನಾರಸ್ ಸುತ್ತಲೇ ಇರೋ ಕಥೆಯಲ್ಲಿ ಝೈದ್ ಖಾನ್ ನಾಯಕ. ಚಿತ್ರ ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಚಿತ್ರದ ಕುರಿತ ಬಾಯ್ಕಾಟ್ ಜೋರಾಗುವ ಸುಳಿವುಗಳೂ ಜೋರಾಗಿವೆ.

  • ಟೀ ಬನ್ನು ಟೈಮಲ್ಲಿ ಹುಟ್ಟಿಕೊಂಡ ಕಥೆಯೇ ಪಂಚತಂತ್ರ

    panchatantra movie concept

    ಯೋಗರಾಜ್ ಭಟ್ಟರ ಪಂಚತಂತ್ರ ಕಥೆ ಎಲ್ಲಿಂದ ಬಂತು..? ಅವರೇ ಹೇಳಿಕೊಂಡಂತೆ ಇದು ಪಂಚತಂತ್ರದಲ್ಲಿ, ಈಸೋಪನ ನೀತಿಕಥೆಗಳಲ್ಲಿ ಬರುವ ಕಥೆಯಿಂದ ಹೊಳೆದ ಎಳೆ. ಆಮೆ ಮೊಲ ರೇಸಿನ ಕಥೆ. ಆದರೆ, ಅದು ಹೊಳೆದದ್ದು ಟೀ ಬನ್ನಿನಲ್ಲಿ ಅಂದ್ರೆ ಅಚ್ಚರಿಯಾದೀತು.

    ಚಿತ್ರಕ್ಕೆ ಕಥೆ ಬರೆದಿರೋದು ಟಗರು ಮಾಸ್ತಿ. ಟಗರು ಮೂಲಕ ಸಂಭಾಷಣೆಗೆ ಹೊಸ ಟಚ್ ಕೊಟ್ಟ ಮಾಸ್ತಿ, ಈ ಚಿತ್ರಕ್ಕೆ ಕಥೆ, ಸಂಭಾಷಣೆ ಎರಡನ್ನೂ ಬರೆದಿದ್ದಾರೆ. ಮಾಸ್ತಿ ಕೂಡಾ ಭಟ್ಟರ ಗರಡಿಯ ಹುಡುಗನೇ. ಕಥೆ ಹುಡುಕಾಟದಲ್ಲಿದ್ದಾಗ ಭಟ್ಟರ ಕಚೇರಿಯಲ್ಲಿ ಟೀ ಕುಡಿಯುತ್ತಾ ಬನ್ನು ತಿನ್ನುತ್ತಿದ್ದಾಗ ಈ ಕಥೆ ಹೇಳಿದ್ರಂತೆ ಮಾಸ್ತಿ. ಅದಕ್ಕೂ ಮುಂಚೆ ಇಡೀ ದಿನ ಮಾಸ್ತಿ ಹೇಳಿದ ಹಲವು ಕಥೆಗಳನ್ನು ಕೇಳಿದ್ದವರಿಗೆ ಇದು ತುಂಬಾ ಇಷ್ಟವಾಗಿಬಿಟ್ಟಿದೆ. ಶಾರ್ಟ್ ಫಿಲಂಗೆಂದು ಮಾಡಿಕೊಂಡಿದ್ದ ಕಥೆಯನ್ನು ವಿಸ್ತರಿಸಿ ಸಿನಿಮಾಗೆ ಒಗ್ಗಿಸಿದ್ದಾರೆ ಭಟ್ಟರು.

    ಇಡೀ ಚಿತ್ರದಲ್ಲಿ ಪ್ರೀತಿ, ಪ್ರಣಯ, ರೇಸ್, ತರಲೆ, ವೇದಾಂತ ಎಲ್ಲವೂ ಇದೆ. ಜೊತೆಯಲ್ಲಿ ಹೊಟ್ಟೆ ಹುಣ್ಣಾಗಿಸುವಷ್ಟು ಕಾಮಿಡಿ ಇದೆ. ವಿಹಾನ್-ಸೋನಾಲ್ ರೊಮ್ಯಾನ್ಸು, ರಂಗಾಯಣ ರಘು ಅದ್ಭುತ ಅಭಿನಯ ಚಿತ್ರದ ಹೈಲೈಟು. ಹರಿಕೃಷ್ಣ ಸಂಗೀತದ ಹಾಡುಗಳನ್ನೆಲ್ಲ ಕೇಳಿದವರಿಗೆ ಸಿನಿಮಾ ಆಗಲೇ ಕಿಕ್ಕೇರಿಸಿದೆ. 

  • ತೆಲುಗು, ಹಿಂದಿಯಲ್ಲಿ ಪಂಚತಂತ್ರಕ್ಕೆ ಡಿಮ್ಯಾಂಡು

    panchatantra gets demand in telugu and hindi

    ಯೋಗರಾಜ್ ಭಟ್ಟರ ಪಂಚತಂತ್ರ ಚಿತ್ರ ಕಥೆ, ಪ್ರೀತಿ, ರೇಸ್‍ನಿಂದ ಮೋಡಿಯನ್ನೇ ಮಾಡಿದೆ. ಯುವ ಪ್ರೇಕ್ಷಕರನ್ನು ಸೆಳೆಯುತ್ತಿರುವ ಪಂಚತಂತ್ರ ಚಿತ್ರಕ್ಕೆ ಒಳ್ಳೆಯ ಓಪನಿಂಗೂ ಸಿಕ್ಕಿದೆ. ಪಂಚತಂತ್ರದ ಆಮೆ, ಮೊಲ ರೇಸ್ ಕಥೆಯನ್ನು ಇಷ್ಟು ಚೆಂದವಾಗಿ ಸಿನಿಮಾ ಮಾಡಬಹುದಾ ಎಂದು ಅಚ್ಚರಿ ಪಟ್ಟಿರುವುದು ಕನ್ನಡ ಪ್ರೇಕ್ಷಕರಷ್ಟೇ ಅಲ್ಲ, ತೆಲುಗು ಹಾಗೂ ಹಿಂದಿ ಚಿತ್ರರಂಗದವರೂ ಕೂಡಾ ಬೆರಗಾಗಿದ್ದಾರೆ.

    ಹೀಗಾಗಿಯೇ ಪಂಚತಂತ್ರ ಚಿತ್ರದ ರೀಮೇಕ್‍ಗೆ ಡಿಮ್ಯಾಂಡ್ ಬರೋಕೆ ಶುರುವಾಗಿದೆ. ಭಟ್ಟರ ಚಿತ್ರಗಳು ಬೇರೆ ಭಾಷೆಗೆ ರೀಮೇಕ್ ಆಗುವುದು ಹೊಸದೇನಲ್ಲ. ಈ ಬಾರಿಯೂ ಅಷ್ಟೆ, ತೆಲುಗಿನಲ್ಲಿ ಆಗಲೇ ಆಂಧ್ರ ವರ್ಸಸ್ ತೆಲಂಗಾಣ ಅನ್ನೋ ಹೆಸರಲ್ಲಿ ಪಂಚತಂತ್ರ ರೀಮೇಕ್ ಆಗುತ್ತಿದೆ ಎಂಬ ಸುದ್ದಿಯಿದೆ.

    ಒಟ್ಟಿನಲ್ಲಿ ಹೊಸಬರನ್ನೇ ಇಟ್ಟುಕೊಂಡು ಯೋಗರಾಜ್ ಭಟ್ಟರು ಮತ್ತೊಮ್ಮೆ ಗೆದ್ದಿದ್ದಾರೆ. ಶೃಂಗಾರದ ಹೊಂಗೇ ಮರ ಹೂ ಬಿಟ್ಟು, ಅರಳಿದೆ.

  • ದೇವಾಲಯ, ದರ್ಗಾ, ಚರ್ಚ್‍ಗೆ ಭೇಟಿ ನೀಡಿದ ಬನಾರಸ್ ಹೀರೋ

    banaras image

    ಬನಾರಸ್ ಮೂಲಕ ಹೀರೋ ಆಗುತ್ತಿರುವ ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ದೇವಾಲಯ, ದರ್ಗಾ, ಚರ್ಚ್‍ಗಳಿಗೆ ಭೇಟಿ ನೀಡಿರುವುದು ವಿಶೇಷ. ಕೋಲಾರಕ್ಕೆ ಚಿತ್ರದ ಪ್ರಚಾರಕ್ಕೆ ಆಗಮಿಸಿದ್ದ ಝೈದ್ ಖಾನ್, ಕೋಲಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು. ನಂತರ  ದರ್ಗಾ ಹಾಗೂ ಚರ್ಚ್ಗೆ ಭೇಟಿ ನೀಡಿ ಆಶೀರ್ವಾದ ಪಡೆದರು.

    ಕೋಲಾರದ ಹೊರವಲಯದ ಕೊಂಡರಾಜನಹಳ್ಳಿ ಗೇಟ್ನ ದರ್ಗಾ ಬಳಿ ನಟ ಝೈದ್ ಖಾಖ್ಗೆ ಅದ್ಧೂರಿ ಸ್ವಾಗತ ಸಿಕ್ಕಿತು. ಮಳೆಯಲ್ಲೇ ಕೋಲಾರ ನಗರದ ಹಲವು ಕಡೆ ಬೈಕ್ ರ್ಯಾಲಿ ಮೂಲಕ ಝೈದ್ ಖಾನ್ ರೌಂಡ್ಸ್ ಹಾಕಿದರು. ಮೊದಲಿಗೆ ಕ್ಲಾಕ್ ಟವರ್ ಬಳಿಯ ದರ್ಗಾಗೆ ನಟ ಝೈದ್ ಖಾನ್ ಭೇಟಿ ನೀಡಿದರು. ನಂತರ ಕೋಲಾರ ದೇಗುಲಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು. ಬಳಿಕ ಚರ್ಚ್ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಕೊನೆಯದಾಗಿ ಕೋಲಾರ ನಗರದ ಮಹಿಳಾ ಸಮಾಜ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಬನಾರಸ್ ಪ್ರೀ-ರಿಲೀಸ್ ಈವೆಂಟ್ನಲ್ಲಿ ಭಾಗಿಯಾದರು.

    ಬನಾರಸ್ ಚಿತ್ರದಲ್ಲಿ ಹಾಸ್ಯ, ಥ್ರಿಲ್ಲರ್ ಎಲ್ಲ ಅಂಶಗಳೂ ಇವೆ. ಸಮಾಜಕ್ಕೆ ಒಳ್ಳೆಯ ಸಂದೇಶವೂ ಇದೆ. ಪ್ರತಿಯೊಬ್ಬರೂ ಚಿತ್ರಮಂದಿರಕ್ಕೆ ಬಂದು ಸಿನಿಮಾವನ್ನ ಥಿಯೇಟರಿನಲ್ಲೇ ನೋಡಿ. ಹಾರೈಸಿ ಎಂದು ಝೈದ್ ಖಾನ್ ಮನವಿ ಮಾಡಿದರು. ಝೈದ್ ಖಾನ್ ಜೊತೆ ಕಾಂಗ್ರೆಸ್ ಮುಖಂಡರಾದ ಗೌಸಿ, ಜಿಲ್ಲಾ ಕಾಂಗ್ರೆಸ್ ಮೈನಾರಿಟಿ ವಿಭಾಗದ ಪ್ರಧಾನ ಕಾರ್ಯದರ್ಶಿ ಜಾವೀದ್ ಸಚಿನ್, ಮೈನಾರಿಟಿ ಯೂಥ್ ಪ್ರೆಸಿಡೆಂಟ್ ಮೊಹಮ್ಮದ್ ನೂರ್, ಯೂಥ್ ಕಾಂಗ್ರೆಸ್ನ ಸಾಧಿಕ್ ಪಾಷಾ, ಮುಖಂಡರಾದ ಮುಸ್ತಫಾ, ಆಫ್ರಿದ್, ಭರತ್ ರಾಯ್, ಯೂಥ್ ಕಾಂಗ್ರೆಸ್ ಅಧ್ಯಕ್ಷ ನವೀನ್, ಸೈಯದ್ ಗೋರು ಮಹಿಳಾ ಸಮಾಜ ಪ್ರಾಂಶುಪಾಲ ಮಂಜುನಾಥ್, ಮುಫೀದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

    ಬನಾರಸ್ ಝೈದ್ ಖಾನ್ ನಟನೆಯ ಮೊದಲ ಚಿತ್ರ. ಸೋನಲ್ ಮಂಥೆರೋ ನಾಯಕಿ. ಜಯತೀರ್ಥ ನಿರ್ದೇಶನದ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ.

     

  • ನಾಚಿಕೆ ಬಿಡಿಸೋಕ್ ಹೋಗಿ ನಾಚಿ ನಾಚಿ ಮುದ್ದೆಯಾದ ವಿಹಾನ್

    panchatantra hero feeling shy after movie release

    ಪಂಚತಂತ್ರ ಸಿನಿಮಾ ರಿಲೀಸ್ ಆಗಿ ಯುವ ಪ್ರೇಕ್ಷಕರು ರೋಮಾಂಚಿತರಾಗುತ್ತಿದ್ದರೆ, ಸಿನಿಮಾ ಹೀರೋ ವಿಹಾನ್ ನಾಚಿ ನಾಚಿ ಮುದ್ದೆಯಾಗುತ್ತಿದ್ದಾರೆ. ಎಲ್ಲವೂ ಭಟ್ಟರ ತುಂಟಾಟದ ಫಲ. ಯೋಗರಾಜ್ ಭಟ್ಟರು ತಮ್ಮ ತುಂಟಾಟ, ಚೆಲ್ಲಾಟವನ್ನು... ಛೆ.. ನಾನೇ ಅಲ್ಲಿರಬಾರದಿತ್ತೆ ಎಂದು ಹೊಟ್ಟೆ ಉರಿದುಕೊಳ್ಳುವಂತೆ ಸ್ಕ್ರೀನ್ ಮೇಲೆ ತೋರಿಸೋದ್ರಲ್ಲಿ ಎತ್ತಿದ ಕೈ. ಪಂಚತಂತ್ರದಲ್ಲೂ ಅದನ್ನು ಮಾಡಿ ಗೆದ್ದಿರೋ ಭಟ್ಟರು, ವಿಹಾನ್‍ರನ್ನು ನಾಚಿಕೊಳ್ಳೋ ಹಾಗೆ ಮಾಡಿದ್ದಾರೆ. 

    ಈಗ ವಿಹಾನ್‍ಗೆ ಬರ್ತಿರೋ ಮೆಸೇಜ್‍ಗಳು ಎಂಥವಂತೆ ಗೊತ್ತಾ..? ನಾಚಿಕೆ ಬಿಡಿಸೋದನ್ನ ಹೇಗ್ ಕಲ್ತುಕೊಂಡ್ರಿ..?

    ಹುಕ್ಕು ಬಿಚ್ಚೋದು ಹೇಗೆ..? ಹೇಳ್ಕೊಡ್ರಿ..?

    ನಾಚಿಕೆ ಬಿಡಿಸಿದ್ರಲ್ಲ, ರಿಸಲ್ಟ್ ಯಾವಾಗ..? 

    ನಿಜಕ್ಕೂ ನಾಚಿಕೆ ಬಿಡಿಸಿದ್ರಾ..?

    ಹೀಗೆ ಮೆಸೇಜ್ ಮೇಲೆ ಮೆಸೇಜುಗಳು. ಪಾಪ.. ಭಟ್ಟರ ಎದುರಿಗೆ, ಇಡೀ ಸಿನಿಮಾ ಸೆಟ್ಟಿನವರ ಕಣ್ಗಾವಲಿನಲ್ಲಿ ನಾಚಿಕೊಂಡೇ ನಾಚಿಕೆ ಬಿಡಿಸಿದ್ದ ವಿಹಾನ್, ಈಗ ಈ ಪ್ರಶ್ನೆಗಳಿಗೆ ಉತ್ತರ ಕೊಡೋಕಾಗದೆ ನಾಚಿ ಮುದ್ದೆಯಾಗಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರು ವಿಹಾನ್-ಸೋನಲ್ ನಾಚಿಕೆ ಆಟ ನೋಡಿ ಒದ್ದೆಯಾಗಿದ್ದಾರೆ.

  • ಪಂಚತಂತ್ರ ಸೋನಲ್ ತಲ್ವಾರ್‍ಪೇಟೆಗೆ ಎಂಟ್ರಿ..!

    sonal to act in talwarpete

    ಪಂಚತಂತ್ರ ಚಿತ್ರದ ಮೂಲಕ ಚಿತ್ರರಂಗದ ಗಮನ ಸೆಳೆದ ಚೆಲುವೆ ಸೋನಲ್ ಮಂಥೆರೋಗೆ ಈಗ ಅವಕಾಶಗಳ ಸುರಿಮಳೆ. ಭಟ್ಟರ ಗಾಳಿಪಟ-2ನಲ್ಲಿ ಮತ್ತೊಮ್ಮೆ ಚಾನ್ಸ್ ಪಡೆದಿರುವ ಸೋನಲ್, ಉಪೇಂದ್ರ ಅಭಿನಯದ ಬುದ್ದಿವಂತ-2 ಚಿತ್ರದಲ್ಲೂ ನಾಯಕಿ. ಇದರ ಜೊತೆಯಲ್ಲೇ ತಲ್ವಾರ್‍ಪೇಟೆಗೆ ಎಂಟ್ರಿ ಕೊಟ್ಟಿದ್ದಾರೆ ಸೋನಲ್.

    ಉಗ್ರಂ, ಕೆಜಿಎಫ್‍ನ ಪ್ರಶಾಂತ್ ನೀಲ್, ಮಫ್ತಿಯ ನರ್ತನ್ ಜೊತೆ ಕೆಲಸ ಮಾಡಿರುವ ಶ್ರೀರಾಮ್-ಲಕ್ಷ್ಮಣ್ ಜೋಡಿ, ಈಗ ನಿರ್ದೇಶಕರಾಗುತ್ತಿದ್ದಾರೆ. ಅವರೇ ಕಥೆ ಬರೆದು ನಿರ್ದೇಶಿಸುತ್ತಿರುವ ಚಿತ್ರಕ್ಕೆ ವಸಿಷ್ಠ ಸಿಂಹ ಹೀರೋ. ಸೋನಲ್ ಹೀರೋಯಿನ್.

  • ಬನಾರಸ್ ಚಿತ್ರದಲ್ಲಿ ನಟಿಸೋಕೇ ಬಿಟ್ಟಿಲ್ಲವಂತೆ..!

    sonal monterio image

    ಬನಾರಸ್ ಮೇಲೆ ನನಗೆ ಭಾರಿ ನಿರೀಕ್ಷೆಗಳಿವೆ. ನನ್ನದು ಧನಿ ಅನ್ನೋ ಹುಡುಗಿಯ ಪಾತ್ರ. ಗಾಯಕಿಯಾಗಬೇಕು ಎಂದು ಆಸೆಯಿಟ್ಟುಕೊಂಡಿರೋ ಹುಡುಗಿ. ಸಾಮಾನ್ಯವಾಗಿ ಎಲ್ಲ ನಿರ್ದೇಶಕರೂ ಸ್ಕ್ರಿಪ್ಟ್, ಡೈಲಾಗ್ ಕೊಟ್ಟು ಪ್ರಿಪೇರ್ ಆಗೋಕೆ ಹೇಳ್ತಾರೆ. ಆದರೆ ಜಯತೀರ್ಥ ಹಾಗಲ್ಲ. ನಟಿಸಬೇಡಿ ಎನ್ನುತ್ತಿದ್ದರು. ನೀವು ಹೇಗಿದ್ದೀರೋ.. ಹಾಗೆಯೇ ಇರಿ. ಓವರ್ ಆಕ್ಟಿಂಗ್ ಬೇಡ ಎನ್ನುತ್ತಿದ್ದರು... ಇದು ಜಯತೀರ್ಥ ಬಗ್ಗೆ ಸೋನಲ್ ಮಂಥೆರೋ ಹೇಳಿರೋ ಮಾತು.
    ಸೋನಲ್ ಅವರಿಗೆ ಇದು ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಕ್ಯಾಮೆರಾ ಮುಂದೆ ರಿಯಲ್ ಆಗಿರಿ ಎಂದರೆ ಸಹಜವಾಗಿ ನಟಿಸಬಹುದು. ಸ್ವಲ್ಪ ಉತ್ಪ್ರೇಕ್ಷೆ ಇರಲಿ ಎಂದರೆ ನಟಿಸುವುದು ಕಷ್ಟ ಎನ್ನುವ ಸೋನಲ್ ಅವರಿಗೆ ಫಸ್ಟ್ ಪ್ಯಾನ್ ಇಂಡಿಯಾ ಎಂಬ ಟೆನ್ಷನ್ನೂ ಇದೆ.
    ಜಯತೀರ್ಥ ಟೈಂ ವೇಸ್ಟ್ ಮಾಡಲ್ಲ. ಹಾಗಂತ ಬ್ಯುಸಿ ಇದ್ದಾರೆ ಅನ್ನೋದನ್ನೂ ತೋರಿಸಿಕೊಳ್ಳಲ್ಲ. ಕೆಲಸ ಮಾತ್ರ ಆಗ್ತಾ ಇರುತ್ತೆ. ಅವರ ತಾಳ್ಮೆ ದೊಡ್ಡದು. ಸಂಜೆಯ ಹೊತ್ತಿಗೆ ಚಿತ್ರದ ಪ್ಲಾನ್ ಪ್ರಕಾರ ಎಲ್ಲ ಕೆಲಸವೂ ಮುಗಿದಿರುತ್ತೆ. ಸಂಜೆ ಹೊತ್ತಿಗೆ ಫ್ರೀ ಇರ್ತಾ ಇದ್ರು. ನಾನೂ ಅವರ ಜೊತೆ ಕಾಶಿ ಸುತ್ತುತ್ತಿದ್ದೆ. ವಾರಾಣಸಿಯಲ್ಲಿ ಅದೆಷ್ಟು ಸ್ವೀಟ್ ತಿಂದಿದ್ದೇವೋ.. ವೆರೈಟಿ ವೆರೈಟಿ ಸ್ವೀಟ್ಸ್ ಎನ್ನುತ್ತಾ ಕಾಶಿಗೇ ಜಾರುತ್ತಾರೆ. ಇವತ್ತು ಸಿನಿಮಾ ರಿಲೀಸ್. ಪ್ರೇಕ್ಷಕರೂ ಕೂಡಾ ಬನಾರಸ್‍ಗೆ ಜಾರಬೇಕು.

  • ಬನಾರಸ್ ಮೊದಲ ಹಾಡು ಬಂತು : ಹೇಗೆ ನಟಿಸಿದ್ದಾರೆ ಜಮೀರ್ ಪುತ್ರ?

    ಬನಾರಸ್ ಮೊದಲ ಹಾಡು ಬಂತು : ಹೇಗೆ ನಟಿಸಿದ್ದಾರೆ ಜಮೀರ್ ಪುತ್ರ?

    ಮಾಯಗಂಗೆ.. ಮಾಯಗಂಗೆ.. ಮೌನಿಯಾದಳೇ..

    ಪವಿತ್ರ ಗಂಗಾನದಿಯ ತಟದ ಮೇಲೆ ಅರಳುವ ಪ್ರೀತಿ.. ನಾಯಕಿ ಪ್ರೀತಿ ಹೇಳುತ್ತಿದ್ದಂತೆ ಗಂಗೆಯಲ್ಲಿ ಮುಳುಗೇಳುವ ನಾಯಕ.. ಅಜನೀಶ್ ಲೋಕನಾಥ್ ಸಂಗೀತ ಗುಂಗು ಹಿಡಿಸೋಕೆ ಶುರು ಮಾಡಿದರೆ, ನಾಗೇಂದ್ರ ಪ್ರಸಾದ್ ಸಾಹಿತ್ಯ ಮೋಡಿ ಮಾಡುತ್ತದೆ. ಅರ್ಮಾನ್ ಮಲಿಕ್ ಕಂಠಸಿರಿಗೆ ತಕ್ಕಂತೆ ನಟಿಸಿರುವುದು ಝೈದ್ ಖಾನ್. ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಚೆಂದವಾಗಿ ಕಾಣಿಸುತ್ತಾರೆ. ಚೆನ್ನಾಗಿ ನಟಿಸಿದ್ದಾರೆ ಅನ್ನೋ ಭರವಸೆ ಈ ಹಾಡಿನಲ್ಲಿ ಸಿಗುತ್ತದೆ. ಅಫ್‍ಕೋರ್ಸ್.. ನಿರ್ದೇಶಕರಾಗಿರೋದು ಜಯತೀರ್ಥ.

    ತಿಲಕ್ ರಾಜ್ ಬಲ್ಲಾಳ್ ನಿರ್ಮಾಣದ ಚಿತ್ರ ನ್ಯಾಷನಲ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್‍ನಲ್ಲಿ ತೆರೆಗೆ ಬರುತ್ತಿದೆ. ಝೈದ್ ಖಾನ್ ಎದುರು ನಾಯಕಿಯಾಗಿ ನಟಿಸಿರುವುದು ಶೃಂಗಾರದ ಹೊಗೆ ಮರದಲ್ಲಿ ಹೂ ಬಿಡುವಂತೆ ಮಾಡಿದ ಸೋನಲ್ ಮಂಥೆರೋ. ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ, ದೇವರಾಜ್, ಸಪ್ನಾ ರಾಜ್.. ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಇದೂ ಕೂಡಾ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಪ್ಯಾನ್ ಇಂಡಿಯಾ ಸಿನಿಮಾ.

  • ಬಾಲಿವುಡ್`ಗೆ ಸೋನಲ್ ಮಂಥೆರೋ

    ಬಾಲಿವುಡ್`ಗೆ ಸೋನಲ್ ಮಂಥೆರೋ

    ಪಂಚತಂತ್ರದ ಮೂಲಕ ಕನ್ನಡಿಗರ ಹೃದಯದಲ್ಲಿ ಸ್ಥಾನ ಗಿಟ್ಟಿಸಿದ ಚೆಲುವೆ ಸೋನಲ್ ಮಂಥೆರೋ, ಬಾಲಿವುಡ್‍ನತ್ತ ತೆರಳಿದ್ದಾರೆ. ಬಾಲಿವುಡ್‍ನಲ್ಲಿ ಸರೋಜಿನಿ ನಾಯ್ಡು ಅವರ ಬಯೋಪಿಕ್ ತಯಾರಾಗುತ್ತಿದೆ. ಸರೋಜಿನಿ ಅನ್ನೋ ಟೈಟಲ್‍ನಲ್ಲಿ. ಆ ಚಿತ್ರದಲ್ಲಿ ಸರೋಜಿನಿ ಪಾತ್ರ ಮಾಡುತ್ತಿರೋದು ಸೋನಲ್ ಮಂಥೆರೋ.

    ಭಾರತದ ನೈಟಿಂಗೇಲ್ ಎಂದೇ ಕರೆಸಿಕೊಂಡಿದ್ದ ಸರೋಜಿನಿ ನಾಯ್ಡು, ಸ್ವಾತಂತ್ರ್ಯ ಹೋರಾಟದಲ್ಲಿದ್ದವರು. ಗಾಂಧೀಜಿ ಅನುಯಾಯಿ. ದೇಶದ ಮೊದಲ ಮಹಿಳಾ ರಾಜ್ಯಪಾಲೆಯೂ ಅವರೇ. ಈಗ ಆ ದೊಡ್ಡ ವ್ಯಕ್ತಿಯ ಚಿತ್ರದಲ್ಲಿ ಸೋನಲ್ ಮಂಥೆರೋ ನಾಯಕಿ.

    ಬಾಲಿವುಡ್‍ನಲ್ಲಿ ನಟಿಸುವುದು ನನ್ನ ಕನಸಾಗಿತ್ತು ಎಂದು ಖುಷಿ ಹಂಚಿಕೊಂಡಿದ್ದಾರೆ ಸೋನಲ್. ಸದ್ಯಕ್ಕೆ ಸೋನಲ್ ಮಂಥೆರೋ ಗರಡಿ, ಪದವಿಪೂರ್ವ, ಬನಾರಸ್, ಭಗವಾನ್ ಶ್ರೀಕೃಷ್ಣ ಪರಮಾತ್ಮ, ಶುಗರ್ ಫ್ಯಾಕ್ಟರಿ, ತಲ್ವಾರ್ ಪೇಟೆ, ನಟವರ್ ಲಾಲ್, ಬುದ್ದಿವಂತ 2, ಶಂಭೋ ಶಿವಶಂಕರ.. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿಸುತ್ತಿದ್ದಾರೆ.

  • ಭಟ್ಟರ 2ನೇ ಗಾಳಿಪಟಕ್ಕೆ ಇಬ್ಬರು ಚೆಲುವೆಯರು

    two heroines for bhatt's gaalipata 2 ..?

    ಯೋಗರಾಜ್ ಭಟ್, ಗಾಳಿಪಟ 2 ಸಿನಿಮಾ ಮಾಡೋದಾಗಿ ಘೋಷಿಸಿಯೂ ಆಗಿದೆ. ಶರಣ್, ಲೂಸಿಯಾ ಪವನ್, ರಿಷಿ ನಾಯಕತ್ವದ ಗಾಳಿಪಟ 2 ಚಿತ್ರಕ್ಕೆ  ಪಂಚತಂತ್ರ ಬಿಡುಗಡೆ ಟೈಮಿನಲ್ಲೇ ಕೆಲಸ ಶುರು ಮಾಡಿದ್ದಾರೆ. ಒಂದು ಚಿತ್ರ ಮುಗಿಯುತ್ತಿರುವಾಗಲೇ ಇನ್ನೊಂದು ಚಿತ್ರದಲ್ಲಿ ಬ್ಯುಸಿಯಾಗುತ್ತಿರುವುದು ಭಟ್ಟರ ಚರಿತ್ರೆಯಲ್ಲಿ ಇದೇ ಮೊದಲು ಎನ್ನಬೇಕು. ಈಗ ಆ ಚಿತ್ರಕ್ಕೆ ಇಬ್ಬರು ನಾಯಕಿಯರು ಓಕೆ ಆಗಿದ್ದಾರೆ.

    ಶೃಂಗಾರದ ಹೊಂಗೆ ಮರದಲ್ಲಿ ಹೂ ಬಿಟ್ಟಿದ್ದ ಚೆಲುವೆ ಸೋನಾಲ್ ಓಕೆ ಆಗಿದ್ದಾರೆ. ಇನ್ನೊಂದು ಪಾತ್ರಕ್ಕೆ ಶರ್ಮಿಳಾ ಮಾಂಡ್ರೆ ಜೊತೆ ಮಾತುಕತೆ ನಡೆದಿದೆ. ಬೆಳಗಾವಿ ಮೂಲದ ಮಹೇಶ್ ಎಂಬುವರು ನಿರ್ಮಿಸುತ್ತಿರುವ ಗಾಳಿಪಟ 2ಗೆ ಸಂಗಿತ ಸಂಯೋಜನೆಗೆ ರೆಡಿಯಾಗಿದ್ಧಾರೆ ಭಟ್ಟರು.

    ಇದು ಕಂಪ್ಲೀಟ್ ನನ್ನ ಶೈಲಿಯ ಸಿನಿಮಾ. ಮನರಂಜನೆ ಮತ್ತು ಭಾವನಾತ್ಮಕ ಅಂಶಗಳನ್ನು ಹದವಾಗಿ ಬೆರೆಸಿರುವ ಸಿನಿಮಾ. ಈಗಿನ ಜನರೇಷನ್‍ಗೆ ಇಷ್ಟವಾಗುವ ಸಿನಿಮಾ ಎಂದಿದ್ದಾರೆ ಭಟ್ಟರು.

  • ಭಟ್ಟರ ಗರಡಿಯಿಂದ ರಚಿತಾ ರಾಮ್ ಔಟ್. ಸೋನಲ್ ಇನ್

    ಭಟ್ಟರ ಗರಡಿಯಿಂದ ರಚಿತಾ ರಾಮ್ ಔಟ್. ಸೋನಲ್ ಇನ್

    ಯೋಗರಾಜ್ ಭಟ್ ಅವರ ಹೊಸ ಚಿತ್ರ ಗರಡಿ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳು ನಡೆಯುತ್ತಿರುವ ಹೊತ್ತಿನಲ್ಲೇ ನಾಯಕಿಯ ಬದಲಾವಣೆ ಆಗಿದೆ. ಚಿತ್ರಕ್ಕೆ ರಚಿತಾ ರಾಮ್ ನಾಯಕಿ ಅನ್ನೋದನ್ನು ದೊಡ್ಡದಾಗಿಯೇ ಘೋಷಿಸಿತ್ತು ಚಿತ್ರತಂಡ. ಈಗ ರಚಿತಾ ರಾಮ್ ಹೊರಬಿದ್ದಿದ್ದಾರೆ. ರಚಿತಾ ಜಾಗಕ್ಕೆ ಬಂದಿರೋದು ಸೋನಲ್ ಮಂಥೆರೋ.

    ಭಟ್ಟರ ಪಂಚತಂತ್ರ ಚಿತ್ರದ ಮೂಲಕವೇ ದೊಡ್ಡ ಸದ್ದು ಮಾಡಿದ್ದ ಸೋನಲ್ ಸದ್ಯಕ್ಕೆ ಜಮೀರ್ ಪುತ್ರ ಹೀರೋ ಆಗಿರುವ ಬನಾರಸ್, ಬುದ್ದಿವಂತ 2 ಸೇರಿದಂತೆ ನಾಲ್ಕೈದು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಯಶಸ್ ಸೂರ್ಯ ನಾಯಕನಾಗಿರೋ ಚಿತ್ರಕ್ಕೆ ಬಿ.ಸಿ.ಪಾಟೀಲ್ ಅವರೇ ನಿರ್ಮಾಪಕರು. ಗರಡಿ ಮನೆ ಮತ್ತು ಪೈಲ್ವಾನರ ಕಥೆ ಇರೋ ಚಿತ್ರ ಶೀಘ್ರದಲ್ಲೇ ಚಿತ್ರೀಕರಣ ಶುರು ಮಾಡಲಿದೆ.

    ರಚಿತಾ ಹೊರಕ್ಕೆ ಹೋಗೋಕೆ ಏನು ಕಾರಣ ಅನ್ನೋದು ಗೊತ್ತಾಗಿಲ್ಲ. ಇತ್ತೀಚೆಗೆ ರಚಿತಾ ರಾಮ್ ಮೊದಲು ಒಪ್ಪಿಕೊಂಡು ನಂತರ ಹೊರಬಂದ ಚಿತ್ರಗಳ ಸಾಲಿಗೀಗ ಗರಡಿಯೂ ಸೇರಿದೆ..