ಜನಪದ ಗೀತೆ, ವಚನ, ಭಾವಗೀತೆ, ಟಪ್ಪಾಂಗುಚ್ಚಿ ಸಾಂಗುಗಳ ಮೂಲಕ ಸದ್ದು ಮಾಡುತ್ತಿದ್ದ ಪಡ್ಡೆಹುಲಿ, ಈಗ ಡಬ್ಬಿಂಗ್ ರೈಟ್ಸ್ನಲ್ಲಿ ಗರ್ಜಿಸಿಯೇಬಿಟ್ಟಿದೆ. ಕೆ.ಮಂಜು ಪುತ್ರ ಶ್ರೇಯಸ್ನ ಮೊತ್ತಮೊದಲ ಸಿನಿಮಾ ಪಡ್ಡೆಹುಲಿ ಚಿತ್ರದ ರೀಮೇಕ್ ರೈಟ್ಸ್ ಬರೋಬ್ಬರಿ 2.36ಕೋಟಿಗೆ ಸೇಲ್ ಆಗಿದೆ. ಚೆನ್ನೈನ ಎಸ್ಪಿಎಂ ಆಟ್ರ್ಸ್ ಎಲ್ಎಲ್ಬಿ ಸಂಸ್ಥೆ ಪಡ್ಡೆಹುಲಿ ರೈಟ್ಸ್ ಖರೀದಿಸಿದೆ.
ಹೊಸಬನ ಚಿತ್ರವೊಂದಕ್ಕೆ ಇಷ್ಟು ಪ್ರಮಾಣದ ಡಬ್ಬಿಂಗ್ ರೈಟ್ಸ್ ಸಿಕ್ಕಿರುವುದೂ ಕೂಡಾ ಒಂದು ದಾಖಲೆ. ಶ್ರೇಯಸ್ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ನಟಿಸಿದ್ದಾರೆ. ರಮೇಶ್ ರೆಡ್ಡಿ ನುಂಗ್ಲಿ ನಿರ್ಮಾಣದ ಚಿತ್ರಕ್ಕೆ ಗುರುದೇಶಪಾಂಡೆ ನಿರ್ದೇಶಕ. ರವಿಚಂದ್ರನ್, ಸುಧಾರಾಣಿ ಪ್ರಮುಖ ಪಾತ್ರದಲ್ಲಿದ್ದರೆ, ರಕ್ಷಿತ್ ಶೆಟ್ಟಿ ಅತಿಥಿ ನಟರಾಗಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 19ರಂದು ಚಿತ್ರ ತೆರೆಗೆ ಬರುತ್ತಿದೆ.