` ravi varma, - chitraloka.com | Kannada Movie News, Reviews | Image

ravi varma,

 • 'Rustom' Trailer This Sunday

  rustum trailer on april 14th

  The first trailer of Shivarajakumar starrer 'Rustom' is all set to be released on Sunday the 14th of April. The trailer will be released through the You Tube channel of Anand Audio at 8.45 in the morning.

  The shooting for 'Rustom' is complete and the film is in the post-production stage. The team is gearing up to release the film in the month of May.

  'Rustom' stars Shivarajakumar, Shraddha Srinath, Mayuri, Vivek Oberoi and others in prominent roles. Mahendra Simha is the cinematographer, while Anup Seelin is the music director.  The film is being produced by Jayanna under Jayanna Combines banner.

 • ವಿವೇಕ್ ಒಬೇರಾಯ್ ಹೇಳಿದ ರುಸ್ತುಂ ಸ್ಟೋರಿ

  vivek oberoi feels happy about rustum team

  ರವಿವರ್ಮ ನಿರ್ದೇಶನದ ಚಿತ್ರದಲ್ಲಿ ಶಿವರಾಜ್‍ಕುಮಾರ್ ಹೀರೋ ಆಗಿ ನಟಿಸುತ್ತಿರುವುದು ಗೊತ್ತು. ಆ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಶಿವರಾಜ್‍ಗೆ  ಶ್ರದ್ಧಾ ಶ್ರೀನಾಥ್ ನಾಯಕಿ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ನಟಿಸಿದ್ದು, ಅವರಿಗೆ ರಚಿತಾ ರಾಮ್ ಜೋಡಿಯಾಗಿದ್ದಾರೆ. ಚಿತ್ರದ ಶೂಟಿಂಗ್ ಮುಗಿಸಿ ತೆರಳಿರುವ ವಿವೇಕ್ ಒಬೇರಾಯ್, ಚಿತ್ರದ ಅನುಭವ ಹಂಚಿಕೊಂಡಿದ್ದಾರೆ.

  ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದ ಶಿವಣ್ಣರನ್ನು ಬಲ್ಲೆ. ಅವರನ್ನು ನೋಡಿಕೊಂಡೇ ಬೆಳೆದವನು ನಾನು. ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಚಿತ್ರದಲ್ಲಿ ನನ್ನದು ಅತ್ಯಂತ ಪುಟ್ಟ ಪಾತ್ರವಾದರೂ, ಸಿಕ್ಕ ಅನುಭವ ಅದ್ಭುತವಾಗಿತ್ತು. ಸಾಹಸ ನಿರ್ದೇಶಕ ರವಿವರ್ಮ ಒಳ್ಳೆಯ ಸಿನಿಮಾ ಮಾಡುತ್ತಿದ್ದಾರೆ. ಅವರೆಲ್ಲರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನಗೆ ಸಿಕ್ಕ ದೊಡ್ಡ ಗೌರವ ಎಂದು ಹೇಳಿಕೊಂಡಿದ್ದಾರೆ ವಿವೇಕ್ ಒಬೇರಾಯ್. ಅಂದಹಾಗೆ ವಿವೇಕ್ ಒಬೇರಾಯ್, ಕರ್ನಾಟಕದ ಅಳಿಯ ಕೂಡಾ. ಅವರ ಪತ್ನಿ ಪ್ರಿಯಾಂಕಾ ಆಳ್ವಾ ಕನ್ನಡತಿ.

 • ಸಲ್ಮಾನ್, ಶಾರುಕ್, ಅಜಯ್ ದೇವಗನ್, ನಾಗಾರ್ಜುನ.. ನೋಡಲು ಕಾಯ್ತಿರೋ ಕನ್ನಡ ಸಿನಿಮಾ..!

  bollywood stars waiting to watch rustum

  ಈ ಚಿತ್ರವನ್ನೊಮ್ಮೆ ನೋಡಬೇಕು. ರಿಲೀಸ್‍ಗೂ ಮೊದಲೇ ನೋಡಬೇಕು ಎಂದು ಬಾಲಿವುಡ್, ಟಾಲಿವುಡ್ ಸ್ಟಾರ್‍ಗಳೆಲ್ಲ ಕಾಯ್ತಿರೋ ಸಿನಿಮಾ ರುಸ್ತುಂ. ಚಿತ್ರವನ್ನು ನೋಡಬೇಕು ಎಂದು ಸ್ವತಃ ಶಾರುಕ್, ಸಲ್ಮಾನ್, ಅಜಯ್ ದೇವಗನ್, ಪ್ರಭುದೇವ, ನಾಗಾರ್ಜುನ.. ಮೊದಲಾದವರು ಆಸಕ್ತಿ ತೋರಿಸಿದ್ದಾರೆ. ಅದನ್ನು ಚಿತ್ರದ ನಿರ್ದೇಶಕ ರವಿವರ್ಮ ಸ್ಪಷ್ಟಪಡಿಸಿದ್ದಾರೆ.

  ರುಸ್ತುಂ, ರವಿ ವರ್ಮ ನಿರ್ದೇಶನದ ಮೊದಲ ಸಿನಿಮಾ. ಆದರೆ, ಸಾಹಸ ನಿರ್ದೇಶಕರಾಗಿ ಬಾಲಿವುಡ್‍ನಲ್ಲಿ ಹೆಸರು ಮಾಡಿರೋ ರವಿವರ್ಮ ನಿರ್ದೇಶನದ ಚೊಚ್ಚಲ ಚಿತ್ರದ ಬಗ್ಗೆ ಬಾಲಿವುಡ್ ಸ್ಟಾರ್‍ಗಳಿಗೂ ಕುತೂಹಲವಿದೆ. ಜೊತೆಗೆ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ಕೂಡಾ ನಟಿಸಿದ್ದಾರೆ.

  ಶಿವರಾಜ್‍ಕುಮಾರ್, ಶ್ರದ್ಧಾ ಶ್ರೀನಾಥ್, ವಿವೇಕ್ ಒಬೇರಾಯ್, ರಚಿತಾ ರಾಮ್, ಮಯೂರಿ ನಟಿಸಿರುವ ಚಿತ್ರ ಜೂನ್ 28ಕ್ಕೆ ರಿಲೀಸ್ ಆಗುತ್ತಿದೆ.

Matthe Udbhava Trailer Launch Gallery

Maya Bazaar Pressmeet Gallery