` suniel shetty, - chitraloka.com | Kannada Movie News, Reviews | Image

suniel shetty,

  • 2500 ಸ್ಕ್ರೀನ್.. ಇದು ಪೈಲ್ವಾನನ ಅಖಾಡ

    pailwan film will release in 2500 screens

    ಪ್ರೇಕ್ಷಕರ ಅಖಾಡಕ್ಕೆ ಧುಮುಕಲು ಸಿದ್ಧನಾಗಿರೋ ಪೈಲ್ವಾನ್, ಅಖಾಡಕ್ಕಿಳಿಯುತ್ತಿರೋದು ಆಗಸ್ಟ್ 8ಕ್ಕೆ. ವರಮಹಾಲಕ್ಷ್ಮಿ ಹಬ್ಬಕ್ಕೆ. ಆ ದಿನ ಪೈಲ್ವಾನ್ ಹೊಸ ದಾಖಲೆ ಬರೆಯಲಿದ್ದಾರೆ. 2500ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಅಬ್ಬರಿಸಲಿದ್ದಾನೆ.

    ಸುದೀಪ್ ಈ ಚಿತ್ರಕ್ಕಾಗಿ ಹರಿಸಿರುವ ಬೆವರು ಸ್ವಲ್ಪ ಮಟ್ಟದಲ್ಲ. ಸುದೀಪ್ ಇಡೀ ಚಿತ್ರಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಕೃಷ್ಣ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ.

    ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ ಪೈಲ್ವಾನ್. ಸುನಿಲ್ ಶೆಟ್ಟಿ ಇನ್ನೊಂದು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಆಕಾಂಕ್ಷಾ ಸಿಂಗ್ ಚಿತ್ರದ ನಾಯಕಿ. 

  • 3000+ ಥಿಯೇಟರುಗಳಲ್ಲಿ ಪೈಲ್ವಾನ್

    pailwan to release in 3000 plus theaters

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ರಿಲೀಸ್ ಆಗುತ್ತಿರುವುದು ಸೆಪ್ಟೆಂಬರ್ 12ಕ್ಕೆ. ಟ್ರೇಲರ್, ಹಾಡು ರಿಲೀಸ್ ಆಗಿದ್ದು ದೊಡ್ಡ ಹವಾ ಎಬ್ಬಿಸಿದೆ. ಹೆಬ್ಬುಲಿ ಕೃಷ್ಣ ನಿರ್ದೇಶನದ ಚಿತ್ರಕ್ಕೆ ಹಂಚಿಕೆದಾರರಿಂದಲೇ ಡಿಮ್ಯಾಂಡ್ ಬಂದಿದೆ. ಅದರಲ್ಲೂ ಹಿಂದಿ ಭಾಷೆಯ ಥಿಯೇಟರ್ ಮಾಲೀಕರು ಸ್ವತಃ ಪೈಲ್ವಾನ್ ಚಿತ್ರವನ್ನು ನಮಗೆ ಕೊಡಿ ಎಂದು ಕೇಳುತ್ತಿದ್ದಾರೆ. 

    ಉತ್ತರ ಭಾರತದಲ್ಲಿಯೇ 1500ಕ್ಕೂ ಹೆಚ್ಚು ಥಿಯೇಟರ್ಸ್, ಆಂಧ್ರದಲ್ಲಿ 300+, ತಮಿಳಿನಲ್ಲಿ 200+, ಕೇರಳದಲ್ಲಿ 100+ ಥಿಯೇಟರುಗಳಲ್ಲಿ ಪೈಲ್ವಾನ್ ರಿಲೀಸ್ ಆಗಲಿದೆ. ಜಗತ್ತಿನಾದ್ಯಂತ ಒಂದೇ ದಿನ 3000ಕ್ಕೂ ಹೆಚ್ಚು ಸೆಂಟರುಗಳಲ್ಲಿ ಸಿನಿಮಾ ರಿಲೀಸ್ ಮಾಡಲಿದ್ದೇವೆ ಎಂದಿದ್ದಾರೆ ನಿರ್ದೇಶಕ ಕೃಷ್ಣ.

    ಕನ್ನಡದಲ್ಲಿ ಕೆಆರ್‍ಜಿ ಸ್ಟುಡಿಯೋ, ತೆಲುಗಿನಲ್ಲಿ ವಾರಾಹಿ, ತಮಿಳಿನಲ್ಲಿ ವೈಎನ್‍ಓಟಿಎಕ್ಸ್ ಮಾರ್ಕೆಟಿಂಗ್ & ಡಿಸ್ಟ್ರಿಬ್ಯೂಷನ್, ಮಲಯಾಳಂನಲ್ಲಿ ಪಲ್ಲವಿ ರಿಲೀಸ್, ಹಿಂದಿಯಲ್ಲಿ ಜೀ ಸ್ಟುಡಿಯೋಸ್ ಸಿನಿಮಾ ವಿತರಣೆ ಹಕ್ಕು ಪಡೆದುಕೊಂಡಿವೆ.

    ಸುದೀಪ್ ಜೊತೆ ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ಪ್ರಧಾನ ಪಾತ್ರದಲ್ಲಿದ್ದು, ಸ್ವಪ್ನಾ ಕೃಷ್ಣ ಈ ಚಿತ್ರದ ಮೂಲಕ ಮೊದಲ ಬಾರಿಗೆ ಸಿನಿಮಾ ನಿರ್ಮಾಪಕಿಯಾಗಿದ್ದಾರೆ.

  • Advance booking for Pailwaan From Sunday 

    pailwan advance booking from sunday

    Advance bookings for Pailwaan starts on Sunday. The Kichcha Sudeep starrer Krishna directed film is releasing in five languages across the world on September 12. The film as reported earlier is releasing in nearly 50 countries including in Africa and across Europe, apart from Asia, North America and Australia. Owing to the tremendous demand for the film across languages, the advance booking starts a week in advance. 

    The film is also being promoted individually in different languages leading to different bookings in online platforms. The film will release in multiple languages in different centres. The Kannada version is releasing not only in Karnataka but across India and in the maximum number of foreign countries. The highest release in terms of locations will be in Hindi. It is releasing in nearly 2000 screens across the world. The Telugu version is also releasing in over two dozen countries. The Tamil version is releasing in some unknown territories for Kannada films including Sri Lanka. For the first time a Kannada film is releasing in five African countries simultaneously.

  • Pailwaan Review: Chitraloka Rating 4/5

    pailwan movie review

    He simply rocks as Pailwaan, and he is namma very own Abhinaya Chakravarthy and the Badshah of Sandalwood- Kichcha Sudeepa. Tagged with the powerful Kichcha, S Krishna has delivered a thundering knockout punch on his debut as a director, and producing it along with his better half Swapna Krishna makes this blistering experience even more special.

    Pailwaan, which is released in multiple languages including Kannada, has undoubtedly witnessed to one of the biggest openings in recent times in the history of Kannada film industry.

    Coming back to Pailwaan, it's a perfect action thriller presented with the right amount of sensible and meaningful emotions to it. That's not all, it is packed with all the essential for a commercial entertainment too. The story is straight and simple which is another crucial factor for why it appeals to not just Kichcha fans but the general audience who seeks for a complete two plus hours of pure meaningful entertainment.

    Kichcha shines without an iota of doubt and all his hard work to get into the soul of the character of a pailwaan, a desi fighter has paid off. The biggest surprise of all is his transformation to fit into the role of a professional boxer in the second half. More than the physical changes, the emotional shift and the thinking of a true wrestler is the real and reel winner for the actor.

    Insofar as the supporting cast, it is Bollywood actor Suneil Shetty, who makes his debut in Kannada with this one which adds greater value to the script by not limiting his talent to couple of scenes as a guest actor but is seen in major chunks of Pailwaan. That apart, Aakanksha Singh who also makes her debut too, leaves a pretty impression and stands out as a cute lover and then as a supporting wife and a mother.

    The rest is more or less about the fight. The motto of a real wrestler fighter is to fight for a noble cause, and this what Pailwaan stands for. The making and everything else with respect to the technical aspects are of top notch which makes it one of the best from cinematographer turned director Krishna.

    Pailwaan is worth every penny, and deserves appreciation for sheer hard work and dedication. Go watch the extravaganza at a theatre near you, as this match is won already.

  • Pailwan Kannada Version Censored U/A

    pailwan censored u/a

    Tha Kannada version of kiccha Sudeep's most anticipated movie Pailwan has been censored U/A without any cuts. The movie will be released on september 12th.

    Phailwan' stars Sudeep, Akanksha Singh, Kabir Singh Duhan, Chikkanna, Sunil Shetty and others. The film is being produced by Swapna Krishna and written and directed by S Krishna. Karunakar is the cameraman, while Arjun Janya is the music director.

  • ಇಂದು ಪೈಲ್ವಾನ್ ಟ್ರೇಲರ್ ಹಬ್ಬ

    pailwan trailer festival today

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 22ರಂದು ಸಿನಿಮಾದ ಟ್ರೇಲರ್ ಹೊರ ಬರುತ್ತಿದೆ. ಇಂದು ಪೈಲ್ವಾನ್ ಹಬ್ಬ ಎನ್ನುವುದು ಫಿಕ್ಸ್ ಆಗಿದೆ. 

    ಕಿಚ್ಚ ಸುದೀಪ್, ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ಅಭಿನಯದ ಪೈಲ್ವಾನ್ನಲ್ಲಿ ಸುದೀಪ್, ಕುಸ್ತಿ ಪಟುವಾಗಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಸಿಕ್ಸ್ಪ್ಯಾಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಹಿಟ್ ಆಗಿವೆ. ಕೃಷ್ಣ ನಿರ್ದೇಶನದ ಚಿತ್ರಕ್ಕೆ, ಸ್ವಪ್ನಾ ಕೃಷ್ಣ ನಿರ್ಮಾಪಕ.

    ಒಟ್ಟು 5 ಭಾಷೆಗಳಲ್ಲಿ ಪೈಲ್ವಾನ್ ತೆರೆ ಕಾಣುತ್ತಿದೆ. ಎಲ್ಲ ಭಾಷೆಗಳಲ್ಲಿಯೂ, ಜಗತ್ತಿನಾದ್ಯಂತ ಸಿನಿಮಾ ಸೆಪ್ಟೆಂಬರ್ 12ರಂದು ರಿಲೀಸ್ ಆಗಲಿದೆ. ಮೊನ್ನೆ ಮೊನ್ನೆ ತಾನೇ ಸೈರಾ ನರಸಿಂಹ ರೆಡ್ಡಿ ಟೀಸರ್ ರಿಲೀಸ್ ಆಗಿದ್ದು, ಇನ್ನು ಕಿಚ್ಚನ ಹಬ್ಬ ಶುರುವಾಗಲಿದೆ.

  • ಏನು ಮಾಡಲಿ ಹೊಡೀತು ಕಿಚ್ಚನ ಕಣ್ಣು..

    pailwan dance number completed

    ಏನು ಮಾಡಲಿ ಹೊಡೀತು ಕಣ್ಣು.. ಎಂದು ಕಿಚ್ಚ ಹಾಡಿ ಕುಣಿಯುತ್ತಿದ್ದರೆ, ಕಣ್ಣು ಹೊಡೆಸಿಕೊಂಡ ಹುಡುಗಿ ಆಕಾಂಕ್ಷಾ ಸಿಂಗ್ ಕಣ್ಣು ಇರೋದೇ ಹೊಡೆಯೋಕೆ ಎಂಬಂತೆ ಹೆಜ್ಜೆ ಹಾಕಿದ್ದಾರೆ. ಇದು ಪೈಲ್ವಾನ್ ಚಿತ್ರದ ಐಟಂ ನಂಬರ್ ಪೆಪ್ಪಿ ನಂಬರ್ ಹಾಡು. ಮುಂಬೈನಲ್ಲಿ ಶೂಟಿಂಗ್ ಮುಗಿದಿದೆ.

    ಬಾಲಿವುಡ್ ಸ್ಟಾರ್ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ, ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ. ಕೃಷ್ಣ ನಿರ್ದೇಶನದ ಸಿನಿಮಾದಲ್ಲಿ ಕುಸ್ತಿ ಮತ್ತು ಬಾಕ್ಸಿಂಗ್ ಎರಡೂ ಆಟದ ಕಥೆಯಿದೆ.

  • ಕಣ್ಮಣಿಗೆ ಕಣ್ಣು ಹೊಡೆದದ್ದು ನೋಡಿದ್ರಾ..

    sudeep akansha's romantic number creates sensation

    ಪೈಲ್ವಾನ್ ಚಿತ್ರದ ಕಣ್ಮಣಿಯೇ.. ಕಣ್ಣು ಹೊಡೆಯೇ.. ಹಾಡಿನ ಟೀಸರ್ ಹೊರಬಂದಿದೆ. ಇದು ಬಾಲಿವುಡ್ ಸ್ಟೈಲ್. ಬಾಲಿವುಡ್‍ನಲ್ಲಿ ಹಾಡಿನ ಲಿರಿಕಲ್ ವಿಡಿಯೋ ಬಿಟ್ಟ ನಂತರ ಹಾಡಿನ ಸಣ್ಣ ತುಣುಕಿನ ಟೀಸರ್ ಹೊರತರುತ್ತಾರೆ. ಅದೇ ಹೆಜ್ಜೆಯಲ್ಲಿ ಮುಂದುವರೆದಿದೆ ಪೈಲ್ವಾನ್ ಟೀಂ.

    ಕಿಚ್ಚ ಸುದೀಪ್ ಇಲ್ಲಿ ಕಣ್ಣು ಹೊಡೆಯೋದು ಆಕಾಂಕ್ಷಾ ಸಿಂಗ್ ಅವರಿಗೆ. ಹಾಡಿನ ಮೇಕಿಂಗ್ ಅದ್ಧೂರಿಯಾಗಿದೆ ಅನ್ನೋದಕ್ಕೆ ಸಾಕ್ಷಿ ಟೀಸರ್. ಅರ್ಜುನ್ ಜನ್ಯಾ ಸಂಗೀತದಲ್ಲಿ ಸಂಚಿತ್ ಹೆಗ್ಡೆ ಹಾಡಿರುವ ಹಾಡು ಮಜಬೂತಾಗಿದೆ.

    ಸ್ವಪ್ನಾ ಕೃಷ್ಣ ನಿರ್ಮಾಣದ ಪೈಲ್ವಾನ್‍ಗೆ ಕೃಷ್ಣ ನಿರ್ದೇಶಕ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ ಪೈಲ್ವಾನ್.

  • ಕಪಿಲ್ ಶರ್ಮಾ ಶೋನಲ್ಲಿ ಪೈಲ್ವಾನ್

    sudeep in kapil sharma show

    ಸೆಪ್ಟೆಂಬರ್ 12ರಂದು ಕಿಚ್ಚ ಸುದೀಪ್ ಪೈಲ್ವಾನ್ ರಿಲೀಸ್ ಆಗುತ್ತಿದೆ. ಚಿತ್ರದ ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿರುವ ಸುದೀಪ್, ಹಿಂದಿ ಪೈಲ್ವಾನ್ ಪ್ರಚಾರಕ್ಕಾಗಿ ಮುಂಬೈನಲ್ಲಿದ್ದಾರೆ. ಹಿಂದಿಯ ಸೂಪರ್ ಹಿಟ್ ಶೋ ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    ಕಪಿಲ್ ಶರ್ಮಾ ಶೋನಲ್ಲಿ ಸುದೀಪ್ ಭಾಗವಹಿಸುತ್ತಿರುವುದು ಇದು 2ನೇ ಸಲ. ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಜೊತೆ ಕಪಿಲ್ ಶೋನಲ್ಲಿ ಭಾಗಿಯಾಗಿ ಸಿನಿಮಾ ಪ್ರಚಾರ ಮಾಡಿದ್ದಾರೆ.

    ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ನಟಿಸಿರುವ ಚಿತ್ರಕ್ಕೆ ಕೃಷ್ಣ ನಿರ್ದೇಶಕರಾದರೆ, ಸ್ವಪ್ನಾ ಕೃಷ್ಣ ನಿರ್ಮಾಪಕಿ. 

  • ನಾನಿದ್ದೇನೆ.. ನಾನಿರುತ್ತೇನೆ.. - ಕಿಚ್ಚನ ಆ ಮಾತೇ ಪೈಲ್ವಾನ್ ನಿರ್ಮಾಪಕಿಯ ತಾಕತ್ತು

    sudeep is the ultimate power who stood with us says swapna krishna

    ಪೈಲ್ವಾನ್, ಕನ್ನಡದ ಅದ್ದೂರಿ ಸಿನಿಮಾ. ಮುಂದಿನ ವಾರ ಪ್ರಪಂಚದಾದ್ಯಂತ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ ಇದು. ಅದ್ದೂರಿ ಸಿನಿಮಾ.. ಅದ್ದೂರಿ ಬಜೆಟ್.. ಅದ್ದೂರಿ ತಾರಾಗಣ. ಚಿತ್ರಕ್ಕೆ ನಿರ್ಮಾಪಕಿ ಸ್ವಪ್ನಾ ಕೃಷ್ಣ. ನಿರ್ದೇಶಕ ಕೃಷ್ಣ.

    ಇಂಥಾದ್ದೊಂದು ದುಬಾರಿ ಬಜೆಟ್‍ನ ಚಿತ್ರಕ್ಕೆ ನಿರ್ಮಾಪಕಿಯಾಗುವ ಧೈರ್ಯ ಮಾಡಿದ್ದು ಹೇಗೆ..? ಎಂಬ ಪ್ರಶ್ನೆಯನ್ನು ಸ್ವಪ್ನಾ ಮುಂದಿಟ್ಟರೆ ಅವರ ಕೊಡುವ ಉತ್ತರ `ಸುದೀಪ್'.

    ನಿರ್ದೇಶಕ ಕೃಷ್ಣ, ಪೈಲ್ವಾನ್ ಕಥೆಯನ್ನು ಸುದೀಪ್ ಅವರಿಗೆ ಹೇಳಿದಾಗ ಮೊದಲು ಇದು ನನಗಲ್ಲ ಎಂದು ವಾಪಸ್ ಕಳಿಸಿದ್ದ ಸುದೀಪ್, ಮತ್ತೆ ಕೃಷ್ಣ ಅವರನ್ನು ಕರೆಸಿಕೊಂಡರಂತೆ. ಸ್ವಪ್ನಾ ಅವರು ಕೂಡಾ ಪತಿಯ ಜೊತೆಗಿದ್ದರು.

    `ಈ ಸಿನಿಮಾವನ್ನು ನಾನು ಮಾಡುತ್ತೇನೆ. ಆದರೆ, ಚಿತ್ರದಲ್ಲಿ ದೇಹಪ್ರದರ್ಶನದ ದೃಶ್ಯಗಳ ಚಿತ್ರೀಕರಣವನ್ನು ಕೊನೆಯಲ್ಲಿಟ್ಟುಕೊಳ್ಳಬೇಕು. ಅಷ್ಟು ಹೊತ್ತಿಗೆ ನಾನು ತಯಾರಾಗಿರುತ್ತೇನೆ' ಎಂದರಂತೆ ಸುದೀಪ್. ಓಕೆ ಎಂದ ನಂತರ ಸುದೀಪ್ ಹಾಕಿದ 2ನೇ ಕಂಡೀಷನ್ ನೀವೇ ಪ್ರೊಡ್ಯೂಸ್ ಮಾಡಬೇಕು ಅನ್ನೋದು.

    ಏನು ಮಾಡೋದು ಎಂಬ ಗೊಂದಲದಲ್ಲಿದ್ದ ಸ್ವಪ್ನಾ ಕೃಷ್ಣ ತಾವೂ ಒಂದು ಷರತ್ತು ಹಾಕಿದರು. ಜೊತೆಯಲ್ಲಿರುತ್ತೇನೆ ಎಂಬ ಧೈರ್ಯ ನೀಡಿದರೆ ರೆಡಿ ಎಂದರು. ನಾನಿದ್ದೇನೆ ಅನ್ನೋ ಮಾತು ಕೊಟ್ಟರು ಸುದೀಪ್. ಅದರಂತೆಯೇ ನಡೆದುಕೊಂಡರು ಕೂಡಾ.

    ಈಗ ಪೈಲ್ವಾನ್ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿ ನಿಂತಿದೆ. ಚಿತ್ರದ ಪ್ರತಿ ಹಂತದಲ್ಲೂ ಸುದೀಪ್ ಬೆನ್ನೆಲುಬಾಗಿದ್ದಾರೆ. ಅವರು ನೀಡಿದ ಧೈರ್ಯವೇ ಇಷ್ಟು ದೊಡ್ಡ ಚಿತ್ರಕ್ಕೆ ನಿರ್ಮಾಪಕಿಯಾಗಲು ಪ್ರೇರಣೆ ಎಂದಿದ್ದಾರೆ ಸ್ವಪ್ನಾ ಕೃಷ್ಣ.

    ಸ್ವಪ್ನಾ ಕೃಷ್ಣ ಅವರಿಗೆ ನಿರ್ಮಾಣ ಹೊಸದೇನಲ್ಲ. ಅವರ್ ಆರ್‍ಆರ್‍ಆರ್ ಪ್ರೊಡಕ್ಷನ್ಸ್‍ನಲ್ಲಿ ಸೀರಿಯಲ್ ನಿರ್ಮಾಣ ಮಾಡಿದ ಅನುಭವ ಇದೆ. ನಟಿಯಾಗಿದ್ದ ಅವರಿಗೆ ಸಿನಿಮಾ ಕೂಡಾ ಹೊಸದಲ್ಲ. ಆದರೆ ಇಷ್ಟು ದೊಡ್ಡ ಕ್ಯಾನ್‍ವಾಸ್‍ನ ಪೈಲ್ವಾನ್ ಹೊಸದು. ಸುದೀಪ್ ಜೊತೆಗಿದ್ದ ಕಾರಣ ಎಲ್ಲವೂ ಸಲೀಸಾಯ್ತು ಎನ್ನುತ್ತಾರೆ ಸ್ವಪ್ನಾ.

  • ಪೈರಸಿಯಿಂದ ಪೈಲ್ವಾನ್ ಕಳೆದುಕೊಂಡಿದ್ದು 5 ಕೋಟಿಗೂ ಹೆಚ್ಚು..!

    pailwan looses more than 5 crores

    ಪೈಲ್ವಾನ್ ಚಿತ್ರ 100 ಕೋಟಿ ಕ್ಲಬ್ ಸೇರಿತಾ..? ಅಷ್ಟೊಂದು ಭರ್ಜರಿ ಪ್ರದರ್ಶನ ಕಾಣುತ್ತಿರೋ ಚಿತ್ರ ಈವರೆಗೆ ಗಳಿಸಿರೋ ಹಣ ಎಷ್ಟು..? ಹೀಗೆ ಪ್ರೇಕ್ಷಕರದ್ದು ಹತ್ತಾರು ಪ್ರಶ್ನೆ. ಪೈಲ್ವಾನ್ ನಿರ್ಮಾಪಕರು ಸೇಫ್ ಹಂತ ದಾಟಿ, ಲಾಭ ನೋಡುತ್ತಿದ್ದಾರೆ. ಒಂದು ಮೂಲದ ಪ್ರಕಾರ ಚಿತ್ರದ ಗಳಿಕೆ 85 ಕೋಟಿ ದಾಟಿದೆ. ಆದರೆ ಅಧಿಕೃತವಾಗಿ ಹೇಳಿಕೊಳ್ಳುತ್ತಿಲ್ಲ. ಇದು ಒಂದು ವಿಷಯವಾದರೆ, ಪೈರಸಿಯಿಂದಾಗಿ ಚಿತ್ರತಂಡ ಕಳೆದುಕೊಂಡಿರೋದು 5 ಕೋಟಿಗೂ ಹೆಚ್ಚು ಎನ್ನುವ ಸುದ್ದಿ ಬಹಿರಂಗವಾಗಿದೆ.

    ಒಬ್ಬ ಆರೋಪಿಯನ್ನು ಅರೆಸ್ಟ್ ಮಾಡಲಾಗಿದ್ದು, ಇನ್ನೂ ಹಲವು ಕ್ರಿಮಿನಲ್‍ಗಳ ಹುಡುಕಾಟ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಏನು ಮಾಡಿದರೂ ಗೊತ್ತಾಗಲ್ಲ ಎಂದುಕೊಂಡಿದ್ದವರನ್ನು ಸುಮ್ಮನೆ ಬಿಡಲ್ಲ ಎಂದು ಸುದೀಪ್ ಗುಡುಗಿರುವುದಷ್ಟೇ ಅಲ್ಲ, ಸೀರಿಯಸ್ಸಾಗಿ ಹೆಜ್ಜೆಯಿಟ್ಟಿದ್ದಾರೆ.

    ಪ್ರತಿದಿನವೂ 100ಕ್ಕೂ ಹೆಚ್ಚು ಪೈರಟ್ ಸಿನಿಮಾ ಲಿಂಕ್ ಡಿಲೀಟ್ ಮಾಡುತ್ತಿರುವ ಚಿತ್ರತಂಡ, ಪೈರಸಿಯಿಂದಾಗಿಯೇ ಕಳೆದುಕೊಂಡಿರುವ ಮೊತ್ತ 5 ಕೋಟಿಗೂ ಹೆಚ್ಚು. ಇದರಿಂದಾಗಿ ಕೋಟಿ ಕೋಟಿ ಸುರಿದು ಸಿನಿಮಾ ನಿರ್ಮಿಸಿದ ನಿರ್ಮಾಪಕರಿಗೆ ಬರಬೇಕಾದ ಹಣ, ಎಲ್ಲೋ ಕತ್ತಲಲ್ಲಿ ಕುಳಿತು ಕದ್ದು ಸಿನಿಮಾ ಮಾಡಿದವನಿಗೆ ಹೋಗುತ್ತಿದೆ. ಇದುವರೆಗೆ ಹೆಚ್ಚೂ ಕಡಿಮೆ 1 ಸಾವಿರ ಪೈರಸಿ ಲಿಂಕ್ ಡಿಲೀಟ್ ಮಾಡಲಾಗಿದೆ.

  • ಪೈಲ್ವಾನ ಟ್ರೇಲರ್ ಪ್ರತಾಪ

    pailwan trailer creates sensation

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಟ್ರೇಲರ್ ಹೊರಬಿದ್ದಿದೆ. ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ನಟಿಸಿರುವ ಚಿತ್ರಕ್ಕೆ ಗಜಕೇಸರಿ ಕೃಷ್ಣ ಅಲಿಯಾಸ್ ಹೆಬ್ಬುಲಿ ಕೃಷ್ಣ ಅಲಿಯಾಸ್ ಪೈಲ್ವಾನ್ ಕೃಷ್ಣ ನಿರ್ದೇಶಕ. ನಿರ್ಮಾಪಕಿ ಸ್ವಪ್ನಾ ಕೃಷ್ಣ. ಚಿತ್ರದ ಟ್ರೇಲರ್ ದೊಡ್ಡ ಹವಾ ಎಬ್ಬಿಸಿದೆ.

    ಬಲ ಇದೆ ಅಂತಾ ಹೊಡೆದಾಡೋನು ರೌಡಿ, ಬಲವಾದ ಕಾರಣಕ್ಕೆ ಹೊಡೆದಾಡೋದು ಯೋಧ ನಮ್ಮ ಕಿಚ್ಚ ಕಣಕ್ಕಿಳಿದ ಅಂದ್ರೆ ಸಿಂಹ ಸಾರ್ ಸಿಂಹ ನಾನು ಗೆಲ್ತೀನೋ.. ಇಲ್ವೋ ಗೊತ್ತಿಲ್ಲ. ಆದರೆ ಸೋಲನ್ನ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲ್ಲ ಟ್ರೇಲರ್‍ನಲ್ಲಿರೋ ಡೈಲಾಗ್‍ಗಳ ಸ್ಯಾಂಪಲ್ ಇವು. ಶಿಳ್ಳೆ ಹೊಡೆಯುವಂತಿವೆ. 

    ಸೆಪ್ಟೆಂಬರ್ 12ಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು, ಶರತ್ ಲೋಹಿತಾಶ್ವ, ಕಬೀರ್ ದುಹಾನ್ ಸಿಂಗ್, ಸುಶಾಂತ್ ಸಿಂಗ್ ಚಿತ್ರದ ಇನ್ನಿತರ ಪಾತ್ರಗಳಲ್ಲಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ.

  • ಪೈಲ್ವಾನ್ ಜೊತೆ ಸುನಿಲ್ ಶೆಟ್ಟಿ

    suniel shetty joins phailwaan team

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ನಟಿಸುತ್ತಿದ್ದಾರೆ ಎನ್ನುವುದು ಗೊತ್ತಿಲ್ಲದ ವಿಷಯವೇನೂ ಅಲ್ಲ. ಹೆಬ್ಬುಲಿ ಕೃಷ್ಣ ನಿರ್ದೇಶನದ ಪೈಲ್ವಾನ್ ಚಿತ್ರದ ಚಿತ್ರೀಕರಣಕ್ಕೆ ಈಗ ಸುನಿಲ್ ಶೆಟ್ಟಿ ಬಂದಿದ್ದಾರೆ.

    ಸುನಿಲ್ ಶೆಟ್ಟಿ, ಪೈಲ್ವಾನ್ ಸಿನಿಮಾಗೆ 30 ದಿನಗಳ ಕಾಲ್‍ಷೀಟ್ ಕೊಟ್ಟಿದ್ದಾರೆ. ಬುಧವಾರದಿಂದ ಚಿತ್ರೀಕರಣಲ್ಲಿ ಪಾಲ್ಗೊಂಡಿದ್ದಾರೆ. ಹೈದರಾಬಾದ್ ಮತ್ತು ಬೆಂಗಳೂರು, ಎರಡೂ ಕಡೆ ಚಿತ್ರೀಕರಣ ನಡೆಯಲಿದೆ. ಸುದೀಪ್‍ಗೆ ಜೋಡಿಯಾಗಿ ನಟಿಸುತ್ತಿರುವುದು ಆಕಾಂಕ್ಷಾ ಸಿಂಗ್.

    ಸುದೀಪ್ ಮತ್ತು ಸುನಿಲ್ ಶೆಟ್ಟಿ ನಡುವಣ ಗೆಳೆತನವೇ ಕಾಲ್‍ಷೀಟ್ ಸಿಗೋಕೆ ಕಾರಣ. ಸುದೀಪ್ ಬಾಲಿವುಡ್‍ಗೆ ಹೋಗುವ ಮೊದಲಿನಿಂದಲೂ, ಅವರಿಗೆ ಸುನಿಲ್ ಶೆಟ್ಟಿ ಜೊತೆ ಗೆಳೆತನ ಇತ್ತು. ಅವರು ಖುಷಿಯಾಗಿ ಒಪ್ಪಿಕೊಂಡು, ಚಿತ್ರೀಕರಣಕ್ಕೂ ಬಂದಿದ್ದಾರೆ ಎಂದು ಖುಷಿ ಹಂಚಿಕೊಂಡಿದ್ದಾರೆ ನಿರ್ದೇಶಕ ಕೃಷ್ಣ.

  • ಪೈಲ್ವಾನ್ ಫ್ಯಾನ್ಸ್ ಅಬ್ಬರಕ್ಕೆ ಥಿಯೇಟರೇ ನಾಪತ್ತೆ..!

    pailwan movie craze, flex and hoardings cover theaters

    ಕಿಚ್ಚ ಸುದೀಪ್ ಬಾಕ್ಸರ್ ಮತ್ತು ಕುಸ್ತಿ ಪಟುವಾಗಿ ನಟಿಸಿರುವ ಪೈಲ್ವಾನ್ ರಿಲೀಸ್ ಆಗುತ್ತಿದೆ. ಅದೂ 5 ಭಾಷೆಗಳಲ್ಲಿ.. 4000ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ. ಸುದೀರ್ಘ ಗ್ಯಾಪ್ ನಂತರ ಬರುತ್ತಿರುವುದಕ್ಕೋ ಏನೋ.. ಅಭಿಮಾನಿಗಳ ಉತ್ಸಾಹ ಈ ಬಾರಿ ಮೇರೆ ಮೀರಿದೆ. ಸಂಭ್ರಮಕ್ಕೆ ಎಣೆಯೂ ಇಲ್ಲ.. ಮಿತಿಯೂ ಇಲ್ಲ.

    ರಾಜ್ಯದ ಹಲವು ಥಿಯೇಟರುಗಳಲ್ಲಿ ಅಭಿಮಾನಿಗಳು ವಾರಕ್ಕೆ ಮೊದಲೇ ಅಲಂಕಾರ ಆರಂಭಿಸಿದ್ದಾರೆ. ಕಟೌಟು, ಬ್ಯಾನರು, ಹಾರ, ಪೋಸ್ಟರು ಹಾಕಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಹಲವು ಥಿಯೇಟರುಗಳಲ್ಲಿ ಥಿಯೇಟರುಗಳ ಬೋರ್ಡು ಕೂಡಾ ಕಾಣುತ್ತಿಲ್ಲ. ಇದು ಥಿಯೇಟರ್ ಎಂದು ಗೊತ್ತಾಗುವುದು ಅದನ್ನು ಮುಚ್ಚಿರುವ ಪೋಸ್ಟರ್‍ಗಳಿಂದಲೇ.  ಕೃಷ್ಣ ನಿರ್ದೇಶನದ ಚಿತ್ರ ಪೈಲ್ವಾನ್ ಹಬ್ಬವಾಗುತ್ತಿದೆ.

  • ಮುಚ್ಚಿದ್ದ ಥಿಯೇಟರ್ ಓಪನ್ ಮಾಡಿಸಿದ ಪೈಲ್ವಾನ್..!

    pailwan brings good news to kannada film industry

    ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಹಲವು ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಥಿಯೇಟರ್ ಜಾಗ ಮಾಲ್ಗಳಾಗಿವೆ. ಮಲ್ಟಿಪ್ಲೆಕ್ಸುಗಳಾಗಿವೆ. ಅತ್ತ ಗ್ರಾಮೀಣ ಪ್ರದೇಶಕ್ಕೆ ಹೋದರೆ.. ಅಲ್ಲಿ ಇನ್ನೊಂದು ಸಮಸ್ಯೆ. ಕೆಲವು ಚಿತ್ರಮಂದಿರಗಳು ಬೇರೇನೂ ಮಾಡಲು ಸಾಧ್ಯವಾಗದೆ ಬಾಗಿಲು ಮುಚ್ಚುತ್ತಿವೆ. ಗಡಿ ಭಾಗದಲ್ಲಿ ಕನ್ನಡ ಚಿತ್ರಗಳಿಗೆ ಥಿಯೇಟರುಗಳೇ ಸಿಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಗೂ ಪೈಲ್ವಾನ್ ಉತ್ತರ ಕೊಟ್ಟಿದೆ.

    ಗ್ರಾಮೀಣ ಭಾಗದಲ್ಲಿ ಮುಚ್ಚಲ್ಪಟ್ಟಿದ್ದ ಕೆಲವು ಚಿತ್ರಮಂದಿರಗಳು ಪೈಲ್ವಾನ್ ಚಿತ್ರಕ್ಕಾಗಿ ರೀ-ಓಪನ್ ಆಗಿವೆ. ಈ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ ವಿತರಕ ಕಾರ್ತಿಕ್ ಗೌಡ. ಹೈದರಾಬಾದ್ ಕರ್ನಾಟಕ, ಕೋಲಾರದಲ್ಲಿ ಕೆಲವು ಚಿತ್ರಮಂದಿರಗಳು ಪೈಲ್ವಾನನಿಗಾಗಿ ಮತ್ತೆ ಬಾಗಿಲು ತೆರೆದಿವೆ. ಅದರಲ್ಲೂ ಗ್ರಾಮೀಣ ಪ್ರದೇಶಧ ‘ಸಿ' ಸೆಂಟರ್ ಟಾಕೀಸುಗಳು ಮತ್ತೆ ಪ್ರದರ್ಶನ ಆರಂಭಿಸಿವೆ.

    ಪೈಲ್ವಾನ್ ಮಾದರಿಯ ಇನ್ನೂ ಹಲವು ಚಿತ್ರಮಂದಿರಗಳು ಬಂದರೆ ಚಿತ್ರರಂಗಕ್ಕೆ ಖಂಡಿತಾ ಶುಭ ಸೂಚನೆಯಾಗಲಿದೆ. ಪೈಲ್ವಾನ್ 5 ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಿದ್ದು, 3000ಕ್ಕೂ ಹೆಚ್ಚು ಸೆಂಟರ್ನಲ್ಲಿ ಶೋ ಇವೆ. ಸ್ವಪ್ನಾ ಕೃಷ್ಣ ನಿರ್ಮಾಣದ ಪೈಲ್ವಾನ್ಗೆ ಹೆಬ್ಬುಲಿ ಕೃಷ್ಣ ನಿರ್ದೇಶಕ.

  • ಮೊದಲ ದಿನವೇ 10 ಕೋಟಿ ಕ್ಲಬ್ ಸೇರಿದ ಪೈಲ್ವಾನ್

    pailwan joins 10 crore club on first day itself

    5 ಭಾಷೆಗಳಲ್ಲಿ ರಿಲೀಸ್ ಆಗಿ ಎಲ್ಲೆಡೆಯಿಂದ ಮೆಚ್ಚುಗೆ ಸ್ವೀಕರಿಸುತ್ತಿರುವ ಸಿನಿಮಾ ಪೈಲ್ವಾನ್. ಕ್ಲಾಸ್ ಮತ್ತು ಮಾಸ್.. ಎರಡೂ ವರ್ಗದ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಏಕಕಾಲಕ್ಕೆ ಶಹಬ್ಬಾಸ್ ಎನಿಸಿಕೊಂಡಿರುವ ಪೈಲ್ವಾನ್ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. 10 ಕೋಟಿ ಕ್ಲಬ್ ಸೇರಿದೆ.

    ಇದು ಕನ್ನಡದ ಮಟ್ಟಿಗೆ ದಾಖಲೆಯೇ ಸರಿ. ಆದರೆ, ಮೊದಲ ದಿನದ ಅತೀ ಹೆಚ್ಚು ಕಲೆಕ್ಷನ್ ದಾಖಲೆ ಈಗಲೂ ಸುದೀಪ್-ಶಿವಣ್ಣ ನಟಿಸಿದ್ದ ದಿ ವಿಲನ್ ಚಿತ್ರದ ಹೆಸರಲ್ಲಿಯೇ ಇದೆ. ಅದು ಫಸ್ಟ್ ಡೇ 20 ಕೋಟಿ ಕಲೆಕ್ಷನ್ ಮಾಡಿತ್ತು.

    ಕಲೆಕ್ಷನ್ ಭರ್ಜರಿಯಾಗಿ ಆಗಿದೆ ಎನ್ನುವುದು ಸತ್ಯ. ಆದರೆ ಎಷ್ಟು ಎನ್ನುವುದನ್ನು ಈಗಲೇ ಹೇಳುವುದು ಸಾಧ್ಯವಿಲ್ಲ. ಪಕ್ಕಾ ಲೆಕ್ಕ ಸಿಗೋಕೆ ಇನ್ನೂ ಟೈಂ ಬೇಕು. ಎಲ್ಲ ಭಾಷೆಗಳಲ್ಲೂ ಪಾಸಿಟಿವ್ ರಿಯಾಕ್ಷನ್ ಸಿಕ್ಕಿದೆ. ಒಂದು ವಾರ ಹೀಗೆಯೇ ಕಂಟಿನ್ಯೂ ಆದರೆ, ಹಾಕಿದ ಬಂಡವಾಳ ನಮ್ಮ ಕೈ ಸೇರಲಿದೆ ಎಂದಿದ್ದಾರೆ ನಿರ್ದೇಶಕ ಕೃಷ್ಣ. ಚಿತ್ರಕ್ಕೆ ಅವರ ಪತ್ನಿ ಸ್ವಪ್ನಾ ಕೃಷ್ಣ ಅವರೇ ನಿರ್ಮಾಪಕಿ.

    ಅಂದಹಾಗೆ ಪೈಲ್ವಾನ್ ಚಿತ್ರಕ್ಕೆ ಸುಮಾರು 45 ಕೋಟಿ ಖರ್ಚಾಗಿದೆಯಂತೆ.

     

  • ರಿಲೀಸ್ ದಿನವೇ ದಾಖಲೆ ಬರೆಯಲಿದ್ದಾನೆ ಪೈಲ್ವಾನ್

    pailwan all set to write a record on release day

    ಸೆಪ್ಟೆಂಬರ್ 12ರಂದು ರಿಲೀಸ್ ಆಗುತ್ತಿರುವ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್, ರಿಲೀಸ್ ದಿನವೇ ಹೊಸ ದಾಖಲೆ ಬರೆಯಲಿದೆ. 3000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿರುವ ಪೈಲ್ವಾನ್, ಅತೀ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾ ಎಂಬ ದಾಖಲೆಗೆ ಪಾತ್ರವಾಗಲಿದೆ. ಸದ್ಯಕ್ಕೆ ಈ ದಾಖಲೆ ಕೆಜಿಎಫ್ ಹೆಸರಿನಲ್ಲಿದೆ.

    ಹಿಂದಿಯಲ್ಲಿ ಝೀ ಸ್ಟುಡಿಯೋಸ್ ವಿತರಣೆ ಮಾಡುತ್ತಿದ್ದು, 3000ಕ್ಕೂ ಹೆಚ್ಚು ಸ್ಕ್ರೀನ್ ಕೊಡುತ್ತಿದೆ. ತೆಲುಗು ಮತ್ತು ತಮಿಳಿನಲ್ಲಿವಾರಾಹಿ ಚಲನಚಿತ್ರಂ ಮತ್ತು ವೈನಾಟ್ ಸ್ಟುಡಿಯೋ ವಿತರಣೆ ಹಕ್ಕು ಪಡೆದುಕೊಂಡಿವೆ. ಮಲಯಾಳಂನಲ್ಲಿ ಪಲ್ಲವಿ ಸ್ಟುಡಿಯೋಸ್ ಡಿಸ್ಟ್ರಿಬ್ಯೂಟ್ ಮಾಡುತ್ತಿದೆ.

    ಕನ್ನಡದಲ್ಲಿ ಕೆಆರ್‍ಜಿ ಸ್ಟುಡಿಯೋಸ್ ಮೂಲಕ ಕಾರ್ತಿಕ್ ಗೌಡ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಚಿತ್ರ ಸೆಟ್ಟೇರಿದ ದಿನವೇ ವಿತರಣೆ ಹಕ್ಕಿಗೆ ಬುಕ್ಕಿಂಗ್ ಮಾಡಿದ್ದ ಕಾರ್ತಿಕ್ ಗೌಡ ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ರಿಲೀಸ್ ಮಾಡಲು ಸಿದ್ಧತೆ ನಡೆಸಿದ್ದಾರೆ.

    ಸುದೀಪ್, ಆಕಾಂಕ್ಷಾ ಸಿಂಗ್, ಸುನಿಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ ಮೊದಲಾದವರು ನಟಿಸಿರುವ ಚಿತ್ರಕ್ಕೆ ಕೃಷ್ಣ ನಿರ್ದೇಶಕರಾದರೆ, ಸ್ವಪ್ನಾ ಕೃಷ್ಣ ನಿರ್ಮಾಪಕಿ.

  • ಸುನಿಲ್ ಶೆಟ್ಟಿಯ ತುಳು ಪ್ರೇಮ

    suniel shetty appreciates tulu film industry

    ಬಾಲಿವುಡ್ ನಟ ಸುನಿಲ್ ಶೆಟ್ಟಿ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಬಂದಿದ್ದಾರೆ. ಪೈಲ್ವಾನ್ ಮೂಲಕ. ಪೈಲ್ವಾನ್ ಕಿಚ್ಚನ ಗುರುವಿನ ಪಾತ್ರದಲ್ಲಿ ಖಡಕ್ ಆಗಿ ಮಿಂಚಿದ್ದಾರೆ ಸುನಿಲ್ ಶೆಟ್ಟಿ. ಈ ಚಿತ್ರವನ್ನು ಒಪ್ಪಿಕೊಳ್ಳೋಕೆ ಮೊದಲನೆ ಕಾರಣ ಸುದೀಪ್, 2ನೇ ಕಾರಣ ಕಥೆ ಮತ್ತು ಮೂರನೇ ಕಾರಣ ನಿರ್ದೇಶಕ ಕೃಷ್ಣ ಎಂದಿದ್ದಾರೆ ಸುನಿಲ್ ಶೆಟ್ಟಿ.

    ಕೃಷ್ಣ ಅವರಿಗೆ ನನಗೆ ಕನ್ನಡ ಬರಲ್ಲ, ತುಳು ಬರುತ್ತೆ ಎನ್ನುವುದು ಗೊತ್ತಿತ್ತು. ಅದನ್ನು ತುಂಬಾ ಚೆನ್ನಾಗಿ ಮ್ಯಾನೇಜ್ ಮಾಡಿದರು ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇತ್ತೀಚೆಗೆ ತುಳು ಚಿತ್ರರಂಗ ಒಳ್ಳೆಯ ಬೆಳವಣಿಗೆ ಕಾಣುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಸುನಿಲ್ ಶೆಟ್ಟಿ.