` producers association, - chitraloka.com | Kannada Movie News, Reviews | Image

producers association,

 • 280 ಸಿನಿಮಾ ರೆಡಿ ಇದ್ದರೂ, ದೊಡ್ಡ ಸಿನಿಮಾ ರಿಲೀಸ್ ಸದ್ಯಕ್ಕಿಲ್ಲ

  280 ಸಿನಿಮಾ ರೆಡಿ ಇದ್ದರೂ, ದೊಡ್ಡ ಸಿನಿಮಾ ರಿಲೀಸ್ ಸದ್ಯಕ್ಕಿಲ್ಲ

  ಅಕ್ಟೋಬರ್ 15ರಿಂದ ಮತ್ತೆ ಥಿಯೇಟರ್ ಬಾಗಿಲು ತೆರೆಯಲಿದೆ. ಸಿನಿಮಾಗಳ ಪ್ರದರ್ಶನ ಶುರುವಾಗಲಿದೆ. ಆದರೆ ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಗಳು ರಿಲೀಸ್ ಆಗೋದಿಲ್ಲ. ಸದ್ಯಕ್ಕಂತೂ ದಯವಿಟ್ಟು ದೊಡ್ಡ ಚಿತ್ರಗಳನ್ನು ರಿಲೀಸ್ ಮಾಡಬೇಡಿ ಎನ್ನುವುದು ನಿರ್ಮಾಪಕರ ಸಂಘದ ಮನವಿ. ನಿರ್ಮಾಪಕರ ಸಂಘದ ಪ್ರಕಾರವೇ ಈಗಾಗಲೇ 280 ಸಿನಿಮಾಗಳು ರೆಡಿ ಇವೆ. ಅವುಗಳಲ್ಲಿ 80 ಸಿನಿಮಾಗಳನ್ನು ಈ ಕ್ಷಣವೇ ರಿಲೀಸ್ ಮಾಡಬಹುದು. ಆದರೆ ಎಲ್ಲ ಚಿತ್ರಗಳೂ ಈಗಲೇ ಬರೋದು ಬೇಡ, ಅದರಲ್ಲೂ ದೊಡ್ಡ ಚಿತ್ರಗಳು ಬೇಡ ಎನ್ನುವ ವಾದ ನಿರ್ಮಾಪಕರ ಸಂಘದ್ದು.

  ಈ ಕುರಿತು ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಕೆ.ಮಂಜು, ಎ.ಗಣೇಶ್, ಸುರೇಶ್ ಕುಮಾರ್ ಸುದ್ದಿಗೋಷ್ಟಿ ಮಾಡಿ ನಿರ್ಮಾಪಕರ ಸಂಕಷ್ಟಗಳನ್ನು ವಿವರಿಸಿದ್ದಾರೆ. ಸಿನಿಮಾಗಳು ರೆಡಿ ಇವೆ. ಆದರೆ 50% ಪ್ರೇಕ್ಷಕರ ನಿಯಮಗಳಿಂದಾಗಿ ದೊಡ್ಡ ದೊಡ್ಡ ಚಿತ್ರಗಳು ನಷ್ಟ ಅನುಭವಿಸಲಿವೆ. ಥಿಯೇಟರ್ ಮಾಲೀಕರು ಕಷ್ಟಕ್ಕೆ ಸ್ಪಂದಿಸುತ್ತಿದ್ದರೂ, ಸಮಸ್ಯೆಯಾಗಿರುವುದು ಯುಎಫ್‍ಓ ಮತ್ತು ಕ್ಯೂಬ್‍ಗಳದ್ದು. ಆ ಸಂಸ್ಥೆಗಳಿಗೆ ಒಂದು ಚಿತ್ರ, ಒಂದು ಥಿಯೇಟರಿನ ಒಂದು ವಾರದ ಪ್ರಸಾರಕ್ಕೆ 10,200 ರೂ. ಕೊಡಬೇಕು. ಇದರ ಜೊತೆಗೆ ಅವರು ಇಂಟರ್‍ವೆಲ್‍ನಲ್ಲಿ ಅವರದ್ದೇ ಜಾಹೀರಾತು ಪ್ರಸಾರ ಮಾಡ್ತಾರೆ. ಅದರಲ್ಲಿ ನಿರ್ಮಾಪಕರಿಗೆ ನಯಾಪೈಸೆಯನ್ನೂ ಕೊಡಲ್ಲ. ನಾವೀಗ ಅವರಿಗೆ ಚಾರ್ಜ್ ಕಡಿಮೆ ಮಾಡಿ ಎಂದು ಕೇಳಿಕೊಂಡಿದ್ದೇವೆ. ಆದರೆ ಅವರು ಕೇಳುತ್ತಿಲ್ಲ. ಹೀಗಾಗಿ ಒಂದು ಚಿತ್ರವನ್ನು ಒಂದು ವಾರ ಒಂದು ಥಿಯೇಟರ್‍ನಲ್ಲಿ ಪ್ರದರ್ಶನ ಮಾಡೋಕೆ 50 ಸಾವಿರಕ್ಕಿಂತ ಹೆಚ್ಚು ಖರ್ಚಾಗುತ್ತೆ. ಥಿಯೇಟರ್ ಶೇರ್ ಹೋದರೆ ನಿರ್ಮಾಪಕರಿಗೆ ಲಾಭವೂ ಇರಲ್ಲ. ಹೀಗಾಗಿ ನಿರ್ಮಾಪಕರ ಕಷ್ಟ ಬಗೆಹರಿಸಬೇಕು ಅನ್ನೋದು ಅವರ ಮನವಿ.

  ಸದ್ಯಕ್ಕೆ ಥಿಯೇಟರ್ ಮತ್ತು ನಿರ್ಮಾಪಕರ ನಡುವೆ 50:50, 50:40, 60:40 ಶೇರ್ ವಿನಿಮಯ ಮಾಡಿಕೊಳ್ಳುವ ಮಾತುಕತೆಗಳು ನಡೆಯುತ್ತಿವೆ. ಥಿಯೇಟರ್ ಬಾಡಿಗೆ ಪಾವತಿಸಿ, ಪ್ರದರ್ಶನಗಳ ಸಂಪೂರ್ಣ ಹಣ ಪಡೆಯುವ ವ್ಯವಸ್ಥೆ ಮರೆಯಾಗುವ ಹಂತದಲ್ಲಿದೆ. ಪರಿಸ್ಥಿತಿ ಹೀಗಿರುವಾಗ ದೊಡ್ಡ ದೊಡ್ಡ, ಕೋಟಿ ಕೋಟಿ ಬಜೆಟ್ಟಿನ ಚಿತ್ರಗಳು ರಿಲೀಸ್ ಆದರೆ ಲಾಭವಿರಲಿ, ಅಸಲು ಗಿಟ್ಟುವುದೂ ಕಷ್ಟ. ಹೀಗಾಗಿಯೇ ಸದ್ಯಕ್ಕಂತೂ ದೊಡ್ಡ ದೊಡ್ಡ ಚಿತ್ರಗಳ ಬಿಡಗಡೆ ಇಲ್ಲ. ಈ ವಾರ ಹೊಸ ಚಿತ್ರಗಳೂ ಇಲ್ಲ. ರಿಲೀಸ್ ಆಗುತ್ತಿರುವುದು ಲಾಕ್ ಡೌನ್ ಆರಂಭದ ವೇಳೆ ಥಿಯೇಟರಿನಲ್ಲಿದ್ದ ಶಿವಾರ್ಜುನ, ಜಂಟಲ್‍ಮನ್, ಲವ್ ಮಾಕ್‍ಟೇಲ್ ಚಿತ್ರಗಳು...

 • Producers Urge For Percentage Share System

  producers urge for percentage share system

  The Kannada Film Producers Association has urged stressing for 'percentage share' system in the State's Single Screen Theatre and Multiplexes on the lines of a similar system which exists in other state's film industries.

  The president of Film Producers Association, Mr. D.K Ramkrishna (Praveen Kumar) says that the percentage share system in single screen theatres and multiplexes is in force barring Karnataka. "Leaving a handful of single screen theatres and multiplexes, the majority are collecting rents in advance from producers which has become a huge burden at the time of film release. Many small-time producers face huge difficulties in getting their films released in big single screen and multiplexes. Hence, the percentage share system is the need of the hour," he adds.

  Percentage share system will benefit all - the producers, exhibitors and even the distributors, he says. Further, the association says that a committee has been formed to look into the pros and cons of enforcing percentage share system in all single screen and multiplexes in the state.

  Also, once the committee gives its report, the association says that it will discuss it with all the wings of the Kannada film industry including the film chamber and that it will strive hard to get the system implemented from the first week of April 2020 itself.

  It also stressed for complete computerisation of theatres in the State and providing basic facilities in every theatre along with transparent business amongst the producers, exhibitors and distributors for the good of the Kannada film industry. A majority of producers, exhibitors and distributors have agreed upon implementing the system, the association adds.

  Along with Mr. Ramakrishna, the association's vice president M G Ramamurthy, secretary K Manju, joint secretary Ramesh Yadav, Treasurer R S Gowda, producer Karisubbu, exhibitor Narasimhalu and others were present on the occasion.

 • ಬಾಡಿಗೆ ಪದ್ಧತಿಗೆ ಗುಡ್ ಬೈ : ಪರ್ಸಂಟೇಜ್ ಪದ್ಧತಿಗೆ ಹಾಯ್ ಹಾಯ್

  kananda film producers urge for percentage system

  ಕನ್ನಡ ಚಿತ್ರಗಳ ವಿತರಣೆ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆಗೆ ಕೈ ಹಾಕಿದೆ ಚಲನಚಿತ್ರ ನಿರ್ಮಾಪಕರ ಸಂಘ. ಸದ್ಯಕ್ಕೆ ಕನ್ನಡದಲ್ಲಿ ಹಲವು ಪದ್ಧತಿಗಳು ಜಾರಿಯಲ್ಲಿವೆ. ಮೊದಲೇ ಬಾಡಿಗೆ ನೀಡಿ ಚಿತ್ರಮಂದಿರವನ್ನು ಬುಕ್ ಮಾಡಿಕೊಳ್ಳುವುದು, ಕಮಿಷನ್ ಆಧಾರದ ಮೇಲೆ ಬಾಡಿಗೆ ಹಾಗೂ ಪರ್ಸಂಟೇಜ್ ವ್ಯವಹಾರ. ಈಗ ಆ ಎಲ್ಲದಕ್ಕೂ ತಿಲಾಂಜಲಿ ನೀಡಿ ಪರ್ಸೆಂಟೇಜ್ ಪದ್ಧತಿಯನ್ನಷ್ಟೇ ಉಳಿಸಿಕೊಳ್ಳೋ ನಿರ್ಧಾರಕ್ಕೆ ಬಂದಿದೆ ಚಲನಚಿತ್ರ ನಿರ್ಮಾಪಕರ ಸಂಘ.

  ಈ ಕುರಿತು ಸಮಿತಿಯೊಂದನ್ನು ರಚಿಸಲಿದ್ದು, ಆ ಸಮಿತಿಯಲ್ಲಿ ನಿರ್ಮಾಪಕರ ಸಂಘ, ವಿತರಕರ ಸಂಘ ಮತ್ತು ಪ್ರದರ್ಶಕರ ಸಂಘದ ಪ್ರತಿನಿಧಿಗಳು ಇರಲಿದ್ದಾರೆ. ಏಪ್ರಿಲ್ 2ರಿಂದ ಹೊಸ ಪದ್ಧತಿ ಜಾರಿಗೆ ಬರುವ ನಿರೀಕ್ಷೆ ಇದೆ.

  ಹೊಸ ಪದ್ಧತಿ ಪ್ರಕಾರ ಚಿತ್ರಮಂದಿರಗಳನ್ನು ಎ,ಬಿ,ಸಿ ಎಂದು ವಿಂಗಡಿಸಿ, ಅದರ ಆಧಾರದ ಮೇಲೆ ಪರ್ಸಂಟೇಜ್ ನಿಗದಿ ಮಾಡಲಾಗುತ್ತದೆ. ಆದರೆ, ಇದು ಮೇಲ್ನೋಟಕ್ಕೆ ಕಾಣುವಷ್ಟು ಸುಲಭವಲ್ಲ, ಸರಳವೂ ಆಗಿಲ್ಲ. ಹೀಗಾಗಿ ಈ ಹೊಸ ನಿಯಮ ಜಾರಿ ಹೇಗಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. 

 • ಮೀಟೂ ಎಫೆಕ್ಟ್ - ನಿರ್ಮಾಪಕರ ರಕ್ಷಣೆಗೆ ಹೊಸ ಸಮಿತಿ

  producers all set to start icc and gender sensitization

  ಮೀಟೂ ಬಿರುಗಾಳಿಗೆ ಸ್ಟಾರ್ ನಟರಷ್ಟೇ ಅಲ್ಲ, ಚಿತ್ರ ನಿರ್ಮಾಪಕ, ನಿರ್ದೇಶಕರೂ ಕಂಗಾಲಾಗಿದ್ದಾರೆ. ಸಿನಿಮಾದಲ್ಲಿ ಎಲ್ಲರ ಪಾತ್ರ ಮುಗಿದ ಮೇಲೆ ಈ ರೀತಿ ಆರೋಪ ಕೇಳಿ ಬಂದರೆ ಏನು ಮಾಡೋದು ಅನ್ನೋದು ನಿರ್ಮಾಪಕರು, ನಿರ್ದೇಶಕರ ಆತಂಕ. ಅರ್ಜುನ್ ಸರ್ಜಾ, ಶೃತಿ ಹರಿಹರನ್ ವಿಚಾರದಲ್ಲಿ ಸಂಧಾನ ಸಭೆಯೂ ಮುರಿದುಬಿದ್ದ ಹಿನ್ನೆಲೆಯಲ್ಲಿ ವಾಣಿಜ್ಯ ಮಂಡಳಿ ಎಚ್ಚೆತ್ತುಕೊಂಡಿದೆ. 

  ನಿರ್ಮಾಪಕರ ಹಿತರಕ್ಷಣೆಗಾಗಿ ಪ್ರೊಡ್ಯೂಸರ್ಸ್ ಪ್ರೊಟೆಕ್ಷನ್ ಕಮಿಟಿ (ಪಿಪಿಸಿ) ರಚನೆಗೆ ಮುಂದಾಗಿದೆ. ಈ ಸಮಿತಿಯಲ್ಲಿ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರು ಇರುತ್ತಾರೆ. ವಾಣಿಜ್ಯ ಮಂಡಳಿಯ ಅಕ್ಟೋಬರ್ 30ರ ಸಭೆಯಲ್ಲಿ ಈ ಕುರಿತು ಪ್ರಸ್ತಾವನೆ ಮಂಡನೆಯಾಗಲಿದೆಯಂತೆ. ಎಲ್ಲವೂ ಚುರುಕಾಗಿ ನಡೆದರೆ, ಇನ್ನೊಂದೆರಡು ವಾರಗಳಲ್ಲಿ ಪಿಪಿಸಿ ಅಸ್ಥಿತ್ವಕ್ಕೆ ಬರಲಿದೆ.