ಕುಮಾರಿ ರ್21 ಟ್ರೇಲರ್ ನೋಡಿದವರು ಶಾಕ್ ಆಗೋದು ಗ್ಯಾರಂಟಿ. ಟ್ರೇಲರ್‍ನಲ್ಲಿರೋದು ಅಂತಹ ದೃಶ್ಯ ಮತ್ತು ಸಂಭಾಷಣೆಗಳು. ಸುಮ್ಮನೆ ಒಂದಿಷ್ಟು ಸ್ಯಾಂಪಲ್ ನೋಡಿ.ಹೀರೋ ಹುಡುಗಿಯ ಹೆಸರು ಕೇಳ್ತಾನೆ. ಹುಡುಗಿ ಬಾಡಿಯ ಸ್ಟಾಟಿಸ್ಟಿಕ್ಸ್ ಹೇಳ್ತಾಳೆ. ಲೈನ್ ಹೊಡೆಯೋಕೆ ಫಿಗರ್ ಸಾಕಾಗೊಲ್ವಾ..? ಫುಲ್ ಬಯೋಡೇಟಾ ಬೇಕಾ ಅಂತಾಳೆ.ಹೀರೋ ಜೊತೆ ಬೈಕ್‍ನಲ್ಲಿ ರೊಮ್ಯಾಂಟಿಕ್ ಆಗಿ ರೈಡ್ ಮಾಡುವ ದೃಶ್ಯವಿದೆ. ಹೀರೋಗೆ ಕಿಸ್ ಕೊಟ್ಟು, ಇದೇ ನನ್ನ ಫಸ್ಟ್ ಕಿಸ್, ಚೆನ್ನಾಗಿದ್ಯಾ ಅಂತಾಳೆ ನಾಯಕಿ.
ಬರೀ ನನ್ನ ಸೊಂಟಕ್ಕೇ 5000 ಕೊಡಬಹುದು ಅನ್ನೋ ಹುಡುಗಿ, ನಾನು ಮದುವೆ ಆಗೋ ಹುಡುಗಿ ವರ್ಜಿನ್ ಆಗಿರಬೇಕು ಎಂದು ಆಸೆ ಪಡೋದ್ರಲ್ಲಿ ತಪ್ಪೇನಿಲ್ವಲ್ಲಾ ಅನ್ನೋ ಹೀರೋ.. ರೊಮ್ಯಾಂಟಿಕ್ ದೃಶ್ಯಗಳು..
ಇವೆಲ್ಲ ಮುಗಿಯುತ್ತಿದ್ದಂತೆ ಹೀರೋನ ಪುಂಡ ಸ್ನೇಹಿತರ ಡೈಲಾಗ್ಸ್..ಕ್ರೈಂ ದೃಶ್ಯ, ಪೊಲೀಸ್ ತನಿಖೆ.. ಹೀಗೆ ಟ್ರೇಲರ್ ಕುತೂಹಲ ಹುಟ್ಟಿಸುತ್ತೆ. ಇದು ತೆಲುಗಿನ ಕುಮಾರಿ ರ್21 ಚಿತ್ರದ ರೀಮೇಕ್.
ಮಾಡೆಲ್ ಅಂದಕೂಡ್ಲೇ ಜನ ಯೋಚನೆ ಮಾಡೋ ರೀತಿನೇ ಬೇರೆ. ಆಕೆಯನ್ನು ನೇರವಾಗಿ ಕೇಳಿದರೆ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರುತ್ತವೆ. ಆದರೆ, ಕೇಳೋದೇ ಇಲ್ಲ. ಹೊರಗಿನವರಿಗೆ ಆಕೆಯೇನೋ ತಪ್ಪು ಮಾಡುತ್ತಿದ್ದಾಳೆ ಎನ್ನಿಸುತ್ತಿರುತ್ತೆ. ಆದರೆ, ಅದು ಆಕೆಯ ಪ್ರೊಫೆಷನ್. ಇದು ಅಂತಹ ಮಾಡೆಲ್ ಹಾಗೂ ಸಾಮಾನ್ಯ ಹುಡುಗನೊಬ್ಬನ ಲವ್‍ಸ್ಟೋರಿ. ಬೆಂಗಳೂರು ಬೆಳೆಯುತ್ತಿರುವ ವೇಗ, ಹದಿಹರೆಯದ ಹುಡುಗ, ಹುಡುಗಿಯರು, ಹೆಚ್ಚುತ್ತಿರುವ ಅತ್ಯಾಚಾರದಂತ ಕ್ರೈಂಗಳನ್ನು ನೋಡಿ ಈ ಸಿನಿಮಾ ಮಾಡೋಕೆ ನಿರ್ಧರಿಸಿದೆವು ಅಂತಾರೆ ಸಂಪತ್ ಕುಮಾರ್.
ಪ್ರಣಮ್ ದೇವರಾಜ್, ನಿಧಿ ಕುಶಾಲಪ್ಪ ಪ್ರಮುಖ ಪಾತ್ರದಲ್ಲಿರುವ ಚಿತ್ರದಲ್ಲೊಂದು ಸಂದೇಶವೂ ಇದೆ.