` ammana mane, - chitraloka.com | Kannada Movie News, Reviews | Image

ammana mane,

 • `ಎಲ್ಲರಿಗೂ ಅಮ್ಮನ ಮನೆ ಸಿನಿಮಾ ಮಾತ್ರ. ನನಗೆ ದೇವರ ಪ್ರಸಾದ'

  ragahavendra rajkumar considers ammana mane is god;s gift

  ಅಮ್ಮನ ಮನೆ. ರಾಘವೇಂದ್ರ ರಾಜ್‍ಕುಮಾರ್ 14 ವರ್ಷಗಳ ನಂತರ ನಟಿಸಿರುವ ಸಿನಿಮಾ. ಪಕ್ಕದ್ಮನೆ ಹುಡುಗಿ ಚಿತ್ರದ ನಂತರ ರಾಘಣ್ಣ ಅಭಿನಯದ ಮೊದಲ ಸಿನಿಮಾ ಅಮ್ಮನ ಮನೆ. ಉಳಿದವರಿಗೆ ಅದು ಸಿನಿಮಾ ಮತ್ತು ಸಿನಿಮಾ ಮಾತ್ರ. ಆದರೆ ನನಗೆ ಅದು ದೇವರ ಪ್ರಸಾದ.. ಹೀಗೆಂದು ಹೇಳಿಕೊಂಡಿರೋದು ರಾಘವೇಂದ್ರ ರಾಜ್‍ಕುಮಾರ್.

  ಸ್ಟ್ರೋಕ್ ಹೊಡೆದು ಮನೆಯಲ್ಲಿದ್ದ, ಇನ್ನು ಮುಂದೆ ಬಣ್ಣ ಹಚ್ಚೋಕೆ ಸಾಧ್ಯವೇ ಇಲ್ಲ ಎನ್ನುವಂತಹ ಸ್ಥಿತಿಯಲ್ಲಿದ್ದ ರಾಘವೇಂದ್ರ ರಾಜ್‍ಕುಮಾರ್‍ಗೆ ನಿಖಿಲ್ ಮಂಜು ಚಿತ್ರದ ಕಥೆ ಹೇಳಿದಾಗ ರೋಮಾಂಚನವಾಯಿತಂತೆ. ಕಾರಣ ಇಷ್ಟೆ, ತಾವು ತಮ್ಮ ತಾಯಿಗೆ ಏನೇನೆಲ್ಲ ಸೇವೆ ಮಾಡಿದ್ದರೋ, ಅದೆಲ್ಲವೂ ಚಿತ್ರದಲ್ಲಿದ್ದವು.

  ಅಮ್ಮ ನನಗಾಗಿ ಏನೇನೆಲ್ಲ ಮಾಡಿದ್ದರೂ, ಅವೂ ಚಿತ್ರದಲ್ಲಿದ್ದವು. ಹೀಗೆ.. ನನಗೆ ನನ್ನ ಅಮ್ಮ ಮತ್ತೆ ಸಿಕ್ಕರು. ಹೀಗಾಗಿಯೇ ಇದು ನನಗೆ ದೇವರ ಪ್ರಸಾದ ಎಂದಿದ್ದಾರೆ ರಾಘಣ್ಣ.

 • 'Ammana Mane' On March 8th

  ammana mane on march 8th

  Raghavendra Rajakumar's comeback film 'Ammana Mane' which was launched on the actor's birthday is all set to release across Karnataka on the 08th of March.

  The film is scripted and directed by Nikhil Manjoo. Atmasri and R S Kumar have produced the film under Srilalithe Chitralaya. Apart from Raghavendra Rajakumar, Nikhil Manjoo, Suchendra Prasad and others play prominent roles in the film.

  Sameer Kulakarni is the music director, while PVR Swamy is the cinematographer.

 • Ammana Mane Review: Chitraloka Rating 4*/5

  ammana mane movie review

  This one is special for several reasons and it could not have been any better for Raghavendra Rajkumar to return to silver screen after a gap of 14 years. Nikhil Manjoo has created one of the best lead characters in the recent times which elevates the experience of watching a meaningful movie. Further, it also fits perfectly for a talented artist to perform at his best along with his present real life condition.

  As the title suggests, it has all the real emotions packed in it with some great performances led by Raghavendra Rajkumar as Rajeeva. Though it does not come with the usual entertaining elements, Ammana Mane is for everyone who seek for a meaningful tale with real good substance in it.

  The manner in which the director has etched the character of Raghavendra Rajkumar deserves appreciation, and it is best felt watching the performance. He has turned his present physical condition as his greatest strength which lives with a purpose all through the movie.

  It revolves around Rajeeva, a physically challenged person who is abandoned by his father as child. But, it is the mother who brings him up against all odds. The grown up Rajeeva has a work and lives a normal life with his family comprising of mother, wife and a daughter.

  In between, he faces another challenge and fights legally against the system for the sake of his daughter's education. The greatest strength of this modestly made film is the simple but hard hitting narration along with some good performances. 

  While he wins one challenge, he is faced with another in his own family when his aged mother suffers with a similar condition to his. A definite special treat for all those who love meaningful films with natural performances, and especially to watch Raghavendra Rajkumar who makes a solid comeback in a valid film by Nikhil Manjoo.

   

 • Ammana Mane teaser by Puneeth on Jan 12

  ammanna mane teaser by puneeth rajkumar

  The comeback film of Raghavendra Rajkumar, Ammana Mane, is all set for a grand release in theaters this month. Puneeth Rajkumar has jumped in to promote the film. He will release the teaser of the film on January 12 at 4 pm.

  The film directed by Nikhil Manju had created a sensation when it was announced with a very unique look for Raghavendra Rajkumar. Rohini Nagesh is playing the role of Raghavendra Rajkumar's mother in the film. This is the actor's first film in 14 years..

  He had stayed away from acting in over a decade concentrating instead on production of films and grooming his son Vinay who made his debut in films in the meantime. 

 • Nikhil Manju's ‘Ammana Mane’ To Hit The Screens Soon

  ammana mane to hit screens tomorrow

  Modern day life has brought comfort to mankind, but it has certainly come with a cost. Running behind fame, name and money has been adversely affecting one of the most important pillars of life - relationships and most importantly the family bondage, which held us all together for ages.

  Director Nikhil Manju Lingaiah's 'Ammana Mane’ throws light on one such sensitive issue, which the present day generation is dearly neglecting. 

  “it is about relationships, and more about the special bond of a mother and a son. It is disheartening to witness the rise in number of old age homes, as many children are swaying away from their responsibilities. If earning to become rich by ignoring such duties and responsibilities is to be considered as an yardstick of happiness, even the rich remain to be unhappy,” the director says.

  Ammana Mane is about a physically and mentally challenged person, and how he strikes the right balance in life with his three mothers, the one who have given birth to him, his wife and the third being his daughter.

  Raghavendra Rajkumar, who returns to silver screen after a gap of 15 years plays the lead character of Rajeeva.

  “He (Raghavendra Rajkumar) was going through a tough phase in his personal life when we approached to play Rajeeva. When he heard it, he accepted it saying that it was none other than his mother who has sent him portray such a role,” Nikhil Manju adds.

  Theater artiste Rohini plays the Raghanna's mother role along with scores of others including Manasi, Sh

 • Raghavendra Rajakumar's 'Ammana Mane' launched

  raghavendra rajkumar;s ammana mane launched

  Raghavendra Rajakumar's comeback film 'Ammana Mane' was launched at the Kanteerava Studio in Bangalore on Wednesday evening.

  'Ammaa Mane' was launched today which is also Raghavendra Rajakumar's birthday. Shivarajakumar, Puneeth Rajakumar, Vinay Rajakumar, Guru Rajakumar and others were present at the launch and wished the team of 'Ammana Mane' a huge success.

  The film is scripted and directed by Nikhil Manjoo. Atmasri and R S Kumar are producing the film under Srilalithe Chitralaya. Sameer Kulakarni is the music director, while PVR Swamy is the cinematographer.

 • Singapore PM to watch 'Ammana Mane'

  prime minister of singapore to watch ammana mane

  Raghavendra Rajakumar's comeback film 'Ammana Mane' is all set to release across Karnataka on the 08th of March. Now the latest news is, the film will be released in Singapore and Prime Minister Lee Hsien Loong will be watching the film.

  Raghavendra Rajakumar was admitted in a Singapore Hospital few years ago. Many Kannadigas who are settled in Singapore met Raghavendra Rajakumar in hospital and wished him a speedy recovery. Now the Kannadigas who are settled in Singapore has organised a special show of the film and has invited Singapore Prime Minister for the screening.

  The film is scripted and directed by Nikhil Manjoo. Atmasri and R S Kumar have produced the film under Srilalithe Chitralaya. Apart from Raghavendra Rajakumar, Nikhil Manjoo, Suchendra Prasad and others play prominent roles in the film. Sameer Kulakarni is the music director, while PVR Swamy is the cinematographer.

 • ಅಪ್ಪನ ಅಂಗಿಯಲ್ಲಿ ಮತ್ತೊಮ್ಮೆ ಅಮ್ಮನ ಮನೆ ಜೋಡಿ

  ammana mane team will be soon back

  ಕಳೆದ ತಿಂಗಳು ಅಮ್ಮನ ಮನೆ ಸಿನಿಮಾ ತೆರೆ ಕಂಡಿತ್ತು. ಅದು ರಾಘಣ್ಣ 14 ವರ್ಷಗಳ ಮತ್ತೆ ತೆರೆಗೆ ಬಂದಿದ್ದ ಸಿನಿಮಾ. ನಿಖಿಲ್ ಮಂಜೂ ನಿರ್ದೇಶನದ ಸಿನಿಮಾ, ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಈಗ ಅದೇ ಜೋಡಿ ಮತ್ತೊಮ್ಮೆ ಒಂದಾಗಿದೆ. ಅಪ್ಪನ ಅಂಗಿಯಲ್ಲಿ.

  ತಂದೆಯೊಬ್ಬ ತನ್ನೆಲ್ಲ ಆಸೆ ಆಕಾಂಕ್ಷೆಗಳನ್ನು ಕುಟುಂಬಕ್ಕಾಗಿ ಮೀಸಲಿಟ್ಟಿರುತ್ತಾನೆ. ಅಪ್ಪನ ಅಂಗಿ ಎಂದರೆ ಬಟ್ಟೆಯಲ್ಲ.. ಅದು ಆತನ ತ್ಯಾಗದ ಕಥೆ ಎಂದಿದ್ದಾರೆ ನಿಖಿಲ್ ಮಂಜು.

  ಸುನಿಲ್ ನಿರ್ಮಾಣದ ಚಿತ್ರದಲ್ಲಿ ಬಹುತೇಕ ಅಮ್ಮನ ಮನೆ ಚಿತ್ರತಂಡವೇ ಇರಲಿದೆ. ಏಪ್ರಿಲ್ 24ರಂದು ಚಿತ್ರೀಕರಣ ಶುರುವಾಗುವ ನಿರೀಕ್ಷೆ ಇದೆ.

 • ಅಮ್ಮನ ಮನೆ ನೋಡ್ತಾರೆ ಸಿಂಗಾಪುರ್ ಪ್ರಧಾನಿ

  sinhapre cm to watch ammana mane

  ಅಮ್ಮನ ಮನೆ ಚಿತ್ರ, ಇದೇ ಮಾರ್ಚ್ 8ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಇದಕ್ಕೂ ಮುನ್ನ ಈ ಸಿನಿಮಾ ಸಿಂಗಾಪುರ್‍ನಲ್ಲಿ ರಿಲೀಸ್ ಆಗುತ್ತಿದೆ. ಅದಕ್ಕೆ ವಿಶೇಷ ಕಾರಣವೂ ಇದೆ. 6 ವರ್ಷಗಳ ಹಿಂದೆ ರಾಘವೇಂದ್ರ ರಾಜ್‍ಕುಮಾರ್, ಸಿಂಗಾಪುರ್‍ಗೆ ಹೋಗಿದ್ದರು. ಸ್ಟ್ರೋಕ್ ಹೊಡೆದು ಹಾಸಿಗೆ ಹಿಡಿದಿದ್ದ ರಾಘಣ್ಣನವರಿಗೆ ಸಿಂಗಾಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಗುಣಮುಖರಾಗಿ ಹಿಂದಿರುಗಿದ್ದ ರಾಘಣ್ಣ ಈಗ ಸಿನಿಮಾದಲ್ಲಿ ನಟಿಸಿದ್ದಾರೆ.

  ಇದು ಸ್ವತಃ ಸಿಂಗಾಪುರ್ ಪ್ರಧಾನಿಯವರಿಗೂ ಅಚ್ಚರಿ ಮೂಡಿಸಿದೆ. ಹೀಗಾಗಿಯೇ ರಿಲೀಸ್ ಆಗುತ್ತಿರುವ ಕನ್ನಡ ಚಿತ್ರವನ್ನು ನೋಡಲು ಬರುತ್ತಿದ್ದಾರಂತೆ ಸಿಂಗಾಪುರ್ ಪ್ರಧಾನಿ. ಒಬ್ಬ ಪೇಷೆಂಟ್ ಹೀರೋ ಆಗಿದ್ದೇ ವಿಸ್ಮಯ ಅಲ್ಲವೇ ಎನ್ನುತ್ತಾರೆ ರಾಘಣ್ಣ.

  ನಿಖಿಲ್ ಮಂಜು ಅವರನ್ನಂತೂ ರಾಘಣ್ಣ ದೇವರಿಗೆ ಹೋಲಿಸುತ್ತಾರೆ. ಬಹುಶಃ ಅವರು ಬಲವಂತ ಮಾಡಿ ಈ ಸಿನಿಮಾ ಮಾಡಿಸದೇ ಹೋಗಿದ್ದರೆ, ನಾನು ಚೇತರಿಸಿಕೊಳ್ಳುತ್ತಲೇ ಇರಲಿಲ್ಲವೇನೋ. ನನಗೆ ಸ್ಟ್ರೋಕ್ ಆಗಿದೆ ಎಂಬ ಭಾವನೆಯಲ್ಲಿ ಬದುಕಿ ಯಾವತ್ತೋ ಒಂದು ದಿನ ಸಾಯುತ್ತಿದ್ದೆ. ನನಗೆ ನಿಖಿಲ್ ಮಂಜು ಆತ್ಮವಿಶ್ವಾಸ ತುಂಬಿದರು ಎಂದು ಶ್ಲಾಘಿಸುತ್ತಾರೆ. ಅಮ್ಮನ ಮನೆ ಇದೇ ವಾರ ರಿಲೀಸ್ ಆಗುತ್ತಿದೆ.

 • ಅಮ್ಮನ ಮನೆಯಲ್ಲಿ ರಾಘಣ್ಣನನ್ನೇ ನೋಡಿಕೊಂಡು ನಟಿಸಿದ ಅಮ್ಮ

  ammana mane specialty

  ಅಮ್ಮನ ಮನೆ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಪಿಟಿ ಮಾಸ್ಟರ್ ಆಗಿ ನಟಿಸಿದ್ದಾರೆ. ಹೆಸರು ರಾಜೀವ. ಅದು ಬಂಗಾರದ ಮನುಷ್ಯ ಚಿತ್ರದಲ್ಲಿನ ರಾಜ್‍ಕುಮಾರ್ ಪಾತ್ರದ ಹೆಸರು ಅನ್ನೋದು ಕನ್ನಡಿಗರಿಗೆ ಗೊತ್ತು. ಆದರೆ, ಅದೆಲ್ಲಕ್ಕಿಂತ ಡಿಫರೆಂಟ್ ಎನ್ನಿಸಿರುವುದು, ದೈವಲೀಲೆ ಎನ್ನಿಸಿರುವುದು ಚಿತ್ರದ ಕಥೆಯಲ್ಲಿರುವ ಎರಡು ಪಾತ್ರಗಳು.

  ಅಮ್ಮನ ಮನೆ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್, ತಾಯಿಯನ್ನು ಆರೈಕೆ ಮಾಡುವ ಮಗ. ತಾಯಿಯಾಗಿ ನಟಿಸಿರುವ ರೋಹಿಣಿ ರಿಯಲ್ ಲೈಫ್‍ನಲ್ಲಿ ರಾಘಣ್ಣನಿಗಿಂತ 16 ವರ್ಷ ಚಿಕ್ಕವರು. ಅದಕ್ಕಿಂತ ವಿಶೇಷವೆಂದರೆ ಚಿತ್ರದಲ್ಲಿ ತಾಯಿಗೆ ಸ್ಟ್ರೋಕ್ ಆಗಿರುತ್ತೆ. ರಿಯಲ್ ಲೈಫ್‍ನಲ್ಲಿ ರೋಹಿಣಿಗೆ ಸ್ಟ್ರೋಕ್ ಏನೂ ಹೊಡೆದಿಲ್ಲ. ಆದರೆ, ಆಕೆಯನ್ನು ಆರೈಕೆ ಮಾಡುವ ಮಗ ರಾಘಣ್ಣಂಗೆ ರಿಯಲ್ ಲೈಫ್‍ನಲ್ಲಿ ಸ್ಟ್ರೋಕ್ ಹೊಡೆದಿತ್ತು. ರಿಯಲ್ ಲೈಫ್‍ನಲ್ಲಿ ತಾಯಿಯನ್ನು ಕಳೆದುಕೊಂಡ 6 ತಿಂಗಳ ನಂತರ ಸಿಕ್ಕ ಚಾನ್ಸ್ ಅಮ್ಮನ ಮನೆ.

  ಹೀಗೆ ವಿಸ್ಮಯ ಹುಟ್ಟಿಸುವ ಕಥೆಯ ದೃಶ್ಯಗಳಲ್ಲಿ ರೋಹಿಣಿಗೆ ರಾಘಣ್ಣನೇ ರೋಲ್‍ಮಾಡೆಲ್. ಕಾರಣ ಇಷ್ಟೆ, ಸ್ಟ್ರೋಕ್ ಹೊಡೆದು ಚೇತರಿಸಿಕೊಂಡವರು ಹೇಗಿರುತ್ತಾರೆ ಅನ್ನೋದನ್ನು ರೋಹಿಣಿ, ರಾಘವೇಂದ್ರ ರಾಜ್‍ಕುಮಾರ್ ಅವರನ್ನೇ ನೋಡಿಕೊಂಡು ಅಭಿನಯಿಸಿದ್ರಂತೆ. ನಿಖಿಲ್ ಮಂಜು ನಿರ್ದೇಶನದ ಅಮ್ಮನ ಮನೆ ರಿಲೀಸ್‍ಗೆ ರೆಡಿಯಾಗಿದೆ. 

 • ಕರ್ನಾಟಕಕ್ಕಿಂತ ಮೊದಲೇ ಫಾರಿನ್ನಲ್ಲಿ ರಿಲೀಸ್

  ammana mane will release in abroad

  ರಾಘವೇಂದ್ರ ರಾಜ್‍ಕುಮಾರ್, 14 ವರ್ಷಗಳ ನಂತರ ನಟಿಸಿರುವ ಸಿನಿಮಾ ಅಮ್ಮನ ಮನೆ. ಇದೇ ಮಾರ್ಚ್ 1ಕ್ಕೆ ರಿಲೀಸ್ ಆಗುತ್ತಿರುವ ಈ ಚಿತ್ರ ಕರ್ನಾಟಕಕ್ಕಿಂತ ಮೊದಲು ವಿದೇಶದಲ್ಲಿ ತೆರೆ ಕಾಣುತ್ತಿದೆ. ಆಸ್ಟ್ರೇಲಿಯಾ ಮೆಲ್ಬೋರ್ನ್, ಸಿಂಗಪುರ, ಅಕ್ಲೆಂಡ್‍ಗಳಲ್ಲಿ ಮೊದಲೇ ಪ್ರೀಮಿಯರ್ ಶೋ ಏರ್ಪಡಿಸಲಾಗಿದ್ದು, ಫೆಬ್ರವರಿ 28ರಂದೇ ವಿದೇಶದಲ್ಲಿರುವ ಕನ್ನಡಿಗರು ಈ ಚಿತ್ರ ನೋಡಲಿದ್ದಾರೆ.

  ನಿಖಿಲ್ ಮಂಜು ನಿರ್ದೇಶನದ ಚಿತ್ರದಲ್ಲಿ ರಾಘಣ್ಣ, ಸ್ಕೂಲ್ ಮಾಸ್ಟರ್ ಆಗಿ, ತಾಯಿಯನ್ನು ಸದಾ ಪ್ರೀತಿ ಮಾಡುವ ಮಗನಾಗಿ ನಟಿಸಿದ್ದಾರೆ. ಬಿ.ಜಯಶ್ರೀ, ರಾಘವೇಂದ್ರಗೆ ತಾಯಿಯಾಗಿ ನಟಿಸಿದ್ದರೆ, ಮಾನಸಿ ಸುಧೀರ್ ಪತ್ನಿಯಾಗಿ ನಟಿಸಿದ್ದಾರೆ. ಶ್ರೀಲಲಿತ ಅವರ ಕಥೆಯನ್ನು ನಿರ್ಮಾಣ ಮಾಡಿರುವುದು ಆತ್ಮಶ್ರೀ ಮತ್ತು ಆರ್.ಎನ್.ಕುಮಾರ್. 

 • ಕೈಯ್ಯಲ್ಲಿ ಪೀಪಿ, ಕುರುಚಲು ಗಡ್ಡ.. ಏನಿದು ರಾಘಣ್ಣ..?

  raghavendra rajkumar returns with ammana mane

  ಮೈಮುಚ್ಚುವ ಶರಟು, ಮೇಲೊಂದು ಹಾಫ್ ಸ್ವೆಟರ್, ಕೈಯ್ಯಲ್ಲಿ ಪೀಪಿ, ಅರ್ಧಂಬರ್ಧ ಬೆಳ್ಳಗಾಗಿರುವ ತಲೆ ಕೂದಲು, ಕುರುಚಲು ಗಡ್ಡ.. ಕೈಲೊಂದು ಪಿಟಿ ಮಾಸ್ಟರ್ ಊದುವಂತಹ ಪೀಪಿ.. ಇದು ರಾಘವೇಂದ್ರ ರಾಜ್‍ಕುಮಾರ್. ಇದು ಅಮ್ಮನ ಮನೆ ಚಿತ್ರದಲ್ಲಿನ ರಾಘವೇಂದ್ರ ರಾಜ್‍ಕುಮಾರ್ ಫಸ್ಟ್‍ಲುಕ್.

  ನಿಖಿಲ್ ಮಂಜು ನಿರ್ದೇಶನದ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್, 14 ವರ್ಷಗಳ ನಂತರ ಬಣ್ಣ ಹಚ್ಚುತ್ತಿದ್ದಾರೆ. ಪಕ್ಕದ್ಮನೆ ಹುಡುಗಿ ಚಿತ್ರದ ನಂತರ ರಾಘವೇಂದ್ರ ರಾಜ್‍ಕುಮಾರ್, ಯಾವುದೇ ಚಿತ್ರದಲ್ಲಿ ನಟಿಸಿರಲಿಲ್ಲ. ಆತ್ಮಶ್ರೀ ಮುತ್ತು, ಆರ್.ಎಸ್.ಕುಮಾರ್ ನಿರ್ಮಾಣದ ಚಿತ್ರಕ್ಕೆ ಶ್ರೀಲಲಿತೆ ಚಿತ್ರಕಥೆ ಬರೆದಿದ್ದಾರೆ.

  ಜೀವನದಲ್ಲಿ ಎದುರಾಗುವ ಪ್ರತಿಯೊಂದು ಸಂಕಷ್ಟಗಳನ್ನೂ ಆತ್ಮವಿಶ್ವಾಸದಿಂದ ಎದುರಿಸಿ ಗೆಲ್ಲುವ ಪಾತ್ರ ರಾಘವೇಂದ್ರ ರಾಜ್‍ಕುಮಾರ್ ಅವರದು ಎನ್ನುತ್ತಾರೆ ನಿಖಿಲ್ ಮಂಜು. ಅವರ ಪ್ರಕಾರ, ರಾಘಣ್ಣನ ರಿಯಲ್ ಲೈಫ್‍ಗೂ, ಚಿತ್ರದಲ್ಲಿನ ಅವರ ಪಾತ್ರಕ್ಕೂ ತುಂಬಾ ಹೋಲಿಕೆಗಳಿವೆ. ಅದರಲ್ಲೂ ರಾಘಣ್ಣನ ಆತ್ಮವಿಶ್ವಾಸ ಸ್ವತಃ ನಿಖಿಲ್ ಅವರಿಗೂ ಸ್ಫೂರ್ತಿ ತುಂಬುತ್ತಂತೆ. ಅದು ಇತರರಿಗೆ ಪ್ರೇರಣೆಯಾಗಬಲ್ಲ ಎನ್ನುವುದು ನಿಖಿಲ್ ಮಂಜು ವಿವರಣೆ.

  ಆಗಸ್ಟ್ 15ರಂದು ಚಿತ್ರಕ್ಕೆ ಮುಹೂರ್ತ. ಅದು ರಾಘವೇಂದ್ರ ರಾಜ್‍ಕುಮಾರ್ ಹುಟ್ಟುಹಬ್ಬದ ದಿನವೂ ಹೌದು.

 • ಬಂಗಾರದ ಮನುಷ್ಯನಲ್ಲಿ ರಾಜಣ್ಣ.. ಅಮ್ಮನ ಮನೆಯಲ್ಲಿ ರಾಘಣ್ಣ

  ammana mane teaser released

  ಅಮ್ಮನ ಮನೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ರೆಗ್ಯುಲರ್ ಟೀಸರ್‍ಗಳಿಗಿಂತ ವಿಭಿನ್ನವಾಗಿರುವ ಕಾರಣಕ್ಕೇ ಗಮನ ಸೆಳೆಯುತ್ತಿದೆ. ರಾಘವೇಂದ್ರ ರಾಜ್‍ಕುಮಾರ್, 14 ವರ್ಷಗಳ ನಂತರ ನಟಿಸಿರುವ ಸಿನಿಮಾ ಎಂಬುದು ಚಿತ್ರಕ್ಕಿರುವ ಸ್ಪೆಷಲ್ ಕ್ವಾಲಿಟಿ. ನಿಖಿಲ್ ಮಂಜು ನಿರ್ದೇಶನದ ಸಿನಿಮಾ ಟೀಸರ್‍ನಲ್ಲಿ ಗಮನ ಸೆಳೆಯುವುವುದು ರಾಘವೇಂದ್ರ ರಾಜ್‍ಕುಮಾರ್ ಪಾತ್ರದ ಹೆಸರು... ರಾಜೀವ.

  ಬಂಗಾರದ ಮನುಷ್ಯ ಚಿತ್ರದಲ್ಲಿ ರಾಜೀವಪ್ಪನ ಹೆಸರಲ್ಲಿ ಕರುನಾಡಿನ ಜನರನ್ನು ಮೋಡಿದ್ದವರು ಡಾ.ರಾಜ್. ಈಗ.. ಅದೇ ಹೆಸರಲ್ಲಿ ರಾಘವೇಂದ್ರ ರಾಜ್‍ಕುಮಾರ್ ನಟಿಸಿದ್ದಾರೆ. ಚಿತ್ರದ ಹೆಸರೇ ಅಮ್ಮನ ಮನೆ. ತಾಯಿಯ ಮಡಿಲಲ್ಲಿ ಮಗುವಾಗಿರುವ ರಾಘಣ್ಣ, ರಾಘಣ್ಣನ ಮಡಿಲಲ್ಲಿ ಮಗುವಾಗಿರುವ ತಾಯಿ.. ಹೀಗೆ ವಿಭಿನ್ನತೆಯ ಮೂಲಕ ಸಂಥಿಂಗ್ ಸ್ಪೆಷಲ್ ಏನೋ ಹೇಳುತ್ತಿದ್ದಾರೆ ಎಂಬ ಭಾವನೆ ಮೂಡಿಸುವುದಂತೂ ಸತ್ಯ.

  ಅಮ್ಮನ ಮನೆ ಸಿನಿಮಾ, ಫೆಬ್ರವರಿಯಲ್ಲಿ ರಿಲೀಸ್ ಆಗಲಿದೆ.

 • ಮಹಿಳಾ ದಿನಕ್ಕೆ ಅಮ್ಮನ ಸಿನಿಮಾ

  ammana mane will release on women's day

  ರಾಘವೇಂದ್ರ ರಾಜ್‍ಕುಮಾರ್ 14 ವರ್ಷಗಳ ನಂತರ ನಟಿಸಿರುವ ಸಿನಿಮಾ ಅಮ್ಮನ ಮನೆ. ರಾಘಣ್ಣನ ಜೊತೆಯಲ್ಲಿ ರೋಹಿಣಿ, ಮಾನಸಿ, ಸುಚೇಂದ್ರ ಪ್ರಸಾದ್, ಶೀತಲ್, ತಬಲಾ ನಾಣಿ ಮೊದಲಾದವರ ಬೃಹತ್ ತಾರಾಗಣವೇ ಇದೆ. ಈ ಸಿನಿಮಾವನ್ನು ಮಹಿಳಾ ದಿನಕ್ಕೆ ಅಂದರೆ, ಮಾರ್ಚ್ 8ಕ್ಕೆ ರಿಲೀಸ್ ಮಾಡಲು ಮುಂದಾಗಿದೆ ಚಿತ್ರತಂಡ.

  ರಾಘಣ್ಣ, ತಾಯಿಯನ್ನು ತುಂಬಾ ಪ್ರೀತಿಸುವ ಮಗ. ಅಷ್ಟೇ ಅಲ್ಲ, ಹೆಂಡತಿ, ಮಗಳಲ್ಲೂ ತಾಯಿಯನ್ನೇ ಕಾಣುವಷ್ಟು ಮಾತೃ ಹೃದಯಿ. ತಾಯಿ, ಮಗನ ಬಾಂಧವ್ಯ ಹೇಳುವ ಈ ಚಿತ್ರ ಅಮ್ಮನ ಮನೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನಿಖಿಲ್ ಮಂಜು, ಇಡೀ ಚಿತ್ರವನ್ನು ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ಅಮ್ಮನನ್ನು ಪ್ರೀತಿಸುವವರು ಖಂಡಿತಾ ಈ ಸಿನಿಮಾ ನೋಡ್ತಾರೆ.

 • ರಾಘಣ್ಣ ಪತ್ನಿಯನ್ನು ಅಮ್ಮಾ ಎಂದು ಕರೆಯೋದೇಕೆ..?

  why did raghavendra rajkumar call his wife amma

  ಅಮ್ಮನ ಮನೆ ಚಿತ್ರದ ಬಿಡುಗಡೆ ಸಂಭ್ರಮ, ರಾಘವೇಂದ್ರ ರಾಜ್‍ಕುಮಾರ್ ಮುಖದಲ್ಲಿ ಎದ್ದು ಕಾಣ್ತಿದೆ. 14 ವರ್ಷಗಳ ನಂತರ ರಾಘಣ್ಣ ತೆರೆ ಮೇಲೆ ಬರುತ್ತಿದ್ದಾರೆ. ಅದೇ ಅವರಿಗೆ ಖುಷಿ. ಅಮ್ಮನ ಮನೆ ಅನ್ನೋ ಸಿನಿಮಾ, ರಾಘಣ್ಣನ ಎಲ್ಲ ನೋವು ನಲಿವುಗಳನ್ನೂ ನೆನಪಿಸಿದೆ.

  ಹೀಗೆ ಎಲ್ಲವನ್ನೂ ನೆನಪಿಸಿಕೊಳ್ಳುವಾಗ ತಮ್ಮ ಪತ್ನಿ ಮಂಗಳಾ ಅವರನ್ನು ತಾವು ಅಮ್ಮಾ ಎಂದೇ ಕರೆಯೋದಾಗಿ ಹೇಳಿಕೊಂಡಿದ್ದಾರೆ. 

  ನನಗೆ ತಂದೆ ಆಗಾಗ ಹೇಳ್ತಾ ಇದ್ರು. ಹೆಂಡತಿಯಲ್ಲಿ ಬರೀ ಕಾಮವನ್ನು ಹುಡುಕಬೇಡ. ತಾಯಿಯನ್ನು ಹುಡುಕು. ಸಿಕ್ತಾಳೆ. ಅವರೊಳಗೆ ಇರುವ ತಾಯಿಯನ್ನು ನಾವು ಹೊರಗೆ  ತರಬೇಕು. ಒಮ್ಮೆ ಆ ತಾಯಿ ಹೊರಬಂದುಬಿಟ್ಟರೆ, ನಿನಗೆ ಹೆಂಡತಿ, ತಾಯಿ, ಮಗಳು, ಸೊಸೆ ಎಲ್ಲರೂ ಸಿಕ್ತಾರೆ' ಎನ್ನುತ್ತಿದ್ದರು.

  ಅಪ್ಪಾಜಿ ಹೇಳಿದಂತೆಯೇ ಆಯಿತು. ಮಂಗಳಾ ನನಗೆ ತಾಯಿಯಾದಳು ಎನ್ನುವ ರಾಘಣ್ಣ, ಮಂಗಳಾ ಅವರನ್ನು ಇವತ್ತಿಗೂ ಕರೆಯೋದು ಅಮ್ಮಾ ಎಂತಲೇ. ಅಪ್ಪ, ಅಮ್ಮನನ್ನು ಯಾವತ್ತೂ ಹೋಗೇ ಬಾರೇ ಎಂದವರಲ್ಲ. ಸೊಸೆ, ಹೆಣ್ಣು ಮಕ್ಕಳನ್ನೂ ಹೋಗೇ ಬಾರೇ ಎಂದವರಲ್ಲ. ಹೀಗಾಗಿ.. ನನಗೂ ಅದೇ ಅಭ್ಯಾಸವಾಗಿ ಹೋಗಿದೆ ಎಂದು ನೆನಪಿಸಿಕೊಳ್ಳೋ ರಾಘಣ್ಣ, ಅದೆಲ್ಲ ನೆನಪನ್ನೂ ಮರುಕುಳಿಸುವಂತೆ ಮಾಡಿದ ಅಮ್ಮನ ಮನೆ ಸಿನಿಮಾ, ನಿರ್ದೇಶಕ ನಿಖಿಲ್ ಮಂಜು, ನಿರ್ಮಾಪಕರಾದ ಶ್ರೀಲಲಿತಾ ಅವರಿಗೆ ಥ್ಯಾಂಕ್ಸ್ ಹೇಳ್ತಾರೆ.

 • ರಾಘವೇಂದ್ರ ರಾಜ್‍ಕುಮಾರ್‍ಗೆ ಅಮ್ಮ ಸಿಕ್ರು..!

  b jayashree to play raghavendra rajkumar;s mother

  ರಾಘವೇಂದ್ರ ರಾಜ್‍ಕುಮಾರ್, ಅಮ್ಮನ ಮನೆ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಬರುತ್ತಿದ್ದಾರೆ. 14 ವರ್ಷಗಳ ನಂತರ ಬಣ್ಣ ಹಚ್ಚುತ್ತಿರುವ ರಾಘವೇಂದ್ರ ರಾಜ್‍ಕುಮಾರ್ ಅವರ ಫಸ್ಟ್‍ಲುಕ್ ಕೂಡಾ ಹೊರಬಿದ್ದಿತ್ತು. ಈಗ ಅವರಿಗೆ ಅಮ್ಮ ಸಿಕ್ಕಿದ್ದಾರೆ.

  ರಾಘವೇಂದ್ರ ರಾಜ್‍ಕುಮಾರ್ ಅವರ ತಾಯಿಯಾಗಿ ನಟಿಸುತ್ತಿರುವುದು ಬಿ.ಜಯಶ್ರೀ. ರಂಗಭೂಮಿ ಕಲಾವಿದೆ, ನಟಿ, ಗಾಯಕಿ, ಮಾಜಿ ರಾಜ್ಯಸಭಾ ಸದಸ್ಯೆಯೂ ಆಗಿರುವ ಜಯಶ್ರೀ ಅಮ್ಮನ ಮನೆಯಲ್ಲಿ ರಾಘಣ್ಣಂಗೆ ಅಮ್ಮ. ರಾಘವೇಂದ್ರ ಅವರಿಗೆ ಪತ್ನಿಯಾಗಿ ನಟಿಸುತ್ತಿರುವುದು ಮಾನಸಿ ಸುಧೀರ್.

  ನಿಖಿಲ್ ಮಂಜು ನಿರ್ದೇಶನದ ಅಮ್ಮನ ಮನೆ ಚಿತ್ರಕ್ಕೆ ಆರ್.ಎನ್.ಕುಮಾರ್ ನಿರ್ಮಾಪಕರು. ಆಗಸ್ಟ್ 15ರಂದು ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ.