` metoo, - chitraloka.com | Kannada Movie News, Reviews | Image

metoo,

  • ``ಮೀಟೂ ಹಿಂದೆ ಸ್ಟಾರ್ ನಟರು, ಕ್ರೈಸ್ತ ಮಿಷನರಿಗಳ ಸಂಚು''

    prashanth sambargi talks about conspiracy theory behind me too

    ಶೃತಿ ಹರಿಹರನ್ ಅವರ ಮೀಟೂ ಆರೋಪ ಹಾಗೂ ಅರ್ಜುನ್ ಸರ್ಜಾ ತೇಜೋವಧೆಯ ಹಿಂದೆ ಕ್ರೈಸ್ತ ಮಿಷನರಿಗಳು ಹಾಗೂ ಕನ್ನಡದ ಇಬ್ಬರು ಸ್ಟಾರ್ ನಟರ ಕೈವಾಡವಿದೆಯಂತೆ. ಇಂಥಾದ್ದೊಂದು ಆರೋಪ ಮಾಡಿರೋದು ಪ್ರಶಾಂತ್ ಸಂಬರಗಿ. ಉದ್ಯಮಿಯೂ ಆಗಿರುವ ಪ್ರಶಾಂತ್, ಅರ್ಜುನ್ ಸರ್ಜಾ ಆಪ್ತರೂ ಹೌದು.

    ಅರ್ಜುನ್ ಸರ್ಜಾ ಚೆನ್ನೈನಲ್ಲಿ 25 ಕೋಟಿ ಖರ್ಚು ಮಾಡಿ ಹನುಮಾನ್ ದೇಗುಲ ನಿರ್ಮಿಸುತ್ತಿದ್ದಾರೆ. ಈ ದೇಗುಲಕ್ಕೆ ಕ್ರೈಸ್ತ ಮಿಷನರಿಗಳ ವಿರೋಧವಿದೆ. ಹೀಗಾಗಿ ಆ ಜಾಲದ ಕುಮ್ಮಕ್ಕಿನಿಂದ ಕಮ್ಯುನಿಸ್ಟ್ ಮನಸ್ಥಿತಿಯ ಶೃತಿ ಹರಿಹರನ್, ದೇಶದ್ರೋಹದ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಅರ್ಜುನ್ ಸರ್ಜಾ ತೇಜೋವಧೆಗೆ ಮುಂದಾಗಿದ್ದಾರೆ. ಹಿಂದೂ ವಿರೋಧಿ ಶಕ್ತಿಗಳು, ಅರ್ಜುನ್ ಸರ್ಜಾ ವಿರುದ್ಧ ಒಂದಾಗಿವೆ. ಇದಕ್ಕೆ ಸಂಬಂಧಪಟ್ಟಂತೆ 400 ಪುಟಕ್ಕೂ ಹೆಚ್ಚು ದಾಖಲೆಗಳನ್ನು ಸೈಬರ್ ಕ್ರೈಂ ಪೊಲೀಸರಿಗೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ ಪ್ರಶಾಂತ್ ಸಂಬರಗಿ.

    ಪ್ರಶಾಂತ್ ಸಂಬರಗಿ ಆರೋಪ, ಇಡೀ ಮೀಟೂ ಅಭಿಯಾನದಲ್ಲಿ ಸಂಚಲನವನ್ನೇ ಮೂಡಿಸಿಬಿಟ್ಟಿದೆ.

  • HC Orders Police Not To Arrest Arjun Sarja Till Nov 14

    hc orders police not to arrest arjun sarja

    In a sigh of relief to action king Arjun Sarja, the Karnataka High Court on Friday ordered police not to arrest him till November 14. 

    However, the court made it clear that the investigation into the complaint filed by actress Sruthi Hariharan accusing Arjun Sarja of sexually abusing her since 2015, shall continue.

    The actor who is accused of sexual harassment by actress Sruthi Hariharan, has approached the High Court seeking to quash the complaint filed against him by Sruthi, and the FIR registered based upon it by the Cubbon Park police. 

    Arjun Sarja has alleged that the case and complaint is a classic case of austere abuse of law and launching malicious and vile attacks on an innocent man who thrived hard all along to stand out with the portrait of gentleman.

  • I Have Video Evidence To Prove My Case: Sruthi Hariharan

    sruthi hariharan says she has video evidence

    Actress Sruthi Hariharan who has accused Gentleman actor and Action King Arjun Sarja of sexually abusing her since 2015 during the shooting of the film Vismaya, has yet again made another startling revelation that she has videographic evidences to prove her case.

    The actress revealed about the video evidence while she was at the State Women Rights Commission's office to record her statement before the chairperson, Nagalakshmi Bai. The commission has registered a suo motu case against the actor over 'me too’ allegations against him.

    After presenting her side of the story, Sruthi Hariharan revealed that she has video evidence which has been rightfully submitted before the court. Further, she says that she is being threatened constantly and hence she had approached police in the matter.

    However, she has not divulged any matter relating to what kind of videographic evidence she has produced to the court. 

    The actress also lost her cool after media posed her some questions following which she compared herself to sugar and media being ants which goes in search of sweet when in need of publicity. However, she later denied making any such statements and avoided further questions before rushing away from the commission's office.

    Meanwhile, the Karnataka High Court has adjourned to Nov 28, the petition filed by actor Arjun Sarah seeking to quash the FIR against him by the Cubbon park police following the complaint filed by Sruthi Hariharan.

  • ಅರ್ಜುನ್ ಸರ್ಜಾ ವಿರುದ್ಧದ ಮೀ ಟೂ ಕೇಸ್ : ಆಕ್ಷೇಪಣೆ ಸಲ್ಲಿಸಲೇ ಇಲ್ಲ ಶೃತಿ ಹರಿಹರನ್

    ಅರ್ಜುನ್ ಸರ್ಜಾ ವಿರುದ್ಧದ ಮೀ ಟೂ ಕೇಸ್ : ಆಕ್ಷೇಪಣೆ ಸಲ್ಲಿಸಲೇ ಇಲ್ಲ ಶೃತಿ ಹರಿಹರನ್

    ಕನ್ನಡ ಚಿತ್ರರಂಗದಲ್ಲಿ ಸಂಚಲನ, ತಲ್ಲಣ ಎಲ್ಲವನ್ನೂ ಸೃಷ್ಟಿಸಿದ್ದ ಶೃತಿ ಹರಿಹರನ್ ಆರೋಪ ಈಗ ತಣ್ಣಗಾಗಿದೆ. ಅಧಿಕೃತವಾಗಿ. ಅರ್ಜುನ್ ಸರ್ಜಾ ನನ್ನನ್ನು ರೂಮಿಗೆ ಕರೆದಿದ್ದರು. ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಕಿರುಕುಳ ನೀಡಿದ್ದರು. ನಿನ್ನನ್ನೇ ನನ್ನ ರೂಮಿಗೆ ಬರುವಂತೆ ಮಾಡುತ್ತೇನೆ ಎಂದಿದ್ದರು ಎಂದು ಶೃತಿ ಹರಿಹರನ್ ಆರೋಪ ಮಾಡಿದ್ದರು. ನಂತರ ಪ್ರಕರಣ ಇಡೀ ದೇಶಾದ್ಯಂತ ಸುದ್ದಿಯಾಗಿತ್ತು.

    ಅರ್ಜುನ್ ಸರ್ಜಾ ಕರ್ನಾಟಕ ಅಷ್ಟೇ ಅಲ್ಲದೆ ತಮಿಳುನಾಡು, ಆಂಧ್ರಪ್ರದೇಶದಲ್ಲೂ ಸ್ಟಾರ್ ನಟ. ಹಿಂದಿ, ಮಲಯಾಳಂನಲ್ಲೂ ಖ್ಯಾತ ನಟ. ಹೀಗಾಗಿ ಸಹಜವಾಗಿಯೇ ಪ್ರಕರಣ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು. ಪ್ರಕರಣ ಫಿಲಂ ಚೇಂಬರ್ ಮೆಟ್ಟಿಲೇರಿ ಅಂಬರೀಷ್ ನೇತೃತ್ವದಲ್ಲಿ ಸಂಧಾನದ ಪ್ರಕ್ರಿಯೆಯೂ ನಡೆದಿತ್ತು. ವಿವಾದವನ್ನು ನ್ಯಾಯಾಲಯದಲ್ಲಿಯೇ ಇತ್ಯರ್ಥ ಪಡಿಸಿಕೊಳ್ಳುತ್ತೇನೆ. ನನ್ನ ಮೇಲಿನ ಕಳಂಕವನ್ನು ಕೋರ್ಟಿನಲ್ಲೇ ಎದುರಿಸುತ್ತೇನೆ ಎಂದಿದ್ದರು ಅರ್ಜುನ್ ಸರ್ಜಾ. ಇತ್ತೀಚೆಗೆ ಪೊಲೀಸರು ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿದ್ದರು. ತನಿಖೆ, ವಿಚಾರಣೆ ವೇಳೆ ಶೃತಿ ಹರಿಹರನ್ ತಮ್ಮ ಆರೋಪಕ್ಕೆ ಯಾವುದೇ ಪೂರಕ ಸಾಕ್ಷ್ಯ ಒದಗಿಸುವಲ್ಲಿ ವಿಫಲರಾಗಿದ್ದರು. ಬಿ ರಿಪೋರ್ಟ್‍ನ್ನು ಕೋರ್ಟಿಗೆ ಸಲ್ಲಿಸಿದ ನಂತರ ಕೋರ್ಟಿಗೆ ಆಕ್ಷೇಪಣೆ ಸಲ್ಲಿಸುವುದಕ್ಕೆ ಕಾಲಾವಕಾಶ ನೀಡಲಾಗಿತ್ತು.

    ಕೋರ್ಟ್ ನೀಡಿದ್ದ ಕಾಲಾವಕಾಶವೂ ಮುಗಿದು ಶೃತಿ ಹರಿಹರನ್ ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ. ಅರ್ಜುನ್ ಸರ್ಜಾ ನ್ಯಾಯಾಲಯದಲ್ಲಿಯೇ ಕಳಂಕ ಮುಕ್ತರಾಗಿದ್ದಾರೆ.

  • ಅರ್ಜುನ್ ಸರ್ಜಾ ಸ್ಲಂನಿಂದ, ಪ್ರಕಾಶ್ ರೈ ದೇವಲೋಕದಿಂದ ಬಂದೋವ್ರಾ..? - ಜಗ್ಗೇಶ್

    Jaggesh, Arjun Sarja Image

    ಮೀಟೂ ಅಭಿಯಾನ, ಅರ್ಜುನ್ ಸರ್ಜಾ ವಿರುದ್ಧದ ಶೃತಿ ಹರಿಹರನ್ ಆರೋಪಗಳಲ್ಲಿ ಜಗ್ಗೇಶ್ ನಿಂತಿರುವುದು ಅರ್ಜುನ್ ಸರ್ಜಾ ಪರ. ಶೃತಿ ಹರಿಹರನ್, ಅರ್ಜುನ್ ಸರ್ಜಾ ಅವರ 34 ವರ್ಷಗಳ ವೃತ್ತಿ ಜೀವನವನ್ನ ಒಂದೇ ಮಾತಿನಲ್ಲಿ ಹಾಳು ಮಾಡಿದ್ದಾರೆ. ನಾನು ನೋಡಿರುವಂತೆ ಅರ್ಜುನ್, ರಾಜ್, ವಿಷ್ಣು ಅವಂತೆಯೇ ಸುಸಂಸ್ಕøತ ವ್ಯಕ್ತಿ. ಏಕವಚನದಲ್ಲಿ ಕೂಡಾ ಮಾತನಾಡಿಸುವವರಲ್ಲ. ಅಂತಹವರ ವಿರುದ್ಧ ಶೃತಿ ಆರೋಪ ಮಾಡಿರುವುದು ಸರಿಯಲ್ಲ. ಇಷ್ಟಕ್ಕೂ ತೊಂದರೆಯಾಗಿದ್ದರೆ, ಆ ದಿನವೇ ಪ್ರಶ್ನಿಸಬಹುದಿತ್ತು. ವಿಷಯ ಬಹಿರಂಗಪಡಿಸಬೇಕಿತ್ತು. ಆಗ ಏನನ್ನೂ ಮಾಡದೆ, ಈಗ ನನಗೆ ಹಂಗಾಯ್ತು.. ಹಿಂಗಾಯ್ತು.. ಎಂದರೆ ಹೇಗೆ ಎಂದಿದ್ದಾರೆ ಜಗ್ಗೇಶ್. 

    ಅರ್ಜುನ್ ಸರ್ಜಾ ಕ್ಷಮೆ ಕೇಳಬೇಕಿತ್ತು ಎಂದು ಪ್ರಕಾಶ್ ರೈ ಹೇಳಿರುವ ಮಾತಿಗೆ ಜಗ್ಗೇಶ್ ಅರ್ಜುನ್ ಸರ್ಜಾ ಸ್ಲಂನಿಂದ, ಪ್ರಕಾಶ್ ರೈ ದೇವಲೋಕದಿಂದ ಬಂದೋವ್ರಾ ಎನ್ನುವ ಮೂಲಕ ಲೇವಡಿ ಮಾಡಿದ್ದಾರೆ.

     

  • ಮತ್ತೆ "ಮೀಟೂ" ಸದ್ದು : ಹೆಸರು ಹೇಳಿದರಾ ಆಶಿತಾ..?

    ಮತ್ತೆ "ಮೀಟೂ" ಸದ್ದು : ಹೆಸರು ಹೇಳಿದರಾ ಆಶಿತಾ..?

    ಅವಕಾಶಕ್ಕಾಗಿ ಹಾಸಿಗೆ ಹಂಚಿಕೊಳ್ಳೋದು. ಕ್ಲೋಸ್ ಆಗಿದ್ದವರಿಗೆ ಮಾತ್ರ ಚಾನ್ಸ್. ಪಾರ್ಟಿ, ಡಿನ್ನರ್‍ಗಳಲ್ಲಿ ಭಾಗವಹಿಸಿದರೆ ಮಾತ್ರ ಆಫರ್. ತಮಗಷ್ಟೇ ಅಲ್ಲ, ತಮಗೆ ಬೇಕದವರಿಗೂ ಸುಖ ಕೊಡಬೇಕು.. ಕಾಸ್ಟಿಂಗ್ ಕೌಚ್.. ಇಂತಹ ಎಲ್ಲ ಪ್ರಕರಣಗಳಲ್ಲೂ ಕೇಳಿಬರೋದು ಮೀಟೂ ಅನ್ನೋ ಹೆಸರು. ಕನ್ನಡದಲ್ಲಿ ಹಲವರು ಮೀಟು ಆರೋಪ ಮಾಡಿದ್ದಾರೆ.

    ಇವರಲ್ಲಿ ಶೃತಿ ಹರಿಹರನ್ ಪ್ರಮುಖರು. ಆರೋಪ ಹೊತ್ತಿದ್ದ ಅರ್ಜುನ್ ಸರ್ಜಾ ಕೋರ್ಟಿನಲ್ಲಿ ಗೆದ್ದು ಬಂದಿದ್ದಾರೆ. ಇನ್ನೂ ಹಲವರು ಮೀಟೂ ಆರೋಪ ಮಾಡಿದ್ದಾರಾದರೂ.. ಯಾರು ಮಾಡಿದ್ದರು ಅನ್ನೋದನ್ನು ಮಾತ್ರ ಹೇಳಿಲ್ಲ. ಆ ಸಾಲಿಗೆ ಈಗ ಆಶಿತಾ ಸೇರಿದ್ದಾರೆ.

    ನನಗೂ ಮೀಟೂ ಅನುಭವವಾಗಿತ್ತು. ಆರಂಭದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಯಾವಾಗ ಸಿನಿಮಾ ಇಂಡಸ್ಟ್ರಿಗೆ ರಿಯಲ್ ಎಸ್ಟೇಟ್ ಕುಳಗಳು ಬಂದರೋ.. ಆಗ ಪರಿಸ್ಥಿತಿಯೇ ಬದಲಾಗಿ ಹೋಯಿತು. ಅನಾರೋಗ್ಯಕರ ಡಿಮ್ಯಾಂಡ್ ಒಪ್ಪಿಕೊಳ್ಳಲಿಲ್ಲ. ಚಿತ್ರರಂಗವನ್ನೇ ಬಿಟ್ಟುಬಿಟ್ಟೆ ಎಂದಿದ್ದಾರೆ ಆಶಿತಾ. ಶೂಟಿಂಗ್ ಸೆಟ್‍ನಲ್ಲಿ ಅವರೊಂದಿಗೆ ಸಲುಗೆಯಿದ ಇರಬೇಕಿತ್ತು. ಹೊಂದಾಣಿಕೆ ಮಾಡಿಕೊಳ್ಳಬೇಕಿತ್ತು. ಅದೆಲ್ಲ ಮಾಡಲು ಸಾಧ್ಯವಾಗದೆ ಇಂಡಸ್ಟ್ರಿ ಬಿಟ್ಟೆ ಎನ್ನುವುದು ಆಶಿತಾ ವಾದ. ಅಲ್ಲದೆ ನನ್ನ ವಿದ್ಯಾಭ್ಯಾಸ ಮುಂದುವರೆಸುವ ಉದ್ದೇಶವೂ ಸೇರಿ ಚಿತ್ರರಂಗ ಬಿಟ್ಟೆ ಎಂದಿದ್ದಾರೆ ಆಶಿತಾ.

    ಆಶಿತಾ 1998ರಲ್ಲಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟವರು. ಬಾ ಬಾರೋ ರಸಿಕ, ರೋಡ್ ರೋಮಿಯೋ, ಆಕಾಶ್, ತವರಿನ ಸಿರಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಆಶಿತಾ ರೋಡ್ ರೋಮಿಯೋ ನಂತರ ಇಂಡಸ್ಟ್ರಿಗೆ ಗುಡ್ ಬೈ ಹೇಳಿದವರು.

    ಆದರೆ ಯಾರಿಂದ ಕಿರುಕುಳ ಆಯಿತು.. ವ್ಯಕ್ತಿ ಯಾರು ಎಂಬ ಮಾಹಿತಿಯನ್ನೇನೂ ಆಶಿತಾ ನೀಡಿಲ್ಲ. ಬೇರೆ ಚಿತ್ರರಂಗದಿಂದ ಬಂದು ಕಾಸ್ಟಿಂಗ್ ಕೌಚ್ ಆಫರ್ ನೀಡಿದವರೂ ಇದ್ದರು ಎಂದಿದ್ದಾರೆ.

  • ಮೀ ಟೂ ಕೇಸ್ : ಶೃತಿ ಹರಿಹರನ್ ಆರೋಪದಿಂದ ಮುಕ್ತರಾದ ಅರ್ಜುನ್ ಸರ್ಜಾ

    ಮೀ ಟೂ ಕೇಸ್ : ಶೃತಿ ಹರಿಹರನ್ ಆರೋಪದಿಂದ ಮುಕ್ತರಾದ ಅರ್ಜುನ್ ಸರ್ಜಾ

    ಸುಮಾರು 3 ವರ್ಷಗಳ ಹಿಂದೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಪ್ರಕರಣ ಮೀಟೂ ಕೇಸ್. ನಟಿ ಶೃತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ವಿಸ್ಮಯ ಚಿತ್ರದ ಚಿತ್ರೀಕರಣ ವೇಳೆ ಅರ್ಜುನ್ ಸರ್ಜಾ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಶೃತಿ ಹರಿಹರನ್ ಆರೋಪಿಸಿದ್ದರು.

    ಪ್ರಕರಣದ ವಿಚಾರಣೆ ನಡೆಸಿರುವ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ನಟಿ ಶೃತಿ ಹರಿಹರನ್ ತಾವು ಮಾಡಿದ್ದ ಆರೋಪಕ್ಕೆ ಯಾವುದೇ ಸಾಕ್ಷ್ಯ ನೀಡುವಲ್ಲಿ ವಿಫಲರಾಗಿರುವ ಕಾರಣ ಬಿ ರಿಪೋರ್ಟ್ ಸಲ್ಲಿಸಲಾಗಿದೆ.

    ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿರುವ ನ್ಯಾಯಾಲಯ, ಬಿ ರಿಪೋರ್ಟ್ ಬಗ್ಗೆ ಯಾವುದೇ ಆಕ್ಷೇಪವಿದ್ದಲ್ಲಿ ಆ ದಿನ ನ್ಯಾಯಾಲಯಕ್ಕೆ ಹಾಜರಾಗಿ ವಿವರಣೆ ನೀಡುವಂತೆ ಶೃತಿ ಹರಿಹರನ್ ಅವರಿಗೆ ನೋಟಿಸ್ ನೀಡಿದೆ. ಬಿ ರಿಪೋರ್ಟ್ ಸಲ್ಲಿಸುವುದಕ್ಕೂ ಮುನ್ನ ಪೊಲೀಸರು ಶೃತಿ ಹರಿಹರನ್ ಅವರಿಗೆ ಮಾಹಿತಿ ನೀಡಿದ್ದರಾದರೂ, ಶೃತಿ ಹರಿಹರನ್ ಸಾಕ್ಷ್ಯಾಧಾರ ಒದಗಿಸುವಲ್ಲಿ ವಿಫಲರಾಗಿದ್ದಾರೆ.

  • ಮೀಟೂ ಏಟು - ಶಿವಣ್ಣ ಹೇಳಿದ್ದೇನು..?

    shivanna's first reaction on me too

    ಸ್ಯಾಂಡಲ್‍ವುಡ್‍ನಲ್ಲಿ ಸುನಾಮಿ ಎಬ್ಬಿಸಿರುವ ಮೀಟೂ ಅಭಿಯಾನದ ಬಗ್ಗೆ ಹಿರಿಯ ನಟ ಶಿವರಾಜ್‍ಕುಮಾರ್ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮೀಟೂ ಆರೋಪಗಳು ಅವರವರ ವೈಯಕ್ತಿಕ ಅಭಿಪ್ರಾಯ. ಆರೋಪಗಳ ಬಗ್ಗೆ ನಾನು ಮಾತನಾಡಲ್ಲ. ಯಾರ ಭಾವನೆಗಳನ್ನೂ ಕೆಡಿಸೋಕೆ ಇಷ್ಟಪಡಲ್ಲ ಎಂದಿದ್ದಾರೆ ಶಿವಣ್ಣ.

    ಆದರೆ, ಈ ವಿವಾದಗಳನ್ನು ಫಿಲಂ ಚೇಂಬರ್‍ನಲ್ಲಿ ಕುಳಿತು ಬಗೆಹರಿಸಿಕೊಳ್ಳಬಹುದಿತ್ತು. ಇಷ್ಟೆಲ್ಲ ವಿವಾದ ಆಗಬೇಕಿರಲಿಲ್ಲ. ಸರಿ ತಪ್ಪುಗಳನ್ನು ಮಾಧ್ಯಮದವರೂ ವಿಶ್ಲೇಷಣೆ ಮಾಡಬೇಕು ಎಂದಿದ್ದಾರೆ ಶಿವರಾಜ್‍ಕುಮಾರ್.

  • ಹೋರಾಟದ ನಟಿಯರ ಹೊಂದಾಣಿಕೆಯನ್ನೂ ನೋಡಿದ್ದೇನೆ - ಮೀಟೂಗೆ ಹರ್ಷಿಕಾ ಪೂಣಚ್ಚ ಶಾಕ್

    Harshika Ponnacha Image

    ಮೀಟೂ ಅಭಿಯಾನ, ಬಿರುಗಾಳಿ, ಸುಂಟರಗಾಳಿ, ಚಂಡಮಾರುತ, ಅಗ್ನಿಸ್ಫೋಟ, ಜ್ವಾಲಾಮುಖಿಯಾಗಿ ಸುಡುತ್ತಿರುವಾಗಲೇ, ಹರ್ಷಿಕಾ ಪೂಣಚ್ಚ, ಮೀಟೂ ಅಭಿಯಾನದಲ್ಲಿ ತೊಡಗಿರುವವರೆಲ್ಲ ಬೆಚ್ಚಿ ಬೀಳುವಂತಾ ಶಾಕ್ ಕೊಟ್ಟಿದ್ದಾರೆ. ಹೋರಾಟದ ನಟಿಯರ ಹೊಂದಾಣಿಕೆಯನ್ನೂ ನೋಡಿದ್ದೇನೆ ಎಂದಿರುವ ಹರ್ಷಿಕಾ ಪೂಣಚ್ಚ, ಪ್ರಸಿದ್ಧಿಗಾಗಿ ನಡೆಯುತ್ತಿರುವ ಮೀಟೂ ಹೋರಾಟವನ್ನು ಖಂಡಿಸಿದ್ದಾರೆ.

    ಅನೇಕ ಹೋರಾಟಗಾರ್ತಿ ನಟಿಯರು ತಮಗೆ ಅಗತ್ಯವಿದ್ದಾಗ ದುಡ್ಡಿಗಾಗಿ, ಒಳ್ಳೆಯ ಚಾನ್ಸ್‍ಗಾಗಿ, ಅದ್ಧೂರಿ ಜೀವನಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಾರೆ. ಪ್ರಸಿದ್ಧಿ ಹಾಗೂ ಎಲ್ಲ ಅನುಕೂಲಗಳನ್ನೂ ಪಡೆಯುತ್ತಾರೆ. ಎಲ್ಲ ಮುಗಿದ ಮೇಲೆ ಯಾರ ಜೊತೆ ಒಂದು ಕಾಲದಲ್ಲಿ ಚೆನ್ನಾಗಿದ್ದರೋ, ಅವರ ವಿರುದ್ಧವೇ ಆರೋಪ ಮಾಡುತ್ತಾರೆ ಎಂದಿರುವ ಹರ್ಷಿಕಾ ಪೂಣಚ್ಚ, ಇದು ಹೋರಾಟದ ವಿಧಾನವಲ್ಲ ಎಂದಿದ್ದಾರೆ.

    ಹಾಗೆಂದು ಚಿತ್ರರಂಗ ಸಜ್ಜನರಷ್ಟೇ ಇರುವ ಕ್ಷೇತ್ರವೇನೂ ಅಲ್ಲ. ಅಲ್ಲಿಯೂ ಅಂತಹವರಿದ್ದಾರೆ. ನನಗೂ ಅಂತಹ ಅನುಭವಗಳಾಗಿವೆ. ಅವುಗಳನ್ನು ತಿರಸ್ಕರಿಸಿ ಬಂದಿದ್ದೇನೆ. ಅದರಿಂದಾಗಿ ಸೂಪರ್‍ಸ್ಟಾರ್‍ಗಳ ಜೊತೆ ನಟಿಸುವ ಅವಕಾಶಗಳೂ ತಪ್ಪಿವೆ. ಆದರೆ, ನಾನು ಹ್ಯಾಪಿಯಾಗಿದ್ದೇನೆ. ನಾನೇನು ಅನ್ನೋದು ಚಿತ್ರರಂಗದವರಿಗೂ ಗೊತ್ತಿದೆ. ಕೆಲವು ಪುರುಷರು ಕೆಟ್ಟವರಾಗಿರುತ್ತಾರೆ. ಬಲವಂತ ಮಾಡುತ್ತಾರೆ. ಹಾಗಂತ ಯಾರೂ ಅತ್ಯಾಚಾರ ಮಾಡೋದಿಲ್ಲ. ಮೃಗಗಳಂತೆ ವರ್ತಿಸುವುದಿಲ್ಲ. ಧೈರ್ಯವಾಗಿ ನೋ ಎಂದು ಹೇಳಿ ಹೊರಬನ್ನಿ. ಆ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಎರಡೂ ಕೈ ಸೇರಿದರೇನೇ ಚಪ್ಪಾಳೆ ಎಂದಿದ್ದಾರೆ ಹರ್ಷಿಕಾ ಪೂಣಚ್ಚ.

    ಯಾವುದೇ ಚಿತ್ರರಂಗದಲ್ಲಿ ಸೂಪರ್‍ಸ್ಟಾರ್ ನಟಿಯರು ಇಂತಹ ಮೀಟೂ ಆರೋಪ ಮಾಡುತ್ತಿಲ್ಲ ಎಂದು ಕೂಡಾ ನೆನಪಿಸಿದ್ದಾರೆ.