` anannya, - chitraloka.com | Kannada Movie News, Reviews | Image

anannya,

  • ಗಿರೀಶ್ ಕಾಸರವಳ್ಳಿ ಪುತ್ರಿ ಮದುವೆ

    marriage celevrations at kasaravalli's house

    ವಿಶ್ವಖ್ಯಾತಿಯ ಕನ್ನಡಿಗ, ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಈಗ ಮಗಳ ಮದುವೆಗೆ ರೆಡಿಯಾಗಿದ್ದಾರೆ. ಚಿತ್ರ ನಿರ್ದೇಶಕಿಯೂ ಆಗಿರುವ ಅನನ್ಯ ಕಾಸರವಳ್ಳಿ ಅವರ ಮದುವೆ ಇದೇ ಫೆಬ್ರವರಿ 22ರಂದು ನಡೆಯಲಿದೆ. ಎಂ.ಎಸ್.ಸಂತೋಷ್ ಅವರೊಂದಿಗೆ ಅನನ್ಯ ಕಾಸರವಳ್ಳಿ ಮದುವೆಗೆ ಮುಹೂರ್ತ ನಿಗದಿಯಾಗಿದೆ.

    ಲಗ್ನಪತ್ರಿಕೆಯಲ್ಲಿ ಪತ್ನಿ ವೈಶಾಲಿ ಕಾಸರವಳ್ಳಿಯವರ ಆಶೀರ್ವಾದದೊಂದಿಗೆ ಎಂದೇ ನಮೂದಿಸಿರುವ ಗಿರೀಶ್ ಕಾಸರವಳ್ಳಿ, ಮಗಳಿಗೆ ತಾಯಿಯ ಆಶೀರ್ವಾದವೇ ದೊಡ್ಡದು ಎಂಬ ಸಂದೇಶವನ್ನೂ ಕೊಟ್ಟಿದ್ದಾರೆ. ಕಿರುಚಿತ್ರ ಮತ್ತು ಸಿನಿಮಾ ನಿರ್ದೇಶನದಲ್ಲೂ ಹೆಸರು ಮಾಡಿರುವ ಅನನ್ಯ ಕಾಸರವಳ್ಳಿ, ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಶುಭವಾಗಲಿ.

  • ಟೆರರಿಸ್ಟ್ ಆಡಿಯೋಗೆ ಅನನ್ಯ ಸ್ಪರ್ಶ

    the terrorist sng

    ದಿ ಟೆರರಿಸ್ಟ್. ರಾಗಿಣಿ ದ್ವಿವೇದಿ ಅಭಿನಯದ ಸಿನಿಮಾ. ಪಿ.ಸಿ.ಶೇಖರ್ ನಿರ್ಮಾಣ ಮತ್ತು ನಿರ್ದೇಶನದ ದಿ ಟೆರರಿಸ್ಟ್ ಚಿತ್ರದ ಟ್ರೈಲರ್ ಕುತೂಹಲ ಹುಟ್ಟಿಸಿದೆ. ಇದರ ಜೊತೆಯಲ್ಲೇ ಈಗ ಚಿತ್ರದ ಲಿರಿಕಲ್ ಆಡಿಯೋ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ಸಿನಿಮಾದ ಸುರಿಯೋ ಕಣ್ಣೀರ ಒಮ್ಮೆ ನೋಡಿ ಹೋಗೋ.. ಹಾಡಿನ ಲಿರಿಕಲ್ ವಿಡಿಯೋ ಸೆ.21ಕ್ಕೆ ಬಿಡುಗಡೆಯಾಗುತ್ತಿದೆ. ಆ ಲಿರಿಕಲ್ ವಿಡಿಯೋಗೆ ಅನನ್ಯ ಸ್ಪರ್ಶ ನೀಡಿದ್ದಾರೆ ನಿರ್ದೇಶಕ ಪಿ.ಸಿ.ಶೇಖರ್.

    ಲಿರಿಕಲ್ ವಿಡಿಯೋ ಸಾಂಗ್‍ನಲ್ಲಿ ಗಾಯಕಿ ಅನನ್ಯ ಭಟ್ ಅವರನ್ನೇ ತೋರಿಸಲಿದ್ದಾರಂತೆ. ಬಾಲಿವುಡ್‍ನಲ್ಲಷ್ಟೇ ಈ ರೀತಿ ಗಾಯಕಿಯ ಮೇಲೆ ಹಾಡು ಸೃಷ್ಟಿಸುವ ಟ್ರೆಂಡ್ ಇತ್ತು. ಈ ಮೂಲಕ ಇದು ಕನ್ನಡಕ್ಕೂ ಕಾಲಿಡುತ್ತಿದೆ. 

    ಗಾಯಕಿ ಅನನ್ಯ ಭಟ್ ಅವರೊಂದಿಗೆ ಸಂಗೀತ ನಿರ್ದೇಶಕ ಪ್ರದೀಪ್ ವರ್ಮಾ, ಹಾಡಿಗೆ ಸಾಹಿತ್ಯ ಬರೆದ ಮಹೇಶ್ ರಾಜ್ ಅವರನ್ನೂ ಹಾಡಿನಲ್ಲಿ ತೋರಿಸಲಾಗುತ್ತಿದೆ. ತೆರೆಯ ಹಿಂದೆ ಕೆಲಸ ಮಾಡಿದ ತಂತ್ರಜ್ಞರನ್ನೂ ಗುರುತಿಸಬೇಕು ಎನ್ನುವ ಪಿ.ಸಿ.ಶೇಖರ್, ಈ ಹಾಡಿನಲ್ಲಿ ಆ ಪ್ರಯೋಗಕ್ಕೆ ಕೈ ಹಾಕಿದ್ದಾರೆ.

Matthe Udbhava Trailer Launch Gallery

Maya Bazaar Pressmeet Gallery