ಕಥೆಯೊಂದು ಶುರುವಾಗಿದೆ.. ದಿಗಂತ್ ನಾಯಕತ್ವದ ಈ ಸಿನಿಮಾ ತೆರೆಗೆ ಬರೋಕೆ ಸಿದ್ಧವಾಗಿದೆ. ಅದರಲ್ಲೂ ಚಿತ್ರದ ಗುಡ್‍ಮಾರ್ನಿಂಗ್ ಹಾಡು ಗಮನ ಸೆಳೆಯುತ್ತಿದೆ. ಹಾಡಿನಷ್ಟೇ ವಿಶೇಷವಾಗಿ ಪ್ರೇಕ್ಷಕರನ್ನು ಮರುಳು ಮಾಡಿರುವುದು ಹಾಡಿನ ಕೊರಿಯೋಗ್ರಫಿ. ಆದರೆ, ಅಚ್ಚರಿಯೇನು ಗೊತ್ತಾ..? ಈ ಹಾಡಿಗೆ ಕೊರಿಯೋಗ್ರಫಿ ಮಾಡಿರೋದು ಚಿತ್ರದ ನಾಯಕಿ ಪೂಜಾ ದೇವರಿಯಾ.
ಚಿತ್ರದ ಹಾಡು ರಿಯಲೆಸ್ಟಿಕ್ ಆಗಿ ಬರಬೇಕು ಅನ್ನೋದು ನಿರ್ದೇಶಕಿ ಸನ್ನಾ ಹೆಗ್ಡೆ ಯೋಜನೆಯಾಗಿತ್ತು. ಅದನ್ನೇ ಅವರು ಪೂಜಾ ಬಳಿ ಹೇಳಿಕೊಂಡಾಗ, ದಿಗಂತ್ ಜೊತೆ ಕೂಡಿಕೊಂಡು ಅವರೇ ಒಂದಷ್ಟು ಪ್ಲಾನ್ ಮಾಡಿದರಂತೆ. ಯಾವುದೇ ರಿಹರ್ಸಲ್ ಇಲ್ಲದೆ ಶೂಟ್ ಮಾಡಿದ ಹಾಡು ಅದು. ಹಾಡಿನ ಮಧ್ಯೆ ಬರುವ ಮಕ್ಕಳಿಗೂ ರಿಹರ್ಸಲ್ ಮಾಡಿಸಿಲ್ಲ ಎಂದು ಥ್ರಿಲ್ಲಾಗಿ ಹೇಳಿಕೊಂಡಿದ್ದಾರೆ ಸನ್ನಾ.
ಪರಂವಾ ಸ್ಟುಡಿಯೋಸ್‍ರವರ ಕಥೆಯೊಂದು ಶುರುವಾಗಿದೆ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ. ವಿಭಿನ್ನ ಕಥೆಗಳನ್ನೇ ಹುಡುಕಿ ಹುಡುಕೀ ಸಿನಿಮಾ ಮಾಡುವ ಮಲ್ಲಿಕಾರ್ಜುನಯ್ಯ, ಮತ್ತೊಂದು ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.