ಕೆಜಿಎಫ್ ನಂತರ ಯಶ್ ಜಯಣ್ಣ ಕಂಬೈನ್ಸ್‍ನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದು ಅನಿಲ್ ಕುಮಾರ್ ನಿರ್ದೇಶನದ ಕಿರಾತಕ 2 ಚಿತ್ರದಲ್ಲಿ ಎಂಬ ವಿಷಯ ಹೊರಬಿದ್ದಿದ್ದೇ ತಡ, ವಿವಾದ ಸೃಷ್ಟಿಯಾಗಿದೆ. ಕಿರಾತಕ 2 ಟೈಟಲ್ ನಮ್ಮದು ಎಂದು ನಿರ್ದೇಶಕ ಪ್ರದೀಪ್ ರಾಜ್, ಚೇಂಬರ್ ಮೆಟ್ಟಿಲೇರಿದ್ದಾರೆ.
ಕಿರಾತಕ ಚಿತ್ರದ ನಿರ್ದೇಶಕ ಪ್ರದೀಪ್ ರಾಜ್. ಕಿರಾತಕ 2 ಟೈಟಲ್ ನಮ್ಮ ಬಳಿಯೇ ಇದೆ. ಆ ಟೈಟಲ್ ನನ್ನ ಮತ್ತು ಯಶ್ ಕಾಂಬಿನೇಷನ್‍ನಲ್ಲಿ ಬಂದರೆ ಮಾತ್ರ ಓಕೆ. ಬೇರೆ ನಿರ್ದೇಶಕರಿಗೆ ಕೊಡುವುದಿಲ್ಲ ಎಂದು ಯಶ್ ಅವರಿಗೇ ಹೇಳಿದ್ದಾರಂತೆ ಪ್ರದೀಪ್ ರಾಜ್.
ಕಿರಾತಕ 2 ಟೈಟಲ್ ನಮ್ಮ ಬಳಿ ಇದೆ ಎಂದಿರುವುದು ನಿರ್ಮಾಪಕ ಜಯಣ್ಣ. ಟೈಟಲ್ ರಿಜಿಸ್ಟರ್ ಮಾಡಿದ್ದೇವೆ. ಆಗಸ್ಟ್ 27ರಿಂದ ಚಿತ್ರೀಕರಣ ಶುರುವಾಗಲಿದೆ. ಲೊಕೇಷನ್ ಹುಡುಕಾಟದಲ್ಲಿದ್ದೇವೆ ಎಂದಿದ್ದಾರೆ ಜಯಣ್ಣ.
ಚಿತ್ರಕ್ಕೆ ನಾಯಕಿಯಾಗಿರೋದು ಶ್ವೇತ ಅಲಿಯಾಸ್ ನಂದಿತಾ. ನಂದ ಲವ್ಸ್ ನಂದಿತಾದಲ್ಲಿ ಜಿಂಕೆಮರಿ ಹಾಡಿಗೆ ಬಿಂದಾಸ್ ಹೆಜ್ಜೆ ಹಾಕಿದ್ದ ನಂದಿತಾ.. ಕಿರಾತಕ-2 ಚಿತ್ರಕ್ಕೆ ಹೀರೋಯಿನ್. ಕಿರಾತಕನ ಅಪ್ಪ-ಅಮ್ಮನಾಗಿ ಈ ಚಿತ್ರದಲ್ಲೂ ನಾಗಾಭರಣ-ತಾರಾ ಕಾಣಿಸಿಕೊಳ್ಳಲಿದ್ದಾರೆ.