` s a chinnegowda, - chitraloka.com | Kannada Movie News, Reviews | Image

s a chinnegowda,

  • Jairaj D R Elected Unopposed As the president of KFCC

    jairaj d r elected unopposed as the president of kfcc

    Well known exhibitor Jairaj D R has been elected unopposed as the new president of Karnataka Film Chamber of Commerce. The elections for the KFCC for the year 2019-20 will be held on the 29th of June and even before the elections, Jairaj has been elected unanimously with no other contestant in the race of president.

    One of the highlights of this year elections is, three major posts from the exhibitor sector has been elected unanimously. While, Jairaj has been elected as the president Venkataramana and Narasimhalu has been elected unanimously for the posts of vice-president and general secretary. Even producer A Ganesh who has contested for the post of general secretary from the distributor sector has been elected unanimously. With four major posts elected unanimously, the elections for other posts will be held on the 29th of this month.

    For the post of vice-president from the producer sector Umesh Banakar, Dinesh Gandhi and Pramila Joshai are contesting, while B R Keshava and Naganna will be contesting for the post of vice-president from the distributor sector. Likewise, Teshi Venkatesh, Ba Ma Girish and N M Suresh are contesting for the post of general secretary from the producer sector. Jayasimha Musuri and Sapphire Venkatesh are contesting for the post of treasurer. 

  • S A Chinnegowda takes over the president of KFCC

    s a chinnegowda takes over the president of kfcc

    S A Chinnegowda who won the president post of Karnataka Film Chamber of Commerce on Tuesday night, took over the president of the KFCC on Wednesday morning.

    Chinnegowda won the post by defeating Mars Suresh. Apart from S A Chinnegowda, Karisubbu, K Manju and Ashok K C have been elected as vice-presidents, while Ba Ma Harish, Shilpa Srinivas and Sundarraju have been elected as secretaries from producer, distributor and exhibitor sectors. K M Veeresh has won the treasurer post by defeating Jayasimha Musuri.

    All the above were present on Wednesday and took over the charge as new office bearers.

  • ಅಂಬಿಗೆ ಶ್ರದ್ಧಾಂಜಲಿ - ಇಂದು ಫಿಲಂ ಚೇಂಬರ್ ಸಭೆ

    kfcc plans a tribute to ambareesh

    ರೆಬಲ್‍ಸ್ಟಾರ್ ಅಂಬರೀಷ್ ಅವರಿಗೆ ದೊಡ್ಡಮಟ್ಟದಲ್ಲಿ ಶ್ರದ್ಧಾಂಜಲಿ ಸಲ್ಲಿಸಲು ಚಿತ್ರೋದ್ಯಮ ನಿರ್ಧರಿಸಿದೆ. ಈ ಕುರಿತು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಲಿದೆ. 

    `ಅಂಬರೀಷ್ ಕನ್ನಡ ಚಿತ್ರರಂಗದ ಆಸ್ತಿ. ಚಿತ್ರರಂಗದ ಸಮಸ್ಯೆಯಗಳನ್ನು ಸುಲಭವಾಗಿ ಬಗೆಹರಿಸುತ್ತಿದ್ದರು. ಅವರು ಇಲ್ಲ ಎನ್ನುವುದನ್ನೇ ನಮಗೆ ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಬೇಕು ಎಂದುಕೊಂಡಿದ್ದೇವೆ. ಕಲಾವಿದರ ಸಂಘ, ಕಾರ್ಮಿಕರ ಸಂಘ, ನಿರ್ದೇಶಕರು ಹಾಗೂ ನಿರ್ಮಾಪಕರ ಸಂಘದ ನಿರ್ದೇಶಕರ ಸಭೆ ಕರೆದು ನಿರ್ಧರಿಸುತ್ತೇವೆ. ನಂತರ ಕಾರ್ಯಕ್ರಮದ ರೂಪುರೇಷೆಗಳನ್ನು ಯೋಜಿಸುತ್ತೇವೆ' ಎಂದು ತಿಳಿಸಿದ್ದಾರೆ ಫಿಲಂ ಚೇಂಬರ್ ಅಧ್ಯಕ್ಷ ಎಸ್.ಎ. ಚಿನ್ನೇಗೌಡ.

  • ಗುರು ಕುಟುಂಬಕ್ಕೆ ಫಿಲಂ ಚೇಂಬರ್ ಧನಸಹಾಯ

    film chamber will stand with martyr guru

    ಹುತಾತ್ಮ ಯೋಧ ಗುರು ಕುಟುಂಬಕ್ಕೆ ನೆರವು ನೀಡಲು ನೂರಾರು ದಾನಿಗಳು ಮುಂದೆ ಬರುತ್ತಿದ್ದಾರೆ. ನಾಡಿನ ಸಂಕಷ್ಟಗಳಿಗೆ ಸದಾ ಸ್ಪಂದಿಸುವ ಫಿಲಂ ಚೇಂಬರ್ ಕೂಡಾ ಗುರು ಕುಟುಂಬಕ್ಕೆ ನೆರವು ನೀಡಲು ಮುಂದಾಗಿದೆ. ಹುತಾತ್ಮನ ಆತ್ಮಕ್ಕೆ ಶಾಂತಿ ಕೋರಿ ದೀಪ ಬೆಳಗಿದ ಚೇಂಬರ್‍ನ ಪದಾಧಿಕಾರಿಗಳು ಮತ್ತು ಸದಸ್ಯರು ಗುರು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

    ಶೀಘ್ರದಲ್ಲಿಯೇ ಮಂಡ್ಯಕ್ಕೆ ಭೇಟಿ ನೀಡಿ, ಗುರು ಕುಟುಂಬಕ್ಕೆ ಧನಸಹಾಯದ ನೆರವು ನೀಡುತ್ತೇವೆ ಎಂದು ಚೇಂಬರ್ ಅಧ್ಯಕ್ಷ ಚಿನ್ನೇಗೌಡ ತಿಳಿಸಿದ್ದಾರೆ.

  • ಚಿನ್ನೇಗೌಡರ ಬೆಳ್ಳಿಹೆಜ್ಜೆ

    chinnegowda in belli hejje

    ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ಈ ವಾರ ನಿರ್ಮಾಪಕ, ಫಿಲಂ ಚೇಂಬರ್ ಅಧ್ಯಕ್ಷ ಎಸ್.ಎ. ಚಿನ್ನೇಗೌಡ ಅತಿಥಿಯಾಗುತ್ತಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರೋ ಕಾರ್ಯಕ್ರಮದಲ್ಲಿ ಚಿನ್ನೇಗೌಡರು ತಮ್ಮ ಚಿತ್ರಬದುಕಿನ ನೆನಪುಗಳನ್ನು ಬಿಚ್ಚಿಡಲಿದ್ದಾರೆ.

    ಚಿನ್ನೇಗೌಡರು, ಪಾರ್ವತಮ್ಮ ರಾಜ್‍ಕುಮಾರ್ ಅವರ ತಮ್ಮ. ರಾಜ್‍ಕುಮಾರ್ ಇವರಿಗೆ ಬಾವ. ಕನ್ನಡದ ಇಬ್ಬರು ಸ್ಟಾರ್ ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿಯವರ ತಂದೆ. ಪತ್ನಿ ಜಯಮ್ಮ ಕೂಡಾ ನಿರ್ಮಾಪಕಿ. ಒಂದು ರೀತಿಯಲ್ಲಿ ಅವರ ಮನೆಯೇ ಒಂದು ಮಿನಿ ಚಿತ್ರರಂಗ. 

    ಸಹೋದರಿ ಪಾರ್ವತಮ್ಮನವರ ಚಿತ್ರಬದುಕಿಗೆ ಹೆಗಲು ಕೊಟ್ಟಿದ್ದ ಚಿನ್ನೇಗೌಡ, ವಜ್ರೇಶ್ವರಿ ಕಂಬೈನ್ಸ್ ಬೆಳೆಸಲು ಶ್ರಮಿಸಿದರು. ನಿರ್ಮಾಪಕರಾಗಿ, ವಿತರಕರಾಗಿ ಬೆಳೆದರು. ಶ್ರೀನಿವಾಸ ಕಲ್ಯಾಣ, ಜ್ವಾಲಾಮುಖಿ, ಹೊಸ ಬೆಳಕು, ಹೃದಯ ಹಾಡಿತು, ಸಪ್ತಪದಿ, ಮನ ಮೆಚ್ಚಿದ ಹುಡುಗ, ರೂಪಾಯಿ ರಾಜ, ಶ್ರೀಹರಿಕಥೆ.. ಮೊದಲಾದುವು ಚಿನ್ನೇಗೌಡ ನಿರ್ಮಿಸಿದ ಸಿನಿಮಾಗಳು.

    ಚಿನ್ನೇಗೌಡರ ಪತ್ನಿ ಜಯಮ್ಮ ಖುಷಿ, ಸೇವಂತಿ ಸೇವಂತಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಚಿನ್ನೇಗೌಡರ ಜೊತೆ ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ಸಾಯಿಪ್ರಕಾಶ್, ರಾಮು, ಮಾಲಾಶ್ರೀ, ಸುಧಾರಾಣಿ, ಸುಂದರ್‍ರಾಜ್, ಪ್ರಮೀಳಾ ಜೋಷಾಯ್ ಎಲ್ಲರೂ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾಋಎ.

    ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅಪ್ಪನ ನೆನಪುಗಳನ್ನು ವಿಶೇಷ ಗಣ್ಯರಾಗಿ ಕುಳಿತು ಕೇಳಲಿದ್ದಾರೆ.  ಸಾ.ರಾ.ಗೋವಿಂದು, ಜಯಮಾಲಾ, ಹೆಚ್.ಡಿ. ಗಂಗರಾಜು ಸೇರಿದಂತೆ ಚೇಂಬರ್ ಹಾಗೂ ಚಿತ್ರರಂಗದ ಹಲವು ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

  • ನವೆಂಬರ್ 30ರಂದು ಅಂಬರೀಷ್‍ಗೆ ಶ್ರದ್ಧಾಂಜಲಿ ಸಭೆ

    kfcc to hold tribute meet for ambi on nov 30th

    ರೆಬಲ್‍ಸ್ಟಾರ್ ಅಂಬರೀಷ್ ಅವರಿಗೆ ಇದೇ ನವೆಂಬರ್ 30ರಂದು ಶ್ರದ್ಧಾಂಜಲಿ ಸಭೆ ನಡೆಸಲು ಫಿಲಂ ಚೇಂಬರ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಆ ದಿನ ಇಡೀ ಚಿತ್ರೋದ್ಯಮದ ಶೂಟಿಂಗ್ ಸ್ಥಗಿತಗೊಳ್ಳಲಿದೆ. ಸಮಸ್ತ ಕನ್ನಡ ಚಿತ್ರರಂಗವೇ ಆ ದಿನ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಲಿದೆ. ಎಸ್.ಎ.ಚಿನ್ನೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

    ಮುಖ್ಯಮಂತ್ರಿ ಕುಮಾರಸ್ವಾಮಿ, ಸಭೆಯಲ್ಲಿ ಭಾಗವಹಿಸಲಿದ್ದಾರೆ

  • ಫಿಲಂ ಚೇಂಬರ್‍ಗೆ ಹೊಸ ಅಧ್ಯಕ್ಷ - ಅವಿರೋಧ ಆಯ್ಕೆ

    film chamber gets new president

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆಯಾಗಿದೆ. ಪ್ರದರ್ಶಕ ಗುಬ್ಬಿ ಜೈರಾಜ್, ಮಂಡಳಿಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಕ್‍ಲೈನ್ ವೆಂಕಟೇಶ್, ಸುಂದರ್‍ರಾಜ್ ಹಾಗೂ ನರಸಿಂಹಲು ಕಣದಿಂದ ಹಿಂದೆ ಸರಿದ ಕಾರಣ, ಜೈರಾಜ್ ಅವಿರೋಧವಾಗಿ ಆಯ್ಕೆಯಾದರು.

    ಜೂನ್ 29ಕ್ಕೆ ವಾಣಿಜ್ಯ ಮಂಡಳಿಯ ವಿವಿಧ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಲಿದೆ. ನೂತನ ಅಧ್ಯಕ್ಷ ಜೈರಾಜ್ ಹಿಂದಿನ ಅಧ್ಯಕ್ಷ ಚಿನ್ನೇಗೌಡರು ಹಾಗೂ ನೂತನವಾಗಿ ಆಯ್ಕೆಯಾಗುವ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ಚಿತ್ರೋದ್ಯಮದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದಿದ್ದಾರೆ ಜೈರಾಜ್.

    ಅಧ್ಯಕ್ಷ ಸ್ಥಾನದ ಜೊತೆಗೆ ಗೌರವ ಕಾರ್ಯದರ್ಶಿಯಾಗಿ ವಿತರಕ ವಲಯದಿಂದ ಎಂ.ನರಸಿಂಹಲು, ಉಪಾಧ್ಯಕ್ಷ ಸ್ಥಾನಕ್ಕೆ ಪ್ರದರ್ಶಕ ವಲಯದಿಂದ ವೆಂಕಟರಮಣ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್.ಎ.ಗೋವಿಂದರಾಜು, ಅವಿನಾಶ್ ಶೆಟ್ಟಿ, ಎಸ್‍ವಿ ಜೋಷಿ, ಶ್ರವಣ್‍ಕುಮಾರ್, ಬಿ.ಮಹೀಂದ್ರಕರ್, ರಂಗಸ್ವಾಮಿ, ನಾಗರಾಜ್ ಸಿ ಆಯ್ಕೆಯಾಗಿದ್ದಾರೆ.

  • ವಿಜಯ್ ಬಹಿಷ್ಕಾರ ಅಸಾಧ್ಯ - ಫಿಲಂ ಚೇಂಬರ್

    kfcc will not ban duniya vijay

    ಪಾನಿಪೂರಿ ಕಿಟ್ಟಿ ಅಣ್ಣನ ಮಗನ ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ದುನಿಯಾ ವಿಜಯ್‍ರನ್ನು ಚಿತ್ರರಂಗದಿಂದ ನಿಷೇಧಿಸಬೇಕು ಎಂಬ ಕೂಗು ಕೇಳಿಬಂದಿದೆ. ಈ ಕುರಿತು ಪಾನಿಪುರಿ ಕಿಟ್ಟಿ ಕೂಡಾ ಮನವಿ ಮಾಡಿದ್ದಾರೆ. ಆದರೆ, ಅದು ಅಸಾಧ್ಯ ಎಂದು ಹೇಳಿದ್ದಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ.

    ಇದೊಂದು ವೈಯಕ್ತಿಕ ವಿಚಾರದ ಗಲಾಟೆ. ಮೇಲಾಗಿ ಇದು ಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿದೆ. ಅವರನ್ನು ಚಿತ್ರರಂಗದಿಂದ ಬಹಿಷ್ಕರಿಸಲು ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಚಿನ್ನೇಗೌಡ.

    ಜೈಲಿನಿಂದ ಬಂದ ಮೇಲೆ ದುನಿಯಾ ವಿಜಯ್ ಮತ್ತು ಪಾನಿಪೂರಿ ಕಿಟ್ಟಿಯನ್ನು ಕೂರಿಸಿಕೊಂಡು ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ.