` tamannah bhatia, - chitraloka.com | Kannada Movie News, Reviews | Image

tamannah bhatia,

 • ತಮನ್ನಾ ಆಸ್ತಿ 150 ಕೋಟಿ.. ಪ್ರಿಯಕರನ ಆಸ್ತಿ 17 ಕೋಟಿ..!

  ತಮನ್ನಾ ಆಸ್ತಿ 150 ಕೋಟಿ.. ಪ್ರಿಯಕರನ ಆಸ್ತಿ 17 ಕೋಟಿ..!

  ತಮನ್ನಾ ಭಾಟಿಯಾ ಲವ್ ಸ್ಟೋರಿ ಈಗ ಸಿನಿಮಾ ಜಗತ್ತಿನಲ್ಲಿ ಭರ್ಜರಿ ಸುದ್ದಿಯಾಗುತ್ತಿದೆ. ತಮಿಳು, ತೆಲುಗು ಚಿತ್ರರಂಗವನ್ನು ರೂಲ್ ಮಾಡಿದ್ದ ನಟಿಯರಲ್ಲಿ ಒಬ್ಬರು ತಮನ್ನಾ ಭಾಟಿಯಾ. ಇಂತಹ ಚೆಲುವೆಗೆ ಗಾಳ ಹಾಕಿದ್ದು ಒಬ್ಬಿಬ್ಬರಲ್ಲ. ಆದರೆ ತಮನ್ನಾ ಹೃದಯ ಕೊಟ್ಟಿದ್ದು ವಿಜಯ್ ವರ್ಮ ಎಂಬ ನಟನಿಗೆ. ಆತನೇನೂ ಸ್ಟಾರ್ ಅಲ್ಲ. ಆದರೆ ಇಬ್ಬರೂ ಈಗ ಪ್ರೀತಿಯಲ್ಲಿದ್ದಾರೆ. ತಮನ್ನಾ ಕೂಡಾ ಲವ್ ಸ್ಟೋರಿಯನ್ನು ಒಪ್ಪಿಕೊಂಡೂ ಆಗಿದೆ. ವಿಶೇಷವೆಂದೆ ಇಬ್ಬರ ನಡುವೆ ಹೋಲಿಕೆಗಳೇ ಆಗುತ್ತಿಲ್ಲ ಎನ್ನುವುದು ನೆಟ್ಟಿಗರ ಕಂಪ್ಲೇಂಟು.

  ತಮನ್ನಾ ಭಾಟಿಯಾ ಮಿಲ್ಕಿಬ್ಯೂಟಿ.. ವಿಜಯ್ ವರ್ಮಾ, ತಮನ್ನಾಗೆ ಹೋಲಿಸಿದರೆ ಅಷ್ಟೇನೂ ಸುಂದರನಲ್ಲ. ಆದರೆ ಪ್ರೀತಿ ಕುರುಡು.. ಅದನ್ನು ಬಿಟ್ಟರೆ ತಮನ್ನಾ ಸ್ಟಾರ್`ಡಂಗೆ ಹೋಲಿಸಿದರೆ ವಿಜಯ್ ವರ್ಮಾ ಏನೇನೂ ಅಲ್ಲ. ದೊಡ್ಡ ಮಟ್ಟದಲ್ಲಿ ನಟನಾಗಿಯೂ ಗುರುತಿಸಿಕೊಂಡಿಲ್ಲ. ಇನ್ನು ಆಸ್ತಿ ಲೆಕ್ಕಕ್ಕೆ ಹೋದರೂ ಅಷ್ಟೆ, ತಮನ್ನಾ ಭಾಟಿಯಾ ಸುಮಾರು 150 ಕೋಟಿಗೆ ಬೆಲೆ ಬಾಳ್ತಾರೆ. ಆದರೆ ವಿಜಯ್ ವರ್ಮಾ ಆಸ್ತಿಯ ಒಟ್ಟಾರೆ ತೂಕ 17 ಕೋಟಿ ಅಷ್ಟೆ. ಹೀಗಿದ್ದರೂ ಇಬ್ಬರ ಲವ್ ಸ್ಟೋರಿ ಭರ್ಜರಿಯಾಗಿ ಸಾಗುತ್ತಿದೆ.

 • ತಮನ್ನಾ ಸ್ಟೆಪ್ಪಿಗೆ ಕೆಜಿಎಫ್ ಫಿದಾ

  tamannah shakes leg with yash

  ಕೆಜಿಎಫ್ ಚಿತ್ರಕ್ಕೆ ಐಟಂ ಸಾಂಗ್‍ಗೆ ತಮನ್ನಾ ಹೆಜ್ಜೆ ಹಾಕುತ್ತಿದ್ದಾರೆ. ಶೂಟಿಂಗ್ ನಡೆಯುತ್ತಿದೆ. ಅದೂ.. ಕನ್ನಡದ ಸೂಪರ್ ಹಿಟ್ ಸಾಂಗ್ ಜೋಕೆ.. ನಾನು ಬಳ್ಳಿಯ ಮಿಂಚು ಹಾಡಿನ ರೀಮಿಕ್ಸ್ ಸಾಂಗ್. ಬಳ್ಳಿಯ ಮಿಂಚಿನಂತೆಯೇ ಬಳುಕುವ ತಮನ್ನಾ, ಈ ಹಾಡಿನಲ್ಲಿ ಹೆಜ್ಜೆ ಹಾಕಿರುವುದು ರಾಕಿಂಗ್ ಸ್ಟಾರ್ ಯಶ್ ಜೊತೆ.

  ತಮನ್ನಾ ನೃತ್ಯದ ಹೆಜ್ಜೆಗಳಿಗೆ ಕೆಜಿಎಫ್ ತಂಡ ಥ್ರಿಲ್ಲಾಗಿ ಹೋಗಿದೆ. ಯಶ್ ಕೂಡಾ ಒಳ್ಳೆಯ ಡ್ಯಾನ್ಸರ್. ಇಬ್ಬರೂ ಅದ್ಭುತವಾಗಿ ಸ್ಟೆಪ್ ಹಾಕುತ್ತಿದ್ದು, ಹಾಡು ಅದ್ಭುತವಾಗಿ ಮೂಡಿ ಬರುತ್ತಿದೆಯಂತೆ.

  ಹೊಂಬಾಳೆ ಫಿಲಂಸ್‍ನಲ್ಲಿ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ, ಹೆಚ್ಚೂ ಕಡಿಮೆ 2 ವರ್ಷಗಳಿಂದ ಶೂಟಿಂಗ್‍ನಲ್ಲಿದೆ. ಮಿನರ್ವ ಹಾಲ್‍ನಲ್ಲಿ ಹಳೇ ಕಾಲದ ಪಬ್ ಸೆಟ್ ಹಾಕಲಾಗಿದ್ದು, ಹಾಡಿಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ.

  ಜೋಕೆ ಸಾಂಗ್ ಚಿತ್ರೀಕರಣದಲ್ಲಿ ಯಶ್ ಜೊತೆ ಭಾಗಿಯಾಗಿದ್ದೇನೆ. ಚಿತ್ರತಂಡದ ಜೊತೆ ಮನೆಯವರ ಜೊತೆ ಇರುವಷ್ಟೇ ಖುಷಿಯಾಗಿದ್ದೇನೆ. ಕೆಲವೇ ದಿನಗಳಲ್ಲಿ ಕೆಜಿಎಫ್ ಚಿತ್ರವನ್ನು ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ನೋಡಿ ಎಂದು ಟ್ವೀಟ್ ಮಾಡಿದ್ದಾರೆ ತಮನ್ನಾ.

 • ತಮನ್ನಾಗೆ ಇಷ್ಟವಾಯ್ತು ಯಶ್ ಡೆಡಿಕೇಷನ್

  tamannah likes yash's dedication

  ಕೆಜಿಎಫ್ ನನಗೆ ತುಂಬಾ ಖುಷಿ ಕೊಟ್ಟಿತು. ಯಶ್ ಅವರ ಡೆಡಿಕೇಷನ್, ಪ್ರಶಾಂತ್ ಕೆಲಸ, ಇಡೀ ಟೀಂ ಕೆಲಸ ಮಾಡುತ್ತಿದ್ದ ಪರಿ.. ಎಲ್ಲವೂ ಇಷ್ಟವಾಯ್ತು. ಒಂದೇ ಹಾಡಿನಲ್ಲಿ ಕಾಣಿಸಿಕೊಂಡಿದ್ದರೂ, ಇಡೀ ಚಿತ್ರತಂಡದೊಂದಿಗೆ ಕೆಲಸ ಮಾಡಿದ ಖುಷಿ ಇದೆ.

  ಕೆಜಿಎಫ್ ಚಿತ್ರದಲ್ಲಿ ಐಟಂ ಸಾಂಗ್‍ವೊಂದಕ್ಕೆ ಹೆಜ್ಜೆ ಹಾಕಿರುವ ಮಿಂಚಿನ ಬಳ್ಳಿ ತಮನ್ನಾ ಭಾಟಿಯಾ, ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಹಾಗೆ ಬಂದಿದ್ದಾಗ ಕೆಜಿಎಫ್ ಶೂಟಿಂಗ್ ಅನುಭವ ಹೇಳಿಕೊಂಡಿದ್ದಾರೆ. ಕನ್ನಡದಲ್ಲಿ ನಟಿಸುವ ಆಸೆ ಇದೆ. ಪುನೀತ್ ಜೊತೆ ನಟಿಸುವ ಕನಸಿದೆ. ಒಳ್ಳೆಯ ಕಥೆ, ಕಾಲ ಕೂಡಿಬರಬೇಕು ಅಷ್ಟೆ ಎಂದಿದ್ದಾರೆ ತಮನ್ನಾ.

  ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ಹಾಡುಗಳಲ್ಲಷ್ಟೇ ಕಾಣಿಸಿಕೊಂಡಿದ್ದೇನೆ. ಸ್ಪೆಷಲ್ ಸಾಂಗ್‍ಗಷ್ಟೇ ಹೆಜ್ಜೆ ಹಾಕಿದರೆ ಪ್ರಾಬ್ಲಂ ಆಗುತ್ತೆ ಅನ್ನೋದು ಹಳೆಯ ಮಾತಾಯ್ತು. ಕತ್ರಿನಾ ಕೈಫ್, ಕರೀನಾ ಕಪೂರ್‍ರಂತಹವರು ಕೂಡಾ ಒಂದು ಹಾಡಿನಲ್ಲಷ್ಟೇ ಕಾಣಿಸಿಕೊಂಡ ಸಿನಿಮಾಗಳೂ ಇವೆ ಎಂದಿದ್ದಾರೆ ತಮನ್ನಾ.

 • ನಾನು ಗಂಡನಿಗಾಗಿ ಶಾಪಿಂಗ್ ಮಾಡ್ತಿಲ್ಲ ಅಂದ್ರು ತಮನ್ನಾ..!

  tamannah rubbishes her marriage rumors

  ತಮನ್ನಾ.. ಕನ್ನಡದಲ್ಲಿ ಕಾಣಿಸಿಕೊಂಡಿರೋದು ಒಂದೇ ಸಿನಿಮಾದಲ್ಲಿ. ಜಾಗ್ವಾರ್ ಚಿತ್ರದಲ್ಲಿ ಐಟಂ ಸಾಂಗ್‍ಗೆ ಹೆಜ್ಜೆ ಹಾಕಿ ಹೋದ ತಮನ್ನಾ, ಕನ್ನಡಿಗರಿಗೆ ಹತ್ತಿರವಾಗಿದ್ದು ಪುನೀತ್ ರಾಜ್‍ಕುಮಾರ್ ಜೊತೆ ಕಾಣಿಸಿಕೊಂಡ ಜಾಹೀರಾತಿನ ಮೂಲಕ. ಅದಾದ ಮೇಲೆ ಕನ್ನಡದಲ್ಲಿಯೂ ನಟಿಸುವ ಆಸೆ ವ್ಯಕ್ತಪಡಿಸಿದ್ದ ಮಿಲ್ಕಿಬ್ಯೂಟಿ, ಈಗ ಮಾಧ್ಯಮಗಳ ಮೇಲೆ ಗುರ್ರ್ ಎನ್ನುತ್ತಿದ್ದಾರೆ. ಅದಕ್ಕೆ ಕಾರಣ ಇಷ್ಟೆ, ಇತ್ತೀಚೆಗೆ ತಮನ್ನಾ, ಅಮೆರಿಕದ ಡಾಕ್ಟರ್ ಒಬ್ಬರನ್ನು ಮದುವೆಯಾಗುತ್ತಿದ್ದಾರೆ ಎಂದು ಗಾಸಿಪ್ ಹರಡಲಾಗಿತ್ತು. ಈ ಕುರಿತು ಸಿಟ್ಟಿನಿಂದಲೇ ಪ್ರತಿಕ್ರಿಯೆ ಕೊಟ್ಟಿದ್ದಾರೆ ತಮನ್ನಾ.

  ``ಮೊದಲು ಆ್ಯಕ್ಟರ್ ಜೊತೆ, ನಂತರ ಕ್ರಿಕೆಟರ್ ಜೊತೆ, ಈಗ ಡಾಕ್ಟರ್ ಜೊತೆ... ಮದುವೆಯ ಸುದ್ದಿ ಮಾಡಿದ್ದೀರಿ. ನಾನೇನು ಗಂಡನನ್ನು ಆಯ್ಕೆ ಮಾಡಿಕೊಳ್ಳೋಕೆ ಶಾಪಿಂಗ್ ಮಾಡ್ತಿದ್ದೀನಾ..? ಈ ರೂಮರ್‍ಗಳನ್ನು ಮೊದಲು ನಿಲ್ಲಿಸಿ. ನನ್ನ ವೈಯಕ್ತಿಕ ಜೀವನದ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನೆಲ್ಲ ಹಬ್ಬಿಸಬೇಡಿ. ನಾನಾಗಲೀ, ನನ್ನ ಅಪ್ಪ, ಅಮ್ಮನಾಗಲೀ ಗಂಡು ಹುಡುಕುತ್ತಿಲ್ಲ. ನನಗೆ ಈಗಲೂ ಪ್ರೀತಿ ಇರೋದು ಸಿನಿಮಾದ ಮೇಲೆ ಮಾತ್ರ. ಇಂತಹ ಸುದ್ದಿಗಳು ನಿಮಗೂ, ನನಗೂ ಗೌರವ ತರುವುದಿಲ್ಲ. ನಾನು ಮದುವೆಯಾಗುವುದಾದರೆ, ಆ ದಿನ, ಆ ಸುದ್ದಿಯನ್ನು ನಾನೇ ಜಗತ್ತಿಗೆ ಸಾರಿ ಸಾರಿ ಹೇಳುತ್ತೇನೆ. ಅಲ್ಲಿಯವರೆಗೂ ಸುಮ್ಮನಿರಿ''

  ತಮ್ಮ ಮದುವೆಯ ಗಾಸಿಪ್ ಬಗ್ಗೆ ಸ್ವಲ್ಪ.. ಸ್ವಲ್ಪವೇನು ಸಂಪೂರ್ಣ ಖಾರವಾಗಿಯೇ ಪ್ರತಿಕ್ರಿಯಿಸಿರುವ ತಮನ್ನಾ, ಗಾಸಿಪ್‍ಗಳ ಬಗ್ಗೆ ತಲೆ ಕೆಡಿಸಿಕೊಂಡಿರುವುದಂತೂ ನಿಜ.

 • ನಿಧಿಮಾ ಆಗಲಿದ್ದಾರೆ ತಮನ್ನಾ ಭಾಟಿಯಾ

  tamannah to act in telugu remake of love mocktail

  ಲವ್ ಮಾಕ್‍ಟೇಲ್, ಕೊರೊನಾ ಲಾಕ್‍ಡೌನ್ ಆರಂಭಕ್ಕೂ ಮೊದಲು ರಿಲೀಸ್ ಆಗಿ ಪ್ರೇಕ್ಷಕರ ಮನಗೆದ್ದಿದ್ದ ಚಿತ್ರ. ನಂತರ ಒಟಿಟಿ ಪ್ಲಾಟ್‍ಫಾರಂನಲ್ಲಿ ಸಂಭ್ರಮದ ಅಲೆ ಎಬ್ಬಿಸಿದ ಕ್ಯೂಟ್ ಲವ್ ಸ್ಟೋರಿ. ಡಾರ್ಲಿಂಗ್ ಕೃಷ್ಣ ಫಸ್ಟ್ ಟೈಂ ಡೈರೆಕ್ಷನ್‍ನಲ್ಲಿಯೇ ಲವ್ಲೀ ಹಿಟ್ ಕೊಟ್ಟಿದ್ದರು. ಕೃಷ್ಣ ಮತ್ತು ಮಿಲನ ನಾಗರಾಜ್ ಅವರ ರಿಯಲ್ ಲವ್ ಸ್ಟೋರಿಯೂ ಜೊತೆಯಾಗಿ ಇಡೀ ಸಿನಿಮಾ ಲವ್ಲಿ ಜರ್ನಿಯಂತೆ ಭಾಸವಾಗಿತ್ತು. ಪ್ರೇಕ್ಷಕರ ಎದೆಗೆ ನಿಧಾನವಾಗಿ ಇಳಿಯುವ ಕಥೆ ಅಂತ್ಯದಲ್ಲಿ ಭಾವುಕರನ್ನಾಗಿಸಿತ್ತು. ಈಗ ಆ ಚಿತ್ರ ತೆಲುಗುಗೆ ಹೋಗುತ್ತಿದೆ.

  ತೆಲುಗಿನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ನಾಯಕಿಯಾಗಿದ್ದು, ನಿಧಿಮಾ ಪಾತ್ರ ಮಾಡಲಿದ್ದಾರೆ. ಕೃಷ್ಣನ ಪಾತ್ರದಲ್ಲಿ ಸತ್ಯದೇವ್ ನಟಿಸುತ್ತಿದ್ದಾರೆ. ಮೈನಾ ನಾಗಶೇಖರ್ ತೆಲುಗಿನಲ್ಲಿ ನಿರ್ದೇಶನ ಮಾಡಲಿದ್ದಾರೆ. ಸತ್ಯ ಹೆಗಡೆ ಕ್ಯಾಮೆರಾ ಕೆಲಸ ವಹಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಭಾವನಾ ರವಿ ಮತ್ತು ನಾಗಶೇಖರ್ ನಿರ್ಮಾಪಕರು. ಅಲ್ಲಿಯೂ ಚಿತ್ರದ ಟೈಟಲ್ ಲವ್ ಮಾಕ್‍ಟೇಲ್.

 • ಮತ್ತೆ ಮಿಲ್ಕಿಬ್ಯೂಟಿ ಜೊತೆ ಯಶ್..?

  yash to pair with tamannah once again?

  ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ಕೆಜಿಎಫ್ ಚಾಪ್ಟರ್ 2 ಬಿಟ್ಟು ಬೇರಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ. ಶುರುವಾಗಿದ್ದ ಕಿರಾತಕ ಸೀಕ್ವೆಲ್, ಹಾಗೆಯೇ ಸೈಲೆಂಟ್ ಆಗಿದೆ. ಹೀಗಿರುವಾಗಲೇ ಹೊಸ ಚಿತ್ರದ ಸುದ್ದಿ ಕೇಳಿ ಬರೋಕೆ ಶುರುವಾಗಿದೆ.

  ಯಶ್ ಒನ್ಸ್ ಎಗೇಯ್ನ್ ಮಲ್ಟಿ ಲಾಂಗ್ವೇಜ್ ಚಿತ್ರದಲ್ಲಿ ನಟಿಸುತ್ತಿದ್ದು, ತಮನ್ನಾ ಯಶ್ ಎದುರು ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ. ಪುರಿ ಜಗನ್ನಾಥ್ ನಿರ್ದೇಶಕರಂತೆ. ಅಕ್ಟೋಬರ್ 23ಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್. ಅದು ಮುಗಿದ ಕೂಡಲೇ ಈ ಚಿತ್ರ ಶುರುವಾಗಲಿದೆಯಂತೆ. ಆದರೆ.. ಇದಾವುದೂ ಅಧಿಕೃತ ಸುದ್ದಿಯಲ್ಲ. ಗಾಂಧಿನಗರದ ಗಾಳಿಸುದ್ದಿ. ಹೌದು ಅಥವಾ ಇಲ್ಲ ಎನ್ನಬೇಕಾದವರು ಸದ್ಯಕ್ಕೆ ಸಂಪರ್ಕ ವಲಯದಲ್ಲಿ ಇಲ್ಲ.

 • ಮಿಲ್ಕೀ ಬ್ಯೂಟಿ ಎನ್ನಬಾರದಂತೆ..

  dont call me milky beauty says tamannah

  ತಮನ್ನಾ ಭಾಟಿಯಾ.. ಇದೀಗ ತಾನೆ ಕೆಜಿಎಫ್‍ನ ಮಿಂಚಿನ ಬಳ್ಳಿಯಾಗಿ ಕಿಚ್ಚು ಹಚ್ಚಿಸಿರುವ ಚೆಲುವೆ. ಮಿಲ್ಕೀಬ್ಯೂಟಿ ಎಂದೇ ಫೇಮಸ್. ಆದರೆ, ತಮನ್ನಾ ಅವರೇ, ತಮ್ಮನ್ನು ಮಿಲ್ಕಿಬ್ಯೂಟಿ ಎನ್ನಬೇಡಿ ಎಂದು ಮನವಿ ಮಾಡಿದ್ದಾರೆ. ಅದಕ್ಕೆ ಅವರು ನೀಡಿರುವ ಕಾರಣ ಇದು.

  ಮೈಬಣ್ಣದ ಮೇಲೆ ಒಬ್ಬರನ್ನು ಹೊಗಳುವುದು ಅಥವಾ ತೆಗಳುವುದು ಒಳ್ಳೆಯದಲ್ಲ. ಮೈಬಣ್ಣದ ಮೇಲೆ ತಾರತಮ್ಯ ಮಾಡುವ ಭಾವನೆ ಮೊದಲು ತೊಲಗಬೇಕು. ಹೀಗಾಗಿ ನನಗೆ ಮಿಲ್ಕಿಬ್ಯೂಟಿ ಎಂದು ಕರೆದಾಗ ಕಿರಿಕಿರಿಯಾಗುತ್ತದೆ ಎಂದಿದ್ದಾರೆ ತಮನ್ನಾ.

 • ಯುವರತ್ನ ಅಪ್ಪು ಜೊತೆ ತಮನ್ನಾ..?

  will tamannah pair opposite puneeth in yuvataratna

  ತಮನ್ನಾ ಭಾಟಿಯಾ ಎಂಬ ಈ ಚೆಲುವೆ ಕನ್ನಡದಲ್ಲಿ ಕಾಣಿಸಿಕೊಂಡಿರೋದು ಎರಡು ಐಟಂ ಸಾಂಗುಗಳಲ್ಲಿ. ಮತ್ತು ಪುನೀತ್ ಜೊತೆಗಿನ ಜಾಹೀರಾತಿನಲ್ಲಿ. ಅಷ್ಟು ಬಿಟ್ಟರೆ, ಟಾಲಿವುಡ್, ಕಾಲಿವುಡ್, ಬಾಲಿವುಡ್‍ನಲ್ಲಿ ಸುತ್ತುತ್ತಿರುವ ಈ ಚೆಲುವೆ ಕನ್ನಡದಲ್ಲಿ ಪ್ರಧಾನ ಪಾತ್ರಕ್ಕೆ ಬಂದೇ ಇಲ್ಲ. ಹಲವು ಬಾರಿ ಕನ್ನಡದಲ್ಲಿ ನಟಿಸುವ ಇಚ್ಛೆ ವ್ಯಕ್ತಪಡಿಸಿದ್ದ ತಮನ್ನಾ, ಈ ಬಾರಿ ಬರೋದು ಖಚಿತಾನಾ..?

  ಒಂದು ಮೂಲದ ಪ್ರಕಾರ ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದ್‍ರಾಮ್ ಹಾಗೂ ಹೊಂಬಾಳೆ ಕಾಂಬಿನೇಷನ್ನಿನ ಯುವರತ್ನ ಚಿತ್ರಕ್ಕೆ ತಮನ್ನಾ ಬರುತ್ತಿದ್ದಾರೆ. ಮಾತುಕತೆ ನಡೆಯುತ್ತಿರುವುದು ಹೌದು ಎನ್ನುತ್ತಿರುವ ಚಿತ್ರತಂಡ, ಸುದ್ಧಿಯನ್ನು ಅಧಿಕೃತಗೊಳಿಸಿಲ್ಲ. ಏಕೆಂದರೆ, ಯಾವುದೂ ಇನ್ನೂ ಫೈನಲ್ ಆಗಿಲ್ಲ. 

 • ಶೂ ಮೂಲಕ ಲವ್ ಸ್ಟೋರಿ ಹೇಳಿದ ಮಿಲ್ಕಿಬ್ಯೂಟಿ

  ಶೂ ಮೂಲಕ ಲವ್ ಸ್ಟೋರಿ ಹೇಳಿದ ಮಿಲ್ಕಿಬ್ಯೂಟಿ

  ಪ್ರೀತಿಯನ್ನು ಪ್ರೇಮಿಗಳು ಹೇಗ್ ಹೇಗೋ ಹೇಳ್ತಾರೆ. ಆದರೆ ಶೂಗಳ ಮೂಲಕ ಪ್ರೀತಿಯನ್ನು ಬಹಿರಂಗಪಡಿಸಿದ ಜೋಡಿಯನ್ನು ಎಂದಾದರೂ ನೋಡಿದ್ದೀರಾ.. ಅದನ್ನೂ ಈಗ ಮಾಡಿದ್ದಾರೆ. ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಲವ್ ಸ್ಟೋರಿ ಮಿಸ್ಟರಿ ಶೂಗಳಲ್ಲಿದೆ. ಇವರಿಬ್ಬರ ಲವ್ ಸ್ಟೋರಿ ಗುಸು ಗುಸು ನಡೆದಿತ್ತಾದರೂ ಒಂದು ಲೆವೆಲ್ಲಿಗೆ ಹೊರ ಜಗತ್ತಿಗೆ ಗೊತ್ತಾಗಿದ್ದು ಈ ವರ್ಷದ ನ್ಯೂ ಇಯರ್ ಪಾರ್ಟಿಯಲ್ಲಿ. ಹೊಸ ವರ್ಷದ ಪಾರ್ಟಿಯಲ್ಲಿ ಹಿಂದಿಯ ವಿಜಯ್ ವರ್ಮಾ ಹಾಗೂ ತಮನ್ನಾ ಭಾಟಿಯಾ ಕಿಸ್ ಮಾಡುತ್ತಿರುವ ಫೋಟೋ ಮತ್ತು ವಿಡಿಯೋ ಹೊರಬಂದಿತ್ತು. ಅದಾದ ನಂತರ ಗೋವಾದಿಂದ ಬಂದ ತಮನ್ನಾ ಸಿಂಗಲ್ ಆಗಿಯೇ ಇದ್ದರೂ, ಬೆನ್ನಲ್ಲೇ ವಿಜಯ್ ವರ್ಮಾ ಕಾಣಿಸಿಕೊಂಡಿದ್ದರು. ಆದರೆ ಈ ಲವ್ ಸ್ಟೋರಿ ಮತ್ತು ಶೂಗಳ ಕಥೆಯೇ ಬೇರೆ.

  ವಿಜಯ್ ವರ್ಮಾ ಪ್ರೇಮಿಗಳ ದಿನ ಒಂದು ಫೋಟೋ ಹಾಕಿದ್ದಾರೆ. ಆ ಫೋಟೋದಲ್ಲಿ ಒಂದು ಕಡೆ ವಿಜಯ್ ಶೂಗಳಿದ್ದರೆ, ಇನ್ನೊಂದು ಕಡೆ ತಮನ್ನಾ ಭಾಟಿಯಾ ಶೂಗಳಿವೆ. ನಡುವೆ ಲವ್ ಸಿಂಬಲ್. ಇಷ್ಟಕ್ಕೂ ಫೋಟೋದಲ್ಲಿ ಇಬ್ಬರ ಮುಖ ಕಾಣುತ್ತಿಲ್ಲ. ಆದರೆ ಅವರೇ ಇವರು ಎಂದು ಗೊತ್ತಾಗಿದ್ದು ಹೇಗೆ? ನೆಟಿಜನ್ಸ್ ಇರೋದೇ ಅದಕ್ಕಲ್ವಾ.. ಹುಡುಕಾಡಿ.. ತಡಕಾಡಿ.. ಫೋಟೋದಲ್ಲಿರುವ ಶೂಗಳನ್ನು ಹಾಕಿಕೊಂಡಿರುವ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಫೋಟೋಗಳನ್ನೂ ಹುಡುಕಿದ್ದಾರೆ.