ನೀನೇ ಮೊದಲು ನೀನೇ ಕೊನೆ.. ಹಾಡಿನ ಮೂಲಕ ಯುವಕರ ಎದೆಗೆ ಲಗ್ಗೆಯಿಟ್ಟ ಚೆಲುವೆ ಶ್ರೀಲೀಲಾ. ಕಿಸ್ ಮತ್ತು ಭರಾಟೆ ಚಿತ್ರಗಳಲ್ಲಿ ಗಮನ ಸೆಳೆದಿದ್ದ ಶ್ರೀಲೀಲಾ ಮೇಲೆ ಟಾಲಿವುಡ್ ಕಣ್ಣು ಬಿದ್ದಿದೆ. ಶ್ರೀಕಾಂತ್ ಪುತ್ರನ ಪೆಳ್ಳಿ ಸಂದಡಿ ಚಿತ್ರದ ಬೆನ್ನಲ್ಲೇ, ಮಾಸ್ ಮಹಾರಾಜ ರವಿತೇಜ ಶ್ರೀಲೀಲಾ ಮೇಲೆಕಣ್ಣು ಹಾಕಿದ್ದಾರೆ.
ತೆಲುಗಿನಲ್ಲಿ ತ್ರಿನಂದ ರಾವ್ ಎಂಬುವವರು ನಿರ್ದೇಶಿಸುತ್ತಿರೋ ಆರ್‍ಟಿ68 (ಚಿತ್ರಕ್ಕಿನ್ನೂ ಟೈಟಲ್ ಸಿಕ್ಕಿಲ್ಲ) ಚಿತ್ರದಲ್ಲಿ ಶ್ರೀಲೀಲಾ ನಾಯಕಿ. ಅಫ್‍ಕೋರ್ಸ್.. ಇದೇ ಚಿತ್ರದಲ್ಲಿ ಐಶ್ವರ್ಯಾ ಮೆನನ್ ಎಂಬ ಇನ್ನೊಬ್ಬ ನಾಯಕಿಯೂ ಇದ್ದಾರೆ.
ಈಗಾಗಲೇ ಕನ್ನಡದ ರಶ್ಮಿಕಾ ಮಂದಣ್ಣ ಮತ್ತು ನಭಾ ನಟೇಶ್ ಕನ್ನಡ ಚಿತ್ರಗಳಿಗೆ ಸಿಗದಷ್ಟು ದೂರ ಹೋಗಿದ್ದಾಗಿದೆ. ಮುಂದಿನ ಸರದಿ ಶ್ರೀಲೀಲಾ ಅವರದ್ದಾ. ಗೊತ್ತಿಲ್ಲ. ಸದ್ಯಕ್ಕೆ ಕನ್ನಡದಲ್ಲಿ ಶ್ರೀಲೀಲಾ ಧ್ರುವ ಸರ್ಜಾ ಜೊತೆ ದುಬಾರಿ ಹಾಗೂ ಧನ್ವೀರ್ ಜೊತೆ ಬೈಟು ಲವ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.