` night out, - chitraloka.com | Kannada Movie News, Reviews | Image

night out,

  • 'Night Out’ Is An 'Auto’ Comedy Thriller

    night out is a movie by rakesh aduga

    The Josh actor Rakesh Adiga, who has turned director with his debut venture 'Night Out’, is gearing up for release with the trailer and audio of the film being launched on January 17.

    With the tagline - a psychedelic journey, the movie is a comedy thriller, a first of its kind experimental genre, according to the director.

    “It's about two friends who embark upon a journey filled with humour and excitement which eventually takes a serious note. A flashback screenplay pattern, the journey on an auto rickshaw is loaded with full of surprises as the two start confessing to each other,” Rakesh adds.

    The entire journey which takes place within a span of six hours, stars Bharath and Akshay, the two male protagonist along with Shruti Goradia as the heroine.

    Rakesh wraps up saying that trailer and the two video songs of his movie is being launched on January 17, as the team is planning for release in March.

  • Night Out Review: Chitraloka Rating 3.5/ 5*

    night out review

    Actor Rakesh Adiga of the fame of Josh who turned director with Night Out, has started off on a good note as he delivers a well made psychological drama filled with the right amount of humor.

    Taglined as psychedelic journey, Rakesh, in a first of its kind experimental genre - comedy thriller embarks upon a different journey, revolving around two male protagonists, portrayed by Bharath and Akshay Pavar. While one is a college student another is an autorickshaw driver. 

    They set on a journey filled with humor and excitement which eventually takes a serious note. Made in flashback pattern, it is loaded with full of surprising twists and turns based on the concessions made by the two best friends during a late night jolly ride. 

    When the driver falls in love with a girl from the college, the real action in the drama starts to unfold. Eventually when the girl finds out the real identity of the driver, she gives him one last chance to prove his honesty. Then, a series of flashback scenes keeps it interesting for the audience.

    The wittiness combined with a serious subject focused upon the emotional side of two friends, makes it a clear winner. Insofar as the performances are concerned, both the actors along with the Shruthi Goradia deliver justice to their characters. Find out if the auto rickshaw driver finally manages to wins the trust of his lover in this must watch unusual drama, which promises to both surprise and leave you light hearted in the end.

     

  • Rakesh Adiga Turns Director With 'Night Out'

    rakesh adiga turns director wih night out

    Rakesh Adiga who made his debut with Shivamani's'Josh' has silently turned director with a new film called 'Night Out'. The shooting for the film has already started and the first schedule of the film is complete.

    'Night out' tells the story of night life of two youths. What all the two youths face in a night forms the crux of the film. Rakesh himself has penned the story of the film apart from directing it. Dr Naveen is the producer.

    Bharath and Akshay who had acted in 'Josh' are acting in the film, while Shruthi Goradia is the heroine. Arun Alexander is the cinematographer, while Sameer Kulkarni is the music director.

     

  • Rakesh Adiga's Directorial Debut On April 12th

    rakesh adiga's directorial debut on april 12th

    Rakesh Adiga's directorial debut 'Night Out' is all set to release across Karnataka on the 12th of April. The film stars Bharath, Akshay and Shruthi Goradia in prominent roles.

    'Night out' tells the story of night life of two youths. What all the two youths face in a night forms the crux of the film. Rakesh himself has penned the story of the film apart from directing it.

    Arun Alexander is the cinematographer, while Sameer Kulkarni is the music director. Dr Naveen has produced the films under the Aryan Motion Pictures banner.

  • ಏಪ್ರಿಲ್ ಲಕ್ಕಿ ನಿರೀಕ್ಷೆಯಲ್ಲಿ ರಾಕೇಶ್ ಅಡಿಗ 

    rakesh adiga waiting for april  luck to work again

    ಅದು 2009. ಏಪ್ರಿಲ್ 10ನೇ ತಾರೀಕು. ಕನ್ನಡ ಚಿತ್ರರಂಗದಲ್ಲೊಂದು ಸಿನಿಮಾ ಮೋಡಿಯನ್ನೇ ಮಾಡಿತ್ತು. ನಿರ್ದೇಶಕ ಶಿವಮಣಿ, ಅದೇ ಮೊದಲ ಬಾರಿಗೆ ಹೊಸಬರನ್ನು ಹಾಕಿಕೊಂಡು ಒಂದು ಯೂತ್‍ಫುಲ್ ಲವ್ ಸ್ಟೋರಿ ಕೊಟ್ಟಿದ್ದರು. ಆ ಚಿತ್ರದ ಹೆಸರು ಜೋಶ್. ರಾಕೇಶ್ ಅಡಿಗ ಎಂಬ ಚೆಲುವ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದು ಹಾಗೆ..

    ಈಗ 2019. ಏಪ್ರಿಲ್ 12. ರಾಕೇಶ್ ಅಡಿಗ ನಿರ್ದೇಶಕರಾಗಿ ಮೊದಲ ಹೆಜ್ಜೆಯಿಟ್ಟಿದ್ದಾರೆ. ಇದಕ್ಕೂ ಮುನ್ನ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ರಾಕೇಶ್, ಈಗ ನೈಟ್ ಔಟ್ ಸಿನಿಮಾ ನಿರ್ದೇಶಿಸಿದ್ದಾರೆ.

    ಸರಿಯಾಗಿ 10 ವರ್ಷಗಳ ಹಿಂದೆ ಹೀರೋ ಆಗಿ ಎಂಟ್ರಿ ಕೊಟ್ಟಾಗ ಏಪ್ರಿಲ್ ತಿಂಗಳು ಅದೃಷ್ಟ ಹೊತ್ತು ತಂದಿತ್ತು. ಈಗ ನಿರ್ದೇಶಕರಾಗಿ ಮೊದಲ ಹೆಜ್ಜೆ. ಅದೇ ಏಪ್ರಿಲ್ ತಿಂಗಳು. ಮತ್ತೊಂದು ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ ರಾಕೇಶ್ ಅಡಿಗ.

    ಭರತ್, ಶೃತಿ ಗೊರಾಡಿಯಾ, ಅಕ್ಷಯ್ ನಟಿಸಿರುವ ಚಿತ್ರಕ್ಕೆ, ಸಮೀರ್ ಕುಲಕರ್ಣಿ ವಿಭಿನ್ನ ಸಂಗೀತ ಸಂಯೋಜಿಸಿದ್ದಾರೆ. ಆರ್ಯನ್ ಮೋಷನ್ ಪಿಕ್ಚರ್ಸ್ ಬ್ಯಾನರ್‍ನಲ್ಲಿ ಬರುತ್ತಿರುವ ಸಿನಿಮಾ ಇದು. ಲಕ್ಷ್ಮಿ ನವೀನ್ ಮತ್ತು ನವೀನ್ ಕೃಷ್ಣ ನಿರ್ಮಾಪಕರು.

  • ಗುಜರಾತಿ ಚೆಲುವೆಯ ನೈಟ್ ಔಟ್

    gujarathi beaty thrilled over night out

    ರಾಕೇಶ್ ಅಡಿಗ ನಟಿಸಿ, ನಿರ್ದೇಶಿಸಿರುವ ಸಿನಿಮಾ ನೈಟ್‍ಔಟ್. ಇದೇ ವಾರ ತೆರೆಗೆ ಬರುತ್ತಿರೋ ಈ ಸಿನಿಮಾದ ವಿಶೇಷವೆಂದರೆ, ಚಿತ್ರದಲ್ಲಿನ ಒಂದು ಆಟೋ. ಆ ಆಟೋ ಕೂಡಾ ಒಂದು ಪಾತ್ರವಂತೆ. ಹೀಗೆ ವಿಶೇಷತೆಯನ್ನೇ ಕಟ್ಟಿಕೊಟ್ಟಿರುವ ಸಿನಿಮಾದ ನಾಯಕಿ ಶೃತಿ. 

    ಗುಜರಾತಿ ಮೂಲದ ಈ ಹುಡುಗಿಗೆ ಇದು 2ನೇ ಸಿನಿಮಾ. ಈ ಮೊದಲು ಸಂಕಷ್ಟಕರ ಗಣಪತಿ ಚಿತ್ರದಲ್ಲಿ ನಟಿಸಿದ್ದ ಚೆಲುವೆ.

    `ನಾನು ರಿಯಲ್ಲಾಗಿ ಹೇಗಿದ್ದೇನೋ.. ಅದಕ್ಕೆ ತದ್ವಿರುದ್ಧವಾದ ಪಾತ್ರ ಚಿತ್ರದಲ್ಲಿದೆ. ನಾನು ಜೋವಿಯಲ್. ಆದರೆ ಸಿನಿಮಾದಲ್ಲಿ ಸೈಲೆಂಟ್' ಎನ್ನುತ್ತಾರೆ ನಾಯಕಿ ಶೃತಿ.

    ನಮ್ಮ ಚಿತ್ರದಲ್ಲಿ ಸ್ಟಾರ್‍ಗಳಿಲ್ಲ. ಆದರೆ, ಅದನ್ನು ಮೀರಿಸುವ ಒಂದೊಳ್ಳೆ ಕಥೆ ಇದೆ ಎನ್ನುವ ವಿಶ್ವಾಸ ರಾಕೇಶ್ ಅಡಿಗ ಅವರದ್ದು.

  • ನೈಟ್ ಔಟ್ ರಿಯಲ್.. ರಿಯಲ್.

    night out is based on real life events

    ರಾಕೇಶ್ ಅಡಿಗ ನಿರ್ದೇಶನದ ಚೊಚ್ಚಲ ಸಿನಿಮಾ ನೈಟ್ ಔಟ್ ರಿಲೀಸ್ ಆಗುತ್ತಿದೆ. ಇಡೀ ಚಿತ್ರದಲ್ಲಿರುವು 6 ಗಂಟೆಯ ಕಥೆ. ಆ ಕಥೆಯನ್ನು ಒಂದೂಮುಕ್ಕಾಲು ಗಂಟೆಯಲ್ಲಿ ಹೇಳಿದ್ದಾರೆ ರಾಕೇಶ್ ಅಡಿಗ. ಕಥೆ ಮತ್ತು ಚಿತ್ರಕಥೆ ವಿಭಿನ್ನ ಅಷ್ಟೇ ಅಲ್ಲ, ಅನವಶ್ಯಕ ಎನ್ನುವ ಯಾವ ಅಂಶವೂ ಇಲ್ಲ. ಹೀಗಾಗಿ ಕ್ಷಣ ಕ್ಷಣವೂ ಚಿತ್ರ ನೋಡಿಸಿಕೊಂಡು ಹೋಗುತ್ತಾ ಮನರಂಜನೆ ಕೊಡುತ್ತೆ ಎನ್ನುವುದು ಚಿತ್ರತಂಡದ ವಾದ.

    ಯಾವುದೇ ಪಾತ್ರಕ್ಕೆ ವೈಭವೀಕರಣ ಇಲ್ಲ. ಚಿತ್ರದಲ್ಲಿರೋದು ಮೂರು ಪ್ರಮುಖ ಪಾತ್ರಗಳು. ಆ ಪಾತ್ರಗಳು ತಮ್ಮನ್ನು ತಾವೇ ಇಂಟ್ರಡ್ಯೂಸ್ ಮಾಡಿಕೊಳ್ಳುತ್ತವೆ. 4 ಹಾಡುಗಳೂ ಇವೆ. ಭರತ್ ಮತ್ತು ಶೃತಿ ಗೊರಾಡಿಯಾ ನಾಯಕ, ನಾಯಕಿ. 

  • ನೈಟ್ ಔಟ್.. 6 ಗಂಟೆಯಲ್ಲಿ ಅವನು ಹುಚ್ಚನಾಗಿದ್ದು ಹೇಗೆ..?

    night out is based on real story

    ಕೆಲವು ಚಿತ್ರಗಳಲ್ಲಿ ಕಥೆ ಎರಡು ಮೂರು ಜನ್ಮಕ್ಕಾಗುವಷ್ಟಿರುತ್ತವೆ. ಜನ್ಮ ಜನ್ಮಾಂತರದ ಕಥೆಗಳೂ ಇರುತ್ತವೆ. ಇನ್ನು ಕೆಲವು ಕ್ರೈಂ ಥ್ರಿಲ್ಲರ್‍ಗಳಲ್ಲಿ ಒಂದು ದಿನದ ಕಥೆಗಳೂ ಇರುತ್ತವೆ. ಆದರೆ, ಈ ನೈಟ್‍ಔಟ್ ಹಾಗಲ್ಲ. ಇಡೀ ಸಿನಿಮಾ ಜಸ್ಟ್ 6 ಗಂಟೆಯ ಕಥೆ.

    ಸಿನಿಮಾದ ಓಪನಿಂಗ್ ಸೀನ್‍ನಲ್ಲಿ ವ್ಯಕ್ತಿಯೊಬ್ಬ ಹುಚ್ಚನಂತೆ ಓಡಾಡುತ್ತಾ ಕಿರುಚಾಡುತ್ತಿರುತ್ತಾನೆ.. ಜಸ್ಟ್ 6 ಗಂಟೆಯ ಹಿಂದೆ ಅವನು ನಾರ್ಮಲ್ ಆಗಿದ್ದ. 

    ಸ್ವಲ್ಪ ಹಿಂದಕ್ಕೆ ಹೋದರೆ, ಜಸ್ಟ್ 6 ಗಂಟೆಯ ಹಿಂದೆ ಬಾರ್‍ವೊಂದರಿಂದ ಕಥೆ ಶುರುವಾಗುತ್ತೆ. ಬೆಂಗಳೂರಿನ ಆಚೆಯಲ್ಲಿರೋ ಪುಟ್ಟ ಬಾರ್‍ನಲ್ಲಿದ್ದ ಆ ಯುವಕ, ನಂತರದ 6 ಗಂಟೆಯಲ್ಲಿ ಹುಚ್ಚನಾಗೋಕೆ ಏನು ಕಾರಣ..? ಹೀಗೆ ಒಂದು ಕುತೂಹಲದ ಪ್ರಶ್ನೆಯನ್ನು ಪ್ರೇಕ್ಷಕರ ಮುಂದಿಟ್ಟು ಕುಳಿತಿದ್ದಾರೆ ರಾಕೇಶ್ ಅಡಿಗ.

    ಜೋಶ್ ಖ್ಯಾತಿಯ ನಟ ರಾಕೇಶ್ ಅಡಿಗಗೆ ಇದು ನಿರ್ದೇಶಕನಾಗಿ ಮೊದಲ ಸಿನಿಮಾ. ಕಥೆಯೂ ಅವರದ್ದೇ. ಭರತ್ ಗೌಡ, ಶೃತಿ ಗೊರಾಡಿಯ ನಾಯಕ, ನಾಯಕಿ. ಇದೇ ವಾರ ಥಿಯೇಟರುಗಳಿಗೆ ಲಗ್ಗೆಯಿಡುತ್ತಿದೆ ನೈಟ್‍ಔಟ್.

  • ಹೀರೋ ಬನ್‍ಗಯಾ ಡೈರೆಕ್ಟರ್ - ನೈಟ್‍ಔಟ್ ಅಡಿಗ

    hero turns director thorugh night out

    ಕನ್ನಡದಲ್ಲಿ ಹೀರೋಗಳು ನಿರ್ದೇಶಕರಾಗಿರುವುದು ಹೊಸದೇನಲ್ಲ. ಹೀರೋಗಳಾಗಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸುದೀಪ್, ಡೈರೆಕ್ಟರ್ ಆಗಿಯೂ ಗೆದ್ದಿದ್ದಾರೆ. ವಿಜಯ್ ರಾಘವೇಂದ್ರ ಮೊನ್ನೆ ಮೊನ್ನೆ ನಿರ್ದೇಶನದಲ್ಲೊಂದು ಕೈ ನೋಡಿದ್ದಾರೆ. ಇಂತಹ ಹಲವು ಪ್ರಯತ್ನಗಳ ನಡುವೆಯೇ ಡೈರೆಕ್ಟರ್ ಆಗುವ ಸಾಹಸಕ್ಕೆ ಕೈ ಹಾಕಿರುವುದು ರಾಕೇಶ್ ಅಡಿಗ.

    ರಾಕೇಶ್ ಅಡಿಗ ಸಿನಿಮಾಗೆ ಎಂಟ್ರಿ ಕೊಟ್ಟಿದ್ದೇ ಹೀರೋ ಆಗಿ. ಜೋಶ್ ಚಿತ್ರದಲ್ಲಿ ನಿತ್ಯಾ ಮೆನನ್ ಎದುರು ನಟಿಸಿ ಗೆದ್ದಿದ್ದ ರಾಕೇಶ್ ಅಡಿಗ, ಅದಾದ ಮೇಲೆ ಅಲೆಮಾರಿ, ಯಾರೇ ಕೂಗಾಡಲಿ ಚಿತ್ರಗಳಲ್ಲಿ ನೆಗೆಟಿವ್ ಶೇಡ್‍ಗಳಲ್ಲಿಯೂ ನಟಿಸಿ 

    ಗೆದ್ದಿದ್ದವರು. ಈಗ ನೈಟ್ ಔಟ್ ಚಿತ್ರದ ಮೂಲಕ ಡೈರೆಕ್ಟರ್ ಆಗಿ ಒಂದು ಕೈ ನೋಡುತ್ತಿದ್ದಾರೆ.

    ಒಂದು ರಾತ್ರಿ, ಒಂದು ಆಟೋ, ಕೆಲವೇ ಪಾತ್ರಧಾರಿಗಳನ್ನಿಟ್ಟುಕೊಂಡು ಥ್ರಿಲ್ಲರ್ ಕಥೆಯೊಂದನ್ನು ಹೇಳಿದ್ದಾರೆ ರಾಕೇಶ್ ಅಡಿಗ. ಎಸ್‍ಎಸ್‍ಎಲ್‍ಸಿಯಲ್ಲಿದ್ದಾಗಲೇ ಸಾಕ್ಷ್ಯಚಿತ್ರಗಳಿಗೆ, ಅಲ್ಬಂಗಳಿಗೆ ಕೆಲಸ ಮಾಡಿದ್ದ ರಾಕೇಶ್ ಅಡಿಗ, ಸ್ವತಃ ತಾವೇ ಒಂದು ಟೀಮ್ ಕಟ್ಟಿ ಹೊಸಬರ ತಂಡವನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಚಿತ್ರಕ್ಕೆ ಲಕ್ಷ್ಮೀ ನವೀನ್ ಮತ್ತು ನವೀನ್ ಕೃಷ್ಣ ನಿರ್ಮಾಪಕರು.