ದಿ ವಿಲನ್ ಚಿತ್ರ ರಿಲೀಸ್ ಆದಾಗಿನಿಂದಲೂ ಹೊಗಳಿಕೆ ಮತ್ತು ಟೀಕೆ ಎರಡನ್ನು ಎದುರಿಸುತ್ತಿರುವ ಪ್ರೇಮ್, ಹದ್ದು ಮೀರಿದ ಅಭಿಮಾನಿ ವಿಲನ್‍ಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಉಪ್ಪಾರಪೇಟೆ ಠಾಣೆಯಲ್ಲಿ ಪೊಲೀಸ್ ಅಧಿಕಾರಿ ರವಿ ಡಿ. ಚನ್ನಣ್ಣವರ್ ಬಳಿ ಕಂಪ್ಲೇಂಟ್ ಕೊಟ್ಟಿದ್ದಾರೆ.
ಸಿನಿಮಾ ಬಗ್ಗೆ ಏನು ಬೇಕಾದರೂ ಮಾತನಾಡಲಿ. ಆ ಸ್ವಾತಂತ್ರ್ಯ ಅವರಿಗೆ ಇದೆ. ಆದರೆ, ನನ್ನ ವೈಯಕ್ತಿಕ ಜೀವನದ ಬಗ್ಗೆ ಬಾಯಿಗೆ ಬಂದಂತೆಲ್ಲ ಮಾತನಾಡುವುದು ನೋವು ತಂದಿದೆ ಎಂದಿದ್ದಾರೆ ಪ್ರೇಮ್.
ದಿ ವಿಲನ್ ಸಿನಿಮಾ ರಾಜ್ಯಾದ್ಯಂತ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆಯಾದರೂ, ಬಾಕ್ಸಾಫೀಸ್‍ನಲ್ಲಿ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ. ಹೀಗಿದ್ದರೂ, ಬೇಕಾಬಿಟ್ಟಿ ಮಾತನಾಡುತ್ತಿರುವವರ ವಿರುದ್ಧ ಅಮ್ಮ, ಅಕ್ಕ, ತಂಗಿಯರಿಲ್ಲದ ಅಯೋಗ್ಯರಷ್ಟೇ ಈ ರೀತಿಯ ವಿಕೃತ ಹೇಳಿಕೆ ನೀಡೋಕೆ ಸಾಧ್ಯ. ನಾಯಿಗಳಂತೆ ಮಾತನಾಡಿದ್ದಾರೆ ಎಂದು ಕಿಡಿಕಾರಿದ್ದಾರೆ ಪ್ರೇಮ್. ಒಟ್ಟು 9 ಮಂದಿಯ ವಿರುದ್ಧ ದೂರು ಕೊಟ್ಟಿದ್ದಾರೆ.