ಸಂಕಷ್ಟಹರ ಗಣಪತಿ. ಬಿಡುಗಡೆಗೆ ಸಿದ್ಧವಾಗಿರೋ ಈ ಚಿತ್ರದಲ್ಲಿರೋದು ಸೈಕಾಲಜಿಕಲ್ ಕಥೆ. ಅದರಲ್ಲೂ ಏಲಿಯಾನ್ ಹ್ಯಾಂಡ್ ಸಿಂಡ್ರೋಮ್ ಅನ್ನೋ ಕಾಯಿಲೆಯ ವಿಸ್ಮಯ ಲೋಕ. ಕನ್ನಡಕ್ಕಂತೂ ಇದು ತೀರಾ ಎಂದರೆ ತೀರಾ ಹೊಸತು. ಸ್ವತಃ ನಿರ್ದೇಶಕರಿಗೆ ಇಂಥಾದ್ದೊಂದು ಕಾಯಿಲೆ ಇರುತ್ತೆ ಅನ್ನೋ ಕಲ್ಪನೆಯೂ ಇರಲಿಲ್ಲವಂತೆ. ಕಾಯಿಲೆಯ ವಿಷಯ ಗೊತ್ತಾದಾಗ ಅಚ್ಚರಿಪಟ್ಟರಂತೆ ನಿರ್ದೇಶಕ ಅರ್ಜುನ್ ಕುಮಾರ್.
ನಂತರ ಕಾಯಿಲೆಯ ಬೆನ್ನು ಹತ್ತಿದ ಅರ್ಜುನ್, ವೈದ್ಯಲೋಕದ ವೆಬ್‍ಸೈಟುಗಳನ್ನೆಲ್ಲ ಜಾಲಾಡಿದ್ದಾರೆ. ಅರೇಬಿಕ್, ಹಾಲಿವುಡ್ ಸಿನಿಮಾ, ತೆಲುಗಿನಲ್ಲಿ ಬಂದಿರೋ ಒಂದು ಶಾರ್ಟ್‍ಫಿಲ್ಮ್, ಬಿಬಿಸಿಯದ್ದೊಂದು ಡಾಕ್ಯುಮೆಂಟರಿ ಎಲ್ಲವನ್ನೂ ನೋಡಿದ್ದಾರೆ. ಅದು ಆ ಕಾಯಿಲೆಯ ಬಗೆಗಿನ ಕುತೂಹಲಕ್ಕೆ. ಆ ಕುತೂಹಲ ತಣಿದ ಮೇಲೆ ಇದನ್ನೇ ಏಕೆ ಸಿನಿಮಾ ವಸ್ತು ಆಗಿಸಬಾರದು ಎನಿಸಿದೆ. ಹಠಕ್ಕೆ ಬಿದ್ದವರಂತೆ ಆ ಕಾಯಿಲೆಯನ್ನು ಸಿನಿಮಾ ರೂಪಕ್ಕಿಳಿಸಿದ್ದಾರೆ ನಿರ್ದೇಶಕ ಅರ್ಜುನ್.
ಈ ಸಿನಿಮಾದಲ್ಲಿ ಹೀರೋಗೆ ಅವನ ಒಂದು ಕೈ ವಿಲನ್. ಏಲಿಯನ್ ಹ್ಯಾಂಡ್ ಸಿಂಡ್ರೋಮ್ ಅಂದ್ರೆ ಅದೇ. ಹೀಗಾಗಿಯೇ ಚಿತ್ರಕ್ಕೆ ಸಂಕಷ್ಟಹರ ಗಣಪತಿ ಅನ್ನೋ ಟೈಟಲ್ ಇಡಲಾಗಿದೆ. ಕುತೂಹಲ ಶುರುವಾಯ್ತಾ..? ಜಸ್ಟ್ ವೇಯ್ಟ್. ಸಿನಿಮಾ ಇನ್ನೇನು ತೆರೆಗೆ ಬರುತ್ತಿದೆ.