` yuva rajkumar, - chitraloka.com | Kannada Movie News, Reviews | Image

yuva rajkumar,

 • ಅಣ್ಣಾವ್ರ ಹಾದಿಯಲ್ಲಿ ಅಣ್ಣಾವ್ರ ಮೊಮ್ಮಗ

  yuva rajkumar in annavru way

  ಕನ್ನಡದಲ್ಲಿ ಐತಿಹಾಸಿಕ ಚಿತ್ರಗಳೆಂದರೆ ತಕ್ಷಣ ಕಣ್ಣ ಮುಂದೆ ಬರೋದೇ ಅಣ್ಣಾವ್ರು. ಮಯೂರ, ಶ್ರೀಕೃಷ್ಣದೇವರಾಯ, ಇಮ್ಮಡಿ ಪುಲಿಕೇಶಿ, ರಣಧೀರ ಕಂಠೀರವ, ಕನಕದಾಸ, ಪುರಂದರ ದಾಸ, ಸರ್ವಜ್ಞ, ಕಾಳಿದಾಸ.. ಎಲ್ಲವೂ ಅವರೇ. ಈ ಹಾದಿಯಲ್ಲಿ ಶಿವಣ್ಣ ಒಂದೆರಡು ಪ್ರಯತ್ನ ಮಾಡಿದರಾದರೂ ದೊಡ್ಡಮಟ್ಟದ ಯಶಸ್ಸು ಸಿಗಲಿಲ್ಲ. ಪುನೀತ್ ಆ ಸಾಹಸಕ್ಕೆ ಇದುವರೆಗೂ ಕೈ ಹಾಕಿಲ್ಲ. ಹೀಗಿರುವಾಗ ಅಣ್ಣಾವ್ರ ಮೊಮ್ಮಗ ಯುವರಾಜ್ ಕುಮಾರ್ ಮೊದಲ ಚಿತ್ರದಲ್ಲೇ ಆ  ಸಾಹಸಕ್ಕೆ ಕೈ ಹಾಕಲು ಮುಂದಾಗಿದ್ದಾರೆ.

  ಮೈಸೂರು ಸಂಸ್ಥಾನ, ಬೆಂಗಳೂರು ಸುತ್ತಮುತ್ತಲಿನ ರಾಜಮಹಾರಾಜರು, ಕದಂಬರ ಕಾಲದ ಗರುಡ ಎನ್ನುವ ಸೈನ್ಯದ ತಂಡ. ಇವುಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ ನಿರ್ದೇಶಕ ಪುನೀತ್ ರುದ್ರನಾಗ್. ಯುವರಾಜ್ ಕುಮಾರ್ ಅವರನ್ನು ಲಾಂಚ್ ಮಾಡುವ ಹೊಣೆ ಹೊತ್ತಿರುವ ಪುನೀತ್ ರುದ್ರನಾಗ್, ಅದಕ್ಕಾಗಿ ಇತಿಹಾಸಕಾರರಾದ ಅರೇನಹಳ್ಳಿ ಶಿವಕುಮಾರ್, ಧರ್ಮೇಂದ್ರ ಕುಮಾರ್ ಮೊದಲಾದವರನ್ನು ಭೇಟಿ ಮಾಡುತ್ತಿದ್ದಾರೆ. ನಿರ್ದೇಶಕರಾದ ಪ್ರಶಾಂತ್ ನೀಲ್ ಮತ್ತು ಮಫ್ತಿ ಖ್ಯಾತಿಯ ನರ್ತನ್ ಬಳಿ ಸಹನಿರ್ದೇಶಕರಾಗಿದ್ದ ಪುನೀತ್ ರುದ್ರನಾಗ್ ಕೆಜಿಎಫ್‍ನ ಕೆಲವು ವಿಶೇಷ ಪಾತ್ರಗಳ ಸೃಷ್ಟಿಯಲ್ಲಿ ತಮ್ಮ ತಾಕತ್ತು ತೋರಿಸಿದ್ದರು.

  ನಾವು ಮಾಡುತ್ತಿರುವುದು ಒಂದು ಐತಿಹಾಸಿಕ ಚಿತ್ರ. ಇದುವರೆಗೂ ಕನ್ನಡದವರಿಗೆ ತಿಳಿಯದೇ ಇರುವ ಒಬ್ಬ ಐತಿಹಾಸಿಕ ವೀರನ ಕಥೆ ಹೇಳಲಿದ್ದೇವೆ ಎಂದಿದ್ದಾರೆ ಪುನೀತ್ ರುದ್ರನಾಗ್. ದೊಡ್ಡ ಜವಾಬ್ದಾರಿಗೆ ಹೆಗಲು ಕೊಡಲು ಹೊರಟಿರುವ ಅವರ ಸಾಹಸಕ್ಕೆ ಶುಭವಾಗಲಿ.

 • Yuva's Debut Film Titled 'Yuva Ranadheera Kanteerava'

  Yuva's Debut Film Titled 'Yuva Ranadheera Kanteerava'

  Yuva Rajakumar, grandson of Dr Rajakumar and second son of Raghavendra Rajakumar is all set to make his debut as an actor and his debut film is titled as 'Yuva Ranadheera Kanteerava'.

  The first look poster of Yuva was released on Dr Rajakumar's birthday this year. However, the film shooting for the film got delayed because of Corona and lockdown. Now as things have come to normalcy, the makers held the launch video of Yuva Rajakumar in the Prasanna Theater in Magadi Road on Sunday, on occasion of Rajyotsava.

  The launch video of Yuva was released by Puneeth Rajakumar and many celebrities from the Kannada film industry including Vijay Raghavendra, Murali, 'Bahaddur' Chethan, Santhosh Anandaram, A P Arjun, S Krishna, S Mahesh Kumar and others.

  'Yuva Ranadheera Kanteerava' is being written and directed by Puneeth Rudranag. Ravi Basrur is in charge of music and background score, while Sanketh Mysore is the cinematographer.

 • ಕೆಂಪೇಗೌಡರ ಸಿನಿಮಾಗೆ ಯುವ ರಾಜ್ ಕುಮಾರ್ ಹೀರೋ : ಡೈರೆಕ್ಟರ್ ನಾಗಾಭರಣ

  ಕೆಂಪೇಗೌಡರ ಸಿನಿಮಾಗೆ ಯುವ ರಾಜ್ ಕುಮಾರ್ ಹೀರೋ : ಡೈರೆಕ್ಟರ್ ನಾಗಾಭರಣ

  ಕನ್ನಡದಲ್ಲಿ ಅದೆಷ್ಟೋ ಐತಿಹಾಸಿಕ ಚಿತ್ರಗಳಾಗಿವೆ. ಆದರೆ ನಾಡಪ್ರಭು ಕೆಂಪೇಗೌಡರ ಬಗ್ಗೆ ಮಾತ್ರ ಚಿತ್ರಗಳಾಗಿಲ್ಲ. ಅಂಬರೀಷ ಚಿತ್ರದಲಿ ಪುಟ್ಟ ಕಥೆಯಾಗಿ ಕೆಂಪೇಗೌಡರ ಕಥೆ ಬರುತ್ತದೆಯಷ್ಟೆ, ಉಳಿದಂತೆ ಕೆಂಪೇಗೌಡರ ಸಿನಿಮಾ ಆಗಿಲ್ಲ. ಇದೀಗ ಅದಕ್ಕೆ ಕಾಲ ಕೂಡಿಬಂದಂತೆ ಕಾಣುತ್ತಿದೆ. ಪ್ರಯತ್ನಗಳಂತೂ ಜೋರಾಗಿವೆ.

  ಕೆಂಪೇಗೌಡರ ಕಥೆಯನ್ನು ಸಿನಿಮಾ ಮಾಡೋಕೆ ನಿರ್ದೇಶಕ ನಾಗಾಭರಣ ಸಿದ್ಧರಾಗುತ್ತಿದ್ದಾರಂತೆ. ಕೆಂಪೇಗೌಡರ ಪಾತ್ರವನ್ನು ಯುವರಾಜ್ ಕುಮಾರ್ ಮಾಡಿದರೆ ಚೆನ್ನಾಗಿರುತ್ತೆ ಎಂದು ಅನ್ನಿಸಿದ್ದು, ಅವರನ್ನೇ ಕಲ್ಪನೆಯಲ್ಲಿಟ್ಟುಕೊಂಡು ಚಿತ್ರಕಥೆ ರೂಪಿಸುತ್ತಿದ್ದಾರಂತೆ. ಸದ್ಯಕ್ಕೆ ಇರೋ ಮಾಹಿತಿ ಇಷ್ಟು ಮಾತ್ರ. ಉಳಿದಂತೆ ಮುಂದೇನು.. ನಿರ್ಮಾಪಕರು ಯಾರು.. ಯುವರಾಜ್ ಕುಮಾರ್ ಓಕೆ ಎಂದಿದ್ದಾರಾ.. ಈ ಯಾವ ಮಾಹಿತಿಯೂ ಲಭ್ಯ ಇಲ್ಲ.

  ಡಾ.ರಾಜ್ ಅವರಿಗೆ ಕೆಂಪೇಗೌಡರ ಸಿನಿಮಾ ಮಾಡುವ ಉತ್ಸಾಹವಿತ್ತು. ಆದರೆ ಚಿತ್ರಕಥೆ, ಸೆಟ್ ಸಮಾಧಾನವಾಗದ ಕಾರಣ ಸಿನಿಮಾ ಸೆಟ್ಟೇರಲೇ ಇಲ್ಲ. ಈಗ ಆ ಕನಸನ್ನು ಮೊಮ್ಮಗ ಈಡೇರಿಸುತ್ತಾರಾ ಎನ್ನುವ ನಿರೀಕ್ಷೆ ಶುರುವಾಗಿದೆ.

  ನಾಗಾಭರಣ ಅವರಿಗೆ ಡಾ.ರಾಜ್ ಕುಟುಂಬ ಹೊಸದೇನಲ್ಲ. ಡಾ.ರಾಜ್ ಅವರಿಗೆ ಆಕಸ್ಮಿಕ ಸಿನಿಮಾ, ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಹಾಡನ್ನು ಕೊಟ್ಟವರು ನಾಗಾಭರಣ. ಶಿವಣ್ಣ ಅವರಿಗೂ ಅಷ್ಟೆ, ಜನುಮದ ಜೋಡಿ ಎಂಬ ಇಂಡಸ್ಟ್ರಿ ಹಿಟ್ ಸಿನಿಮಾ, ಚಿಗುರಿದ ಕನಸು ಎಂಬ ಕ್ಲಾಸ್ ಸಿನಿಮಾ ಕೊಟ್ಟವರು ನಾಗಾಭರಣ. ಇದೀಗ ಯುವ ರಾಜ್ ಕುಮಾರ್ ಅವರಿಗಾಗಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಸಡನ್ ಆಗಿ ಉದ್ಭವವಾಗಿದೆ.

 • ತಾತ..ಮೊಮ್ಮಗನ ಹುಟ್ಟುಹಬ್ಬದ ಮಧ್ಯೆ ಒಂದು ದಿನದ ಅಂತರ..

  ತಾತ..ಮೊಮ್ಮಗನ ಹುಟ್ಟುಹಬ್ಬದ ಮಧ್ಯೆ ಒಂದು ದಿನದ ಅಂತರ..

  ಏಪ್ರಿಲ್ 24. ವರನಟ ಡಾ.ರಾಜ್ ಕುಮಾರ್ ಹುಟ್ಟುಹಬ್ಬ. ಬದುಕಿದ್ದರೆ ಅವರಿಗೆ 95 ತುಂಬುತ್ತಿತ್ತು. ಕನ್ನಡಿಗರ ಪಾಲಿಗೆ ನಾಡಹಬ್ಬವೇ ಆಗಿ ಹೋಗಿರುವ ಡಾ.ರಾಜ್ ಹುಟ್ಟಿದ ಹಬ್ಬಕ್ಕೆ, ಇದೀಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿರುವ ಯುವ ರಾಜ ಕುಮಾರ್ ಅವರಿಗೂ ಮಧ್ಯೆ ಒಂದು ದಿನದ ವಿಶೇಷ ಅಂತರವಿದೆ.

  ಡಾ.ರಾಜ್ ಹುಟ್ಟಿದ ದಿನ 24 ಆದರೆ, ಯುವ ರಾಜಕುಮಾರ್ ಹುಟ್ಟಿದ ದಿನ ಏ.23. ಯುವರಾಜ್ ಕುಮಾರ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಯುವ ಚಿತ್ರತಂಡ ವಿಶೇಷ ಪೋಸ್ಟರ್ ರಿಲೀಸ್ ಮಾಡಿದೆ. ಮನೆಯ ಮುಂದೆ ಜಮಾಯಿಸಿದ್ದ ಸಾವಿರಾರು ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸೆಲಬ್ರೇಟ್ ಮಾಡಿದ್ದಾರೆ. ಅಂದಹಾಗೆ ಯುವ ರಾಜ್ ಕುಮಾರ್ ಅವರ ಒಂದು ಸಿನಿಮಾ ಕೂಡಾ ಇನ್ನೂ ರಿಲೀಸ್ ಆಗಿಲ್ಲ.

  ಯುವ ಹುಟ್ಟುಹಬ್ಬದ ಸಂಭ್ರಮದ ವೇಳೆ ಪುನೀತ್ ಅವರನ್ನು ನೆನಪಿಸಿಕೊಂಡಿರುವ ರಾಘವೇಂದ್ರ ರಾಜ್ ಕುಮಾರ್  ಇವತ್ತಿನ ದಿನ ನಾವು ನನ್ನ ತಮ್ಮನನ್ನು ನೆನಪಿಸಿಕೊಳ್ಳಲೇಬೇಕು. ಅವನ ಆಶೀರ್ವಾದದಿಂದಲೇ ಇವೆಲ್ಲ ನಡೆಯುತ್ತಿರೋದು. 2002ರಲ್ಲಿ 2003ರಲ್ಲಿ ನಮ್ಮ ತಮ್ಮನ ಹುಟ್ಟಿದ ಹಬ್ಬ ಆಯ್ತು. 'ಅಪ್ಪು' ಸಿನಿಮಾ ರಿಲೀಸ್ ಆದ್ಮೇಲೆ. ಈ ತರ ಸಿಕ್ಕಾಪಟ್ಟೆ ಜನ ಬಂದಿದ್ದರು. ಅದು ಹಳೇ ಮನೆ. ನಮ್ಮ ತಂದೆ ಇದ್ದರು. ನಮ್ಮ ತಂದೆ ನಮ್ಮ ತಾಯಿಯನ್ನು ಕರೆದು ಪಾರ್ವತಿ ಬಾ ಇಲ್ಲಿ. ಚಿಕ್ಕ ಯಜಮಾನರ ಹುಟ್ಟಿದ ಹಬ್ಬವನ್ನು ಹೇಗೆ ಮಾಡುತ್ತಾರೆ ನೋಡು. ನಮ್ಮದೆಲ್ಲ ಏನೂ ಇರಲಿಲ್ಲ. ಆ ತರ ಮಾಡುತ್ತಿದ್ದಾರೆ. ಆಗ ನಮ್ಮ ತಾಯಿ, ನೀವು ಹುಟ್ಟಿದ ಹಬ್ಬ ಮಾಡಿಸಿಕೊಳ್ಳುತ್ತಿರಲಿಲ್ಲ. ಇಲ್ಲಾ, ಅಂದಿದ್ದರೆ ನಮ್ಮ ಜನ ಒಂದು ವಾರದಿಂದ ಆಚರಣೆ ಮಾಡೋರು ಎಂದಿದ್ರು. ಇವತ್ತು ನನಗೆ ದೃಶ್ಯ ನೆನಪಾಗುತ್ತೆ ಎಂದು ನೆನಪಿಸಿಕೊಂಡಿದ್ದಾರೆ.

  ಅಲ್ಲದೆ ಮಕ್ಕಳ ಹುಟ್ಟುಹಬ್ಬವನ್ನು ಹೀಗೆ ಆಚರಣೆ ಮಾಡಿದರೆ ಯಾವ ಹೆತ್ತವರಿಗೆ ಖುಷಿಯಾಗಲ್ಲ, ಹೇಳಿ. ಈ ಸಂಭ್ರಮವನ್ನೆಲ್ಲ ನೋಡೋಕೆ ನಾನು ಇದ್ದೇನೆ ಎಂದು ಭಾವುಕರಾಗಿದ್ದಾರೆ ರಾಘವೇಂದ್ರ ರಾಜಕುಮಾರ್.

 • ತಾತನಿಗೆ ತಕ್ಕ ಮೊಮ್ಮಗ : ಯುವರಾಜ್ ಕುಮಾರ್ ಟೀಸರ್ ನೋಡಿದವರ ಉದ್ಘಾರ

  Dr Rajkumar's Grand Son's Royal Entry

  ಯುವ ರಾಜ್ ಕುಮಾರ್ ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ರಾಘವೇಂದ್ರ ರಾಜ್‍ಕುಮಾರ್ ಪುತ್ರ ಯುವರಾಜ್‍ಕುಮಾರ್ ಇದೇ ಮೊದಲ ಬಾರಿಗೆ ಟೀಸರ್ ಮೂಲಕ ರಂಗಪ್ರವೇಶ ಮಾಡಿದ್ದಾರೆ. ಐತಿಹಾಸಿಕ ಕಥಾ ಹಂದರ ಹೊಂದಿರುವ ಯುವ ರಣಧೀರ ಕಂಠೀರವ ಚಿತ್ರದ ಟೀಸರ್ ಬಿಡುಗಡೆಯಾಗಿರೋದಷ್ಟೇ ಅಲ್ಲ, ಪ್ರೇಕ್ಷಕರ ಮೆಚ್ಚುಗೆಯನ್ನೂ ಗಳಿಸಿದೆ. ಎಲ್ಲರೂ ಡಾ. ರಾಜ್ ಕುಮಾರ್ ಅವರನ್ನು ನೆನಪಿಸಿಕೊಳ್ಳುವ ಹಾಗೆ ಮಾಡಿದೆ.

  ಡಾ.ರಾಜ್ ನೆನಪಾಗೋಕೆ ಕಾರಣ, ಚಿತ್ರದಲ್ಲಿ ಯುವರಾಜ್ ಹೇಳಿರೋ ಸಂಭಾಷಣೆ. ಸುದೀರ್ಘ ಸಂಭಾಷಣೆಯಲ್ಲಿ ಎಲ್ಲಿಯೂ ತಪ್ಪು ಕಾಣದಂತೆ ಸ್ಫುಟವಾಗಿ ಕನ್ನಡ ಮಾತನಾಡಿರೋದು ಯುವರಾಜ್ ವಿಶೇಷತೆ. ಜೊತೆಗೆ ಒಂದು ಆ್ಯಕ್ಷನ್ ಸೀನ್ ಕೂಡಾ ಇದ್ದು, ಪುನೀತ್ ಮತ್ತು ಶಿವಣ್ಣ ಕಾಂಬಿನೇಷನ್ ಎನಿಸುತ್ತದೆ. ಅಷ್ಟರಮಟ್ಟಿಗೆ ಮೊದಲ ರಂಗಸ್ಥಳದಲ್ಲಿ ಗೆದ್ದಿದ್ದಾರೆ ಯುವರಾಜ್.

  ಪುನೀತ್ ಅವರ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ವೇಳೆ ಡ್ಯಾನ್ಸ್ ಮೂಲಕ ದೊಡ್ಡಪ್ಪ ಮತ್ತು ಚಿಕ್ಕಪ್ಪನ ಮುಖದಲ್ಲಿ ಸಂಭ್ರಮ ಮೂಡಿಸಿದ್ದ ಯುವ, ಈ ಬಾರಿ ಡೈಲಾಗ್ ಡೆಲಿವರಿ ಮೂಲಕ ತಾತನ ಅಭಿಮಾನಿಗಳಲ್ಲೂ ರೋಮಾಂಚನ ಹುಟ್ಟಿಸಿದ್ದಾರೆ.

  ಪುನೀತ್ ರುದ್ರನಾಗ್ ನಿರ್ದೇಶನದ ಚಿತ್ರಕ್ಕೆ ಯುವರಣಧೀರ ಕಂಠೀರವ ಹೆಸರೇ ಟೈಟಲ್ಲಾ.. ಅನ್ನೋದು ಕನ್‍ಫರ್ಮ್ ಆಗಿಲ್ಲ. ರವಿ ಬಸ್ರೂರು ಸಂಗೀತ ನೀಡಿರುವ ಚಿತ್ರದಲ್ಲಿ ಐತಿಹಾಸಿಕ ಕಥೆ ಇರುವುದಂತೂ ಪಕ್ಕಾ. ಇಲ್ಲಿಯೂ ಒಂದು ವಿಶೇಷತೆಯಿದೆ.

  ಶಿವಣ್ಣ ಆನಂದ್ ಮೂಲಕ, ರಾಘವೇಂದ್ರ ರಾಜ್‍ಕುಮಾರ್ ಚಿರಂಜೀವಿ ಸುಧಾಕರ್ ಹಾಗೂ ಪುನೀತ್ ಅಪ್ಪು ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟವರು. ವಿನಯ್ ರಾಜ್‍ಕುಮಾರ್ ಕೂಡಾ ಸಿದ್ಧಾರ್ಥ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದರು. ಎಲ್ಲರೂ ಆಯ್ಕೆ ಮಾಡಿಕೊಂಡಿದ್ದುದ್ದು ಲವ್ ಸಬ್ಜೆಕ್ಟ್ ಚಿತ್ರಗಳನ್ನೇ. ಆದರೆ ಯುವರಾಜ್ ವಿಭಿನ್ನ ಹೆಜ್ಜೆಯಿಟ್ಟಿದ್ದಾರೆ. ಮೊದಲ ಚಿತ್ರದಲ್ಲೇ ಐತಿಹಾಸಿಕ ಕಥಾಹಂದರದ ಕಥೆ ಆಯ್ಕೆ ಮಾಡಿಕೊಂಡಿದ್ದು, ಸವಾಲು ಸ್ವೀಕರಿಸಿದ್ದಾರೆ. ಗುಡ್‍ಲಕ್.

 • ಪ್ರೇಮಿಗಳ ದಿನಕ್ಕೆ ಯುವರತ್ನ

  yuvaratna shooting to start on valentine's day

  ರಾಜಕುಮಾರ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ಯುವರತ್ನ ಚಿತ್ರದ ಶೂಟಿಂಗ್, ಫೆಬ್ರವರಿ 14ರಿಂದ ಶುರುವಾಗುತ್ತಿದೆ. ಚಿತ್ರದ ಭರ್ಜರಿ ಆ್ಯಕ್ಷನ್ ಸೀನ್‍ಗಳೊಂದಿಗೇ ಚಿತ್ರೀಕರಣ ಆರಂಭವಾಗುತ್ತಿರುವುದು ವಿಶೇಷ. 

  ರಾಜಕುಮಾರ ನಂತರ, ಸಂತೋಷ್ ಆನಂದ್‍ರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರವಿದು. ಹೊಂಬಾಳೆ ಪ್ರೊಡಕ್ಷನ್ಸ್‍ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾವನ್ನು ದಸರಾ ವೇಳೆಗೆ ತೆರೆಗೆ ತರುವುದಾಗಿ ಚಿತ್ರತಂಡ ಈಗಾಗಲೇ ಘೋಷಿಸಿದೆ.

 • ಯುವ ಚಿತ್ರೀಕರಣದ ಸೆಟ್`ನಲ್ಲಿ ದರ್ಶನ್

  ಯುವ ಚಿತ್ರೀಕರಣದ ಸೆಟ್`ನಲ್ಲಿ ದರ್ಶನ್

  ನಟ ದರ್ಶನ್ ಯುವ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ದಿಢೀರ್ ಭೇಟಿ ಕೊಟ್ಟು ಹಿತವಾದ ಶಾಕ್ ಕೊಟ್ಟಿದ್ದಾರೆ. ಬೆಂಗಳೂರಿನ ಹೆಚ್ಎಂಟಿ ಫ್ಯಾಕ್ಟರಿಯಲ್ಲಿ 'ಯುವ' ಸಿನಿಮಾ ಚಿತ್ರೀಕರಣ ನಡೀತಿದೆ. ಸಿನಿಮಾ ಸೆಟ್ಗೆ ಇದ್ದಕ್ಕಿದ್ದಂತೆ 'ಕಾಟೇರ' ಚಿತ್ರತಂಡ ಎಂಟ್ರಿ ಕೊಟ್ಟಿದೆ. ನಟ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಇಬ್ಬರು ಯುವ ರಾಜ್ಕುಮಾರ್, ಸಂತೋಷ್ ಆನಂದ್ ರಾಮ್, ಸಪ್ತಮಿ ಗೌಡ ಜೊತೆ ಕೆಲ ಹೊತ್ತು ಮಾತನಾಡಿದ್ದಾರೆ.

  ಇತ್ತೀಚೆಗೆ ಕ್ರಾಂತಿ ಚಿತ್ರ ರಿಲೀಸ್ ಆಗಿದ್ದಾಗ ಒಂದರ ಹಿಂದೊಂದು ಹೇಳಿಕೆಗಳು, ತಪ್ಪು ಅಭಿಪ್ರಾಯಗಳೂ ಜೊತೆಯಾಗಿ ದರ್ಶನ್ ಮತ್ತು ರಾಜ್ ಕುಟುಂಬದ ಅಭಿಮಾನಿಗಳ ನಡುವೆ ಸೋಷಿಯಲ್ ಮೀಡಿಯಾದಲ್ಲಿ. ಸಮರವೇ ನಡೆದುಹೋಗಿತ್ತು. ಅದೆಲ್ಲಕ್ಕೂ ಫುಲ್ ಸ್ಟಾಪ್ ಇಡುವಂತೆ ಆಗಿರುವ ಈ ಬೆಳವಣಿಗೆ ಚಿತ್ರರಂಗದ ಪಾಲಿಗೆ ಶುಭ ಸುದ್ದಿ.

  ಯುವ, ಡಿಸೆಂಬರಿನಲ್ಲಿ ರಿಲೀಸ್ ಆಗಬೇಕಿದ್ದು, ಯುವ ರಾಜ್`ಕುಮಾರ್ ಈ ಚಿತ್ರದ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ  ಮಾಡುತ್ತಿದ್ದಾರೆ. ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೊಂಬಾಳೆ ಬ್ಯಾನರ್`ನಲ್ಲಿ ನಿರ್ಮಾಣವಾಗುತ್ತಿಉರವ ಸಿನಿಮಾಗೆ ಸಂತೋಷ್ ಆನಂದರಾಮ್ ನಿರ್ದೇಶಕ.

 • ಯುವ ಟೈಟಲ್ ಹೊಸದಲ್ಲ..!

  ಯುವ ಟೈಟಲ್ ಹೊಸದಲ್ಲ..!

  ಯುವ. ಇದೀಗ ಈ ಟೈಟಲ್ ಗಾಂಧಿನಗರದ ಸೆನ್ಸೇಷನ್. ರಾಜವಂಶದ ಅಭಿಮಾನಿಗಳಿಗೂ ಸೆನ್ಸೇಷನ್. ಇತ್ತೀಚೆಗೆ ಯುವ ಚಿತ್ರದ ಟೈಟಲ್ ಲಾಂಚ್ ಆಗಿ ಟೀಸರ್ ಹೊರಬಂದಿದೆ. ಯುವ ರಾಜ್ ಕುಮಾರ್ ಅಭಿನಯದ, ಸಂತೋಷ್ ಆನಂದರಾಮ್ ನಿರ್ದೇಶನದ ಚಿತ್ರಕ್ಕೆ ಹೊಂಬಾಳೆಯವರು ನಿರ್ಮಾಪಕರು. ವಿಜಯ್ ಕಿರಗಂದೂರು ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರ ಡಿಸೆಂಬರ್ 22ಕ್ಕೆ ರಿಲೀಸ್ ಆಗಲಿದೆ. ಆದರೆ ಈ ಟೈಟಲ್ ಏನು ಹೊಸದಲ್ಲ. ಈಗಾಗಲೇ ಈ ಹೆಸರಿನ ಚಿತ್ರವೊಂದು ಬಂದಿತ್ತು ಎಂಬ ಸುದ್ದಿ ಹೊರ ಬಿದ್ದಿದೆ.

  2009ರಲ್ಲಿ ಯುವ ಅನ್ನೋ ಹೆಸರಿನ ಸಿನಿಮಾ ಬಂದಿತ್ತು. ಕಾರ್ತಿಕ್ ಶೆಟ್ಟಿ ಮತ್ತು ಮಧು ಶರ್ಮಾ ಎಂಬ ಹೊಸ ಮುಖಗಳಿದ್ದ ಚಿತ್ರ ಅದು. ಆ ಸಿನಿಮಾ ಯಾವಾಗ ರಿಲೀಸ್ ಆಯ್ತು.. ಏನಾಯ್ತು.. ಈ ಯಾವ ಮಾಹಿತಿಗಳೂ ಇಲ್ಲ. ಚಿತ್ರದಲ್ಲಿ ನಟಿಸಿದ್ದ ಕಲಾವಿದರೂ ಈಗ ಚಿತ್ರರಂಗದಲ್ಲಿದ್ದಂತೆ ಕಾಣುತ್ತಿಲ್ಲ. ಆದರೆ ಈ ಚಿತ್ರದ ಕಥೆಗೆ ಯುವ ಅನ್ನೋ ಟೈಟಲ್ ಸೂಕ್ತವಾಗಿದೆ ಅನ್ನೋ ಕಾರಣಕ್ಕೆ ಯುವ ಟೈಟಲ್‍ನ್ನೇ ಫೈನಲ್ ಮಾಡಲಾಗಿದೆ.

  ಯುವ ರಾಜ್ ಕುಮಾರ್ ಅವರನ್ನು ಪುನೀತ್ ರಾಜಕುಮಾರ್ ಅವರ ಉತ್ತರಾಧಿಕಾರಿ ಎಂಬಂತೆ ನೋಡಲಾಗುತ್ತಿದೆ. ನಿರೀಕ್ಷೆಗಳು ಈಗಾಗಲೇ ಗಗನದೆತ್ತರದಲ್ಲಿವೆ. ಪುನೀತ್ ಅವರನ್ನು ಮನೆಯಲ್ಲಿ ಎಲ್ಲರೂ ಕರೆಯುತ್ತಿದ್ದುದೇ ಅಪ್ಪು ಎಂದು. ಹೀಗಾಗಿ ತಮ್ಮನ ಚಿತ್ರಕ್ಕೆ ಅಪ್ಪು ಹೆಸರೇ ಇರಲಿ ಎಂದು ಶಿವಣ್ಣ ಫೈನಲ್ ಮಾಡಿದ್ದರು. ತಮ್ಮ ಹೆಸರಿನ ಚಿತ್ರದ ಮೂಲಕವೇ ಅಪ್ಪು ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿಯಾಗಿದ್ದರು. ಹೀಗಾಗಿ ಯುವ ಕೂಡಾ ತಮ್ಮ ಹೆಸರಿನ ಚಿತ್ರದಿಂದಲೇ ಲಾಂಚ್ ಆಗಲಿ ಎನ್ನುವುದು ಎಲ್ಲರ ನಿರೀಕ್ಷೆಯಾಗಿದ್ದು, ಚಿತ್ರದ ಕಥೆಗೆ ಯುವ ಟೈಟಲ್ ಸೂಕ್ತವಾಗಿದೆ ಎಂಬ ಕಾರಣಕ್ಕೆ ಸಂತೋಷ್ ಆನಂದರಾಮ್ ಅದನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

 • ಯುವ ರಣಧೀರ ಕಂಠೀರವನಿಗೆ ಮೆಗಾಸ್ಟಾರ್ ಫಿದಾ

  Chiranjeevi Thrilled Over Yuva Ranadheera Kanteerva

  ನವೆಂಬರ್ 1ರಂದು ಯುವರಣಧೀರ ಕಂಠೀರವ ಚಿತ್ರದ ಟೀಸರ್ ರಿಲೀಸ್ ಆಯ್ತು. ಮೊದಲ ಚಿತ್ರದಲ್ಲೇ ಡಾ.ರಾಜ್ ಅವರಿಗೆ ಹೋಲಿಸಿಕೊಳ್ಳುವ ಭಾರ ಹೊತ್ತರೂ, ಆ ಭಾರವನ್ನು ಯಶಸ್ವಿಯಾಗಿಯೇ ನಿಭಾಯಿಸಿದರು ಯುವರಣಧೀರ ಕಂಠೀರವ ಯುವರಾಜ್ ಕುಮಾರ್. ಯುವ ಅವರ ಡೈಲಾಗ್ ಡೆಲಿವರಿ ಮತ್ತು ಆ್ಯಕ್ಷನ್ ಸೀಕ್ವೆನ್ಸ್‍ಗಳು ಅಭಿಮಾನಿಗಳಿಗೂ ಇಷ್ಟವಾಗಿತ್ತು. ಶಿವಣ್ಣ, ಪುನೀತ್ ಮತ್ತು ರಾಘವೇಂದ್ರ ರಾಜ್‍ಕುಮಾರ್.. ಅದೇನೇ ಮೆಚ್ಚಿಕೊಂಡರೂ ಮಗ ಅಲ್ವೇ.

  ಆದರೆ ಈಗ ಅಭಿಮಾನಿಗಳ ಜೊತೆ, ಚಿತ್ರರಂಗದ ದಿಗ್ಗಜರಲ್ಲೊಬ್ಬರಾದ ಮೆಗಾಸ್ಟಾರ್ ಚಿರಂಜೀವಿ ಚಿತ್ರದ ಟೀಸರ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವರಾಜ್ ಕುಮಾರ್ ಅವರ ತಯಾರಿ ಬೆರಗು ಹುಟ್ಟಿಸುತ್ತಿದೆ. ಡಾ.ರಾಜ್ ಅವರ ಮೊಮ್ಮಗ ಎಂಬ ದೊಡ್ಡ ಜವಾಬ್ದಾರಿ ಅವರ ಮೇಲಿದೆ. ಅದಕ್ಕೆ ತಕ್ಕಂತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. 

 • ಯುವ ರಾಜಕುಮಾರನ ಬೆನ್ನು ತಟ್ಟಿದ ರಾಜಮೌಳಿ

  Rajamouli Appreciates Yuva Rajkumar

  ಯುವ ರಣಧೀರ ಕಂಠೀರವ ಚಿತ್ರದ ಟ್ರೇಲರ್ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ ಯುವ ರಾಜ್‍ಕುಮಾರ್, ಅಭಿಮಾನಿಗಳ ಪ್ರೀತಿಯನ್ನಷ್ಟೇ ಅಲ್ಲ, ಚಿತ್ರರಂಗದ ದಿಗ್ಗಜರ ಮೆಚ್ಚುಗೆಯನ್ನೂ ಗಳಿಸಿದ್ದಾರೆ.

  ತೆಲುಗಿನ ಮೆಗಾಸ್ಟಾರ್ ಚಿರಂಜೀವಿ, ಬಾಲಕೃಷ್ಣರಂತಹ ಸೀನಿಯರ್ ನಟರು ಮೆಚ್ಚಿದ ಟೀಸರ್‍ನ್ನು, ಈಗ ರಾಜಮೌಳಿ ಕೂಡಾ ಮೆಚ್ಚಿ ಕೊಂಡಾಡಿದ್ದಾರೆ.

  ಆರ್‍ಆರ್‍ಆರ್ ಸಿನಿಮಾ ಸೆಟ್‍ನಲ್ಲಿ ರಾಜಮೌಳಿಯನ್ನು ಭೇಟಿ ಮಾಡಿರುವ ಯುವರಾಜ್ ಕುಮಾರ್, ಸಿನಿಮಾ ಟೀಸರ್‍ನ್ನು ತೋರಿಸಿದ್ದಾರೆ. ಟೀಸರ್ ನೋಡಿ ಶಹಬ್ಬಾಸ್ ಎಂದು ಬೆನ್ನು ತಟ್ಟಿದರಂತೆ ರಾಜಮೌಳಿ. ಸಿನಿಮಾದ ನಿರ್ದೇಶಕ ರುದ್ರನಾಗ್ ಅವರ ಕೌಶಲ್ಯಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ರಾಜಮೌಳಿ.

 • ಯುವ ರಾಜಕುಮಾರ್ ಅಡಿಷನ್ ಶುರು

  ಯುವ ರಾಜಕುಮಾರ್ ಅಡಿಷನ್ ಶುರು

  ಅಪ್ಪು ಇಲ್ಲ. ಇನ್ನು ನೀವೇ ನಮಗೆ ಪವರ್ ಸ್ಟಾರ್ ಎಂದು ಅಭಿಮಾನಿಗಳು ಆಗಲೇ  ಯುವ ರಾಜಕುಮಾರ್ಗೆ ಜ್ಯೂ.ಪವರ್ ಸ್ಟಾರ್ ಕೊಟ್ಟಿದ್ದಾಗಿದೆ. ಹೊಂಬಾಳೆ ಸಂಸ್ಥೆಯೇ ಯುವರಾಜ್ನನ್ನು ಲಾಂಚ್ ಮಾಡುತ್ತಿದ್ದು, ಪುನೀತ್ ವೃತ್ತಿ ಜೀವನದ ಶ್ರೇಷ್ಟ ಚಿತ್ರ ಕೊಟ್ಟ ಸಂತೋಷ್ ಆನಂದರಾಮ್ ನಿರ್ದೇಶನ ಮಾಡುತ್ತಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಕಿರಿಯ ಪುತ್ರ ಯುವ ರಾಜ್ ಕುಮಾರ್ ಬೆಳ್ಳಿತೆರೆ ಪ್ರವೇಶಕ್ಕೆ ವೇದಿಕೆ ಸಿದ್ಧವಾಗಿದೆ.

  ಪುನೀತ್ ರಾಜ್‌ಕುಮಾರ್ ಉತ್ತರಾಧಿಕಾರಿ ಎಂದೇ ಕರೆಸಿಕೊಳ್ಳುತ್ತಿರುವ ಯುವ ರಾಜ್‌ಕುಮಾರ್ ಅಭಿನಯಿಸೋ ಮೊದಲ ಸಿನಿಮಾದ ಮೇಲೆ ಅಪ್ಪು ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದಾರೆ. ಸದ್ಯದಲ್ಲೇ ಅಪ್ಡೇಟ್ ಕೊಡುತ್ತೇನೆ ಎಂದು ಹೇಳಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್,  ಇದೀಗ ಆ ಸಿನಿಮಾದಲ್ಲಿ ನಟಿಸೋ ಕಲಾವಿದರಿಗೆ ಅಡಿಷನ್ ಕರೆದಿದ್ದಾರೆ.

  ಜ್ಯೂ. ಪವರ್ ಸ್ಟಾರ್ ಜೊತೆ ನಟಿಸೋಕೆ ಕಲಾವಿದರಿಗಾಗಿ ಆಡಿಷನ್ ಕರೆಯಲಾಗಿದೆ. 16 ರಿಂದ 25 ವರ್ಷದೊಳಗಿನ ಕಲಾವಿದರು ಮಂಗಳೂರು ನಗರದ ಕೂಟಕ್ಕಳ ಆಡಿಟೋರಿಯಂನಲ್ಲಿ ನವೆಂಬರ್ 26ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿರೋ ಆಡಿಷನ್ನಲ್ಲಿ ಭಾಗವಹಿಸಸಬಹುದು. ಇನ್ನು ತಂತ್ರಜ್ಞರ ಆಯ್ಕೆ ಫೈನಲ್ ಆಗಿಲ್ಲ. ಈ ಅಡಿಷನ್ ಮುಗಿದ ಮೇಲೆ ಸೂಕ್ತ ಸಮಯದಲ್ಲಿ ಚಿತ್ರದ ಮುಹೂರ್ತ, ಶೂಟಿಂಗ್ ಶುರುವಾಗುವ ಸಮಯ ಇತ್ಯಾದಿಗಳನ್ನು ಘೋಷಿಸುವ ಸಾಧ್ಯತೆ ಇದೆ.

 • ಯುವ ರಾಜಕುಮಾರ್ ಚಿತ್ರದ ಚಿತ್ರೀಕರಣ ಯಾವಾಗ ಶುರು?

  ಯುವ ರಾಜಕುಮಾರ್ ಚಿತ್ರದ ಚಿತ್ರೀಕರಣ ಯಾವಾಗ ಶುರು?

  ಯಾವಾಗ..? ಯಾವಾಗ..? ಯಾವಾಗ..?

  ಸಂತೋಷ್ ಆನಂದರಾಮ್ ಹೋದಲ್ಲಿ ಬಂದಲ್ಲಿ..

  ವಿಜಯ್ ಕಿರಂಗದೂರು ಕಣ್ಣಿಗೆ ಕಂಡಲ್ಲೆಲ್ಲ ಎದುರಾಗುತ್ತಿದ್ದ ಪ್ರಶ್ನೆ ಇದು. ಯುವರಾಜಕುಮಾರ್ ಸಿನಿಮಾ ಅನೌನ್ಸ್ ಮಾಡಿದ್ದೀರಿ, ಸಿನಿಮಾ ಶೂಟಿಂಗ್ ಯಾವಾಗ ಶುರು ಮಾಡ್ತೀರಿ ಅನ್ನೋ ಪ್ರಶ್ನೆಯನ್ನು ಎಲ್ಲರೂ ಕೇಳಿದ್ದವರೇ. ಪುನೀತ್ ಬಿಟ್ಟು ಹೋಗಿರುವ ಶೂನ್ಯವನ್ನ ಯುವ ತುಂಬಬಹುದು ಅನ್ನೋ ಆಸೆ ಅಭಿಮಾನಿ ದೇವರುಗಳದ್ದು. ಈಗ ಆ ಪ್ರಶ್ನೆಗೆ ಖುದ್ದು ಸಂತೋಷ್ ಆನಂದರಾಮ್ ಅವರೇ ಉತ್ತರ ಕೊಟ್ಟಿದ್ದಾರೆ.

  ಅಕ್ಟೋಬರ್‍ನಿಂದ ಚಿತ್ರೀಕರಣ ಶುರುವಾಗಲಿದೆ ಎಂದಿದ್ದಾರೆ ಸಂತೋಷ್ ಆನಂದರಾಮ್. ಸದ್ಯಕ್ಕೆ ಅವರು ರಾಘವೇಂದ್ರ ಸ್ಟೋರ್ಸ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಫೈನಲ್ ಸ್ಟೇಜ್ ನೋಡಬೇಕು. ಪ್ರಚಾರದತ್ತ ಗಮನ ಹರಿಸಬೇಕು. ವರಮಹಾಲಕ್ಷ್ಮಿ ಹಬ್ಬಕ್ಕೆ ಆ ಸಿನಿಮಾ ರಿಲೀಸ್ ಆಗುತ್ತಿದೆ. ಅದು ಮುಗಿಯುತ್ತಿದ್ದಂತೆಯೇ ಈ ಹೊಸ ಸಿನಿಮಾ ಶುರುವಾಗಲಿದೆ.

  ಅಂದಹಾಗೆ.. ಇನ್ನೊಂದು ವಿಷಯ. ಇತ್ತೀಚೆಗೆ ಯುವ ರಾಜಕುಮಾರ್ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಕಾಣಿಸಿಕೊಳ್ಳುತ್ತಿಲ್ಲ. ಯುವ ರಾಜಕುಮಾರ್ ಲುಕ್‍ನ್ನು ಅಷ್ಟು ಜತನದಿಂದ ಕಾಪಾಡಿಕೊಂಡು ಬರುತ್ತಿದ್ದಾರೆ ಸಂತೋಷ್. ಅಕ್ಟೋಬರ್‍ನಲ್ಲಿ ಸಿನಿಮಾಗೆ ಮುಹೂರ್ತವಾದಾಗ ಹೇಗೂ ನೋಡಿಯೇ ನೋಡ್ತೀವಲ್ಲ. ವೇಯ್ಟ್.

 • ಯುವ ರಾಜಕುಮಾರ್ ಚಿತ್ರದ ಬ್ರೇಕಿಂಗ್ ನ್ಯೂಸ್

  ಯುವ ರಾಜಕುಮಾರ್ ಚಿತ್ರದ ಬ್ರೇಕಿಂಗ್ ನ್ಯೂಸ್

  ಯುವ ರಾಜಕುಮಾರ್ ಚಿತ್ರರಂಗಕ್ಕೆ ಬರುವುದು ಗುಟ್ಟಲ್ಲ. ಅಭಿಮಾನಿಗಳ ಆಸೆ ಮತ್ತು ನಿರೀಕ್ಷೆ. ಯುವ ರಣಧೀರ ಕಂಠೀರವದ ಮೂಲಕ ಬರಬೇಕಿದ್ದ ಯುವರಾಜನ ಪಟ್ಟಾಭಿಷೇಕಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಅಪ್ಪು ದೂರವಾದ ಮೇಲಂತೂ ಯುವ ಮೇಲಿನ ನಿರೀಕ್ಷೆ ಜೋರಾಗಿದೆ. ಚಿತ್ರವನ್ನು ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡುತ್ತಿದೆ. ಸಂತೋಷ್ ಆನಂದರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಆದರೆ.. ಯಾವಾಗ... ಈ ನಿರೀಕ್ಷೆಗೆ ಈಗ ಉತ್ತರವೂ ಸಿಕ್ಕಿದೆ.

  ಅನೌನ್ಸ್ಮೆಂಟ್ ನಂತರ ಚಿತ್ರದ ಬಗ್ಗೆ ಏನು ಅಪ್ಡೇಟ್ ಇಲ್ಲ ಎಂದು ಬೇಸರದಲ್ಲಿದ್ದ ಫ್ಯಾನ್ಸ್ಗೆ ನಿರ್ದೇಶಕ ಸಂತೋಷ್ ರಿಯಾಕ್ಟ್ ಮಾಡಿದ್ದಾರೆ. ನನ್ನ ಸಹೋದರ ಸಮಾನರಾದ ಎಲ್ಲಾ ಅಭಿಮಾನಿಗಳಿಗೆ ಅತೀ ಶೀಘ್ರದಲ್ಲಿ ನನ್ನ ಮತ್ತು ಯುವರಾಜ್ಕುಮಾರ್ ಕಾಂಬಿನೇಷನ್ ಚಿತ್ರದ ಎಲ್ಲಾ ಮಾಹಿತಿ ಹೊರಬರುತ್ತದೆ ನಿಮ್ಮ ಆಶೀರ್ವಾದ ಸದಾ ಇರಲಿ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಸದ್ಯದಲ್ಲೇ ಚಿತ್ರದ ಅಪ್ಡೇಟ್ ಸಿಗಲಿದೆ ಎಂದು ಸೂಚನೆ ನೀಡಿದ್ದಾರೆ.

  ಹೊಂಬಾಳೆಯನ್ನು ತಮ್ಮದೇ ಸಂಸ್ಥೆ ಎಂಬಂತೆ ಪ್ರೀತಿಸಿದ್ದರು ಪುನೀತ್ ರಾಜಕುಮಾರ್. ಈಗ ಅದೇ ಸಂಸ್ಥೆಯ ಮೂಲಕ ಯುವರಾಜಕುಮಾರ್ ಎಂಟ್ರಿ ಕೊಡುತ್ತಿದ್ದಾರೆ.ಸಂತೋಷ್ ಆನಂದರಾಮ್ ಹಾಕಿರುವ ಫೋಟೋದಲ್ಲಿರುವವರೆಲ್ಲ ಯುವ ಫಸ್ಟ್ ಸಿನಿಮಾ ಟೀಂನಲ್ಲೂ ಇರುತ್ತಾರಾ? ನಿರೀಕ್ಷೆಯಂತೂ ಇದೆ. ಬ್ರೇಕಿಂಗ್ ನ್ಯೂಸ್ ಯಾವಾಗ ಹೊರಬೀಳಲಿದೆ.. ಕಾಯುತ್ತಿದ್ದಾರೆ ದೊಡ್ಮನೆ ಫ್ಯಾನ್ಸ್.

 • ಯುವ ರಾಜಕುಮಾರ್ ರಂಗ ಪ್ರವೇಶ

  yuva rajkumar to enter films

  ಡಾ.ರಾಜ್ ಕುಟುಂಬದ 3ನೇ ತಲೆಮಾರಿನ ಇನ್ನೊಂದು ಕುಡಿ ಯುವ ರಾಜ್ ಕುಮಾರ್. ರಾಘವೇಂದ್ರ ರಾಜ್‍ಕುಮಾರ್ ಅವರ ಕಿರಿಯ ಮಗ. ಅವರ ಅಭಿನಯದ ಫಸ್ಟ್ ಲುಕ್ ರಿಲೀಸ್ ಮಾಡಿದ್ದು, ಕೈಯ್ಯಲ್ಲಿ ಈಟಿ ಹಿಡಿದಿರುವ ಯುವರಾಜ್ ರಗಡ್ ಲುಕ್‍ನಲ್ಲಿದ್ದಾರೆ.

  ಅಣ್ಣಾವ್ರ 92ನೇ ಹುಟ್ಟುಹಬ್ಬಕ್ಕಾಗಿಯೇ ವಿಶೇಷವಾಗಿ ಡಿಸೈನ್ ಮಾಡಿಸಿ ರಿಲೀಸ್ ಮಾಡಿರುವ ಪೋಸ್ಟರ್ ಇದು. ಪುನೀತ್ ರುದ್ರನಾಗ್ ನಿರ್ದೇಶಕ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಅವರ ಗರಡಿಯ ಹುಡುಗ ಪುನೀತ್ ರುದ್ರನಾಗ್. ರವಿ ಬಸ್ರೂರು ಸಂಗೀತ ನಿರ್ದೇಶಕ. ಚಿತ್ರಕ್ಕಿನ್ನೂ ಟೈಟಲ್ ಇಟ್ಟಿಲ್ಲ. ಹುಡುಕಾಟದಲ್ಲಿದ್ದೇವೆ ಎಂದು ಪೋಸ್ಟರ್‍ನಲ್ಲಿಯೇ ಹೇಳಿದೆ ಚಿತ್ರತಂಡ

 • ಯುವ ರಾಜಕುಮಾರ್ ರಂಗಪ್ರವೇಶ ಯಾವಾಗ..?

  ಯುವ ರಾಜಕುಮಾರ್ ರಂಗಪ್ರವೇಶ ಯಾವಾಗ..?

  ಪುನೀತ್ ರಾಜಕುಮಾರ್ ಅವರ ಬಹುದೊಡ್ಡ ಕನಸುಗಳಲ್ಲಿ ಒಂದು  ಯುವ ರಾಜಕುಮಾರ್. ಯುವ ಅವರನ್ನು ತಮ್ಮ ನಟಸಾರ್ವಭೌಮ ಚಿತ್ರದ ಲಾಂಚಿಂಗ್ ವೇಳೆ ದೊಡ್ಡಮಟ್ಟದಲ್ಲಿಯೇ ಪ್ರೇಕ್ಷಕರ ಮುಂದೆ ತಂದಿದ್ದರು ಅಪ್ಪು. ಅಪ್ಪು ಅವರ ಅಕಾಲಿಕ ನಿಧನದ ನಂತರ ಯುವ ಅವರಲ್ಲಿ ಅಪ್ಪು ಅವರನ್ನು ನೋಡುತ್ತಿದ್ದೇವೆ ಎಂದಿದ್ದ ಅಭಿಮಾನಿಗಳ ಸಂಖ್ಯೆ ದೊಡ್ಡದು. ಯುವ ಕೂಡಾ ಶೀಘ್ರದಲ್ಲೇ ಚಿತ್ರರಂಗಕ್ಕೆ ಬರಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಓಡಾಡುತ್ತಲೇ ಇದೆ. ಅಧಿಕೃತವಾಗಿಲ್ಲ.. ಅಷ್ಟೆ. ಈಗ ಒಂದು ಹೊಸ ಸುದ್ದಿ ಬಂದಿದೆ.

  ಪುನೀತ್ ಅವರಿಗೆ ರಾಜಕುಮಾರ, ಯುವರತ್ನ ಚಿತ್ರಗಳನ್ನು ನಿರ್ದೇಶಿಸಿದ್ದ ಸಂತೋಷ್ ಆನಂದರಾಮ್, ಯುವ ರಾಜಕುಮಾರ್ ಅವರಿಗೆ ಸಿನಿಮಾ ಮಾಡುವುದು ಬಹುತೇಕ ಖಚಿತವಾಗಿದೆ. ಪುನೀತ್ ಅವರನ್ನು ಹೀರೋ ಆಗಿಯಷ್ಟೇ ಅಲ್ಲದೆ, ಕುಟುಂಬ ಸದಸ್ಯರಂತೆ ಭಾವಿಸಿದ್ದ ಹೊಂಬಾಳೆ ಸಂಸ್ಥೆಯೇ ಯುವ ಅವರನ್ನು ಲಾಂಚ್ ಮಾಡುತ್ತಿದೆ. ಕೆಜಿಎಫ್ ಚಾಪ್ಟರ್ 2 ರಿಲೀಸ್ ವೇಳೆ ಹೊಂಬಾಳೆ, ಇನ್ನೂ 3 ಸಿನಿಮಾ ಘೋಷಣೆ ಮಾಡಲಿದ್ದು, ಅವುಗಳಲ್ಲಿ ಒಂದು ಯುವರಾಜಕುಮಾರ್ ಅವರ ಸಿನಿಮಾ ಎನ್ನಲಾಗಿದೆ.

  ಸದ್ಯಕ್ಕೆ ಸಂತೋಷ್ ಆನಂದರಾಮ್ ಜಗ್ಗೇಶ್ ಅವರೊಂದಿಗೆ ರಾಘವೇಂದ್ರ ಸ್ಟೋರ್ಸ್ ಚಿತ್ರದ ಪೋಸ್ಟ್ ಪ್ರೊಡಕ್ಷನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ವಿಜಯ್ ಕಿರಗಂದೂರು ಕೆಜಿಎಫ್ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇವುಗಳೆಲ್ಲ ಒಂದು ಹಂತಕ್ಕೆ ಬಂದ ಮೇಲೆ ಈ ಚಿತ್ರ ಘೋಷಣೆಯಾಗಲಿದೆ.

 • ಯುವ ರಾಜ್ ಕುಮಾರ್ ಚಿತ್ರಕ್ಕೆ ಹೀರೋಯಿನ್ ಅವರಲ್ಲ.. ಇವರೂ ಅಲ್ಲ..

  ಯುವ ರಾಜ್ ಕುಮಾರ್ ಚಿತ್ರಕ್ಕೆ ಹೀರೋಯಿನ್ ಅವರಲ್ಲ.. ಇವರೂ ಅಲ್ಲ..

  ಯುವರಾಜ್ ಕುಮಾರ್ ಸಿನಿಮಾ ಬಹುತೇಕ ಅಪ್ಪು ಹುಟ್ಟುಹಬ್ಬಕ್ಕೆ ಅಧಿಕೃತ ಘೋಷಣೆಯಾಗುವ ನಿರೀಕ್ಷೆ ಇದೆ. ಮಾರ್ಚ್ 17ಕ್ಕೆ ಒಂದೆಡೆ ಉಪೇಂದ್ರ-ಸುದೀಪ್ ಅಭಿನಯದ ಕಬ್ಜ ಹಾಗೂ ಗಣೇಶ್ ಅಭಿನಯದ ಬಾನದಾರಿಯಲ್ಲಿ ಚಿತ್ರಗಳು ಬಿಡುಗಡೆಯಾಗಲಿವೆ. ಇವುಗಳ ಜೊತೆಗೆ ಹೊಂಬಾಳೆಯವರು ಹೊಸ ಚಿತ್ರದ ಬಗ್ಗೆ ಬಿಗ್ ಅಪ್‍ಡೇಟ್ ನೀಡಲಿದ್ದಾರೆ. ಇದರ ಮಧ್ಯೆ ಸಪ್ತಸಾಗರದಾಚೆ ಎಲ್ಲೋ ಹಾಗೂ ಬಾನದಾರಿಯಲ್ಲಿ ಚಿತ್ರದ ನಾಯಕಿ ರುಕ್ಮಿಣಿ ವಸಂತ್ ಹೀರೋಯಿನ್ ಆಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆ ಸುದ್ದಿಯನ್ನು ಸ್ವತಃ ರುಕ್ಮಿಣಿ ನಿರಾಕರಿಸಿದ್ದಾರೆ.

  ರುಕ್ಮಿಣಿ ವಸಂತ್ ಈಗಾಗಲೇ ಹೊಂಬಾಳೆಯವರ ಜೊತೆ ಬಘೀರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀಮುರಳಿ ಎದುರು ರುಕ್ಮಿಣಿ ನಾಯಕಿ. ಇದುವರೆಗೆ ಅಂತಹ ಯಾವುದೇ ಮಾತುಕತೆ ನಡೆದಿಲ್ಲ. ಸದ್ಯಕೆ ಬಾನದಾರಿಯಲ್ಲಿ ಚಿತ್ರದಲ್ಲಿ ಬ್ಯುಸಿಯಾಗಿದ್ದೇನೆ. ಬಘೀರ ಚಿತ್ರದ ಚಿತ್ರೀಕರಣ ಸದ್ಯಕ್ಕೆ ಸ್ಥಗಿತಗೊಂಡಿದೆ. ಶ್ರೀಮುರಳಿ ಗುಣಮುಖರಾಗಿ ಬಂದ ನಂತರ ಚಿತ್ರೀಕರಣ ಶುರುವಾಗಲಿದೆ ಎಂದಿದ್ದಾರೆ ರುಕ್ಮಿಣಿ ವಸಂತ್.

  ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ ಯುವ ರಾಜ್ ಕುಮಾರ್ ನಟಿಸುತ್ತಿದ್ದು, ಆ ಚಿತ್ರದ ಮೂಲಕ ಯುವ ಎಂಟ್ರಿಯಾಗಲಿದೆ. ರುಕ್ಮಿಣಿ ವಸಂತ್ ಅವರಷ್ಟೇ ಅಲ್ಲ, ಹೃದಯಂ ಚಿತ್ರದ ಖ್ಯಾತಿಯ ಕಲ್ಯಾಣಿ ಪ್ರಿಯದರ್ಶನ್ ಹೆಸರೂ ಯುವ ರಾಜ್ ಕುಮಾರ್ ಜೊತೆಗೆ ಕೇಳಿ ಬಂದಿದೆ. ಆದರೆ ಅದೂ ಕೂಡಾ ಅಧಿಕೃತವಲ್ಲ. ಸಂತೋಷ್ ಆನಂದರಾಮ್ ಅವರಾಗಲೀ, ವಿಜಯ್ ಕಿರಗಂದೂರು ಅವರಾಗಲೀ ಅಷ್ಟೇ ಏಕೆ ಯುವರಾಜ್ ಕುಮಾರ್ ಸೇರಿದಂತೆ ದೊಡ್ಮನೆಯ ಯಾರೊಬ್ಬರೂ ಸದ್ಯಕ್ಕೆ ಮಾತನಾಡುತ್ತಿಲ್ಲ. ಮೂಲಗಳ ಪ್ರಕಾರ ಎಲ್ಲ ಪ್ರಶ್ನೆಗಳಿಗೂ ಪುನೀತ್ ಹುಟ್ಟುಹಬ್ಬದಂದೇ ಉತ್ತರ ಸಿಗಲಿದೆ.

 • ಯುವ ರಾಜ್ ಕುಮಾರ್ ಮೊದಲ ಚಿತ್ರಕ್ಕೆ ಪುನೀತ್ ನಿರ್ದೇಶನ

  puneeth to direct yuva rajkumar's debut movie

  ಯುವರಾಜ್ ಕುಮಾರ್. ಡಾ.ರಾಜ್ ಕುಟುಂಬದ ಕುಡಿ. ರಾಘವೇಂದ್ರ ರಾಜ್‍ಕುಮಾರ್ ಅವರ 2ನೇ ಮಗ. ನಟಸಾರ್ವಭೌಮ ಚಿತ್ರದ ಆಡಿಯೋ ಲಾಂಚ್ ವೇಳೆ ಅದ್ಭುತವಾಗಿ ಕುಣಿದು ವ್ಹಾವ್ ಎನಿಸಿಕೊಂಡಿದ್ದ ಹುಡುಗ. ಚಿತ್ರರಂಗಕ್ಕೆ ಬರಲು ಅವಸರವೇನೂ ಇಲ್ಲ ಎಂದಿದ್ದ ಯುವರಾಜ್ ಕುಮಾರ್, ರಾಜ್ ಕುಮಾರ್ ಟ್ರಸ್ಟ್ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು. ಅವರೀಗ ಹೀರೋ ಆಗೋಕೆ ರೆಡಿ. ಡೈರೆಕ್ಟರ್ ಪುನೀತ್.

  ಕನ್‍ಫ್ಯೂಸ್ ಆಗಬೇಡಿ. ಪುನೀತ್ ಎಂದರೆ, ಯುವರಾಜ್ ಚಿಕ್ಕಪ್ಪ ಪುನೀತ್ ರಾಜ್‍ಕುಮಾರ್ ಅಲ್ಲ. ಪವರ್ ಸ್ಟಾರ್ ಅಣ್ಣನ ಮಗನ ಚಿತ್ರಕ್ಕೆ ಡೈರೆಕ್ಷನ್ ಮಾಡುತ್ತಿರುವ ನಿರ್ದೇಶಕನ ಹೆಸರು ಪುನೀತ್. ಇವರು ಪ್ರಶಾಂತ್ ನೀಲ್ ಜೊತೆ ಕೆಜಿಎಫ್ ಚಿತ್ರಕ್ಕೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದವರು. ಸ್ಸೋ.. ಡೈರೆಕ್ಟರ್ ಪುನೀತ್, ಯುವ ಚಿತ್ರಕ್ಕೆ ಸ್ಟೋರಿ ಬೋರ್ಡ್ ರೆಡಿ ಮಾಡುತ್ತಿದ್ದಾರೆ. 2020ಕ್ಕೆ ಸಿನಿಮಾ ಲಾಂಚ್ ಆಗಲಿದೆ. ಅಫ್‍ಕೋರ್ಸ್.. ಅದು ದೊಡ್ಮನೆ ಹಬ್ಬವಾಗಲಿದೆ.

 • ಯುವ ರಾಜ್ ಕುಮಾರ್ ಯುವ ಪರ್ವ ಆರಂಭ

  ಯುವ ರಾಜ್ ಕುಮಾರ್ ಯುವ ಪರ್ವ ಆರಂಭ

  ಅಭಿಮಾನಿಗಳ ವರ್ಷಗಳ ನಿರೀಕ್ಷೆ ಈಡೇರುವ ಸಮಯ ಹತ್ತಿರವಾಗಿದೆ. ದೊಡ್ಮನೆ ಹುಡಗು ಯುವ ರಾಜ್ ಕುಮಾರ್ ಯುವ ಪರ್ವ ಶುರುವಾಗಿದೆ. ಚಿತ್ರದ ಪೋಸ್ಟರ್, ಟೀಸರ್, ಟೈಟಲ್ ತೋರಿಸಿರುವ ಹೊಂಬಾಳೆ ಫಿಲಮ್ಸ್, ಚಿತ್ರದ ರಿಲೀಸ್ ಡೇಟ್‍ನ್ನೂ ಘೋಷಿಸಿದೆ. ಪದ್ಮಭೂಷಣ ಡಾ. ರಾಜ್ಕುಮಾರ್ ರವರ ಕುಟುಂಬದಿಂದ ಕನ್ನಡ ಚಿತ್ರರಂಗಕ್ಕೆ ಹಲವಾರು ಕೊಡುಗೆಗಳು ನಮ್ಮ ರಾಜ್ಯಕ್ಕೆ ದೊರೆತಿದೆ. ನಟರಾಗಿ  ಡಾ. ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಡಾ. ಪುನೀತ್ ರಾಜ್ಕುಮಾರ್, ವಿನಯ್ ರಾಜ್ಕುಮಾರ್ ಹಾಗೂ ನಿರ್ಮಾಪಕರಾಗಿ ಪಾರ್ವತಮ್ಮ ರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್‍ಕುಮಾರ್.. ಹೀಗೆ ಹಲವರು ತಮ್ಮದೇ ಆದ ಕಾಣಿಕೆ ನೀಡಿದ್ದಾರೆ. ಈಗ ಯುವ ರಾಜ್ಕುಮಾರ್ ಕೂಡ ಎಂಟ್ರಿ ಸ್ಯಾಂಡಲ್ವುಡ್ಗೆ ಕೊಟ್ಟಿದ್ದಾರೆ.

  ಹೊಂಬಾಳೆ ಫಿಲ್ಮ್ಸ್ಗಾಗಿ ರಾಜಕುಮಾರ ಮತ್ತು ಯುವರತ್ನ ಸಿನಿಮಾಗಳನ್ನು ಸಂತೋಷ್ ಆನಂದ್ರಾಮ್ ನಿರ್ದೇಶಿಸಿದ್ದರು. ಹಾಗೆಯೇ ಜಗ್ಗೇಶ್ ನಾಯಕತ್ವದ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ರಾಘವೇಂದ್ರ ಸ್ಟೋರ್ಸ್' ಸಿನಿಮಾಗೂ ಸಂತೋಷ್ ಆನಂದ್ರಾಮ್ ಅವರೇ ನಿರ್ದೇಶಕರು. ಆ ಸಿನಿಮಾ ಇನ್ನಷ್ಟೇ ತೆರೆಗೆ ಬರಬೇಕಿದೆ. ಇದೀಗ 'ಯುವ' ಮೂಲಕ ಒಂದು ಪವರ್ಫುಲ್ ಆಕ್ಷನ್ ಸಿನಿಮಾ ಮಾಡಲು ಸಂತೋಷ್ ಮುಂದಾಗಿದ್ದಾರೆ.

  ಯುವ ರಾಜ್ಕುಮಾರ್ ಸಿನಿಮಾ ಏನು ಟೈಟಲ್ ಇಡಬಹುದು ಎಂದು ಸಾಕಷ್ಟು ಲೆಕ್ಕಾಚಾರ ಮಾಡಲಾಗಿತ್ತು. ರಾಜ್ಕುಮಾರ್ ಅವರ 'ಜ್ವಾಲಾಮುಖಿ, ಕುಮಾರ್ ಬಂಗಾರಪ್ಪ ಅವರ ಅಶ್ವಮೇಧ, ಯುವ ಅವರ ಅಭಿನಯ ಪ್ರತಿಭೆಯನ್ನು ಜಗತ್ತಿಗೆ ಸಾರಿದ್ದ ಕಂಠೀರವ ಸೇರಿದಂತೆ ಹಲವು ಟೈಟಲ್‍ಗಳು ಚರ್ಚೆಯಲ್ಲಿದ್ದವು. ಆದರೆ ಯುವ ಎಂಬ ಟೈಟಲ್‍ನ್ನು ಹೊಂಬಾಳೆ ಫೈನಲ್ ಮಾಡಿದೆ. ನಿರ್ದೇಶಕ ಸಂತೋಷ್ ಆನಂದ್ರಾಮ್ ಅವರ ಐದನೇ ಸಿನಿಮಾವಾಗಿದ್ದು, ಹೊಂಬಾಳೆ ಫಿಲ್ಮ್ಸ್ ಜೊತೆಗೆ ಸತತವಾಗಿ ನಾಲ್ಕನೇ ಸಿನಿಮವಾಗಿದೆ.

  'ಯುವ' ಸಿನಿಮಾದ ಟೈಟಲ್ ಲಾಂಚ್ ಬೆಂಗಳೂರಿನ ಲಲಿತ್ ಅಶೋಕ ಹೋಟೆಲ್ನಲ್ಲಿ ಅದ್ದೂರಿಯಾಗಿ ನೆರವೇರಿತು. ನಿರ್ಮಾಪಕರಾದ ವಿಜಯ್ ಕಿರಗಂದೂರ್, ನಿರ್ದೇಶಕ ಸಂತೋಷ್ ಆನಂದ್ರಾಮ್, ನಟ ಯುವ ರಾಜ್ಕುಮಾರ್, ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್, ಛಾಯಾಗ್ರಾಹಕ ಶ್ರೀಶ ಕೂದುವಳ್ಳಿ ಮುಂತಾದವರು ಆಗಮಿಸಿದ್ದರು.

  ಶೈಲಜಾ ವಿಜಯ್ ಕಿರಗಂದೂರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಮೊದಲ ದೃಶ್ಯಕ್ಕೆ ದೊಡ್ಡಪ್ಪ ಶಿವ ರಾಜ್ ಕುಮಾರ್ ಆಕ್ಷನ್ ಕಟ್ ಹೇಳಿದರು. ಚಿಕ್ಕಮ್ಮ ಅಶ್ವಿನಿ ಪುನೀತ್ ರಾಜ್ ಕುಮಾರ್ ಕ್ಯಾಮೆರಾಗೆ ಚಾಲನೆ ನೀಡಿದರು. ಚಿತ್ರ ಸೆಟ್ಟೇರಿದ ದಿನವೇ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ್ದು ವಿಶೇಷವಾಗಿತ್ತು. ಇದೇ ವರ್ಷ ಡಿಸೆಂಬರ್ 23ರಂದು ಯುವ ತೆರೆಗೆ ಬರಲಿದೆ.

   ಪ್ರಕಾಶ್ ರಾಜ್ ಧ್ವನಿಯಲ್ಲಿ ಅವ್ನನ್ನ ಹೊಡೆಯೋಕೆ ಅಂತಾ ಒಂದು ಗ್ಯಾಂಗ್ ಕಾಯ್ತಾ ಇತ್ತು. ಅವನನ್ನ ತಡೆಯೋಕೂ ಒಂದು ಗ್ಯಾಂಗ್ ಇತ್ತು. ಗ್ಯಾಂಗ್ ವಾರ್ ಅವ್ನು ಶುರು ಮಾಡಲಿಲ್ಲ. ಆದರೆ ಮುಗಿಸ್ತಾನೆ.. ಅನ್ನೋ ಹಿನ್ನೆಲೆ ಧ್ವನಿ ವ್ಹಾವ್ ಎನ್ನುವಂತಿದೆ. ಚಿತ್ರದ ಮೇಕಿಂಗ್ ಗಮನ ಸೆಳೆಯುವಂತಿದೆ. ಚಿತ್ರದ ಟೀಸರ್ ರಿಲೀಸ್ ಆಗಿದ್ದು ಗ್ಯಾಂಗ್ ವಾರ್ ಕಥೆ ಚಿತ್ರದಲ್ಲಿರುವಂತಿದೆ. ಆದರೆ ಚಿತ್ರದ ಕಥೆಯಲ್ಲಿ ಬೇರೇನೋ ಹೊಸತನ ಇರುವಂತೆ ಕಾಣುತ್ತಿದೆ. ಸಂತೋಷ್ ಆನಂದರಾಮ್ ಚಿತ್ರದಲ್ಲಿ ಮೆಸೇಜ್ ಕೂಡಾ ಇರುವ ಕಾರಣ, ಯುವ ಕೇವಲ ಗ್ಯಾಂಗ್ ವಾರ್ ಕಥೆಯಂತೂ ಆಗಿರಲ್ಲ ಎನ್ನುವುದು ಅಭಿಮಾನಿಗಳ ಭರವಸೆ.

 • ಯುವ ರಾಜ್ ಕುಮಾರ್ ಸ್ವಾಗತಕ್ಕೆ ಮುಹೂರ್ತ

  ಯುವ ರಾಜ್ ಕುಮಾರ್ ಸ್ವಾಗತಕ್ಕೆ ಮುಹೂರ್ತ

  ದೊಡ್ಮನೆಯ ಚಿಕ್ಕ ಹುಡುಗ.. ಪುನೀತ್ ನಿಧನದ ನಂತರ ಅಭಿಮಾನಿಗಳು ಯುವ ರಾಜ್ ಕುಮಾರ್ ಅವರಲ್ಲೇ ಅಪ್ಪು ಅವರನ್ನು ನೋಡುತ್ತಿದ್ದಾರೆ. ಯುವ ಅವರು ಇದೀಗ ಲಾಂಚ್ ಆಗುತ್ತಿದ್ದು ಘೋಷಿಸಿದ್ದಂತೆಯೇ ಹೊಂಬಾಳೆಯವರೇ ಚಿತ್ರದ ನಿರ್ಮಾಣ ಹೊಣೆ ಹೊತ್ತಿದ್ದಾರೆ. ಯುವ ಚಿತ್ರಕ್ಕೆ ಡೈರೆಕ್ಟರ್ ಆಗಿರುವುದು ಸೋಲನ್ನೇ ಕಾಣದ ನಿರ್ದೇಶಕ ಸಂತೋಷ್ ಆನಂದರಾಮ್.

  ಇಂದು ಅಂದರೆ ಮಾರ್ಚ್ 3ನೇ ತಾರೀಕು ಸಂಜೆ 6.55ಕ್ಕೆ ಸರಿಯಾಗಿ ಚಿತ್ರದ ಟೈಟಲ್ ಘೋಷಣೆಯಾಗಲಿದೆ. ಕೋಣೆಯೊಂದರಲ್ಲಿ ಬೈಕ್ ನಿಲ್ಲಿಸಿರುವ ಹಾಗೂ ಗೋಡೆ ಮೇಲೆ ಬೈಕ್ ರೈಡಿಂಗ್ ಜಾಕೆಟ್ ಒಂದನ್ನು ನೇತಾಕಿರುವ ಫೋಟೊ ಬ್ಯಾಕ್ಗ್ರೌಂಡ್ ಇರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಈ ಪೋಸ್ಟರ್ನ ತಲೆ ಭಾಗದಲ್ಲಿ 'ಬೆಳ್ಳಿ ಪರದೆಗೆ ಹೊಸದೊಂದು ಪರ್ವ ಎಂದು ಬರೆದಿದೆ.

  ಪೋಸ್ಟರ್ ಹಂಚಿಕೊಳ್ಳುವಾಗ ಹೊಂಬಾಳೆ ಫಿಲ್ಮ್ಸ್ ಬಳಸಿರುವ ಸಾಲುಗಳು ಚಿತ್ರದ ಮೇಲೆ ನಿರೀಕ್ಷೆ ಹುಟ್ಟುವಂತೆ ಮಾಡಿವೆ. ನಿಮ್ಮನ್ನು ಸೀಟ್ನ ಅಂಚಿಗೆ ತಂದು ಕೂರಿಸುವಂತಹ ಆಕ್ಷನ್ ಪ್ಯಾಕ್ಡ್ ರೈಡ್ಗೆ ಸಿದ್ಧರಾಗಿ. ನಿಮ್ಮ ಹೃದಯದ ವೇಗವನ್ನು ಹೆಚ್ಚಿಸುವ ಕಥೆಯನ್ನು ನಿಮಗಾಗಿ ಹೊತ್ತು ತರುತ್ತಿದ್ದೇವೆ ಎಂದು ಹೊಂಬಾಳೆ ಫಿಲ್ಮ್ಸ್ ಬರೆದುಕೊಂಡಿದೆ.

  ಚಿತ್ರದಲ್ಲಿ ಯುವ ರಾಜ್ ಕುಮಾರ್ ಬಹುಶಃ ಕಾಲೇಜು ವಿದ್ಯಾರ್ಥಿ ಇರಬೇಕು. ಬೈಕ್ ರೇಸ್ ಹುಚ್ಚಿರುವ ಸ್ಟೂಡೆಂಟ್ ಆಗಿರಬಹುದು ಎಂಬ ಭಾವನೆ ಬರುತ್ತಿದೆ. ಆಕ್ಷನ್ ಪ್ಯಾಕ್ಡ್ ಎಂದು ಚಿತ್ರತಂಡವೇ ಹೇಳಿರೋದ್ರಿಂದ ಸಖತ್ ಥ್ರಿಲ್ಲಿಂಗ್ ಅಂಶಗಳೂ ಇರಲಿವೆ ಎಂಬ ಸುಳಿವಂತೂ ಇದೆ.

 • ಯುವನ ಯುವರಾಣಿ ಸಪ್ತಮಿ ಗೌಡ

  ಯುವನ ಯುವರಾಣಿ ಸಪ್ತಮಿ ಗೌಡ

  ಯುವ ಚಿತ್ರ ಈ ವರ್ಷದ ಸೆನ್ಸೇಷನ್. ಕಾಂತಾರ ಕಳೆದ ವರ್ಷದ ಸೆನ್ಸೇಷನ್. ಯುವ ಚಿತ್ರಕ್ಕೆ ನಾಯಕಿಯಾಗಿ ಸಪ್ತಮಿಗೌಡ ಆಯ್ಕೆಯಾಗಿದ್ದಾರೆ. ರುಕ್ಮಿಣಿ ವಸಂತ್ ನಾಯಕಿ ಅನ್ನೋ ಮಾತು ಕೇಳಿ ಬಂದಿತ್ತು. ಸ್ವತಃ ರುಕ್ಮಿಣಿ ಸುದ್ದಿಯನ್ನು ನಿರಾಕರಿಸಿದ್ದರು. ಇದೀಗ ಲೀಲಾ ಅಲಿಯಾಸ್ ಸಪ್ತಮಿ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ.

  ಪಾಪ್ಕಾರ್ನ್ ಮಂಕಿ ಟೈಗರ್' ಸಿನಿಮಾದಿಂದ ಸ್ಯಾಂಡಲ್ವುಡ್ಗೆ ಕಾಲಿಟ್ಟ ಸಪ್ತಮಿ ಗೌಡಗೆ ದೊಡ್ಡ ಹೆಸರು ಸಿಕ್ಕಿದ್ದು ಕಾಂತಾರ ಸಿನಿಮಾದಿಂದ. ಇದೀಗ ಕಾಂತಾರ ಸಿನಿಮಾವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಅವರ ಮತ್ತೊಂದು ಸಿನಿಮಾ 'ಯುವ'ದಲ್ಲೂ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿರುವುದು ವಿಶೇಷ.

  ಇನ್ನು, ಸಪ್ತಮಿ ಗೌಡ ಬಾಲಿವುಡ್ನಲ್ಲೂ ಕೆಲಸ ಮಾಡುತ್ತಿದ್ದಾರೆ. 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಈಗ 'ದಿ ವ್ಯಾಕ್ಸಿನ್ ವಾರ್' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಆ ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರವನ್ನು ಸಪ್ತಮಿ ಗೌಡ ನಟಿಸಿದ್ದಾರೆ. ಜೊತೆಗೆ ಅಭಿಷೇಕ್ ಅಂಬರೀಷ್ ಅವರ 'ಕಾಳಿ' ಸಿನಿಮಾಗೂ ಸಪ್ತಮಿ ಅವರೇ ನಾಯಕಿ.

  ಯುವ ಚಿತ್ರದ ಮೂಲಕ ಹೀರೋ ಆಗುತ್ತಿರುವ ಯುವ ರಾಜ್ ಕುಮಾರ್ ಅವರಿಗೆ ನಾಯಕಿ ಯಾರು ಎಂಬ ಬಗ್ಗೆ ನಿರ್ದೇಶಕ ಸಂತೋಷ್ ಆನಂದರಾಮ್ ಅವರಷ್ಟೇ ಅಭಿಮಾನಿಗಳು ಚರ್ಚೆ ನಡೆಸಿದ್ದರು. ಅವರಾ.. ಇವರಾ.. ಓ ಅವರಾದರೆ ಓಕೆ.. ಇವರು ಖಂಡಿತಾ ಬೇಡ.. ಎಂಬ ಚರ್ಚೆಗಳು ಚಾಲ್ತಿಯಲ್ಲಿದ್ದವು. ಕೊನೆಗೆ ಅಪ್ಪಟ ಕನ್ನಡದ ಹುಡುಗಿ ಸಪ್ತಮಿ ಗೌಡ ಅವರನ್ನೇ ಆಯ್ಕೆ ಮಾಡಿದ್ದು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಯುವ ಚಿತ್ರ ಡಿಸೆಂಬರ್ 22ರಂದು ರಿಲೀಸ್ ಆಗಲಿದೆ.