` abishek ambareesh, - chitraloka.com | Kannada Movie News, Reviews | Image

abishek ambareesh,

 • ಅಭಿಷೇಕ್ 2ನೇ ಚಿತ್ರಕ್ಕೆ ಪ್ರಶಾಂತ್ ರಾಜ್ ನಿರ್ದೇಶಕ

  prashanth raj to direct abishek amabreesh's next

  ಅಭಿಷೇಕ್ ಅಂಬರೀಷ್ ಅಭಿನಯಿಸಲಿರೋ 2ನೇ ಚಿತ್ರ ಯಾವುದು..? ಡೈರೆಕ್ಟರ್ ಯಾರು..? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಭಿಯ ಮುಂದಿನ ಚಿತ್ರದ ನಿರ್ದೇಶಕ ಪ್ರಶಾಂತ್ ರಾಜ್. ಲವ್‍ಗುರು, ಗಾನ ಬಜಾನಾ, ವಿಷಲ್, ಝೂಮ್, ದಳಪತಿ, ಆರೆಂಜ್ ಚಿತ್ರಗಳ ನಿರ್ದೇಶಕ ಪ್ರಶಾಂತ್ ರಾಜ್, ಅಭಿಷೇಕ್‍ಗೆ ಕಥೆಯ ಒನ್ ಲೈನ್ ಹೇಳಿದ್ದಾರೆ. ಅದು ಓಕೆ ಆಗಿದ್ದು, ಸ್ಕ್ರಿಪ್ಟ್ ಡೆವಲಪ್ ಮಾಡುತ್ತಿದ್ದಾರೆ ಪ್ರಶಾಂತ್ ರಾಜ್.

  ಇದು ನನ್ನ 7ನೇ ಸಿನಿಮಾ ಆಗಲಿದೆ. ಒಂದು ಸುತ್ತಿನ ಮಾತುಕತೆ ಮುಗಿದಿದೆ. ಅಧಿಕೃತ ಅನೌನ್ಸ್‍ಮೆಂಟ್ ಬಾಕಿಯಿದೆ. ಇದು ಪಕ್ಕಾ ಎಂಟರ್‍ಟೈನ್‍ಮೆಂಟ್ ಸಿನಿಮಾ ಎಂದಿದ್ದಾರೆ ಪ್ರಶಾಂತ್ ರಾಜ್.

 • ಅಭಿಷೇಕ್ ಅಂಬರೀಶ್ ಮನಗೆದ್ದ ಹುಡುಗಿ ಬಿದ್ದಪ್ಪ ಮಗಳಾ?

  ಅಭಿಷೇಕ್ ಅಂಬರೀಶ್ ಮನಗೆದ್ದ ಹುಡುಗಿ ಬಿದ್ದಪ್ಪ ಮಗಳಾ?

  ಅಭಿಷೇಕ್ ಅಂಬರೀಷ್ ಮದುವೆ ಫಿಕ್ಸ್ ಆಗಿದೆ. ಡಿಸೆಂಬರ್ 11ಕ್ಕೆ ಎಂಗೇಜ್‍ಮೆಂಟ್ ಎಂಬುದು ಎಲ್ಲೆಡೆ ಸುದ್ದಿಯಾಗಿತ್ತು. ಅದೇ ವೇಳೆಗೆ ಅಂಬರೀಷ್ ಪುಣ್ಯತಿಥಿಯೂ ಬಂದು, ಪತ್ರಕರ್ತರ ಎದುರು ಸಿಕ್ಕ ಸುಮಲತಾ ಅಂಬರೀಷ್ ಮದುವೆ, ನಿಶ್ಚಿತಾರ್ಥ ಸುದ್ದಿಯನ್ನು ನಿರಾಕರಿಸಿದ್ದರು. ಮದುವೆ ಮಾಡುವಾಗ ನಿಮಗೆ ಹೇಳಿಯೇ ಮಾಡುತ್ತೇನೆ ಎಂದಿದ್ದರು. ಪ್ರತಿ ವರ್ಷ ಅಭಿ ಮದುವೆ, ನಿಶ್ಚಿತಾರ್ಥ, ಅಫೇರ್ ಸುದ್ದಿ ಬರ್ತಾನೆ ಇರುತ್ತೆ. ಮದುವೆ ವಿಷಯ ಅವನಿಗೇ ಬಿಟ್ಟಿದ್ದು ಎಂದಿದ್ದರು ಸುಮಲತಾ. ಸರಳವಾಗಿ ಹೇಳಬೇಕು ಎಂದರೆ ಇಲ್ಲವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿರಲೂ ಇಲ್ಲ. ನಡೆಯುತ್ತೆ ಎಂದು ಹೇಳಿರಲೂ ಇಲ್ಲ. ಹೀಗಾಗಿ ಸುದ್ದಿ ತಣ್ಣಗಾಗಿರಲಿಲ್ಲ.

  ಈಗ ಅಭಿಷೇಕ್ ಮನಸು ಕದ್ದ ಹುಡುಗಿ ಫ್ಯಾಷನ್ ಗುರು ಎಂದೇ ಖ್ಯಾತರಾಗಿರುವ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಎನ್ನಲಾಗಿದೆ. ಅವಿವಾ ಕೂಡಾ ಫ್ಯಾಷನ್ ಡಿಸೈನರ್ ಮತ್ತು ಮಾಡೆಲ್. ಸದ್ಯಕ್ಕೆ ಬಂದಿರೋ ಮಾಹಿತಿ ಇಷ್ಟು. ಇತ್ತೀಚೆಗೆ ಸ್ವತಃ ಅಭಿಷೇಕ್ ಮೀಡಿಯಾಗಳಿಗೆ ಮಾತನಾಡುತ್ತ ನೀವು ಹೀಗೇ ಪದೇ ಪದೇ ನಂಗೆ ಎಂಗೇಜ್‍ಮೆಂಟ್ ಮಾಡಿಸ್ತಿದ್ರೆ ನಾಳೆ ನಂಗ್ಯಾರೂ ಹೆಣ್ಣು ಕೊಡಲ್ಲ ಎಂದಿದ್ದರು. ಈಗ ನೋಡಿದರೆ ಹುಡುಗಿಯ ಹೆಸರು ಹೊರಬಿದ್ದಿದೆ. ಆದರೆ.. ಈಗಲೂ.. ಈ ಕ್ಷಣಕ್ಕೂ ಇದು ಅಧಿಕೃತ ಅಲ್ಲ.

 • ಅಭಿಷೇಕ್ ಅಂಬರೀಷ್ 2ನೇ ಸಿನಿಮಾ ಶುರು

  ಅಭಿಷೇಕ್ ಅಂಬರೀಷ್ 2ನೇ ಸಿನಿಮಾ ಶುರು

  ಅಮರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ನಟನಾಗಿ ಎಂಟ್ರಿ ಕೊಟ್ಟ ಅಭಿಷೇಕ್ ಅಂಬರೀಷ್, 2ನೇ ಸಿನಿಮಾ ಶುರುವಾಗಿದೆ. ಈಗಾಗಲೇ ಅನೌನ್ಸ್ ಆಗಿದ್ದ ದುನಿಯಾ ಸೂರಿ ಮತ್ತು ಅಭಿಷೇಕ್ ಕಾಂಬಿನೇಷನ್ನಿನ ಬ್ಯಾಡ್ ಮ್ಯಾನರ್ಸ್ ಚಿತ್ರದ ಮುಹೂರ್ತ ಚಾಮುಂಡಿ ಬೆಟ್ಟದಲ್ಲಿ ನೆರವೇರಿದೆ.

  ಅಭಿಷೇಕ್ ಚಿತ್ರಕ್ಕೆ ಅಮ್ಮ ಸುಮಲತಾ ಅಂಬರೀಷ್ ಮತ್ತು ಅಣ್ಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಖುದ್ದು ಹಾಜರಿದ್ದು ಶುಭ ಹಾರೈಸಿದರು. ಕೆ.ಎಂ.ಸುಧೀರ್ ನಿರ್ಮಾಣದ ಬ್ಯಾಡ್ ಮ್ಯಾನರ್ಸ್, ಪಕ್ಕಾ ಸೂರಿ ಶೈಲಿಯಲ್ಲಿರುತ್ತದೆ.

 • ಅಭಿಷೇಕ್ ಅಂಬರೀಷ್ ಎದುರು ಸ್ಪರ್ಧಿಸ್ತಾರಾ ನಿಖಿಲ್ ಕುಮಾರಸ್ವಾಮಿ..?

  will it be abishek ambareesh vs nikhil gowda this elections

  ಜೆಡಿಎಸ್‍ನ ವರಿಷ್ಠರು ಟಿಕೆಟ್ ಕೊಟ್ಟರೆ, ಮಂಡ್ಯದಿಂದ ಸ್ಪರ್ಧಿಸೋಕೆ ನಾನ್ ರೆಡಿ. ಸೀತಾರಾಮ ಕಲ್ಯಾಣ ಚಿತ್ರದ ಬಿಡುಗಡೆ ಸಂಭ್ರಮದಲ್ಲಿರೋ ನಿಖಿಲ್, ರಾಜಕೀಯದ ಇಂಗಿತವನ್ನೂ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, ಅಕಸ್ಮಾತ್ ಮಂಡ್ಯದಲ್ಲಿ ಅಭಿಷೇಕ್ ಅಂಬರೀಷ್ ಎದುರು ಸ್ಪರ್ಧಿಸಬೇಕು ಎಂದರೆ ಅದಕ್ಕೂ ಸಿದ್ಧ ಎಂದಿದ್ದಾರೆ ನಿಖಿಲ್.

  ನನ್ನ ಮತ್ತು ಅಭಿ ನಡುವೆ ಇಂದಿಗೂ ಅತ್ಯುತ್ತಮ ಸ್ನೇಹವಿದೆ. ನಾವಿಬ್ಬರೂ ಗುಡ್ ಫ್ರೆಂಡ್ಸ್. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

  ನಾನು ರಾಜಕೀಯ ಫ್ಯಾಮಿಲಿಯಿಂದ ಬಂದವನು. ರಾಜಕೀಯಕ್ಕೆ ಹೋಗುವುದು ಸುಲಭವಿದ್ದರೂ, ಅಲೆಗಳ ವಿರುದ್ಧ ಈಜಲೆಂದು ಸಿನಿಮಾಗೆ ಬಂದಿದ್ದೇನೆ. ಸಿನಿಮಾದಲ್ಲಿ ಗೆಲ್ಲುತ್ತೇನೆ. ಸೀತಾರಾಮ ಕಲ್ಯಾಣ ಚಿತ್ರದ ಮೇಲೆ ವಿಶ್ವಾಸವಿದೆ ಎಂದಿದ್ದಾರೆ ನಿಖಿಲ್.

 • ಅಭಿಷೇಕ್ ಅಂಬರೀಷ್ ಚಿತ್ರ ಸೆನ್ಸಾರ್ ಪಾಸ್

  amar censored u/a

  ಅಭಿಷೇಕ್ ಅಂಬರೀಷ್ ಅಭಿನಯದ ಮೊದಲ ಸಿನಿಮಾ ಅಮರ್ ಚಿತ್ರ ಸೆನ್ಸಾರ್ ಪಾಸ್ ಆಗಿದೆ. ಅಂಬರೀಷ್ ಪುತ್ರನ ಮೊತ್ತ ಮೊದಲ ಸಿನಿಮಾ ಇದು. ಅಂಬಿ ಅಭಿಮಾನಿಗಳು ಕಾತುರದಿಂದ ಕಾಯ್ತಿರೋ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. 

  ನಾಗಶೇಖರ್ ನಿರ್ದೇಶನದ ಅಮರ್ ಚಿತ್ರದಲ್ಲಿ ಅಭಿಷೇಕ್ ಜೊತೆ ದರ್ಶನ್ ಕೂಡಾ ಅತಿಥಿ ನಟರಾಗಿ ಕಾಣಿಸಿಕೊಂಡಿದ್ದಾರೆ. ನಿರೂಪ್ ಭಂಡಾರಿ, ರಚಿತಾ ರಾಮ್ ಕೂಡಾ ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ಬಸಣ್ಣಿ ಬಾ.. ಹಾಡಿನ ಖ್ಯಾತಿಯ ತಾನ್ಯಾ ಹೋಪ್ ಚಿತ್ರಕ್ಕೆ ಹೀರೋಯಿನ್. 

  ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರವನ್ನು ಮೇ ತಿಂಗಳಲ್ಲಿ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿದೆ. 

 • ಅಭಿಷೇಕ್ ಅಂಬರೀಷ್ ಜೊತೆ ಡಿಂಪಲ್ ಕ್ವೀನ್

  ಅಭಿಷೇಕ್ ಅಂಬರೀಷ್ ಜೊತೆ ಡಿಂಪಲ್ ಕ್ವೀನ್

  ಅಭಿಷೇಕ್ ಅಂಬರೀಷ್ ಮೊದಲ ಚಿತ್ರದಲ್ಲಿ ಚೆಂದದ ಹಾಡಿಗೆ ಹೆಜ್ಜೆ ಹಾಕಿದ್ದ ರಚಿತಾ ರಾಮ್, ಈಗ ಅಭಿಗೆ ಹೀರೋಯಿನ್ ಆಗುತ್ತಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ನಲ್ಲಿ ರಚಿತಾ ರಾಮ್ ಹೀರೋಯಿನ್. ಅಮರ್ ಚಿತ್ರದಲ್ಲಿ ಲವರ್ ಬಾಯ್ ಆಗಿದ್ದ ಅಭಿಷೇಕ್, ಇಲ್ಲಿ ರಗಡ್ ಬಾಯ್ ಆಗಿದ್ದಾರೆ.

  ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನೊಬ್ಬ ಹೀರೋಯಿನ್ ಆಗಿ ಕೃಷ್ಣ ತುಳಸಿ ಧಾರಾವಾಹಿ ಖ್ಯಾತಿಯ ಪ್ರಿಯಾಂಕಾ ಕುಮಾರ್ ನಟಿಸುತ್ತಿದ್ದಾರೆ.

  ಸುಧೀರ್ ಕೆ.ಎಂ.ನಿರ್ಮಾಣದ ಸಿನಿಮಾ, ಫಸ್ಟ್ ಲುಕ್ನಿಂದಲೇ ಗಮನ ಸೆಳೆದಿದೆ. ದುನಿಯಾ ಸೂರಿ-ಅಭಿಷೇಕ್ ಅಂಬರೀಷ್-ರಚಿತಾ ರಾಮ್ ಕಾಂಬಿನೇಷನ್ ಸೆನ್ಸೇಷನ್ ಸೃಷ್ಟಿಸಿದೆ.

 • ಅಭಿಷೇಕ್ ಅಂಬರೀಷ್ ದುನಿಯಾ ಸೂರಿ ಕಾಂಬಿನೇಷನ್ ಫಿಕ್ಸ್

  abishek ambareesh's next film titled bad manners

  ಅಮರ್ ಚಿತ್ರದ ನಂತರ ಅಭಿಷೇಕ್ ಅಂಬರೀಷ್ ಹೊಸ ಚಿತ್ರದಲ್ಲಿ ನಟಿಸ್ತಾರೆ ಅನ್ನೋದು ಹೊಸ ಸುದ್ದಿಯೇನಲ್ಲ. ಆದರೆ ಈಗ ಇದು ಪಕ್ಕಾ ಸುದ್ದಿ. ಈ ಬಾರಿ ಅಭಿಷೇಕ್ ಅಂಬರೀಷ್ ಸೆನ್ಸೇಷನ್ ಸೃಷ್ಟಿಸೋಕೆ ಹೊರಟಿದ್ದಾರೆ. ಅಮರ್ ಚಿತ್ರದಲ್ಲಿ ರೊಮ್ಯಾಂಟಿಕ್ ಹೀರೋ ಆಗಿದ್ದ ಅಭಿಯನ್ನು ರಗಡ್ ಲುಕ್‍ಗೆ ತರಲು ರೆಡಿಯಾಗಿರೋದು ದುನಿಯಾ ಸೂರಿ.

  ಬ್ಯಾಡ್ ಮ್ಯಾನರ್ಸ್ ಅನ್ನೋದು ಚಿತ್ರದ ಟೈಟಲ್. ಚಿತ್ರದ ನಿರ್ಮಾಪಕ ಕೆ.ಎಂ. ಸುಧೀರ್. ಸೂರಿ ಚಿತ್ರಗಳು ರಾ ಇರ್ತವೆ. ಹೀರೋಯಿಸಂನ್ನೂ ವಿಜೃಂಭಿಸುವ ಸೂರಿ, ಸದ್ಯಕ್ಕೆ ಕಾಗೆ ಬಂಗಾರ ಚಿತ್ರವನ್ನು ಪಕ್ಕಕ್ಕಿಟ್ಟು ಬ್ಯಾಡ್ ಮ್ಯಾನರ್ಸ್ ಕೈಗೆತ್ತಿಕೊಂಡಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಜವಾಬ್ದಾರಿ ಹೊತ್ತಿದ್ದಾರೆ. ಅಂಬಿ ಹುಟ್ಟುಹಬ್ಬಕ್ಕೆ ಸಿನಿಮಾ ಸೆಟ್ಟೇರೋದು ಪಕ್ಕಾ.

 • ಅಭಿಷೇಕ್ ಅಂಬರೀಷ್ ನಿಶ್ಚಿತಾರ್ಥ : ಸುಮಲತಾ ಹೇಳಿದ್ದೇನು?

  ಅಭಿಷೇಕ್ ಅಂಬರೀಷ್ ನಿಶ್ಚಿತಾರ್ಥ : ಸುಮಲತಾ ಹೇಳಿದ್ದೇನು?

  ಅಭಿಷೇಕ್ ಅಂಬರೀಷ್ ನಿಶ್ಚಿತಾರ್ಥ ನಿಶ್ಚಯವಾಗಿದೆ. ಡಿಸೆಂಬರ್ 11ರಂದು ಬೆಂಗಳೂರು ಪ್ಯಾಲೇಸ್ ಗ್ರೌಂಡ್ನಲ್ಲಿ ನಿಶ್ಚಿತಾರ್ಥ ನೆರವೇರಲಿದೆ. ಇದೊಂಂದು ಲವ್ ಕಂ ಅರೇಂಜ್ ಮ್ಯಾರೇಜ್ ಎಂಬ ಸುದ್ದಿ ಇತ್ತೀಚೆಗೆ ಭಾರಿ ಸುದ್ದಿಯಾಗಿತ್ತು. ಗಾಂಧಿನಗರದಲ್ಲಿ ಈ ಸುದ್ದಿ ಹರಿದಾಡುತ್ತಲೇ ಇದೆ. ಅದರೆ ಈ ಸುದ್ದಿಗಳಿಗೆ ಸ್ವತಃ ಸುಮಲತಾ ಅಂಬರೀಷ್ ಪ್ರತಿಕ್ರಿಯೆ ನೀಡಿ ಸ್ಪಷ್ಟನೆ ಕೊಟ್ಟಿದ್ದಾರೆ.

  ಸ್ಯಾಂಡ್ವುಡ್ನಲ್ಲಿ ತಮ್ಮ ಮಗನ ಮದುವೆ ಸುದ್ದಿ ಹರಿದಾಡುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಮಗನ ಮದುವೆ ವಿಚಾರವನ್ನು ಸ್ಪಷ್ಟವಾಗಿ ನಿರಾಕರಿಸಿರುವ ಸುಮಲತಾ, ಪ್ರತಿವರ್ಷ ಅಭಿಷೇಕ್ ಮದುವೆ ವಿಚಾರ ವೈರಲ್ ಆಗುತ್ತಿರುತ್ತದೆ. ಮದುವೆ ಇದ್ದರೆ ಖಂಡಿತ ತಿಳಿಸುತ್ತೇವೆ. ಮದುವೆ ನಿರ್ಧಾರ ಅಭಿಗೆ ಬಿಟ್ಟಿದ್ದು. ನಾವು ಯಾವತ್ತು ಅವನಿಗೆ ಫೋರ್ಸ್ ಮಾಡಲ್ಲ ಎಂದು ಹೇಳಿದ್ದಾರೆ. 

 • ಅಭಿಷೇಕ್ ಅಂಬರೀಷ್ ಮದುವೆ ಫಿಕ್ಸ್ ?

  ಅಭಿಷೇಕ್ ಅಂಬರೀಷ್ ಮದುವೆ ಫಿಕ್ಸ್

  ಅಂಬರೀಷ್ ಮತ್ತು ಸುಮಲತಾ ದಂಪತಿಯ ಪುತ್ರ ಅಭಿಷೇಕ್ ಅಂಬರೀಷ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಈ ಮೂಲಕ ಇಡೀ ಚಿತ್ರರಂಗವೇ ಮತ್ತೊಂದು ಸಂಭ್ರಮಕ್ಕೆ ಸಿದ್ಧವಾಗುತ್ತಿದೆ. ಡಿಸೆಂಬರ್ 11ರಂದು ಅಭಿಷೇಕ್ ಅಂಬರೀಷ್ ಎಂಗೇಜ್‍ಮೆಂಟ್ ಫಿಕ್ಸ್ ಆಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ. ಸದ್ಯಕ್ಕೆ ಬಂದಿರುವ ಮಾಹಿತಿ ಇಷ್ಟೆ.

  ಇದೊಂದು ಅರೇಂಜ್ ಮ್ಯಾರೇಜ್ ಎನ್ನಲಾಗುತ್ತಿದೆಯಾದರೂ, ಇದು ಲವ್ ಕಂ ಅರೇಂಜ್ ಮ್ಯಾರೆಜ್ ಎನ್ನಲಾಗಿದೆ. ಎರಡೂ ಕುಟುಂಬದವರು ಪರಸ್ಪರ ಒಪ್ಪಿಗೆ ನೀಡಿದ್ದಾರಂತೆ. ಧನುರ್ಮಾಸ ಶುರುವಾಗುವ ಹಿನ್ನೆಲೆಯಲ್ಲಿ ಅಮಾವಾಸ್ಯೆಗೂ ಮುನ್ನವೇ ನಿಶ್ಚಿತಾರ್ಥ ನಡೆಸಲು ಮನೆಯವರು ತೀರ್ಮಾನಿಸಿದ್ದಾರೆ. ಡಿಸೆಂಬರ್ 11 ಅಥವಾ 13ರಂದು ನಿಶ್ಚಿತಾರ್ಥ. ಏಕೆಂದರೆ ಈ ವಿಷಯದಲ್ಲೂ ಕನ್‍ಫರ್ಮೇಷನ್ ನೀಡಿಲ್ಲ. ಹುಡುಗಿಯ ಹೆಸರು ಅ ಯಿಂದಲೇ ಶುರುವಾಗುತ್ತದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಆಕೆ ಚಿತ್ರರಂಗದವರಂತೂ ಅಲ್ಲ.

  ಅಂದಹಾಗೆ ಅಂಬರೀಷ್ ನಿಧನರಾದ ಮೇಲೆ ನಡೆಯುತ್ತಿರುವ ಮನೆಯಲ್ಲಿನ ಮೊದಲ ಶುಭ ಕಾರ್ಯ. ಸುಮಲತಾ ಅವರು ಸಂಭ್ರಮದಿಂದ ಓಡಾಡುತ್ತಿದ್ದಾರೆ.

 • ಅಭಿಷೇಕ್ ಅಂಬರೀಷ್.. ಏನಿದು ರೆಬಲ್ ಲುಕ್..?

  abishek ambareesh's new rugged look

  ಅಭಿಷೇಕ್ ಅಂಬರೀಷ್ ತಮ್ಮ ಇನ್‍ಸ್ಟಾಗ್ರಾಮ್ ಅಕೌಂಟ್‍ನಲ್ಲಿ ಒಂದು ಫೋಟೋ ಹಾಕಿದ್ದಾರೆ. ತಿರುವಿದ ಮೀಸೆ, ಮುಖದ ತುಂಬಾ ಗಡ್ಡ, ಬೆಂಕಿಯುಗುಳುವ ಕಣ್ಣು.. ಒಟ್ಟಿನಲ್ಲಿ ರಗಡ್ ಲುಕ್‍ನಲ್ಲಿಯೇ ರಗಡ್ ಲುಕ್. ಇದು ಹೊಸ ಚಿತ್ರದ ಲುಕ್ ಇರಬಹುದಾ..?

  ಅಭಿಷೇಕ್ ಯೆಸ್ ಅನ್ನಲ್ಲ.. ನೋ ಅನ್ನಲ್ಲ.. ನೋಡ್ತಾ ಇರಿ, ಕಾಯ್ತಾ ಇರಿ.. ಎಲ್ಲರಿಗೂ ಕುತೂಹಲ ಬರಲಿ ಅಂತಾನೇ ಅಲ್ವಾ ಹೀಗೆಲ್ಲ ಮಾಡೋದು ಎಂದಿದ್ದಾರೆ ಅಭಿಷೇಕ್.

  ನಿಖಿಲ್ ಕುಮಾರಸ್ವಾಮಿ, ಗೆಳೆಯನ ಹೊಸ ಪ್ರಾಜೆಕ್ಟ್‍ಗೆ ಶುಭ ಕೋರಿದ್ದಾರೆ.

  ಆದರೆ.. ಇದುವರೆಗೆ ಅಭಿಷೇಕ್ ಅಂಬರೀಷ್ ಅವರ ಹೊಸ ಚಿತ್ರ ಯಾವುದು..? ನಿರ್ಮಾಪಕ ಯಾರು..? ನಿರ್ದೇಶಕ ಯಾರು..? ಎಲ್ಲವೂ ಸಸ್ಪೆನ್ಸ್.

 • ಅಮರ್ ಚಿತ್ರದಲ್ಲಿ ದರ್ಶನ್ ನಟಿಸುತ್ತಿದ್ದಾರಾ..?

  darshan in guest role for abishek ambi's amar

  ರೆಬಲ್‍ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಮೊದಲ ಸಿನಿಮಾ ಅಮರ್. ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ನಾಗಶೇಖರ್. ಬೈಕ್ ರೇಸ್ ಹಿನ್ನೆಲೆಯ ಲವ್ ಸ್ಟೋರಿಯಲ್ಲಿ ಈಗ ಹೊಸ ಅತಿಥಿ.. ಅಲ್ಲಲ್ಲ ಸಾರಥಿಯ ಆಗಮನವಾಗಿದೆಯಂತೆ.

  ಅಪ್ಪಾಜಿ ಮಗನ ಮೊದಲ ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಅತಿಥಿ ನಟನಾಗಿ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. 

  ಆದರೆ, ದರ್ಶನ್ ಪಾತ್ರ ಏನು..? ಸಿನಿಮಾದಲ್ಲಿ ಎಷ್ಟು ಹೊತ್ತು ಇರುತ್ತಾರೆ ಎಂಬ ಸುದ್ದಿ ಸದ್ಯಕ್ಕೆ ಸೀಕ್ರೆಟ್.

  ಅಂದಹಾಗೆ ಕನ್ನಡದಲ್ಲಿ ಅತೀ ಹೆಚ್ಚು ಚಿತ್ರಗಳಲ್ಲಿ ಅತಿಥಿ ನಟನಾಗಿ ನಟಿಸಿರುವ ಹೆಗ್ಗಳಿಕೆ ಅಂಬರೀಶ್ ಅವರದ್ದು. ಶಂಕರ್‍ನಾಗ್, ಪ್ರಭಾಕರ್, ಜಗ್ಗೇಶ್, ದೇವರಾಜ್ ಸೇರಿದಂತೆ ಹಲವು ಹೊಸಬರ ಚಿತ್ರಗಳಲ್ಲಿ ಅತಿಥಿ ನಟನಾಗಿ ನಟಿಸಿ ಪ್ರೋತ್ಸಾಹಿಸಿದ್ದವರು ಅಂಬರೀಶ್. 

 • ಅಮ್ಮ ಇನ್ನೊಬ್ಬರಿಗೆ ಅಮ್ಮನಾಗಿ ನಟಿಸುವುದು ಇಷ್ಟವಿಲ್ಲ - ಅಭಿಷೇಕ್ ಅಂಬರೀಷ್

  abishek talks about his mother, debut movie and ambareesh

  ಅಭಿಷೇಕ್ ಅಂಬರೀಷ್ ಅಭಿನಯದ ಮೊದಲ ಚಿತ್ರ ಅಮರ್ ರಿಲೀಸ್‍ಗೆ ಹತ್ತಿರವಾಗಿದೆ. ಹೀಗಿರುವಾಗಲೇ ತಮ್ಮ ಮೊದಲ ಚಿತ್ರದ ಬಗ್ಗೆ ಮಾತನಾಡಿರುವ ಅಭಿಷೇಕ್, ಅಪ್ಪ ಹೇಳಿಕೊಟ್ಟ ನಟನೆಯ ಗುಟ್ಟು ಬಿಚ್ಚಿಟ್ಟಿದ್ದಾರೆ.

  `ನಿನ್ನ ಮೇಲೆ ದೊಡ್ಡ ಕ್ಯಾಮೆರಾ ಫೋಕಸ್ ಆಗಿದೆ. ನೂರಾರು ಜನ ನಿಂತು ನೋಡುತ್ತಿದ್ದಾರೆ ಎನ್ನುವುದನ್ನು ಮನಸ್ಸಿನಿಂದ ಆಚೆ ಹಾಕಿಬಿಡು. ಅದು ಭಯ ಹುಟ್ಟಿಸುತ್ತೆ. ನಿನ್ನೊಳಗಿನ ನಟ ಭಯಪಟ್ಟರೆ ನಟನೆ ಕಷ್ಟ. ಅದನ್ನು ಮನಸ್ಸಿನಿಂದ ತೆಗೆದುಹಾಕಿ ನಟಿಸುತ್ತಾ ಹೋಗು' ಎಂದಿದ್ದರಂತೆ ಅಂಬಿ. 

  ನಾಗಶೇಖರ್ ನಿರ್ದೇಶನದ ಚಿತ್ರದಲ್ಲಿ ಅಭಿಷೇಕ್ ಜೊತೆ ತಾನ್ಯಾ ಹೋಪ್ ನಾಯಕಿಯಾಗಿ ನಟಿಸಿದ್ದಾರೆ. ಇದೊಂದು ಯೂತ್‍ಫುಲ್ ಲವ್ ಸ್ಟೋರಿ ಎಂದಿರುವ ಅಭಿಷೇಕ್, ಅಪ್ಪ, ಅಮ್ಮನ ಸಿನಿಮಾಗಳನ್ನು ನೋಡುತ್ತಲೇ ನಟನೆಯತ್ತ ಸೆಳೆತ ಶುರುವಾಯಿತು ಎಂದಿದ್ದಾರೆ.

  ಅಮ್ಮನ ಹಲವು ಚಿತ್ರಗಳನ್ನು ನೋಡಿರುವ ಅಭಿಷೇಕ್‍ಗೆ, ಅಮ್ಮ ಬೇರೆ ಕಲಾವಿದರಿಗೆ ತಾಯಿಯಾಗಿ ನಟಿಸುವುದು ಇಷ್ಟವಾಗುವುದಿಲ್ಲವಂತೆ. ಅವರು ನನ್ನ ಚಿತ್ರದಲ್ಲಿ ನಟಿಸಬೇಕು, ಅಮ್ಮನಾಗಿಯೇ ನಟಿಸಬೇಕು ಎಂಬ ಆಸೆಯೂ ಅಭಿಷೇಕ್ ಅವರಿಗೆ ಇದೆ.

 • ಐತಿಹಾಸಿಕವೋ.. ಪೌರಾಣಿಕವೋ.. ಅಭಿಷೇಕ್ ಹೊಸ ಸಿನಿಮಾ ಏನ್ ಕಥೆ?

  ಐತಿಹಾಸಿಕವೋ.. ಪೌರಾಣಿಕವೋ.. ಅಭಿಷೇಕ್ ಹೊಸ ಸಿನಿಮಾ ಏನ್ ಕಥೆ?

  ಅಮರ್ ಚಿತ್ರದ ನಂತರ ಅಭಿಷೇಕ್ ಅಂಬರೀಷ್ ನಟನೆಯ ಇನ್ನೊಂದು ಸಿನಿಮಾ ರಿಲೀಸ್ ಆಗಿಲ್ಲ. ಬ್ಯಾಡ್ ಮ್ಯಾನರ್ಸ್ ರಿಲೀಸ್ ಆಗುವುದಕ್ಕೆ ಸಿದ್ಧವಾಗುತ್ತಿದೆ. ಕಾಳಿ ಚಿತ್ರ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ. ಇದರ ಮಧ್ಯೆ ಮದಗಜ ಮಹೇಶ್ ಜೊತೆ 4ನೇ ಚಿತ್ರ ಶುರುವಾಗಿದೆ. ಪ್ರೊಡ್ಯುಸರ್ ರಾಕ್ ಲೈನ್ ವೆಂಕಟೇಶ್. ಸುಮಲತಾ ಅಂಬರೀಷ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶುರುವಾದ ಚಿತ್ರ ಇದು.

  ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು ಯೋಧನ ಗೆಟಪ್ಪಿನಲ್ಲಿದ್ದಾರೆ ಅಭಿಷೇಕ್ ಅಂಬರೀಷ್. ಅಯೋಗ್ಯ ಮತ್ತು ಮದಗಜ ಚಿತ್ರಗ ನಂತರ ಮಹೇಶ್ ಕುಮಾರ್ ನಿರ್ದೇಶಿಸುತ್ತಿರುವ ಚಿತ್ರವಿದು. ಸ್ವತಃ ಮಹೇಶ್ ಅಂಬರೀಷ್ ಅವರ ಅಭಿಮಾನಿ. ಈಗ ಅವರ ಮಗನ ಚಿತ್ರಕ್ಕೆ ನಾನು ಡೈರೆಕ್ಟರ್ ಎನ್ನುವುದೇ ನನಗೆ ಖುಷಿ. ಖಂಡಿತಾ ಇದು ಒಳ್ಳೆಯ ಚಿತ್ರವಾಗಲಿದೆ ಎಂಬ ಭರವಸೆ ಕೊಟ್ಟಿದ್ದಾರೆ ಮಹೇಶ್. ಹಾಗಾದರೆ ಇದು ಐತಿಹಾಸಿಕ ಚಿತ್ರವೋ.. ಪೌರಾಣಿಕ ಚಿತ್ರವೋ.. ಎಂದರೆ ಅದಕ್ಕೆ ಉತ್ತರ ಸಿಕ್ಕಿಲ್ಲ.

  ಚಿತ್ರದ ಕಥೆ ನನಗಂತೂ ಥ್ರಿಲ್ ಕೊಟ್ಟಿದೆ. ಚಿತ್ರ ಅದ್ಧೂರಿಯಾಗಿ ನಿರ್ಮಾಣವಾಗಲಿದೆ ಎಂದಿದ್ದಾರೆ ರಾಕ್‍ಲೈನ್.

 • ಒಂದೇ ದಿನ ಎರಡು ಟೀಸರ್ : ಬರ್ತ್ ಡೇ ಮ್ಯಾನರ್ಸ್

  ಒಂದೇ ದಿನ ಎರಡು ಟೀಸರ್ : ಬರ್ತ್ ಡೇ ಮ್ಯಾನರ್ಸ್

  ಅಕ್ಟೋಬರ್ 3ರಂದು ಬ್ಯಾಡ್ ಮ್ಯಾನರ್ಸ್ ಚಿತ್ರದಿಂದ ಎರಡು ಟೀಸರ್ ಹೊರಬಿದ್ದವು. ಒಂದು ಜೂ.ರೆಬಲ್ ಸ್ಟಾರ್ ಹುಟ್ಟುಹಬ್ಬಕ್ಕೆ. ಮತ್ತೊಂದು ಡಿಂಪಲ್ ಕ್ವೀನ್ ಹುಟ್ಟುಹಬ್ಬಕ್ಕೆ. ಅಕ್ಟೋಬರ್ 3 ಈ ಇಬ್ಬರೂ ತಾರೆಯರ ಹುಟ್ಟುಹಬ್ಬ. ಇಬ್ಬರೂ ಒಟ್ಟಿಗೇ ನಟಿಸುತ್ತಿರುವ ಚಿತ್ರ ಬ್ಯಾಡ್ ಮ್ಯಾನರ್ಸ್. ಹೀಗಾಗಿ ಎರಡು ಸ್ಪೆಷಲ್ ಟೀಸರ್ ಬಂದವು.

  ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಚಿತ್ರದ ಟೀಸರ್ ಖಡಕ್ ಫೈಟ್, ಸೂರಿ ಸ್ಟೈಲ್ ಪಂಚ್ ಮತ್ತು ಅಭಿಷೇಕ್ ಅವರ ಕಂಚಿನ ಕಂಟದೊಂದಿಗೆ ಗಮನ ಸೆಳೆದರೆ, ರಚಿತಾ ರಾಮ್ ಟೀಸರ್‍ನಲ್ಲಿ ಅಭಿಷೇಕ್ ರಚಿತಾಗೆ ಬರ್ತ್ ಡೇ ಕೇಕ್ ತಿನ್ನಿಸುವ ದೃಶ್ಯದೊಂದಿಗೇ ಗಮನ ಸೆಳೆಯಿತು. ಮಧ್ಯರಾತ್ರಿ ಹೊತ್ತಿಗೆ ರಚಿತಾ ರಾಮ್ ಮುತ್ತಿಗೆ ಹಾಕಿ ಅಭಿಮಾನಿಗಳು ಮಧ್ಯರಾತ್ರಿಯೇ ಕೇಕ್ ಕಟ್ ಮಾಡಿ ಸಂಭ್ರಮಿಸಿದರು.

  ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಅಭಿಷೇಕ್ ರುದ್ರ ಎನ್ನುವ ಪೊಲೀಸ್ ಆಫೀಸರ್ ಪಾತ್ರ ಮಾಡುತ್ತಿದ್ದಾರೆ. ಸುಧೀರ್ ಕೆ.ಎಂ. ನಿರ್ದೇಶನದ ಚಿತ್ರ ಬ್ಯಾಡ್ ಮ್ಯಾನರ್ಸ್. ಬಹುತೇಕ ಚಿತ್ರೀಕರಣ ಮುಗಿಸಿದ್ದು ಮುಂದಿನ ವರ್ಷ ರಿಲೀಸ್ ಆಗುವ ಯೋಜನೆ ಹಾಕಿಕೊಂಡಿದೆ.

 • ಕಲ್ಲು ಕ್ವಾರಿಗಳಲ್ಲಿ ಬ್ಯಾಡ್ ಮ್ಯಾನರ್ಸ್

  ಕಲ್ಲು ಕ್ವಾರಿಗಳಲ್ಲಿ ಬ್ಯಾಡ್ ಮ್ಯಾನರ್ಸ್

  ಅಭಿಷೇಕ್ ಅಂಬರೀಷ್-ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿರೋ ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಕನಕಪುರ ಸುತ್ತಮುತ್ತ ಬೀಡುಬಿಟ್ಟಿದೆ. ಇಲ್ಲಿನ ಕಲ್ಲು ಕ್ವಾರಿಗಳಲ್ಲಿ ಧೂಳು, ಹಳೇ ಕಾರು, ಟೀ ಅಂಗಡಿ, ಉರಿಯುತ್ತಿರುವ ಟೈರ್ಗಳ ಮಧ್ಯೆ ಶೂಟಿಂಗ್ ನಡೆಯುತ್ತಿದೆ. ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕಾಗಿ ಈಗಾಗಲೇ 100ಕ್ಕೂ ಹೆಚ್ಚಿನ ದಿನಗಳ ಚಿತ್ರೀಕರಣ ಮಾಡಿರುವ ಸೂರಿ, ಕೊನೆಯ ಹಂತದ ಚಿತ್ರೀಕರಣಕ್ಕೆ ಕನಕಪುರಕ್ಕೆ ಶಿಫ್ಟ್ ಆಗಿದ್ದಾರೆ. ಬರೀ ಫೈಟ್ ಅಲ್ಲ, ಚಿತ್ರದ ಹಾಡಿಗೆ ಮಾಂಟೇಜ್ ಸೀನ್ಗಳ ಚಿತ್ರೀಕರಣವೂ ನಡೆಯುತ್ತಿದೆ.

  ಕನಕಪುರದ ಕಲ್ಲು ಕ್ವಾರಿಯಲ್ಲಿ ಸಣ್ಣ ಸೆಟ್ ಹಾಕಿಸಿದ್ದೇವೆ. ಇದಾದ ಮೇಲೆ ಬೆಂಗಳೂರಿನಲ್ಲಿ ಒಂದಿಷ್ಟು ಪ್ಯಾಚ್ವರ್ಕ್ ಇದೆ. ನಂತರ ನಾಯಕನ ಇಂಟ್ರೋ ಸಾಂಗ್ ಶೂಟಿಂಗ್ ನಡೆಯಲಿದೆ. ಅಭಿಷೇಕ್ ಮತ್ತು ಅಂಬರೀಶ್ ಫ್ಯಾನ್ಸ್ ಥ್ರಿಲ್ ಆಗುವಂತಹ ಹಲವು ಅಂಶಗಳಿವೆ. ಸಣ್ಣ ವಿಷಯದ ಮೂಲಕ ದೊಡ್ಡ ಕಥೆಯನ್ನು ಹೇಳುತ್ತಿದ್ದೇವೆ ಎನ್ನುತ್ತಾರೆ ಸೂರಿ.

  ನಿರ್ದೇಶಕರು ಕೇಳಿದ್ದನ್ನು ಕೊಡುವುದು ನನ್ನ ಕೆಲಸ. ನಾನೂ ಒಬ್ಬ ಫ್ಯಾನ್ ಆಗಿ ಸಿನಿಮಾಗಾಗಿ ಕಾಯುತ್ತಿದ್ದೇನೆ ಎನ್ನುವುದು ನಿರ್ಮಾಪಕ ಸುಧೀರ್ ಕೆ ಎಂ ಮಾತು.

  ನಿರ್ದೇಶಕರು ಹೇಳಿದಂತೆ ಮಾಡುತ್ತಿದ್ದೇನೆ. ಒಂದೊಂದು ಶಾಟ್ ಕೂಡಾ ಚೆನ್ನಾಗಿಯೇ ಬರಬೇಕು ಎಂದು ಅನ್ನೋ ಉದ್ದೇಶ ಸೂರಿಯವರದ್ದು. ಅವರು ಹೇಳಿದ್ದನ್ನು ಮಾಡುವುದು ನನ್ನ ಕೆಲಸ ಎಂದು ಎಲ್ಲ ಭಾರವನ್ನೂ ನಿರ್ದೇಶಕರ ಹೆಗಲಿಗೇ ವರ್ಗಾಯಿಸಿದ್ದಾರೆ ಅಭಿಷೇಕ್ ಅಂಬರೀಷ್.

 • ಕಾವೇರಿ ಹೋರಾಟದ ಕಥೆಯಲ್ಲಿ ಅಭಿಷೇಕ್ ಅಂಬರೀಷ್..!

  ಕಾವೇರಿ ಹೋರಾಟದ ಕಥೆಯಲ್ಲಿ ಅಭಿಷೇಕ್ ಅಂಬರೀಷ್..!

  ಗಜಕೇಸರಿ, ಹೆಬ್ಬುಲಿ, ಪೈಲ್ವಾನ್‌ ನಂತಹಾ ಚಿತ್ರಗಳನ್ನು  ನಿರ್ದೇಶಿಸಿದ್ದ ಕೃಷ್ಣ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.  ಈ ಚಿತ್ರಕ್ಕೆ ಹೀರೋ ಆಗಿರೋದು ಯಂಗ್‌ ರೆಬಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಷ್. ಸೂರಿ ನಿರ್ದೇಶನದ  ಬ್ಯಾಡ್‌ ಮ್ಯಾನರ್ಸ್‌ ಸಿನಿಮಾದಲ್ಲಿ ನಟಿಸುತ್ತಿರೋ ಅಭಿಷೇಕ್ ಕೃಷ್ಣ ಹೇಳಿರೋ ಕಥೆಗೆ ಓಕೆ ಎಂದಿದ್ದಾರೆ. ಚಿತ್ರದಲ್ಲಿರೋದು ಕಾವೇರಿ ಹೋರಾಟದ ಹಿನ್ನೆಲೆಯ ಕಥೆ. ಚಿತ್ರಕ್ಕೆ ಕಾಳಿ ಅನ್ನೋ ಟೈಟಲ್ ಇಟ್ಟಿದ್ದಾರೆ.

  ಕಾವೇರಿ ಹೋರಾಟದ ವೇಳೆ  ಕನ್ನಡದ ಹುಡುಗ ಮತ್ತು ತಮಿಳು ಹುಡುಗಿಯ ನಡುವಿನ ಕಥೆ  ಇದು. ಕೃಷ್ಣ ತಾವು ಕಣ್ಣಾರೆ ನೋಡಿದ ಘಟನೆಯನ್ನೇ ಸಿನಿಮಾ ಮಾಡುತ್ತಿದ್ದಾರೆ.

  1991ರ ಸಮಯದಲ್ಲಿ ಕಾವೇರಿ ಗಲಾಟೆ ಬಹಳ ಜೋರಾಗಿ ನಡೆಯುತ್ತಿತ್ತು. ಈ ಹೊತ್ತಿನಲ್ಲಿ ಕೊಳ್ಳೇಗಾಲ, ಮಹದೇಶ್ವರ ಬೆಟ್ಟ  ಪ್ರದೇಶದಲ್ಲಿ ನಡೆದ ಪ್ರೇಮಕಥೆ ಇದು. ಕಾವೇರಿ ಗಲಾಟೆ ಇಲ್ಲಿ ಹಿನ್ನೆಲೆ ಮಾತ್ರ. ನಾಯಕನಿಗೂ.. ನಾಯಕಿಗೂ ಸಂಬಂಧ ಇರಲ್ಲ. ಆದರೂ ಅವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಅವರು ಆ ತೊಂದರೆಗೆ ಸಿಕ್ಕಿದ್ದು ಹೇಗೆ ಅನ್ನೋದನ್ನೇ ಸಿನಿಮಾದಲ್ಲಿ ತೋರಿಸುತ್ತೇವೆ ಎಂದಿದ್ದಾರೆ ಕೃಷ್ಣ.

  ಹಾಗಂತ ಇದು ಬೇರೆ ಜಾನರ್ ಸ್ಟೋರಿಯೂ ಅಲ್ಲ. ಲವ್‌ ಸ್ಟೋರಿ ಆದರೂ ಕಮರ್ಷಿಯಲ್‌ ಎಂಟರ್‌ಟೇನರ್‌.  ಪಕ್ಕಾ ಕಮರ್ಷಿಯಲ್‌ ಸಿನಿಮಾ. ಅಂಬರೀಷ್ ಹುಟ್ಟುಹಬ್ಬದ ದಿನ ಸಿನಿಮಾ ಘೋಷಣೆ ಮಾಡುತ್ತೇವೆ ಎಂದಿದ್ದಾರೆ ಕೃಷ್ಣ. ಕೊಳ್ಳೇಗಾಲ,  ಮಹದೇಶ್ವರ ಬೆಟ್ಟದ ಜಾನಪದ ಸಂಸ್ಕೃತಿಯನ್ನು ಸಂಗೀತದಲ್ಲಿ ಬಳಸಿಕೊಳ್ಳಲು ನಿರ್ದೇಶಕರು ಯೋಚಿಸಿದ್ದಾರೆ. ಸೋಲಿಗರ ಪದ, ಮಂಟೆಸ್ವಾಮಿ ಪದಗಳೂ ಚಿತ್ರದಲ್ಲಿ ಬರಲಿವೆ.  ಅಭಿಷೇಕ್ ಹಳ್ಳಿ ಹುಡುಗನಾಗಿರುತ್ತಾರೆ. ಕಾಲೇಜಿಗೆ ಹೋಗುವ ರೈತರ ಮಗ. ಬ್ಯಾಡ್ ಮ್ಯಾನರ್ಸ್ ಶೂಟಿಂಗ್ ಮುಗಿದ ನಂತರ ಕಾಳಿ ಶೂಟಿಂಗ್ ಶುರುವಾಗಲಿದೆ.

 • ಚಾನ್ಸೇ ಇಲ್ಲ.. ಹೀರೋ ತರಾ ಅಲ್ಲ.. ಹೀರೋನೇ..

  abishek ambareesh's mega mass entry

  ಇವನ್ಯಾರ್ ಗುರು.. ಒಳ್ಳೆ ಹೀರೋ ತರಾ ಪೋಸ್ ಕೊಡ್ತಾವ್ನೆ.. ಅಂತಾನೆ ವಿಲನ್ನು.ಹೀರೋ ತರಾನೇ.. ಚಾನ್ಸೇ ಇಲ್ಲ.. ಹೀರೋನೇ ಅಂತಾ ಅಬ್ಬರಿಸ್ತಾನೆ ಹೀರೋ. ಹೀಗೆ ಅಬ್ಬರಿಸುತ್ತಲೇ ಎಂಟ್ರಿ ಕೊಟ್ಟಿದ್ದಾರೆ ಯಂಗ್ ರೆಬಲ್ ಸ್ಟಾರ್  ಅಭಿಷೇಕ್ ಅಂಬರೀಷ್. ಅಮರ್ ಚಿತ್ರದ ಟೀಸರ್‍ನ ಹೈಲೈಟ್ ಇದು.

  ಗೆಳೆಯನ ಅಗಲಿಕೆಯ ನೋವನ್ನು ತಮ್ಮದೇ ಮಾತುಗಳಲ್ಲಿ ಹೇಳಿಕೊಂಡಿರುವ ನಿರ್ಮಾಪಕ ಸಂದೇಶ್ ನಾಗರಾಜ್, ಇಡೀ ಚಿತ್ರವನ್ನೇ ಅಂಬಿಗೆ ಅರ್ಪಿಸಿದ್ದಾರೆ. ಟೀಸರ್‍ನಲ್ಲಿ ಅಬ್ಬರಿಸಿ ಬೊಬ್ಬರಿಯುವುದು ಅಭಿಷೇಕ್ ಅಂಬರೀಷ್. ಬೈಕ್ ಸ್ಟಂಟ್ ಅಬ್ಬಾ ಎನಿಸುತ್ತೆ. 

  ಒನ್ಸ್ ಎಗೇಯ್ನ್.. ಈ ಹೊಸ ಹೀರೋನನ್ನು ಟೀಸರ್‍ನಲ್ಲಿ ಪರಿಚಯಿಸೋದು.. ಚಿಕ್ಕಣ್ಣ. 

  ನಿರ್ದೇಶಕ ನಾಗಶೇಖರ್, ಟೀಸರ್‍ನಲ್ಲಿಯೇ ಹಬ್ಬದೂಟದ ಸುಳಿವು ಕೊಟ್ಟಿದ್ದಾರೆ. ಅಭಿಷೇಕ್ ಟೀಸರ್‍ಗೆ ಸ್ಯಾಂಡಲ್‍ವುಡ್‍ನ ಬಹುತೇಕ ಎಲ್ಲ ಸ್ಟಾರ್‍ಗಳೂ ಮೆಚ್ಚುಗೆ ಸೂಚಿಸಿದ್ದಾರೆ. ಹೊಸ ಹೀರೋಗೆ ಸ್ವಾಗತ ಕೊರಿದ್ದಾರೆ.

 • ದರ್ಶನ್.. ಅಭಿಷೇಕ್ ಅಂಬರೀಶ್ ಅಣ್ಣ..!

  darshan acts as aboshek's brother in amar

  ಅಂಬರೀಶ್ ಪುತ್ರ ಅಭಿಷೇಕ್ ಗ್ರ್ಯಾಂಡ್ ಎಂಟ್ರಿ ಕೊಡುತ್ತಿರುವ  ಅಮರ್ ಚಿತ್ರದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ದರ್ಶನ್, ಅಭಿಷೇಕ್‍ಗೆ ಅಣ್ಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದರ್ಶನ್ ಚಿತ್ರದಲ್ಲಿ ಮಲ್ಟಿಮಿಲಿಯನೇರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆತ್ಮವಿಶ್ವಾಸ ಕಳೆದುಕೊಂಡಿರುವ ಅಭಿಷೇಕ್‍ಗೆ ಜೀವನೋತ್ಸಾಹ ತುಂಬುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ದರ್ಶನ್ ಅತಿಥಿ ನಟನಾಗಿ ಕಾಣಿಸಿಕೊಳ್ಳುವುದು ಅಪರೂಪ. ಅರಸು ಚಿತ್ರದಲ್ಲಿ ಪುನೀತ್ ಗೆಳೆಯನಾಗಿ ಕಾಣಿಸಿಕೊಂಡಿದ್ದ ದರ್ಶನ್, ನಂತರ ಚೌಕ ಚಿತ್ರದಲ್ಲಿ ರಾಬರ್ಟ್ ಆಗಿ ನಟಿಸಿದ್ದರು. ಪ್ರಜ್ವಲ್ ದೇವರಾಜ್ ಅವರ ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿರುವ ದರ್ಶನ್, ಅಮರ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿಯೇ ನಟಿಸಲಿದ್ದಾರೆ. 

  ಅಂಬರೀಶ್ ಮೇಲಿನ ಪ್ರೀತಿಗೆ ದರ್ಶನ್ ನೀಡಿರುವ ಗೌರವ ಇದು. ಸಿನಿಮಾ ಶುರುವಾದಾಗಲೇ ಚಿತ್ರರಂಗದ ಹಲವರು ಚಿತ್ರದಲ್ಲಿ ಗೆಸ್ಟ್ ರೋಲ್‍ನಲ್ಲಿ ನಟಿಸಿ ಪ್ರೋತ್ಸಾಹಿಸುವ ಮಾತನ್ನಾಡಿದ್ದರು. ದರ್ಶನ್ ಪ್ರೀತಿಗೆ ನಾನು ಋಣಿ ಎಂದಿದ್ದಾರೆ ನಿರ್ಮಾಪಕ ಸಂದೇಶ್ ನಾಗರಾಜ್. 

 • ನಾನೂ ಅತ್ತರೆ ಅಪ್ಪ ಬೈತಾರೆ - ಅಭಿಷೇಕ್ ಅಂಬರೀಷ್

  abhishek ambareesh steals fans hearts again

  ನಾನು ಅಳ್ತಾ ಇಲ್ಲ. ನಾನು ಅಳೋದಿಲ್ಲ. ನಾನೇನಾದರೂ ಅತ್ತರೆ.. ಮೇಲಿರೋ ಅಪ್ಪ ನನಗೆ ಬೈತಾರೆ. ಅಭಿಷೇಕ್ ಅಂಬರೀಷ್ ಆ ಮಾತು ಹೇಳುವಾಗ, ಅಂಬಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರೂ ಭಾವುಕರಾಗಿದ್ದರು. ಫಿಲಂ ಚೇಂಬರ್ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅಭಿಷೇಕ್, ತಂದೆಯೊಂದಿಗೆ ಕಳೆದ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

  `ನಾನು ಚಿಕ್ಕ ಹುಡುಗನಾಗಿದ್ದಾಗ ಸಿಂಗಾಪುರ್‍ಗೆ ಹೋಗಿದ್ವಿ. ಅಪ್ಪನಿಗೆ ಗೆಳೆಯರ ಬಳಗವಿತ್ತು. ರೂಮ್‍ನಲ್ಲಿ ಅಪ್ಪ ಗೆಳೆಯರೊಂದಿಗೆ ಇರುತ್ತಿದ್ದರು. ಅಮ್ಮನಿಗೆ ಹೊರಗೆ ಓಡಾಡುವ ಆಸೆ. ಒಂದು ದಿನ ಬೆಳಗ್ಗೆ ಶಾಪಿಂಗ್‍ಗೆ ಹೋಗುತ್ತಿದ್ದೇನೆ, ಬೇಗ ಬರುತ್ತೇನೆ ಎಂದು ಟಿವಿ ಮೇಲೆ ಪೇಪರ್ ಅಂಟಿಸಿಟ್ಟು ಹೋಗಿಬಿಟ್ಟರು. ಎದ್ದು ನೋಡಿದಾಗ ಅಮ್ಮ ಇಲ್ಲ. ಅಪ್ಪನೂ ನೋಡ್ತಿದ್ದಾರೆ. ನನಗೋ ಹೆದರಿಕೆ. ಅಳೋಕೆ ಶುರು ಮಾಡಿದೆ.

  ಅಪ್ಪ ಏನು ಅಂದ್ರು. ಟಾಯ್ಲೆಟ್‍ಗೆ ಹೋಗಬೇಕು ಅಂದೆ. ಅದು ನನ್ನನ್ನು ಅಪ್ಪ ಮೊದಲಿಗೆ ಹಾಗೆಲ್ಲ ನೋಡಿಕೊಂಡ ದಿನ. ಆಯ್ತು. ಸ್ವಲ್ಪ ಹೊತ್ತಿಗೆ ಮತ್ತೆ ಅಳೋಕೆ ಶುರು ಮಾಡಿದೆ. ಏನು ಅಂದ್ರು. ಹಲ್ಲುಜ್ಜಬೇಕು ಅಂದೆ. ಹಲ್ಲುಜ್ಜಿಸಿದ್ರು. ಅದಾದ ಸ್ವಲ್ಪ ಹೊತ್ತಿಗೆ ಮತ್ತೆ ಅಳೋಕೆ ಶುರು ಮಾಡ್ದೆ. ಏನು ಅಂದ್ರು. ಕಿರುಬೆರಳು ಎತ್ತಿ ತೋರಿಸಿದೆ. ಟಾಯ್ಲೆಟ್ ಮೇಲೆ ನಿಲ್ಲಿಸಿ, ಏನಾದರೂ ಮಾಡ್ಕೋ ಅಂದ್ರು. 

  ಅಷ್ಟೆಲ್ಲ ಆಗುವ ಹೊತ್ತಿಗೆ ಅಮ್ಮ ಬಂದ್ರು. ಇವನನ್ನ ನನ್ನ ಜೊತೆ ಬಿಟ್ಟು ಎಲ್ಲಿ ಹೋಗಿದ್ದೆ ಅಂತಾ ಅಮ್ಮನ ಮೇಲೆ ರೇಗಿದ್ರು...'' ಹೀಗೆ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು ಅಭಿ.

 • ಪ್ರೇಮಿಗಳ ದಿನಕ್ಕೆ ಅಭಿಷೇಕ್ ಅಂಬರೀಷ್ ಚಿತ್ರದ ಟೀಸರ್

  abishek ambareesh's amar teaser out

  ಅಭಿಷೇಕ್ ಅಂಬರೀಷ್ ಪಾದಾರ್ಪಣೆ ಮಾಡುತ್ತಿರುವ ಸಿನಿಮಾ ಅಮರ್. ಚಿತ್ರದ ಚಿತ್ರೀಕರಣ ಶುರುವಾಗಿದೆ. ಅಂತಿಮ ಹಂತದಲ್ಲಿದೆ. ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ತುಸು ವಿಳಂಬವಾಗಿದ್ದು ಬಿಟ್ಟರೆ, ಚಿತ್ರದ ಮೇಕಿಂಗ್ ಬಿರುಸಾಗಿ ನಡೆಯುತ್ತಿದೆ. ಈಗ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತವಿಟ್ಟಿದ್ದಾರೆ ಚಿತ್ರದ ನಿರ್ದೇಶಕ ನಾಗಶೇಖರ್.

  ಪ್ರೇಮಿಗಳ ದಿನಕ್ಕೆ ಅಮರ್ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ತಾನ್ಯಾಹೋಪ್ ಚಿತ್ರದ ನಾಯಕಿ. ಚಿತ್ರದ ಹಾಡುಗಳ ಚಿತ್ರೀಕರಣಕ್ಕೆ ಫಾರಿನ್ ಲೊಕೇಷನ್‍ಗಳನ್ನು ನೋಡಿಕೊಂಡು ಬಂದಿರೋ ಚಿತ್ರತಂಡ, ಶೀಘ್ರದಲ್ಲೇ ವಿದೇಶಕ್ಕೆ ತೆರಳಲಿದೆ.