` audio rights, - chitraloka.com | Kannada Movie News, Reviews | Image

audio rights,

  • ಕೆಜಿಎಫ್ 2 ಆಡಿಯೋ ಸೇಲ್ ಆಗಿದ್ದು ಎಷ್ಟು ಕೋಟಿಗೆ?

    ಕೆಜಿಎಫ್ 2 ಆಡಿಯೋ ಸೇಲ್ ಆಗಿದ್ದು ಎಷ್ಟು ಕೋಟಿಗೆ?

    2021ರ ಸೆನ್ಸೇಷನಲ್ ಮೂವಿ ಕೆಜಿಎಫ್ ಚಾಪ್ಟರ್ 2. ಕೆಜಿಎಫ್ ಚಾಪ್ಟರ್ 1, ಇದ್ದಬದ್ದ ದಾಖಲೆಗಳನ್ನೆಲ್ಲ ಗುಡಿಸಿ, ಹೊಸ ದಾಖಲೆ ಬರೆದಿತ್ತು. ಅದನ್ನೂ ಮೀರಿ ಮುನ್ನಡೆಯುವ ಭರವಸೆ ಹುಟ್ಟಿಸಿರುವುದು ಕೆಜಿಎಫ್ 2. ಹೀಗಾಗಿಯೇ ಚಿತ್ರದ ಆಡಿಯೋ ರೈಟ್ಸ್ ಕೂಡಾ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ.

    ಕೆಜಿಎಫ್ ಚಾಪ್ಟರ್ 1 ಆಡಿಯೋ ರೈಟ್ಸ್‍ನ್ನು 3.6 ಕೋಟಿಗೆ ಖರೀದಿಸಿದ್ದ ಲಹರಿ ಸಂಸ್ಥೆ, ಕೆಜಿಎಫ್ ಚಾಪ್ಟರ್ 2 ಆಡಿಯೋ ರೈಟ್ಸ್‍ನ್ನೂ ಖರೀದಿಸಿದೆ. ಅದೂ ಡಬಲ್ ರೇಟ್‍ನಲ್ಲಿ. ಅರ್ಥಾತ್ 7.2 ಕೋಟಿಗೆ. ಚಾಪ್ಟರ್ 1ಗೆ ಕೊಟ್ಟ ಹಣಕ್ಕಿಂತ ಕರೆಕ್ಟ್ ಆಗಿ ಡಬಲ್ ಅಮೌಂಟ್. ಲಹರಿ ಮ್ಯೂಸಿಕ್, ಈಗ ದ.ಭಾರತದ ಖ್ಯಾತ ಆಡಿಯೋ ಸಂಸ್ಥೆಗಳಲ್ಲಿ ಒಂದು. ಲೆಕ್ಕಾಚಾರ ತಪ್ಪಿಲ್ಲ.

    ಹೀಗಾಗಿಯೇ ಪಾರ್ಟ್ 2 ಮೇಲೆ ಇನ್ನೂ ಇನ್ನೂ ಇನ್ನೂ ಭರವಸೆ ಹುಟ್ಟಿದೆ. ಪ್ರಶಾಂತ್ ನೀಲ್, ಯಶ್, ವಿಜಯ್ ಕಿರಗಂದೂರು ಕಾಂಬಿನೇಷನ್‍ಗೆ ಚಾಪ್ಟರ್ 2ನಲ್ಲಿ ಸಂಜಯ್ ದತ್, ರವೀನಾ ಟಂಡನ್ ಕೂಡಾ ಸೇರಿದ್ದಾರೆ. ರಿಲೀಸ್ ಯಾವಾಗ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್.

  • ಕೆಜಿಎಫ್ ಆಡಿಯೋ ಲಹರಿಗೆ. ಸೇಲಾಗಿದ್ದು ಎಷ್ಟು ಕೋಟಿಗೆ..?

    lahari music gets kgf audio launch

    ಕನ್ನಡ ಚಿತ್ರರಂಗದ ಬಹುನಿರೀಕ್ಷಿತ, ಭಾರಿ ಬಜೆಟ್‍ನ ಸಿನಿಮಾ ಕೆಜಿಎಫ್. ಯಶ್, ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಪ್ರೊಡಕ್ಷನ್ಸ್ ವಿಜಯ್ ಕಿರಗಂದೂರು ಕಾಂಬಿನೇಷನ್‍ನ ಈ ಬಿಗ್ ಸಿನಿಮಾದ ಆಡಿಯೋ ರೈಟ್ಸ್ ಮಾರಾಟವಾಗಿದೆ.

    ಕೆಜಿಎಫ್ ಆಡಿಯೋ ರೈಟ್ಸ್ ಖರೀದಿಸಿರುವುದು ಲಹರಿ ವೇಲು. ರವಿ ಬಸ್ರೂರು ಸಂಗೀತ ನಿರ್ದೇಶನದ ಹಾಡುಗಳು ಬೊಂಬಾಟ್ ಆಗಿವೆ ಅನ್ನೋದು ಚಿತ್ರತಂಡದ ಮೂಲಗಳ ಮಾಹಿತಿ. ಕನ್ನಡ ಅಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿಯ ಆಡಿಯೋ ರೈಟ್ಸ್‍ನ್ನು ಕೂಡಾ ಲಹರಿ ವೇಲು ಅವರೇ ಖರೀದಿಸಿದ್ದಾರೆ. ದೊಡ್ಡ ಮೊತ್ತಕ್ಕೆ ಅನ್ನೋದು ಪಕ್ಕಾ. ಆದರೆ, ಎಷ್ಟು ಕೋಟಿಗೆ ಅನ್ನೋದನ್ನು ಗುಟ್ಟಾಗಿಯೇ ಇಟ್ಟಿದೆ ಕೆಜಿಎಫ್ ಟೀಂ.

  • ಕೆಜಿಎಫ್ ಆಡಿಯೋ ಹಕ್ಕು 3.60 ಕೋಟಿ 

    kgf audio rights sold for 3.6 crores

    ಕೆಜಿಎಫ್ ಚಿತ್ರದ ಹವಾದಲ್ಲಿ ದಾಖಲೆಗಳು ಚಿಂದಿ ಚಿಂದಿಯಾಗುತ್ತಿವೆ. ಕನ್ನಡ ಚಿತ್ರರಂಗದಲ್ಲೇ ಭಾರಿ ಬಜೆಟ್‍ನ, ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಕೆಜಿಎಫ್, ಆಡಿಯೋ ರೈಟ್ಸ್‍ನಲ್ಲಿ ಮತ್ತೊಂದು ಹೊಸ ದಾಖಲೆ ಬರೆದಿದೆ. ಒನ್ಸ್ ಎಗೇಯ್ನ್, ಈ ದಾಖಲೆ ಮೊತ್ತಕ್ಕೆ ಆಡಿಯೋ ಖರೀದಿಸಿರುವುದು ಲಹರಿ ವೇಲು.

    ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಆಡಿಯೋ ರೈಟ್ಸ್‍ನ್ನು ಮಾತ್ರ 3.60 ಕೋಟಿ ಕೊಟ್ಟು ಖರೀದಿಸಿದ್ದಾರೆ. ಹಿಂದಿಯ ರೈಟ್ಸ್‍ನ್ನು ಇನ್ನೂ ಮಾರಾಟ ಮಾಡಿಲ್ಲ. ಈ ದಾಖಲೆ ಮೊತ್ತಕ್ಕೆ ಆಡಿಯೋ ಖರೀದಿಸೋಕೆ ಕಾರಣ, ಚಿತ್ರದ ಟ್ರೇಲರ್‍ಗೆ ಸಿಗುತ್ತಿರುವ ಮೆಚ್ಚುಗೆ. ಎಲ್ಲ ಭಾಷೆಯಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದೇ ಈ ದಾಖಲೆ ಮೊತ್ತದ ಖರೀದಿಗೆ ಕಾರಣ ಎಂದಿದ್ದಾರೆ ಲಹರಿ ವೇಲು.

    1992ರಲ್ಲೇ ದಳಪತಿ ಚಿತ್ರದ ಆಡಿಯೋ ರೈಟ್ಸ್‍ನ್ನು 75 ಲಕ್ಷಕ್ಕೆ ಖರೀದಿಸಿದ್ದ ಲಹರಿ ವೇಲು, ಬಾಹುಬಲಿಯನ್ನು 2 ಕೋಟಿ ರೂಗೂ ಹೆಚ್ಚಿನ ಮೊತ್ತಕ್ಕೆ ಖರೀದಿಸಿದ್ದರು. ಈಗ ಮತ್ತೊಮ್ಮೆ ತಮ್ಮದೇ ದಾಖಲೆ ಬ್ರೇಕ್ ಮಾಡಿದ್ದಾರೆ.