` vijay sethupathi, - chitraloka.com | Kannada Movie News, Reviews | Image

vijay sethupathi,

 • Five Languages; Five Super Stars; Five Posters

  five languages five super stars five posters

  The boxing poster of Sudeep starrer 'Phailwan' was released on Tuesday and within minutes of the release, the poster became talk of the town. The poster was not only released in Kannada, but five different languages and by different stars.

  The Telugu version of 'Phailwan' was released by Mega Star Chiranjeevi, Malayalm by Mohan Lal, Hindi by Sunil Shetty, Kannada by Sudeep and Tamil by Vijay Sethupathi. All the posters were released simultaneously and all the posters became instant hit.

  'Phailwan' is gearing up for an August 09th release and the team is busy with the post-production of the film. The film is produced by Swapna Krishna and written and directed by S Krishna. Karunakar is the cameraman, while Arjun Janya is the music director.

 • Is it Vijay Sethupathi or Jagapathi Babu for 'Madagaja'?

  vijay sethupathi or jagapathi babu for madagaja ?

  The second schedule of Srimurali starrer 'Madagaja' is all set to start from July 13th in Mysore. This schedule will see the entry of the film's villain on sets. Now, everybody is curious to know who will be playing the negative role in the film.

  Sources say, the team has roped in a big artist who is also known in Telugu and Tamil film industry. Sources also say that it is either Vijay Sethupathi or Jagapathi Babu, who will be playing the villain's character in the film.

  The team is tightlipped about who will be playing the role, but director Mahesh says, the villain will be paid a whopping 1.72 crores for 16 days.This is said to be the highest remuneration for any actor to be seen in a negative role in Kannada film industry.

  Mahesh is planning to shoot the teaser of the negative character in the first week of July.  

 • ಕನ್ನಡಕ್ಕೆ ವಿಜಯ್ ಸೇತುಪತಿ

  vijay sethupathi to enter kannada films

  ವಿಜಯ್ ಸೇತುಪತಿ. ತಮಿಳುನಾಡಿನಲ್ಲಿ ದೊಡ್ಡ ಹೆಸರು. ಸ್ಟಾರ್ ಆಗಿದ್ದರೂ, ವಿಭಿನ್ನ ಪಾತ್ರಗಳಿಗೆ ತುಡಿಯುವ ನಟ. ಇತ್ತೀಚೆಗೆ ದೇಶಾದ್ಯಂತ ದೊಡ್ಡ ಸದ್ದು ಮಾಡಿದ ವಿಕ್ರಂವೇದ ಚಿತ್ರ ನೆನಪಿದೆಯಾ..? ಆ ಚಿತ್ರದ ವೇದ, ಶಾರೂಕ್ ಖಾನ್‍ಗೂ ಇಂಥ ಪಾತ್ರವನ್ನು ನಾನು ಮಾಡಬೇಕು ಎನಿಸಿದ ವೇದ ಪಾತ್ರ ಮಾಡಿದ್ದು ಇದೇ ವಿಜಯ್ ಸೇತುಪತಿ. ಇವರೀಗ ಕನ್ನಡಕ್ಕೆ ಬರುತ್ತಿದ್ದಾರೆ. ಅಖಾಡ ಚಿತ್ರದ ಮೂಲಕ.

  ಜಿಗರ್‍ಥಂಡ, ತ್ರಾಟಕ, ಹೃದಯದಲಿ ಇದೇನಿದು ಚಿತ್ರ ನಿರ್ದೇಶಿಸಿದ್ದ ಶಿವಗಣೇಶ್, ಅಖಾಡಕ್ಕೆ ನಿರ್ದೇಶಕ. 3 ವರ್ಷಗಳ ಹಿಂದೆ ಸೆಟ್ಟೇರಿ ಕುಂಟುತ್ತಾ ಕುಳಿತಿದ್ದ ಚಿತ್ರಕ್ಕೆ ವಿಜಯ್ ಸೇತುಪತಿ ಆಗಮನದ ಮೂಲಕ ಮತ್ತೆ ಜೀವ ಬಂದಿದೆ. ಸಿನಿಮಾ ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಸಿದ್ಧವಾಗುತ್ತಿದೆ. ಚಿತ್ರೀಕರಣ ಶುರುವಾಗಿದೆ.

 • ತಮಿಳಿಗೂ ಮೊದಲೇ ಕನ್ನಡದ ಅಖಾಡಕ್ಕೆ ಬಂದಿದ್ದರಂತೆ ವಿಜಯ್ ಸೇತುಪತಿ..!

  ತಮಿಳಿಗೂ ಮೊದಲೇ ಕನ್ನಡದ ಅಖಾಡಕ್ಕೆ ಬಂದಿದ್ದರಂತೆ ವಿಜಯ್ ಸೇತುಪತಿ..!

  ವಿಜಯ್ ಸೇತುಪತಿ. ತಮಿಳು ನಟನಾದರೂ ಈಗ ನ್ಯಾಷನಲ್ ಲೆವೆಲ್ ಸ್ಟಾರ್ ಗಿರಿಯಿದೆ. ತಮಿಳು, ತೆಲುಗು ಚಿತ್ರಗಳಲ್ಲಿ ವಿಜಯ್ ಸೇತುಪತಿ ಮಿಂಚುತ್ತಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿರೋ ವಿಜಯ್ ಸೇತುಪತಿ, ಸ್ಟಾರ್ ನಟ. ಇಂತಹ ವಿಜಯ್ ಸೇತುಪತಿ, ಅವಕಾಶಗಳಿಗಾಗಿ ಹುಡುಕಾಡುತ್ತಿದ್ದಾಗ ಕನ್ನಡದಲ್ಲೂ ನಟಿಸಿದ್ದರಂತೆ.

  ಅಖಾಡ ಅನ್ನೋ ಕನ್ನಡ ಚಿತ್ರದಲ್ಲಿ ನಟಿಸಿದ್ದೆ. ಅದೊಂದು ಚಿಕ್ಕ ಪಾತ್ರ. ತಮಿಳಿನಲ್ಲಿ ಕಾಗುಣಿತ ಇಲ್ಲ. ಆದರೆ, ಕನ್ನಡದಲ್ಲಿ ಇದೆ. ಹೀಗಾಗಿ ನನಗೆ ಡೈಲಾಗ್ ಹೇಳೋದು ಕಷ್ಟವಾಗುತ್ತಿತ್ತು. ಅದಕ್ಕಾಗಿ ದಿನಗಟ್ಟಲೆ ಪ್ರಾಕ್ಟೀಸ್ ಮಾಡುತ್ತಿದ್ದೆ. ಈಗಲೂ ಆ ಡೈಲಾಗ್ ನೆನಪಿನಲ್ಲಿದೆ ಎಂದಿದ್ದಾರೆ ವಿಜಯ್ ಸೇತುಪತಿ. ಡೈಲಾಗ್ನ್ನೂ ಹೊಡೆದಿದ್ದಾರೆ.

  ತಮಿಳು ಮತ್ತು ಕನ್ನಡದಲ್ಲಿ ಮಾಸ್ಟರ್ ಶೆಫ್ ಅನ್ನೋ ಕಾರ್ಯಕ್ರಮ ಶುರುವಾಗುತ್ತಿದೆ. ತಮಿಳಿನಲ್ಲಿ ವಿಜಯ್ ಸೇತುಪತಿ ನಿರೂಪಕ. ಹೀಗಾಗಿ ಕನ್ನಡದ ಶೋ ಉದ್ಘಾಟನೆಗೆ ವಿಜಯ್ ಸೇತುಪತಿ ಬೆಂಗಳೂರಿಗೆ ಬಂದಿದ್ದ ವೇಳೆ, ತಮ್ಮ ಬೆಂಗಳೂರು ದಿನಗಳನ್ನು ನೆನಪಿಸಿಕೊಂಡಿದ್ದಾರೆ.

 • ತಮಿಳಿನಲ್ಲಿ ವಿಜಯ್, ವಿಜಯ್ ಸೇತುಪತಿ ಧೈರ್ಯ ಪ್ರದರ್ಶನ : ಜನವರಿ 13ಕ್ಕೆ ಮಾಸ್ಟರ್

  ತಮಿಳಿನಲ್ಲಿ ವಿಜಯ್, ವಿಜಯ್ ಸೇತುಪತಿ ಧೈರ್ಯ ಪ್ರದರ್ಶನ : ಜನವರಿ 13ಕ್ಕೆ ಮಾಸ್ಟರ್

  ಕೊರೊನಾ ಲಾಕ್‍ಡೌನ್ 8 ತಿಂಗಳು, ಲಾಕ್ ಡೌನ್ ತೆರವಾದ ನಂತರ, ಚಿತ್ರಮಂದಿರಗಳು ಶುರುವಾದ ನಂತರ.. ಎಲ್ಲರೂ ಕಾಯುತ್ತಿರುವುದು ಬಿಗ್ ಸ್ಟಾರ್‍ಗಳ ಚಿತ್ರಕ್ಕೆ. ರಿಲೀಸ್ ಆದ ಸಣ್ಣ ಸಣ್ಣ ಚಿತ್ರಗಳು ಗಮನ ಸೆಳೆದವೇ ಹೊರತು, ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಎಳೆದು ತರಲಿಲ್ಲ. ಆ ಶಕ್ತಿಯಿರೋದು ಸ್ಟಾರ್ ಚಿತ್ರಗಳಿಗೆ. ಯಾರು ಧೈರ್ಯ ಮಾಡ್ತಾರೆ ಎಂದು ಯೋಚಿಸುತ್ತಿದ್ದವರಿಗೆ ಧೈರ್ಯ ಪ್ರದರ್ಶನ ಮಾಡಿಯೇ ಬಿಟ್ಟಿದ್ದಾರೆ ತಮಿಳು ಸ್ಟಾರ್ಸ್.

  ವಿಜಯ್ ಮತ್ತು ವಿಜಯ್ ಸೇತುಪತಿ ಇಬ್ಬರೂ ನಟಿಸಿರುವ ಸಿನಿಮಾ ಮಾಸ್ಟರ್. ಚಿತ್ರ ಬಿಡುಗಡೆಗೆ ಸಹಕಾರ ನೀಡುವುದಾಗಿ ತಮಿಳುನಾಡು ಸಿಎಂ ಕೂಡಾ ಭರವಸೆ ಕೊಟ್ಟಿದ್ದಾರೆ.

  ಮಾಸ್ಟರ್, ಕೇವಲ ತಮಿಳು ಅಷ್ಟೇ ಅಲ್ಲ, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿಯೇ ಕೊರೊನಾ ನಂತರ ರಿಲೀಸ್ ಆಗುತ್ತಿರುವ ಬಿಗ್ ಸ್ಟಾರ್ ಸಿನಿಮಾ.

  ಈ ಸಿನಿಮಾ ಗೆಲ್ಲಲಿ. ಪ್ರೇಕ್ಷಕರು ಚಿತ್ರಮಂದಿರಕ್ಕೆ ನುಗ್ಗಿ ಬರಲಿ. ಸ್ಟಾರ್ ಚಿತ್ರಗಳ ಬಿಡುಗಡೆಗೆ ಮಾಸ್ಟರ್ ಮುನ್ನುಡಿ ಬರೆಯಲಿ.

 • ಶಿವಣ್ಣನ ಘೋಸ್ಟ್`ನಲ್ಲಿ ವಿಜಯ್ ಸೇತುಪತಿ

  ಶಿವಣ್ಣನ ಘೋಸ್ಟ್`ನಲ್ಲಿ ವಿಜಯ್ ಸೇತುಪತಿ

  ಶಿವರಾಜ್ ಕುಮಾರ್ ಅಭಿನಯದ ಶ್ರೀನಿ ನಿರ್ದೇಶನದ ಘೋಸ್ಟ್ ಚಿತ್ರದ ಗಾತ್ರ ಮತ್ತು ನಿರೀಕ್ಷೆ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಮಲಯಾಳಂನಿಂದ ಜಯರಾಮ್, ಹಿಂದಿಯಿಂದ ಅನುಪಮ್ ಖೇರ್, ಅರ್ಚನಾ ಜೋಯಿಸ್ ಜಾಯಿನ್ ಆದ ನಂತರ ತಂಡಕ್ಕೆ ವಿಜಯ್ ಸೇತುಪತಿ ಸೇರ್ಪಡೆಯಾಗಿರುವ ಸುದ್ದಿ ಬಂದಿದೆ. ಸುದ್ದಿ ಖಚಿತ ಎನ್ನಲಾಗದಿದ್ದರೂ ಶ್ರೀನಿಯವರೇ ರಿಲೀಸ್ ಮಾಡಿರುವ ಪುಟ್ಟ ವಿಡಿಯೊ ಸುತ್ತ ಇಷ್ಟೆಲ್ಲ ನಿರೀಕ್ಷೆಗಳೆದ್ದಿವೆ. ಆ ವಿಡಿಯೋದಲ್ಲಿ ಶ್ರೀನಿ ಮತ್ತು ಸಂದೇಶ್ ನಾಗರಾಜ್ ಜೊತೆ ವಿಜಯ್ ಸೇತುಪತಿ ಇದ್ದು, ಮುಂದೇನಾಯ್ತು ಅಂದ್ರೆ.. ಎಂಬ ಕ್ಯಾಪ್ಷನ್ ಕೊಟ್ಟು ಎಂದಿನಂತೆ ಹುಳ ಬಿಟ್ಟಿದ್ದಾರೆ ಶ್ರೀನಿ.

  ಈಗಾಗಲೇ ಅರ್ಧಕ್ಕರ್ಧ ಚಿತ್ರೀಕರಣ ಮುಗಿಸಿರುವ ಘೋಸ್ಟ್ ಚಿತ್ರದ 2ನೇ ಹಂತದ ಚಿತ್ರೀಕರಣ ಫೆಬ್ರವರಿ 2ನೇ ವಾರದಿಂದ ಶುರುವಾಗುತ್ತಿದೆ. ವಿಜಯ್ ಸೇತುಪತಿ ಬರುತ್ತಿದ್ದಾರಂದ ಮೇಲೆ ಚಿತ್ರದ ಮೇಲಿನ ನಿರೀಕ್ಷೆಗಳು ಡಬಲ್..ತ್ರಿಬಲ್.. ಆಗುತ್ತವೆ. ಸಂದೇಶ್ ನಾಗರಾಜ್ ನಿರ್ಮಾಣದ ಘೋಸ್ಟ್ ಚಿತ್ರದಲ್ಲಿ ವಿಜಯ್ ಸೇತುಪತಿ ಅವರಿಗೆ ವರ್ಸಟೈಲ್ ಪಾತ್ರವಿದೆ ಎನ್ನಲಾಗಿದೆ. ಒಂದು ಕಡೆ ಶಿವಣ್ಣ ತಮಿಳಿನಲ್ಲಿ ರಜನಿಕಾಂತ್, ಧನುಷ್ ಜೊತೆ ಚಿತ್ರಗಳ ಮೂಲಕ ಎಂಟ್ರಿ ಕೊಡುತ್ತಿದ್ದರೆ, ಮತ್ತೊಂದು ದಿಕ್ಕಿನಿಂದ ಶಿವಣ್ಣನ ಚಿತ್ರಗಳಿಗೆ ಮಲಯಾಳಂ, ತಮಿಳು, ಹಿಂದಿಯ ಸ್ಟಾರ್ ನಟರು ಬರುತ್ತಿದ್ದಾರೆ, ಕೊಡು-ಕೊಳ್ಳುವಿಕೆ ಬಾಂಧವ್ಯ ಜೋರಾಗಿಯೇ ಸಾಗಿದೆ...

 • ಸಿದ್ದರಾಮಯ್ಯ ಆಗ್ತಾರಂತೆ ವಿಜಯ್ ಸೇತುಪತಿ

  ಸಿದ್ದರಾಮಯ್ಯ ಆಗ್ತಾರಂತೆ ವಿಜಯ್ ಸೇತುಪತಿ

  ಮಾಜಿ ಸಿಎಂ ಸಿದ್ದರಾಮಯ್ಯ. ರಾಜ್ಯ ರಾಜಕಾರಣ ನಳನಳಿಸುತ್ತಿರುವಾಗಲೇ.. ಎಲೆಕ್ಷನ್ ಹತ್ತಿರ ಬಂದಿರುವಾಗಲೇ ಸಿದ್ದರಾಮಯ್ಯ ಅವರ ಜೀವನ ಚರಿತ್ರೆಯನ್ನೇಕೆ ಸಿನಿಮಾ ಮಾಡುವ ಸುದ್ದಿ ಹೊರಬೀಳುತ್ತಿದೆ. ಮಾಜಿ ಸಚಿವ ಶಿವರಾಜ್ ತಂಗಡಗಿಯವರಿಗೆ ಇಂಥಾದ್ದೊಂದು ಆಲೋಚನೆ ಬಂದಿದ್ದೇ ತಡ ಐಡಿಯಾ  ಜಾರಿಗೆ ಮುಂದಾಗಿಬಿಟ್ಟಿದ್ದಾರೆ. ಎಲೆಕ್ಷನ್ ಕೂಡಾ ಹತ್ತಿರದಲ್ಲಿರೋದ್ರಿಂದ ನೀವು ಓಕೆ ಎಂದುಬಿಡಿ. ಮಿಕ್ಕಿದ್ದನ್ನು ನಾವು ನೋಡಿಕೊಳ್ತೇವೆ ಎಂದಿದ್ದಾರೆ. ಎಷ್ಟರಮಟ್ಟಿಗೆ ರೆಡಿಯಾಗಿದ್ದಾರೆಂದರೆ ಸಿದ್ದರಾಮಯ್ಯ ಪಾತ್ರಕ್ಕೆ ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ಅವರನ್ನೂ ಕಾಂಟ್ಯಾಕ್ಟ್ ಮಾಡಿದ್ದಾರೆ. ಯಾವುದೇ ಪಾತ್ರವಿರಲಿ, ಪಾತ್ರದೊಳಗೇ ತನ್ಮಯವಾಗುವ ಪರಕಾಯ ಪ್ರವೇಶ ಮಾಡುವ ವಿಜಯ್ ಸೇತುಪತಿಯವರೇ ಸಿದ್ದರಾಮಯ್ಯ ಪಾತ್ರ ಮಾಡಿದರೆ ಚೆನ್ನಾಗಿರುತ್ತದೆ ಎನ್ನುವುದು ಉತ್ತರ ಕರ್ನಾಟಕದ ಕಾಂಗ್ರೆಸ್ಸಿಗರ ನಂಬಿಕೆ. ಇದರ ಹಿಂದೆ ರಾಜಕೀಯ ಉದ್ದೇಶವೂ ಇರುವುದು ಸ್ಪಷ್ಟ.

  ಅಂದಹಾಗೆ ಮೊದಲು ಅಪ್ರೋಚ್ ಮಾಡಿದ್ದು ಸಿದ್ದರಾಮಯ್ಯ ಅವರನ್ನೇ ಅಂತೆ. ಅಂದರೆ ಈಗಿನ ಸಿದ್ದರಾಮಯ್ಯ ಅವರ ಪಾತ್ರವನ್ನು ಸ್ವತಃ ಸಿದ್ದರಾಮಯ್ಯ ಅವರೇ ಮಾಡಲಿ ಎನ್ನುವುದು ಅವರ ಬಯಕೆಯಾಗಿತ್ತು. ಕನಕಗಿರಿ ಕ್ಷೇತ್ರವರು ನನ್ನನ್ನೇ ನಟಿಸುವಂತೆ ಕೇಳಿದರು. ನನಗೆ ನಟನೆ ಬರಲ್ಲ. ಬೇಡ ಎಂದೆ. ಬಯೋಪಿಕ್ ಮಾಡುವ ಪ್ಲಾನ್ ತಂದಿದ್ದರು. ಸುಮ್ಮನೆ ಯಾಕೆ, 20 ಕೋಟಿ ವೇಸ್ಟ್ ಮಾಡುತ್ತೀರಿ. ಬೇಡ ಎಂದಿದ್ದೇನೆ ಎಂದು ಹೇಳಿದ್ದಾರೆ ಸಿದ್ದರಾಮಯ್ಯ.

  ಚಿತ್ರಕ್ಕೆ ಗಡ್ಡಧಾರಿ ಸಿದ್ದರಾಮಯ್ಯ ಎಂದು ಟೈಟಲ್ ಇಡುವ ಬಗ್ಗೆಯೂ ಚಿಂತನೆ ನಡೆದಿದೆ. ಜನವರಿಯಲ್ಲಿ ಮುಹೂರ್ತ ಮಾಡುವ ಯೋಚನೆಯೂ ಇದೆ. ಆದರೆ ಸಿದ್ದರಾಮಯ್ಯನವರೇ ಯೆಸ್ ಎಂದಿಲ್ಲ.

 • ಸೆಲ್ಫಿ.. ಕಿಕ್ಕು.. ಕಿರಿಕ್ಕು.. ವಿಜಯ್ ಸೇತುಪತಿ ಪಿಎ ಮೇಲೆ ಹಲ್ಲೆ

  ಸೆಲ್ಫಿ.. ಕಿಕ್ಕು.. ಕಿರಿಕ್ಕು.. ವಿಜಯ್ ಸೇತುಪತಿ ಪಿಎ ಮೇಲೆ ಹಲ್ಲೆ

  ತಮಿಳು ನಟ ವಿಜಯ್ ಸೇತುಪತಿ ಶಿವರಾಜ್ ಕುಮಾರ್ ಮನೆಗೆ ಭೇಟಿ ನೀಡಲೆಂದು ಬಂದಿದ್ದಾಗ ಅವರ ಮೇಲೆ ಹಲ್ಲೆ ನಡೆದಿದೆ. ಕೆಂಪೇಗೌಡ ಏರ್‍ಪೋರ್ಟ್‍ನಲ್ಲಿ ಹಲ್ಲೆಯಾಗಿದೆ. ಇದಕ್ಕೆಲ್ಲ ಕಾರಣವಾಗಿರೋದು ಮಾತ್ರ ಸೆಲ್ಫಿ ಕಿರಿಕ್ಕು... ಮತ್ತು ಹೊಟ್ಟೆ ತುಂಬಾ ತುಂಬಿಸಿಕೊಂಡು ಏರಿದ್ದ ಕಿಕ್ಕು.

  ವಿಮಾನದಲ್ಲಿ ಬರುವಾಗ ಮಹಾಗಾಂಧಿ ಎಂಬ ವ್ಯಕ್ತಿ ವಿಜಯ್ ಸೇತುಪತಿ ಅವರ ಜೊತೆ ಮಾತಿಗಿಳಿದಿದ್ದಾನೆ. ಆತನೂ ತಮಿಳಿನಲ್ಲಿ ಕಿರುತೆರೆ ನಟನಂತೆ. ಮದ್ಯದ ಅಮಲಿನಲ್ಲಿಯೇ ಸೆಲ್ಫಿಗೆ ಮುಗಿಬಿದ್ದಿದ್ದಾನೆ. ಈ ವೇಳೆ ವಿಜಯ್ ಸೇತುಪತಿ ಅವರ ಪಿಎ ಮತ್ತು ಗೆಳೆಯ ಜಾನ್ ಅಡ್ಡಿ ಮಾಡಿದ್ದಾನೆ.

  ವಿಮಾನ ಇಳಿದು ಶಿವರಾಜ್ ಕುಮಾರ್ ಮನೆಗೆ ಹೋಗಲು ಸಿದ್ಧರಾಗುತ್ತಿರುವಾಗ ಮಹಾಗಾಂಧಿ ಹಿಂದಿನಿಂದ ಬಂದು ಜಾನ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಕೊನೆಗೆ ಪೊಲೀಸರ ಮಧ್ಯಪ್ರವೇಶದಿಂದ ಗಲಾಟೆ ಬಗೆಹರಿದಿದೆ. ಇಬ್ಬರೂ ಪರಸ್ಪರ ಕ್ಷಮೆ ಕೇಳಿದ್ದಾರೆ. ಆದರೆ.. ವಿಡಿಯೋ ಈಗ ಎಲ್ಲೆಲ್ಲೂ ವೈರಲ್.